1296. ಆಗ್ನಿ ಪರ್ವ (1987)

ಆಗ್ನಿ ಪರ್ವ ಚಲನಚಿತ್ರದ ಹಾಡುಗಳು
  1. ಎಲ್ಲೆಲ್ಲು ಹರುಷ .. ಓ.. ಉಲ್ಲಾಸ ಮಿಡಿತ 
  2. ಅಕ್ಕರೆಯ ಮುದ್ದು ಗಿಣಿ
  3. ಬಾನಾಡಿಯಂತೆ ಹಾರಾಡುವೇಯೆ
ಆಗ್ನಿ ಪರ್ವ (1987) - ಎಲ್ಲೆಲ್ಲು ಹರುಷ .. ಓ.. ಉಲ್ಲಾಸ
ಸಂಗೀತ : ವೈದ್ಯನಾಥನ್, ಸಾಹಿತ್ಯ :  ಗಾಯನ :ಎಸ್.ಪಿ.ಬಿ, ಎಸ್.ಜಾನಕಿ

ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಗಂಡು :  ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
              ಎಂದೆಂದು ಚಿಗುರೆ ಇಲ್ಲಿ ರಮ್ಯ ವಸಂತ..
ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
             ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
             ಎಂದೆಂದು ಚಿಗುರೆ ಇಲ್ಲಿ ರಮ್ಯ ವಸಂತ
             ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
             ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು

ಹೆಣ್ಣು : ಮಲ್ಲೆ ಪರಿಮಳದಂತ ಕಿಲ ಕಿಲ ಕಿರು ನಗೆ ಅಂದ
ಗಂಡು: ಓ...ಇರಲೀ ನಗೆಯಲ್ಲಿ ಉಲ್ಲಾಸ ಮಕರಂದ
ಹೆಣ್ಣು; ಸೊಗಸಾದ ಸಂತೋಷವೇ.. ಶುಭಯೋಗವಂತೆ..
ಗಂಡು: ಹಿತವಾದ ಮಂದಹಾಸ ಶುಭ ತಾರೆಯಂತೆ..
ಹೆಣ್ಣು :  ಪ್ರೇಮವಿಲ್ಲಿ...             ಗಂಡು : ದೈವವಂತೆ...
ಹೆಣ್ಣು : ಪ್ರೀತಿ  ಮಾತೆ..             ಗಂಡು: ಜೇನಿನಂತೆ
ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
             ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
             ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು

 ಹೆಣ್ಣು: ಆಹಾ... ಏನಿದು ಇಂಥ ಮೈನಾ ಹಕ್ಕಿಯ ಗೀತೆ
             ಹಚ್ಚ ಹಸುರಿನ ತಂಪು ಮೆತ್ತೆ ಹಾಸಿಗೆಯಂತೆ
ಗಂಡು : ಇದೇ ರೀತಿ ಎಂದೂ ನಾವು ಜೊತೆ ಸೇರಬೇಕು...
ಹೆಣ್ಣು: ಇದೇ ಸುಖ ಹೀಗೆ ನಾವು ಸದಾ ಕಾಣಬೇಕು
ಗಂಡು : ಪ್ರೇಮವಿಲ್ಲಿ....               ಹೆಣ್ಣು: ದೈವವಂತೆ
ಗಂಡು: ಪ್ರೀತಿಮಾತೇ....               ಹೆಣ್ಣು: ಜೇನಿನಂತೆ...
ಹೆಣ್ಣು : ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
ಇಬ್ಬರು :  ಎಲ್ಲೆಲ್ಲೂ ಹರುಷ ಓ.... ಉಲ್ಲಾಸ ಮಿಡಿತ..
              ಎಂದೆಂದು ಚಿಗುರೆ ಇಲ್ಲಿ ರಮ್ಯ ವಸಂತ..
              ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
              ಕೂಕೂ.. ಕುಕ್ಕೂಕು.. ಕೂಕೂ.. ಕುಕ್ಕೂಕು
---------------------------------------------------------------------

ಆಗ್ನಿ ಪರ್ವ (1987) - ಅಕ್ಕರೆಯ ಮುದ್ದು ಗಿಣಿ
ಸಂಗೀತ : ವೈದ್ಯನಾಥನ್, ಸಾಹಿತ್ಯ :  ಗಾಯನ :ಎಸ್.ಪಿ.ಬಿ, ಎಸ್.ಜಾನಕೀ

ಗಂಡು: ಹೋಯ್... ಅಕ್ಕರೆಯ ಮುದ್ದು ಗಿಣಿ
            ಹೋಯ್.. ಸಕ್ಕರೆಯು ನಕ್ಕರೇ...ನೀ..
            ಬಳುಕುತ್ತ ಬಂದರೇ ನೀ ನಲ್ಲೆ ನನ್ನ ಹೃದಯವು ಕರಗುವ ಮಂಜಿನ ಹನಿ...
ಹೆಣ್ಣು: ಮುತ್ತಿನಂಥ ಮಾತಿನಲ್ಲೇ...ಕರದೆ ನೀ ಪ್ರಿತಿಯಲ್ಲಿ
          ಹೃದಯದ ಬಿತ್ತಿ ಒಲವಿನ ರಂಗವಲ್ಲಿ ಹರಡಿದೆ ಹರುಷದಲಿ

ಹೆಣ್ಣು: ಧುಮುಕುವ ಧಾರೆ ಹರಿಯುತ ಸಾಗಿ ಬೆರೆಯುವದಲ್ಲಿ ಕಡಲಿರುವಲ್ಲಿ
ಇಬ್ಬರು: ಜೋತೆ ಜೊತೆಯಾದೆ ನಲಿಯುವ ನಾವು ಧರೆಯಾ ಹಸಿರ ಮಡಿಲಲ್ಲಿ
ಹೆಣ್ಣು: ಸಂಜೆ ಗಾಳಿ ಕಂಗಾಲಾಗಿ ದುಂಬಿ ಅಲ್ಲಿ ಹೇಳಿತೇನು
ಗಂಡು: ಮುಂಜಾನೆಯ ಬಿರಿದಾ ಹೂವ ಮುದ್ದು ಹನಿ ಕಂಡೆ ಏನು...
ಹೆಣ್ಣು: ಮುತ್ತಿನಂಥ ಮಾತಿನಲ್ಲೇ...ಕರದೆ ನೀ ಪ್ರಿತಿಯಲ್ಲಿ
          ಹೃದಯದ ಬಿತ್ತಿ ಒಲವಿನ ರಂಗವಲ್ಲಿ ಹರಡಿದೆ ಹರುಷದಲಿ

ಗಂಡು: ತುಟಿಗಳ ಮೇಲೆ ಚುಂಬನ ಧಾರೆ ಕಾಮನಬಿಲ್ಲ ಏರುವ ಬಾರೇ...
ಇಬ್ಬರು: ಅಲೆ ಅಲೆಯಾಗಿ ಬಯಕೆಯ ರಾಗ ಮಿಡಿದಾಕ್ಷಣವೇ..ಅನುರಾಗ..
ಗಂಡು: ಮುದ್ದಾಡುವೇ ಎಂದೂ ಹೀಗೆ ವಯ್ಯಾರಿಯ ಲಜ್ಜೆ ಏಕೆ
ಹೆಣ್ಣು: ಸಂಗಾತಿಯೇ ಕದ್ದು ಕದ್ದು ಬಂಗಾರದ ಮುತ್ತು ಜೋಕೆ
ಗಂಡು: ಹೋಯ್... ಅಕ್ಕರೆಯ ಮುದ್ದು ಗಿಣಿ
            ಹೋಯ್.. ಸಕ್ಕರೆಯು ನಕ್ಕರೇ...ನೀ..
            ಬಳುಕುತ್ತ ಬಂದರೇ ನೀ ನಲ್ಲೆ ನನ್ನ ಹೃದಯವು ಕರಗುವ ಮಂಜಿನ ಹನಿ...
ಹೆಣ್ಣು: ಮುತ್ತಿನಂಥ ಮಾತಿನಲ್ಲೇ...ಕರದೆ ನೀ ಪ್ರಿತಿಯಲ್ಲಿ
          ಹೃದಯದ ಬಿತ್ತಿ ಒಲವಿನ ರಂಗವಲ್ಲಿ ಹರಡಿದೆ ಹರುಷದಲಿ
---------------------------------------------------------------------

ಆಗ್ನಿ ಪರ್ವ (1987) - ಬಾನಾಡಿಯಂತೆ ಹಾರಾಡುವೇಯೆ
ಸಂಗೀತ : ವೈದ್ಯನಾಥನ್, ಸಾಹಿತ್ಯ :  ಗಾಯನ :ಎಸ್.ಪಿ.ಬಿ

ಬಾನಾಡಿಯಂತೆ ಹಾರಾಡುವೆಯ ಬಾನಂಚಿನಲಿ ಬರೆದಿತು ಹೀಗೆ
ಬಾಳದಾರಿ ಕಲ್ಲು ಮುಳ್ಳು ಜೋಪಾನ

ಹಗಲೆಲ್ಲ ಬೆಂದು ಬೆವರಲ್ಲಿ ಮಿಂದು ಮನವು ಮುದುಡಿ ಹೀಗಾಯಿತ್ತಲ್ಲ
ನನಗಾಗಿ ಕಾದ ತಂಗವ್ವನನು ನೋಡಿ ಮರೆತೆ ದುಮ್ಮಾನವೆಲ್ಲ
ಆಸರೆಯ ತೂಗುಯ್ಯಾಲೇ ವಾಸವು ಎಲ್ಲೋ
ಮರಿ ಹಕ್ಕಿ ರೆಕ್ಕೆ ಬಡಿವ ಸಂತೋಷವೆಲ್ಲೋ..
ಎಳೆ ಜೀವದಾ ಬವಣೆ ಸುಖವಿಲ್ಲಿ ಕಾಣೆ..
ಬಾನಾಡಿಯಂತೆ ಹಾರಾಡುವೆಯ ಬಾನಂಚಿನಲಿ ಬರೆದಿತು ಹೀಗೆ
ಬಾಳದಾರಿ ಕಲ್ಲು ಮುಳ್ಳು ಜೋಪಾನ

ಒಡಹುಟ್ಟಿದಂಥ ಜೊತೆ ಜೀವವನ್ನು ಸಲುಹಿ ಬೆಳಿಸಿ ಗುರಿ ಮುಟ್ಟುವಾಸೆ
ಮೃದುವಾದ ಹೂವು ಜೋಪಾನ ಮಾಡಿ ನಲಿಸಿ ನಗಿಸಿ ಕಾಪಾಡುವಾಸೆ
ಮಳೆಗಾಗೆ ನಿಂತ ತಾಳ ಸುಳಿದಾಡಿದಾಗ ಮಳೆಗಾಗಿ ಕಾದ ಭೂಮಿ ಹಸನಾಯಿತೇನು
ಮಮತೆಯ ಬಳ್ಳಿಗೆ ಆಧಾರವೇನು..
ಬಾನಾಡಿಯಂತೆ ಹಾರಾಡುವೆಯ ಬಾನಂಚಿನಲಿ ಬರೆದಿತು ಹೀಗೆ
ಬಾಳದಾರಿ ಕಲ್ಲು ಮುಳ್ಳು ಜೋಪಾನ
---------------------------------------------------------------------

No comments:

Post a Comment