1156. ಆನಂತರ ( ೧೯೮೯)

ಆನಂತರ ಚಲನ ಚಿತ್ರದ ಹಾಡುಗಳು 
  1. ಯಾರ ಬಾಳುವೇ ಹೇಗೆ ಬೆಳೆವುದೋ 
  2. ಓ.. ಮುದ್ದುಕಂದ ಆನಂದ ಕಂದ 
  3. ಆಕ್ಸಿಲರೇಟರ್ 
  4. ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ 
ಅನಂತರ ( ೧೯೮೯) - ಯಾರ ಬಾಳುವೇ ಹೇಗೆ ಬೆಳೆವುದೋ
ಸಂಗೀತ : ಗುಣಸಿಂಗ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.

ಯಾರ ಬಾಳುವೇ ಹೇಗೆ ಬೆಳೆವುದೋ.. ಯಾರ್ಯಾರ ಸಂಬಂಧವೋ
ಏನೆಲ್ಲಾ ತರುವುದೋ.. ಹೇಳಲೂ ಬಾರದೋ..
ಯಾರ ಬಾಳುವೇ ಹೇಗೆ ಬೆಳೆವುದೋ.. ಯಾರ್ಯಾರ ಸಂಬಂಧವೋ
ಏನೆಲ್ಲಾ ತರುವುದೋ.. ಹೇಳಲೂ ಬಾರದೋ..
ಯಾರ ಬಾಳುವೇ ಹೇಗೆ ಬೆಳೆವುದೋ.. ಯಾರ್ಯಾರ ಸಂಬಂಧವೋ
ಏನೆಲ್ಲಾ ತರುವುದೋ.. ಹೇಳಲೂ ಬಾರದೋ..

ಜ್ಞಾನ ತಿದ್ದಿ ಜ್ಞಾನ ಬೆಳೆವ ರೀತಿ ಗುರುವಿಗೇ
ಜ್ಞಾನ ತಿದ್ದಿ ಜ್ಞಾನ ಬೆಳೆವ ರೀತಿ ಗುರುವಿಗೇ
ವಿದ್ಯಾರ್ಥಿ ಪಾಠ ಕಲಿತೂ ಸನ್ಮಾರ್ಗ ಬಿಡದೇ ಅರಿತು
ವಿನಯ ತಿಳಿಯೇ ಮನಸೆಲ್ಲಾ ಹೂಬನ
ನಡತೇ ಮರೆಯೇ ಬದುಕೆಲ್ಲ ರೋಧನ .. ಅರಿತಾಗ ಚಂದನ
ಯಾರ ಬಾಳುವೇ ಹೇಗೆ ಬೆಳೆವುದೋ.. ಯಾರ್ಯಾರ ಸಂಬಂಧವೋ
ಏನೆಲ್ಲಾ ತರುವುದೋ.. ಹೇಳಲೂ ಬಾರದೋ..

ಎಲ್ಲೋ ಹುಟ್ಟಿ ಎಲ್ಲೋ ಬೆಳೆವ ಮಣ್ಣ ಮನುಜಗೇ..
ಎಲ್ಲೋ ಹುಟ್ಟಿ ಎಲ್ಲೋ ಬೆಳೆವ ಮಣ್ಣ ಮನುಜಗೇ..
ಏನೇನೋ ಸ್ನೇಹ ಮೋಹ ಸಂತೋಷ ಸುಖದ ದಾಹ
ಹೃದಯ ಮಿಡಿವ ನುಡಿಯೆಲ್ಲ ಚಿಂತನ
ಅರಿವ ಪಡೆವ ನಡೆಯೆಲ್ಲ ಚೇತನ ಸಂತೋಷ ಈ ದಿನ
ಯಾರ ಬಾಳುವೇ ಹೇಗೆ ಬೆಳೆವುದೋ.. ಯಾರ್ಯಾರ ಸಂಬಂಧವೋ
ಏನೆಲ್ಲಾ ತರುವುದೋ.. ಹೇಳಲೂ ಬಾರದೋ..
--------------------------------------------------------------------------------------------------------------------------

ಅನಂತರ ( ೧೯೮೯) - ಓ.. ಮುದ್ದುಕಂದ ಆನಂದ ಕಂದ
ಸಂಗೀತ : ಗುಣಸಿಂಗ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಬಿ. ಆರ್.ಛಾಯ, ಕೋರಸ್

ಹೆಣ್ಣು : ಓ.. ಮುದ್ದು ಕಂದ ಆನಂದ ಕಂದ ನೀ ನನ್ನ ನಗೆ ಮಲ್ಲಿಗೇ
          ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ ನೀನಾಗೂ ಸಿರಿದೇವಿಗೇ.. ನೀನಾಗೂ ಸಿರಿದೇವಿಗೇ
          ಓ.. ಮುದ್ದು ಕಂದ ಆನಂದ ಕಂದ ನೀ ನನ್ನ ನಗೆ ಮಲ್ಲಿಗೇ
          ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ ನೀನಾಗೂ ಸಿರಿದೇವಿಗೇ.. ನೀನಾಗೂ ಸಿರಿದೇವಿಗೇ

ಕೋರಸ್ :ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..
ಹೆಣ್ಣು : ನೀ ನುಡಿವಾಗ ಗಿಣಿಯಂತೇ ಮಾತೂ ಕೇಳುತ ನಾನೂ ಮೈಮರೆವೇ ಸೋತು
ಕೋರಸ್ :ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..
ಹೆಣ್ಣು : ನೀ ನುಡಿವಾಗ ಗಿಣಿಯಂತೇ ಮಾತೂ ಕೇಳುತ ನಾನೂ ಮೈಮರೆವೇ ಸೋತು 
          ನವಿಲಂತೇ ನೀನೂ ಕುಣಿದಾಡು ಬಾ   ಹೊನಲಂತೇ ನೀನೂ ಹರಿದಾಡು ಬಾ 
          ಬೆಳಕಾಗಿ ಬನ್ನಿ ಸಂತೋಷ ತನ್ನೀ ನೀ ಸೇರೋ ನನ್ನ ಬಾಳಿಗೇ..
          ನೀ ಸೇರೋ ನನ್ನ ಬಾಳಿಗೇ..
          ಓ.. ಮುದ್ದು ಕಂದ ಆನಂದ ಕಂದ ನೀ ನನ್ನ ನಗೆ ಮಲ್ಲಿಗೇ
          ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ ನೀನಾಗೂ ಸಿರಿದೇವಿಗೇ.. ನೀನಾಗೂ ಸಿರಿದೇವಿಗೇ

ಕೋರಸ್ :ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..
ಹೆಣ್ಣು : ನನ್ನಾಸೆ ಕನಸು ಚೂರಾಗಿ ಒಡೆದು ಹೂವಂಥ ಬದುಕು ಮುಳ್ಳಾಗಿ ಕಂಡೂ  
ಕೋರಸ್ :ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   
ಹೆಣ್ಣು : ನನ್ನಾಸೆ ಕನಸು ಚೂರಾಗಿ ಒಡೆದು ಹೂವಂಥ ಬದುಕು ಮುಳ್ಳಾಗಿ ಕಂಡೂ  
          ಏಕಾಂಗಿ ನಾನೂ ಜೊತೆಯಾಗೂ ಬಾ ಮಗಳಾಗಿ ನೀನೂ ನಲಿದಾಡು ಬಾ 
          ಹಾರೈಕೆ ಮಾಡಿ ವಾತ್ಸಲ್ಯ ನೀಡಿ ನಾ ಬರುವೇ ನಿನ್ನ ಬಾಳಿಗೇ.. ನಿನ್ನ ಬಾಳಿಗೇ  
          ಓ.. ಮುದ್ದು ಕಂದ ಆನಂದ ಕಂದ ನೀ ನನ್ನ ನಗೆ ಮಲ್ಲಿಗೇ
          ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ ನೀನಾಗೂ ಸಿರಿದೇವಿಗೇ.. ನೀನಾಗೂ ಸಿರಿದೇವಿಗೇ
ಕೋರಸ್ :ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   ಲಲಲಲಾ..   
--------------------------------------------------------------------------------------------------------------------------

ಅನಂತರ ( ೧೯೮೯) - ಆಕ್ಸಿಲರೇಟರ್
ಸಂಗೀತ : ಗುಣಸಿಂಗ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಬಿ.ಆರ್.ಛಾಯ, ಕೋರಸ್

ಕೋರಸ್ : ಹೇ.. ಮೂವ್.. ಆಕ್ಸಿಲರೇಟರ್.. ಕಮ್ ಆನ್ ಸ್ಪೀಡ್ ಅಪ್ .. ಆಕ್ಸಿಲರೇಟರ್.. ಯ್ಯಾ .. ಶಬರೀಬಾ
ಗಂಡು : ನಲಿಯುತಾ ನಾವಿಂದೂ ಕುಣಿಯುತಾ (ಆಕ್ಸಿಲರೇಟರ್)
ಹೆಣ್ಣು : ನಲಿಯುತಾ ನಾವಿಂದೂ ಕುಣಿಯುತಾ (ಆಕ್ಸಿಲರೇಟರ್)
ಗಂಡು : ಅರಿಯುತ ಒಂದಾಗಿ ಕಲೆಯುತ (ಆಕ್ಸಿಲರೇಟರ್)
ಹೆಣ್ಣು : ಅರಿಯುತ ಒಂದಾಗಿ ಕಲೆಯುತ (ಆಕ್ಸಿಲರೇಟರ್)
ಗಂಡು : ಬಲು ಮೋಜು ಮಾಡಿ ನಿನ್ನೇ ನಾಳೇ ಚಿಂತೇ  ಮರೆಸು ಬೆರೆತು ಹ್ಹಾ..
ಕೋರಸ್ : ಏಳು ಬೀಳು ದಾಟಿ ಮೇಲೂ ಕೀಳೂ ಮೇರೆ
ಹೆಣ್ಣು : ನಲಿಯುತಾ (ಅಹ್ಹಹ್ಹಹ್ಹ  ) ನಾವಿಂದೂ ಕುಣಿಯುತಾ
ಗಂಡು : ಅರಿಯುತ ಒಂದಾಗಿ ಕಲೆಯುತ... ತಾತತ್..ಧೀರ್

ಗಂಡು : ಮನಸ ಮಿಡಿಯೋಣ ಕನಸ ಕಾಣೋಣ ಹಕ್ಕಿ ಹಾಗೇ ಮುಗಿಲಲೀ.. ಜೀಕಿ.. ಮೇರೇ ಮಿರೋಣ
ಹೆಣ್ಣು :   ಮನಸ ಮಿಡಿಯೋಣ ಕನಸ ಕಾಣೋಣ ಹಕ್ಕಿ ಹಾಗೇ ಮುಗಿಲಲೀ.. ಜೀಕಿ.. ಮೇರೇ ಮಿರೋಣ
ಗಂಡು : ಸಂಗಕೇ.. ಸುಖಕ್ಕೇ .. ಸ್ನೇಹಕೇ .. ಮೋಹಕೇ
ಹೆಣ್ಣು : ಸಂಗಕೇ.. ಸುಖಕ್ಕೇ .. ಸ್ನೇಹಕೇ .. ಮೋಹಕೇ
ಕೋರಸ್ : ಜಾತೀ ಬೇಧ ಬಿಟ್ಟೂ .. ಆಸೇ ಬಾಷೇ ತೊಟ್ಟೂ
ಗಂಡು : ನಲಿಯುತಾ ಅಹ್ಹ  ನಾವಿಂದೂ ಕುಣಿಯುತಾ ಹೇ...
ಹೆಣ್ಣು : ನಲಿಯುತಾ ನಾವಿಂದೂ ಕುಣಿಯುತಾ

ಕೋರಸ್ : ಪಪ್ಪಪ್ಪಪ್ಪಾ..   ಪಪ ಪಪ್ಪಪ್ಪಪ್ಪಾ..   (ಲಲಲಲಲಾ... ಲಾಲಾ ಲಲಲಲಾ )
                ಲಲಲಲಲಾ...  (ಪಪ್ಪಪ್ಪಪ್ಪಾ.).   ಲಲಲಲಾ (ಪಪ ಪಪ್ಪಪ್ಪಪ್ಪಾ..) ಲಲಲಲಾ (ಪಪ ಪಪ್ಪಪ್ಪಪ್ಪಾ..)
ಗಂಡು : ಹರೆಯ ಕರೆಯೋಣ ಬಯಕೆ ಪಡೆಯೋಣ ಚುಕ್ಕೇ ಹಾಗೇ ಬಾನಲಿ ಮಿನುಗಿ ಬಾಳ ಕಳೆಗೋಣ..  ತರರರ್ ..
ಹೆಣ್ಣು : ಹರೆಯ ಕರೆಯೋಣ ಬಯಕೆ ಪಡೆಯೋಣ ಚುಕ್ಕೇ ಹಾಗೇ ಬಾನಲಿ ಮಿನುಗಿ ಬಾಳ ಬೆಳಗೋಣ
ಗಂಡು : ನೋಟದ ಬೇಟೆಗೇ ರಾಗದ ರಂಗಿಗೇ
ಹೆಣ್ಣು : ನೋಟದ ಬೇಟೆಗೇ ರಾಗದ ರಂಗಿಗೇ
ಎಲ್ಲರು : ಕಾಯ ದೂಡಿ ತೂಗಿ ಪ್ರೇಮ ಕೂಗಿ ಕೂಗಿ
ಹೆಣ್ಣು : ನಲಿಯುತಾ (ಅಹಹಹ್ ) ನಾವಿಂದೂ ಕುಣಿಯುತಾ
ಗಂಡು : ಹೇ.. ನಲಿಯುತಾ  ನಾವಿಂದೂ ಕುಣಿಯುತಾ ...
ಹೆಣ್ಣು : ಅರಿಯುತ (ಹ್ಹಹ್ಹ.. ಹ್ಹಹ್ಹ ) ಒಂದಾಗಿ ಕಲೆಯುತ ತಾರಾತರತ್
ಗಂಡು : ಅರಿಯುತ ಒಂದಾಗಿ ಕಲೆಯುತ
ಇಬ್ಬರು : ಬಲು ಮೋಜು ಮಾಡಿ ನಿನ್ನೇ ನಾಳೇ ಚಿಂತೇ  ಮರೆಸು ಬೆರೆತು
             ಏಳು ಬೀಳು ದಾಟಿ ಮೇಲೂ ಕೀಳೂ ಮೇರೆ (ಆಕ್ಸಿಲರೇಟರ್)
--------------------------------------------------------------------------------------------------------------------------

ಅನಂತರ ( ೧೯೮೯) - ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ 
ಸಂಗೀತ : ಗುಣಸಿಂಗ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.

ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ
ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ
ಶೃಂಗಾರದ ಸುಧೆಯೆಲ್ಲಕ್ಕೂ ಉಳಿ ಬಿದ್ದು ಹಾಳಾಯಿತೇ
ನನ್ನ ಜೀವ ಧಾರಾಯಿತೇ..  ನನ್ನ ಜೀವ ಧಾರಾಯಿತೇ..
ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ

ಕವಿತೆಯ ಹಾದಿ ಕೈ ಬೀಸಿ ಸನ್ಮಾನವ ನಾ ಕಂಡೇ.. ಹೂಹ್ಹೂ..
ಯಶಸ್ಸಿನ ಕೀರ್ತಿ ಕಲೆ ತುಂಬಿ ಮರ್ಯಾದೆ ನಾ ಮರೆತೇ
ಹಗಲಿರುಳೂ ಪ್ರೀತಿಸಿದ ಸಂಗಾತಿ ಬಾಳೂ ನೆನಪಾಗಿದೇ
ಯುವ ಮನದ ಪ್ರೇಮಿಗಳ ಸಂಬಂಧ ಇಂದೂ ಮಣ್ಣಾಗಿದೇ
ಮನದಾ ದುಗುಡಾ ಕಾಡಿದೇ ರಾಗ ಭಾವ ನಂಜಾಗಿದೇ
ಸಲ್ಲಾಪ ಸಂಗವ ದೂರಾಯಿತೇ ನನ್ನಾಸೆ ನೂರು ಚೂರಾಯಿತೇ
ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ

ಒಲವಿನ ಬಂಡಿ ಮುರಿದಾಗ ಕಣ್ಣೀರ ಧಾರೆಯಲೀ
ಬೆಸೆದಿಹ ಬಂಧವೂ ಉನಾಗಿ ಒಡಲಾಳ ಬೆಂಕಿಯೇ
ಅರಿಯದಲಿ ರಂಗಾಗಿ ಹಸಿರಾದ ಜೀವ ಮಸುಕಾಗಿದೇ
ಉಸಿಉಸಿರು ಒಂದಾದ ಚೆಲುವಾದ ಕಂದ ಗೋಳಾಡಿದೇ
ಭವಣೆ ಬದುಕೂ ತೀರದೇ ಆಶಾಕಿರಣ ಮಂಕಾಯಿತೇ
ನನ್ನೆಲ್ಲ ನಲಿವೂ ನೋವಾಯಿತೇ ಹೂವಂತ ಬಾಳೂ ಹಾವಾಯಿತೇ
ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ

ಶೃಂಗಾರದ ಸುಧೆಯೆಲ್ಲಕ್ಕೂ ಉಳಿ ಬಿದ್ದು ಹಾಳಾಯಿತೇ
ನನ್ನ ಜೀವ ಧಾರಾಯಿತೇ..  ನನ್ನ ಜೀವ ಧಾರಾಯಿತೇ..
ಬಂಗಾರದ ಬದುಕೆಲ್ಲಕ್ಕೂ ಕಾರ್ಮೋಡ ಕವಿದಾಯ್ತೆ
--------------------------------------------------------------------------------------------------------------------------

No comments:

Post a Comment