1171. ಆರದ ಗಾಯ (೧೯೮೦)

ಆರದ ಗಾಯ ಚಲನಚಿತ್ರದ ಹಾಡುಗಳು 
  1. ಬೆದರುವೇ ಏಕೆ ಹೀಗೇ 
  2. ನನ್ನ ಬಾಳ ಬಾನಿನಲ್ಲಿ 
  3. ಬಿಡು ಬಿಡು ಕೋಪವ ಕಲಹವು ಏತಕೆ 
  4. ನಿನ್ನೆ ನಿನ್ನೆ 
  5. ಏನೋ ಅರಿಯೇ ನಾನು 
ಆರದ ಗಾಯ (೧೯೮೦) - ಬೆದರುವೇ ಏಕೆ ಹೀಗೇ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಹೆಣ್ಣು : ಹೇಹೇಹೇಹೇ .. ಬೆದರುವೇ ಏಕೆ ಹೀಗೇ ಬೆದರುವೇ ಬೆವರುವೇ ಏಕೇ ಗಂಡೇ ಬೆವರುವೇ
          ಬೆದರುವೇ ಏಕೆ ಹೀಗೇ ಬೆದರುವೇ ಬೆವರುವೇ ಏಕೇ ಗಂಡೇ ಬೆವರುವೇ
          ಹೆಣ್ಣು ಕಂಡಾಗ ಬಳಿಗೆ ಬಂದಾಗ ಏಕೇ ನಡುಗುವೇ
          ಹೆಣ್ಣು ಕಂಡಾಗ ಬಳಿಗೆ ಬಂದಾಗ ಏಕೇ ನಡುಗುವೇ
          ಬೆದರುವೇ ಏಕೆ ಹೀಗೇ ಬೆದರುವೇ ಬೆವರುವೇ ಏಕೇ ಗಂಡೇ ಬೆವರುವೇ

ಹೆಣ್ಣು : ಹುಲಿಯಲ್ಲವೋ ಹ್ಹ  ಹಾವಲ್ಲವೋ ಹೂವಂತೇ ಚೆಲುವಾದ ಹೆಣ್ಣು
          ಬೇಕಾಗಿದೆ ಈ ಹೆಣ್ಣಿಗೇ ನೀ ಕೊಡುವ ಒಲವೆಂಬ ಹಣ್ಣು ನಿನಗಿನ್ನೂ ಅನುಮಾನವೇನು
          ನಿನಗಿನ್ನೂ ಅನುಮಾನವೇನು ನನ್ನಲ್ಲಿ ಸಂಕೋಚವೇನು (ಅಹ್ಹಹ್ಹಾ.. ಅಹ್ಹಹ್ಹಾ )
          ಬೆದರುವೇ ಏಕೆ ಹೀಗೇ ಬೆದರುವೇ ಬೆವರುವೇ ಏಕೇ ಗಂಡೇ ಬೆವರುವೇ

ಹೆಣ್ಣು : ನಿನಗಿಲ್ಲವೇ ಈ ಆಸೆಯೂ ವೈರಾಗ್ಯ ಹೀಗೇಕೆ ಬಂತು
          ಕೊಡಲಾರೆಯಾ ಮಾತೊಂದನೂ ಬಿಡಲಾರೇ ನನ್ನನ್ನೂ ಎಂದೂ
         ನಿನ್ನಾಸೆ ನಾ ತಾಳಲಾರೇ
         ನಿನ್ನಾಸೆ ನಾ ತಾಳಲಾರೇ ಬಾ ದೂರ ನಾ ನಿಲ್ಲಲಾರೇ ..
ಗಂಡು : ಹ್ಹ.. ಹ್ಹ.. ಹ್ಹ.. ಒಹೋ  ಅವಸರ ಏಕೆ ಹೆಣ್ಣೇ ತಡೆದುಕೋ (ಹ್ಹಾ) ವಯಸ್ಸಿದೇ ಇನ್ನೂ ನಿನಗೇ ತಿಳಿದಿಕೋ
           ಅವಸರ ಏಕೆ ಹೆಣ್ಣೇ ತಡೆದುಕೋ (ಹ್ಹಾ) ವಯಸ್ಸಿದೇ ಇನ್ನೂ ನಿನಗೇ ತಿಳಿದಿಕೋ
           ಮದುವೇ ಮುಗಿದಿಲ್ಲ ತಾಳಿ ಕಟ್ಟಿಲ್ಲ ಜಾಣೆ ಅರಿತಿಕೋ
           ಮದುವೇ ಮುಗಿದಿಲ್ಲ ತಾಳಿ ಕಟ್ಟಿಲ್ಲ ಜಾಣೆ ಅರಿತಿಕೋ
           ಲಲಲಲಲಲಾ  ಲಲಲಲಲಲಾ  ಲಲಲಲಲಲಾ  
           ಲಲಲಲಲಲಾ  ಲಲಲಲಲಲಾ  ಲಲಲಲಲಲಾ
--------------------------------------------------------------------------------------------------------------------------

ಆರದ ಗಾಯ (೧೯೮೦) - ನನ್ನ ಬಾಳ ಬಾನಿನಲ್ಲಿ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ 

ಆಆಆ... ಆಆಆ ...
ನನ್ನಾ ... ಬಾಳ ಬಾನಿನಲ್ಲಿ....  ಬಾಲಚಂದಿರ ಬಂದ
ನನ್ನಾ ... ಬಾಳ ಬಾನಿನಲ್ಲಿ....  ಬಾಲಚಂದಿರ ಬಂದ
ತೂಗುವ ತೊಟ್ಟಿಲ ತುಂಬ ಲಾಲಿ ಹಾಡು ತುಂಬಿದ
ನನ್ನಾ ... ಬಾಳ ಬಾನಿನಲ್ಲಿ....  ಬಾಲಚಂದಿರ ಬಂದ

ಕಂಗಳು ತೆರೆಯುವಾಗ ತಾರೇ ಮಿನುಗಿದಂತೇ
ಕಂಗಳು ತೆರೆಯುವಾಗ ತಾರೇ ಮಿನುಗಿದಂತೇ
ತುಟಿಯು ಆಡುವಾಗ ಹೂವೂ ಅರಳಿದಂತೇ
ಅಳುವಾ ಧನಿ ಕೂಡ ಸಂಗೀತದಂತೇ ..
ನನ್ನಾ ... ಬಾಳ ಬಾನಿನಲ್ಲಿ....  ಬಾಲಚಂದಿರ ಬಂದ

ಕತ್ತಲು ತುಂಬಿರುವಾಗ ಜ್ಯೋತಿಯಂತೆ ಬಂದ
ಕತ್ತಲು ತುಂಬಿರುವಾಗ ಜ್ಯೋತಿಯಂತೆ ಬಂದ
ಬಂಜೆಯ ಮಡಿಲ ತುಂಬಿ ಅಮ್ಮಾ ಅಮ್ಮಾ ಎಂದ
ನಗುವಿಂದ ಮನತುಂಬ ಆನಂದ ತಂದ
ನನ್ನಾ ... ಬಾಳ ಬಾನಿನಲ್ಲಿ....  ಬಾಲಚಂದಿರ ಬಂದ
ತೂಗುವ ತೊಟ್ಟಿಲ ತುಂಬ ಲಾಲಿ ಹಾಡು ತುಂಬಿದ
ನನ್ನಾ ... ಬಾಳ ಬಾನಿನಲ್ಲಿ....  ಬಾಲಚಂದಿರ ಬಂದ
--------------------------------------------------------------------------------------------------------------------------

ಆರದ ಗಾಯ (೧೯೮೦) - ಬಿಡು ಬಿಡು ಕೋಪವ ಕಲಹವು ಏತಕೆ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ಬಿಡು ಬಿಡು ಕೋಪವ ಕಲಹವು ಏತಕೆ ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೇ ...
           ಬಿಡು ಬಿಡು ಕೋಪವ ಕಲಹವು ಏತಕೆ ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೇ ...
           ಬಿಡು ಬಿಡು ಕೋಪವ

ಗಂಡು : ಚಿನ್ನದಾ ಬೊಂಬೆ ಇರಲೂ ಮಣ್ಣಿನ ಬೊಂಬೆ ಏಕೇ
            ಅಮೃತವೇ ಬಳಿಯಲಿರಲು ನೀರಿನಾ ಹಂಗೂ ಬೇಕೇ
            ನಿನ್ನ ಕಂಡ ಮೇಲೆ ಬೇರೆ ಹೆಣ್ಣಿನಾಸೇ   
           ನಿನ್ನ ಕಂಡ ಮೇಲೆ ಬೇರೆ ಹೆಣ್ಣಿನಾಸೇ  ಮನದಲ್ಲಿ ಬರುವುದೇ  ...
           ಬಿಡು ಬಿಡು (ಹೂಹೂ) ಕೋಪವ (ಹೂಹೂ) ಕಲಹವು ಏತಕೆ
           ಕಾದಿರುವೇ ಬಾ ಕೊಡುವೇ (ಹ್ಹಾ ) ಪ್ರಣಯದ ಕಾಣಿಕೇ ...
          ಬಿಡು ಬಿಡು (ಹೂಹೂ  ಹ್ಹ ಹ್ಹ ಹ್ಹ ಹ್ಹಾ )

ಗಂಡು : ಸವಿಯಾದ ಮಾತನಾಡಿ ನಾ ಮೋಸ ಮಾಡಲಾರೇ
            ನೀ ದೂರವಾದ ಮೇಲೆ ನಾ ಒಂಟಿ ಬಾಳಲಾರೇ
            ನಿನ್ನ ಬಿಟ್ಟು ಬೇರೇ ಹೆಣ್ಣ ಸೇರಲಾರೇ
            ನಿನ್ನ ಬಿಟ್ಟು ಬೇರೇ ಹೆಣ್ಣ ಸೇರಲಾರೇ ಅನುಮಾನವೇತಕೇ ...
ಹೆಣ್ಣು : ಅಆಆ .. ಬಿಡು ಬಿಡು (ಹ್ಹ ಹ್ಹ)  ಕೋಪವ (ಹೂಂಹೂಂ ) ಕಲಹವು ಏತಕೆ
          ಕಾದಿರುವೇ ಬಾ ಕೊಡುವೇ ಪ್ರಣಯದ ಕಾಣಿಕೇ ...
          ಬಿಡು ಬಿಡು ಕೋಪವ ಕಲಹವು ಏತಕೆ
--------------------------------------------------------------------------------------------------------------------------

ಆರದ ಗಾಯ (೧೯೮೦) - ನಿನ್ನೆ ಏಯ್  ನಿನ್ನೆ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ 

ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ ಬಾರೋ ರೂರೂರೂರೂರೂ .. ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ ಬಾರೋ ರೂರೂರೂರೂರೂ

ಈ ಹೆಣ್ಣಿನ ಅಂದ ನೋಡದೆ ಎಲ್ಲಿಗೆ ಹೋಗುವೆ ನೀನು
ಮೈಯೆಲ್ಲವೂ ಹೂವಿನಂತಿದೆ ಅಧರ ತುಂಬಿದ ಜೇನು
ಈ ಹೆಣ್ಣಿನ ಅಂದ ನೋಡದೆ ಎಲ್ಲಿಗೆ ಹೋಗುವೆ ನೀನು
ಮೈಯೆಲ್ಲವೂ ಹೂವಿನಂತಿದೆ ಅಧರ ತುಂಬಿದ ಜೇನು
ಚೆಲುವು ನಿನಗೆ ಒಲವು ನಿನಗೆ ನೀನು ನನಗೆ ಬಾ... ನಿನ್ನೇ ಏಯ್ ನಿನ್ನೇ ...ಹ್ಹಾ..
ನಿನ್ನೇ ನಿನ್ನೇ ರಾಜ ನೋಡು ನನ್ನಾ ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ ಬಾರೋ ರೂರೂರೂರೂರೂ

ಸಿಂಗಾರಿಯ ಬಂಗಾರದ ಮೈಯ್ಯ ಬಣ್ಣ ನೋಡು
ಈ ಕಂಗಳ ಮಿಂಚ ಹೊಳಪಲ್ಲಿ ಒಮ್ಮೆ ಮುಳುಗಿ ಆಡು
ಸಿಂಗಾರಿಯ ಬಂಗಾರದ ಮೈಯ್ಯ ಬಣ್ಣ ನೋಡು
ಈ ಕಂಗಳ ಮಿಂಚ ಹೊಳಪಲ್ಲಿ ಒಮ್ಮೆ ಮುಳುಗಿ ಆಡು
ಎಲ್ಲಾ ಮರೆವೆ ನನ್ನ ಬೆರೆವೆ ಆಹಾ ಏನುವೇ ... ಆಆಆಆ... ನಿನ್ನೇ ಏಯ್ ನಿನ್ನೇ ...
ನಿನ್ನೇ ನಿನ್ನೇ ರಾಜ ನೋಡು ನನ್ನಾ ಇಲ್ಲಲ್ಲ ಅಲ್ಲಿಗೆ ಬಾರೋ ಯಾರಿಲ್ಲ ಮೆಲ್ಲಗೆ ಬಾರೋ ಬಾರೋ ..
ರೂರೂರೂರೂರೂ ಬಾರೋ ಬಾ ಬಾರೋ
--------------------------------------------------------------------------------------------------------------------------

ಆರದ ಗಾಯ (೧೯೮೦) - ಏನೋ ಅರಿಯೇ ನಾನು 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ 

ಏನೂ ಅರಿಯೇ ನಾನು ಬಿಡು ಬಿಡು ಬಿಡು ನನ್ನ ನೀನು
ಏನೂ ಅರಿಯೇ ನಾನು ಬಿಡು ಬಿಡು ಬಿಡು ನನ್ನ ನೀನು

ಹೇ.. ಮಾತಲಿ ನೋವ ತುಂಬದಿರಿ ಭೀತಿಯ ತಂದು ನನ್ನ ಕೆಡಸದಿರಿ
ಅಬಲೆಯ ಜೀವ ಹೀರದಿರಿ ನೋವಲಿ ನನ್ನ ನೀವೂ ನೂಕದಿರಿ
ಕರವ ಮುಗಿವೇ ನಿಜವ ನುಡಿವೇ ಲಲಲಲಲಲಲ ...
ಏನೂ ಅರಿಯೇ ನಾನು ಬಿಡು ಬಿಡು ಬಿಡು ನನ್ನ ನೀನು

ದುರುದುರು ಎಂದು ನೋಡದಿರಿ ದುರುಳರ ಹಾಗೆ ನನ್ನ ಕಾಡದಿರಿ .. ಹ್ಹಾ..
ದಾನವರಂತೆ ಆಡದಿರಿ ಹೆದರಿಸಿ ನನ್ನ ಹೀಗೆ ಕೊಲ್ಲದಿರಿ
ಬೆವರಿ ಹೋದೆ ನಡುಗಿ ನಿಂತೇ ಅಆಆಆಆ
ಏನೂ ಅರಿಯೇ ನಾನು ಬಿಡು ಬಿಡು ಬಿಡು ನನ್ನ ನೀನು
ಏನೂ ಅರಿಯೇ ನಾನು ಬಿಡು ಬಿಡು ಬಿಡು ನನ್ನ ನೀನು
--------------------------------------------------------------------------------------------------------------------------

No comments:

Post a Comment