979. ಭಾಗೀರಥಿ (೧೯೬೯)

ಭಾಗೀರಥಿ ಚಲನಚಿತ್ರದ ಹಾಡುಗಳು 
  1. ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
  2. ಸ್ವರ್ಗಕ್ಕೆ ಹೋಗುವಾ 
  3. ನಲಿಯೋಣ ಬಾ 
ಭಾಗೀರಥಿ (೧೯೬೯) - ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆನೇಕಲ್ ನಂಜುಕವಿ  ಗಾಯನ :ಸೂಲಂ ಮಂಗಲಂ. ರಾಜಲಕ್ಷ್ಮಿ 

ಆಆಆ... ಆಆಆ...
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ ಓಂಕಾರಿ ಕಲ್ಯಾಣಿ

ಅಚ್ಚ ಕನ್ನಡ ಜಾಣ ಸರ್ವಜ್ಞ ಋಷಿವಾಣಿ
ಅಚ್ಚ ಕನ್ನಡ ಜಾಣ ಸರ್ವಜ್ಞ ಋಷಿವಾಣಿ ಸಚ್ಚರಿತ ನಿಜಗುಣರ ವೇದಾಂತ ವಾಣಿ... ಆಆಆ....
ಸಚ್ಚರಿತ ನಿಜಗುಣರ ವೇದಾಂತ ವಾಣಿ ಭಕ್ತಿ ಕನಕನ  ವಾಣಿ ಮುಕ್ತಿದಾತರ ವಾಣಿ
ಶಕ್ತಿಯುತ ಷಡಕ್ಷರಿಯ ಶ್ರೀಮಂತ ವಾಣಿ
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಓಂಕಾರಿ ಕಲ್ಯಾಣಿ

ವೇದ ಮೂಲದ ವಾಣಿ ಗಾಯತ್ರೀ ಗೀರ್ವಾಣಿ 
ವೇದ ಮೂಲದ ವಾಣಿ ಗಾಯತ್ರೀ ಗೀರ್ವಾಣಿ ವ್ಯಾಸ ಲಕ್ಷ್ಮೀಶರ ಕುಸುಮ ಕೋಗಿಲವಾಣಿ 
ವ್ಯಾಸ ಲಕ್ಷ್ಮೀಶರ ಕುಸುಮ ಕೋಗಿಲವಾಣಿ ಕರುನಾಡ ಕವಿ ಕುಲದ ಕನ್ನಡದ ರಸವಾಣಿ 
ಸಿರಿಗನ್ನಡಂ ಗೆಲ್ಗೆ ....
ಸಿರಿಗನ್ನಡಂ ಗೆಲ್ಗೆ .... ಶ್ರೀಗಂಧ ವಾಣಿ  ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಬಂಗಾರ ಶಾರದೆಯೇ ... ಶ್ರೀ ದಿವ್ಯವಾಣಿ
ಓಂಕಾರಿ ಕಲ್ಯಾಣಿ......  
--------------------------------------------------------------------------------------------------------------------------

ಭಾಗೀರಥಿ (೧೯೬೯) - ಸ್ವರ್ಗಕ್ಕೆ ಹೋಗುವ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆನೇಕಲ್ ನಂಜುಕವಿ ಗಾಯನ :ಎಸ್.ಜಾನಕೀ

ಸ್ವರ್ಗಕ್ಕೇ ಹೋಗುವಾ ಸುಖವೆಲ್ಲಾ ದೋಚುವಾ
ಸ್ವರ್ಗಕ್ಕೇ ಹೋಗುವಾ ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ ನಾನೇ ರಾಣಿ ನೀನೇ ರಾಜ..
ಶೋಕು ಜೋಕು ಮಾಡುವ ರಾಜ ನಾನೇ ರಾಣಿ ನೀನೇ ರಾಜ..

ಗಂಡು ಹೆಣ್ಣು ಪಾಪವೆಂದರೇ ದೇವರು ಮಾಡುತಲಿದ್ದನೇ
ಗಂಡು ಹೆಣ್ಣು ಪಾಪವೆಂದರೇ ದೇವರು ಮಾಡುತಲಿದ್ದನೇ
ನಂಗೂ ನಿಂಗು ದೋಷಿ ಎಂದರೇ ದೇವರು ಬೇಡ ಎಂದನೇ
ನಂಗೂ ನಿಂಗು ದೋಷಿ ಎಂದರೇ ದೇವರು ಬೇಡ ಎಂದನೇ
ಆದರೇ ಅಂಕಣ್ಣ.. ಕೂತರೇ ಡೊಂಕಣ್ಣ ಇರುವುದು ನಮ್ಮದಣ್ಣ ಇದರಲೇ ಸುಖವಣ್ಣ
ಸ್ವರ್ಗಕ್ಕೇ ಹೋಗುವಾ ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ ನಾನೇ ರಾಣಿ ನೀನೇ ರಾಜ..

ಜೇಬಿನೊಳಗಿನ ನೋಟಿನ ಕಟ್ಟೂ ಟೇಬಲ್ ಕೆಳಗೇ ಕೊಟ್ಟರೇ..
ಜೇಬಿನೊಳಗಿನ ನೋಟಿನ ಕಟ್ಟೂ ಟೇಬಲ್ ಕೆಳಗೇ  ಕೊಟ್ಟರೇ..
ಓಟಿನ ಮೇಲೆ ಓಟನು ಕೊಟ್ಟು ಮಾಡುವರಯ್ಯಾ ತೊಂದರೇ ..
ಓಟಿನ ಮೇಲೆ ಓಟನು ಕೊಟ್ಟು ಮಾಡುವರಯ್ಯಾ ತೊಂದರೇ ..
ಆದರೇ ಅಂಕಣ್ಣ.. ಕೂತರೇ ಡೊಂಕಣ್ಣ ಇರುವುದು ನಮ್ಮದಣ್ಣ ಇದರಲೇ ಸುಖವಣ್ಣ
ಸ್ವರ್ಗಕ್ಕೇ ಹೋಗುವಾ ಸುಖವೆಲ್ಲಾ ದೋಚುವಾ
ಶೋಕು ಜೋಕು ಮಾಡುವ ರಾಜ ನಾನೇ ರಾಣಿ ನೀನೇ ರಾಜ..
ಶೋಕು ಜೋಕು ಮಾಡುವ ರಾಜ ನಾನೇ ರಾಣಿ ನೀನೇ ರಾಜ..
--------------------------------------------------------------------------------------------------------------------------

ಭಾಗೀರಥಿ (೧೯೬೯) - ನಲಿಯೋಣ ಬಾ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆನೇಕಲ್ ನಂಜುಕವಿ ಗಾಯನ :ಪಿ.ಬಿ.ಎಸ್. ಎಸ್.ಜಾನಕೀ 

ಹೆಣ್ಣು : ನಲಿಯೋಣ ಬಾ ನೆನೆಯೋಣ ಬಾ
          ನಲಿಯೋಣ ಬಾ ನೆನೆಯೋಣ ಬಾ  ಗುಡುಗಿಲ್ಲಾ ಮಿಂಚಿಲ್ಲಾ ಮೋಡದ ಮುಸುಕಿಲ್ಲಾ
          ಪ್ರೇಮದ ಮಳೆಯಲ್ಲಿ ನೆನೆಯೋಣ ಬಾ.. ಮೋಹದ ಹೊಳೆಯಲ್ಲಿ ತೇಲೋಣ ಬಾ
         ನಲಿಯೋಣ ಬಾ ನೆನೆಯೋಣ ಬಾ
ಗಂಡು : ಕಲೆಯೋಣ ಬಾ ಮೈ ಮರೆಯೋಣ ಬಾ
            ಕಲೆಯೋಣ ಬಾ ಮೈ ಮರೆಯೋಣ ಬಾ ಸುಖ ದುಃಖ ನಮಗಿಲ್ಲಾ ಲೋಕದ ಭಯವಿಲ್ಲ
            ಸುಖ ದುಃಖ ನಮಗಿಲ್ಲಾ ಲೋಕದ ಭಯವಿಲ್ಲ ಹಾಲಿನ ಮಳೆಯಲ್ಲಿ ನೆನೆಯೋಣ ಬಾ
            ಜೇನಿನ ಹೊಳೆಯಲ್ಲಿ ಮೀಯೋಣ ಬಾ  ನಲಿಯೋಣ ಬಾ ನೆನೆಯೋಣ ಬಾ

ಹೆಣ್ಣು : ಮೆದುವಾಗಿ ಬಾ ಮೃದು ಮೃದುವಾಗಿ ಬಾ ಪ್ರೇಮದ ಮಂದಿರ ಹೂವಿನ ಪಂಜರ
          ಭಾವನಾ ವೇಷದಿ ಮುಳುಗೋಣ ಬಾ ಕಾಮನಾದೇಶದಿ ಬೇರೆಯೋಣ ಬಾ
         ನಲಿಯೋಣ ಬಾ ನೆನೆಯೋಣ ಬಾ

ಗಂಡು : ಚೆಲುವಿನ ಕಾರಂಜಿ ಒಲವಿನ ಅಪರಂಜಿ ಕಲೆಯಾಗಿ ಬಾ ಅಲೆ ಅಲೆಯಾಗಿ ಬಾ
            ತೇಲುವ ಮನಸಲ್ಲಿ ನೆಲೆಯಾಗೂ ಬಾ ಬಾಳಿನ ಬಾನಲ್ಲಿ ಬೆಳಕಾಗು ಬಾ
          ನಲಿಯೋಣ ಬಾ ನೆನೆಯೋಣ ಬಾ  ಗುಡುಗಿಲ್ಲಾ ಮಿಂಚಿಲ್ಲಾ ಮೋಡದ ಮುಸುಕಿಲ್ಲಾ
ಹೆಣ್ಣು : ಪ್ರೇಮದ ಮಳೆಯಲ್ಲಿ ನೆನೆಯೋಣ ಬಾ.. ಮೋಹದ ಹೊಳೆಯಲ್ಲಿ ತೇಲೋಣ ಬಾ
ಇಬ್ಬರು : ನಲಿಯೋಣ ಬಾ ನೆನೆಯೋಣ ಬಾ.. ನಲಿಯೋಣ ಬಾ ನೆನೆಯೋಣ ಬಾ
--------------------------------------------------------------------------------------------------------------------------

No comments:

Post a Comment