985. ಅಪೂರ್ವ ಜೋಡಿ (೧೯೯೩)

ಅಪೂರ್ವ ಜೋಡಿ ಚಿತ್ರದ ಹಾಡುಗಳು 
  1. ಮೈಸೂರು ಸುತ್ತಲೂ ಕೋಟೆಯ ಕಟ್ಟಲು 
  2. ಅಣ್ಣ ಬಂದ 
  3. ನಾರಿ ನಿನ್ನ ಮಾರಿ ಮ್ಯಾಲೇ 
  4. ಶೋಧನೆ ಬದುಕೇ ದಿನವೂ 
  5. ದುಃಖ ಇಲ್ಲ ದುಡಿಯೋನಿಗೇ 
ಅಪೂರ್ವ ಜೋಡಿ (೧೯೯೩) - ಮೈಸೂರು ಸುತ್ತಲೂ ಕೋಟೆಯ ಕಟ್ಟಲು 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮನು, ಚಂದ್ರಿಕಾ ಗುರುರಾಜ 

ಮೈಸೂರು ಸುತ್ತಲೂ ಕೋಟೆಯ ಕಟ್ಟಲು ನೋಡಾಲು ಒಂಟವೋ ರೈತರ ಹೊಕ್ಕಲು
ರಾಗಿ ರೊಟ್ಟಿ ಬುತ್ತಿ ಪುಟ್ಟಿಯಲ್ಲಿ ಕಡ್ಡಿ ಪುಡಿ ಸೊಂಟ ಪಟ್ಟಿಯಲ್ಲಿ
ಕಸ್ತೂರಿ ಕನ್ನಡದ ಗೀಗೀ ಪದನೇ ಹಾಡುಮ... ಮುಂದೆ ಸಾಗುವ
ಗೀಯಾ...ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ...

ಬಳಪದ ಬಾಲೆ ಕೈಯಲಿ ಹಾಡೋ ಬಳೆಗಳು
ಸಿಂಬಳ ಬರದ ಮೂಗಲಿ ತೀರೋಗೋ ಮೂಗುತಿ
ತಡೆದರು ಕೊರೆದರು ಲೋಕವ ಕಳೆದರು
ಬಂದರು ತಂದರು ಕಣ್ಣು ಬಾಯಿ ತೆರೆದರು
ಬೇಲೂರ ಸುತ್ತಲು ಬಾಲೆಯರ  ಬಂಗಿಯ ನೋಡಲು ಒಂಟಿತೋ ಹೈದರ ಬಂಡಿಯು
ರಾಗಿ ಮುದ್ದೆ ಬುಟ್ಟಿ  ಮಡಕೆಯಲಿ ಹುಚ್ಚೆಳ್ ಚಟ್ನಿ ಪುಡಿ ಕುಡುಕೆಯಲ್ಲಿ
ಕಸ್ತೂರಿ ಕನ್ನಡದ ಗೀಗೀ ಪದನೇ ಹಾಡುಮ... ಮುಂದೆ ಸಾಗುವ
ಗೀಯಾ...ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ...

ದಿನವಿಡಿ ಏನು ಕಿಸಿದರು ಬದುಕು ತಳಮಳ 
ಅರಸನ ಸಾದು ಪುರುಷನ ಬಿಡದು ಕಳವಳ 
ಕತ್ತಲೆ ಬೆತ್ತಲೆ ಬಾಳಿದು ಎಂದ ಗೊಮ್ಮಟ 
ಬದುಕಿನ ಶಾಲೆಗೇ ಗೊಮ್ಮಟ ಒಂದು ಗುಮ್ಮಟ 
ಬೆಳಗೊಳ ಹತ್ತಲು ಗೊಮ್ಮಟ ಬೆತ್ತಲು ನೋಡಲು ಒಂಟೇವೂ ಮಣ್ಣಿನ ಮಕ್ಕಳು 
ಕಾಯಿ ಕಡ್ಡಿ ಬೆಳ್ಳಿ ತಟ್ಟೆಯಲ್ಲಿ ಮಡಿ ಬಟ್ಟೆ ಟ್ರೆಂಕು ಪೆಟ್ಟೆಯಲ್ಲಿ 
ಕಸ್ತೂರಿ ಕನ್ನಡದ ಗೀಗೀ ಪದನೇ ಹಾಡುಮ... ಮುಂದೆ ಸಾಗುವ
ಗೀಯಾ...ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ...

ನಾಡಿಗೂ ನಮ್ಮ ಕಾಡಿಗೂ ತಾಯಿ ಒಬ್ಬಳು
ಮರೆಯದೆ ಹಸಿರು ಅಂಗಿಯ ಹೊಲಸಿ ಕೊಡುವಳು
ನಮ್ಮನ್ನು ನಿಮ್ಮನ್ನು ಸಾಕುವ ಗಂಗೆಯಮ್ಮನು
ಜಿನುಗುವ ಜಿಗಿಯುವ ಧುಮುಕುವ ಜೀವನಮ್ಮನು
ಜೋಗದ ಸುತ್ತಲು ಸಹ್ಯಾದ್ರಿ ತಪ್ಪಲು ನೋಡಾಲೂ
ಒಂಟವೋ ರೈತರ ಹೊಕ್ಕಲು
ಉಣ್ಣೆ ಕಂಬಳಿ ಗಂಟುಮೂಟೆಯಲ್ಲಿ ಉರುಳೆ ಕಡ್ಡಿ ಗಾಡಿ ಹೊಟ್ಟೆಯಲ್ಲಿ
ಕಸ್ತೂರಿ ಕನ್ನಡದ ಗೀಗೀ ಪದನೇ ಹಾಡುಮ... ಮುಂದೆ ಸಾಗುವ
ಗೀಯಾ...ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ... ಗೀಯಾ...
------------------------------------------------------------------------------------------------------------------------

ಅಪೂರ್ವ ಜೋಡಿ (೧೯೯೩) - ಅಣ್ಣ ಬಂದ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮನು, ಚಿತ್ರಾ 

------------------------------------------------------------------------------------------------------------------------

ಅಪೂರ್ವ ಜೋಡಿ (೧೯೯೩) - ನಾರಿ ನಿನ್ನ ಮಾರಿ ಮ್ಯಾಲೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮನು, ಚಿತ್ರಾ 

------------------------------------------------------------------------------------------------------------------------

ಅಪೂರ್ವ ಜೋಡಿ (೧೯೯೩) - ಶೋಧನೆ ಬದುಕೇ ದಿನವೂ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಡಾ|| ರಾಜಕುಮಾರ 

ಶೋಧನೇ... ಬದುಕೇ  ದಿನವೂ ಬರಿ ಶೋಧನೆ 
ಹುಡುಕಿ ತೆಗೆವಾ ಕಡು ಯೋಚನೇ... 
ವೇದನೇ ... ಎದೆಯಾ ಒಳಗೆ ಇದೆ ವೇದನೆ 
ಗುರಿಯ ತಲುಪೋ ಯಮಯಾತನೇ... 
ವಿಕಟ ಕಾಲನ ಮಾಧವ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ ಬೆರೆಯುವಾ... ಶೋಧನೇ... 
ಶೋಧನೇ... ಬದುಕೇ  ದಿನವೂ ಬರಿ ಶೋಧನೆ 
ಹುಡುಕಿ ತೆಗೆವಾ ಕಡು ಯೋಚನೇ... 
 
ಪರದೇಶವು ರಣಭೂಮಿಯಲ್ಲ ಸ್ತ್ರೀಗೆ ಚಿಂತೆ ಇಲ್ಲಿ 
ಪರದೇಶವು ರಣಭೂಮಿಯಲ್ಲ ಸ್ತ್ರೀಗೆ ಚಿಂತೆ ಇಲ್ಲಿ 
ಸಹಧರ್ಮದಲ್ಲಿ ಪರತಂತ್ರವಿದು ಸ್ತ್ರೀಗೆ ಭಯವು ಇಲ್ಲಿ 
ಮಹದೇವಿ ಹೆಣ್ಣು ಭೂದೇವಿ ಹೆಣ್ಣು ಎನುತಿರುವ ನಾಡಿನಲ್ಲಿ 
ದಿನ ಮಾನಹರಣ ದಿನ ಪ್ರಾಯಹರಣ ಹಗಲಲ್ಲೇ ಹೆಣ್ಣಿಗಿಲ್ಲಿ 
ದಿನ ಮಾನಹರಣ ದಿನ ಪ್ರಾಯಹರಣ ಹಗಲಲ್ಲೇ ಹೆಣ್ಣಿಗಿಲ್ಲಿ 
ವೈರೀ ಇಲ್ಲ ಹೊರಗೆ ಇರುವಾ ನಮ್ಮ ಜೊತೆ 
ಹೆಣ್ಣು ನೊಂದ ನೆಲವು ಎಂದು ಕೊಡದು ಫಲವು 
ವಿಕಟ ಕಾಲ ಮಾರ್ಧನಿ ಮನದಲ್ಲಿ 
ಹಗೆಯ ರಾಕ್ಷಸ ತಾಂಡವ ತಲೆಯಲ್ಲಿ ಬರೆಯುವಾ... 
ಶೋಧನೇ... ಬದುಕೇ  ದಿನವೂ ಬರಿ ಶೋಧನೆ 
ಹುಡುಕಿ ತೆಗೆವಾ ಕಡು ಯೋಚನೇ... 
     
ದುಡಿವವನು ಬಡವ ತುಳಿವವನು ಧನಿಕ 
ಬದುಕೆಲ್ಲ ಶವದ ರೀತಿ ಬಡತನದ ರೇಖೆ ಧಾಟಿಯೇ ಜೋಕೆ 
ವರದಕ್ಷಿಣೆಗಳ ಬಂಧು ಭಕ್ಷಣೆಗಳ ಸ್ತ್ರೀಹತ್ಯಾಕಾಂಡದಲ್ಲಿ 
ಹಗಲಿರುಳು ದುಡಿವ ಬೆವರಿಳಿಸಿ ತರುವ ಹಣಕಿಲ್ಲಿ ಬೆಲೆಯು ಎಲ್ಲೀ ...     
ಹೊರಗೆ ತನ್ನ ಸಹನೆ ಮರೆತೆ ಇನ್ನೂ ಕರುಣೆ 
ಒಂದೇ ಸುಳಿವು ಬೇಕು ತೊರೆದು ಸಿಡಿಯಬೇಕು 
ವಿಕಟಕಾಲನ ಮಾರ್ಧನಿ ಮನದಲಿ ಹಗೆಯ 
ರಾಕ್ಷಸ ತಾಂಡವ ತಲೆಯಲಿ ಬೆರೆಯುವಾ.... ಶೋಧನೇ ... 
ಶೋಧನೇ... ಬದುಕೇ  ದಿನವೂ ಬರಿ ಶೋಧನೆ 
ಹುಡುಕಿ ತೆಗೆವಾ ಕಡು ಯೋಚನೇ... 
ವೇದನೇ ... ಎದೆಯಾ ಒಳಗೆ ಇದೆ ವೇದನೆ 
ಗುರಿಯ ತಲುಪೋ ಯಮಯಾತನೇ... 
ವಿಕಟ ಕಾಲನ ಮಾಧವ ಮನದಲಿ
ಹಗೆಯ ರಾಕ್ಷಸ ತಾಂಡವ ತಲೆಯಲಿ ಬೆರೆಯುವಾ... ಶೋಧನೇ... 
ಶೋಧನೇ... ಬದುಕೇ  ದಿನವೂ ಬರಿ ಶೋಧನೆ 
ಹುಡುಕಿ ತೆಗೆವಾ ಕಡು ಯೋಚನೇ... 
------------------------------------------------------------------------------------------------------------------------

ಅಪೂರ್ವ ಜೋಡಿ (೧೯೯೩) - ದುಃಖ ಇಲ್ಲ ದುಡಿಯೋನಿಗೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ 

------------------------------------------------------------------------------------------------------------------------

No comments:

Post a Comment