ಆಹುತಿ ಚಲನ ಚಿತ್ರದ ಹಾಡುಗಳು
- ಒಲವೆಂಬ ಹೂವಿನ ತೇರ ಏರಿ ಬಂದೇ
- ರಾತ್ರಿ ಆದಾಗ ನೀ ನನ್ನ ಕಂಡಾಗ
- ಸುಡಬೇಕೂ ಸೂಡಬೇಕು
- ನಮ್ಮವ್ವಾ ಮಾತಾಯಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಹೆಣ್ಣು : ಒಲವೆಂಬ ಹೂವಿನ ತೇರ ಏರಿ ಬಂದೇ .. ನನಗಾಗಿ ಪ್ರೀತಿಯ ಹಾರ ನೀನು ತಂದೇ
ಒಲವೆಂಬ ಹೂವಿನ ತೇರ ಏರಿ ಬಂದೇ .. ನನಗಾಗಿ ಪ್ರೀತಿಯ ಹಾರ ನೀನು ತಂದೇ
ಆಸೆಯ ಉಯ್ಯಾಲೆ ಮೇಲೆ ಸೇರಿದೇ ಸಂತೋಷವೆಂದೇ
ಆಸೆಯ ಉಯ್ಯಾಲೆ ಮೇಲೆ ಸೇರಿದೇ ಸಂತೋಷವೆಂದೇ
ಜೀವ ಜೀವ ಸೇರಿ ಹೋದ ಮೇಲೇ ..
ಗಂಡು : ನಗುವೆಂಬ ಮಲ್ಲಿಗೆ ಚೆಲ್ಲಿ ನೀನೂ ಬಂದೇ .. ನನಗಾಗಿ ನಿನ್ನಯ ಅಂದ ತುಂಬಿ ತಂದೇ ..
ನಗುವೆಂಬ ಮಲ್ಲಿಗೆ ಚೆಲ್ಲಿ ನೀನೂ ಬಂದೇ .. ನನಗಾಗಿ ನಿನ್ನಯ ಅಂದ ತುಂಬಿ ತಂದೇ ..
ಪ್ರೀತಿಯ ಹೂಬಾಣ ಹೂಡಿ ಮಾಡಿದೇ ಏನೇನೋ ಮೋಡಿ ..
ಪ್ರೀತಿಯ ಹೂಬಾಣ ಹೂಡಿ ಮಾಡಿದೇ ಏನೇನೋ ಮೋಡಿ ..
ನೀನೇ ಇನ್ನೂ ನನ್ನ ಬಾಳ ಜೋಡೀ ..
ಕೋರಸ್ : ತನನಂ ತನನಂ ತನನಂ.... ತನನಂ ತನನಂ ತನನಂ ... ಆಆಆ... ಆಆಆ...
ಹೆಣ್ಣು : ಶೃಂಗಾರ ಕಾವ್ಯಾವ ಬರೆದ (ಆಆಆ) ಆ ರಸಿಕ ವಾತ್ಸಾಯನನೂ .. (ಆಆಆ)
ಶಾಂತಲೆಯ ಅಂದವ ಕಡೆದಾ.. ರಸಶಿಲ್ಪಿ ಜಕ್ಕಣನೂ... ಓ...
ಗಂಡು : ಸೌಂದರ್ಯ ಗುಡಿಯಲೀ ನಿನ್ನ (ಆಆಆ) ಪೂಜಾರಿ ಆಗುವೇ ನಾನೂ ..(ಆಆಆ)
ಸಂಯಮದ ಸಂಕಲೆಯ ಒಗೆದು ನಿನ್ನಲ್ಲಿ ಸೇರುವೆನೂ ..
ಹೆಣ್ಣು : ನನ್ನ ನಿನ್ನ ಗಂಡು : ಪ್ರೀತಿ ಚೆನ್ನಾ ..
ಹೆಣ್ಣು : ಪ್ರೀತಿ ಆಶಾ ಗಂಡು : ಇನ್ನೂ ಚೆನ್ನಾ..
ಇಬ್ಬರು : ಲಾಲಲ್ಲಲರಲ್ಲಲ್ಲ .. ಲಾಲಲ್ಲಲರಲ್ಲಲ್ಲ ..
ಗಂಡು : ನಗುವೆಂಬ ಮಲ್ಲಿಗೆ ಚೆಲ್ಲಿ ನೀನೂ ಬಂದೇ ..
ಹೆಣ್ಣು : ನನಗಾಗಿ ಪ್ರೀತಿಯ ಹಾರ ನೀನು ತಂದೇ
ಗಂಡು : ಈ ಕೆಂಪು ತುಟಿಗಳು ನನ್ನ (ಆಆಆ) ನೂರಾಸೇ ಕೆಣಕಿದೆ ಚಿನ್ನಾ (ಆಆಆ)
ಆ ಜೇನ ನೀಡುತಾ ಬಾ ಇನಿದಾಹ ತೀರಿಸು ಬಾ.. ಬಾ
ಹೆಣ್ಣು : ಈ ತೋಳ ಬಂಧನದಲ್ಲಿ (ಆಆಆ) ಆನಂದ ಸಾಗರ ಕಂಡೇ .. (ಆಆಆ)
ಮೈಮರೆತು ಆ ಸುಖದಲ್ಲಿ ನಾನೆಲ್ಲೋ ತೇಲಿದೆ
ಗಂಡು : ನನ್ನ ನಿನ್ನ ಹೆಣ್ಣು : ಪ್ರೀತಿ ಚೆನ್ನಾ ..
ಗಂಡು : ಪ್ರೀತಿ ಆಶಾ ಹೆಣ್ಣು : ಇನ್ನೂ ಚೆನ್ನಾ..
ಇಬ್ಬರು : ಲಾಲಲ್ಲಲರಲ್ಲಲ್ಲ .. ಲಾಲಲ್ಲಲರಲ್ಲಲ್ಲ ..
ಹೆಣ್ಣು : ಒಲವೆಂಬ ಹೂವಿನ ತೇರ ಏರಿ ಬಂದೇ ..
ಗಂಡು : ನನಗಾಗಿ ನಿನ್ನಯ ಅಂದ ತುಂಬಿ ತಂದೇ ..
ಹೆಣ್ಣು : ಆಸೆಯ ಉಯ್ಯಾಲೆ ಮೇಲೆ ಸೇರಿದೇ ಸಂತೋಷವೆಂದೇ
ಗಂಡು : ಪ್ರೀತಿಯ ಹೂಬಾಣ ಹೂಡಿ ಮಾಡಿದೇ ಏನೇನೋ ಮೋಡಿ ..
ಇಬ್ಬರು : ನೀನೇ ಇನ್ನೂ ನನ್ನ ಬಾಳ ಜೋಡೀ ..
---------------------------------------------------------------------------------------------------------------
ಆಹುತಿ (೧೯೮೫) - ರಾತ್ರಿ ಆದಾಗ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಜಾನಕೀ,
ಕೋರಸ್ : ವ್ವಾ... (ಅಹ್ಹಹ್ಹಹ್ಹ) ಯಾಹ್ಹ... (ಅಹ್ಹಹ್ಹಹ್ಹ)
ಹೆಣ್ಣು : ರಾತ್ರಿ ಆದಾಗ ನೀ ನನ್ನ ಕಂಡಾಗ
ರಾತ್ರಿ ಆದಾಗ ನೀ ನನ್ನ ಕಂಡಾಗ ಹೀಗೆತಕೆ ಸುಮ್ಮನೇ ನೀಲುವೇ ..
ಹೀಗೆತಕೆ ಸುಮ್ಮನೇ ನೀಲುವೇ .. ತೋಳಿಂದ ಬಳಸೆನ್ನ ತುಟಿಗೊಂದು ಸಿಹಿಯನ್ನ.. ಆ.. ಆಹ್ಹ ..
ಅಹ್ಹ.. ಆಹ್ಹ್... ಹೂಂಹ್...
ರಾತ್ರಿ ಆದಾಗ ನೀ ನನ್ನ ಕಂಡಾಗ... ರಾತ್ರಿ ಆದಾಗ ನೀ ನನ್ನ ಕಂಡಾಗ
ಹೆಣ್ಣು : ಆ..ಅಹ್.. ಆ..ಅಹ್.. ಓ..ಒಹೋ
ನಿನ್ನನ್ನೂ ಕಂಡಾಗ ಕಣ್ಣು ಕುಣಿಯಿತು ಎದೆಯಲ್ಲಿ ಹೊಸ ಆಸೇ ಉಕ್ಕಿ ಹರಿಯಿತು
ನಿನ್ನನ್ನೂ ಕಂಡಾಗ ಕಣ್ಣು ಕುಣಿಯಿತು ಎದೆಯಲ್ಲಿ ಹೊಸ ಆಸೇ ಉಕ್ಕಿ ಹರಿಯಿತು
ಅರಳಿದ ಈ ತನುವೂ ಕಾವೇರೀ .. (ಹೇಹೇಹೇ) ಬಯಕೆಯ ಭಾರದಲೀ ಮತ್ತೇರಿ.. (ಓಓಓ )
ಅರಳಿದ ಈ ತನುವೂ ಕಾವೇರೀ .. (ಹೇಹೇಹೇ) ಬಯಕೆಯ ಭಾರದಲೀ ಮತ್ತೇರಿ.. (ಓಓಓ )
ಆತುರ ತಾಳದೇ ಬಂದೇ ನಾನಿಲ್ಲಿ ನಿನ್ನನ್ನೂ ಸೇರದೇ ಹೇಗಿರಲೀ ಇಲ್ಲೇ
ನೀ ಬೇಗ ಬಳಿ ಬಂದೂ.. ಅಹ್ಹಹ್ಹಹ್ಹ...
ರಾತ್ರಿ ಆದಾಗ ನೀ ನನ್ನ ಕಂಡಾಗ... ರಾತ್ರಿ ಆದಾಗ ನೀ ನನ್ನ ಕಂಡಾಗ
ಕೋರಸ್ : ಬಬಬೋ.. ಬಬಬೋ.. ಬಬಬೋ.. ಬಬಬೋ.. ಬಬಬೋ.. ಬಬಬೋ..
ಬಬಬೋ.. ಬಬಬೋ.. ಬಬಬೋ.. ಬಬಬೋ.. ಬಬಬೋ.. ಬಬಬೋ..
ಹೆಣ್ಣು : ಸಂಜೆಯ ರಂಗೆಲ್ಲಾ ಕರಗಿ ಹೋಗಲೂ.. ಹೇ... ಹೆಣ್ಣಿನ ಮೈಯಿಂದ ಸೆರಗೂ ಜಾರಲೂ ... ಅಹ್ಹಹ್ಹಹ್ಹ..
ಸಂಜೆಯ ರಂಗೆಲ್ಲಾ ಕರಗಿ ಹೋಗಲೂ.. ಹೆಣ್ಣಿನ ಮೈಯಿಂದ ಸೆರಗೂ ಜಾರಲೂ ...
ಮೋಹದ ಬಲೆಯಲ್ಲಿ ಮೀನಾದೇ ... (ಹೇಹೇಹೇ ) ದಾಹವ ತಾಳದೇ ನಾ ನೊಂದೇ .. (ಓಓಓ )
ಮೋಹದ ಬಲೆಯಲ್ಲಿ ಮೀನಾದೇ ... (ಹೇಹೇಹೇ ) ದಾಹವ ತಾಳದೇ ನಾ ನೊಂದೇ .. (ಓಓಓ )
ಆಸರೇ ದೊರಕದೇ ನಿಲ್ಲಲಾರೇನೂ.. ಆಸೆಯ ಮಾತಲ್ಲಿ ಹೇಳಲಾರೇನು
ನೀ ಬೇಗ ಬಳಿ ಬಂದೂ ಅಹ್ಹಹ್ಹಹ್ಹ...
ರಾತ್ರಿ ಆದಾಗ ನೀ ನನ್ನ ಕಂಡಾಗ... ರಾತ್ರಿ ಆದಾಗ ನೀ ನನ್ನ ಕಂಡಾಗ
ಹೀಗೆತಕೆ ಸುಮ್ಮನೇ ನೀಲುವೇ ..
ಹೀಗೆತಕೆ ಸುಮ್ಮನೇ ನೀಲುವೇ .. ತೋಳಿಂದ ಬಳಸೆನ್ನ ತುಟಿಗೊಂದು ಸಿಹಿಯನ್ನ..
ಆ.. ಆಹ್ಹ .. ಅಹ್ಹ.. ಆಹ್ಹ್... ಹೂಂಹ್...
---------------------------------------------------------------------------------------------------------------
ಆಹುತಿ (೧೯೮೫) - ಸುಡಬೇಕೂ ಸೂಡಬೇಕು
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಗಂಡು : ಸುಡಬೇಕೂ.. ಸುಡಬೇಕೂ .. ಗುಂಡಿಟ್ಟು ಸುಡಬೇಕೂ .. ಕಂಡಲ್ಲಿ ಕೊಲ್ಲಬೇಕು
ಇಂಥ ವಂಚಕರ.. ಇಂಥ ರಾಕ್ಷಸರ... ಸುಡಬೇಕೂ... ಸುಡಬೇಕೂ ..
ಸುಡಬೇಕೂ.. ಸುಡಬೇಕೂ .. ಗುಂಡಿಟ್ಟು ಸುಡಬೇಕೂ .. ಕಂಡಲ್ಲಿ ಕೊಲ್ಲಬೇಕು
ಗಂಡು : ಮರಳು ಮಾಡಿ ಒಂದ ಹೆಣ್ಣಾ ಬೆರಗು ಮಾಡಿದ
ಸಭ್ಯನಂತೇ ನಟನೇ ಮಾಡಿ ತಾಳಿ ಕಟ್ಟಿದ
ಕೋರಸ್ : ತಾಳಿ ಕಟ್ಟಿದ
ಗಂಡು : ಹೆಣ್ಣಿನಿಂದ ಹೊನ್ನ ರಾಶಿ ಬಯಸಿ ನೋಡಿದ
ಹಣವ ತರದೇ ಹೋಗಲವಳ ದೂರ ನೂಕಿದ
ಕೋರಸ್ : ದೂರ ನೂಕಿದ
ಗಂಡು : ಅತ್ತೇ ಮಾವರೂ ಹುಲಿಗಳಾದರೂ..
ಅತ್ತೇ ಮಾವರೂ ಹುಲಿಗಳಾದರೂ
ಬಂದ ಸೊಸೆಯನೂ ಹೊಡೆದು ಬಡಿದರೂ
ಕೋರಸ್ : ಹೊಡೆದು ಬಡಿದರೂ
ಗಂಡು : ನಂಬಿ ಬಂದ ಅಬಲೇ ಹೆಣ್ಣನೂ ನರಕಕೇ ನೂಕಿದರೂ
ಅವಳ ನೆಮ್ಮದೀ ನುಂಗಿದರೂ ..
ಇಂಥಾ ಪಾಪಿಗಳನ್ನೂ ಏನೂ ಮಾಡಬೇಕೂ... ಥೂ..
ಎಲ್ಲರೂ : ಸುಡಬೇಕೂ.. ಸುಡಬೇಕೂ .. ಗುಂಡಿಟ್ಟು ಸುಡಬೇಕೂ .. ಕಂಡಲ್ಲಿ ಕೊಲ್ಲಬೇಕು
ಹೆಣ್ಣು : ಮನೆಯ ಬೆಳಗಲೆಂದೂ ಬಂದ ಭಾಗ್ಯ ಲಕ್ಷ್ಮಿಯ
ಕೋರಸ್ : ಭಾಗ್ಯಲಕ್ಷ್ಮಿಯ..
ಹೆಣ್ಣು : ವಂಶ ಬೆಳಕಲೆಂದು ಬಂದ ಪ್ರೇಮ ಮೂರ್ತಿಯ
ಕೋರಸ್ : ಪ್ರೇಮ ಮೂರ್ತಿಯ
ಹೆಣ್ಣು : ಬಾಳುವಾಸೆಯಿಂದ ಬಂದ ಅನ್ನಪೂರ್ಣೆಯಾ...
ಕೋರಸ್ : ಅನ್ನಪೂರ್ಣೆಯಾ..
ಹೆಣ್ಣು : ಅಗ್ನಿಸಾಕ್ಷಿಯಾಗಿ ಕೈಯ್ಯ್ ಹಿಡಿದ ನಾರಿಯ..
ಜೀವದೊಂದಿಗೇ ಸುಡುವೇ ಎಂದನ ಬೆಂಕಿ ಹಚ್ಚಿಸೀ ನಗುತ ನಿಂತನೂ
ನಂಬಿ ಬಂದ ಅಬಲೇ ಹೆಣ್ಣಿನ ಕಥೆಯನು ಮುಗಿಸಿದರೂ
ಅಳುವಾ ನಾಟಕವ ಆಡಿದರೂ ..
ಗಂಡು : ಇಂಥಾ ಚಂಡಾಲರನ್ನೂ ಏನೂ ಮಾಡಬೇಕೂ.. ಹೂಂ ..
ಎಲ್ಲರೂ : ಸುಡಬೇಕೂ.. ಸುಡಬೇಕೂ .. ಗುಂಡಿಟ್ಟು ಸುಡಬೇಕೂ .. ಕಂಡಲ್ಲಿ ಕೊಲ್ಲಬೇಕು
ಗಂಡು : ಇಂಥ ವಂಚಕರ.. ಇಂಥ ರಾಕ್ಷಸರ... ಸುಡಬೇಕೂ... ಸುಡಬೇಕೂ ..
ಎಲ್ಲರೂ : ಸುಡಬೇಕೂ.. ಸುಡಬೇಕೂ ..
---------------------------------------------------------------------------------------------------------------
ಆಹುತಿ (೧೯೮೫) - ನಮ್ಮವ್ವಾ ಮಾತಾಯೀ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಗಂಡು : ಆಆಆ... ಆಆಆ... ಆಆಆ... ಆಆಆ...
ನಮ್ಮವ್ವ ಮಾತಾಯೀ ಕಾಪಾಡೂ ತಾಯೇ ... ಕೋರಸ್ : ಮಾಯೇ ... ನೀನೂ ಮಾಯೇ ..
ಗಂಡು : ಮುಕ್ಕಣನ ರಾಣಿ ಓ ಶಕ್ತಿ ಮಾಯೇ ... ಕೋರಸ್ : ಮಾಯೇ ... ಓ ಶಕ್ತಿ ಮಾಯೇ ..
ಗಂಡು : ಓ.. ಚಂಡಿ ಚಾಮುಂಡಿ ಸಲಹಮ್ಮ ನೀನೂ .. ನಿನ್ನನ್ನೇ ನಂಬಿರುವ ಈ ಮಕ್ಕಳನ್ನೂ ..
ನಮ್ಮವ್ವ ಮಾತಾಯೀ ಕಾಪಾಡೂ ತಾಯೇ ... ಕೋರಸ್ : ಮಾಯೇ ... ನೀನೂ ಮಾಯೇ ..
ಗಂಡು : ಮುಕ್ಕಣನ ರಾಣಿ ಓ ಶಕ್ತಿ ಮಾಯೇ ... ಕೋರಸ್ : ಮಾಯೇ ... ಓ ಶಕ್ತಿ ಮಾಯೇ ..
ಹೆಣ್ಣು : ನೀ ಒಲಿದು ನಕ್ಕಾಗ ಜಗ ನಗುತಿರೇ .. ಕೋರಸ್ : ಓ.. ಆ ... ಆ.. ಆ..
ಹೆಣ್ಣು : ನೀ ಮುನಿದು ನಿಂತಾಗ ಭೂವಿ ನಡುಗಿದೇ .. ಕೋರಸ್ : ಆ .. ಆ ... ಆ.. ಆ..
ಹೆಣ್ಣು : ನೀ ಒಲಿದು ನಕ್ಕಾಗ ಜಗ ನಗುತಿರೇ .. ನೀ ಮುನಿದು ನಿಂತಾಗ ಭೂವಿ ನಡುಗಿದೇ ..
ಗಂಡು : ಭೈರವಿಯ ಶಾಂಭವಿಯ ಓ ರುಧ್ರ ಕಾಳೀ ... ಓಓಓಓಓ ... ಓಓಓಓಓ
ಭೈರವಿಯ ಶಾಂಭವಿಯ ಓ ರುಧ್ರ ಕಾಳೀ ...ದುಷ್ಟ ಶಿಕ್ಷೆಗೇ ಬಂದೇ ಅವತಾರ ತಾಳೀ...
ನಮ್ಮವ್ವ ಮಾತಾಯೀ ಕಾಪಾಡೂ ತಾಯೇ ... ಕೋರಸ್ : ಮಾಯೇ ... ನೀನೂ ಮಾಯೇ ..
ಗಂಡು : ಮುಕ್ಕಣನ ರಾಣಿ ಓ ಶಕ್ತಿ ಮಾಯೇ ... ಕೋರಸ್ : ಮಾಯೇ ... ಓ ಶಕ್ತಿ ಮಾಯೇ ..
ಕೋರಸ್ : ಶಾಂಭವೀ ... (ಶಂಕರೀ ) ಸಾ ಹರಿ .. (ಕಿಂಕರೀ...)
ಶಾಂಭವೀ ... (ಶಂಕರೀ ) ಸಾ ಹರಿ .. (ಕಿಂಕರೀ...)
ಹೆಣ್ಣು : ಊರಿನ ಅಮ್ಮನ ಜಾತ್ರೆಯ ಶುಭದಿನ.. ಭಕ್ತರ ತಾಯಿಯ ಪೂಜಿಸೋ ಸವಿದಿನ
ಗಂಡು : ಕರುಣೆಯ ಇಡೂ ಕೋರಸ್ : ಇಡೂ.. ಇಡೂ.. ಇಡೂ..
ಹೆಣ್ಣು : ವರಗಳ ಕೊಡೂ ಕೋರಸ್ : ಧೀನ್ ಧೀನ್ ಧೀನ್
ಗಂಡು : ನ್ಯಾಯವ ಪೊರೇ .. ಕೋರಸ್ : ಧೀನ್ ಧೀನ್ ಧೀನ್
ಹೆಣ್ಣು : ಧರೇ ಹಿಡಿ ಕರೇ ಕೋರಸ್ : ಧೀನ್ ಧೀನ್ ಧೀನ್
ಗಂಡು : ಅಳಿಸಲೂ ಅನ್ಯಾಯವಾ ತುಳಿಯಲೂ ಅನೀತಿಯಾ
ಅಳಿಸಲೂ ಅನ್ಯಾಯವಾ ತುಳಿಯಲೂ ಅನೀತಿಯಾ
ದೂರಮಾರ್ಗರಾ ಚಂಡಾಲರ ನೆತ್ತರನೇ ನೀ ಕುಡಿಯಲೂ
ಈ ದಿನ ಅಮ್ಮನ ಜಾತ್ರೆಯ ಶುಭದಿನ ಭಕ್ತರ ತಾಯಿಯ ಪೂಜಿಸೋ ಸವಿದಿನ
ಕೋರಸ್ : ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಗಂಡು : ತಾಯೀಗುಂಟು ಕೋಟಿ ಕಣ್ಣೂ ಬಲ್ಲಳಾಕೆ ಎಲ್ಲಾ... ಆಆಆ.. (ಆಆಆ... ಆಆಆ )
ಹೆಣ್ಣು : ಕಣ್ಣು ತಪ್ಪಿ ಯಾವ ಕಾರ್ಯ ಮಾಡಿದೋರೂ ಇಲ್ಲಾ...
ಗಂಡು : ಭಾರವಾಗಿ ನಿನ್ನಲ್ಲಂಟೂ ಮಾಯದಂತಾ ಪಾಪ... ಆಆಆ... ಆಆಆ...
ಹೆಣ್ಣು : ತಪ್ಪಲಾರೇ .. ಎಲ್ಲಿ ಹೋಗೀ ತಾಯೀ ಕಣ್ಣ ಕೋಪ..
ಗಂಡು : ಅಹ್ಹಹ್ಹಹಹ.. ದೈವಕ್ಕೇ ದ್ರೋಹ ಮಾಡೀ .. ಹೆಣ್ಣು : ಧರ್ಮಕ್ಕೇ ಎಳ್ಳೂ ನೀಡಿ
ಗಂಡು : ನಾ ಗೆದ್ದೇ ಎಂದು ಕೊಳ್ಳಬೇಡಾ... ಆಆಆ.. ಹೆಣ್ಣು : ಪಾಪಿಯು ಓಡಿ ಮುಂದೇ
ಗಂಡು : ಶೂಲವೂ ಬೆನ್ನ ಹಿಂದೇ .. ಹೆಣ್ಣು : ಹಿಂದಿಗೇ ಒಂದು ಬಾರೀ ನೋಡಾ..
ಗಂಡು : ಯಾವ ರೂಪ ತಾಳಿ ಮೃತ್ಯೂ ಬರುವುದೂ ಬಲ್ಲೋರು ಇಲ್ಲಾ.. ಆಆಆ..
ಕೋರಸ್ : ಶಾಂಭವೀ ... (ಶಂಕರೀ ) ಸಾ ಹರಿ .. (ಕಿಂಕರೀ...)
ಶಾಂಭವೀ ... (ಶಂಕರೀ ) ಸಾ ಹರಿ .. (ಕಿಂಕರೀ...)
---------------------------------------------------------------------------------------------------------------
No comments:
Post a Comment