1126. ಅಂತಿಮ ತೀರ್ಪು (೧೯೮೭)

ಅಂತಿಮ ತೀರ್ಪು ಚಿತ್ರದ ಹಾಡುಗಳು 
  1. ಬಾರೋ ನನ್ನ ಮುದ್ದು ಚಿನ್ನ  
  2. ಆ ದೇವರೇ ಹೆದರಿದ ಜನರಿಗೇ 
ಅಂತಿಮ ತೀರ್ಪು (೧೯೮೭) - ಬಾರೋ ನನ್ನ ಮುದ್ದು ಚಿನ್ನ  
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಹೆಣ್ಣು : ಬಾರೋ ನನ್ನ ಮುದ್ದು ಚಿನ್ನ ನೀನು ನೀಡೋ ಮುತ್ತ ಚೆನ್ನ
         ದೂರ ದೂರ ಹೋಗಬೇಡವೋ ಯಾರಿಗೂ ಹೇಳೋದಿಲ್ಲ ಚಿನ್ನ
         ತೋಳಿಂದ ಬಳಸಿಗ ನನ್ನಾ
ಗಂಡು : ಬಾರೆ ನನ್ನ ಮುದ್ದು ಚಿನ್ನ ನೀನು ನೀಡೋ ಮುತ್ತು ಚೆನ್ನ
           ದೂರ ದೂರ ಹೋಗಬೇಡವೇ ತೋಳಿಂದ ಬಳಸಿಗ ನನ್ನ

ಗಂಡು : ನಿನ್ನ ನಗುವಲ್ಲಿ ಸಿಹಿ ಜೇನು ತುಂಬಿತ್ತು ಜೇನಿನಡಿಯಲ್ಲಿ
           ಮುತ್ತಿನ ಸಾಲಿತ್ತು ನೀನು ನಕ್ಕು ನೋಡಿದಾಗ ಜೀವ ಹಾರಿತ್ತು
ಹೆಣ್ಣು : ಜೀವ ಹಾರಿತ್ತು ಅದು ನನ್ನ ಸೇರಿತ್ತು ಮೂರೂ ಜನ್ಮಗಳ ಪ್ರೇಮಿಯ ಕೂಡಿತ್ತು
          ಜೀವ ಜೀವ ಸೇರಿದಾಗ ಪ್ರೀತಿ ಬಂದಿತ್ತು ಹಲೋ ...
ಹೆಣ್ಣು : ಹೊತ್ತು ಮೀರಿತ್ತು ನಿದ್ದೆ ಬರಲಿಲ್ಲ ಮೋಸ ಮಾಡಿತ್ತು ಯಾಕೋ ಗೊತ್ತಿಲ್ಲ
         ರಾತ್ರಿಯೆಲ್ಲ ನಿನ್ನ ರೂಪ ಕಣ್ಣ ತುಂಬಿತ್ತು
ಗಂಡು : ಕಣ್ಣ ತುಂಬಿತ್ತು ಮತ್ತು ಏರಿತ್ತು ಏನು ಬೇಕಿತ್ತು ಅದು ನಿನ್ನ ಬೇಡಿತ್ತು
            ನಾನು ನೀನು ಸೇರಲೇನು ಆಸೆ ಕೂಗಿತ್ತು ಹಲೋ ...
ಹೆಣ್ಣು : ಬಾರೋ ನನ್ನ ಮುದ್ದು ಚಿನ್ನ ನೀನು ನೀಡೋ ಮುತ್ತ ಚೆನ್ನ
         ದೂರ ದೂರ ಹೋಗಬೇಡವೋ ಯಾರಿಗೂ ಹೇಳೋದಿಲ್ಲ ಚಿನ್ನ
         ತೋಳಿಂದ ಬಳಸಿಗ ನನ್ನಾ
ಗಂಡು : ಬಾರೆ ನನ್ನ ಮುದ್ದು ಚಿನ್ನ ನೀನು ನೀಡೋ ಮುತ್ತು ಚೆನ್ನ
           ದೂರ ದೂರ ಹೋಗಬೇಡವೇ ತೋಳಿಂದ ಬಳಸಿಗ ನನ್ನ 
--------------------------------------------------------------------------------------------------------------------------

ಅಂತಿಮ ತೀರ್ಪು (೧೯೮೭) - ಆ ದೇವರೇ ಹೆದರಿದ ಜನರಿಗೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಆ ದೇವರೇ ಹೆದರಿದ ಜನರಿಗೇ ಈ ಭೂಮಿಯಾ ಪಾಪದಾ ಸೃಷ್ಟಿಗೇ
ಕಾಪಾಡುವ ಕೈಯೇ ಮುರಿದಿದೇ ಕಾಯೋ ಬೇಲಿಯೇ ಹೊಲವಾ ಮೇದಿದೆ
ಮೋಸವೇ ಗೆದ್ದಿದೇ ನ್ಯಾಯವೇ ಸತ್ತಿತೇ

ವೃತ್ತಿ ಕಲಿಸಿದ ನಿಷ್ಠೆ  ಶಿಕ್ಷಣ ಮಾಡಿದ ಪ್ರಮಾಣ ಮಾಡಿದ ಪ್ರಮಾಣ
ಎದೆಯಲಿ ತುಂಬಿದೆ ಬೆವರಲಿ ಹರಿದಿದೆ ದುಷ್ಟ ನಿಗ್ರಹವ ಮಾಡಲು
ನನ್ನದು ಒಂಟಿ ಪ್ರಯಾಣ  ಒಂಟಿ ಪ್ರಯಾಣ
ತಡೆಯುವಾ ಕೈಗಳೇ ಸಾವಿರ ಇಲ್ಲಿದೆ
ನ್ಯಾಯ ದೇವತೆಗೆ ಕಣ್ಣಿಲ್ಲ ಸರಿ ಕಿವಿ ಏನಾಯಿತು
ಕಿವಿ ಇಲ್ಲ ಸರಿ ಮನಸ್ಸೇನಾಯಿತು ಮನಸಿಲ್ಲ ಸರಿ ಉಸಿರೇನಾಯಿತು
ನ್ಯಾಯ  ಇಲ್ಲಿ ಮಾಯಾ ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ
ಆ ದೇವರೇ ಹೆದರಿದ ಜನರಿಗೇ ಈ ಭೂಮಿಯಾ ಪಾಪದಾ ಸೃಷ್ಟಿಗೇ

ನ್ಯಾಯ ದೇವತೆಯ ಬತ್ತಳಿಕೆಯಲಿ ಇರುವುದೊಂದೇ ಬಾಣ 
ಅದಕ್ಕಿಲ್ಲ ಈಗ ಪ್ರಾಣ ಲಂಚಕೆ ಮಣಿದಿದೆ ಮಂಚಕೆ ಒಲಿದಿದೆ 
ದೇಶ ದ್ರೋಹಿಗಳ ಕೈಯಲಿ ಇಂದು ಘೋರ ವಿಷದ ಬಾಣ ಜೊತೆಯಲಿ ಜನರ ಮುಗ್ದ ಪ್ರಾಣ
ಹಣಬಲ ಮರೆದಿದೆ ಛಲಬಲ ಇರಿದಿದೆ ಗಾಂಧೀ ತತ್ವಗಳು ಬುದ್ಧ ನೀತಿಗಳು ಕಾಲಕಸವು ಇಲ್ಲಿ ಹಾಂ... 
ಬೂಟಿನಡಿಯಲಿ ಸಿಕ್ಕಿ ನರಳಿದೆ ದೇಶಭಕ್ತಿ ಇಲ್ಲಿ ಮನುಷ್ಯ ನ್ಯಾಯದ ಅಧಿಕಾರದ ಅಧೀನ 
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ... 
ಆ ದೇವರೇ ಹೆದರಿದ ಜನರಿಗೇ ಈ ಭೂಮಿಯಾ ಪಾಪದಾ ಸೃಷ್ಟಿಗೇ
--------------------------------------------------------------------------------------------------------------------------

No comments:

Post a Comment