ನಮ್ಮ ಊರ ದೇವರು ಚಲನ ಚಿತ್ರದ ಹಾಡುಗಳು
- ದೇವನೊಬ್ಬ ನಾಮ ಹಲವು ಭಕ್ತರೆನಿತೊ ಜಗದಲಿ
- ಚಿನ್ನಾ ಹಾರಿ ಜಾರಿ
- ಮುತ್ತಿನಂಥ ಒಡವೇ
- ಅರಳಿದ ಜಾಜಿಯ ಹೂವೂ ಮುಡಿದು
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಬಸವರಾಜ ಕೆಸ್ತೂರ ಗಾಯನ : ಪಿ.ಬಿ.ಶ್ರೀನಿವಾಸ, ಕೋರಸ್
ಗಂಡು : ದೇವನೊಬ್ಬ ನಾಮ ಹಲವು ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು ಜಗಳವೇಕೆ ನಮ್ಮಲ್ಲಿ
ದೇವನೊಬ್ಬ ನಾಮ ಹಲವು ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು ಜಗಳವೇಕೆ ನಮ್ಮಲ್ಲಿ
ಗಂಡು : ನಾಳೆ ನಾಡ ಆಳುವಂಥ ಮಕ್ಕಳಲ್ಲಿ ಜಗಳವೇ...
ನಾಳೆ ನಾಡ ಆಳುವಂಥ ಮಕ್ಕಳಲ್ಲಿ ಜಗಳವೇ
ನಾವು ಹಿಂದೂ ಮುಸಲ್ಮಾನ ಕ್ರೈಸ್ತರೆಂಬ ಬೇಧವೇ..
ಕನ್ನಡಾಂಬೆ ನಮ್ಮ ತಾಯಿ...
ಕನ್ನಡಾಂಬೆ ನಮ್ಮ ತಾಯಿ ನಾವು ಅವಳ ಮಕ್ಕಳು
ಭಾರತಾಂಬೆ ಅವಳ ತಾಯಿ ಎಲ್ಲ ಒಂದೇ ಒಕ್ಕಲು
ದೇವನೊಬ್ಬ ನಾಮ ಹಲವು ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು ಜಗಳ ಏಕೆ ನಮ್ಮಲ್ಲಿ
ದುಡಿವ ರೈತ ಮಡಿವ ಯೋಧ ದೇವನಂತೇ ಪೂಜ್ಯರು
ಬಾನು ಭೂಮೀ ತಾಯಿ ತಂದೆ ನಮಗೆ ಅನ್ನದಾತರು
ಕನ್ನಡಾಂಬೆ ನಮ್ಮ ತಾಯಿ
ಮಕ್ಕಳು : ಕನ್ನಡಾಂಬೆ ನಮ್ಮ ತಾಯಿ
ಗಂಡು : ನಾವು ಅವಳ ಮಕ್ಕಳು ಭಾರತಾಂಬೆ ಅವಳ ತಾಯಿ
ಎಲ್ಲರು : ಎಲ್ಲ ಒಂದೇ ಒಕ್ಕಲು
ಭಾರತಾಂಬೆ ಅವಳ ತಾಯಿ ಎಲ್ಲ ಒಂದೇ ಒಕ್ಕಲು
ದೇವನೊಬ್ಬ ನಾಮ ಹಲವು ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು ಜಗಳವೇಕೆ ನಮ್ಮಲ್ಲಿ
-----------------------------------------------------------------------------------------------------------------------
ನಮ್ಮ ಊರ ದೇವರು (೧೯೬೭) - ಚಿನ್ನ ಹಾರಿ ಜಾರಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಹರಿಕೃಷ್ಣ ಗಾಯನ : ಪಿ.ಸುಶೀಲಾ
ಚಿನ್ನ ಹಾರೀ .. ಚಿನ್ನಾ ಜಾರೀ ..
ಚಿನ್ನ ಹಾರಿ ಜಾರಿ ಹೋಗೇ
ಚಿನ್ನ ಹಾರಿ ಜಾರಿ ಹೋಗೇ ನಿನ್ನ ಒಂಟಿಯಾಗೇ ಬಿಟ್ಟಿಯಾನ ನಾನೂ
ಚಿನ್ನ ಹಾರಿ ಜಾರಿ ಹೋಗೇ ನಿನ್ನ ಒಂಟಿಯಾಗೇ ಬಿಟ್ಟಿಯಾನ ನಾನೂ
ನನ್ನ ಜೊತೆಯಾಗಿರೇ ಸರಿ ನೀನೇ ದೊರೇ ಮರಿ ನನ್ನ ಪ್ರಾಣ ನಿನಗಾಗಿ ಕೊಟ್ಟಿಯಾನು
ಚಿನ್ನ ಹಾರಿ ಜಾರಿ ಹೋಗೇ ನಿನ್ನ ಒಂಟಿಯಾಗೇ ಬಿಟ್ಟಿಯಾನ ನಾನೂ
ನೀನಾಗಿ ಬಿಟ್ಟು ಹೋಗೇ ನಾನೇನೇ ನಾ ನಿನ್ನ ಅಂದೇ
ನೀನಾಗಿ ಬಿಟ್ಟು ಹೋಗೇ ನಾನೇನೇ ನಾ ನಿನ್ನ ಅಂದೇ
ನನ್ನ ಮ್ಯಾಲೇ ನಿನಗ್ಯಾಕೆ ಕೋಪ ನಾನೇನೇ ನಾ ನಿನ್ನ ಅಂದೇ
ಹರಿ ಒಡನಾಟವೂ...
ಹರಿ ಒಡನಾಟವೂ ಕೂಡಿ ನಲಿದಾಡುವಾ ಮರಿ ನನ್ನ ಪ್ರಾಣ ನಿನಾಗಾಗಿ ಹುಟ್ಟಿಯಾನೂ
ಚಿನ್ನ ಹಾರಿ ಜಾರಿ ಹೋಗೇ ನಿನ್ನ ಒಂಟಿಯಾಗೇ ಬಿಟ್ಟಿಯಾನ ನಾನೂ
ಏನೇನೋ ಆಸೇ ಮೂಡಿ ಬೇರೇನೋ ಆಟ ಹೂಡಿ
ಏನೇನೋ ಆಸೇ ಮೂಡಿ ಬೇರೇನೋ ಆಟ ಹೂಡಿ
ಒಡಬ್ಯಾಡ ನನ್ನ ಬಿಟ್ಟು ನೀನೂ .. ಏನೇನೋ ಆಸೇ ಮೂಡಿ
ನೀನೂ ನನಗಾದರೇ...
ನೀನೂ ನನಗಾದರೇ ನಾನೂ ನಿನಾಗಾಗುವೇ
ಮರಿ ನನ್ನ ಪ್ರಾಣ ನಿನಾಗಾಗಿ ಹುಟ್ಟಿಯಾನೂಚಿನ್ನ ಹಾರೀ .. ಚಿನ್ನಾ ಜಾರೀ ..
ಚಿನ್ನ ಹಾರಿ ಜಾರಿ ಹೋಗೇ
ಚಿನ್ನ ಹಾರಿ ಜಾರಿ ಹೋಗೇ ನಿನ್ನ ಒಂಟಿಯಾಗೇ ಬಿಟ್ಟಿಯಾನ ನಾನೂ
ಓಓಓಓಓಓಓಓ ಓಓಓಓಓಓಓಓ ಓಓಓಓಓಓಓಓ ಓಓಓ
-----------------------------------------------------------------------------------------------------------------------
ನಮ್ಮ ಊರ ದೇವರು (೧೯೬೭) - ಮುತ್ತಿನಂಥ ಒಡವೇ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಹರಿಕೃಷ್ಣ ಗಾಯನ : ಪಿ.ಬಿ.ಶ್ರೀನಿವಾಸ
ಆಹಾ ಆಹಾ ಆಹಾ ... ಆಆಆ... ಓಓಓ ಓಹೋಹೋ
ಮುತ್ತಿನಂಥಹ ಒಡವೇ ಮುದ್ದೂ ಹಳ್ಳಿಯ ಚೆಲುವೇ
ಬಾಳ ಸುಗ್ಗಿಯಲೀ ಹಿಗ್ಗಿ ಮಿಂಚುತಾಳೇ ಮುದ್ದೂ ಹಳ್ಳಿಯ ಚೆಲುವೇ
ಮುಗಿಲಂಥ ಬದುಕಿಗೇ ತುಂಬು ಚಂದಿರನಂತೆ ನಲುಮೆ ನಂಬುವೆಯಾ
ಬೆಳಕು ಬಿರುತಾಳೇ ಹಳ್ಳಿಯ ಚೆಲುವೇ
ಹೆಸರು ಸಿರಿ ಗೌರಿ ನವಿಲಂತೆ ಗರಿಗೆದರಿ
ಹೆಸರು ಸಿರಿ ಗೌರಿ ನವಿಲಂತೆ ಗರಿಗೆದರಿ ನನ್ನೆದೆಯ ಬನದಲ್ಲಿ ಕುಣಿಯುತ್ತಾಳೇ
ಹೆಸರು ಸಿರಿ ಗೌರಿ ನವಿಲಂತೆ ಗರಿಗೆದರಿ ನನ್ನೆದೆಯ ಬನದಲ್ಲಿ ಕುಣಿಯುತ್ತಾಳೇ
ಹತ್ತು ಕಟ್ಟುವ ಕಡೇ ಮುತ್ತು ಕಟ್ಟುವ ಬಾರಾ
ಗೆಳೆತನ ನನಗೊಂದು ಕವನವೇ ಆಗುತ್ತಾಳೇ ಮುದ್ದೂ ಹಳ್ಳಿಯ ಚೆಲುವೇ
ಮುತ್ತಿನಂಥಹ ಒಡವೇ ಮುದ್ದೂ ಹಳ್ಳಿಯ ಚೆಲುವೇ
ಬಾಳ ಸುಗ್ಗಿಯಲೀ ಹಿಗ್ಗಿ ಮಿಂಚುತಾಳೇ ಮುದ್ದೂ ಹಳ್ಳಿಯ ಚೆಲುವೇ
ಮುಗಿಲಂಥ ಬದುಕಿಗೇ ತುಂಬು ಚಂದಿರನಂತೆ ನಲುಮೆ ನಂಬುವೆಯಾ
ಬೆಳಕು ಬಿರುತಾಳೇ ಮುದ್ದು ಹಳ್ಳಿಯ ಚೆಲುವೇ
-----------------------------------------------------------------------------------------------------------------------
ನಮ್ಮ ಊರ ದೇವರು (೧೯೬೭) - ಅರಳಿದ ಜಾಜಿಯ ಹೂವೂ ಮುಡಿದು
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಬಸವರಾಜ ಕೆಸ್ತೂರ ಗಾಯನ : ಎಚ್.ಪಿ.ಗೀತಾ
ಅರಳಿದ ಜಾಜಿಯ ಹೂವೂ ಮುಡಿದು
ಅರಳಿದ ಜಾಜಿಯ ಹೂವೂ ಮುಡಿದು ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ ನಾ ಹೀಗೆ ಹೀಗೆ ಬರುವಾಗ ಒಬ್ಬನೂ ಕಾಡಿದ ಏನೇನೋ ಕೇಳಿದ
ಅರಳಿದ ಜಾಜಿಯ ಹೂವೂ ಮುಡಿದು ನಾ ನಿಮ್ಮೂರ ಜಾತ್ರೆಗೆ ಬರುವಾಗ ಒಬ್ಬನೂ ಕಾಡಿದ ಏನೇನೋ ಕೇಳಿದ
ಹೆಣ್ಣೇ.. ಹೆದರಬೇಡ ಜೊತೆಗಾಗಿ ಬರುವೇನೂ ಜಾತ್ರೆಗೇ
ಬಣ್ಣಾ ... ಬಣ್ಣದ ಸೀರೇ... ಕುಪ್ಪಸವ ಕೊಡಿಸುವೇ ಪ್ರೀತಿಗೇ
ಆಮೇಲೇ .. ಕೆಂಪೀ .. ಹಸಿರು ಗಿಡದಲಿ ಹೊಸ ಹೂವ ತೋರಿ ಅದನು ತರಲೂ ಸಾಗಿದ
ಆವ್ ಅದನು ತರಲೂ ಸಾಗಿದ ಅವ್ ಅದನು ತರಲೂ ಸಾಗಿದ
ಹೂವನೂ ತಂದ ದೂರದಲಿ ನಿಂದ ಹತ್ತಿರ ಬಂದರೇ ಇದೂ ನೀನಗೆಂದಾ
ಅರಳಿದ ಜಾಜಿಯ ಹೂವೂ ಮುಡಿದು ನಾ ನಿಮ್ಮೂರ
ನಾ ನಿಮ್ಮೂರ ಜಾತ್ರೆಗೆ ಬರುವಾಗ ಒಬ್ಬನೂ ಕಾಡಿದ ಏನೇನೋ ಕೇಳಿದ
ನಾ ನಿಮ್ಮೂರ ಜಾತ್ರೆಗೆ ಬರುವಾಗ ಒಬ್ಬನೂ ಕಾಡಿದ ಏನೇನೋ ಕೇಳಿದ
ಹೆಣ್ಣಾ ... ಬಳಿಗೆ ಬಾರೇ ತಲೆ ತುಂಬ ಕವನವ ಮೂಡಿಸುವೇ
ನನ್ನಾ... ಮನದ ರಾಣಿ ಕಾಲಿಗೆ ನೂಪುರ ತೋಡಿಸುವೇ
ಆಮೇಲೇ ,ಕೆಂಪೀ .. ಕಿವಿಯ ಬಳಿಯಲಿ ಕುಸುಮ ಕಾಡಿ ಸೆರಗ ಎಳೆದೂ ಕಾಡಿದ
ಆವ್ ಸೆರಗ ಎಳೆದೂ ಕಾಡಿದ.. ಆವ್ ಸೆರಗ ಎಳೆದೂ ಕಾಡಿದ...
ಆಡಿಸಿದವನೂ ಬೇಡದವನನೂ ಕಡೆಗೇ ಒಂದಾಗಿ ಒಪ್ಪಿದ್ದೇ ನಾನೂ
ಅರಳಿದ ಜಾಜಿಯ ಹೂವೂ ಮುಡಿದು ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ ನಾ ಹೀಗೆ ಹೀಗೆ ಬರುವಾಗ ಒಬ್ಬನೂ ಕಾಡಿದ ಏನೇನೋ ಕೇಳಿದ
-----------------------------------------------------------------------------------------------------------------------
ಆಮೇಲೇ ,ಕೆಂಪೀ .. ಕಿವಿಯ ಬಳಿಯಲಿ ಕುಸುಮ ಕಾಡಿ ಸೆರಗ ಎಳೆದೂ ಕಾಡಿದ
ಆವ್ ಸೆರಗ ಎಳೆದೂ ಕಾಡಿದ.. ಆವ್ ಸೆರಗ ಎಳೆದೂ ಕಾಡಿದ...
ಆಡಿಸಿದವನೂ ಬೇಡದವನನೂ ಕಡೆಗೇ ಒಂದಾಗಿ ಒಪ್ಪಿದ್ದೇ ನಾನೂ
ಅರಳಿದ ಜಾಜಿಯ ಹೂವೂ ಮುಡಿದು ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ ನಾ ಹೀಗೆ ಹೀಗೆ ಬರುವಾಗ ಒಬ್ಬನೂ ಕಾಡಿದ ಏನೇನೋ ಕೇಳಿದ
-----------------------------------------------------------------------------------------------------------------------
No comments:
Post a Comment