1295. ಆಪಧ್ಬಾಂಧವ (೧೯೮೭)

ಆಪಧ್ಬಾಂಧವ ಚಲನಚಿತ್ರದ ಹಾಡುಗಳು 
  1. ರಸಿಕರೇ ಪ್ರಿಯ ರಸಿಕರೇ 
  2. ಮನದಾಸೆಯೇ ನಿಜವಾದರೇ 
  3. ಹುಣಿಮೆಯ ಚಂದ್ರ ಚೆಂದ
  4. ಯಾರು  ನನ್ನ ಕೇಳೋರಿಲ್ಲ ನನ್ನೊರಿಲ್ಲ 
ಆಪಧ್ಬಾಂಧವ (೧೯೮೭) - ರಸಿಕರೇ ಪ್ರಿಯ ರಸಿಕರೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,

ರಸಿಕರೇ ಪ್ರಿಯ ರಸಿಕರೇ ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯಾ ಅಭಿನಂದನೇ ....
ಹಾಡಿನಲ್ಲಿ ಕಥೆಯ ಹೇಳುವೇ ಹಾಡುತ್ತಲೇ ವ್ಯಥೆಯ ಮರೆಯುವೇ ನಿಮ್ಮಲ್ಲಿ ಒಂದಾಗುವೇ ..
ರಸಿಕರೇ ಪ್ರಿಯ ರಸಿಕರೇ ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯಾ ಅಭಿನಂದನೇ ....

ಸ್ನೇಹ ಸುಮಧುರ ಸಂಬಂಧ ಪ್ರೇಮ ಒಲವಿನ ಅನುಬಂಧ 
ಬರುವೆವು ಮೆರೆವೆವು ನಮಗಾಗೇ ಈ ಬಾಳ ನೋವೆಲ್ಲವೂ .. 
ಇಲ್ಲೇ ಆನಂದವೂ .. ಎವೆರಿಬಡಿ .. 
ರಸಿಕರೇ ಪ್ರಿಯ ರಸಿಕರೇ ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯಾ ಅಭಿನಂದನೇ .... 
ನನ್ನ ನಿನ್ನ ದೂರ ಮಾಡೋ ಯಾವ ಶಕ್ತಿ ಬಂದರೇನು ಈ ಪ್ರಾಣ ನಿನ್ನದೇ 
ಹೂವೇ ನಿನ್ನ ಆಟದಲ್ಲಿ ನೋಟದಲ್ಲಿ ಸಂಗದಲ್ಲಿ ಆನಂದ ಹೊಮ್ಮಿದೇ .. 
ಬಾಳಿನಲ್ಲಿ ಎಲ್ಲೇ ಇರಲಿ ಏನೇ ಬರಲಿ ಯಾರೇ ಬರಲಿ ನೀನಿನ್ನೂ ಅಂಜದೇ ನನ್ನ ಹಾಗೇ .. 
ಪ್ರೀತಿಗಾಗಿ ನೀತಿಗಾಗಿ ರೀತಿಗಾಗಿ ನೀ ಬಾಳೋ ಧೈರ್ಯದೇ ಸತ್ಯಕ್ಕೇ ಎಂದೆಂದೂ ಜಯವಿದೇ .. 
ರಸಿಕರೇ ಪ್ರಿಯ ರಸಿಕರೇ ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯಾ ಅಭಿನಂದನೇ .... 
ಹಾಡಿನಲ್ಲಿ ಕಥೆಯ ಹೇಳುವೇ ಹಾಡುತ್ತಲೇ ವ್ಯಥೆಯ ಮರೆಯುವೇ ನಿಮ್ಮಲ್ಲಿ ಒಂದಾಗುವೇ ..
ರಸಿಕರೇ ಪ್ರಿಯ ರಸಿಕರೇ ನಲುಮೆಯ ನನ್ನ ಗೆಳೆಯರೇ
ನಿಮಗೆ ವಂದನೆ ಎದೆಯಾ ಅಭಿನಂದನೇ ....
--------------------------------------------------------------------------------------------------

ಆಪಧ್ಬಾಂಧವ (೧೯೮೭) - ಮನದಾಸೆಯೇ ನಿಜವಾದರೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಮನದಾಸೆಯೇ ನಿಜವಾದರೇ ಕನಸೆಲ್ಲವೂ ನನಸಾದರೇ
            ಬಾಳೆಲ್ಲ ಆನಂದ ಮಾತೆಲ್ಲ ಮಕರಂದ ಸಡಗರ ಅನುದಿನ
ಹೆಣ್ಣು : ಮನದಾಸೆಯೇ ನಿಜವಾದರೇ ಕನಸೆಲ್ಲವೂ ನನಸಾದರೇ
            ಬಾಳೆಲ್ಲ ಆನಂದ ಮಾತೆಲ್ಲ ಮಕರಂದ ಸಡಗರ ಅನುದಿನ

ಹೆಣ್ಣು : ನಾ ಬರಲು ಇಂದು ಹೀಗೇಕೆ ನೀ ಓಡುವೇ
          ಎಲ್ಲೇ ಹೋಗು ನಿನ್ನ ನೆರಳಂತೇ ನಾ ನಿಲ್ಲುವೇ
ಗಂಡು : ಈ ಬದುಕೇ ಕಣ್ಣ ಮುಚ್ಚಾಲೆಯ ಆಟವೇ
            ಹಗಲು ಇರುಳು ಈ ಬಾಳಲಿ ಹೊಸ ನೋಟವೇ
ಹೆಣ್ಣು : ಒಲವಿಂದ ಕಲೆತಾಗ ಸಂತೋಷವೇ
ಗಂಡು : ಮನದಾಸೆಯೇ ನಿಜವಾದರೇ ಕನಸೆಲ್ಲವೂ ನನಸಾದರೇ
            ಬಾಳೆಲ್ಲ ಆನಂದ ಮಾತೆಲ್ಲ ಮಕರಂದ ಸಡಗರ ಅನುದಿನ

ಕೋರಸ್ : ಟ್ವಿಂಕಲ್ ಟ್ವಿಂಕಲ್   ಲಿಟ್ಲ್ ಸ್ಟಾರ್ ಹ್ಯಾವ್ ಐ ವಂಡರ್ ವಾಟ್ ಯೂ ಆರ್ 
                ಅಪ್ ಅಬೌವ್ ದ್ ಬರ್ಡ್ ಸೋ ಹೈ  ಲೈಕ್ ಎ ಡೈಮಂಡ್ ಇನ್ ದ್ ಸ್ಕೈ 
ಗಂಡು : ಓ ಗಿಣಿಯೇ ನಿನ ಮನದಲಿ ಏನಾಗಿದೆ ಏಕೆ ಹೀಗೆ ಈ ಕಣ್ಣಲ್ಲಿ ನೀರಾಡಿದೆ 
ಹೆಣ್ಣು : ನೀ ಯಾರೋ ಈ ಅನುಬಂಧ ನಮಗೇತಕೆ ನೀನು ನಗಲು ಹೊಸ ಉಲ್ಲಾಸ ನನಗೇತಕೆ 
ಗಂಡು : ಇದು ಪ್ರೇಮ ತಂದಂಥ ಸವಿ ಕಾಣಿಕೆ 
ಹೆಣ್ಣು : ಮನದಾಸೆಯೇ ನಿಜವಾದರೇ ಕನಸೆಲ್ಲವೂ ನನಸಾದರೇ
            ಬಾಳೆಲ್ಲ ಆನಂದ ಮಾತೆಲ್ಲ ಮಕರಂದ ಸಡಗರ ಅನುದಿನ
ಗಂಡು : ಮನದಾಸೆಯೇ ನಿಜವಾದರೇ ಕನಸೆಲ್ಲವೂ ನನಸಾದರೇ
            ಬಾಳೆಲ್ಲ ಆನಂದ ಮಾತೆಲ್ಲ ಮಕರಂದ ಸಡಗರ ಅನುದಿನ
--------------------------------------------------------------------------------------------------

ಆಪಧ್ಬಾಂಧವ (೧೯೮೭) - ಹುಣಿಮೆಯ ಚಂದ್ರ ಚೆಂದ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,

ಹುಣ್ಣಿಮೆಯ ಚಂದ್ರ ಚೆಂದ ಅರಳಿದ ಹೂವು ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ

ನನ್ನ ನೂರು ನೋವ ಮರೆಸಿ ಹರುಷವ ನೀನು ತಂದೆ
ನೆಮ್ಮದಿ ನೀನು ತುಂಬಿದೆ ಬದುಕಲಿ ಒಂದಾದೆ
ಬಾಡಿಹೋದ ಆಸೆ ಎಂಬ ಲತೆಯಲ್ಲಿ ಜೀವ ತಂದೆ
ಹಸಿರನು ನೀ ತುಂಬಿದೆ ಉಸಿರನು ನೀ ತಂದೆ
ಯಾವ ದೈವ ತಂದ ವರವು ತಾರೆಯ ಸಾಲಿನಿಂದ ಜಾರಿದ ಹೂವು
ಹುಣ್ಣಿಮೆಯ ಚಂದ್ರ ಚೆಂದ ಅರಳಿದ ಹೂವು ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ

ಯಾವ ತಾಯಿ ಮಡಿಲ ಹೂವು ತಿಳಿಸುವರಾರು ಇಲ್ಲ
ಅರಿಯುವ ಆಸೆಯೂ ಏತಕೋ ಇಂಗಿಲ್ಲ
ಮಾತು ಮುದ್ದು ಮುದ್ದು ಆಡೋ ವಯಸಲಿ ಹೀಗಾಯಿತೇ
ಮನಸಿನ ಭಾವನೆ ಎಲ್ಲ ಕಣ್ಣಲೇ ಸೆರೆಯಾಯ್ತೆ
ನಿನ್ನ ಮೇಲೆ ಇಂಥಾ ಮೋಹ ಬಂದಿತು ಏಕೋ ಕಾಣೆ ದೇವರ ಆಣೆ
ಹುಣ್ಣಿಮೆಯ ಚಂದ್ರ ಚೆಂದ ಅರಳಿದ ಹೂವು ಚೆಂದ
ನನಗೆ ಎಂದೆಂದಿಗೂ ಮಗುವೇ ನೀನೇ ಚೆಂದ
--------------------------------------------------------------------------------------------------

ಆಪಧ್ಬಾಂಧವ (೧೯೮೭) - ಯಾರು  ನನ್ನ ಕೇಳೋರಿಲ್ಲ ನನ್ನೊರಿಲ್ಲ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,

ಕನ್ನಡ ಬಾಂಧವರೇ ಅಭಿಮಾನಿಗಳೇ ಆತ್ಮೀಯರೇ.. ಶ್!...
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..
ಯಾರಿಗೂ ನಾನು ಹೆದರೋನಲ್ಲ ಸ್ನೇಹವನ್ನೂ ಮರೆಯೋನಲ್ಲ
ನನ್ನ ಮನಸು ಅರಿತವರಿಲ್ಲ..
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..

ರಸ್ತೆಯಲ್ಲಿ ಅವಸರ ಬಾಳಿನಲ್ಲೂ ಅವಸರ ತಾಳ್ಮೆಯಿಲ್ಲ ನೋಡಿ ಯಾರಿಗೂ..
ಅಡ್ಡದಾರಿ ಹಿಡಿದರೇ .. ಆಕ್ಸಿಡೆಂಟ್ ಥರಥರ ಮರೆಯದಿರಿ ನೀವೆಂದಿಗೂ.. ಹಾಂ..!
ಪಾಪವನ್ನು ತೊಳೆಯಲೂ ಮನುಜ ಗುಡಿಯ ಕಟ್ಟಿದ ಗುಡಿಯ ಎದುರೇ ಪಾಪ ಮಾಡಿದ
ದಾಹವನ್ನು ತಣಿಸಲೂ ಕೆರೆಗಳನ್ನೂ ಕಟ್ಟಿದ ಮಧುವಿನಿಂದ ದಾಹ ತಣಿಸಿದ
ಮನಃಸಾಕ್ಷಿಗೇ ಹೆದರಿ ನಡೆಯಬೇಕು ಎಲ್ಲ ಆದರಿಲ್ಲಿ ತಲೆಕೆಳಗೆಲ್ಲ..
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..
ಯಾರಿಗೂ ನಾನು ಹೆದರೋನಲ್ಲ ಸ್ನೇಹವನ್ನೂ ಮರೆಯೋನಲ್ಲ
ನನ್ನ ಮನಸು ಅರಿತವರಿಲ್ಲ..
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..

ನೀತಿಯಿದೆ ಬಲಗಡೆ ನ್ಯಾಯವಿದೇ ಎಡಗಡೆ ಮದ್ಯದಲ್ಲಿ ಲಂಚ ಮೆರೆದಿದೇ ..
ಅನ್ನ ಇಲ್ಲಿ ಚೆಲ್ಲಿದೇ .. ಹಸಿವು ಅಲ್ಲಿ ಅಳುತಿದೆ ಇದಕೆ ಎಂದೂ ಕೊನೆಯ ಕಾಣುವೇ ..
ಪದವಿಯಿಂದ ಮೆರೆಯುವ ಸ್ವಾರ್ಥದಿಂದ ನಡೆಯುವ ದ್ರೋಹಿಗಳಿಗೇ ನಾ ದಾನವ.. ಹಾಂ!
ಬಡವ ಸುರಿಸೋ ಕಂಬನಿ ಒರೆಸುವಾಸೇ ಮನದಲಿ ಹೃದಯದಲಿ ನಾ ಮಾನವ
ನ್ಯಾಯ ನೀತಿಗಾಗಿಯೇ ನಿಲ್ಲ ಬಲ್ಲೆ ನಿತ್ಯ ಕಷ್ಟದಲ್ಲಿ ಆಪಧ್ಬಾಂಧವ .. ಬಾಂಧವ.. ಬಾಂಧವಾ..
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..
ಯಾರಿಗೂ ನಾನು ಹೆದರೋನಲ್ಲ ಸ್ನೇಹವನ್ನೂ ಮರೆಯೋನಲ್ಲ
ನನ್ನ ಮನಸು ಅರಿತವರಿಲ್ಲ..
ಯಾರು ನನ್ನ ಕೇಳೋರಿಲ್ಲಾ ... ನನ್ನೊರೀಲ್ಲ .. ಅನ್ನೋರಿಲ್ಲ..
------------------------------------------------------------------------------------------------

No comments:

Post a Comment