1371. ಅಮರ ಜ್ಯೋತಿ (೧೯೮೫)



ಅಮರ ಜ್ಯೋತಿ ಚಲನಚಿತ್ರದ ಹಾಡುಗಳು
  1. ತಂದೆ ತಾಯಿಯು ನೀನೇ .. 
  2. ಅಬ್ಬಬ್ಬಾ ಈ ಹುಡುಗಿ ಎಂಥ ಚೆನ್ನ 
  3. ಇನ್ನೂ ಇನ್ನೂ ನೋಡೋ ಆಸೇ ಅರಳಿದೇ 
  4. ಸಂಜೆಯ ರಂಗು ಬಂದಿದೆ 
  5. ನಿನ್ನೇ ಮಾಡಿದ ಪಾಪ 
  6. ಹೆಣ್ಣೂ .. ನಿನ್ನದಲ್ಲಾ.. ಹೊನ್ನೂ ನಿನ್ನದಲ್ಲಾ.. 
ಅಮರ ಜ್ಯೋತಿ (೧೯೮೫) - ತಂದೆ ತಾಯಿಯೂ ನೀನೇ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ :  ಎಸ್.ಜಾನಕೀ 

ನೀನೇ ಸಾರಥಿಯಾಗಿ ರಥವನೇರಿದಳೂ.. ನೀನೇ ಧರ್ಮಾಧರ್ಮಗಳ ಸೂಕ್ಷ್ಮ ತಿಳಿಸಿರಲೂ ... 
ನೀನೇ ಅನವರತ ಕೈಯ್ಯಿ ಹಿಡಿದೂ ನಡೆಸಿರಲೂ .. ಚಿಂತೆಯೇನಿದೆ ನಮಗೇ ಕೃಷ್ಣಾ... ಕೃಷ್ಣಾ... ಆಆಆಆ ... 
ತಂದೆ ತಾಯಿಯೂ ನೀನೇ ಬಂಧೂ ಬಳಗವೂ ನೀನೇ... 
ಎಂದೆಂದೂ ಗುರುದೈವ ಎಲ್ಲ ನೀನೇ...  ಅಂಧಕಾರದೀ ನೀನೆಲ್ಲಿ ಬೆಳಕಾಗಿ ಜೊತೆಯಾಗಿ 
ದಾರಿ ತೋರೋ ಬಂದು ದೇವಕಿ ಕಂದ ಕೃಷ್ಣಾ...ಆಆಆ  ಕೃಷ್ಣಾ...  ಆಆಆ 

ತನ್ನ ಸ್ವಾರ್ಥವ ಮರೆತೂ ತನ್ನ ವೇದನೇ ಮರೆತೂ ತಾನೂ ತನ್ನದೂ ಎಂಬ ಮಾತನ್ನೇ ಮರೆತೂ 
ತಾನೂರಿದು ಬೆಳಕನ್ನೂ ಕೊಡುವ ಜ್ಯೋತಿಯ ಹಾಗೇ .. 
ತಾ ಸೇವೆತೂ ಪರಿಮಳವ ಕೊಡುವ ಗಂಧದ ಹಾಗೇ .. 
ಬಾಳುವಾತನೇ ನಿಜವಾದ ಕರ್ಮಯೋಗೀ .. 
ಆತನೇ ನಿಜವಾದ ಆತ್ಮಜ್ಞಾನೀ .. 
ಆತನೇ ನಿಜವಾದ ಅಮರ ಜೀವೀ .. 
---------------------------------------------------------------------------------------

ಅಮರ ಜ್ಯೋತಿ (೧೯೮೫) - ಅಬ್ಬಬ್ಬಾ ಈ ಹುಡುಗಿ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಎಸ್.ಜಾನಕೀ 

ಹೆಣ್ಣು : ಲಾ.. ಲಲಲಲಾ  ಲಲಲಲಾ  ಲಲಲಲಾ  ಆ.. ಹ್ಹಾ... 
ಗಂಡು : ಅಬ್ಬಬ್ಬಾ ಈ ಹುಡುಗಿ ಎಂಥಾ ಚೆನ್ನಾ.. ಅಮ್ಮಮ್ಮಾ ಈ ಬೆಡಗಿ ಎಂಥಾ ಚೆನ್ನ 
            ಕಣ್ಣೋಟ ಇವಳಾಟ ಹೀತವಾಗಿದೇ.. ಮೈಮಾಟ ಬಳುಕಾಟ ಸೊಗಸಾಗಿದೇ.. 
            ಅಬ್ಬಬ್ಬಾ (ಆ) ಈ ಹುಡುಗಿ ಎಂಥಾ ಚೆನ್ನಾ.. (ಲಲಲ್ಲಾ) ಅಮ್ಮಮ್ಮಾ ಈ ಬೆಡಗಿ ಎಂಥಾ ಚೆನ್ನ (ಆ..ಆ..)
            ಕಣ್ಣೋಟ ಇವಳಾಟ ಹೀತವಾಗಿದೇ.. (ಹ್ಹಹ್ಹಹ್ಹ) ಮೈಮಾಟ ಬಳುಕಾಟ ಸೊಗಸಾಗಿದೇ.. 
    
ಗಂಡು : ನಯನ ನಯನ ನೋಡಲೂ.... .. (ಲಾ.. )ಮನಸೂ ಮನಸೂ ಕೂಡಲೂ .. (ಆ)
            ಸನಿಹ ಸನಿಹ ಸೇರಲೂ .. (ಅಹಾ ) ತನುವೂ ತನುವೂ ಸೋಕಲೂ .. (ಆಆ )
            ಹೊಸತನ ಬಂದಂತೇ .. (ಆಹಾ) ಹರುಷವ ಕಂಡಂತೇ ..   (ಅಹ್ಹಾ )
            ಹೊಸತನ ಬಂದಂತೇ .. (ಆ) ಹರುಷವ ಕಂಡಂತೇ ..   (ಅ )
            ಸುಖವನೂ ತಂದಂತೇ ಹಾಯಾಗಿದೇ .. 
           ಅಬ್ಬಬ್ಬಾ (ಆ) ಈ ಹುಡುಗಿ ಎಂಥಾ ಚೆನ್ನಾ.. (ಹಹ್ಹಹ್ಹ ) ಅಮ್ಮಮ್ಮಾ ಈ ಬೆಡಗಿ ಎಂಥಾ ಚೆನ್ನ (ಅಹ್ಹಹ್ಹ ..)
           ಕಣ್ಣೋಟ ಇವಳಾಟ ಹೀತವಾಗಿದೇ.. (ಹೇ ) ಮೈಮಾಟ ಬಳುಕಾಟ ಸೊಗಸಾಗಿದೇ.. (ಅಹ್ಹಹ್ಹಹ್ಹ) 

ಹೆಣ್ಣು : ಲಾ.. ಲಾಲಲಲಲ ಲಲ್ಲಲ್ಲಲ್ಲಾ ಲಾ.. ಲಾಲಲಲಲ ಲಲ್ಲಲ್ಲಲ್ಲಾ (ಲಲ ಲಲ್ಲಾ  )
          ಲಲ ಲಲ್ಲಲ್ಲಲ್ಲಾ ಲಾ.. ಲಾಲಲಲಲ ಲಲ್ಲಲ್ಲಲ್ಲಾ (ಲಲ ಲಲ್ಲಾ  )
ಗಂಡು : ಬಿಡೇನು ಬಿಡೇನು ನಿನ್ನನ್ನೂ .. (ಅಹ್ಹಹ್ಹ ) ಕೋಡುವೇ ಕೋಡುವೇ ನನ್ನನ್ನೂ .. (ಅಹ್ಹಹ್ಹಾ..)
           ಬಳಸು ಬಳಸು ತೋಳಲೀ ... (ಆ) ಚೆಲುವೇ ನನ್ನ ತನುವನೂ (ಹ್ಹಾ..ಆಆ)
           ಕೆನ್ನೆಯೂ ಕೆಂಪಾಗೀ , ತುಟಿಗಳೂ ಹೂವಾಗೀ, .. 
           ಕೆನ್ನೆಯೂ ಕೆಂಪಾಗೀ , ತುಟಿಗಳೂ ಹೂವಾಗೀ, ಸರಸದಿ ಒಂದಾಗಿ  ನಲಿದಾಡುವಾ 
           ಅಬ್ಬಬ್ಬಾ (ಈ ಹುಡುಗಿ ಎಂಥಾ ಚೆನ್ನಾ..) ಹಹ್ಹಹ್ಹ ಅಮ್ಮಮ್ಮಾ (ಈ ಬೆಡಗಿ ಎಂಥಾ ಚೆನ್ನ) ಅರೆರೇರೆರೇ .. 
           ಕಣ್ಣೋಟ ಇವಳಾಟ              ಇಬ್ಬರು : ಹೀತವಾಗಿದೇ.. ಅಹ್ಹಹ್ಹಹ್ಹ 
ಗಂಡು : ಮೈಮಾಟ ಬಳುಕಾಟ (ಸೊಗಸಾಗಿದೇ).. (ಅಹ್ಹಹ್ಹಹ್ಹಅಹ್ಹಹ್ಹ.. ) 
           ಅಬ್ಬಬ್ಬಾ (ಆ) ಈ ಹುಡುಗಿ ಎಂಥಾ ಚೆನ್ನಾ.. (ಅಹ ) ಅಮ್ಮಮ್ಮಾ (ಅ )ಈ ಬೆಡಗಿ ಎಂಥಾ ಚೆನ್ನ (ಅಹ್ಹಹ್ಹ ..)
-----------------------------------------------------------------------------------------

ಅಮರ ಜ್ಯೋತಿ (೧೯೮೫) - ಇನ್ನೂ ಇನ್ನೂ ನೋಡೋ ಆಸೇ ಅರಳಿದೇ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ  

ಗಂಡು : ಇನ್ನೂ .. ಇನ್ನೂ ನೋಡೋ ಆಸೇ ಅರಳಿದೇ
            ಮನವೂ ಮನವೂ ಬೆರೆಯೇ ತನವೂ ಕುಣಿದಿದೆ 
            ಅಂದದಾ ಮೊಗವನೂ ನೋಡಲೂ ಹೊಸ ಬಯಕೆಯೂ ನನ್ನಲ್ಲೀ ಮೂಡಲು 
            ಮೈಯ್ಯಲೀ .. ಬಿಸಿ ಬಿಸಿ  ಬಿಸಿ ಬಿಸಿ  
ಹೆಣ್ಣು : ಇನ್ನೂ .. ಇನ್ನೂ ನೋಡೋ ಆಸೇ ಅರಳಿದೇ
            ಮನವೂ ಮನವೂ ಬೆರೆಯೇ ತನವೂ ಕುಣಿದಿದೆ 
            ಅಂದದಾ ಮೊಗವನೂ ನೋಡಲೂ ಹೊಸ ಬಯಕೆಯೂ ನನ್ನಲ್ಲೀ ಮೂಡಲು 
            ಮೈಯ್ಯಲೀ .. ಬಿಸಿ ಬಿಸಿ  ಬಿಸಿ ಬಿಸಿ  
ಗಂಡು : ಇನ್ನೂ .. ಇನ್ನೂ ನೋಡೋ ಆಸೇ ಅರಳಿದೇ.. (ಓಓಓಓಓ ... ಓಓಓ )

ಗಂಡು : ತಾವರೇ..  ಮೊಗವೋ..  ನೈದಿಲೇ .. ಚೆಲುವೋ  
            ನಗುವ ಸುಮವೋ ಲತೆಯ ಮೊಗವೋ ಸೋತೂ ಹೋದೇನೂ ... 
ಹೆಣ್ಣು : ಆ.. ಆ.. ದಿನ ಮಣಿಯೋ.. ಪ್ರೇಮದಾ ಆ ಗಣಿಯೋ.. 
          ಒಲಿದಾ ಸಿರಿಯೋ ಬಂಧ ನಿಧಿಯೋ ಒಂದೂ ಅರಿಯೇನೋ .. 
          ಮಾರನ ಬಾಣವೇ ಸೋಕಿತೋ.... ಓಓಓಓ 
ಗಂಡು : ಇನ್ನೂ .. ಇನ್ನೂ ನೋಡೋ ಆಸೇ ಅರಳಿದೇ.. (ಓಓಓಓಓ ... ಓಓಓ )
ಕೋರಸ್ : ಆಆಆಆಅ ... ಆಆಆಆಅ ... ಆಆಆಆಅ ... ಆಆಆಆಅ ... 
 
ಹೆಣ್ಣು : ಬಾಳ ಬೆಳಗೋ ದೀಪದ.. ಆ ಬೆಳಕೋ 
          ಪಡೆದ ವರವೋ ಬಂಧ ಸುಖವೋ ನಾನೂ ಕಾಣೇನೂ .. 
ಗಂಡು : ಕೋಗಿಲೇ .. ದನಿಯೋ .. ಮಾರನ ಆ ಗಿಣಿಯೋ 
            ಬಯಸೀ ಬಯಸೀ ನನ್ನ ಅರಸೀ ಬಂದಾ ಕಾಂತೆಯೋ.. 
            ಜೀವದ ಜೀವವೋ.. ಕಾಣೇನೂ ... ಉಉಉಉ ಉಉಉಉ 
ಹೆಣ್ಣು : ಇನ್ನೂ .. ಇನ್ನೂ ನೋಡೋ ಆಸೇ ಅರಳಿದೇ
            ಮನವೂ ಮನವೂ ಬೆರೆಯೇ ತನವೂ ಕುಣಿದಿದೆ 
ಗಂಡು : ಅಂದದಾ ಮೊಗವನೂ ನೋಡಲೂ ಹೊಸ ಬಯಕೆಯೂ ನನ್ನಲ್ಲೀ ಮೂಡಲು 
            ಮೈಯ್ಯಲೀ .. ಬಿಸಿ ಬಿಸಿ  ಬಿಸಿ ಬಿಸಿ  
ಹೆಣ್ಣು : ಇನ್ನೂ .. ಇನ್ನೂ ನೋಡೋ ಆಸೇ ಅರಳಿದೇ.. 
          (ಓಓಓಓಓ) ... ಓಓಓ (ಆಆಆಅ) ಆಆಆ ಆಆಆ (ಹೂಂಹುಂಹುಂ) ಹೂಂಹುಂಹುಂ
-----------------------------------------------------------------------------------------

ಅಮರ ಜ್ಯೋತಿ (೧೯೮೫) - ಸಂಜೆಯ ರಂಗು ಬಂದಿದೆ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ  

ಗಂಡು : ಸಂಜೆಯಾ.. ರಂಗೂ ಬಂದಿದೆ.. ಗಾಳಿ ಬೀಸಿದೇ .. ಕಂಪು ಚೆಲ್ಲಿದೇ .. 
            ನಲಿಯುವ ವಯಸ್ಸೂ .. ಕುಣಿಯುವ ಮನಸ್ಸೂ ನಿನ್ನೀ ಸೊಗಸೂ ನೋಡಿದೇ .. 
            ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
            ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
ಹೆಣ್ಣು : ಸಂಜೆಯಾ.. ರಂಗೂ ಬಂದಿದೆ.. ಗಾಳಿ ಬೀಸಿದೇ .. ಕಂಪು ಚೆಲ್ಲಿದೇ .. 
           ನಲಿಯುವ ವಯಸ್ಸೂ .. ಕುಣಿಯುವ ಮನಸ್ಸೂ ನಿನ್ನೀ ಸೊಗಸೂ ನೋಡಿದೇ .. 
           ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
           ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
     
ಗಂಡು : ಮಾಮರದಲ್ಲಿ ಕೋಗಿಲೆಯೊಂದೂ ರಾಗ ಹಾಡಿದೇ .. 
            ಸ್ನೇಹಕೇ ತನ್ನ ಜೋಡಿಯ ನೋಡಿ ಸನಿಹ ಕೂಗಿದೇ ... 
ಹೆಣ್ಣು : ನಗು ನಗುತಿರುವ ನೈದಿಲೇ ಕಂಡೂ ಭೃಮರ ಹಾಡಿದೇ 
          ಜೇನನ ಹೀರೋ ಆಸೆಯ ಕೋರಿ ಹಾರಿ ಬಂದಿದೇ.. 
ಗಂಡು : ಇನ್ನೂ ಸೇರದೇ ಏಕೇ ಎಲ್ಲೋ ನೋಡಿದೇ .. 
            ಇನ್ನೂ ಸೇರದೇ ಏಕೇ ಎಲ್ಲೋ ನೋಡಿದೇ .. 
ಹೆಣ್ಣು : ಸಂಜೆಯಾ.. ರಂಗೂ ಬಂದಿದೆ.. ಗಾಳಿ ಬೀಸಿದೇ .. ಕಂಪು ಚೆಲ್ಲಿದೇ .. 
ಗಂಡು : ನಲಿಯುವ ವಯಸ್ಸೂ .. ಕುಣಿಯುವ ಮನಸ್ಸೂ ನಿನ್ನೀ ಸೊಗಸೂ ನೋಡಿದೇ .. 
ಹೆಣ್ಣು : ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
ಗಂಡು : ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
 
ಹೆಣ್ಣು : ನಲ್ಲನ ನಿನ್ನ ನೋಡಿದ ಮೇಲೆ ಇಚ್ಚೇ ಬಾರದೂ .. 
          ಹಗಲಿರುಳೆಲ್ಲಾ.. ನೆಮ್ಮದಿ ಇಲ್ಲ ಏನೂ ಸೇರದೂ .. 
ಗಂಡು : ನಿನ್ನನ್ನೂ ಕಂಡ ಕಂಗಳು ಬೇರೆ ಏನೂ ನೋಡದು 
            ನಿನ್ನನ್ನೇ ನೆನೆವ ಮನದಲಿ ಬೇರೆ ಏನೂ ನಿಲ್ಲದೂ .. 
ಹೆಣ್ಣು : ನಿನ್ನಾ ಸ್ನೇಹವೇ.. ಇನ್ನೂ ನನ್ನಾ ಪ್ರಾಣವೂ .. 
          ನಿನ್ನಾ ಸ್ನೇಹವೇ.. ಇನ್ನೂ ನನ್ನಾ ಪ್ರಾಣವೂ ..  
ಗಂಡು : ಸಂಜೆಯಾ.. ರಂಗೂ ಬಂದಿದೆ.. ಗಾಳಿ ಬೀಸಿದೇ .. ಕಂಪು ಚೆಲ್ಲಿದೇ .. 
ಹೆಣ್ಣು :  ನಲಿಯುವ ವಯಸ್ಸೂ .. ಕುಣಿಯುವ ಮನಸ್ಸೂ ನಿನ್ನೀ ಸೊಗಸೂ ನೋಡಿದೇ .. 
ಗಂಡು : ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
ಹೆಣ್ಣು : ಬಯಕೆ ಕಾಡಿದೇ.. ನಿನ್ನ ಒಲವಾ.. ಬೇಡಿದೆ.. 
----------------------------------------------------------------------------------------

ಅಮರ ಜ್ಯೋತಿ (೧೯೮೫) - ನಿನ್ನೇ ಮಾಡಿದ ಪಾಪಕೇ ಇಂದೂ ದಂಡನೇ  
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., 

ನಿನ್ನೇ ಮಾಡಿದ ಪಾಪಕೇ .. ಇಂದೇ ದಂಡನೇ.. 
ಇಂದೂ ಮಾಡಿದ ಪಾಪಕೇ .. ನಾಳೇ ... ದಂಡನೇ 
ಇದು ಕಲಿಗಾಲ.. ಇದು ಕಲಿಗಾಲ 
ನಿನ್ನೇ ಮಾಡಿದ ಪಾಪಕೇ .. ಇಂದೇ ದಂಡನೇ.. 
ಇಂದೂ ಮಾಡಿದ ಪಾಪಕೇ .. ನಾಳೇ ... ದಂಡನೇ...  
ಇದು ಕಲಿಗಾಲ.. ಅಹ್ಹಹ್ಹ .. ಇದು ಕಲಿಗಾಲ 

ಮರಗಳ ಫಲವ ನೀಡಲೂ ನೀ ಕಾಯಲೇ ಬೇಕೂ .. 
ಮೋಡವು ನೀರ ಸುರಿಸಲೂ ಮಳೆಗಾಲವೇ ಬೇಕೂ .. 
ಪಾಪವು ಫಲವ ನೀಡಲೂ ಅರೆಕ್ಷಣವೇ ಹಾಕೂ .. 
ಮಡಿಲಲಿ ಬೆಂಕಿಯ ತುಂಬಿದರೇ .. ಅದು ಒಡಲನು ಸುಡಲೇ ಬೇಕೂ ... 
ಇದು ಕಲಿಗಾಲ.. ಇದು ಕಲಿಗಾಲ 
ನಿನ್ನೇ ಮಾಡಿದ ಪಾಪಕೇ .. ಇಂದೇ ದಂಡನೇ.. 
ಇಂದೂ ಮಾಡಿದ ಪಾಪಕೇ .. ನಾಳೇ ... ದಂಡನೇ...  
ಇದು ಕಲಿಗಾಲ.. ಇದು ಕಲಿಗಾಲ 

ಮನ್ನಿಸು ಎಂಬ ಮಾತನೂ ವಿಧಿ ಕೇಳುವುದಿಲ್ಲಾ.. 
ಅರಿಯದೇ ಮಾಡಿದೆ ಎಂದರೂ .. ಅವ ನಂಬುವುದೇ ಇಲ್ಲಾ.. 
ಯಾತ್ರೆಯ ಮಾಡಿದರೇನೂ ... ಉಪಯೋಗವಿಲ್ಲಾ.. 
ಮೈಯ್ಯನೂ ತೊಳೆದರೂ ಗಂಗೆಯೂ.. ಆ ಪಾಪವ ತೊಳೆಯುವುದಿಲ್ಲಾ.. 
ಇದು ಕಲಿಗಾಲ.. ಇದು ಕಲಿಗಾಲ 
ನಿನ್ನೇ ಮಾಡಿದ ಪಾಪಕೇ .. ಇಂದೇ ದಂಡನೇ.. 
ಇಂದೂ ಮಾಡಿದ ಪಾಪಕೇ .. ನಾಳೇ ... ದಂಡನೇ...  
ಇದು ಕಲಿಗಾಲ.. ಇದು ಕಲಿಗಾಲ 
ಇದು ಕಲಿಗಾಲ.. ಇದು ಕಲಿಗಾಲ 
-----------------------------------------------------------------------------------------

ಅಮರ ಜ್ಯೋತಿ (೧೯೮೫) - ಹೆಣ್ಣೂ .. ನಿನ್ನದಲ್ಲಾ.. ಹೊನ್ನೂ ನಿನ್ನದಲ್ಲಾ.. 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಆ.. ಅಹ್ಹಹ್ಹಾ.. 
ಹೆಣ್ಣೂ .. ನಿನ್ನದಲ್ಲಾ.. ಹೊನ್ನೂ ನಿನ್ನದಲ್ಲಾ.. ಇಂದೊಂದೇ ಎಂದೂ ನಿನ್ನದೂ 
ಕುಡಿ ಕುಡಿ ಕುಡಿ ಕುಡಿ ಕುಡಿ  ಕುಡಿ ಕುಡಿ ಕುಡಿ ಕುಡಿ ಕುಡಿ 
ಹೆಣ್ಣೂ .. ನಿನ್ನದಲ್ಲಾ.. ಹೊನ್ನೂ ನಿನ್ನದಲ್ಲಾ.. ಇಂದೊಂದೇ ಎಂದೂ ನಿನ್ನದೂ 
ಕುಡಿ ಕುಡಿ ಕುಡಿ ಕುಡಿ ಕುಡಿ  ಕುಡಿ ಕುಡಿ ಕುಡಿ ಕುಡಿ ಕುಡಿ 
ಹೆಣ್ಣೂ .. ನಿನ್ನದಲ್ಲಾ.. 

ನಿನ್ನ ಇರುಳಲೀ ಅಮ್ಮಾ .. ಒಂದೇ ಗುಟುಕಲೀ ಚುಮ್ಮಾ.. 
ನಿನ್ನ ಇರುಳಲೀ ಅಮ್ಮಾ .. ಒಂದೇ ಗುಟುಕಲೀ ಚುಮ್ಮಾ.. 
ಮತ್ತೂ ಏರಿತು ತಲೆಯೂ ಸುತ್ತಿತು 
ಮತ್ತೂ ಏರಿತು ತಲೆಯೂ ಸುತ್ತಿತು ಮನದ ಚಿಂತೆಯೂ ಸುಟ್ಟೇ ಹೋಯಿತೂ .. ಹೇ.. 
ಹೆಣ್ಣೂ .. ನಿನ್ನದಲ್ಲಾ.. ಹೊನ್ನೂ ನಿನ್ನದಲ್ಲಾ.. ಇಂದೊಂದೇ ಎಂದೂ ನಿನ್ನದೂ 
ಕುಡಿ ಕುಡಿ ಕುಡಿ ಕುಡಿ ಕುಡಿ  ಕುಡಿ ಕುಡಿ ಕುಡಿ ಕುಡಿ ಕುಡಿ 
ಹೆಣ್ಣೂ .. ನಿನ್ನದಲ್ಲಾ.. 

ಕಹಿಯೂ ಬಾಯಿಗೇ ಅಬ್ಬಾ.. ಸಿಹಿಯೂ ಒಡಲಿಗೆ ಸುಬ್ಬಾ.. 
ಕಹಿಯೂ ಬಾಯಿಗೇ ಅಬ್ಬಾ.. ಸಿಹಿಯೂ ಒಡಲಿಗೆ ಸುಬ್ಬಾ.. 
ಒಮ್ಮೇ ಕುಡಿದರೇ .. ಮತ್ತೇ ಕೇಳುವೇ .. 
ಒಮ್ಮೇ ಕುಡಿದರೇ .. ಮತ್ತೇ ಕೇಳುವೇ ಮತ್ತೇ ಕುಡಿದರೇ ಸ್ವರ್ಗ ಸೇರುವೇ... ಅಹ್ಹಹ್ಹಹ್ಹಹ್ಹಾ.. 
ಹೆಣ್ಣೂ .. ನಿನ್ನದಲ್ಲಾ.. ಹೊನ್ನೂ ನಿನ್ನದಲ್ಲಾ.. ಇಂದೊಂದೇ ಎಂದೂ ಹ್ಹಾ .. ನಿನ್ನದೂ 
ಕುಡಿ ಕುಡಿ ಕುಡಿ ಕುಡಿ ಕುಡಿ  ಹ್ಹಾ..  ಕುಡಿ ಕುಡಿ ಕುಡಿ ಕುಡಿ ಕುಡಿ 
ಹ್ಹಾ.. ಆಹ್  ಅಹ್ಹಹ್ಹಹ್ಹ.. ಹ್ಹಾ .. 
---------------------------------------------------------------------------------------

No comments:

Post a Comment