996. ನನ್ನ ಪ್ರೀತಿಯ ಹುಡುಗೀ (೨೦೦೦)

ನನ್ನ ಪ್ರೀತಿಯ ಹುಡುಗಿ ಚಲನಚಿತ್ರದ ಹಾಡುಗಳು 
  1. ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ 
  2. ಅದೇಕೆ ಕೋತಿ ಮೋತಿ 
  3. ಬಾ ಬಾರೋ 
  4. ಕಾರ್ ಕಾರ್ ಕಾರ್ ಎಲ್ನೋಡಿ ಕಾರ್ 
  5. ಯಾರೋ ನೀನು 
  6. ನನ್ನ ಪ್ರೀತಿಯ ಹುಡುಗಿ 
ನನ್ನ ಪ್ರೀತಿಯ ಹುಡುಗೀ (೨೦೦೧) - ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ 
ಸಂಗೀತ : ಮನೋಮೂರ್ತಿ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ  ಗಾಯನ: ರಾಮಪ್ರಸಾದ, ನಂದಿತಾ  

ಗಂಡು : ಮೂಡಲ್ ಕುಣಿಗಲ್ ಕೆರೆ...   ನೋಡೋರಿಗೊಂದೈಭೋಗ ಅಯ್ಯ!!!!!
            ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
            ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
            ಮೂಡಿ ಬರ್ತಾನೆ ಚಂದಿರಾಮ ತಾನಂದನೋ
            ಮೂಡಿ ಬರ್ತಾನೆ ಚಂದಿರಾಮ
ಹೆಣ್ಣು : ಜಯತು ಜಯತು ಕನ್ನಡಮ್ಮನಿಗೆ ಸಲಹಿ ಪೊರೆದ ತಾಯಿಗೆ
          ಗಾನ ನಾಟ್ಯ ಸಂಗಮ ಸ ನೀ ಪ ಸ ನೀ ಪ ಗಸ 
          ಸನೀ ಪ ಗಪ ಗಸ ವೇಣು ನಾಟ್ಯ ಸಂಭ್ರಮ  
ಗಂಡು : ಹೇ!! ಹೇ ಹೇ ಹೇ!!
ಹೆಣ್ಣು : ಹೇ!! ಹೇ ಹೇ ಹೇ!!

ಹೆಣ್ಣು : ಅತ್ತಿತ್ತ ತಿರುಗಾಡಿ ಇತ್ಯಾಕೀ ನೀ ಬಂದೆ
          ಮಾಗನೂರ ಮಲ್ಲಿಗೆ ಸಾತನೂರ ಸಂಪಿಗೆ
          ಬಿಟ್ಯಾಕೆ ನೀ ಬಂದೆ ದೊರೆ ಮಗನೆ
 ಗಂಡು : ಮೂಗುತಿ ಮುಂಭಾರ ಹಣೆಗಂಟು ಹಿಂಭಾರ
           ನಿಂಬೆ ಹಣ್ಣಿನಂಗೆ ತುಂಬಿದ ಮೈಯೋಳೆ 
           ಹಂಬಲ ಬಿತ್ತು ನಿನ್ನ ಮೇಲೆ!!!!!
ಗಂಡು : ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
           ಆಹ್  ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
           ಮೂಡಿ ಬರ್ತಾನೆ ಚಂದಿರಾಮ  ತಾನಂದನೋ 
          ಮೂಡಿ ಬರ್ತಾನೆ ಚಂದಿರಾಮ

 ಹೆಣ್ಣು : ಪಡುವಾಣ ದೇಶಕ್ಕೆ ಉಡುಗೊರೆ ಏನ್ ತಂದೆ
          ಅಡ್ಡ ಅಕ್ಕಿ ತಂದ್ಯಾ ಮಂಡ್ಯ ಬೆಣ್ಣೆ ತಂದ್ಯಾ
        ನಡುವಿಗೆ ಒಡ್ಯಾನ್ ನೀ ತಂದ್ಯಾ
ಗಂಡು : ವಾಲೇ ಕೋಟ್ಟೆನು ಬಾರೆ ಬುಗುಡೆ ಇಟ್ಟೇನು ಬಾರೆ
            ನಾಗಮಂಗಲದ  ಗಿಲಿಕಿ ಮಂಚನ ತಂದೆ
           ಪ್ರೀತಿಯ ಜೇನಿನ ಕೊಡ ತಂದೆ
ಹೆಣ್ಣು : ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
          ಅಹ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
         ಮೂಡಿ ಬಂದೆನು ಚಂದಿರಾಮ ತಾನಂದನೋ 
        ಮೂಡಿ ಬಂದೆನು ಚಂದಿರಾಮ
ಗಂಡು : ಜಯತು ಜಯತು ಕನ್ನಡಮ್ಮನಿಗೆ ಸಲಹಿ ಪೊರೆದ ತಾಯಿಗೆ
           ಗಾನ ನಾಟ್ಯ ಸಂಗಮ ಸ ನೀ ಪ ಸ ನೀ ಪ ಗಸ
          ಸ ನೀ ಪ ಗಪ ಗಸ ವೇಣು ನಾಟ್ಯ ಸಂಭ್ರಮ
---------------------------------------------------------------------------------------------------------

ನನ್ನ ಪ್ರೀತಿಯ ಹುಡುಗೀ (೨೦೦೧) - ಅದೇಕೆ ಕೋತಿ ಮೋತಿ ಮಾಡುವೆ 
ಸಂಗೀತ : ಮನೋಮೂರ್ತಿ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ  ಗಾಯನ: ರಾಜೇಶ, ಸಂಗೀತ ಕಟ್ಟಿ 

ಹೆಣ್ಣು : ಅದೇಕೆ ಕೋತಿ ಮೂತಿ ಮಾಡುವೆ ಕೋಮಲಾಂಗನೇ 
          ಹೆತ್ತ ತಾಯಿ ಮೇಲೆ ಕೋಪವೇ ಜಾಂಬುವಂತನೇ  
ಗಂಡು : ಹೌದಮ್ಮ ನಾನು ಕೋತಿನೇ ಸರೀನೇ 
            ತಾಯಿ ಕೋತಿ ಆದರೆ ಮಗನು ಕೋತಿನೇ .... 
ಹೆಣ್ಣು : ಅದೇಕೆ ಕೋತಿ ಮೂತಿ ಮಾಡುವೆ ಕೋಮಲಾಂಗನೇ 

ಹೆಣ್ಣು : ಲಡಾಯಿ ಬೇಡ ಕಣಯ್ಯ ಬಿಡೋಣ ಗಾಳಿಪಟವನ್ನ.. 
ಗಂಡು : ಇದೇನು ಬಾಲಗೊಂಚಿನಾ ಬಿಸಾಡು ಗಾಳಿ ಬೀಸಿಲ್ಲ ... 
ಹೆಣ್ಣು : ಉಯ್ಯಾಲೆ ಆಟವಾಡೋಣ ನಿಧಾನ ದೂಕು ನನ್ನನ್ನ... 
ಗಂಡು : ಇದೂನು ಬೇಡ ಕಾಣಮ್ಮ ಅದ್ಯಾಕೋ ಬೋರು ಹೋಗಮ್ಮಾ ... 
ಹೆಣ್ಣು : ತಟಾಕ ದೋಣಿ ಏರೋಣ ವಿಶಾಲ ನೀರ ಹಾಯಿ ಸೀಳಿ ಸೀಳಿ ದಾಟಿ ಹೋಗೋಣ 
          ಅದೇಕೆ ಕೋತಿ ಮೂತಿ ಮಾಡುವೆ ಕೋಮಲಾಂಗನೇ 
          ಹೆತ್ತ ತಾಯಿ ಮೇಲೆ ಕೋಪವೇ ಜಾಂಬುವಂತನೇ  
  
ಹೆಣ್ಣು : ಲಗೋರಿ ಆಟ ಆಡೋಣ ಅಪಾರ ಮೋಜು ಮಾಡೋಣ 
ಗಂಡು : ಇದ್ಯಾವ ಸೀಮೆ ಆಟಾನಮ್ಮಾ ಚಿನ್ನಾರಿ ಚಿಟ್ಟುಗಳಿಗಮ್ಮ 
ಹೆಣ್ಣು : ದಿನಾಲು ಕಾದು ನೋಡೋಣ ನಡುವೆ ಜೇನು ಬಿಚ್ಚೋಣ 
ಗಂಡು : ಇದರಲ್ಲಿ ಕಾಣೆ ಸಂತೋಷ ಹತ್ತೋಕೆ ನಿಂಗು ಆಯಾಸ 
ಹೆಣ್ಣು : ಇನಿತು ಜಾಣ ನಿನ್ನಾಸೆ ಸೈಕಲ್ ಮೇಲೆ ಏರಿ ನಾವು ಬಾಗಿ ಬೀಗಿ ಹೋಗೋಣ 
ಗಂಡು : ಹೇ... ಇದೀಗ ಕೋತಿ ಎಲ್ಲ ಒಪ್ಪಿಗೆ ಮುದ್ದು ಅಮ್ಮನೇ... 
ಹೆಣ್ಣು : ಆಹಹಾ.. ಇದೆಲ್ಲ ಪೂಸಿ ಬೇಡ ಕಳ್ಳನೇ ಸೈಕಲ್ ಚೋರನೇ.. 
ಗಂಡು : ಅಬ್ಬಬ್ಬಾ ನೋಡು ಸಾರೋಟು ಈದೀಗ ನೀನೇ ರಾಜಮಾತೆಯು ನಾನೇ ಯುವರಾಜ 
ಹೆಣ್ಣು : ಡಬ್ಬಲ್ ರೈಡು ಹೋಗೋಣ ಈದೀಗ ನೀನೇ ಕೃಷ್ಣನೂ ನಾನೇ ಗಾಂಢಿವಿ 
ಇಬ್ಬರು : ಇದರ ಲೋಕದಲ್ಲಿ ಈ ಥರ ಅಮ್ಮ ಮಕ್ಕಳು 
---------------------------------------------------------------------------------------------------------

ನನ್ನ ಪ್ರೀತಿಯ ಹುಡುಗೀ (೨೦೦೧) - ಬಾ ಬಾರೋ ಬಾಳ ನೇಸರ 
ಸಂಗೀತ : ಮನೋಮೂರ್ತಿ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ  ಗಾಯನ: ರಾಜೇಶ,  ಅನುರಾಧ ಪಡವಾಲ  

ಹೆಣ್ಣು : ಬಾ ಬಾರೋ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ 
           ನಾ ಗೆಳತೀ ಕಾದಿಹೆ ನೋಂದಿಹೆ ಬೆಂದಿಹೆ ತಂಪಿನ ಪ್ರೀತಿಯ ನೀ ತಾರೋ 
ಗಂಡು : ಬಾ ಬಾರೇ ಜೀವ ತಾವರೇ ಜೀವ ತಾವರೇ ಬಾರೆನ್ನ ಭಾವದಾಸರೇ 
            ನೀ ಅರಳದೆ ನಾನಿರೇ ನೀನಿರೇ ನಾನಿರುವೆ ನಿಜ ಪ್ರೀತಿಸುವ ಬಾರೇ 

ಹೆಣ್ಣು : ಭೂತಾಯಿ ರಂಗಮಂಚಕೆ ನಾಟ್ಯಾ ನೂರಾಗ ಸಂಚಿಕೆ 
ಗಂಡು : ಆಕಾಶ ದೀಪ ಮಾಲಿಕೆ ನಾಚಿತು ಕಣ್ಣ ನೋಟಕೆ 
ಹೆಣ್ಣು : ಏಕಾಂಗಿ ಜೀವವಾಗಿದೆ ಸಾನಿಧ್ಯಕ್ಕಾಗಿ ಬೇಡಿದೆ 
ಗಂಡು : ಯಾವ್ಯಾವ ನೋವು ಹಾಡುವ ಯಾವಾವ ಪ್ರೀತಿ ಬೇಡುವ 
            ಆ ಕ್ಷಣದಲ್ಲಿ ಓಡುತ ಹಾಡುತ ಬೇಸರ ನೀಗುತ ಪ್ರೇಮಿಸುವ ಬಾರೇ ... 
ಹೆಣ್ಣು : ಬಾ ಬಾರೋ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ 
           ನಾ ಗೆಳತೀ ಕಾದಿಹೆ ನೋಂದಿಹೆ ಬೆಂದಿಹೆ ತಂಪಿನ ಪ್ರೀತಿಯ ನೀ ತಾರೋ 
ಗಂಡು : ಬಾ ಬಾರೇ ಜೀವ ತಾವರೇ ಜೀವ ತಾವರೇ ಬಾರೆನ್ನ ಭಾವದಾಸರೇ 
            ನೀ ಅರಳದೆ ನಾನಿರೇ ನೀನಿರೇ ನಾನಿರುವೆ ನಿಜ ಪ್ರೀತಿಸುವ ಬಾರೇ 

ಹೆಣ್ಣು : ಹೋಗೋಣ ಪ್ರಣಯ ಜಾತ್ರೆಗೆ ಸೇರೋಣ ಪ್ರೀತಿ ತೇರಿಗೆ 
ಗಂಡು : ಹಾರೋಣ ಮೇಘದಾಚೆಗೆ ಜಾರೋಣ ಬಾನಿನಂಚಿಗೆ 
ಹೆಣ್ಣು : ಈಜೋಣ ಪ್ರೇಮ ತೀರದಿ ಹಾಡೋಣ ಏಕ ರಾಗದಿ 
ಗಂಡು : ಯಾವ್ಯಾವ ನೋವು ಹಾಡುವೆ ಯಾವಾಗ ಪ್ರೀತಿ ಬೇಡುವೆ 
            ಆ ಕ್ಷಣದಲ್ಲಿ ಓಡುತ ಹಾರುತ ಬೇಸರ ನೀಗುತ ಪ್ರೇಮಿಸುವೇ ಬಾರೇ.... 
ಹೆಣ್ಣು : ಬಾ ಬಾರೋ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ 
           ನಾ ಗೆಳತೀ ಕಾದಿಹೆ ನೋಂದಿಹೆ ಬೆಂದಿಹೆ ತಂಪಿನ ಪ್ರೀತಿಯ ನೀ ತಾರೋ 
ಗಂಡು : ಬಾ ಬಾರೇ ಜೀವ ತಾವರೇ ಜೀವ ತಾವರೇ ಬಾರೆನ್ನ ಭಾವದಾಸರೇ 
            ನೀ ಅರಳದೆ ನಾನಿರೇ ನೀನಿರೇ ನಾನಿರುವೆ ನಿಜ ಪ್ರೀತಿಸುವ ಬಾರೇ 
--------------------------------------------------------------------------------------------------------

ನನ್ನ ಪ್ರೀತಿಯ ಹುಡುಗೀ (೨೦೦೧) - ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಸಂಗೀತ : ಮನೋಮೂರ್ತಿ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ ಗಾಯನ: ಬಿ.ಜಯಶ್ರೀ, ಪೀಟರ್ಸ್

ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಸೊಂಟಕ್ ಬೆಲ್ಟು ಕಟ್ಟಿಕೊಂಡು ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ…
ನಮೂರಲ್ಲಿ ಹಂಗೇನಿಲ್ಲ ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
ಸಿಗ್ನಲ್ ನಲ್ಲೇ ಶೇವಿಂಗ್ ಮಾಡಿ ಟ್ರ್ಯಾಫಿಕ್ ಅಲ್ಲೇ ಮೇಕ್-ಅಪ್ ಮಾಡಿ
ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ ಹೊ…
ನಮ್ಮೂರಲ್ಲಿ ಹಂಗೇನಿಲ್ಲ ಬಸ್ಸಲ್ ಜಾಗ ಸಾಕಾಗಲ್ಲ
ಟಾಪಲ್ ಕೂತು ಬೀಡಿ ಸೇದ್ತಾರೆ ಹೇ…..
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್

ಕಾರು ಕಾರ್ಬಾರು, ಕಾರದೇ ದರ್ಬಾರು ರೋಡಿನ್ ತುಂಬಾ ಬರಿಯ ಕಾರ್ ಗಳೋ…..
ನಮ್ ರೋಡ್ ಕಥೆ ಗೊತ್ತಾ? 
ನಾಯಿ ಎಮ್ಮೆ ಹಂದಿ ಕೋಳಿ ಬಂಡೆ ಗುಂಡಿ ಹೊಂಡ ಬಾವಿ
ರಸ್ತೆ ಮಧ್ಯೆ ಎಲ್ಲಾ ಇದ್ರು ಹೊಡ್ಕೊಂಡ್ ಹೋಗ್ತಾರೆ
ಸೊಂಟಕ್ ಬೆಲ್ಟು ಕಟ್ಟಿಕೊಂಡು ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ…
ನಮೂರಲ್ಲಿ ಹಂಗೇನಿಲ್ಲ ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್

ಓಟ ಬರೀ ಓಟ, ಎಲ್ಲೂ ನಿಲ್ಲದಾಟ ಡಾಲರ್ ಗೆ ಸೆಣೆಸಾಟ ಕಾಣಿರೋ……….
ನಮ್ ದೇಶದಲ್ ಏನ್ ಗೊತ್ತಾ 
ಆಫೀಸ್ ನಲ್ಲೇ ಹತ್ತಿ ಕುರ್ಚಿ ಮದ್ಯಾನದ್ ಹೊತ್ತೇ ನಿದ್ಧೆ ಮಾಡಿ
ಹಬ್ಬ ಮದ್ವೆಗ್ ಸಾಲ ಮಾಡಿ ಹಾಯಾಗಿರ್ತಾರೆ
ಸೊಂಟಕ್ ಬೆಲ್ಟು ಕಟ್ಟಿಕೊಂಡು ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ…
ನಮೂರಲ್ಲಿ ಹಂಗೇನಿಲ್ಲ ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್
ಕಾರೆ ನೀ ತಾಯಿ, ಕಾರೆ ನೀ ತಂಧೆ ಕಾರೆ ಫಾರಿನ್ ಧೈವ ಕಾಣಿರೋ……
ಕಾರಿಗಿಂತ ಕಾಲು ಮುಖ್ಯ ಯಂತ್ರಕ್ಕಿಂತ ಮನುಷ್ಯ ಮುಖ್ಯ
ಎಂಬ ನೀತಿ ನಮ್ಮ ಊರಲ್ಲಿ ………
ಸೊಂಟಕ್ ಬೆಲ್ಟು ಕಟ್ಟಿಕೊಂಡು ಫ್ರೀ ವೇ ನಲ್ಲಿ ಹಾರಿಕೊಂಡು
ಎಕ್ಷಿಟ್ ನಲ್ಲಿ ಜಾರಿಕೊಳ್ತಾರೋ ಹೊ…
ನಮೂರಲ್ಲಿ ಹಂಗೇನಿಲ್ಲ ಟ್ರ್ಯಾಕ್ಟ್ರು ಲಾರಿ ಎತ್ತಿನ್ ಗಾಡಿ
ಏನೇ ಬರ್ಲಿ ಹತ್ಕಂಡ್ ಓಯ್ತಾರೆ ಹೇ..
ಸಿಗ್ನಲ್ ನಲ್ಲೇ ಶೇವಿಂಗ್ ಮಾಡಿ ಟ್ರ್ಯಾಫಿಕ್ ಅಲ್ಲೇ ಮೇಕ್-ಅಪ್ ಮಾಡಿ
ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ ಹೊ…
ನಮ್ಮೂರಲ್ಲಿ ಹಂಗೇನಿಲ್ಲ ಬಸ್ಸಲ್ ಜಾಗ ಸಾಕಾಗಲ್ಲ
ಟಾಪಲ್ ಕೂತು ಬೀಡಿ ಸೇದ್ತಾರೆ ಹೇ……
---------------------------------------------------------------------------------------------------------

ನನ್ನ ಪ್ರೀತಿಯ ಹುಡುಗೀ (೨೦೦೧) - ಯಾರೋ ನೀನು 
ಸಂಗೀತ : ಮನೋಮೂರ್ತಿ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ  ಗಾಯನ: ಹರಿಹರನ, ಅನುರಾಧ ಪಡವಾಲ  

ಹೆಣ್ಣು : ಯಾರೋ ನೀನು                   ಗಂಡು : ಯಾರೋ ನೀನು 
ಹೆಣ್ಣು : ಯಾರೋ ನೀನು                   ಗಂಡು : ಯಾರೋ ನೀನು 
ಹೆಣ್ಣು : ಗಿರಿಯು ನೀನು ನವಿಲು ನೀನು ಮೇಘ ನೀನು ಮಿಂಚು ನೀನು 
          ಮೇಘ ತಂದ ಮಳೆಯು ನೀನು 
ಗಂಡು : ಸ್ನೇಹ ನೀನು ಮೋಹ ನಾನು ಮೌನದಾಚೆ ಮಾಯೆ ನೀನು 
ಹೆಣ್ಣು : ಮಾಯೇ ನಾನು                   ಗಂಡು : ಮೌನದಾಚೆ ಮಾಯೆ ನೀನು 
ಹೆಣ್ಣು : ಸೂರ್ಯ ನೀನು ಭೂಮಿ ನಾನು 
          ಸೂರ್ಯ ನೀನು ಭೂಮಿ ನಾನು ಬರಿದು ನೋಡು ಬೆಳಗು ನಾನು    
ಗಂಡು : ಬೆಳಗು ನೀನು        
ಹೆಣ್ಣು : ಬೆಳಗು ಕರೆವ ತಾರೆ ನಾನು 
ಗಂಡು : ತಾರೆ ನೀನು... ದೇವಿ ನೀನು ಭಕ್ತ ನಾನು  
            ದೇವಿ ನೀನು ಭಕ್ತ ನಾನು... ಪೂಜೆ ನೀನು ಪುಣ್ಯ ನಾನು 
ಹೆಣ್ಣು : ಪುಣ್ಯ ನೀನು... 
ಗಂಡು : ಪೂಜೆ ತಂದಾ ಫಲವು ನೀನು 
ಹೆಣ್ಣು : ಫಲವು ನಾನು ನಾನು ನಾನು... ಕುಸುಮ ನಾನು ಕಂಪು ನೀನು 
          ಕುಸುಮ ನಾನು ಕಂಪು ನೀನು ಅಂದ ನಾನು ಗಂಧ ನೀನು 
          ಗಂಧಕ್ಕೆ ಪೃಥ್ವಿ ನಾನು 
ಗಂಡು : ಪೃಥ್ವಿ ನೀನು... ಪೃಥ್ವಿ ನೀನು...    
ಹೆಣ್ಣು : ಗಂಧ ನೀ... ಪೃಥ್ವಿ ನಾನು 
ಗಂಡು : ಶಬ್ದ ನಾನು ಅರ್ಥ ನೀನು... ಶಬ್ದ ನಾನು ಅರ್ಥ ನೀನು         
            ಭಿತ್ತಿ ನಾನು ಚಿತ್ರ ನೀನು 
ಹೆಣ್ಣು : ಚಿತ್ರ ನಾನು 
ಗಂಡು : ಚೈತ್ರಕ್ಕೊಂದು ಅರ್ಥ ನಾನು 
ಹೆಣ್ಣು : ಅರ್ಥ ನೀನು ನೀನು ನೀನು ತ್ರಿಪದಿ ನೀನು ಗಮಕ ನಾನು 
          ಸನಿಪ ನೀನು ಪಮಪ ನಾನು 
ಗಂಡು : ಗಮ ಪನಿ 
ಹೆಣ್ಣು : ಸಕಲ ದನಿ ಅರಸ ನೀನೇ 
ಗಂಡು : ಅರಸ ನಾನು ನಾನು ನಾನು ಆತ್ಮ ನೀನು ದೇಹ ನಾನು 
            ದೇಹ ನಾನು ಆತ್ಮ ನೀನು ದೇಹ ನಾನು ಜೀವ ನೀನು ಭಾವ ನಾನು 
            ಜೀವ ತಾವರೇ ಹೂವು ನೀನು 
ಗಂಡು : ರತಿಯು ನೀನು ಮದನ ಹೇ... ನಾನು 
            ರತಿಯು ನೀನು ಮದನ ಹೇ... ನಾನು ಹರೆಯ ನಾನು ವಿರಹಿ ನೀನು 
            ವಿರಹ ತಣಿಸೋ ರಸಿಕ ನೀನು 
            ವಿರಹ ತಣಿಸೋ ರಸಿಕ ನೀನು 
ಹೆಣ್ಣು : ಮಳೆಯೂ ನೀನು ಇಳೆಯು ನಾನು  ಭೂಮಿಯು ಕಾದು ಬೇಯುವಾಗ 
          ಇಳೆಯ ತಣಿಸೋ ಗೆಳೆಯ ನೀನು 
          ಇಳೆಯ ತಣಿಸೋ ಗೆಳೆಯ ನೀನು 
--------------------------------------------------------------------------------------------------------

ನನ್ನ ಪ್ರೀತಿಯ ಹುಡುಗೀ (೨೦೦೧) - ನನ್ನ ಪ್ರೀತಿಯ ಹುಡುಗಿ
ಸಂಗೀತ : ಮನೋಮೂರ್ತಿ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ ಗಾಯನ: ಹರಿಹರನ, ಅನುರಾಧ ಪಡವಾಲ

ಗಂಡು  : ಎಲ್ಲಿರುವೇ ... ಹೇಗಿರುವೇ ...            ಹೆಣ್ಣು : ಎಲ್ಲಿರುವೇ ... ಹೇಗಿರುವೇ .. 
ಗಂಡು  : ಎಲ್ಲಿರುವೇ ... ಹೇಗಿರುವೇ ...            ಹೆಣ್ಣು : ಎಲ್ಲಿರುವೇ ... ಹೇಗಿರುವೇ .. 
ಗಂಡು : ನನ್ನ ಪ್ರೀತಿಯ ಹುಡುಗಿ ಎಲ್ಲಿರುವೆ ನೀ ಹೇಗಿರುವೇ 
            ನನ್ನ ಪ್ರೀತಿಯ ಹುಡುಗಿ ನೀನಿರದೇ ನಾ ನೊಂದಿರುವೆ 
ಹೆಣ್ಣು : ನನ್ನ ಪ್ರೀತಿಯ ಹುಡುಗ  ಎಲ್ಲಿರುವೆ ನೀ ಹೇಗಿರುವೇ 
            ನನ್ನ ಪ್ರೀತಿಯ ಹುಡುಗ ನೀನಿರದೇ ನಾ ನೊಂದಿರುವೆ 

ಗಂಡು : ಸಾಗರದಾಚೆಯ ದ್ವೀಪದಲ್ಲಿ ಒಂಟಿಯಾಗಿ ನೀ ಕುಳಿತಿರುವೇ 
           ಪ್ರೀತಿಯ ನೆನಪಿನ ಧ್ಯಾನದಲಿ ಗಾಯಗೊಂಡು ನಾ ಬಳಲಿರುವೇ 
           ಎಲ್ಲಿರುವೇ ಹೇಗಿರುವೆ ಚಿಂತೆ ಬೇಡ ನಾ ಬರುವೇ ... 
ಹೆಣ್ಣು : ನನ್ನ ಪ್ರೀತಿಯ ಹುಡುಗ  ಎಲ್ಲಿರುವೆ ನೀ ಹೇಗಿರುವೇ 
ಗಂಡು : ನನ್ನ ಪ್ರೀತಿಯ ಹುಡುಗಿ ಎಲ್ಲಿರುವೆ ನೀ ಹೇಗಿರುವೇ 
   
ಹೆಣ್ಣು : ಪ್ರೀತಿಯ ಮಾರ್ಗವು ಬಲು ಕಠಿಣ ಕಲ್ಲು ಮುಳ್ಳಿನ ಮೇಲ್ ಪಯಣ 
          ಗುರಿಯು ಮುಟ್ಟಿದರು ಕೆಲವೇ ಜನ ನಡುವೆ ಸೋತವರು ಕೆಲವೇ ಜನ 
          ಈ ಕಥೆಗೆ ಕೊನೆ ಹೇಗೆ ಹೇಳು ಬಾರೋ ನಾ ಕಾದಿರುವೆ 
ಗಂಡು : ನನ್ನ ಪ್ರೀತಿಯ ಹುಡುಗಿ...  
ಹೆಣ್ಣು : ನನ್ನ ಪ್ರೀತಿಯ ಹುಡುಗ ..... 
---------------------------------------------------------------------------------------------------------

No comments:

Post a Comment