ಕರುಳಿನ ಕುಡಿ ಚಲನಚಿತ್ರದ ಹಾಡುಗಳು
- ಓ.. ಮಲ್ಲೇ ಹೂವೇ ನೀನಗೆಲ್ಲ ನೋವೇ
- ನನಗಾಗಿ ನೀನು ನಿನಗಾಗಿ ನಾನು
- ಕೃಷ್ಣಾ ಎಲ್ಲಿಗೆ ಹೋದೆ ಕಾದಿಹಳಿಲ್ಲಿ ತಾಯಿ ಯಶೋಧೇ
- ಅಮ್ಮ ಎಲ್ಲಿಗೆ ಹೋದೆ ಸೇರದೆ ನಿನ್ನಾ ಕಾತುರಗೊಂಡೆ
- ರುತ್ತೋ ರುತ್ತೋ ರಾಯನ ಮಗಳೇ
- ಪಕ್ಷಿಗಳೇ ಕೇಳೇ ನನ್ನಯ ಕಥೆಯ
ಕರುಳಿನ ಕುಡಿ (೧೯೯೪) - ಓ.. ಮಲ್ಲೇ ಹೂವೇ ನೀನಗೆಲ್ಲ ನೋವೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ವಿ.ಮನೋಹರ ಗಾಯನ : ಡಾ||ರಾಜಕುಮಾರ ಆ ಸೂತ್ರಧಾರನು ಆಡಿಸಿದಂತೆ ಆಡಲೇ ಬೇಕು
ಅವನ ಇಚ್ಛೆಯಂತೇ ನಗಬೇಕು
ಅವನಾಣತಿಯಂತೇ ಅಳಬೇಕು
ಓ.. ಮಲ್ಲೇ ಹೂವೇ ನೀನಗೆಲ್ಲ ನೋವೇ
ಆಸರೆ ನಿನಗಿಲ್ಲಾ ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೇ
ನಂದನವನವು ಕಾನನವಾಯಿತೇ
ನಂದನವನವು ಕಾನನವಾಯಿತೇ
ತಣ್ಣನ ಚಂದ್ರಮನೇ ಬೆಂಕಿಯ ಚಂಡಾದನೇ
ಮಮತೆಯ ಸ್ಪಂದನ ಆ ಬಯಸಿದೆ ಕಂದನ
ದಾರಿಯ ಕಾಣದೇ... ಕತ್ತಲೆಯೇ ಕವಿದಾಯಿತೇ
ಆಸೆಯು ದೋಣಿಯು ಗಾಳಿಗೆ ಸಿಲುಕಿ
ತೇಲುತ ಮುಳುಗುತಲಿ ... ಓ.. ಗುರಿಯು ಸೇರದೇ
ಓ.. ಮಲ್ಲೇ ಹೂವೇ ನೀನಗೆಲ್ಲ ನೋವೇ
ಆಸರೆ ನಿನಗಿಲ್ಲಾ ಬೇಡಿದ ಸುಖವು ಕನಸಾಯ್ತೆ
ಅಂದದ ಬದುಕು ಬರಡಾಯಿತೇ
--------------------------------------------------------------------------------------------------------------------------
ಕರುಳಿನ ಕುಡಿ (೧೯೯೪) - ನನಗಾಗಿ ನೀನು ನೀನಗಾಗಿ ನಾನು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ನನಗಾಗಿ ನೀನು ನಿನಗಾಗಿ ನಾನು ಬಳಿ ನೀನು ಇರುವಾಗ
ಸ್ವರ್ಗವೂ ಏಕಿನ್ನೂ ಕಣ್ಣಲ್ಲೂ ನೆಲೆಸಿರುವೆ ನೀನು ಮನದಲ್ಲಿ ತುಂಬಿರುವೆ ನೀನೂ ..
ಗಂಡು : ನನಗಾಗಿ ನೀನು ನಿನಗಾಗಿ ನಾನು ಬಳಿ ನೀನು ಇರುವಾಗ

ಗಂಡು : ನೀ ಬಂದೆ ವಧುವಾಗಿ ಈ ನಮ್ಮ ಊರಿಗೇ ..
ನೀ ಬಂದೆ ವಧುವಾಗಿ ಈ ನಮ್ಮ ಊರಿಗೇ ನಿನ್ನನ್ನೂ ಕಳಿಸೆನೂ ಇನ್ನೆಂದು ತವರಿಗೆ
ಹೆಣ್ಣು : ನಾ ನಿನ್ನ ಸತಿಯಾಗಿ ಸೇವೆಯನು ಮಾಡುವೆ ತವರೂರ ಸುಖವನ್ನೂ ನಿನ್ನಲ್ಲೇ ಕಾಣುವೇ
ಗಂಡು : ಶೃತಿಯಾಗಿ ಸೇರಿದೆ ಬದುಕೆಂಬ ರಾಗಕೆ
ಹೆಣ್ಣು : ನೀನೇ ಪ್ರೇಮ ಪಲ್ಲವಿ ನಮ್ಮಿ ಪ್ರಣಯದ ಕಾವ್ಯಕೆ
ಗಂಡು : ನನಗಾಗಿ ನೀನು ನಿನಗಾಗಿ ನಾನು ಬಳಿ ನೀನು ಇರುವಾಗ
ಸ್ವರ್ಗವೂ ಏಕಿನ್ನೂ ಕಣ್ಣಲ್ಲೂ ನೆಲೆಸಿರುವೆ ನೀನು ಮನದಲ್ಲಿ ತುಂಬಿರುವೆ ನೀನೂ ..
ಹೆಣ್ಣು : ಈ ತುಂಟ ನಗೆಯಲ್ಲಿ ಎಷ್ಟೊಂದು ಅರ್ಥವೂ..
ಈ ತುಂಟ ನಗೆಯಲ್ಲಿ ಎಷ್ಟೊಂದು ಅರ್ಥವೂ ಗೊತ್ತಾಯ್ತು ಗೆಳೆಯನೇ ನೀನೆಲ್ಲ ಆಸೆಯೂ
ಗಂಡು : ನೀ ನನ್ನ ಅರಗಿಣಿಯು ಮಾತಲ್ಲಿ ಜಾನೆಯು ನಿನ್ನಲ್ಲಿ ಹುದುಗಿದೆ ನನ್ನೆಲ್ಲ ಪ್ರಾಣವೂ
ಹೆಣ್ಣು : ಒಲವೆಂಬ ಗುಡಿಗೆ ನೀನಾದೆ ಗೋಪುರ
ಗಂಡು : ನೀನೇ ನನ್ನ ದೇವಿಯು ಪ್ರೀತಿ ನಮ್ಮ ಪೂಜೆಯೂ ..
ಹೆಣ್ಣು : ನನಗಾಗಿ ನೀನು ನಿನಗಾಗಿ ನಾನು ಬಳಿ ನೀನು ಇರುವಾಗ
ಸ್ವರ್ಗವೂ ಏಕಿನ್ನೂ ಕಣ್ಣಲ್ಲೂ ನೆಲೆಸಿರುವೆ ನೀನು ಮನದಲ್ಲಿ ತುಂಬಿರುವೆ ನೀನೂ ..
ಗಂಡು : ನನಗಾಗಿ ನೀನು ನಿನಗಾಗಿ ನಾನು ಬಳಿ ನೀನು ಇರುವಾಗ
ಸ್ವರ್ಗವೂ ಏಕಿನ್ನೂ ಕಣ್ಣಲ್ಲೂ ನೆಲೆಸಿರುವೆ ನೀನು ಮನದಲ್ಲಿ ತುಂಬಿರುವೆ ನೀನೂ ..
--------------------------------------------------------------------------------------------------------------------------
ಕರುಳಿನ ಕುಡಿ (೧೯೯೪) - ಕೃಷ್ಣಾ ಎಲ್ಲಿಗೆ ಹೋದೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮ ಸುಂದರ ಕುಲಕರ್ಣಿ ಗಾಯನ :ಎಸ್.ಜಾನಕೀ
ಕೃಷ್ಣ ಎಲ್ಲಿಗೆ ಹೋದೆ ಕಾದಿಹಳಿಲ್ಲಿ ತಾಯೀ ಯಶೋಧೇ ಕೂಗಿದರೂ ನನ್ನೀ ಧಣಿ ಕೇಳದೇ ..
ಎಲ್ಲಿರುವೆ ಎಲ್ಲಿರುವೆ ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ

ಪುಟಿ ಪುಟಿದಾಡುವ ನಿನ್ನಯ ಹೆಜ್ಜೆ ಘಲ ಘಲ ಕುಣಿಯುವ ಕಾಲ್ಗಳ ಗೆಜ್ಜೆ
ಫಳ ಫಳ ಹೊಳೆಯುವ ಕಂಗಳ ಕಾಂತಿ ಥಳ ಥಳ ಮಿನುಗುವ ಮೊಗದಲಿ ಶಾಂತಿ
ಮಣ್ಣನೇಕೆ ತಿಂದೆ ಎಂದು ಕೆನ್ನೆ ಹಿಂಡಿ ಕೇಳಲೂ ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೇ ..
ಬಾಯಲ್ಲೇ ಬ್ರಹ್ಮಾಂಡವ ನೀ ತೋರಿದೇ ..

ಎಲ್ಲಿರುವೆ ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ
ಗಡಿಗೆಯ ಮೊಸರು ಕಡೆದಾಗ ಗೋಪಿಯರು ಕಾಣದಂತೆ
ಬೆಣ್ಣೆ ಎಲ್ಲ ಕದ್ದು ತಿಂದು ಕೇಕೆ ಹಾಕಿ ನಗುವೆಯ
ಗೋವುಗಳು ನಿನ ಕಂಡು ಮೇವು ಮರೆತು ನಿಲ್ಲುವಂತೆ
ಕೊಳಲ ಮಧುರ ಗಾನದಿಂದ ಮೋಡಿ ಮಾಡಿ ನಲಿವೆಯಾ
ಚಂಡ ವೃಷ್ಟಿಯಾಗಲು ಬಂದು ರಕ್ಷಿಸೆನ್ನಲೂ ಗಿರಿಯನ್ನೆತ್ತಿ ಗೋಕುಲವಾ ಕಾಪಾಡಿದೆ
ಕೃಷ್ಣ ಎಲ್ಲಿಗೆ ಹೋದೆ ಕಾದಿಹಳಿಲ್ಲಿ ತಾಯೀ ಯಶೋಧೇ ಕೂಗಿದರೂ ನನ್ನೀ ಧಣಿ ಕೇಳದೇ ..
ಎಲ್ಲಿರುವೆ ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ ಕಾದಿಹಳಿಲ್ಲಿ ತಾಯೀ ಯಶೋಧೇ
ಎಲ್ಲಿರುವೆ ಕೃಷ್ಣ ಕೃಷ್ಣ ಎಲ್ಲಿಗೆ ಹೋದೆ ಕಾದಿಹಳಿಲ್ಲಿ ತಾಯೀ ಯಶೋಧೇ
--------------------------------------------------------------------------------------------------------------------------
ಕರುಳಿನ ಕುಡಿ (೧೯೯೪) - ಅಮ್ಮ ಎಲ್ಲಿಗೆ ಹೋದೆ ಸೇರದೆ ನಿನ್ನಾ ಕಾತುರಗೊಂಡೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಜಾನಕೀ
ಅಮ್ಮ ಎಲ್ಲಿಗೆ ಹೋದೆ ಸೇರದೆ ನಿನ್ನಾ ಕಾತರಗೊಂಡೆ ಕೂಗಿದರು ನನ್ನೀ ದನಿ ಕೇಳದೆ

ಎಲ್ಲಿರುವೇ .. ಎಲ್ಲಿರುವೇ ...
ಕಣ್ಣ ಮುಚ್ಚೆ ಕಾಡೇಗೂಡೆ ಆಟವನ್ನು ಆಡುತಿಹೆಯಾ ಎಲ್ಲಿ ಅಡಗಿ ಕುಳಿತಿರುವೇ ಹೊರಗೆ ನೀನು ಬಾರೆಯಾ
ತಾಯಿ ತೊರೆದ ಮಗುವ ಪಾಡು ನೀರ ಬಿಟ್ಟ ಮೀನಿನಂತೇ ಕರುಳಕುಡಿಯ ಕೊರಗು ಕಂಡು ಕರುಣೆಯನ್ನು ತೋರೆಯ
ಮಣ್ಣನೇಕೆ ತಿಂದೆ ಎಂದೂ ಕೆನ್ನೆ ಹಿಂಡಿ ಕೇಳಲು ಬಾಯಲ್ಲಿ ಬ್ರಹ್ಮಾಂಡವ ನೀ ತೋರಿದೆ

ಮಳೆಯ ನೀರು ಸುರಿದರೇನು ಚಳಿಯು ನನಗೆ ಆಗದಮ್ಮ
ಕಣ್ಣ ನೀರ ತಾಪ ಸಹಿಸೆ ತಂಪು ನೀನು ಒಡೆಯ
ಗುಮ್ಮ ಬರುವ ಕಥೆಯು ಹೇಳಿ ಜೋಗಳವ ಹಾಡುತ್ತಿದ್ದೇ
ಗುಮ್ಮ ಇಂದು ಕಾಡುತಿಹುದು ಒಮ್ಮೆ ಬಂದು ನೋಡೆಯ
ಚಂಡ ವೃಷ್ಟಿಯಾಗಲು ಬಂದು ರಕ್ಷಿಸೆನ್ನಲು ಗಿರಿಯೆನ್ನೆತ್ತಿ ಗೋಕುಲವ ಕಾಪಾಡಿದೆ

ಕರುಳಿನ ಕುಡಿ (೧೯೯೪) - ರುತ್ತೋ ರುತ್ತೋ ರಾಯನ ಮಗಳೇ
ಸಂಗೀತ : ರಾಜನ್ ನಾಗೇಂದ್ರ ,ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ರುತ್ತೋ ರುತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ
ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ಆಡು ಬಾರಮ್ಮ
ಗಂಡು : ಆ.. ಆಹಾಹಾ... ಓ..ಓಓಓಓಓ
ಒಂದಾನೊಂದು ಊರಿನಲ್ಲಿ ಇದ್ದಳು ಮಮತೆಯ ತಾಯಮ್ಮ
ದೇವತೆಯಂಥ ಆಕೆಯನು ಭೂಮಿಗೆ ಕಳಸಿದ ಆ ಬ್ರಹ್ಮ
ಆ ಮಹಾತಾಯಿಯ ರೂಪವ ತಾಳಿ ಬಂದಿಹೆ ನೀನು ಕಂದಮ್ಮ

ಗಂಡು : ಲಲ... ಲಾಲಾಲಾಲಾ.. ಲಲಲ.. ಲಾಲಲಾಲ ಆಹಾಹಾ...ಅಹಹಹ..ಆಆಆ
ಅಮ್ಮನು ಇಲ್ಲದ ಆಸರೆ ಇಲ್ಲದ ಬೀದಿಯಲಿದ್ದ ಹಸುಳೆಯ ಕಂಡು
ಆ ಹೆಂಗರಳು ಮಿಡಿಯಿತು ನೊಂದು ಮಡಿಲಲಿ ಜಾಗ ನೀಡಿದಳಂದು
ತನ್ನದೇ ಕರುಳಿನ ಕುಡಿಯ ಸಮಾನ ಕಾಣುತ ಸಾಕಿ ಸಲಹಿದಳಿನ್ನ
ತಾಯ್ತನ ಮಹಿಮೆಯ ವಿಶ್ವಕೇ ತೋರಿಸಿದೆ ಮಾತೆಯ ನನ್ನಾ ಜನ್ಮಾನುಬಂಧ
ಆಕೆಯ ಲಾಲಿಯ ಆಲಿಸಿ ಬೆಳೆದ ಧನ್ಯನು ನಾನೇ ಕೇಳೆನ್ನ ಕಂದ

ಗಂಡು : ಎದುರಲೇ ಇರುವ ಮಡಿಲಿನ ಹೂವನು ಸೇರದೆ ತುಡಿಯುತ ನೊಂದಿಹ ಮನವೇ
ನಿನ್ನನೂ ಸೇರದೇ ಕಂದನ ದೂರವ ಮಾಡಿದ ವಿಧಿಗೆ ಕ್ಷಣಿಕ ಗೆಲುವೇ
ಮಮತೆಯ ನಡುವೆ ಮುಸುಕಿದ ಮೋಡ ಕರಗುವ ಸಮಯ ಮುಂದಿದೆ ಹೂವೇ
ಆ ಮಹಾದೇವನ ದಯೆಯೊಂದಿರಲೂ ಬಂದೆ ಬರುವುದೂ ಸಂತಸ ದಿನವೇ
ನಗುನಗುತಾ ಇರು ಎಂದಿಗೂ ನೀನು ಧೈರ್ಯವೇ ಬಾಳಲಿ ಗೆಲುವಿನ ಮಾಲೆ

ಕರುಳಿನ ಕುಡಿ (೧೯೯೪) - ಪಕ್ಷಿಗಳೇ ಕೇಳೇ ನನ್ನಯ ಕಥೆಯ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ ಗಾಯನ : ಎಸ್.ಜಾನಕೀ , ಎಸ್.ಪಿ.ಬಿ
ಹೆಣ್ಣು : ಪಕ್ಷಿಗಳೇ ಕೇಳೇ ನನ್ನಯ ಕಥೆಯ ಪ್ರಾಣಿಗಳೇ ಕೇಳೇ ನೋವಿನ ಕಥೆಯ

ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ ಅಂಬಾ ಎನ್ನುತ ಕೂಗಿ ಬರುವೆ ಕರುವಿಗೇ
ಹಾಲು ಕೊಡುವ ಅಮ್ಮ ಹಸುವಿನಾಸರೆ ಚಿಲಿಪಿಲಿ ಎಂದೂ ನಲಿವ ಪುಟ್ಟ ಪಿಳ್ಳೆಗಳಿಗೆ
ತಾಯಿ ಕೋಳಿ ಕೊಡುವುದು ತನ್ನ ಆಸರೆ ನನಗೆ ಮಾತ್ರ ಏಕೆ ಇಲ್ಲ ಅಮ್ಮನಾಸರೇ ..
ಪಕ್ಷಿಗಳೇ ಕೇಳೇ ನನ್ನಯ ಕಥೆಯ ಪ್ರಾಣಿಗಳೇ ಕೇಳೇ ನೋವಿನ ಕಥೆಯ
ಗಂಡು : ಹೆತ್ತ ತಾಯಿಗೆ ತನ್ನ ಕರುಳಕುಡಿ ಇದು ಎಂದು ಹೇಳಲಾಗದ ಮೂಕ ವೇದನೆ
ಅಪ್ಪ ಅಮ್ಮ ಇದ್ದು ಇಲ್ಲದಂತೆ ನೋಯುವ ಕೂಸಿಗಿಂದು ಅಯ್ಯೋ ಪಾಪ ಎಂಥ ಶೋಧನೆ
ನಿಜವ ನುಡಿವ ಬಾಯನೇಕೆ ಕಟ್ಟಿ ಹಾಕಿದೆ ದೇವಾ ನಿನ್ನ ಲೀಲೆಯಲ್ಲಿ ಎಲ್ಲ ವೇದನೆ
ಹೆಣ್ಣು : ಪಕ್ಷಿಗಳೇ ಕೇಳೇ ನನ್ನಯ ಕಥೆಯ ಪ್ರಾಣಿಗಳೇ ಕೇಳೇ ನೋವಿನ ಕಥೆಯ
ಹೆತ್ತಮ್ಮನೇ ಇಲ್ಲದ ತಬ್ಬಲಿ ವ್ಯಥೆಯ ದೇವರೇ ನನ್ನಾ ಮೋರೆಯ ಕೇಳೆಯಾ
ದೇವಿಯೇ ನಿನ್ನಾ ದಯವ ತೊರೆಯಾ ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯ
ನನ್ನ ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯೂ ..
ನನ್ನ ಯಾವ ಪಾಪಕ್ಕಾಗಿ ಕೊಟ್ಟ ಶಿಕ್ಷೆಯೂ ..
--------------------------------------------------------------------------------------------------------------------------
No comments:
Post a Comment