1138. ಅಣ್ಣಾವ್ರ ಮಕ್ಕಳು ( ೧೯೯೬)

ಅಣ್ಣಾವ್ರ ಮಕ್ಕಳು ಚಲನಚಿತ್ರದ ಹಾಡುಗಳು
  1. ಬಾರೋ ಬಾರೋ ನನ್ನ ಶಿವ 
  2. ಹೋಗಬ್ಯಾಡ ಹುಡುಗೀ ನನ್ನ ಬಿಟ್ಟೂ 
  3. ಓ ಜಾಣ ನೀ ನನ್ನ ಪ್ರಾಣ 
  4. ಆಡಬೇಕು ರಾಜ ಆಡಬೇಕು 
  5. ಅಣ್ಣಾವ್ರ ಮಕ್ಕಳು ನಾವೂ 
ಅಣ್ಣಾವ್ರ ಮಕ್ಕಳು ( ೧೯೯೬) -  ಬಾರೋ ಬಾರೋ ನನ್ನ ಶಿವ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ಮಂಜುಳಾ ಗುರುರಾಜ

ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಚಳಿ ತಾಳೇನು ಬಿಡಲಾರೆನು ನಶೆ ಏರಿದ ತುಟಿ ಜೇನನು ಮುಡಿಪಾಗಿಸಿ ನಿನ್ನ ಕಾದೇನು
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ

ಹೀಗೆ ಓಡಿ ಹೋಗಬೇಡ ನನ್ನ ದೂರ ತಳ್ಳಬೇಡ 
ತಾನು ಬಂಧಿಸು ತುಟಿ ಚುಂಬಿಸು ಇಲ್ಲಿ ಬೇರೆ ಯಾರು ಇಲ್ಲ 
ಈ ದಾಹ ಈ ಮೋಹ ನನಗಿಂದೇಕೋ ಮಿತಿ ಮಿರಿದೇ 
ವಿರಹ ತಣಿಸಿ ಸುಖ ನೀಡೆಂದೂ ಕರೆ ನೀಡಿದೆ 
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ

ಬಾಳಲ್ಲಿ ಮೋಜು ಬೇಕು ಆಳದಲ್ಲಿ ಈಜಬೇಕು ಈ ಆಟಕೆ ಅಳುಕೇತಕೆ 
ಪ್ರಾಯ ತುಂಬಿ ಬಂದ ಹೆಣ್ಣು ರಸ ಚಿಮ್ಮಿ ನಿಂತ ಹಣ್ಣು 
ಬಾ ಎಂದರೇ ಭಯವೇತಕೆ ಈ ರೀತಿ ಭಯ ಭೀತಿ ಬಿಟ್ಟು ನಡೆಸೋಣ ಪ್ರಣಯೋತ್ಸವ 
ಮದನ ರತಿಯಾ ಸವಿ ಸಂಗಮದ ಮಿಲನೋತ್ಸವ .. 
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಚಳಿ ತಾಳೇನು ಬಿಡಲಾರೆನು ನಶೆ ಏರಿದ ತುಟಿ ಜೇನನು ಮುಡಿಪಾಗಿಸಿ ನಿನ್ನ ಕಾದೇನು
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ ಕೇಳೋ ಕೇಳೋ ನನ್ನ ಢವ ಢವ
--------------------------------------------------------------------------------------------------------------------------

ಅಣ್ಣಾವ್ರ ಮಕ್ಕಳು ( ೧೯೯೬) -  ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ರಾಜೇಶ, ಚಂದ್ರಿಕಾ  ಗುರುರಾಜ

ಗಂಡು : ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟೂ
            ಹಿಡ್ಕೋ ನನ್ನ ಜುಟ್ಟು ಬೇಗ ಎರಡೂ ತಟ್ಟು ಕಮ್ಮಿ ಆಗಲೀ ನಿನ್ನ ಸಿಟ್ಟೂ ...
            ಕೇಳು ನನ್ನ ಗುಟ್ಟು ಮಾಡುತೀನಿ ರಟ್ಟು ಬಾಳಲಾರೇ ನಿನ್ನ ಬಿಟ್ಟು
            ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟೂ

ಗಂಡು : ಮೂರು ಲೋಕ ಸುಂದ್ರಿ ನೀನೂ ದೇವಲೋಕ ಕಿಂದ್ರಿ ನೀನೂ ಸಾಟಿ ಯಾರೂ ನಿಂಗಿನ್ನೂ
            ಪಂಚರಂಗಿ ಗಿಣಿಯು ನೀನೂ ಮಿಂಚು ನಿನ್ನ ಹೊಳೆವ ಕಣ್ಣು ಕುಣಿಸಬಲ್ಲೇ ಜಗವನ್ನೂ
            ಕಾಳಿದಾಸ ಕಾಣಲಿಲ್ಲ ರವಿವರ್ಮ ನೋಡಲಿಲ್ಲಾ ಇಂಥ ಮುದ್ದು ಹೆಣ್ಣನ್ನೂ
            ಹಿಂದೇ ಸೃಷ್ಟಿ ಮಾಡಲಿಲ್ಲ ಮುಂದೆ ಸೃಷ್ಟಿ ಮಾಡಲಾರ ಬ್ರಹ್ಮ ಇಂಥ ಚೆಲುವನ್ನೂ
            ಯಾವ ಶಿಲ್ಪಿ ಕಡೆದ ನಿನ್ನ ಯಾವ ಕುಂಚ ಬಳೆದ ಬಣ್ಣ
            ಬ್ಯೂಟಿ ಸ್ಪರ್ಧೆಗ ಹೋದ್ರೇ ಚೆಲುವೇ ಲೋಕ ಲೂಟಿ ಮಾಡಿ ಬಿಡುವೇ
            ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟೂ
            ಹಿಡ್ಕೋ ನನ್ನ ಜುಟ್ಟು ಬೇಗ ಎರಡೂ ತಟ್ಟು ಕಮ್ಮಿ ಆಗಲೀ ನಿನ್ನ ಸಿಟ್ಟೂ ...
            ಕೇಳು ನನ್ನ ಗುಟ್ಟು ಮಾಡುತೀನಿ ರಟ್ಟು ಬಾಳಲಾರೇ ನಿನ್ನ ಬಿಟ್ಟು
            ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟೂ

ಗಂಡು : ಗಂಗೆ ಹೊತ್ತ ಶಿವನ ಹಾಗೇ ಮೂರೂ ಹೊತ್ತು ನಿನ್ನ ಹೊತ್ತು ಪ್ರೇಮಗೀತೆ ಹಾಡ್ತೀನಿ
            ನೆಲಕೇ ಕಾಲು ತಾಕದಂತೇ ರೇಷ್ಮೆ ಮೈಯ್ಯ ನಲುಗದಂತೇ ನಿನ್ನ ಸೇವೆ ಮಾಡ್ತಿನೀ
            ಎದ್ದು ಕೂಡ್ಲೇ ಕಾಫಿ ಮಾಡಿ ನಿಂಗೂ ಒಂದು ಡೋಜು ನೀಡಿ ಕೆಲಸ ಶುರೂ ಮಾಡುತೀನಿ
            ಬಟ್ಟೆ ನಾನೇ ಒಗಿತೀನಿ ಮುಸುರೆಯನ್ನೂ ತೊಳಿತೀನಿ ರಾಣಿಯಂತೇ ಕೂರಿಸ್ತೀನಿ
            ಅಡಿಗೆ ಮಾಡಿ ನಿನಗೆ ಬಡಿಸಿ ಹಣ್ಣು ಕೊಡುವೇ ತೊಳೆಯ ಬಿಡಿಸಿ
            ಎಲ್ಲಾ ಮನೆಯ ಕೆಲಸ ನಂದೂ ಎಲ್ಲೂ ಸಿಗದು ಇಂಥ ಗಂಡೂ
            ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟೂ
ಹೆಣ್ಣು : ಹೋಗಲಾರೆ ಹುಡುಗ ನಿನ್ನ ಬಿಟ್ಟೂ ಬಾಳಿನಲ್ಲಿ ಎಂದೂ ಕೈಯ್ಯಕೊಟ್ಟು
          ತಾಳಿಯನ್ನು ಕಟ್ಟು ಏಳು ಹೆಜ್ಜೆ ಇಟ್ಟು ಬರುತೀನಿ ತವರು ಬಿಟ್ಟು
          ಕೇಳು ನನ್ನ ಗುಟ್ಟು ಮಾಡಿಬಿಡುವೆ ರಟ್ಟು ಬಾಳಲಾರೇ ನಿನ್ನ ಬಿಟ್ಟೂ
          ಹೋಗಲಾರೆ ಹುಡುಗ ನಿನ್ನ ಬಿಟ್ಟೂ ಬಾಳಿನಲ್ಲಿ ಎಂದೂ ಕೈಯ್ಯಕೊಟ್ಟು
          ಹೋಗಲಾರೆ ಹುಡುಗ ನಿನ್ನ ಬಿಟ್ಟೂ ಬಾಳಿನಲ್ಲಿ ಎಂದೂ ಕೈಯ್ಯಕೊಟ್ಟು
--------------------------------------------------------------------------------------------------------------------------

ಅಣ್ಣಾವ್ರ ಮಕ್ಕಳು ( ೧೯೯೬) -  ಓ ಜಾಣ ನೀ ನನ್ನ ಪ್ರಾಣ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಎಂ.ಎಸ್.ವ್ಯಾಸರಾವ ಗಾಯನ : ಎಸ್.ಪಿ.ಬಿ, ಸ್ವರ್ಣ ಲತಾ

ಹೆಣ್ಣು : ಓ ಜಾಣ ನೀನೇ ನನ್ನ ಪ್ರಾಣ
         ಓ ಜಾಣ ನೀನೇ ನನ್ನ ಪ್ರಾಣ ಹೂವಿನ ಬಾಣ ಹೃದಯದ ತಾಣ
         ಪ್ರೇಮದ ಸಂಧಾನ ಮಿಲನದ ವೀಣೆಯ ಶುಭಾಗಾನ
         ಪ್ರೇಮದ ಸಂಧಾನ ಮಿಲನದ ವೀಣೆಯ ಶುಭಾಗಾನ
ಗಂಡು : ಓ ಜಾಣೆ ಕೇಳು ನನ್ನಾಣೆ
           ಓ ಜಾಣೆ ಕೇಳು ನನ್ನಾಣೆ ಓ.. ಮುದ್ದಿನ ಕೆನ್ನೇ ಮಾಗಿದ ಹಣ್ಣೇ
           ಪ್ರೇಮ ಹಿಂಗೇನೆ ಹರೆಯದ ವೇಗ ಹೀಗೇನೇ
           ಪ್ರೇಮ ಹಿಂಗೇನೆ ಹರೆಯದ ವೇಗ ಹೀಗೇನೇ

ಹೆಣ್ಣು : ಭೂಪತಿ ಗಂಡೇ ಮುದ್ದಿನ ಚಂಡೆ ನಿನ್ನನೂ ನಾ ಕಂಡೇ
          ನಿನ್ನನೂ ನಾ ಕಂಡೇ ಸಂತಸಗೊಂಡೆ ಸವಿಯಯನು ಉಂಡೆ
          ಮನದಲೇ ಮನಗೊಂಡೆ ಎಂದೆಂದೂ ನಾವೊಂದೇ
          ಹಿರೋಣ ಮಧುವೊಂದೇ ಪ್ರೀತಿಯ ಮುಂದೆ ಎಲ್ಲವೂ ಹಿಂದೇ
          ಎಂದು ಸಾರಿದೆ ಪ್ರೀತಿಯ ಎಲ್ಲೇ ಮಿರಿದೇ
ಗಂಡು : ಓ ಜಾಣೆ ಕೇಳು ನನ್ನಾಣೆ

ಗಂಡು : ಪ್ರೀತಿಯ ಬಳ್ಳಿ ಚಿವುಟದ ಕಳ್ಳಿ ನೆಲೆಸಿದೆ ಎದೆಯಲ್ಲಿ
            ಪ್ರೀತಿಯ ಬಳ್ಳಿ ಚಿವುಟದ ಕಳ್ಳಿ ನೆಲೆಸಿದೆ ಎದೆಯಲ್ಲಿ
            ಖುಷಿಯಲಿ ತೇಲಿ ಜೋತೆ ಜೋತೆಯಲಿ ಸಾಗುವ ಬಾಳಲ್ಲಿ
            ಸಾವಿರ ಸವಿಗನಸು ನನಸಾಗಲೂ ಬಲು ಸೊಗಸು
            ತೋರದೆ ಮುಗಿಲೂ ಸ್ನೇಹವ ಇರಿಸು ಹೀಗೆ ಪ್ರೀತಿಸು ಅನುಕ್ಷಣ ಹೀಗೆ ಪ್ರೀತಿಸು
ಹೆಣ್ಣು : ಓ ಜಾಣ ನೀನೇ ನನ್ನ ಪ್ರಾಣ
         ಓ ಜಾಣ ನೀನೇ ನನ್ನ ಪ್ರಾಣ ಹೂವಿನ ಬಾಣ ಹೃದಯದ ತಾಣ
         ಪ್ರೇಮದ ಸಂಧಾನ ಮಿಲನದ ವೀಣೆಯ ಶುಭಾಗಾನ
         ಪ್ರೇಮದ ಸಂಧಾನ ಮಿಲನದ ವೀಣೆಯ ಶುಭಾಗಾನ
ಗಂಡು : ಓ ಜಾಣೆ ಕೇಳು ನನ್ನಾಣೆ
           ಓ ಜಾಣೆ ಕೇಳು ನನ್ನಾಣೆ ಓ.. ಮುದ್ದಿನ ಕೆನ್ನೇ ಮಾಗಿದ ಹಣ್ಣೇ
           ಪ್ರೇಮ ಹಿಂಗೇನೆ ಹರೆಯದ ವೇಗ ಹೀಗೇನೇ
           ಪ್ರೇಮ ಹಿಂಗೇನೆ ಹರೆಯದ ವೇಗ ಹೀಗೇನೇ
--------------------------------------------------------------------------------------------------------------------------

ಅಣ್ಣಾವ್ರ ಮಕ್ಕಳು ( ೧೯೯೬) -  ಆಡಬೇಕು ರಾಜ ಆಡಬೇಕು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ವಿ.ಮನೋಹರ ಗಾಯನ : ರಾಜೇಶ , ಸ್ವರ್ಣ ಲತಾ

ಹೆಣ್ಣು : ಆಡಬೇಕು ರಾಜ ಆಡಬೇಕು
          ಆಡಬೇಕು ರಾಜ ಆಡಬೇಕು ನಾನು ಬೆಳಿದಂತೆ ಕೇಳಬೇಕು
          ಓದಬೇಕು ಬರಿಯಬೇಕು ಹಾಡಬೇಕು ಕುಣಿಯಬೇಕು
          ಎಲ್ಲ ವಿದ್ಯೆಯನ್ನು ಬಲ್ಲ ಮಲ್ಲನಾಗಬೇಕು ನೀನೂ 

ಹೆಣ್ಣು : ತಕ್ಕಧಿಮಿ ತಕ್ಕಧಿಮಿ ತಾಳ ಹಾಕುತ್ತ ಕುಣಿ ಕುಣಿ ಖುಷಿಯಲಿ 
          ಭರತನಾಟ್ಯ ಪಾಶ್ಚಿಮಾತ್ಯ ಇಲ್ಲಿ ನರ್ತನ ಕಲಿ ಕಲಿ ನಲಿ ನಲಿ 
          ತಕ್ಕಧಿಮಿ ತಕ್ಕಧಿಮಿ ತಾಳ ಹಾಕುತ್ತ ಕುಣಿ ಕುಣಿ ಖುಷಿಯಲಿ 
          ಭರತನಾಟ್ಯ ಪಾಶ್ಚಿಮಾತ್ಯ ಇಲ್ಲಿ ನರ್ತನ ಕಲಿ ಕಲಿ ನಲಿ ನಲಿ 
          ತಾಳದಲ್ಲಿಯ ಬಾಳನಲ್ಲಿಯ ಲೆಕ್ಕ ತಪ್ಪಬೇಡ ನೀನು ರಾಜ 
          ಪಡ್ಡೆ ಹುಡುಗರಾದರೂ ಬುದ್ದಿ ಜೀವಿ ಆದರೂ ಎಲ್ಲ ವರ್ಗ ನಿನ್ನ ಮೆಚ್ಚಿ ಹೊಗಳಬೇಕು ಮನಸು ಬೆಚ್ಚಿ 
          ಆಡಬೇಕು ರಾಜ ಆಡಬೇಕು
          ಆಡಬೇಕು ರಾಜ ಆಡಬೇಕು ನಾನು ಬೆಳಿದಂತೆ ಕೇಳಬೇಕು
          ಓದಬೇಕು ಬರಿಯಬೇಕು ಹಾಡಬೇಕು ಕುಣಿಯಬೇಕು
          ಎಲ್ಲ ವಿದ್ಯೆಯನ್ನು ಬಲ್ಲ ಮಲ್ಲನಾಗಬೇಕು ನೀನೂ 

 ಗಂಡು : ಸಾರಿಗರಿ ಸಸ ಪಮ ಪಗ ಗಾಗ ಸಾರಿಗಾರಿ ಸಪಗಾ ... 
ಹೆಣ್ಣು : ಕಲ್ಲು ಕೆತ್ತಿ ಶಿಲ್ಪವಾಯ್ತು ಎಂಥ ಅದ್ಭುತ ಈ ಕಲಿ  ಮನ್ಮಥ
           ಮಣ್ಣೇ ಈ ಚಿನ್ನವಾಯ್ತು ಪ್ರೇಮಿಗೇ ಸ್ವಾಗತ
           ವೀಣೆ ನಾನಿರೇ ನೀನೇ ವೈಣಿಕ ಮೀಟಲು ಕೇಳು ಪ್ರೇಮನಾದ
           ದೋಣಿ ನಾನಿರೇ ನೀನೇ ನಾವಿಕ ತೇಲುತ ಸಾಗಿದಾಗ
           ಮೋದ ಪ್ರೇಮವೊಂದು ಪಾದ ಪ್ರೇಮಕ್ಕಿಲ್ಲ ಬೇಧ
           ನೀನು ನನ್ನ ಪ್ರೇಮಿಸುವುದೂ ಪ್ರೇಮವೊಂದೇ ನಮಗೆ ಬೇಕು
ಗಂಡು : ಆಡಬೇಕೆ ರಾಣಿ ಆಡಬೇಕೆ ಈಗ ಇಷ್ಟು ಸಾಕೆ ಇನ್ನೂ ಬೇಕೇ
           ಓದಬೇಕೆ ಬರಿಯಬೇಕೆ ಹಾಡಬೇಕೆ ಕುಣಿಯಬೇಕೆ
          ಯಾವ ವಿದ್ಯೆ ಕೇಳು ನೀನು ಎಲ್ಲ ವಿದ್ಯೆ ಬಲ್ಲೆ ನಾನೂ
ಹೆಣ್ಣು : ಆಡಬೇಕು ರಾಜ ಆಡಬೇಕು
          ಆಡಬೇಕು ರಾಜ ಆಡಬೇಕು ನಾನು ಬೆಳಿದಂತೆ ಕೇಳಬೇಕು
          ಓದಬೇಕು ಬರಿಯಬೇಕು ಹಾಡಬೇಕು ಕುಣಿಯಬೇಕು
          ಎಲ್ಲ ವಿದ್ಯೆಯನ್ನು ಬಲ್ಲ ಮಲ್ಲನಾಗಬೇಕು ನೀನೂ 
--------------------------------------------------------------------------------------------------------------------------

ಅಣ್ಣಾವ್ರ ಮಕ್ಕಳು ( ೧೯೯೬) -  ಅಣ್ಣಾವ್ರ ಮಕ್ಕಳು ನಾವೂ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ರಾಜೇಶ , ಎಸ್.ಪಿ.ಬಿ

ಅಣ್ಣಾವ್ರ ಮಕ್ಕಳು ನಾವೂ ಅವರಂತೇ ಬಾಳುವೆವೂ
ಈ ದೇಶ ಬಾಷೆಗೇ ಪ್ರಾಣಾನೇ ನೀಡುವೇವು
ನಮಗೆಂದಿಗೂ ಸೋಲಿಲ್ಲ ನಾವ್ಯಾರಿಗೂ ಹೆದರೋದಿಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ
ಅಣ್ಣಾವ್ರ ಮಕ್ಕಳು ನಾವೂ ಅವರಂತೇ ಬಾಳುವೆವೂ
ಈ ದೇಶ ಬಾಷೆಗೇ ಪ್ರಾಣಾನೇ ನೀಡುವೇವು
ನಮಗೆಂದಿಗೂ ಸೋಲಿಲ್ಲ ನಾವ್ಯಾರಿಗೂ ಹೆದರೋದಿಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ

ಹಿಟ್ಟು ತಿಂದು ಜಟ್ಟಿ ನಾನೂ ಕೆಟ್ಟೋರ ಕಂಡಾಗ ಮೆಟ್ಟುವೇನೂ
ಸಟ್ಟು ಬಿಡದೇ ಪೆಟ್ಟು ಕೊಡುತ ಹುಟ್ಟು ಅಡಗಿಸಿ ನಿಲ್ಲುವೇನೂ
ಹಿಟ್ಟು ತಿಂದು ಜಟ್ಟಿ ನಾನೂ ಕೆಟ್ಟೋರ ಕಂಡಾಗ ಮೆಟ್ಟುವೇನೂ
ಸಟ್ಟು ಬಿಡದೇ ಪೆಟ್ಟು ಕೊಡುತ ಹುಟ್ಟು ಅಡಗಿಸಿ ನಿಲ್ಲುವೇನೂ
ನುಗ್ಗಿ ಬರುವ ವೈರಿಯನ್ನೂ ಬಗ್ಗು ಬಡಿವ ಶೌರೀ ನಾನೂ
ಆ ಕೇಡಿ ಎಲ್ಲಿದ್ರೂ ಅವ ನನ್ನಿಂದ ನಿರ್ನಾಮ
ಈ ನಾಡ ದ್ರೋಹಿಗೆ ನಾ ಹಾಕುವೇ ಪಂಗನಾಮ
ಅಣ್ಣಾವ್ರ ಮಕ್ಕಳು ನಾವೂ ಅವರಂತೇ ಬಾಳುವೆವೂ
ಈ ದೇಶ ಬಾಷೆಗೇ ಪ್ರಾಣಾನೇ ನೀಡುವೇವು
ನಮಗೆಂದಿಗೂ ಸೋಲಿಲ್ಲ ನಾವ್ಯಾರಿಗೂ ಹೆದರೋದಿಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ

ಬ್ರಹ್ಮ ವಿಷ್ಣು ರುಧ್ರರಂತೇ ತ್ರಿಮೂರ್ತಿ ಒಂದೇನೇ ಎಂದೆಂದೂ
 ದುಷ್ಟ ಜನರ ಶಿಕ್ಷಿಸೋಕೆ ಒಂದಾಗಿ ನಿಂತೇವೂ ನಾವಿಂದೂ
ನ್ಯಾಯ ನೀತಿ ಗೆಲ್ಲೋತನಕ ಸುಳ್ಳು ಮೋಸ ನಿಲ್ಲೋತನಕ
ಸಂಗ್ರಾಮ ನಿಲ್ಲೋಲ್ಲ ಇನ್ನೆಂದು ನಮ್ಮಿಂದ ಆ ಶತ್ರು ಸಂಹಾರ ಆ ಅಣ್ಣಾವ್ರ ಮಕ್ಕಳಿಂದ
ಅಣ್ಣಾವ್ರ ಮಕ್ಕಳು ನಾವೂ ಅವರಂತೇ ಬಾಳುವೆವೂ
ಈ ದೇಶ ಬಾಷೆಗೇ ಪ್ರಾಣಾನೇ ನೀಡುವೇವು
ನಮಗೆಂದಿಗೂ ಸೋಲಿಲ್ಲ ನಾವ್ಯಾರಿಗೂ ಹೆದರೋದಿಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ
--------------------------------------------------------------------------------------------------------------------------

No comments:

Post a Comment