974. ಅಮರ್ (೨೦೧೯)

ಅಮರ ಚಿತ್ರದ ಹಾಡುಗಳು 
  1. ಮರೆತುಹೋಯಿತೇ
  2. ಸುಮ್ಮನೆ ಹೀಗೆ ನಿನ್ನನೇ
  3. ಒಂದೇ ಏಟಿಗೆ
  4. ಜೋರು ಪಾಟ್ಟು
  5. ಖಾಲಿ ಖಾಲಿ
  6. ಕಂಬನಿ
ಅಮರ್ (೨೦೧೯) - ಮರೆತುಹೋಯಿತೇ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಸಂಜಿತಾ ಹೆಗಡೆ  

ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ
ಕರಗಿದೆ ನಾಲಿಗೆ, ಬರವಿದೆ ಮಾತಿಗೆ ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ

ಒಂದು ನಿಶ್ಯಬ್ದ ರಾತ್ರೀಲಿ ನಾವು ಆಡಿದ ಮಾತು ಹಸಿಯಾಗಿದೆ
ನಾವು ನಡೆದಂತ ಹಾದಿಲಿ ಇನ್ನೂ ಹೆಜ್ಜೆ ಗುರುತೆಲ್ಲ ಹಾಗೆ ಇದೆ
ಒಂಚೂರು ಹಿಂತಿರುಗಿ ನೀ ನೋಡೆಯಾ ಇನ್ನೊಮ್ಮೆ ಕೈ ಚಾಚೆಯ…
ಕರಗಿದೆ ನಾಲಿಗೆ, ಬರವಿದೆ ಮಾತಿಗೆ ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ

ಜೋರು ಮಳೆಯೆಲ್ಲ ನನಗೀಗ ಯಾಕೋ ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲಾ ಕೈ ಜಾರಿ ಹೋಗಿ ಖಾಲಿ ಕೈಯ್ಯಲ್ಲಿ ಕುಳಿತಂತಿದೆ
ಎಷ್ಟೊಂದು ಏಕಾಂಗಿ ನೊಡೀದಿನ ದೂರಾಗಿ ನಿನ್ನಿಂದ ನಾ…
ಕರಗಿದೆ ನಾಲಿಗೆ, ಬರವಿದೆ ಮಾತಿಗೆ ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ
--------------------------------------------------------------------------------------------

ಅಮರ್ (೨೦೧೯) - ಸುಮ್ಮನೆ ಹೀಗೆ ನಿನ್ನನೇ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್ 

ಸುಮ್ಮನೆ ಹೀಗೆ ನಿನ್ನನೇ… ನೋಡುತಾ ಪ್ರೇಮಿಯಾದೆನೆ
ಜೀವವೇ ಹೋಗಲಿ ನೀನಿರೆ ತೋಳಲಿ ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು ಜನಿಸುವೆ ಮರಳಿ
ಸುಮ್ಮನೆ.. ಹೀಗೆ ನಿನ್ನನೇ.

ಮರೆತೇ ಬಿಡುವೆನು ಜಗವ ನಡು ನಡುವೆ…
ಎಲ್ಲೋ ಹೊರಟರೆ ಎಲ್ಲೋ ತಲಿಪಿರುವೆ
ಎಂತ ಚೆಂದ ದೂರದಿಂದ ನೀನು ನೀಡೋ ಹಿಂಸೆ…
ನೀನೇ ನನ್ನ ಸ್ವಂತ ಅಂತ ಲೋಕಕೆಲ್ಲ ಕೂಗಿ ಹೇಳೋ ಆಸೆ…
ಸುಮ್ಮನೆ ಹೀಗೆ ನಿನ್ನನೇ… ನೋಡುತಾ ಪ್ರೇಮಿಯಾದೆನೆ

ಮೊದಲ ಮಳೆಯಲಿ ನೆನೆದ ಅನುಭವವೇ…
ಹೂ ಬಿಡದೆ ಪದೇ ಪದೇ ಮರಳಿ ತರುತಿರುವೇ
ನೂರು ನೂರು ಸಾವಿರಾರು ಸಂಜೆಯಲ್ಲಿ ನಾವು…
ಒಂಟಿ ಕೂತು ಬಾಕಿ ಮಾತು ಆಡುವಾಗ ಅಲ್ಲಿ ಬರಲಿ ಸಾವು…
ಸುಮ್ಮನೆ ಹೀಗೆ ನಿನ್ನನೇ… ನೋಡುತಾ ಪ್ರೇಮಿಯಾದೆನೆ
--------------------------------------------------------------------------------------------

ಅಮರ್ (೨೦೧೯) - ಒಂದೇ ಏಟಿಗೆ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಅರ್ಮನ ಮಲ್ಲಿಕ್ 

ಒಂದೇ ಏಟಿಗೆ ಕೊಂದೆ ಬಿಟ್ಟಳು ಮುಲಾಜೆ ಇರದಂತೆ ನನ್ನನ್ನ
ಚೂಪಾದ ಕಣ್ಣೊ ನ್ದು ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ
ಮೊದಲನೇ ಪ್ರೀತಿ ನನದು ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
ಒಂದೇ ಏಟಿಗೆ ಕೊಂದೆ ಬಿಟ್ಟಳು ಮುಲಾಜೆ ಇರದಂತೆ ನನ್ನನ್ನ

ನಿನ್ನ ಹೆಜ್ಜೆಗೆ ಕಾವಲುಗಾರ ನಿನ್ನ ಸೇವೆಗೆ ನಾ ನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲಿ ನಾನೆಲ್ಲೇ ಗಮನ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ
ಮೊದಲನೇ ಪ್ರೀತಿ ನನದು ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

ನಿನ್ನ ತೋಳಲಿ ತುಂಬಿಕೊ ನನ್ನ ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ ಅರಿತೆ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ
ಮೊದಲನೇ ಪ್ರೀತಿ ನನದು ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
--------------------------------------------------------------------------------------------

ಅಮರ್ (೨೦೧೯) - ಜೋರು ಪಾಟ್ಟು
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕಿರಣ ಕಾವೇರಪ್ಪ, ಗಾಯನ : ಜೇಸ್ಸಿ ಗಿಫ್ಟ್

ಫೆಗ್ ಎರಚಿ ಚುಟ್ಟಿ ಥೆರಚಿ  ಕಡಿಕುಡಿಕಾನ,
ಕೊಟ್ಟು ಕೊಟ್ಟಿತು ಆಟ ಆಡೀತು ಥಡಿಕರುಕಾನ,
ಕೂಟು ಕೂಡಿತು ಪಾಟು ಪಾಡಿತು ಛೆಡಿ ಮರುಕಾನ,
ಬಾಟಲ್ ಲೆಕ್ಕ ಮಾಡತ್ತೇ  ಬಾಬಾ 
ಬಾರದ ಖಾರ ಬಜ್ಜಿ ಪಕೋಡ, ಆಡಿತ್ ಪಾಡಿತು ಗೌಜಿನ ಮಾಡನಾ…
ಜೋರು ಪಾಟ್ಟು, ಜೋರು ಪಾಟ್ಟು, ಆಟ ಆಡಣಾ ..
ಪೆಗ್ಗರು ಮೇಲೆ ಪೆಗ್ಗು ಇಡಾಣಾ..
ಜೋರು ಪಾಟ್ಟು ಆಟ ಆಡಣಾ.. ಪೆಗ್ಗರು ಮೇಲೆ ಪೆಗ್ಗು ಇಡಾಣ..

ಆಕಾಶ ಭೂಮಿಲ್ ನಿನ್ನ ನಾ ತೀಡಿತು ಬಂದು ನಾ ನೀಡ ಚಾಯಿನ ಕಂಡಿತು.
ಚಾಯಿ ಕಾರ್ತಿರ ಮನಸು ನಾ ಗೆದ್ದೀತು, ವೀರ ಕದವ ನಾ ಬಂದು ನೀ ಕಾಯಿತು…
ಬೀರ್ ಬಾಟಲ್ ಚಿಲ್ಲು ಆಯಿತಿರದ ಬಾಬಾ ಬೀರ್ ಬಾಟಲ್ ಚಿಲ್ಲು ಆಯಿತಿರದ .
ಅರೆ, ವಾರೇ ನೋಟತಿಲ್ ಥೆಲ್ಚಾತ್ ಚಾಯಿ ಕರ್ತಿ.. 
ಜೋರು ಪಾಟ್ಟು, ಜೋರು ಪಾಟ್ಟು, ಜೋರು ಪಾಟ್ಟು, ಆಟ ಆಡಣಾ..
ಫೆಗ್ಗುರು ಮೇಲೆ ಫೆಗ್ಗು ಇಡಾಣಾ, 
ಜೋರು ಪಾಟ್ಟು  ಆಟ ಆಡಣಾ, ಫೆಗ್ಗುರು ಮೇಲೆ ಪೆಗ್ಗು ಇಡಾಣಾ…

ಬೊಟ್ಟು ಪೊಡಿಯ ಪಾತಕುರ ರಂಗುಲು, ನಿನ್ನ ನೋಟೋದೆ ನೇಮೇ ಈ ಮನ್ಸುಕು 
ಹೇ ಕಪ್ಯಚಲೆ ಪೇಚೆಕತಿ ಗತುಲು  ನಿನ್ನ ಮಂಗಲಪು ಆಸೆ ಈ ಮನ್ಸುಲು,
ಬೀರ್ ಬಾಟಲ್ ಚಿಲ್ಲುಆಯಿತಿರದ ರಾ ಬಾಬಾ ಬೀರ್ ಬಾಟಲ್ ಚಿಲ್ಲು ಆಯಿತಿರದ…. 
ಫೆಗ್ ಎರಚಿ ಚುಟ್ಟಿ ಥೆರಚಿ ಕಡಿ ಕುಡಿಕಾನ, ಕೊಟ್ಟು ಕೊಟ್ಟಿತು ಆಟ ಆಡೀತು ಥಡಿಕರುಕಾನ,
ಕೂಟು ಕೂಡಿತು ಪಾಟು ಪಾಡಿತು ಛೆಡಿ ಮರುಕಾನ, ಬಾಟಲ್ ಲೆಕ್ಕ ಮಾಡತ್ತೆ ಬಾಬಾ 
ಬರದ ಖಾರ ಬಜ್ಜಿ ಪಕೋಡ, ಆಡಿತ್ ಪಾಡಿತು ಗೌಜಿನ ಮಾಡನಾ…
ಜೋರು ಪಾಟ್ಟು, ಜೋರು ಪಾಟ್ಟು, ಜೋರು ಪಾಟ್ಟು, ಆಟ ಆಡಣಾ ..
ಪೆಗ್ಗರು ಮೇಲೆ ಪೆಗ್ಗು ಇಡಾಣಾ..
-------------------------------------------------------------------------------------------

ಅಮರ್ (೨೦೧೯) - ಖಾಲಿ ಖಾಲಿ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಗಾಯನ : ವಿಜಯ ಪ್ರಕಾಶ

ಖಾಲಿ ಖಾಲಿ ಜೇಬಿನ ಹಿಂದೆ ಕೋಟಿ ಕೋಟಿ ಕನಸು ತುಂಬಿದೆ ಎದೆಯಲ್ಲಿ ನಮ್ಮ ಎದೆಯಲ್ಲಿ 
ಭೂಮಿಯನ್ನೆ ಬುಗುರಿ ಮಾಡಿ ಅಂಗೈ ಮೇಲೆ ತಿರುಗಿಸೋ ಆಸೆ ಮನದಲ್ಲಿ ನಮ್ಮ ಮನದಲ್ಲಿ 
ಆ ಬಾನೀನ ನೀಲಿಯ ನೋಡಿ ಬೋರಾಯ್ತು ಬೇರೆ ಬಣ್ಣ ಬಳಿಯೋನ 
ಬೈಬೇಡಿರಿ ಸುಮ್ಮನೇ ನೀನು ನಮ್ಮಣ್ಣ ಹುಟ್ಟತಾನೇ ಒಂಚೂರು ಎಡವಟ್ಟು ನಮ್ಮ ಗುಣ
ನೀಲಿ ನೀಲಿ ಬಾನಿಗೆ ಬೇರೆ ಬಣ್ಣ ಬಳಿಯೋ ಬಯಕೆ ಮೂಡಿದೆ ಎದೆಯಲ್ಲಿ ನಮ್ಮ ಎದೆಯಲ್ಲಿ 

ಉಂಟು ನಿನ್ನ ಕೈಯಲ್ಲೇ ಬಾಳು ಎಂಬ ಖಾಲಿ ಹಾಳೇ 
ಬಣ್ಣ ಬಣ್ಣ ತುಂಬಿ ಚಿತ್ರಿಸು ಲೋಕ ಒಂದು ಸಂತೆ ಆಗಬೇಡ ಎಲ್ಲರಂತೆ 
ನೀನೆ ಭಿನ್ನವಾಗಿ ಯೋಚಿಸು ಈ ಸುಂದರ ಭೂಮಿಯ ಮೇಲೆ ಬದುಕೋಕೆ 
ಅವಕಾಶವೇ ಈ ಜನ್ಮ ನೀ ವ್ಯರ್ಥ ಮಾಡದೇ ಒಂದು ನಿಮಿಷಾನು 
ನೂರಾರು ಕನಸನ್ನು ಸೊಗಸಾಗಿ ಕಟ್ಟೋಣ ಬಾ

ನೊಂದ ಜೀವಕೆಲ್ಲ ನೀನು ಕೈಯ್ಯ ಚಾಚಬೇಕು ಪ್ರೀತಿ ಸ್ನೇಹವನ್ನು ಹಂಚುತಾ 
ನಿಲ್ಲಬೇಡ ಎಲ್ಲು ದಾರಿ ನಿಂದೆ ಮುಂದೆ ಸಾಗು ಗೆದ್ದೆ ಗೆಲ್ಲುವೆ ನೀನು ಖಂಡಿತ 
ಅತಿ ಎತ್ತರ ಪರ್ವತಯೇರಿ ನಿಂತಾಗ ನಿನ್ನ ಪಾದದ ಅಡಿಯಲ್ಲಿ 
ನೀ ನುಗ್ಗುವ ವೇಗಕೆ ಸ್ವಂತ ತೂಫಾನೇ ಸೈಡಿಗೆ ಸರಿವಂತೆ ಛಲದಿಂದ ಮುಂದೆ ನಡಿ
--------------------------------------------------------------------------------------------

ಅಮರ್ (೨೦೧೯) - ಕಂಬನಿ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್ 

ಕಂಬನಿ ಖಾಲಿಯಾಗಿದೆ ಜೀವದಿ ನೋವೇ ತುಂಬಿದೆ
ಹೋಗಲಿ ಎಲ್ಲಿಗೆ ದಾರಿಯೆ ಮುಗಿದೋಗಿದೆ.
ನನ್ನಯ ಪಾಲಿಗೇ ಉಳಿದಿರುವುದು
ಉಸಿರು ನಿಲ್ಲಿಸುವುದೊಂದೆ
ಕಂಬನಿ ಖಾಲಿಯಾಗಿದೆ ಜೀವದಿ ನೋವೇ ತುಂಬಿದೆ

ಮಳೆಗೇ ನಗಲಾದೇ ವಿಷವ ಬೆರಸಿದರೆ,
ಓಹ್ ಯಾರ ಬಳಿಯಲೀ ದೂರಬಿಗುತಾರೆ
ಒಂದು ಸಾರಿ ಹಿಂದೆ ಹೋಗಿ
ಓಹ್, ಅಳಿಸಬೇಕು ಎಲ್ಲ ಯಾಕೆ ಅಂತಾ ಹಾಗೆ ಒಂದು
ಬಾಳಿನಲ್ಲಿ ಇಲ್ಲ

ಮಾನದಂಡನೆ ವಿಧಿಸಿ ನಗುತಿಹಳು
ಕೊನೆಯ ಆಸೆಯ ಕೇಳದೆ ಅವಳು
ಗಾಯವಿಲ್ಲ ಗಾಸಿಲ್ಲಾ ಗಾಢವಾದ ನೋವು
ಪ್ರೀತಿಯಲಿ ಇದಕೆ ಏನೋ ಅನ್ನುತ್ತಾರೆ ಸಾವು
ಕಂಬನಿ ಖಾಲಿಯಾಗಿದೆ ಜೀವದಿ ನೋವೇ ತುಂಬಿದೆ.
--------------------------------------------------------------------------------------------

No comments:

Post a Comment