1248. ಆನಂದ ಕಂದ (೧೯೬೮)


ಆನಂದ ಕಂದ ಚಲನಚಿತ್ರದ ಹಾಡುಗಳು
  1. ನೀನಿದ್ದರೇನೋ ಹತ್ತಿರ ಎಷ್ಟೊಂದು ನಡುವೇ ಅಂತರ
  2. ಮಲಗು ಮಲಗು ಮಡಿಲಿನ ಹೂವೇ
  3. ಓರ್ವಳ ಮಗನಾಗಿ ಜನಿಸಿದನಮ್ಮಾ
  4. ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ 
  5. ಹಗಲು ಇರುಳು ನಾ ನಿನ್ನ ನೆರಳು 
ಆನಂದ ಕಂದ (೧೯೬೮) - ನೀನೇನೂ ಇದ್ದರೇನೋ ಹತ್ತಿರ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ 

ನೀನಿದ್ದರೇನೋ ಹತ್ತಿರ ಎಷ್ಟೊಂದು ನಡುವೇ ಅಂತರ
ಈ ಅಗಲಿಕೆ ಇನ್ನೇತಕೇ ನೀ ನನ್ನ ಅರಿತ ನಂತರ
ನೀನಿದ್ದರೇನೋ ಹತ್ತಿರ ಎಷ್ಟೊಂದು ನಡುವೇ ಅಂತರ
ಈ ಅಗಲಿಕೆ ಇನ್ನೇತಕೇ ನೀ ನನ್ನ ಅರಿತ ನಂತರ

ಹೂ ಬಳ್ಳಿಗೆಲ್ಲಿ ಆಸರೇ ಆಕಾರ ಮರವೇ ತೊರೆದರೇ
ಹೂ ಬಳ್ಳಿಗೆಲ್ಲಿ ಆಸರೇ ಆಕಾರ ಮರವೇ ತೊರೆದರೇ
ನಂಬಿದ ದೇವ ಮುನಿದರೇ ಈ ಹೆಣ್ನಿಗೆಲ್ಲಿ ಆಸರೇ ..
ನೀನಿದ್ದರೇನೋ ಹತ್ತಿರ ಎಷ್ಟೊಂದು ನಡುವೇ ಅಂತರ
ಈ ಅಗಲಿಕೆ ಇನ್ನೇತಕೇ ನೀ ನನ್ನ ಅರಿತ ನಂತರ

ಹೃದಯ ಹಗೆಯ ದೂಡದೇ ಒಲವೂ ಅಲ್ಲಿ ಮೂಡದೇ
ಹೃದಯ ಹಗೆಯ ದೂಡದೇ ಒಲವೂ ಅಲ್ಲಿ ಮೂಡದೇ
ನಗೆಯ ಹೊನಲು ಹರಿಯದೇ ನಮ್ಮ ಬಾಳೂ ಬೆಳಗದೇ ..
ನೀನಿದ್ದರೇನೋ ಹತ್ತಿರ ಎಷ್ಟೊಂದು ನಡುವೇ ಅಂತರ
ಈ ಅಗಲಿಕೆ ಇನ್ನೇತಕೇ ನೀ ನನ್ನ ಅರಿತ ನಂತರ
----------------------------------------------------------------------------------------------------------------------

ಆನಂದ ಕಂದ (೧೯೬೮) - ಮಲಗು ಮಲಗು ಮಡಿಲಿನ ಹೂವೇ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :  

ಮಲಗು ಮಲಗು ಮಡಿಲಿನ ಹೂವೇ
ಮಮತೆಯ ಬಳ್ಳಿಯ ಮಲ್ಲಿಗೆಯೇ ಲಾಲಿ... ಲಾಲಿ

ರಾತ್ರಿ ಕಳೆದರೆ ನಾಳೆಯು ಬರುಹುದು
ಪ್ರೇಮವೂ ಬಂದರೆ ಎಲ್ಲಿಹುದು ನಿದಿರೇ ಎನಹುದು
ಮನದಲಿ ಮೂಡಿರೆ ಯಾವುದೋ ನೆನಪು
ನೆನಪದು ತಂದಿರೆ ಕಣ್ಣಲ್ಲಿ ಹೊಳಪು
ಹೊಳಪಿನ ಹಿಂದಿರೆ ಯಾರದೋ ರೂಪು
ಆತನು ಬಂದರೇ ನಿದಿರೆ ಎಲ್ಲಿಹುದು ನಿದಿರೆ ಎಲ್ಲಿಹುದು
ಮಲಗು ಮಲಗು ಮಡಿಲಿನ ಹೂವೇ
ಮಮತೆಯ ಬಳ್ಳಿಯ ಮಲ್ಲಿಗೆಯೇ ಲಾಲಿ... ಲಾಲಿ

ವಿಧಿಯಾ ಆಟಕೆ ನೀ ನೆರವಾದೆ ತಾಯಿಯ ಪ್ರೇಮಕೆ
ನೀ ಎರವಾದೆ ಸುಳ್ಳು ವಂಚನೆ ತುಂಬಿದ ಜಗದೇ ಬೆಳ್ಳನೆ
ಮನಸಿನ ಮಗು ನೀ ಬಂದೆ ಏನಿಹುದೋ ಮುಂದೆ
ಕಾಣೆ ಏನಿಹುದೋ ಮುಂದೆ
-------------------------------------------------------------------------------------------------------------------------

ಆನಂದ ಕಂದ (೧೯೬೮) - ಓರ್ವಳ ಮಗನಾಗಿ ಜನಿಸಿದನಮ್ಮಾ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : 

ಓರ್ವಳ ಮಗನಾಗಿ ಜನಿಸಿದನಮ್ಮಾ
ಮತ್ತೋರ್ವಳ ಮಗನಾಗಿ ಬೆಳೆದಿಹನಮ್ಮಾ
ಆನಂದಕಂದ ಮುಕುಂದ ಮನೆಯನು
ನಂದನ ಮಾಡಿದ ನಮ್ಮ

ಬಾಳಲಿ ಕವಿದಿಹ ಮೋಡಗಳಿಂದ
ಬೆಳ್ಳಿ ಬೆಳಕಿನ ಕಿರಣವ ತಂದ
ಬಯಕೆ ಬಳ್ಳಿಗೆ ನೀರನು ಎರೆದ
ಒಲಿಯುತ ಬಂದ ಶ್ರೀ ಗೋವಿಂದ
ಸುಂದರ ಲೀಲೆಗಳಿಂದ ಮಾತೆಯ
ಮನಸಿಗೆ ಹರುಷವ ತಂದ ಎನಿತು ಪುಣ್ಯವತೀ
ತಾಯಿ ಯಶೋಧ ದೇವಕೀ ಕಾಣಳೋ ಈ ಪರಿ ಮೋಹ
-------------------------------------------------------------------------------------------------------------------------

ಆನಂದ ಕಂದ (೧೯೬೮) - ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ 
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ, ಕೋರಸ್  

ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ ಕೃಷ್ಣಯ್ಯ 
ಬಣ್ಣದ ಬಣ್ಣದ ಸುಂದರ ಕನಸನು ತಂದ ಕೃಷ್ಣಯ್ಯ 
ಹೆಣ್ಣಿನ ಮನಸಿನ ನೆಮ್ಮದಿ ಕೆಡಸಿ ನಿಂದ ಕೃಷ್ಣಯ್ಯ... 
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ 

ಯಮುನಾ ನದಿಯ ತೀರದಲ್ಲಿ ಮಲ್ಲಿಗೆ ಹಂಬಿನ ತೋಟದಲಿ 
ತಿಂಗಳ ಬೆಳಕಿನ ಸೆರಗಿನಲಿ ತುಂಬದ ಬಯಕೆಯ ಕೊರಗಿನಲಿ 
ನಾ ದಾರಿ ಕಾದು ನಿಂತೆ ಏನೇನೋ ನೂರು ಚಿಂತೆ 
ಎಲ್ಲೋ ಏನೋ ಕಾಣೆ ನಮ್ಮ ಮೋಹನ ಕೃಷ್ಣಯ್ಯ 

ಅವನಲಿ ಮೌನವ ತೋರಿಸುವೆ ಕೋಪದೆ ಮೊಗವ ತಿರುಗಿಸುವೆ 
ದೂರಕೆ ಸರಿದು ಕಾಡಿಸುವೆ ಹೆಣ್ಣಲ್ಲಿ ಕ್ಷಮೆಯನು ಬೇಡಿಸುವೆ 
ಕೈ ಜೋಡಿಸೆನ್ನ ಬೇಡಿ ಆಮೇಲೆ ಎನ್ನ ಕೂಡಿ 
ತಪ್ಪಿನ ಕಾಣಿಕೆ ಕೆನ್ನೆಗೆ ಇತ್ತು ರಮಿಸುವ ಕೃಷ್ಣಯ್ಯ 
--------------------------------------------------------------------------------------------------------------------------

ಆನಂದ ಕಂದ (೧೯೬೮) - ಹಗಲು ಇರುಳು ನಾ ನಿನ್ನ ನೆರಳು 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ,  ಪಿ.ಬಿ.ಶ್ರೀನಿವಾಸ 

ಹೆಣ್ಣು : ಹಗಲು ಇರುಳು ನಾ ನಿನ್ನ ನೆರಳು 
          ಹಗಲು ಇರುಳು ನಾ ನಿನ್ನ ನೆರಳು  ಎನ್ನದೇ ಶೃತಿಗೇ ನೀನೇ ಕೊರಳು  
          ಹಗಲು ಇರುಳು ನಾ ನಿನ್ನ ನೆರಳು  ಎನ್ನದೇ ಶೃತಿಗೇ ನೀನೇ ಕೊರಳು  
ಗಂಡು : ಮನವ ಸೆಳೆವ ನಗೆ ಮುಗುಳೂ 
           ಮನವ ಸೆಳೆವ ನಗೆ ಮುಗುಳೂ ಕಂಗಳು ಕಳಶದ ದೀಪಗಳೂ 
ಹೆಣ್ಣು : ಹಗಲು ಇರುಳು ನಾ ನಿನ್ನ ನೆರಳು  ಎನ್ನದೇ ಶೃತಿಗೇ ನೀನೇ ಕೊರಳು  
 
ಗಂಡು : ಪರಿಮಳ ಚೆಲ್ಲುವಾ ತಂಬಲೇರಂತೇ ಮೆಲ್ಲನೇ ಬಾಳಲೀ ನೀ ಬಂದೇ 
ಗಂಡು : ಒಲವಿನ ತೋಟದೇ ಹೂಮಳೆ ಕರೆದೂ ಹೊಸ ಹೊಸ ಭಾವನೇ ನೀ ತಂದೇ 
ಹೆಣ್ಣು : ಹೃದಯವ ಮಿಡಿದೇ ..     ಗಂಡು : ಕವಿತೆಯ ನುಡಿದೇ ... 
ಹೆಣ್ಣು : ಹೃದಯವ ಮಿಡಿದೇ ..     ಗಂಡು : ಕವಿತೆಯ ನುಡಿದೇ ... 
ಹೆಣ್ಣು : ನಿನ್ನಯ ಪ್ರೇಮದೇ ನಾ ನಿಂದೇ 
          ಹಗಲು ಇರುಳು ನಾ ನಿನ್ನ ನೆರಳು  ಎನ್ನದೇ ಶೃತಿಗೇ ನೀನೇ ಕೊರಳು  

ಹೆಣ್ಣು : ಸಂಧಿಸೀ ಬಂದೇ ನನ್ನನೇ ತಂದೇ ಎನ್ನಯ ದೈವವೂ ನೀ ನಿಂದೇ 
ಗಂಡು : ಬ್ರಹ್ಮನೇ ಬರೆದಿಹ ನೀ ನನಗೆಂದೇ ಆದೇವೂ ಇಂದೂ ನಾವ್ ಒಂದೇ.. 
ಹೆಣ್ಣು : ನಿನ್ನಲ್ಲೀ ಬೆರೆತೇ..    ಗಂಡು : ನನ್ನನೇ ಮರೆತೇ.. 
ಹೆಣ್ಣು : ನಿನ್ನಲ್ಲೀ ಬೆರೆತೇ..    ಗಂಡು : ನನ್ನನೇ ಮರೆತೇ.. 
ಹೆಣ್ಣು : ಭೂಷಣ ಸುಖವಾ ನಾ ಕಂಡೇ .. 
          ಹಗಲು ಇರುಳು ನಾ ನಿನ್ನ ನೆರಳು  ಎನ್ನದೇ ಶೃತಿಗೇ ನೀನೇ ಕೊರಳು  
ಗಂಡು : ಮನವ ಸೆಳೆವ ನಗೆ ಮುಗುಳೂ ಕಂಗಳು ಕಳಶದ ದೀಪಗಳೂ 
ಇಬ್ಬರು : ಹೂಂಹೂಂಹೂಂ   ಹೂಂ ಹೂಂ ಹೂಂ   ಹೂಂ ಹೂಂ ಹೂಂ   
 --------------------------------------------------------------------------------------------------------------------------

No comments:

Post a Comment