ಕನ್ನಡಕುವರ ಚಲನಚಿತ್ರದ ಹಾಡುಗಳು
- ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
- ನಡೆಯೋ ಕನ್ನಡ
- ಕನ್ನಡಿಗ ನೀ ಭಾಗ್ಯಶಾಲೀ
- ಜೈ ಭಾರತ ಮಾತಾ
- ಹಂಪೆಯ ಕಲ್ಲಿನ
- ಚೆಂದದ ಮನೆ ಇದು ನೋಡು
ಕನ್ನಡ ಕುವರ (೧೯೯೪) - ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಸಂಗೀತ : ವಾಮಾನರಾಜ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಸರ್ವ ಧರ್ಮ ಸಾರಿದಂತ ದೈವ ತಾಣ ಧರ್ಮಸ್ಥಳವು
ಭವ್ಯವಾದ ದೇಗುಲ ಶಿಲ್ಪ ನಿನ್ನ ಚೆಲುವಿನ ಆಭರಣಗಳು
ಆಳಿದಂತ ಅರಸರ ಕೀರ್ತಿ ನಿನ್ನ ಹಿರಿಮೆ ರತ್ನ ಮುಕುಟ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಕಸ್ತೂರಿ ಕನ್ನಡ ನುಡಿಯು ನಿನ್ನ ಕಂಠ ಮಾಂಗಲ್ಯ
ಕಾವ್ಯ ಸೃಷ್ಟಿ ಕವಿಕುಲವೆಲ್ಲ ನಿನ್ನ ಕೊರಳ ಪುಷ್ಪಮಾಲೆ
ವೀರ ವನಿತೆಯರ ಕ್ಷಾತ್ರ ಚರಿತೆ ನಿನಗೆ ಶ್ವೇತ ಛತ್ರಿಯಂತೆ
ಧೀರರಾದ ಕಲಿಮಲ್ಲರೆಲ್ಲಾ ನಿನ್ನ ಕರಗ ಖಡ್ಗವಂತೆ
ಹೆಣ್ಣು : ಎಷ್ಟೊಂದು ಭಕ್ತಿಯು ನಿನಗೆ ನನ್ನ ಗರ್ಭ ಸಂಜಾತ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಗಂಡು : ನಡೆಯು ಕನ್ನಡ ನುಡಿಯು ಕನ್ನಡ ಕನ್ನಡ ನಾಡಿನ ಸಿರಿ ಎಲ್ಲ ಕನ್ನಡ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಹಸಿರಾದ ವನಸಿರಿಯೆಲ್ಲ ನಿನ್ನ ಉಡುಗೆ ತೊಡುಗೆಗಳುಸರ್ವ ಧರ್ಮ ಸಾರಿದಂತ ದೈವ ತಾಣ ಧರ್ಮಸ್ಥಳವು
ಭವ್ಯವಾದ ದೇಗುಲ ಶಿಲ್ಪ ನಿನ್ನ ಚೆಲುವಿನ ಆಭರಣಗಳು
ಆಳಿದಂತ ಅರಸರ ಕೀರ್ತಿ ನಿನ್ನ ಹಿರಿಮೆ ರತ್ನ ಮುಕುಟ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಕಾವ್ಯ ಸೃಷ್ಟಿ ಕವಿಕುಲವೆಲ್ಲ ನಿನ್ನ ಕೊರಳ ಪುಷ್ಪಮಾಲೆ
ವೀರ ವನಿತೆಯರ ಕ್ಷಾತ್ರ ಚರಿತೆ ನಿನಗೆ ಶ್ವೇತ ಛತ್ರಿಯಂತೆ
ಧೀರರಾದ ಕಲಿಮಲ್ಲರೆಲ್ಲಾ ನಿನ್ನ ಕರಗ ಖಡ್ಗವಂತೆ
ಹೆಣ್ಣು : ಎಷ್ಟೊಂದು ಭಕ್ತಿಯು ನಿನಗೆ ನನ್ನ ಗರ್ಭ ಸಂಜಾತ
ಎಷ್ಟೊಂದು ಭಕ್ತಿಯು ನಿನಗೆ ನನ್ನ ಗರ್ಭ ಸಂಜಾತ
ಹೆಣ್ಣು : ನೀನು ನುಡಿದ ಪ್ರತಿ ನುಡಿಯು ನನ್ನ ಹೆಸರ ನುಡಿಯುತಿದೆ
ಹೆಣ್ಣು : ನೀನು ನುಡಿದ ಪ್ರತಿ ನುಡಿಯು ನನ್ನ ಹೆಸರ ನುಡಿಯುತಿದೆ
ನಿನ್ನಂಥ ಮಕ್ಕಳು ಎಲ್ಲಾ ನನ್ನ ವರದ ಪುಷ್ಪಗಳು
ನನ್ನ ನದಿಯಾ ಪ್ರತಿ ಕ್ಷಣದಲ್ಲೂ ನಿನ್ನ ಸಿರಿಯ ಕಾವ್ಯಗಳು
ನಾಡಿಗಾಗಿ ಬಾಳುತಿರುವಾ ನಿನ್ನ ಬದುಕೇ ಚೆಂದವು
ಗಂಡು : ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿನನ್ನ ನದಿಯಾ ಪ್ರತಿ ಕ್ಷಣದಲ್ಲೂ ನಿನ್ನ ಸಿರಿಯ ಕಾವ್ಯಗಳು
ನಾಡಿಗಾಗಿ ಬಾಳುತಿರುವಾ ನಿನ್ನ ಬದುಕೇ ಚೆಂದವು
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ
--------------------------------------------------------------------------------------------------------------------------
ಕನ್ನಡ ಕುವರ (೧೯೯೪) - ನಡೆಯೋ ಕನ್ನಡ
ಸಂಗೀತ : ವಾಮಾನರಾಜ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಜಿ.ವಿ.ಅತ್ರಿ, ಸಂಗೀತಾ ಕಟ್ಟಿ
ಗಂಡು : ನಡೆಯು ಕನ್ನಡ ನುಡಿಯು ಕನ್ನಡ ಕನ್ನಡ ನಾಡಿನ ಸಿರಿ ಎಲ್ಲ ಕನ್ನಡ
ಪುಣ್ಯ ನದಿಗಳ ಕಲರವ ಕನ್ನಡ ಗಗನವ ತುಂಬಿದ ಗಿರಿದನಿ ಕನ್ನಡ
ಸಿರಿತನ ಮೆರೆಸಿದ ದೊರೆಗಳ ಕನ್ನಡ ಸಿರಿಗಂಧ ನಾಡಿನ ಸೊಬಗೆಲ್ಲ ಕನ್ನಡ
ಹೆಣ್ಣು : ವೀರರ ಶೂರರ ಶಾಸನ ಕನ್ನಡ ಸಾರ್ವಬೌಮರ ಉಸಿರೆಲ್ಲ ಕನ್ನಡ
ಪುಲಿಕೇಶಿ ಮೆರೆಸಿದ ಜಯಧ್ವನಿ ಕನ್ನಡ ನೃಪತುಂಗ ಬರೆಸಿದ ಕಾವ್ಯವೇ ಕನ್ನಡ
ಗಂಡು : ನಡೆಯು ಕನ್ನಡ ನುಡಿಯು ಕನ್ನಡ ಕನ್ನಡ ನಾಡಿನ ಸಿರಿ ಎಲ್ಲ ಕನ್ನಡ
ಗಂಡು : ಶಿಲ್ಪಿಗಳೆಲ್ಲರ ಶ್ರದ್ದೆಯ ಕನ್ನಡ ಹೊಯ್ಸಳ ವೀರರ ಕಲೆ ಎಲ್ಲ ಕನ್ನಡ
ಶರಣರ ವಚನದ ತಿರುಳೆಲ್ಲ ಕನ್ನಡ ಕನಕ ಪುರಂದರ ಸಾಹಿತ್ಯ ಕನ್ನಡ
ಹೆಣ್ಣು : ವಿದ್ಯಾರಣ್ಯರ ಮಂತ್ರವೇ ಕನ್ನಡ ವಿಜಯನಗರದ ವೈಭವ ಕನ್ನಡ
ಸಂಗೀತ ಕನ್ನಡ ಸಾಹಿತ್ಯ ಕನ್ನಡ ಸಂಸ್ಕೃತಿ ಕನ್ನಡ ಜಾಗೃತಿ ಕನ್ನಡ
ಗಂಡು : ನಡೆಯು ಕನ್ನಡ ನುಡಿಯು ಕನ್ನಡ ಕನ್ನಡ ನಾಡಿನ ಸಿರಿ ಎಲ್ಲ ಕನ್ನಡ
ಹೆಣ್ಣು : ಚಿತ್ರವು ಕನ್ನಡ ಚೈತ್ರವು ಕನ್ನಡ ವೀರ ವನಿತೆಯರ ಸಾಹಸ ಕನ್ನಡ
ಕೋಟೆಗಳೈಸಿರಿ ಕಲ್ಲೆಲ್ಲ ಕನ್ನಡ ಕವಿ ಸಾಮ್ರಾಟರ ಬರಹವೇ ಕನ್ನಡ
ಗಂಡು : ಪ್ರಕೃತಿ ಕನ್ನಡ ಆಕೃತಿ ಕನ್ನಡ ಚರಿತ್ರೆ ಕನ್ನಡ ಚಾರಿತ್ರ್ಯ ಕನ್ನಡ
ಧಾರ್ಮಿಕ ಚೇತನ ನಿಲುವೆಲ್ಲಾ ಕನ್ನಡ ಎಂದೆಂದೂ ಮೆರೆಯಲಿ ಈ ನಮ್ಮ ಕನ್ನಡ
ಗಂಡು : ನಡೆಯು ಕನ್ನಡ ನುಡಿಯು ಕನ್ನಡ ಕನ್ನಡ ನಾಡಿನ ಸಿರಿ ಎಲ್ಲ ಕನ್ನಡ
ಪುಣ್ಯ ನದಿಗಳ ಕಲರವ ಕನ್ನಡ ಗಗನವ ತುಂಬಿದ ಗಿರಿದನಿ ಕನ್ನಡ
ಸಿರಿತನ ಮೆರೆಸಿದ ದೊರೆಗಳ ಕನ್ನಡ ಸಿರಿಗಂಧ ನಾಡಿನ ಸೊಬಗೆಲ್ಲ ಕನ್ನಡ
ಹೆಣ್ಣು : ವೀರರ ಶೂರರ ಶಾಸನ ಕನ್ನಡ ಸಾರ್ವಬೌಮರ ಉಸಿರೆಲ್ಲ ಕನ್ನಡ
ಪುಲಿಕೇಶಿ ಮೆರೆಸಿದ ಜಯಧ್ವನಿ ಕನ್ನಡ ನೃಪತುಂಗ ಬರೆಸಿದ ಕಾವ್ಯವೇ ಕನ್ನಡ
ಗಂಡು : ನಡೆಯು ಕನ್ನಡ ನುಡಿಯು ಕನ್ನಡ ಕನ್ನಡ ನಾಡಿನ ಸಿರಿ ಎಲ್ಲ ಕನ್ನಡ
-------------------------------------------------------------------------------------------------------------------------
ಕನ್ನಡ ಕುವರ (೧೯೯೪) - ಕನ್ನಡಿಗ ನೀ ಭಾಗ್ಯಶಾಲೀ
ಸಂಗೀತ : ವಾಮಾನರಾಜ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ವಿಷ್ಣು
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
ಯಾವ ತಂಪು ಗಾಳಿ ಬೀಸಿ ಯಾವ ಕರಿಯ ಮಣ್ಣದಲಿಸಿ
ಯಾವ ಪುಣ್ಯ ನದಿಯ ಹರಿಸಿ ನಾಡವರ ನಲಿಸಿತೋ
ಅದುವೇ ನಮ್ಮ ಮಾತೃಭೂಮಿ ಇದೇ ನನ್ನ ಜನ್ಮ ಭೂಮಿ
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
ಯಾವ ಚಕ್ರವರ್ತಿ ಪದವಿ ಸಾವಿರಾರು ವರ್ಷ ಮೆರೆದು
ಯಾವ ವೀರ ಶೂರರೆಲ್ಲ ಮುಕುಟ ಧರಿಸಿ ಮೆರೆದರೋ
ಯಾವ ಸಿದ್ಧಪುರುಷರೆಲ್ಲ ನಾಡಿಗಾಗಿ ತಪಗೈದು
ಯಾವ ಶಕ್ತಿ ಬಲದಲ್ಲಿ ವಿಜಯನಗರ ಸ್ಥಾಪಿಸಿದರೋ
ಅದುವೇ ನಮ್ಮ ಭೂಮಿ ಇದೇ ನನ್ನ ಜನ್ಮಭೂಮಿ
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
ಯಾವ ಕಾವ್ಯ ನದಿಯು ಹರಿದು ಕವಿಗಳನ್ನು ಬದುಕಿಸಿಹುದೋ
ಯಾವ ಶಿಲ್ಪ ಕಲೆಯು ನಲಿದು ಇತಿಹಾಸ ಬೆಳಗಿಹುದೋ
ಯಾವ ನೃತ್ಯ ಕಲೆಯು ನಲಿದು ಕನ್ನಡದಾ ಹೆಸರ ನುಡಿದು
ಯಾವ ಕರ್ಮಯೋಗಿಗಳ ಧರ್ಮ ಸಿರಿಯಾ ಮರೆಸಿತೋ
ಅದುವೇ ನಮ್ಮ ಮಾತೃಭೂಮಿ ಇದೇ ಜನ್ಮಭೂಮಿ
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
ಯಾವ ಕಲೆಯ ಸೊಲ್ಲಿನಲ್ಲಿ ಧಾರ್ಮ ನಿಷ್ಠೆ ನರ್ತಿಸಿತೋ
ಯಾವ ಕೀರ್ತಿ ಧ್ವಜದ ಕೆಳಗೆ ಅರಸರೆಲ್ಲ ಅಮರರೋ
ಎಲ್ಲಿ ವೀರ ವನಿತೆಯರ ಶೌರ್ಯ ವಾಣಿ ಮೊರೆಯಿತೋ
ಯಾವ ನೀತಿ ಚರಿತೆಯಲಿ ಸ್ನೇಹಭಾವ ತುಂಬಿತೋ
ಅದುವೇ ನಮ್ಮ ಮಾತೃಭೂಮಿ ಇದೇ ನನ್ನ ಜನ್ಮ ಭೂಮಿ
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
ಯಾವ ತಂಪು ಗಾಳಿ ಬೀಸಿ ಯಾವ ಕರಿಯ ಮಣ್ಣದಲಿಸಿ
ಯಾವ ಪುಣ್ಯ ನದಿಯ ಹರಿಸಿ ನಾಡವರ ನಲಿಸಿತೋ
ಅದುವೇ ನಮ್ಮ ಮಾತೃಭೂಮಿ ಇದೇ ನನ್ನ ಜನ್ಮ ಭೂಮಿ
ಕನ್ನಡಿಗಾ ನೀ ಭಾಗ್ಯಶಾಲಿ ಕನ್ನಡ ಕುವರ ನೀ ಪುಣ್ಯಶಾಲಿ
--------------------------------------------------------------------------------------------------------------------------
ಕನ್ನಡ ಕುವರ (೧೯೯೪) - ಜೈ ಭಾರತ ಮಾತಾ
ಸಂಗೀತ : ವಾಮಾನರಾಜ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ವಿಷ್ಣು
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
ಈ ಕನ್ಯೆ ಕುವರಿಯ ನಿನ್ನಯ ಪದತಲ ರತುನ ಮಕುಟ ಆ ಹಿಮ ಶೈಲ
ಈ ಕನ್ಯೆ ಕುವರಿಯ ನಿನ್ನಯ ಪದತಲ ರತುನ ಮಕುಟ ಆ ಹಿಮ ಶೈಲ
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
ಈ ಕನ್ಯೆ ಕುವರಿಯ ನಿನ್ನಯ ಪದತಲ ರತುನ ಮಕುಟ ಆ ಹಿಮ ಶೈಲ
ವಿವಿಧ ಧರ್ಮಗಳ ದೇವಾಲಯಗಳು ನಿನ್ನ ಕೀರ್ತಿ ಪತಾಕೆಗಳು
ವಿವಿಧ ಧರ್ಮಗಳ ದೇವಾಲಯಗಳು ನಿನ್ನ ಕೀರ್ತಿ ಪತಾಕೆಗಳು
ಧರ್ಮ ಕ್ಷೇತ್ರವಿದು ಶೂರರ ತಾಣ ಪುಣ್ಯ ನದಿಗಳ ಸಂತಸ ನರ್ತನ
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
ಸಾರ್ವಭೌಮನ ಪೌರುಷ ಜೀವನ ಶಿಲ್ಪಿ ಕಲೆಗಳ ಚೆಂದದ ಭವನ
ಸಾರ್ವಭೌಮನ ಪೌರುಷ ಜೀವನ ಶಿಲ್ಪಿ ಕಲೆಗಳ ಚೆಂದದ ಭವನ
ಸಸ್ಯ ಶ್ಯಾಮಲೆಯ ಸುಂದರ ಗಿರಿವಾಣ ನಿನ್ನ ತನುವಿನ ಸ್ವರ್ಣಾಭರಣ
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
ವಿಶ್ವ ಪ್ರಕಣ್ಣಿಗೆ ಕಂಡೆ ಮಹಾತ್ಮನ ಶಾಂತಿ ಮಂತ್ರಗಳ ಮಾರ್ಧನಿ ಚೇತನ
ವಿಶ್ವ ಪ್ರಕಣ್ಣಿಗೆ ಕಂಡೆ ಮಹಾತ್ಮನ ಶಾಂತಿ ಮಂತ್ರಗಳ ಮಾರ್ಧನಿ ಚೇತನ
ಭಾರತ ಚರಿತೆಯ ಭವ್ಯತೆ ಮೆರೆಸುವ ಕನ್ನಡ ಮಗಳ ಶಕ್ತಿಯ ಬೆಳೆಸುವ
ಜಾತಿಭೇಧಗಳ ದೂರಕೆ ಅಟ್ಟುವ ಭಾರತ ಹಿರಿಮೆ ಲೋಕಕೆ ತೋರುವ
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
ಈ ಕನ್ಯೆ ಕುವರಿಯ ನಿನ್ನಯ ಪದತಲ ರತುನ ಮಕುಟ ಆ ಹಿಮ ಶೈಲ
ಜೈ ಭಾರತ ಮಾತೆ ವಿಶ್ವ ಪೂಜಿತೆ ಪರಮ ಪಾವನ ನಿನ್ನಯ ಚರಿತೆ
-------------------------------------------------------------------------------------------------------------------------
ಕನ್ನಡ ಕುವರ (೧೯೯೪) - ಹಂಪೆಯ ಕಲ್ಲಿನ
ಸಂಗೀತ : ವಾಮಾನರಾಜ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಬಿ.ಆರ್.ಛಾಯ
ಹಂಪೆಯ ಕಲ್ಲಿನ ವಿಗ್ರಹ ಒಂದು ಕನ್ನಡ ಚರಿತೆಯ ಹೇಳುತಿದೆ
ಗತವೈಭವದ ಸುಂದರ ದಿನಗಳ ನೆನಪಿಸಿ ನೆನಪಿಸಿ ಹೇಳುತಿದೆ
ಕನ್ನಡ ನಾಡಿನ ಚಿನ್ನದ ಮಣ್ಣಿನ ಫಲ ಸಂಪತ್ತಿನ ಚರಿತೆ ಇದು
ಉನ್ನತ ಭಾವನೆ ಹೊಂದಿದ ವೀರರ ಗುಣ ಸಂಪನ್ನರ ಚರಿತೆ ಇದು
ಹಂಪೆಯ ಕಲ್ಲಿನ ವಿಗ್ರಹ ಒಂದು ಕನ್ನಡ ಚರಿತೆಯ ಹೇಳುತಿದೆ
ಗತವೈಭವದ ಸುಂದರ ದಿನಗಳ ನೆನಪಿಸಿ ನೆನಪಿಸಿ ಹೇಳುತಿದೆ
ವಸಂತ ಮಾಸದ ಸಂಭ್ರಮ ಆ ದಿನ ಶುಭದ ನವೋದಯ ಆಯಿತು
ಕನ್ನಡ ಕವಿಗಳ ಕಲಿಗಳ ಸಂತಸ ಹೃದಯದ ತುಂಬಿ ನಿಂತಿತ್ತು
ಕನ್ನಡ ಕವಿಗಳ ಕಲಿಗಳ ಸಂತಸ ಹೃದಯದ ತುಂಬಿ ನಿಂತಿತ್ತು
ಮಂಜುಳ ರಾಗದೆ ನದಿಗಳು ಹಾಡುತ್ತ ನರ್ತನ ಮಾಡುತ ಸಾಗಿತ್ತು
ಅಂಬರ ಚುಮಿಸೋ ಗಿರಿಗಳು ಹಸುರಲಿ ಹೂವಿನ ಛತ್ರಿಯ ಹಿಡಿದಿತ್ತು
ದೇಗುಲ ಗೋಪುರ ಘಂಟೆಗಳಲಿ ಕನ್ನಡ ಕನ್ನಡ ಮೊಳಗಿತ್ತು
ಕನ್ನಡ ಹೆಂಗಳ ಸಂತಸ ಚಿಮ್ಮುತ ನಭವನು ಹರಡಿ ನಲಿದತ್ತು
ಹೊನ್ನಿನ ನಾಡಿನ ಪ್ರೀತಿಯ ಜನತೆಯ ಹೃದಯವೇ ಕನ್ನಡ ಆಗಿತ್ತು
ಇಂಪಿನ ಕಂಪಿನ ಪೆಂಪಿನ ಸೊಂಪಿನ ರಮ್ಯದ ದಿನಗಳ ಚರಿತೆ ಇದು
ಹಂಪೆಯ ಕಲ್ಲಿನ ವಿಗ್ರಹ ಒಂದು ಕನ್ನಡ ಚರಿತೆಯ ಹೇಳುತಿದೆ
ಗತವೈಭವದ ಸುಂದರ ದಿನಗಳ ನೆನಪಿಸಿ ನೆನಪಿಸಿ ಹೇಳುತಿದೆ
ಕನ್ನಡ ನಾಡಿನ ಚಿನ್ನದ ಮಣ್ಣಿನ ಫಲ ಸಂಪತ್ತಿನ ಚರಿತೆ ಇದು
ಉನ್ನತ ಭಾವನೆ ಹೊಂದಿದ ವೀರರ ಗುಣ ಸಂಪನ್ನರ ಚರಿತೆ ಇದು
ಹಂಪೆಯ ಕಲ್ಲಿನ ವಿಗ್ರಹ ಒಂದು ಕನ್ನಡ ಚರಿತೆಯ ಹೇಳುತಿದೆ
--------------------------------------------------------------------------------------------------------------------------
ಕನ್ನಡ ಕುವರ (೧೯೯೪) - ಚೆಂದದ ಮನೆ ಇದು ನೋಡು
ಸಂಗೀತ : ವಾಮಾನರಾಜ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಜಿ.ವಿ.ಅತ್ರಿ, ಮಂಜುಳಾ ಗುರುರಾಜ
ಹೆಣ್ಣು : ಚಂದದ ಮನೆ ಇದು ನೋಡು ನೀನೊಂದು ಸವಿರಾಗ ಹಾಡು
ಚಂದದ ಮನೆ ಇದು ನೋಡು ನೀನೊಂದು ಸವಿರಾಗ ಹಾಡು
ಸಿರಿಗಂಧ ಚೆಲ್ಲಿದ ಮಲ್ಲಿಗೆಯ ಬಯಲಲ್ಲಿ
ಕಣ್ತುಂಬಿ ನೀ ಬಂದೆ ದೊರೆಯಾಗೆ ನಿಂದೆ
ಸಿರಿಗಂಧ ಚೆಲ್ಲಿದ ಮಲ್ಲಿಗೆಯ ಬಯಲಲ್ಲಿ
ಕಣ್ತುಂಬಿ ನೀ ಬಂದೆ ದೊರೆಯಾಗೆ ನಿಂದೆ
ಗಂಡು : ಚಂದದ ಮನೆ ಇದು ನೋಡು ಕರುನಾಡ ಬಣ್ಣಿಸಿ ಹಾಡು
ಚಂದದ ಮನೆ ಇದು ನೋಡು ಕರುನಾಡ ಬಣ್ಣಿಸಿ ಹಾಡು
ಚೆಲುವೆಂಬ ಗುಡಿಯಲ್ಲಿ ಒಲವೆಂಬ ಮನದಲ್ಲಿ
ನೆಲೆಯಾಗಿ ನೀ ನಿಂತೇ ಪ್ರಿಯಳಾಗಿ ಬಂದೆ
ಹೆಣ್ಣು : ಚಂದದ ಮನೆ ನೋಡು...
ಚಂದದ ಮನೆ ನೋಡು
ಗಂಡು : ನನ ರಾಣಿ ನೀನಾದೆ ಕೆಳದಿಯ ಸಿರಿಯಾದೆ
ಚಂದದ ಮನೆ ನೋಡು
ಗಂಡು : ನನ ರಾಣಿ ನೀನಾದೆ ಕೆಳದಿಯ ಸಿರಿಯಾದೆ
ಹೆಣ್ಣು : ನಿನ್ನಂಥ ಪ್ರಭುವನ್ನು ನಾನೆಂದು ಮರೆಯೆನು
ಗಂಡು : ಚಂದದ ಮನೆ ಇದು ನೋಡು...
ಚಂದದ ಮನೆ ಇದು ನೋಡು
ಹೆಣ್ಣು : ಇಕ್ಕೇರಿ ಪ್ರಭುವಾದೆ ನನ ಬಾಳ ದೊರೆಯಾದೆ
ಗಂಡು : ನಿನ್ನಂಥ ಗುಣವಂತ ನನ ಬಾಳ ನಿಧಿಯಂತೆ
ಹೆಣ್ಣು : ಚಂದದ ಮನೆ ಇದು ನೋಡು ನೀನೊಂದು ಸವಿರಾಗ ಹಾಡು
ಚಂದದ ಮನೆ ಇದು ನೋಡು ನೀನೊಂದು ಸವಿರಾಗ ಹಾಡು
ಗಂಡು : ಚಂದದ ಮನೆ ಇದು ನೋಡು...
--------------------------------------------------------------------------------------------------------------------
No comments:
Post a Comment