1403. ಆನಂದ ಸಾಗರ (೧೯೮೩)


ಆನಂದ ಸಾಗರ ಚಲನಚಿತ್ರದ ಹಾಡುಗಳು
  1. ಪ್ರೇಮದ ಸರಿಗಮಕೆ
  2. ಆನಂದ ಸಾಗರ ಈ ಸಂಸಾರ
ಆನಂದ ಸಾಗರ  (೧೯೮೩)  -  ಪ್ರೇಮದ ಸರಿಗಮಕೆ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಆರ್.ಎನ್. ಜಯಗೋಪಾಲ, ಗಾಯನ : ಎಸ್ಪಿ.ಬಿ, ವಾಣಿಜಯರಾಮ

ಹೆಣ್ಣು : ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
          ಬಾಳೆಲ್ಲಾ ಸಂಗೀತ ಹಾಡುವ ಬಯಕೇ .. 
ಗಂಡು : ಸಂಗಮ ಸವಿಘಳಿಗೆ ಸಂಭ್ರಮ ಮನದೊಳಗೇ 
           ಸಂಗಾತಿ ಬಾ ಬಳಿಗೇ ... 
ಹೆಣ್ಣು : ಆಸೆಯೂ ಅರಳಿದ ಸಮಯ ಹೃದಯವೂ ನೀಡಿದ ಕರೆಯಾ 
          ನನ್ನ ನಿನ್ನ ಮಿಲನ 
ಗಂಡು : ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
          ಬಾಳೆಲ್ಲಾ ಸಂಗೀತ ಹಾಡುವ ಬಯಕೇ .. 
ಹೆಣ್ಣು : ಸಂಗಮ ಸವಿಘಳಿಗೆ ಸಂಭ್ರಮ ಮನದೊಳಗೇ 
           ಸಂಗಾತಿ ಬಾ ಬಳಿಗೇ ... 

ಗಂಡು : ನೀನೂ ಹೆಜ್ಜೇ ಇಟ್ಟಜಾಗ ನೋಡೂ ಹೂದೋಟ 
            ಚಿನ್ನ ನಿನ್ನ ನಡೆಯಲೀ ಕಂಡೇ ಹೂವ ಸೇರೋಟ.. ಆಆಆ... 
ಹೆಣ್ಣು : ಮುತ್ತಿನಂಥ ಮಾತಿನಲ್ಲಿ ಎಂಥ ತುಂಟಾಟ 
          ಏನೂ ಬೇಕೂ ಹೇಳು ಚೆನ್ನಾ ಏಕೇ ತುಂಟಾಟ 
ಗಂಡು : ಹರೆಯ ಬಯಸೋ ಸಿಹಿಸಿಹಿ ಕೊಡುವೇ 
ಹೆಣ್ಣು : ಅದರ ರುಚಿಯೂ ಕಹಿಕಹಿ ನೆನೆಯೇ .. 
ಗಂಡು : ಜೇನೂಟ ಬೇಕೇನೂ ಬಾ ಚಿನ್ನ ಬಳಿಗೇ .. 
ಹೆಣ್ಣು : ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
          ಬಾಳೆಲ್ಲಾ ಸಂಗೀತ ಹಾಡುವ ಬಯಕೇ .. 
ಗಂಡು : ಸಂಗಮ ಸವಿಘಳಿಗೆ ಸಂಭ್ರಮ ಮನದೊಳಗೇ 
           ಸಂಗಾತಿ ಬಾ ಬಳಿಗೇ ... 
     
ಗಂಡು : ಮುತ್ತೂ ಕೊಟ್ಟೂ ಓಡುತಿದೆ ಚಿಟ್ಟೇ ಹೂವನ್ನೂ 
            ಲಜ್ಜೇ ಏಕೇ ಎನ್ನುತಿದೇ ನೋಡಿ ನಮ್ಮನ್ನೂ 
ಹೆಣ್ಣು : ಹೂವಿನಿಂದ ಹೂವಿನಂತೆ ಚಿಟ್ಟೇ ಹಾರಾಟ 
          ಬಾಳಿನಲ್ಲಿ ಪಾಪವೆಲ್ಲ ಇಂಥ ಚೆಲ್ಲಾಟ 
ಗಂಡು : ನನಗೂ ನಿನಗೂ ಮದುವೆಯ ವಯಸ್ಸೂ 
ಹೆಣ್ಣು : ಅದಕೇ ನಮಗೆ ಬಗೆಬಗೆ ಕನಸೂ 
ಗಂಡು : ನೀ ನನ್ನ ತೋಳಲ್ಲಿ ನಿಂತಾಗ ಸೊಗಸೂ ... 
ಹೆಣ್ಣು : ಪ್ರೇಮದ ಸರಿಗಮಕೆ ಸ್ನೇಹದ ಶೃತಿ ಬೆರೆಕೆ 
          ಬಾಳೆಲ್ಲಾ ಸಂಗೀತ ಹಾಡುವ ಬಯಕೇ .. 
ಗಂಡು : ಸಂಗಮ ಸವಿಘಳಿಗೆ ಸಂಭ್ರಮ ಮನದೊಳಗೇ 
           ಸಂಗಾತಿ ಬಾ ಬಳಿಗೇ ...        
ಹೆಣ್ಣು : ಆಸೆಯೂ ಅರಳಿದ ಸಮಯ 
ಗಂಡು : ಹೃದಯವೂ ನೀಡಿದ ಕರೆಯಾ 
ಇಬ್ಬರು :  ನನ್ನ ನಿನ್ನ ಮಿಲನ 
-----------------------------------------------------------------------------------------------------------------

ಆನಂದ ಸಾಗರ  (೧೯೮೩)  -  ಆನಂದ ಸಾಗರ ಈ ಸಂಸಾರ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಆರ್.ಎನ್. ಜಯಗೋಪಾಲ, ಗಾಯನ : ಎಸ್ಪಿ.ಬಿ, ವಾಣಿಜಯರಾಮ

ಆನಂದಸಾಗರ ಈ ಸಂಸಾರ ಪ್ರೀತಿ ವಿಶ್ವಾಸದ ಹೂವಿನ ಹಾರ 
ಪ್ರೀತಿ ವಿಶ್ವಾಸದ ಹೂವಿನ ಹಾರ 
ಒಮ್ಮತ ಸಮ್ಮತ ಮನೆಗಾಧರ ನೆಮ್ಮದಿ ಹೋದರೇ ಮುಳ್ಳಿನ ಹಾರ 
ಆನಂದಸಾಗರ ಈ ಸಂಸಾರ ಪ್ರೀತಿ ವಿಶ್ವಾಸದ ಹೂವಿನ ಹಾರ 

ಕಂಗಳೇ ತೆರೆಯಿತು ಕತ್ತಲೇ ಮರೆಯಿತು ಮುಂದಿನ ದಾರಿ ಏನೆಂದೂ ತಿಳೀಯಿತೂ 
ನಿನಗಾಗಿ ಬದುಕೋ ಜೀವವೂ ಒಂದೂ ನಿನ್ನ ಬಲಹೀನತೆ  ಕ್ಷಮಿಸುವದೆಂದೂ 
ಕರುಳಿನ ಗಂಧವ ದೊರಕದೂ ನಿನಗೇ ನಿನ್ನನ್ನೂ ನೀನೂ ಅರಿಯುವ ವರೆಗೇ .. 
ಆನಂದಸಾಗರ ಈ ಸಂಸಾರ ನೆಮ್ಮದಿ ಹೋದರೇ ಮುಳ್ಳಿನ ಹಾರ 

ಆಡಂಬರದ ಜೀವನಕೆಂದೂ ಮಮತೆಯೂ ಬಲಿಪಶು ಆಗಿಹುದೆಂದೂ 
ತಾಯಿತಂದೆಯರ ಪ್ರೀತಿಯೂ ಸಿಗದೇ ತಬ್ಬಲಿಯಂತೇ ಮರುಗಿದೇ ನೋವೂ 
ಅನುರಾಗ ರಾಗದ ಮೃದು ಝೇಂಕಾರ ಅಪಸ್ವರವಾಗಿದೇ ಸ್ವರ ಸಂಚಾರ 
ಆನಂದಸಾಗರ ಈ ಸಂಸಾರ ಪ್ರೀತಿ ವಿಶ್ವಾಸದ ಹೂವಿನ ಹಾರ 

ಅಹಂಕಾರವೆಂಬ ಅಂಧಕಾರ ಕವಿದೂ ಬೀರುಕೊಡೆದಿಹುದು ಮನಗಳ ಬೆಸುಗೇ 
ಅಂತರಂಗದ ಆಸೆಯ ಉಸಿರೂ ಕಂಬನಿಯಾಗಿ ಚಿಮ್ಮಿದೇ ಹೊರೆಗೇ 
ಕರ್ತವ್ಯವನ್ನೂ ಅರಿವುದೇ ರೀತಿ ತ್ಯಾಗದ ಮೇಲೆ ಬೆಳೆವುದೇ ಪ್ರೀತಿ 
ಆನಂದಸಾಗರ ಈ ಸಂಸಾರ ಪ್ರೀತಿ ವಿಶ್ವಾಸದ ಹೂವಿನ ಹಾರ 
ಪ್ರೀತಿ ವಿಶ್ವಾಸದ ಹೂವಿನ ಹಾರ 
ಒಮ್ಮತ ಸಮ್ಮತ ಮನೆಗಾಧರ ನೆಮ್ಮದಿ ಹೋದರೇ ಮುಳ್ಳಿನ ಹಾರ 
ಮುಳ್ಳಿನ ಹಾರ ಮುಳ್ಳಿನ ಹಾರ ಮುಳ್ಳಿನ ಹಾರ 
---------------------------------------------------------------------------------------------------------

No comments:

Post a Comment