998. ವೀರ ಕನ್ನಡಿಗ (೨೦೦೩)

ವೀರ ಕನ್ನಡಿಗ ಚಲನಚಿತ್ರದ ಹಾಡುಗಳು 
  1. ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ 
  2. ನೈರೇ ನೈರೇ ನೈ ನೈರೇ 
  3. ಅಡ್ಡದಲ್ಲಿ ಕಿಂಗ್ ನಾನೂ 
  4. ಸೈ ಸೈ ಮೋನಾಲಿಸಾ 
  5. ಮಸ್ತು ಹುಡುಗಿಯೇ 
  6. ಸಿಕ್ಕೂ ಸಿಕ್ಕೂ ಸುಂದರೀ 
ವೀರ ಕನ್ನಡಿಗ (೨೦೦೩) - ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ 
ಸಂಗೀತ : ಚಕ್ರಿ  ಸಾಹಿತ್ಯ : ಹಂಸಲೇಖ ಗಾಯನ : ಶಂಕರಮಹಾದೇವನ 

ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನನ್ನದೆಂದವನೇ
ನಮ್ಮ ನಿದಿರೆ ಕದಿಯುತ್ತಿದ್ದರೆ ಸಹಿಸುವನು ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ ನೀನೇ ತಾನೇ ಬಾಹು ದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲಾ
ನಮಗಾಗಿ ಹುಟ್ಟಿದೆ ನೀನು ಕಾಪಾಡು ಕಾಮಧೇನು ಜ್ವಾಲಾಮುಖಿ ವೈರಿಗೆ
ಹೇ..ಧೀರ ಹೇ..ವೀರ ಎದುರಾರೋ ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ..ನಾಡು ಕರುನಾಡು ಎಲ್ಲಾ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನನ್ನದೆಂದವನೇ
ನಮ್ಮ ನಿದಿರೆ ಕದಿಯುತ್ತಿದ್ದರೆ ಸಹಿಸುವನು ನೀನಲ್ಲ

ಅಭಿಮಾನವೇ ನಿನ್ನ ಉಸಿರಾಟವೂ ಕರುಣೆ ದಯೆ ನಿನ್ನ ಸಂಸ್ಕಾರವೂ 
ನಿನ್ನ ಬೆನ್ನ ಹಿಂದೆ ಜನ  ಸಾಗರ ನೀನವರ ಎದೆಯಲ್ಲಿ ಅಜರಾಮರ 
ಚುಚ್ಚಿದ ಈ ಕತ್ತಿಗೆ ಒಡೆಯೆಂದು  ನಾವು ಎಂದು 
ನಮ್ಮ ಈ ನರ ನಾಡಿಗೆ ನೀನಾದೆ ಸ್ಫೂರ್ತಿ ಬಿಂದು 
ಸಿಂಹಕೆ ತಲೆ ಬಗ್ಗದು ಕದನಕೆ ಎದೆ ಜಗ್ಗದು
ನುಗ್ಗು..ನುಗ್ಗು ಮುನ್ನುಗ್ಗು .. ನೀ.. ನಡೆದುದೇ ದಾರೀ
ಹೇ... ಕನ್ನಡದ ಕಟ್ಟಾಳು ಸಿಡಿದೆದ್ದರೇ
ಕಲಿಗೂನೂ ಕೆಡಬಹುದು ಕಡು ನಿದ್ದಿರೇ
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನನ್ನದೆಂದವನೇ
ನಮ್ಮ ನಿದ್ದೆ ಕದಿಯುತ್ತಿದ್ದರೆ ಸಹಿಸುವನು ನೀನಲ್ಲ

ನಾವಿದ್ದ ಕಡೆಯಲ್ಲಿ ಜಗಳ ಇಲ್ಲ ಪರನಿಂದೆ ಪರಹಿಂಸೆ ಬೇಕಾಗಿಲ್ಲಾ
ದೌರ್ಜನ್ಯ ದರ್ಪಕ್ಕೆ ತುತ್ತಾದೆವು ನಿನ್ನಿಂದ ಕೈ ಹಿಡಿಯ ತುತ್ತಾದೆವು
ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ
ಮುಳುಗುವ ಜನ ದೋಣಿಗೆ ಹುಟ್ಟನ್ನು ಹುಡುಕಿ ತಂದೆ
ಕಣ್ಣಿನ ನಿರೊರಸಿದೆ ಬಾಳಿಗೆ ನಗು ತರಿಸಿದೇ
ಕಾಣದ ಈ ಊರಲಿ ಕನ್ನಡದ ಬಂಧುವಾದೆ
ಹೇ.. ನಾಡು ಕರುನಾಡು ಎಲ್ಲಾ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನನ್ನದೆಂದವನೇ
ನಮ್ಮ ನಿದ್ದೆ ಕದಿಯುತ್ತಿದ್ದರೆ ಸಹಿಸುವನು ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ ನೀನೇ ತಾನೇ ಬಾಹು ದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲಾ
ನಮಗಾಗಿ ಹುಟ್ಟಿದೆ ನೀನು ಕಾಪಾಡು ಕಾಮಧೇನು ಜ್ವಾಲಾಮುಖಿ ವೈರಿಗೆ
ಹೇ..ಧೀರ ಹೇ..ವೀರ ಎದುರಾರೋ ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ..ನಾಡು ಕರುನಾಡು ಎಲ್ಲಾ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನನ್ನದೆಂದವನೇ
ನಮ್ಮ ನಿದ್ದೆ ಕದಿಯುತ್ತಿದ್ದರೆ ಸಹಿಸುವನು ನೀನಲ್ಲ
--------------------------------------------------------------------------------------------------------------------------

ವೀರ ಕನ್ನಡಿಗ (೨೦೦೩) -  ನೈರೇ ನೈರೇ ನೈ ನೈರೇ 
ಸಂಗೀತ : ಚಕ್ರಿ, ಸಾಹಿತ್ಯ : ಭಂಗಿರಂಗ  ಗಾಯನ : ಪುನೀತರಾಜಕುಮಾರ 

ನೈರೇ ಬಾಬಾ...  ಹೇ....ಹೇ....ಹೇ....ಹೇ....ಹೇ....ಹೇ....
ನೈರೇ ನೈರೇ ನೈ ನೈರೇ ನೈರೇ ಬಾಬಾ  ನೈರೇ ನೈರೇ ನೈ ನೈರೇ ನೈರೇ ಬಾಬಾ  
ನಾನೇ ಇಲ್ಲಿ ದಿಲದಾರೂ ವಾಲಾ ನನ್ನ ಮಾತು ಮಿರ್ಚಿ ಮಸಾಲಾ 
ಉಕ್ಕಿನಂತೇ  ಘಟ್ಟಿ ಈ ನನ್ನ ಮನಸ್ಸೂ ನನ್ನ ತಂಟೇಗ್ ಬಂದ್ರೇ ಅವನಲ್ಲೇ ಉಡೀಸ್ಸೂ 
ಇಕ್ಕೂ ಇಕ್ಕೂ ಒಂದೇ ಕೀಕ್ಕೂ ಚಿಂದಿ ಉಡಾಯಿಸೂ 
ತಗೋ ತಗೋ ಹಿಗ್ಗಾಮುಗ್ಗಾ ಲಗ್ಗ ಲಗಾಯ್ಸು ಜುಟ್ಟು ಹಿಡಿದು ಬೆನ್ನ ಮೇಲೆ ಜಮಾ ಜಮಾಯ್ಸೂ 
ನೈರೇ ನೈರೇ ..... 
ನೈರೇ ನೈರೇ ನೈ ನೈರೇ ನೈರೇ ಬಾಬಾ  ನೈರೇ ನೈರೇ ನೈ ನೈರೇ ನೈರೇ ಬಾಬಾ  

ವೀರ ಕನ್ನಡಿಗ ನಾ ಎಂದೂ ನ್ಯಾಯಕ್ಕೇ ಹೋರಾಡುವೇ 
ವೈರೀ ಯಾರೇ ಬರಲೀ ಮೆಟ್ಟಿಸಿ ನಿಮ್ಮ ಕಾಪಾಡುವೇ 
ಸ್ನೇಹಿತರ ಪ್ರೀತಿಗೇ ನಾ ಪ್ರಾಣವನ್ನೇ ನೀಡುವೆ 
ಕೊಬ್ಬಿ ಬರೋ ಪುಂಡರ ಗುಂಡಿಗೇ ನಾ ಸೀಳುವೇ 
ಏಟಿಗೆ ಎದುರೇಟು... ಅವರಿಗೇ ರೀಪೀಟೂ 
ಜಿದ್ದಿಗೇ ಬಿದ್ದಾಗ ಸವಾಲಿಗೇ ಸವಾಲೂ 
ಕೆಣಕಿ ಕಾಡೋರು ಕಿರಿಕೂ ಮಾಡೋರೂ ಕಣ್ಣಿಗೇ ಕಂಡಾಗ ಮುರೀತೀನಿ ಕೈ ಕಾಲೂ .. 
ನೈರೇ ನೈರೇ ..... 
ನೈರೇ ನೈರೇ ನೈ ನೈರೇ ನೈರೇ ಬಾಬಾ  ನೈರೇ ನೈರೇ ನೈ ನೈರೇ ನೈರೇ ಬಾಬಾ  

ನೀವೂ ನನ್ನೋರಯ್ಯಾ... ಎಲ್ಲರೂ ಮುಂದೆ ಬರಬೇಕಯ್ಯಾ 
ಏನೇ ಎದುರಾದರೂ ಕುಗ್ಗದೇ ನಗುತಾ ಇರಬೇಕಯ್ಯಾ 
ಕಷ್ಟದಲ್ಲೂ ನಷ್ಟದಲ್ಲೂ ನಿಮ್ಮ ಜೊತೆ ನಿಲ್ಲುವೇ 
ದುಷ್ಟರನ್ನು ಭಷ್ಟರನ್ನೂ ಮಟ್ಟ ಹಾಕಿ ಗೆಲ್ಲುವೇ 
ಭಯವ ಬಿಟ್ಟಾಕೀ ಎಲ್ಲರು ಒಟ್ಟಾಗಿ 
ಗುರಿಯ ಸಾಧಿಸಲೂ ತೋರಬೇಕು ತಾಕತ್ತೂ 
ಕಷ್ಟ ಬಂದಾಗ ದುಃಖ ಆದಾಗ ಎದ್ದು ನಿಲ್ಲೋಕೆ ಇರಬೇಕಣ್ಣ ನಿಯತ್ತೂ 
ನೈರೇ ನೈರೇ ..... 
ನಾನೇ ಇಲ್ಲಿ ದಿಲದಾರೂ ವಾಲಾ ನನ್ನ ಮಾತು ಮಿರ್ಚಿ ಮಸಾಲಾ 
ಉಕ್ಕಿನಂತೇ  ಘಟ್ಟಿ ಈ ನನ್ನ ಮನಸ್ಸೂ ನನ್ನ ತಂಟೇಗ್ ಬಂದ್ರೇ ಅವನಲ್ಲೇ ಉಡೀಸ್ಸೂ 
ಇಕ್ಕೂ ಇಕ್ಕೂ ಒಂದೇ ಕೀಕ್ಕೂ ಚಿಂದಿ ಉಡಾಯಿಸೂ 
ತಗೋ ತಗೋ ಹಿಗ್ಗಾಮುಗ್ಗಾ ಲಗ್ಗ ಲಗಾಯ್ಸು ಜುಟ್ಟು ಹಿಡಿದು ಬೆನ್ನ ಮೇಲೆ ಜಮಾ ಜಮಾಯ್ಸೂ 
ನೈರೇ ನೈರೇ ..... 
ನೈರೇ ನೈರೇ ನೈ ನೈರೇ ನೈರೇ ಬಾಬಾ  ನೈರೇ ನೈರೇ ನೈ ನೈರೇ ನೈರೇ ಬಾಬಾ  
ನಾನೇ ಇಲ್ಲಿ ದಿಲದಾರೂ ವಾಲಾ ನನ್ನ ಮಾತು ಮಿರ್ಚಿ ಮಸಾಲಾ 
ಆಆಆಅ... ಓಓಓಓಓ ... ಆಆಆಅ... ಓಓಓಓಓ ... 
--------------------------------------------------------------------------------------------------------------------------

ವೀರ ಕನ್ನಡಿಗ (೨೦೦೩) - ಅಡ್ಡದಲ್ಲಿ ಕಿಂಗ್ ನಾನೂ
ಸಂಗೀತ : ಚಕ್ರಿ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಶಂಕರ ಮಹಾದೇವನ್, ಕೌಸಲ್ಯ

ಅಡ್ಡಾದಲ್ಲಿ ಕಿಂಗೂ ನಾನೇ ಟಪೋರಿ ನನ್ನ ಲವ್ವೂ ಬೇಕೇ ವಯ್ಯಾರೀ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ ಡವ್ವೂ ಮಾಡ್ದೆ ಲವ್ವೂ ಮಾಡ್ರೀ ಡೌಟ್ ಯಾಕ್ರೀ 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ಹೇ... ನನಗಾಗಿ ಹುಟ್ಟಿರುವ ಗಂಡು ನೀನೇ 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ನನಗಾಗಿ ಹುಟ್ಟಿರುವ ಗಂಡು ನೀನೇ 
ನೋಡು ನೋಡು ನೋಡು ನಾ... ಮಿಂಚಂತೇ ಮಿಂಚುವ ಸ್ಪೀಡೂ 
ಹೇ.. ನೋಡು ನೋಡು ನೋಡು ನಾ... ಮಿಂಚಂತೇ ಮಿಂಚುವ ಸ್ಪೀಡೂ 
ಅಡ್ಡಾದಲ್ಲಿ ಕಿಂಗೂ ನಾನೇ ಟಪೋರಿ ನನ್ನ ಲವ್ವೂ ಬೇಕೇ ವಯ್ಯಾರೀ ... 
ಹೇ... ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ ಡವ್ವೂ ಮಾಡ್ದೆ ಲವ್ವೂ ಮಾಡ್ರೀ ಡೌಟ್ ಯಾಕ್ರೀ 

ಅಣ್ಣಾವ್ರ ಪಿಚ್ಚರ್ ಇದೇ .. ಬಾಲ್ಕನಿಯ ಟಿಕೆಟ್ ಇದೇ  ಬಾರೇ .. ಬಾರೇ ಬಾರೇ  
ನಿನ್ನ ಜೊತೆ ಗಾಂಧಿ ಕ್ಲಾಸ್ ಆದ್ರೂನೂ ಓಕೆ ಕಣೋ ಹೀರೋ... ನನ್ನ ಹೀರೋ 
ಹೇ... ಗಿರಿಗಿಟ್ಲೆ ಹತ್ತಿಸುವೇ ನನ್ನ ಜೊತೆ ಬಂದ್ರೇ 
ಭೂಮಿಯನೇ ಸುತ್ತುವೇನೂ ನೀನೂ ತಬ್ಬಿಕೊಂಡ್ರೇ 
ಶ್ರೀರಾಮಪುರದಿಂದ ಜಾಗ ನಿಂಗೆ ಗಿಫ್ಟ್ ಆಗಿ ತರಲೇ ..  
ಹೋಗೋ ತರಬೇಡ ಜಾಗ ಮೊದಲು ತಿನ್ಸೋರಿಗೇ ತರಲೇ .. ತರಲೇ ... 
ನೋಡು ನೋಡು ನೋಡು ನೀ .. ಮಿಂಚಂತೇ ಮಿಂಚುವ ಸ್ಪೀಡೂ 
ಹ್ಹಾ... ನೋಡು ನೋಡು ನೋಡು ನಾ ನಿನ್ನಲೇ ಸೇರ್ತೀನಿ ನೋಡು ನೋಡು 
ಅಡ್ಡಾದಲ್ಲಿ ಕಿಂಗೂ ನಾನೇ ಟಪೋರಿ ನನ್ನ ಲವ್ವೂ ಬೇಕೇ ವಯ್ಯಾರೀ ... 
ಹೇ... ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ ಡವ್ವೂ ಮಾಡ್ದೆ ಲವ್ವೂ ಮಾಡ್ರೀ ಡೌಟ್ ಯಾಕ್ರೀ 

ಮಿಲ್ಟ್ರಿ ಹೋಟೇಲೂ ಮುದ್ದೆ ಸೇರುವ ತಿನ್ನೋ ಅಂತಾ ಒರಟ ಕಣೇ ನಾನೂ ... ಆಹ್ಹಾ.. ನಾನು 
ಟಚ್ಚಿನಿಂದ ಹುಚ್ಚಿಯಾದೇ ಮೆಚ್ಚಿ ಬಂದೇ ಪುರುಷ ಸಿಂಹ ನೀನೂ ... ಆಹ್ಹಾ ನೀನು 
ಅಣ್ಣಮ್ಮನ ಹೊರುವಾಗ ಟಪ್ಪಾಗುಂಚಿ ಆಡು ಡಾನ್ಸೂ ಮಾಡೋ ಟೈಮನಲ್ಲೂ ನಿನ್ನಮೇಲೇ ಮೂಡೂ 
ಬಾರೇ ನಮ್ಮೂರ ರಾಜ ನಾನು ಗಾಜನೂರ ತೇಜ 
ಬಾರೋ ಭಾಜಾಯ್ಸು ರಾಜ ನಾನು ಇನ್ನೂ ತಾಜಾ ತಾಜಾ 
ನೋಡು ನೋಡು ನೋಡು ನೀ .. ಮಿಂಚಂತೇ ಮಿಂಚುವ ಸ್ಪೀಡೂ 
ಅರೇ ರೇ ರೇ... ನೋಡು ನೋಡು ನೋಡು ನಾ ನಿನ್ನಲೇ ಸೇರ್ತೀನಿ ನೋಡು ನೋಡು 
ಅಡ್ಡಾದಲ್ಲಿ ಕಿಂಗೂ ನಾನೇ ಟಪೋರಿ ನನ್ನ ಲವ್ವೂ ಬೇಕೇ ವಯ್ಯಾರೀ ... 
ಹೇ... ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ ಡವ್ವೂ ಮಾಡ್ದೆ ಲವ್ವೂ ಮಾಡ್ರೀ ಡೌಟ್ ಯಾಕ್ರೀ 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ಹೇ... ನನಗಾಗಿ ಹುಟ್ಟಿರುವ ಗಂಡು ನೀನೇ 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ನನಗಾಗಿ ಹುಟ್ಟಿರುವ ಗಂಡು ನೀನೇ 
ನೋಡು ನೋಡು ನೋಡು ನಾ... ಮಿಂಚಂತೇ ಮಿಂಚುವ ಸ್ಪೀಡೂ 
ಹೇ ... ನೋಡು ನೋಡು ನೋಡು ನಾ... ಮಿಂಚಂತೇ ಮಿಂಚುವ ಸ್ಪೀಡೂ ಸ್ಪೀಡೂ 
ಅಡ್ಡಾದಲ್ಲಿ ಕಿಂಗೂ ನಾನೇ ಟಪೋರಿ ನನ್ನ ಲವ್ವೂ ಬೇಕೇ ವಯ್ಯಾರೀ ... 
ಹೇ... ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ ಡವ್ವೂ ಮಾಡ್ದೆ ಲವ್ವೂ ಮಾಡ್ರೀ ಡೌಟ್ ಯಾಕ್ರೀ 
--------------------------------------------------------------------------------------------------------------------------

ವೀರ ಕನ್ನಡಿಗ (೨೦೦೩) - ಸೈ ಸೈ ಮೋನಾಲಿಸಾ
ಸಂಗೀತ : ಚಕ್ರಿ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ರವಿವರ್ಮಾ, ಕೌಸಲ್ಯ

ಸೈ ಸೈ ಮೋನಾಲಿಸಾ ನೀ ಬ್ರಹ್ಮನ ಮಾಸ್ಟರ್ ಪೀಸ್...  
ಸೈ ಸೈ ಮೋನಾಲಿಸಾ ನೀ ಬ್ರಹ್ಮನ ಮಾಸ್ಟರ್ ಪೀಸ್...  
ಈ ಬೀಜೀಲಿ ಜೊತೆಗೇ ಸರಸ ಆಡೋಕೆ ಬಾರೇ ಹಂಸ.. 
ರಫ್ ಎಂಡ್ ಟಫೂ ವೀರ ರೋಮಿಯೋ ಲೂಕ್ಕಿನ ಶೂರ 
ದೂರ ಯಾಕೋ ಬಾರಾ ಕಳೆಯೋ ಪ್ರಾಯದ ಭಾರ 
ಹೇ.. ಅಬ್ಬಬ್ಬಾ ಬಂದ್ರೇ ನಾನೂ ತೊಂದ್ರೆ ಪಡುವೇ ನೀನೂ 
ಸೈ ಸೈ ಮೋನಾಲಿಸಾ ನೀ ಬ್ರಹ್ಮನ ಮಾಸ್ಟರ್ ಪೀಸ್...  
ಈ ಬೀಜೀಲಿ ಜೊತೆಗೇ ಸರಸ ಆಡೋಕೆ ಬಾರೇ ಹಂಸ.. 

ಪೋಕ್ರಿ ಹುಡ್ಗ ಭಾರೀ ಚುರುಕೂ ಬೆಡಗ ಮತ್ತನು ತರಿಸೋ ಮುತ್ತನು ತಂದಾ 
ಮೆಟ್ರೋ ಸರುಕು ನಿನ್ನ ಥಳಕು ಬಳುಕು ಕಣ್ಣೇ ಟೇಪು ಅಳೆಯುವೇ ಅಂದಾ  
ಕಾಮನ ರಂಗಿನ ಬಾಣ ಬಿಡು ಬಾರೋ ನನ್ನ ಜಾಣ ಬಾ ಬಾರೋ ನನ್ನರಸ.. 
ಬಿಡುವೇ ಬಿಡುವೇ ತಡಕೋ ನಿನ್ನ ಪ್ರಾಣ ಕೈಲೀ ಹಿಡಿಕೋ ನಾನಂತೂ ಪಾದರಸ 
ಮಾಡು ಬಾರೋ ಸಾಹಸವ ತೋರೋ ನಿನ್ನ ಪೌರುಷವ.... 
ಹೇ... ಅಬ್ಬಬ್ಬಾ ಬಂದ್ರೇ ನಾನೂ ತೊಂದ್ರೇ ಪಡುವೇ ನೀನೂ 
ಸೈ ಸೈ ಮೋನಾಲಿಸಾ ನೀ ಬ್ರಹ್ಮನ ಮಾಸ್ಟರ್ ಪೀಸ್...  
ಈ ಬೀಜೀಲಿ ಜೊತೆಗೇ ಸರಸ ಆಡೋಕೆ ಬಾರೇ ಹಂಸ.. 

ನುಗ್ಗೋ ಚಿರತೇ ಸೂಪರ್ ಸ್ಟಂಟಿಗೇ ಸೋತೆ ಇಡಲು ಬಾರೋ ಕಚುಗುಳಿ ನಂಗೇ 
ಬೆಳ್ಳಿ ಜಿಂಕೆ ನಂಗೆ ಇಲ್ಲಾ ಅಂಕೆ ಎಸ್ಕೇಪ್ ಆಗೂ ತುಂಬಾ ಸೇಫ್ಟಿ ನಿಂಗೇ 
ಗಂಧದ ಗುಡಿಯ ಗಂಡೇ ನಾ ನನ್ನಲೂ ನಿನ್ನೇ ಕಂಡೆ ಮಾಡಯ್ಯ ರೋಮ್ಯಾನ್ಸ್ 
ರಂಭೆ ಮೇನಕೇ ಫ್ರೆಂಡೇ ನಾ ನಿನ್ನ ಮೆಚ್ಚಿಕೊಂಡೇ ನಾ ಹೋಡದೇ  ಚಾನ್ಸೂ  
ಫೈರ್ ಇಂಜಿನೇ ನಾನಯ್ಯಾ ನನ್ನ ಫೈರೇ ಆರಸಯ್ಯಾ 
ಹೇ... ಅಬ್ಬಬ್ಬಾ ಬಂದ್ರೇ ನಾನೂ ತೊಂದರೇ ಪಡುವೇ ನೀನೂ 
ಸೈ ಸೈ ಮೋನಾಲಿಸಾ ನೀ ಬ್ರಹ್ಮನ ಮಾಸ್ಟರ್ ಪೀಸ್...  
ಈ ಬೀಜೀಲಿ ಜೊತೆಗೇ ಸರಸ ಆಡೋಕೆ ಬಾರೇ ಹಂಸ.. 
ರಫ್ ಎಂಡ್ ಟಫೂ ವೀರ ರೋಮಿಯೋ ಲೂಕ್ಕಿನ ಶೂರ 
ದೂರ ಯಾಕೋ ಬಾರಾ ಕಳೆಯೋ ಪ್ರಾಯದ ಭಾರ 
ಹೇ.. ಅಬ್ಬಬ್ಬಾ ಬಂದ್ರೇ ನಾನೂ ತೊಂದ್ರೆ ಪಡುವೇ ನೀನೂ 
ಸೈ ಸೈ ಮೋನಾಲಿಸಾ ನೀ ಬ್ರಹ್ಮನ ಮಾಸ್ಟರ್ ಪೀಸ್...  
ಈ ಬೀಜೀಲಿ ಜೊತೆಗೇ ಸರಸ ಆಡೋಕೆ ಬಾರೇ ಹಂಸ.. 
--------------------------------------------------------------------------------------------------------------------------

ವೀರ ಕನ್ನಡಿಗ (೨೦೦೩) - ಮಸ್ತು ಹುಡುಗಿಯೇ
ಸಂಗೀತ : ಚಕ್ರಿ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಚಕ್ರಿ, ಕೌಸಲ್ಯ

ಮಸ್ತು ಹುಡುಗಿಯೇ ಯಾಕೇ ಸುಸ್ತೂ ಮಾಡತೀಯೇ 
ಇಷ್ಟು ಕೊಟ್ಟರೇ ನಂಗೇ ಎಷ್ಟು ಕೊಡುತಿಯೇ 
ಕಣ್ಣು ಹೋಡೀತೀಯಾ ಕೋಟಿ ಕನಸು ಕೊಡುತೀಯ
ಕೈಯ್ಯ ಹಿಡಿತೀಯ ಮನಸಲಿ ಕಾಲು ಎಳಿತೀಯ 
ಆಹ್ .. ಸ್ಯೆ..  ಸ್ಯೆ.. ಅರವತ್ತೆಂಟು ಸ್ಯೆ ಸ್ಯೆ ಸ್ಯೆ ಬಿಡಿಸೋ ಗಂಟೂ 
ವಯಸ್ಸೂ ಸೂಸುಮ್ಮನೇ ಉಂಟು ರತ್ತೋ ರತ್ತೋ ರಮಿಸೋ ಹೋತ್ತು 

ಬೆಸ್ಟು ಹುಡುಗನೇ ನಿನ್ನ ಇಷ್ಟ ನನ್ನದೂ ಆ ಎಲ್ಲಿ ಕರೆದರೂ ಬರುವೇ ಮಾತು ತಪ್ಪದೂ 
ನಡಿಗೆ ನೋಡಿದರೇ ನಾಟ್ಯ ಮಯೂರಿ ಕರೆಯೇ ಒಂದ್ಸಾರೀ 
ಕನ್ಯಾಕುಮಾರೀ ಜಾರಿಬಿದ್ದೇ ಏಮಾರೀ 
ವ್ಹಾರೇ ವ್ಹಾರೇ ನನ್ನ ಕನ್ನಡ ಕುವರ ಬಿಚ್ಚಿ ಬಿಡುತಾನೇ ಪ್ರೀತಿಯ ಪ್ರವರ 
ಹೋಗೋ ಪ್ರೇಮಪೂಜಾರೀ 
ಓಯೇ ಮಾಡುವೇ ಮದನಾರಿ ಬಾರೇ ಮದುವೆ ಆಗೋಣ ಒಂದ್ಸಾರೀ 
ಮದುವೆ ಗಿದುವೆ ಬಾರಿ ಬೋರು ಬಾರೋ ಸುತ್ತೋಣ ಬೆಂಗಳೂರೂ 
ಜಕ್ಕಣ್ಣಕ್ಕ ಜಕ್ಕಣ್ಣಕ್ಕ ಜಾಲಿ ಮಾಡುವಾ ಕೇಳಿದಷ್ಟೂ ಕೊಡುತೀನೀ ಖಾಲಿ ಮಾಡುವಾ 
ಬಂಡೆಗಿಂತ ಘಟ್ಟಿ ಕಣೋ ನಿನ್ನ ಗುಂಡಿಗೇ ಗುಂಡು ಹೊಡೆದಂಗೇ ಆಡ್ತಿಯಾ ಹೆಂಗೇ  
ಮಸ್ತು ಹುಡುಗಿಯೇ ಯಾಕೇ ಸುಸ್ತೂ ಮಾಡತೀಯೇ 
ಹೇ.. ಕೈಯ್ಯ ಹಿಡಿತೀಯ ಮನಸಲಿ ಕಾಲು ಎಳಿತೀಯ 

ಸರಸ ನೋಡಿದರೇ ಸಾಮಾನ್ಯನಲ್ಲ 
ಎದುರು ನಿಂತಕೊಂಡ್ರೇ ಬಿದ್ದೋದೇ ನಲ್ಲಾ ನನ್ನಲ್ಲಿ ನಾನಿಲ್ಲ.. 
ಯಾರು ತಡೆಯೋರು ಈ ಭೂಮಿ ಮೇಲೆ ಕಲಿತು ಕಲಿಸೋಣ 
ಈ ಪ್ರೇಮ ಲೀಲೆ ನಮಗೆ ಸೋಲಿಲ್ಲ
ಅಪ್ಪು ಇದು ತಪ್ಪೋ ಬರಿ ಮಾತಲ್ಲಿ ಕಳೆಯುವೆ ನನ್ನ ಗ್ರಿಪ್ಪು 
ತಪ್ಪು ಒಪ್ಪು ಮಾಡದಿರೋ ಯಾವ ಪ್ರೇಮಿನೂ ಇಲ್ಲ ಬೆಪ್ಪೂ.. 
ಜಿಂಗಿಲಿಕ್ಕ  ಜಿಂಗಿಲಿಕ್ಕ ಜೋಡಿ ನಮ್ಮದೂ 
ಮನ್ಮಥ ಲವ್ ಸ್ಟೋರಿಗಿಂತ ದೊಡ್ಡದೂ 
ಅಪ್ಪನಂತೇ ಮಗ ಅನ್ನೋ ಮಾತು ನಮ್ಮದೂ 
ಒಂದು ಮಾತಿಗೆ ಈ ಪ್ರಾಣ ನಿನ್ನದೂ 
ಮಸ್ತು ಹುಡುಗಿಯೇ ಯಾಕೇ ಸುಸ್ತೂ ಮಾಡತೀಯೇ 
ಇಷ್ಟು ಕೊಟ್ಟರೇ ನಂಗೇ ಎಷ್ಟು ಕೊಡುತಿಯೇ 
ಕಣ್ಣು ಹೋಡೀತೀಯಾ ಕೋಟಿ ಕನಸು ಕೊಡುತೀಯ
ಕೈಯ್ಯ ಹಿಡಿತೀಯ ಮನಸಲಿ ಕಾಲು ಎಳಿತೀಯ 
ಆಹ್ .. ಸ್ಯೆ..  ಸ್ಯೆ.. ಅರವತ್ತೆಂಟು ಸ್ಯೆ ಸ್ಯೆ ಸ್ಯೆ ಬಿಡಿಸೋ ಗಂಟೂ 
ವಯಸ್ಸೂ ಸೂಸುಮ್ಮನೇ ಉಂಟು ರತ್ತೋ ರತ್ತೋ ರಮಿಸೋ ಹೋತ್ತು 
--------------------------------------------------------------------------------------------------------------------------

ವೀರ ಕನ್ನಡಿಗ (೨೦೦೩) - ಸಿಕ್ಕೂ ಸಿಕ್ಕೂ ಸುಂದರೀ
ಸಂಗೀತ : ಚಕ್ರಿ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಚಕ್ರಿ, ಕೌಸಲ್ಯ

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು 
ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ
ಸಿಕ್ಕು ಸಿಕ್ಕು ಬಾರೆ ಸ್ವಪ್ನ ಸುಂದರಿ ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೋ ಭಾನುವಾರ ಸೊಂಟಕ್ಕೆ ಎತ್ತಿಕೋ ಸೋಮವಾರ
ಮನಸಿಗೆ ಆಸೇನೆ ಭಾರ 
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು 
ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ

ಒ ನನ್ನ ಜಾಣ ಅನ್ನೋನೇ ಪ್ರಾಣ ತಮಟೆಗಳ ಭಾರಿಸೋಣ ಧ್ವಜ ಹಾರಿಸೋಣ
ಚಂದ್ರನಿಗಿಂತ ಚಂಚಲವಂತೆ ನಿನ್ನಂತ ಹೆಣ್ಣ ಕನಸುಗಳು ಬಿಸಿ ಆಸೆಗಳು
ಗುಂಡಿಗೆಯೊಳಗೆ ಡೋಲಿ ಡೋಲಿ ಯೌವ್ವನಕಿಲ್ಲ ಮನಸಿನ ಬೇಲಿ
ಬೇಲಿಯ ಹಾರೋ ವಿಷಯವ ಕೇಳಿ ಕಾಲೂರಿ ಕುಳಿತಿದೆ ಪ್ರೇಮಕೇಳಿ
ಹೇಳಬಾರದು ಕೇಳಬಾರದು ಮೆಚ್ಚಿಕೊಂಡರೆ ಮತ್ತೆ ಸೋಲಬಾರದು
ಕಾಯಬಾರದು ನೋಯಬಾರದು ಅಪ್ಪಿಕೊಂಡಮೇಲೆ ಕಾಲ ಓಡಬಾರದು
ಬೆಳಗಾನೆ ಮೈಯಲ್ಲ ಹಾಯ್ 
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು 
ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ

ಚಮಕು ಚೋರಿ ಕನ್ಯಾಕುಮಾರಿ ಕಣ್ಣಲ್ಲೆ ನನ್ನ ಕಾಡಿಸ್ತೀಯ ತಲೆ ಕೆಡ್ಸ್ತೀಯಾ
ಮೊದಲು ಟಚ್ ಮೀ ಆಮೇಲೆ ಕಿಸ್ ಮೀ ಬಳುಕುತ ಹಚ್ಚಿಕೊಂಡರೇ  ಲಂಚ ಕೊಡುತೀಯ
ಟೈಮ್ ಪಾಸ್ ಮಾಡದೇ  ಕೈಯನ್ನು ಚಾಚು ನನ್ನನೇ ಕೋಡುವೇ ಬೇಕಾದ್ದೂ ಬಾಚು
ವಯಸಿಗೆ ವಯಸ್ಸು ಕೊಟ್ಟರೆ ಕೋಚೂ ಸೊಗಸಿಗು ಸೊಗಸಿಗು ಒಂಡೇ ಮ್ಯಾಚೂ 
ಏನು ಬೇಕು ಸೈ ಎಷ್ಟು ಬೇಕು ಸೈ ಮುಟ್ಟಿದರೆ ಕೈ ಮೈಯ್ಯ  ಎಲ್ಲ ತಕ ಥೈ 
ಹಾಡಬೇಕು ಸೈ ಕುಣಿಬೇಕು ಸೈ ಪ್ರೇಮಿಗಳಿಗೆಲ್ಲಾ ಒಂದುಗೂಡು ಕೈ ವಯಸ್ಸಿಗೆ ಹಾಕೋಣ ಜೈ ಜೈ
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು 
ಸಿಕ್ಕು ಸಿಕ್ಕು ಬಾರೆ, ಸ್ವಪ್ನ ಸುಂದರಿ ರುಕ್ಕು ರುಕ್ಕು ಮಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೋ ಭಾನುವಾರ ಸೊಂಟಕ್ಕೆ ಎತ್ತಿಕೋ ಸೋಮವಾರ
ಮನಸಿಗೆ ಆಸೇನೇ ಭಾರ
-------------------------------------------------------------------------------------------------------------------------

No comments:

Post a Comment