1410. ಅಂತರಂಗದ ಮೃದಂಗ (೧೯೯೧)




ಅಂತರಂಗದ ಮೃದಂಗ ಚಲನಚಿತ್ರದ ಹಾಡುಗಳು 
  1. ಚಿಗುರುವ ಚಿಗುರೊಡೆದೂ ಹಬ್ಬುವಾ 
  2. ಅಂತರಂಗದ ಮೃದಂಗ 
  3. ವಸಂತ ರಾಜನ ಹರುಷದ ಗಾಯನ... 
  4. ಬಾನಾಗಲದ ನಂದನಿಗೇ 
  5. ಗೃಹಣ ಗೃಹಣ 
ಅಂತರಂಗದ ಮೃದಂಗ (೧೯೯೧) - ಚಿಗುರುವ ಚಿಗುರೊಡೆದೂ ಹಬ್ಬುವಾ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಗಜೇಂದ್ರ ಕೋಟೆ ಗಾಯನ : ವಾಣಿಜಯರಾಮ, ಎಸ್.ಜಾನಕೀ 

ಜಾನಕೀ : ಆಆಆ... ಆಆಆಆ ಆಆಆ... ಆಆಆಆ ಆಆಆ... ಆಆಆಆ ಆಆಆ... ಆಆಆಆ 
ವಾಣಿ : ಚಿಗುರುವ ಚಿಗುರೊಡೆದೂ ಹಬ್ಬುವಾ 
ಜಾನಕೀ : ಚಿಗುರುವ ಚಿಗುರೊಡೆದೂ ಹಬ್ಬುವಾ ಬಾಳ ಯುಗಾದಿಯ ಸಿಹಿ ಕಹಿಯಲ್ಲಿ ಬೇವು ಬೆಲ್ಲಗಳಾಗಿ   
               ಆಸರೇ ನೆರಳ ಮರದಡಿಯಲ್ಲಿ ಹೂವೂ ಹಣ್ಣೂಗಳಾಗಿ.. ನಾವೂ (ನಾವೂ) 
ಇಬ್ಬರು : ನಾವೂ 
ವಾಣಿ : ಬೆಳಗುವ ತವರೆಸರ ಉಳಿಸುವಾ ಕಾರ್ತಿಕ ಮಾಸದ ಸ್ಮರಣೆಗಳಲ್ಲಿ ನಂದಾದೀಪಗಳಾಗಿ 
           ಕಂಕಣ ಪ್ರಾಪ್ತಿಯ ಮನೆಯ ಬೆಳಗಲೀ ಗೃಹಣಿ ಮುತ್ತೈದೆಯರಾಗೀ .. ನಾವೂ .. (ನಾವೂ) 
ಇಬ್ಬರು : ನಾವೂ 

ಜಾನಕೀ : ಬೀರಲೀ ಬದುಕಲಿ ಹರುಷವ ಸಂಕ್ರಾತಿ ಅಕ್ಕರೇ ಸಕ್ಕರೇ ತನುಮಯ ಶಾಂತೀ 
              ಬೀರಲೀ ಬದುಕಲಿ ಹರುಷವ ಸಂಕ್ರಾತಿ ಅಕ್ಕರೇ ಸಕ್ಕರೇ ತನುಮಯ ಶಾಂತೀ  
ವಾಣಿ : ವಿಜಯದ ಹೆಮ್ಮೆಯ ನವಶುಭ ರಾತ್ರಿಗೇ ದಾಸರ ಗಾನವೇ ವೀಣೆಯ ತಂತೀ .. 
           ಬೆಳಗುವ ತವರೆಸರ ಉಳಿಸುವಾ ಕಾರ್ತಿಕ ಮಾಸದ ಸ್ಮರಣೆಗಳಲ್ಲಿ ನಂದಾದೀಪಗಳಾಗಿ 
           ಕಂಕಣ ಪ್ರಾಪ್ತಿಯ ಮನೆಯ ಬೆಳಗಲೀ ಗೃಹಣಿ ಮುತ್ತೈದೆಯರಾಗೀ .. ನಾವೂ .. (ನಾವೂ) 
ಇಬ್ಬರು : ನಾವೂ 

ವಾಣಿ : ಹಬ್ಬ ಹರಿದಿನ ತಳಿರ ತೋರಣ ಬಾಗಣ ಕಂಕಣ ವಧುವಿನ ಕಾಲ್ಗುಣ 
           ಹಬ್ಬ ಹರಿದಿನ ತಳಿರ ತೋರಣ ಬಾಗಣ ಕಂಕಣ ವಧುವಿನ ಕಾಲ್ಗುಣ 
ಜಾನಕೀ: ವಿಶ್ವವಿನೂತನ ಆಶಾಸುಧೆಗೇ .. ಸಹನೆಯೇ ನಾರಿಯ ಧಾರ್ಮಿಕ ಲಕ್ಷಣ 
             ಚಿಗುರುವ ಚಿಗುರೊಡೆದೂ ಹಬ್ಬುವಾ ಬಾಳ ಯುಗಾದಿಯ ಸಿಹಿ ಕಹಿಯಲ್ಲಿ ಬೇವು ಬೆಲ್ಲಗಳಾಗಿ   
              ಆಸರೇ ನೆರಳ ಮರದಡಿಯಲ್ಲಿ ಹೂವೂ ಹಣ್ಣೂಗಳಾಗಿ.. 
ಇಬ್ಬರು : ನಾವೂ ನಾವೂ ನಾವೂ 
------------------------------------------------------------------------------------------------------------

ಅಂತರಂಗದ ಮೃದಂಗ (೧೯೯೧) - ಅಂತರಂಗದ ಮೃದಂಗ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ದ .ರಾ.ಬೇಂದ್ರೆಗಾಯನ : ಎಸ್.ಪಿ.ಬಿ,ಎಸ್.ಜಾನಕೀ, ಕೋರಸ್  

ಗಂಡು : ಹೇ...ಹೇ ...ಹೇ... ಹೇ..     ಹೆಣ್ಣು : ತಾನಾ .. ತುಂತ ನಾನಾ  ತಾನಾ .. ತುಂತ ನಾನಾ  
ಗಂಡು : ಅಂತರಂಗದ ಮೃದಂಗ..  ಮೃದಂಗ..  ಮೃದಂಗ..  
ಹೆಣ್ಣು : ಅಂತ ತುಂತೂನಾನ...  ನಾ ನಾ ನಾ
ಗಂಡು : ಚಿತ್ತ ತಾಳ ಬಾರಿಸುತ್ತಿತ್ತೂ              ಹೆಣ್ಣು : ಝಣ ಝಣನಾನನಾನ  
ಗಂಡು : ನೆನೇ ತಂತಿ ಮೀಟುತ್ತಿತ್ತೂ             ಹೆಣ್ಣು : ತೊಂತ ತನನ ನಾನ      
ಕೋರಸ್ : ತೊಂತ ತನನ ನಾನ  ತೊಂತ ತನನ ನಾನ  ತೊಂತ ತನನ ನಾನ ತನನನ             
                ತೊಂತ ತನನ ನಾನ  ತೊಂತ ತನನ ನಾನ  ತೊಂತ ತನನ ನಾನ ತನನನ             
ಗಂಡು : ಅಂತರಂಗದ ಮೃದಂಗ..  ಆಆಆ 

ಗಂಡು : ಹಲವು ಜನುಮದಿಂದ ಬಂದ ಯಾವೂದೇನೋ ಧ್ಯಾನ 
ಹೆಣ್ಣು : ಆಆಆ.. ಆಆಆ...  ಏಕನಾದ ದಂದದೊಂದು ಕಾಣದಾಗಿ ತಾಣ   
ಕೋರಸ್ : ಆಆ.. ಆಆ...ಆಆ.. ಆಆ...ಆಆಆ.. ಆಆಆ...ಆಆಆ.....
ಗಂಡು : ಹಲವು ಜನುಮದಿಂದ ಬಂದ ಯಾವೂದೇನೋ ಧ್ಯಾನ 
ಹೆಣ್ಣು : ಏಕನಾದ ದಂದದೊಂದು ಕಾಣದಾಗಿ ತಾಣ   
           ತನಗೇ ತಾನೇ ಸೋಲುತಿಹುದು ನೂಲುತಿಹುದು ಗಾನ 
ಗಂಡು : ತನಗೇ ತಾನೇ ಸೋಲುತಿಹುದು ನೂಲುತಿಹುದು ಗಾನ.. ಗಾನ (ಗಾನ )
ಇಬ್ಬರು : ಗಾನ  
ಗಂಡು : ಅಂತರಂಗದ ಮೃದಂಗ..  ಆಆಆ 

ಗಂಡು : ಕಲ್ಪ ದಾದಿಯಲ್ಲೇ ನನ್ನ ನಿನ್ನ ವಿರಹವಾಗಿ 
ಹೆಣ್ಣು : ಎಲ್ಲೋ ಏನೋ ನಿನ್ನ ಹುಡುಕೀ ಕಾಂಬ ಕಣ್ಣೇ ಹೋಗಿ 
           ಮರೆವೆಗೊಂಡು ಬಿದ್ದೇ ನಾನೀ ನೆಲದ ಮಣ್ಣು ತಾಗೀ .. 
ಗಂಡು : ಮರೆವೆಗೊಂಡು ಬಿದ್ದೇ ನಾನೀ ನೆಲದ ಮಣ್ಣು ತಾಗೀ .. ತಾಗೀ .. (ತಾಗೀ )
ಇಬ್ಬರು : ತಾಗೀ .. 
ಹೆಣ್ಣು : ಅಂತರಂಗದ ಮೃದಂಗ.....  

ಹೆಣ್ಣು : ನಾದರದರಧೀನಂತ.. ನಾದರದರಧೀನಂತ.. ತನಧೀರನ...ನ.. ನ... ನ 
          ತೋಮ್ ತನನನ  ತೋಮ್ ತನನನ ತೋಮ್ ತನನನ ತನನನನನ 
          ಕತ್ತಲ್ಲಲ್ಲಿ ಬೆಳಕೂ ಮಿಂಚಿ ಪಡೆಯೀತೇಳು ಬಣ್ಣ.. 
ಗಂಡು : ಮೂಕ ಮೌನ ತೂಕ ಮೀರಿ ದನಿಯೂ ಹುಟ್ಟಿ ಸಣ್ಣ   
            ಕಣ್ಣ ಮಣ್ಣ ಕೂಡಲಲ್ಲಿ ಹಾಡೂ ಕಟ್ಟಿಸಣ್ಣ ... 
ಹೆಣ್ಣು : ಕಣ್ಣ ಮಣ್ಣ ಕೂಡಲಲ್ಲಿ ಹಾಡೂ ಕಟ್ಟಿಸಣ್ಣ ... ಸಣ್ಣ.. (ರನ್ನ.. )
ಇಬ್ಬರು: ಚಿನ್ನ.. 
 ಹೆಣ್ಣು : ಅಂತರಂಗದ ಮೃದಂಗ.. ಅಂತ ತುಂತೂನಾನ...  ನಾ ನಾ ನಾ
ಗಂಡು : ಚಿತ್ತ ತಾಳ ಬಾರಿಸುತ್ತಿತ್ತೂ              ಹೆಣ್ಣು : ಝಣ ಝಣನಾನನಾನ  
ಗಂಡು : ನೆನೆಯೂ ತಂತಿ ಮೀಟುತ್ತಿತ್ತೂ             ಹೆಣ್ಣು : ತೊಂತ ತನನ ನಾನ      
ಕೋರಸ್ : ತೊಂತ ತನನ ನಾನ  ತೊಂತ ತನನ ನಾನ  ತೊಂತ ತನನ ನಾನ ತನನನ             
                ತೊಂತ ತನನ ನಾನ  ತೊಂತ ತನನ ನಾನ  ತೊಂತ ತನನ ನಾನ ತನನನ             
 ಗಂಡು : ಅಂತರಂಗದ ಮೃದಂಗ.. (ಮೃದಂಗ) ಮೃದಂಗ..(ಮೃದಂಗ)..ಮೃದಂಗ..(ಮೃದಂಗ..)
------------------------------------------------------------------------------------------------------------

ಅಂತರಂಗದ ಮೃದಂಗ (೧೯೯೧) - ವಸಂತ ರಾಜನ ಹರುಷದ ಗಾಯನ... 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಗಜೇಂದ್ರ ಕೋಟೆ ಗಾಯನ : ಚಿತ್ರಾ 

ಆಆಆಅ... ಆಆಆ .... ಆ ಆ ಆ ಆ 
ವಸಂತ ರಾಜನ.. ಆಆಆಅ ಚೈತ್ರದ ಲೇಖನ ..ಆಆಆಅ 
ಮಾಮರ ಕುವರನ ಊಊಊ ಹರುಷದ ಗಾಯನ... 
ಸುರಿವ ಆ ಧಾರೇ .. ಹರಿವ ಈ ನೀರೂ 
ಮಲೆನಾಡಿನ ವಧುವಿನ.. ತನುವಿನ ಚೇತನ .. 
ವಸಂತ ರಾಜನ ಚೈತ್ರದ ಲೇಖನ ಮಾಮರ ಕುವರನ ಹರುಷದ ಗಾಯನ... 
 
ಘಳಿರ ಘಳಿರ ಕಾಲ್ಗೇಜ್ಜೇ..  ತಳಿರ ತಳಿರ ತರುಲಜ್ಜೇ 
ಘಳಿರ ಘಳಿರ ಕಾಲ್ಗೇಜ್ಜೇ..  ತಳಿರ ತಳಿರ ತರುಲಜ್ಜೇ 
ಹರೀ ನಿಂದ್ರುತನೀ ಸುಂದರ ಧಾಮ  
ಹರೀ ನಿಂದ್ರುತನೀ ಸುಂದರ ಧಾಮ ಸುರರ ನೆಲೆಯ ಪರಮ ಸ್ತೋಮ 
ವಸಂತ ರಾಜನ ಚೈತ್ರದ ಲೇಖನ ಮಾಮರ ಕುವರನ ಹರುಷದ ಗಾಯನ... 
 
ದಿವ್ಯದಿಂಗತದ ಭವ್ಯ ಕಲೆಯೂ ಸಾರುವ ಶಾಸನ ಚರಿತೆಯ ಶಿಲೆಯೂ 
ಮಾನಸ ವೀಣೆಯ ಮಧುರ ವಿಹಾರ     
ಮಾನಸ ವೀಣೆಯ ಮಧುರ ವಿಹಾರ ಹಂಸ ಹಿಮಗಳ ಸಡಗರ ನೇಸರ 
ವಸಂತ ರಾಜನ ಚೈತ್ರದ ಲೇಖನ ಮಾಮರ ಕುವರನ ಹರುಷದ ಗಾಯನ... 

ಸರಿಗಪದಸ ಸಾದ ಪದಸದದಪ ಗಪದಾಪ ಪದ ಪದ ಗಪ ಗರಿ 
ಪದ ಪದ ಗಪ ಗರಿಸರಿ ರಿಸಗ  ಆಆಆ 
ನಾದ ಶೃತಿಯ ಸ್ವರ ಸಮ್ಮೇಳ ಭಾವ ಲಹರಿಯ ರಾಗ ಲೀಲಾ 
ನಾಡ ಶ್ರೇಣಿಯ ಕಾಲ ಸಂಭ್ರಮ 
ನಾಡ ಶ್ರೇಣಿಯ ಕಾಲ ಸಂಭ್ರಮ ಪಾವನ ವೀಣೆಯ ಕಡಲ ಸರಿಗಮ 
ವಸಂತ ರಾಜನ.. ಆಆಆಅ ಚೈತ್ರದ ಲೇಖನ ..ಆಆಆಅ 
ಮಾಮರ ಕುವರನ ಊಊಊ ಹರುಷದ ಗಾಯನ... 
ಸುರಿವ ಆ ಧಾರೇ .. ಹರಿವ ಈ ನೀರೂ 
ಮಲೆನಾಡ ವಧುವಿನ.. ತನುವಿನ ಚೇತನ .. ತನುವಿನ ಚೇತನ .. ತನುವಿನ ಚೇತನ .. 
------------------------------------------------------------------------------------------------------------

ಅಂತರಂಗದ ಮೃದಂಗ (೧೯೯೧) - ಬಾನಾಗಲದ ನಂದನಿಗೇ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಗಜೇಂದ್ರ ಕೋಟೆ ಗಾಯನ : ಕೆ.ಜೆ.ಏಸುದಾಸ, ವಾಣಿಜಯರಾಂ 

ಗಂಡು :ಆಹಾಹಾಹಾ ಹೇಹೇ .. ಹೇಹೇ .. ಹೇಹೇ .. ಹೂಂ..ಹೂಂ..ಲಲಲ್ಲಲಾ 
ಹೆಣ್ಣು : ಬಾನಾಗಲದ ನಂದನಿಗೇ ನಗೆ ಹೊನ್ನ ರವಿಯಾಗಿ ನೀ ಬಂದೇ 
ಗಂಡು : ಬೇಸರದ ವೈಯ್ಯಮನಸ್ಸಾ ಬರುಡಾದ ಬಾಳಲ್ಲಿ ಹಾಲ ಹುಣ್ಣಿಮೇ ಶಶಿಯಾಗಿ ನೀ ಬಂದೇ .. 
ಹೆಣ್ಣು : ಬಾನಾಗಲದ ನಂದನಿಗೇ (ಲಲಲ)  ನಗೆ ಹೊನ್ನ ರವಿಯಾಗಿ (ಲಲಲ) ನೀ ಬಂದೇ (ಆಆಆಆ)
ಗಂಡು : ಬೇಸರದ ವೈಯ್ಯಮನಸ್ಸಾ ಬರುಡಾದ ಬಾಳಲ್ಲಿ ಹಾಲ ಹುಣ್ಣಿಮೇ ಶಶಿಯಾಗಿ ನೀ ಬಂದೇ .. 
                 
ಗಂಡು : ಮುದ್ದಾದ ಮರಗಿಳಿಯೇ ನನ್ನ ಕಣ್ಣ ನೈದಿಲೇಯೇ ಈ ನನ್ನ ಪ್ರೇಮ ಸ್ವರದ ಕಂಠ ಕೋಗಿಲೇ (ಲಲಲ)
            ಮುದ್ದಾದ ಮರಗಿಳಿಯೇ ನನ್ನ ಕಣ್ಣ ನೈದಿಲೇಯೇ ಈ ನನ್ನ ಪ್ರೇಮ ಸ್ವರದ ಕಂಠ ಕೋಗಿಲೇ  
ಹೆಣ್ಣು : ಹೊಂಗೆಯ ಟೊಂಗೆಯಲೀ ಬೇವಿನ ಹೊನಲಲೀ 
          ಹೊಂಗೆಯ ಟೊಂಗೆಯಲೀ ಬೇವಿನ ಹೊನಲಲೀ ಜೀವನದ ಜೇನಗೂಡ ನಾ ಕಟ್ಟುವೇ .. 
          ಬಾನಾಗಲದ ನಂದನಿಗೇ (ಲಲಲ)  ನಗೆ ಹೊನ್ನ ರವಿಯಾಗಿ (ಲಲಲ) 
          ನೀ ಬಂದೇ (ಆಆಆಆ)  ನೀ ಬಂದೇ (ಆಆಆಆ)

ಗಂಡು : ನೀ ಮುಡಿದ ಮಲ್ಲಿಗೆಗೇ ನಾರಾಗೀ ಬೆರೆತಿರುವೇ ಮೂಡಿಹೂವ ಜೊತೆಗೂಡಿ ಸ್ವರ್ಗ ಸೇರುವೇ .. 
            ನೀ ಮುಡಿದ ಮಲ್ಲಿಗೆಗೇ ನಾರಾಗೀ ಬೆರೆತಿರುವೇ ಮೂಡಿಹೂವ ಜೊತೆಗೂಡಿ ಸ್ವರ್ಗ ಸೇರುವೇ .. 
ಹೆಣ್ಣು : ಆ ನಾರ ಮಿಂಚಿನಲ್ಲಿ ಈ ಪಾದ ಸೇರುತಲೀ 
          ಆ ನಾರ ಮಿಂಚಿನಲ್ಲಿ ಈ ಪಾದ ಸೇರುತಲೀ ಬಾಳಿನ ಸಿಹಿಕಹಿಯ ಹಂಚಿಕೊಳ್ಳುವೇ .. 
          ಬಾನಾಗಲದ ನಂದನಿಗೇ (ಲಲಲ)  ನಗೆ ಹೊನ್ನ ರವಿಯಾಗಿ (ಲಲಲ) ನೀ ಬಂದೇ (ಆಆಆಆ)  
ಗಂಡು : ನೀ ಬಂದೇ (ಆಆಆಆ)

ಗಂಡು : ನೂರಾರೂ ಆಸೆಗಳೂ                
ಹೆಣ್ಣು : ಇರುನೆರಳ ತಾರೆಗಳೂ ಹಂಚಿಕೆಯ ಬಯಕೆಗಳೂ 
ಗಂಡು : ಕಡಲಾಳ ಮುತ್ತುಗಳೂ 
ಹೆಣ್ಣು : ಆನಂದಕ್ಷತೆಯ ಅನುರಾಗದಾರುತಿಯ 
          ಆನಂದಕ್ಷತೆಯ ಅನುರಾಗದಾರುತಿಯ ಜನುಮ ಜನುಮದಾ ಮೈತ್ರೀ ಇನಿಯು ಸನಿಹವೂ 
           ಬಾನಾಗಲದ ನಂದನಿಗೇ (ಲಲಲ)  ನಗೆ ಹೊನ್ನ ರವಿಯಾಗಿ (ಲಲಲ) ನೀ ಬಂದೇ (ಆಆಆಆ)  
ಗಂಡು : ಬೇಸರದ ವೈಯ್ಯಮನಸ್ಸಾ ಬರುಡಾದ ಬಾಳಲ್ಲಿ ಹಾಲ ಹುಣ್ಣಿಮೇ ಶಶಿಯಾಗಿ ನೀ ಬಂದೇ .. 
ಹೆಣ್ಣು :  ನೀ ಬಂದೇ                         ಗಂಡು : ಓ...  ನೀ ಬಂದೇ .. 
------------------------------------------------------------------------------------------------------------

ಅಂತರಂಗದ ಮೃದಂಗ (೧೯೯೧) - ಗ್ರಹಣ ಗ್ರಹಣ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಗಜೇಂದ್ರ ಕೋಟೆ, ಗಾಯನ : ಎಸ್.ಜಾನಕೀ, 

ಕೋರಸ್ :  ಆಆಆ... ಆಆಆ... ಆಆಆ 
ಹೆಣ್ಣು : ಗ್ರಹಣಾ .. ಗ್ರಹಣಾ .. ಗ್ರಹಣಾ ..  
          ಉರಿವ ರವಿಗೂ ನಗುವ ಶಶಿಗೂ ಬಿಡದ ಬೆನ್ನ.. ಗ್ರಹಣ.. ಗ್ರಹಣ  ಗ್ರಹಣ.. ಗ್ರಹಣ      

ಹೆಣ್ಣು : ಅಂದದ ಹೂವೂ ಆನಂದದಿ ನಗಲೂ ಹಂಬಲಿಸುವ ಮಧೂ ಸಂಕ್ರಮಣ 
          ಅಂದದ ಹೂವೂ ಆನಂದದಿ ನಗಲೂ ಹಂಬಲಿಸುವ ಮಧೂ ಸಂಕ್ರಮಣ 
          ತರೆಗಲೇ ಜರುಗಿ ಹಿತಸುಖ ಮರುಗಿ 
          ತರೆಗಲೇ ಜರುಗಿ ಹಿತಸುಖ ಮರುಗಿ ಹೇಮಂತ ಋತುವಾ ಆಕ್ರಮಣ... ಗ್ರಹಣಾ .. ಗ್ರಹಣಾ ..  

ಹೆಣ್ಣು :ಮುತ್ತಿನ ಮಳೆಹನಿ ಹಳ್ಳದಿ ಹರಿಯಲೂ ಹೋಗುವ ತೆನೆಗೆ ಆಭರಣ 
         ಮುತ್ತಿನ ಮಳೆಹನಿ ಹಳ್ಳದಿ ಹರಿಯಲೂ ಹೋಗುವ ತೆನೆಗೆ ಆಭರಣ   
         ಪೃಕೃತಿಗೇ ವಿಕೋಪಗೇ ತಲೆದೂರುವ ಕ್ಷಾಮವೇ 
         ಪೃಕೃತಿಗೇ ವಿಕೋಪಗೇ ತಲೆದೂರುವ ಕ್ಷಾಮವೇ ಸೃಷ್ಟಿಯ ಪಥಕ್ಕೆ ನೊಂದ ಮನ 
          ಗ್ರಹಣಾ .. ಗ್ರಹಣಾ ..  
ಕೋರಸ್ : ಓಂ ತನನನ ಹೈಲೇಸಾ  ಓಂ ತನನನ ಹೈಲೇಸಾ  ಓಂ ತನನನ ಹೈಲೇಸಾ  
   
ಹೆಣ್ಣು : ಸೃಷ್ಟಿಯ ಕತ್ತಲ ಬೆಳಗೋ ಜ್ಯೋತೀ ಅಂಬರ ನೇಸರ ಸಿಂಧೂರ.. 
           ಸೃಷ್ಟಿಯ ಕತ್ತಲ ಬೆಳಗೋ ಜ್ಯೋತೀ ಅಂಬರ ನೇಸರ ಸಿಂಧೂರ.. 
           ಹೃದಯಾಂತರಾಳದ ಭಾವವಿನಾಶದೇ  
           ಹೃದಯಾಂತರಾಳದ ಭಾವವಿನಾಶದೇ ಶೋಕದ ಉತ್ತರ ಸಂಹಾರ... ಆಆಅ   
          ಗ್ರಹಣಾ .. ಗ್ರಹಣಾ ..  ಗ್ರಹಣಾ ..  
-----------------------------------------------------------------------------------------------------------

No comments:

Post a Comment