1143. ಅನುರಾಧ ( ೧೯೬೭)

ಅನುರಾಧ ಚಲನಚಿತ್ರಗಳು 
  1. ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೇ 
  2. ಬಂದೇಯಾ ಕರೆಯಾ ಕೇಳಿ ಬಂದೆಯಾ 
  3. ಗುಮ್ಮನ ಕರೆಯದಿರೇ 
  4. ತೂಗುವೇ ರಂಗನ ತೂಗುವೇ ಕೃಷ್ಣನ 
  5. ತೂಗುವೇ ರಂಗನ ತೂಗುವೇ ಕೃಷ್ಣನ (ಬಿ.ಕೆ.ಸುಮಿತ್ರಾ )
ಅನುರಾಧ ( ೧೯೬೭) - ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೇ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್, ಎಸ್.ಜಾನಕೀ 

ಗಂಡು : ಹೂಂಹೂಂ  ಹೂಂಹೂಂ  ಹೂಂಹೂಂ  ಹೂಂಹೂಂ  ಆಆಆ... ಓಹೋಹೋ
           ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೇ ನನ್ನ ಮನದೀ ಮೂಡುತಿದೆ ಹೇಳೂ ಏತಕೇ
ಹೆಣ್ಣು : ಸಂತೋಷದಾ ಸಂಭ್ರಮದಾ ಸಮಯವೂ ತಂದ ಕಾಣಿಕೇ .. ಏಏಏಏಏ
          ನಿಮ್ಮ ಹಾಡೂ ಕೇಳಿ ಕೇಳಿ ಹಾಡುವ ಬಯಕೇ ನನ್ನ ಮನವ ಕುಲುಕುತಿದೆ ಹೇಳೂ ಏತಕೆ

ಗಂಡು : ಹುಣ್ಣಿಮೆಯ ಚಂದಿರನ ಕಂಡೋಡನೇ ನೈದಿಲೆಯ ಹೂವೂ ನಗುವುದೇತಕೇ
ಹೆಣ್ಣು : ಆಆಆ.. ಆಆಆ.. ಆಆಆಆಅ
         ಕುಣಿಯುತಲೀ ಮಧುಮಾಸ ಬಂದೊಡನೇ ಕೋಗಿಲೆಯೂ ಹಾಡಲೂ ನನ್ನದೂ ಏತಕೇ 
ಗಂಡು : ಇದೇ ಜಗದ ಪ್ರೇಮಿಗಳಿಗೇ ಸಂದೇಶವೂ
ಹೆಣ್ಣು : ನಿಮ್ಮ ಹಾಡೂ ಕೇಳಿ ಕೇಳಿ ಹಾಡುವ ಬಯಕೇ ನನ್ನ ಮನವ ಕುಲುಕುತಿದೆ ಹೇಳೂ ಏತಕೆ

ಹೆಣ್ಣು : ಯೌವ್ವನವೂ ಬಾಳಿನಲೀ ಬಂದಾಗ ಸಂಗಾತಿಯ ಸ್ನೇಹದ ಆಸೇ ಏತಕೇ ..
ಗಂಡು : ಮನಸು ಮನಸು ಕಲೆತಾಗ ಅನುರಾಗ ಹೃದಯವನೂ ಕೆಣಕುವುದೂ ಹೇಳೂ ಏತಕೇ ..
ಹೆಣ್ಣು : ಅದೇ ಪ್ರೇಮ ಸಂಬಂಧವೂ ಜಗದ ನಿಯಮವೂ 
ಗಂಡು : ನಿನ್ನ ಕಣ್ಣ ನೋಡಿ ನೋಡಿ ಹಾಡುವ ಬಯಕೇ ನನ್ನ ಮನದೀ ಮೂಡುತಿದೆ ಹೇಳೂ ಏತಕೇ
ಹೆಣ್ಣು : ನಿಮ್ಮ ಹಾಡೂ ಕೇಳಿ ಕೇಳಿ ಹಾಡುವ ಬಯಕೇ ನನ್ನ ಮನವ ಕುಲುಕುತಿದೆ ಹೇಳೂ ಏತಕೆ
ಇಬ್ಬರು : ಸಂತೋಷದಾ ಸಂಭ್ರಮದಾ ಸಮಯವೂ ತಂದ ಕಾಣಿಕೇ .. ಏಏಏಏಏ
            ಆಹಾ ಆಹಾ ಆಹಾಹಾ ಲಾಲಾಲ ಲಾಲಾಲ ಲಾಲಾಲ ಹೂಂಹೂಂಹೂಂಹೂಂ
--------------------------------------------------------------------------------------------------------------------------

ಅನುರಾಧ ( ೧೯೬೭) - ಬಂದೇಯಾ ಕರೆಯಾ ಕೇಳಿ ಬಂದೆಯಾ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಬಿ.ಕೆ.ಸುಮಿತ್ರಾ 

ಬಂದೇಯಾ ಕರೆಯಾ ಕೇಳಿ ಬಂದೇಯಾ
ಕೃಷ್ಣಾ.... ಕರೆಯಾ ಕೇಳಿ ಬಂದೇಯಾ
ನಿನ್ನ ನಗುವ ಮೊಗವ ಕಾಣುವ ಹಂಬಲವ ಪೂರೈಸಲಿಂದೂ ಬಂದೆಯಾ ಕೃಷ್ಣಾ...

ಕಳ್ಳನಾಟ ಬೀರಿ ಮನವ ತಲ್ಲಣಗೊಳಿಸೀ... ಆಆಆ... ಆಆಆ...
ಕಳ್ಳನಾಟ ಬೀರಿ ಮನವ ತಲ್ಲಣಗೊಳಿಸೀ ಮಳ್ಳಿ ಹಾಗೇ ಬಳಿಗೇ ಸಾರೀ ಹೃದಯವ ಅರಳಿಸಿ
ಸವಿ ನುಡಿ ಮಾಲೆಯ ಉಡುಗೋರೆ ನೀಡಲೂ ಆಶಿಸೀ ಮಾನಿನಿಯ
ಕರೆಯಾ ಕೇಳಿ ಬಂದೇಯಾ ... ಕೃಷ್ಣ ಕರೆಯಾ ಕೇಳಿ ಬಂದೆಯಾ

ಪದುಮ ಮುತ್ತಿನ ಕರಗಳಿಂದ ಸೇವೆಹೊಂದಲೆಂದೂ ಬಯಸೀ
ಪದುಮ ಮುತ್ತಿನ ಕರಗಳಿಂದ ಸೇವೆಹೊಂದಲೆಂದೂ ಬಯಸೀ
ಮಾಧವ ಮಾಹಾದಾನಂದವ ನೀಡಲಾಷಿಸಿ
ಮಾಧವ ಮಾಹಾದಾನಂದವ ನೀಡಲಾಷಿಸಿ ಪಾದಕಮಲದಲ್ಲಿ ಬೆರೆವ ಭಾಗ್ಯ ಕರುಣಿಸೀ
ತರುಣಿಯ ಜೀವನದ ಸಫಲವಗೊಳಿಸಲೂ ಸ್ವಾಮೀ ಕಾಮಿನಿಯ
ಕರೆಯಾ ಕೇಳಿ ಬಂದೇಯಾ ... ಕೃಷ್ಣ ಕರೆಯಾ ಕೇಳಿ ಬಂದೆಯಾ
ನಿನ್ನ ನಗುವ ಮೊಗವ ಕಾಣುವ ಹಂಬಲವ ಪೂರೈಸಲಿಂದೂ ಬಂದೆಯಾ ಕೃಷ್ಣಾ...
--------------------------------------------------------------------------------------------------------------------------

ಅನುರಾಧ ( ೧೯೬೭) - ಗುಮ್ಮನ ಕರೆಯದಿರೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್, ಎಸ್.ಜಾನಕೀ

ಗಂಡು : ಆಆಆ... ಆಆಆ... ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ
ಹೆಣ್ಣು :  ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ
          ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ
          ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ

ಹೆಣ್ಣು : ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ
          ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ
          ಚಿಣ್ಣರ ಬಡಿಯೆನು ಅಣ್ಣನ ಬೈಯೆನು ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ
          ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ

ಹೆಣ್ಣು : ಬಾವಿಗೆ ಹೋಗೆ ಕಾಣೆ ಅಮ್ಮ ನಾನು ಹಾವಿನೊಳಾಡಿ  ಕಾಣೆ
          ಬಾವಿಗೆ ಹೋಗೆ ಕಾಣೆ ಅಮ್ಮ ನಾನು ಹಾವಿನೊಳಾಡಿ ಕಾಣೆ
          ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ ದೇವರಂತೆ ಒಂದು ಠಾವಿಗೆ ಕೂರುವೆ
          ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ
ಗಂಡು : ಮಗನ ಮಾತನು ಕೇಳುತ...  ಗೋಪಿ... ದೇವಿ..  ಮುಗುಳು ನಗುವು ನಗುತಾ
          ಜಗದೊಡೆಯ ಶ್ರಿ ಪುರಂದರವಿಠಲನ 
          ಜಗದೊಡೆಯ ಶ್ರಿ ಪುರಂದರವಿಠಲನ ಬಿಗಿದಪ್ಪಿಕೊಂಡಳು ಮೋಹದಿಂದಾದ
          ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ
--------------------------------------------------------------------------------------------------------------------------

ಅನುರಾಧ ( ೧೯೬೭) - ತೂಗುವೇ ಕೃಷ್ಣನ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಪುರಂದದಾಸರು ಗಾಯನ : ಪಿ.ಬಿ.ಎಸ್, 

ಆಆಆ... ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ

ಮೇಲುಕೋಟೆ ಸ್ವಾಮಿ ಚೆಲುವ ರಾಯನ ಬೇಲೂರ ಶ್ರೀಚೆನ್ನಕೇಶವನಾ......
ಉಡುಪಿಯಲಿ ವಾಸಿಸುವ ಶ್ರೀಕೃಷ್ಣನ ಶ್ರೀರಂಗಪಟ್ಟಣದಿ ಮಲಗಿದವನಾ......
ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ

ಕಣ್ಣಲೇ ಹುಣ್ಣಿಮೆ ತಂದವನ ನಗುವಲ್ಲೇ ಮಲ್ಲಿಗೆ ಚೆಲ್ಲುವನಾ.....
ಚೆಲುವಲ್ಲೇ ತಾವರೆಯ ನಾಚಿಸುವನ ಈ ಮನೆಗೆ ಬೆಳಕಾಗಿ ಬಂದವನಾ.....
ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
ಆಲದೆಲೆಯ ಮೇಲೆ ಮಲಗಿದವನಾ ಹತ್ತವಕಾಗದ ಪರಮಾತ್ಮನ
ಮತ್ತೆ ನಮಗಾಗಿ ಇಳೆಗೆ ಬಂದವನ ಜಗವನ್ನೇ ತೋರುವ ಜಗದೀಶನಾ......
ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
ಜೋ ಜೋ ಜೋ ಜೋ ಹಾಡುವೇ.. ಜೋ ಜೋ ಜೋ ಜೋ ಹಾಡುವೇ.. 
--------------------------------------------------------------------------------------------------------------------------

ಅನುರಾಧ ( ೧೯೬೭) - ತೂಗುವೇ ಕೃಷ್ಣನ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಪುರಂದದಾಸರು ಗಾಯನ : ಪಿ.ಲೀಲಾ 

ಹೆಣ್ಣು : ಆಆಆ... ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
         ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ

ಹೆಣ್ಣು : ಕಣ್ಣಲೇ ಹುಣ್ಣಿಮೆ ತಂದವನ ನಗುವಲ್ಲೇ ಮಲ್ಲಿಗೆ ಚೆಲ್ಲುವನಾ.....
           ಚೆಲುವಲ್ಲೇ ತಾವರೆಯ ನಾಚಿಸುವನ ಈ ಮನೆಗೆ ಬೆಳಕಾಗಿ ಬಂದವನಾ.....
         ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
ಹೆಣ್ಣು : ಆಲದೆಲೆಯ ಮೇಲೆ ಮಲಗಿದವನಾ ಸತ್ವವ ಸಾರದ ಪರಮಾತ್ಮನ
          ಮತ್ತೆ ನಮಗಾಗಿ ಇಳೆಗೆ ಬಂದವನ ಜಗವನ್ನೇ ತೋರುವ ಜಗದೀಶನಾ......
         ತೂಗುವೆ ರಂಗನ ತೂಗುವೆ ಕೃಷ್ಣನ ತೂಗಿ ಜೋ ಜೋ ಹಾಡುವೇ
         ಜೋ ಜೋ ಜೋ ಜೋ ಹಾಡುವೇ.. 
         ಜೋ ಜೋ ಜೋ ಜೋ ಹಾಡುವೇ.. 
--------------------------------------------------------------------------------------------------------------------------

No comments:

Post a Comment