1153. ಅನುರಕ್ತೆ (೧೯೮೦)


ಅನುರಕ್ತೆ ಚಲನಚಿತ್ರದ ಹಾಡುಗಳು 
  1. ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
  2. ಹೊನ್ನದ ಲೋಕದಲ್ಲಿ 
  3. ನೊಂದು ಬೆಂದ ಬಾಳಿಗೇ 
  4. ಸ್ನೇಹ ಜೀವನ 
ಅನುರಕ್ತೆ (೧೯೮೦) - ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
ಸಂಗೀತ : ಅಶ್ವಥ ವೈಧೀ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ವಾಣಿಜಯರಾಂ

ಹೆಣ್ಣು : ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
          ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ  ಪೂಂಜಾ
ಕೋರಸ್ : ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
          ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ  ಪೂಂಜಾ
ಹೆಣ್ಣು : ಸವಿಯುವಂಥ ಹಣ್ಣು ಬಿರಿದೂ ಮಿನುಗುವಂಥ ಬಣ್ಣ ಹೊಳೆದು
          ಗೋರಂಟಿ ನಗುವಾ ಚೆಲುವೇ ಮಾತಾಡಿದೇ
          ಗೋರಂಟಿ ನಗುವಾ ಚೆಲುವೇ ಮಾತಾಡಿದೇ .. ಹೊಯ್
ಕೋರಸ್ : ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
          ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ  ಪೂಂಜಾ

ಹೆಣ್ಣು : ಅಲ್ಲಿ ಇಲ್ಲಿ ಸಾಲು ಸಾಲು ಹಕ್ಕಿ ಹಾರಿವೇ ಸುತ್ತಮುತ್ತ ಪುಟ್ಟ ಪುಟ್ಟ ಬಳ್ಳಿ ತೂಗಿವೆ
ಕೋರಸ್ :  ಅಲ್ಲಿ ಇಲ್ಲಿ ಸಾಲು ಸಾಲು ಹಕ್ಕಿ ಹಾರಿವೇ ಸುತ್ತಮುತ್ತ ಪುಟ್ಟ ಪುಟ್ಟ ಬಳ್ಳಿ ತೂಗಿವೆ
 ಹೆಣ್ಣು : ಬನವೇ ಹಾಡಿದೇ ಹಳ್ಳ ಹರಿದು ತುಳುಕಿದೇ
           ತಂಪಾದ ಮುಂಗಾರಿದೇ ಇಳೆಯು ತವಕ ಕೋರಿದೇ
           ತಂಪಾದ ಮುಂಗಾರಿದೇ ಇಳೆಯು ತವಕ ಕೋರಿದೇ
ಕೋರಸ್ : ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
          ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ  ಪೂಂಜಾ

ಹೆಣ್ಣು : ಮತ್ತೇ ಮತ್ತೇ ನೋಟಕ್ಕಾಗಿ ಕುಣಿತಾ ಕೂಡಿದೆ ಹಿಗ್ಗಿ ಹಿಗ್ಗಿ ನಮ್ಮ ಕಣ್ಣು ಗೆಲುವಾ ಕಂಡಿದೇ
ಕೋರಸ್ : ಮತ್ತೇ ಮತ್ತೇ ನೋಟಕ್ಕಾಗಿ ಕುಣಿತಾ ಕೂಡಿದೆ ಹಿಗ್ಗಿ ಹಿಗ್ಗಿ ನಮ್ಮ ಕಣ್ಣು ಗೆಲುವಾ ಕಂಡಿದೇ
ಹೆಣ್ಣು : ಹಗಲು ಒಲಿದಿದೆ ರಮ್ಯ ಸಮಯ ಕರೆದಿದೇ ರಂಗಾದ ಸಂತೋಷಕೇ ಹೃದಯ ತುಂಬಿ ಬಂದಿದೆ
          ರಂಗಾದ ಸಂತೋಷಕೇ ಹೃದಯ ತುಂಬಿ ಬಂದಿದೆ
ಕೋರಸ್ : ಮೂಡುತ ಬಂದಾನೋ ನಮ್ಮ ರಶ್ಮಿ ರಾಜತೇಜಾ
          ಜ್ಯೋತಿಯ ತಂದಾನೋ ನಮ್ಮ ಕಣ್ಣಕಾಂತಿ  ಪೂಂಜಾ
--------------------------------------------------------------------------------------------------------------------------

ಅನುರಕ್ತೆ (೧೯೮೦) - ಹೊನ್ನದ ಲೋಕದಲ್ಲಿ
ಸಂಗೀತ : ಅಶ್ವಥ ವೈಧೀ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ

ಹೆಣ್ಣು : ಉನ್ಮಾದ ಲೋಕದಲ್ಲಿ ಮನ ತುಂಬಿದೆ
ಗಂಡು : ಸಂಮೋಹ ಬಾಳಿನಲಿ ಸಿರಿ ಬಂದಿದೇ...
ಗಂಡು : ಆಸೆಯ                     ಹೆಣ್ಣು : ಆಸೆಯ           
ಗಂಡು : ನವಸುಮ                 ಹೆಣ್ಣು : ನವಸುಮ
ಗಂಡು : ಮನಸಾಗಿದೇ ..         ಹೆಣ್ಣು : ಪ್ರೀತಿಯ ಹೂಬನ ತೆರವಾಗಿದೆ
ಇಬ್ಬರು : ಉನ್ಮಾದ ಲೋಕದಲ್ಲಿ ಮನ ತುಂಬಿದೆ

ಹೆಣ್ಣು : ಅನುಪಮಾ ಸ್ನೇಹದಲ್ಲಿ ಒಡಲಾ ಹಾಡಿದೇ 
          ಒಲುಮೆಯ ಕ್ಷೀರದಲ್ಲಿ ನಗೆಯೆಲ್ಲಾ ತೇಲಿದೆ 
ಗಂಡು : ಅನುಪಮಾ ಸ್ನೇಹದಲ್ಲಿ ಒಡಲು ಹಾಡಿದೇ 
          ಒಲುಮೆಯ ಕ್ಷೀರದಲ್ಲಿ ನಗೆಯೆಲ್ಲಾ ತೇಲಿದೆ 
ಗಂಡು : ಸೊಗಸಿನಾ                 ಹೆಣ್ಣು : ಚೇತನಾ 
ಇಬ್ಬರು : ಸೊಗಸಿನ ಚೇತನಾ ಚೆಲುವಾ ಚಿಮ್ಮಿದೇ 
ಹೆಣ್ಣು : ತನುಮನ ದಿನ ದಿನ             ಗಂಡು : ಬೆಡಗಿನ ಕ್ಷಣ ಕ್ಷಣ 
ಇಬ್ಬರು : ಉಲ್ಲಾಸ ತಂದಿದೇ  
ಹೆಣ್ಣು : ಆಸೆಯ ನವಸುಮ ನವಸುಮ ನನಸಾಗಿದೇ
ಗಂಡು  : ಪ್ರೀತಿಯ ಹೂಬನ ತೆರವಾಗಿದೆ
ಇಬ್ಬರು : ಉನ್ಮಾದ ಲೋಕದಲ್ಲಿ ಮನ ತುಂಬಿದೆ
ಗಂಡು : ಪಮಪಗಮಪ ಗಮಪ ಪಮಪಗಮಪ ಗಮಪ ಪಮಪಗಮಪ ಗಮಪ
           (ಆಆಆಅ ) ಪಮಪಗಮಪ ಗಮಪ ಪಮಪಗಮಪ ಗಮಪ ಆಆಆ (ಆಆಆ)  ಆಆಆ (ಆಆಆ)
           ಆಆಆ.. (ಮಪ ಮಪ  ಮಪ ಮಪ  )

ಹೆಣ್ಣು : ತಂಪಿನ ತಾಣದಲ್ಲಿ ಮಿಲನ ಸೇರಿದೇ ಸೊಂಪಿನ ಮೋಜಿನಲ್ಲಿ ಸುಖವೆಲ್ಲಾ ಮೂಡಿದೆ
ಗಂಡು : ತಂಪಿನ ತಾಣದಲ್ಲಿ ಮಿಲನ ಸೇರಿದೇ ಸೊಂಪಿನ ಮೋಜಿನಲ್ಲಿ ಸುಖವೆಲ್ಲಾ ಮೂಡಿದೆ
ಹೆಣ್ಣು : ಕಂಡೇ ನಾ..                     ಗಂಡು : ಸುಂದನಾ
ಇಬ್ಬರು : ಕಂಪಿನ ಚಂದನಾ
ಹೆಣ್ಣು : ಕನಸಾ ಹೊಮ್ಮಿದೇ
ಗಂಡು : ಎಳೇ ಎಳೇ ಹೊಸ ಕಳೇ            ಹೆಣ್ಣು : ಒಲವಿನ ಸವಿನೆಲೆ
ಇಬ್ಬರು : ಉತ್ಸಾಹ ಕಂಡಿದೇ
ಹೆಣ್ಣು : ಆಸೆಯ ನವಸುಮ ನವಸುಮ ನನಸಾಗಿದೇ
ಗಂಡು  : ಪ್ರೀತಿಯ ಹೂಬನ ತೆರವಾಗಿದೆ
ಇಬ್ಬರು : ಆಸೆಯ ನವಸುಮ ನವಸುಮ ನನಸಾಗಿದೇ  ಪ್ರೀತಿಯ ಹೂಬನ ತೆರವಾಗಿದೆ
--------------------------------------------------------------------------------------------------------------------------

ಅನುರಕ್ತೆ (೧೯೮೦) - ನೊಂದು ಬೆಂದ ಬಾಳಿಗೇ
ಸಂಗೀತ : ಅಶ್ವಥ ವೈಧೀ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ

ನೊಂದು ಬೆಂದ ಬಾಳಿಗೇ ಬಂದೇ ಬಂತೂ ಶುಭ ಘಳಿಗೇ
ದೂರ ಹೋದ ನೂರು ಆಸೇ ಮತ್ತೇ ಮಿನುಗಿವೇ
ದೂರ ಹೋದ ನೂರು ಆಸೇ ಮತ್ತೇ ಮಿನುಗಿವೇ
ನೊಂದು ಬೆಂದ ಬಾಳಿಗೇ

ಏನೆಲ್ಲಾ ಭವಣೆ ಹಗಲಿರುಳೂ ತಂದೇ ಎಷ್ಟೊಂದು ದಾರುಣ ಚಿಂತೇ
ಎಡಬಿಡದೇ ಕೊರಗೂ ಸವಿಸುತ ನಡೆದೇ ಸೌಮ್ಯವ ಹಾದಿಯ ತುಳಿದೇ
ಜೀವ ಭಾವದಲ್ಲೂ ಎಷ್ಟೇ ತ್ಯಾಗ ತುಂಬಿಬಿಟ್ಟೇ ನಿನ್ನ
ಜೀವ ಭಾವದಲ್ಲೂ ಎಷ್ಟೇ ತ್ಯಾಗ ತುಂಬಿಬಿಟ್ಟೇ
ನಿನ್ನ ನೀನೂ ಸುಖದಿ ಬಾಳೂ ಭಾಗ್ಯ ಬಂದಿದೇ ...
ನೊಂದು ಬೆಂದ ಬಾಳಿಗೇ ಬಂದೇ ಬಂತೂ ಶುಭ ಘಳಿಗೇ
ದೂರ ಹೋದ ನೂರು ಆಸೇ ಮತ್ತೇ ಮಿನುಗಿವೇ
ನೊಂದು ಬೆಂದ ಬಾಳಿಗೇ

ಎಂದೆಂದೂ ನಗುವಾ ಒಲುಮೆಯ ಕೊಡುವಾ ಆನಂದ ಸಿಗಲೀ ನಿನಗೇ 
ಅನುದಿನವೂ ಪಡೆವ ಮುತೈದೆ ಬದುಕೂ ತರಲೆನ್ನ ಸಿಹಿಯ ಕೋಡುಗೇ 
ಆಸೇ ಹೂವೂ ಅರಳೀ ರಮ್ಯ ಕಂಪು ತುಂಬಿ ಬರಲೀ 
ನಿನ್ನ ಆಸೇ ಹೂವೂ ಅರಳೀ ರಮ್ಯ ಕಂಪು ತುಂಬಿ ಬರಲೀ 
ಇನ್ನೂ ನೀನೂ ಸುಖದಿ ಬಾಳೂ ಭಾಗ್ಯ ಬಂದಿದೇ 
ನೊಂದು ಬೆಂದ ಬಾಳಿಗೇ ಬಂದೇ ಬಂತೂ ಶುಭ ಘಳಿಗೇ
ದೂರ ಹೋದ ನೂರು ಆಸೇ ಮತ್ತೇ ಮಿನುಗಿವೇ
ದೂರ ಹೋದ ನೂರು ಆಸೇ ಮತ್ತೇ ಮಿನುಗಿವೇ... ಮತ್ತೇ ಮಿನುಗಿವೇ
--------------------------------------------------------------------------------------------------------------------------

ಅನುರಕ್ತೆ (೧೯೮೦) - ಸ್ನೇಹ ಜೀವನ
ಸಂಗೀತ : ಅಶ್ವಥ ವೈಧೀ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಸಿ.ಅಶ್ವಥ, ಸುಲೋಚನಾ

ಗಂಡು : ಸ್ನೇಹ ಜೀವನ ಇಂದೂ ಮುಂದೂ ಚಂದಾ ನಾವೆಂದೂ ಕಾಣುವ ಆನಂದ
ಕೋರಸ್ : ಸ್ನೇಹ ಜೀವನ ಇಂದೂ ಮುಂದೂ ಚಂದಾ ನಾವೆಂದೂ ಕಾಣುವ ಆನಂದ
ಹೆಣ್ಣು : ನೋವೂ ನೀಗಲೂ ಬೇಕೂ ಪ್ರೇಮ ಚಂದ ನೂರು ರಂಗು ತುಂಬಿದೇ ಈ ಜನ
ಕೋರಸ್ : ನೋವೂ ನೀಗಲೂ ಬೇಕೂ ಪ್ರೇಮ ಚಂದ ನೂರು ರಂಗು ತುಂಬಿದೇ ಈ ಜನ

ಗಂಡು : ಕಣ್ಣ ನೋಟ ತಂದ   ( ಓ) ನಲ್ಮೆ ರೀತಿ ಚಂದ
ಕೋರಸ್ : ಕಣ್ಣ ನೋಟ ತಂದ   ಓ..  ನಲ್ಮೆ ರೀತಿ ಚಂದ
ಗಂಡು : ನಾವೆಲ್ಲ ಜೊತೆಯಾಗುವಾ
ಕೋರಸ್ : ನಾವೆಲ್ಲ ಜೊತೆಯಾಗುವಾ
ಹೆಣ್ಣು : ಜೀವ ಭಾವ ಇಂದೂ  (ಆ) ಎಲ್ಲ ಪ್ರೀತಿ ಕಂಡೂ (ಓ)
 ಕೋರಸ್ : ಜೀವ ಭಾವ ಇಂದೂ  (ಆ) ಎಲ್ಲ ಪ್ರೀತಿ ಕಂಡೂ (ಓ) ಎಂದೆಂದೂ ಸುಖವನ್ನೂ  ಹೊಂದುವಾ
                ಸ್ನೇಹ ಜೀವನ ಇಂದೂ ಮುಂದೂ ಚಂದಾ ನಾವೆಂದೂ ಕಾಣುವ ಆನಂದ

ಅಶ್ವಥ : ಮೈ ಮನಸ್ಸೂ ಮೀರಿ ಅಂತರಂಗ ಸೇರಿ ಹಗಲಿರುಳೂ ನಾವೂ ಮರೆತೂ
            ಹೂಗಂಧದಂತೇ ಹಾಲುಜೇನಿನಂತೇ ಅನುರಕ್ತರಾಗೀ ಬೆರೆತೂ
            ಕಾಮ ಸೀಮೆ ದಾಟಿ ನಿತ್ಯ ತಿಳಿವ ಮೀಟಿ ಸರಿ ಉದಯ ನೀಡೇ ಪ್ರೇಮಾ.. ಪ್ರೇಮಾ
ಕೋರಸ್ : ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್ ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್
               ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್

ಅಶ್ವಥ : ಚಂದ್ರತಾರೆಯಂಗೇ ರಾಗಾಕಾಣದಾಂಗೇ
            ಚಂದ್ರತಾರೆಯಂಗೇ ರಾಗಾಕಾಣದಾಂಗೇ ನೆಲ ಮುಗಿಲನಂಗೇ
            ಜೋಡಿ ಹಕ್ಕಿಯಂಗೇ ಗಂಡು ಹೆಣ್ಣು ಮಿಲನ ಬೇಗ ಆತ್ಮ ಚರಣ ನಮ್ಮ ಪ್ರೇಮಾ.. ಪ್ರೇಮಾ..
ಕೋರಸ್ : ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್ ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್
               ಜಾಯ್.. ಜಾಯಿನ್ ಜೂಯ್  ಜೂಯ್ ಜಾಯ್

ಅಶ್ವಥ : ಬಿಟ್ಟ ಅದರ ಬದುಕ ಎತ್ತರದ ಕನಸ ಮುಕ್ತತತೆಯ ಕಿತ್ತ ಪಡೆದೂ
            ಇಂದ್ರ ಶಾಪ ಹೊತ್ತ ರಾಮ ರಥದ ಗತ್ತ ನಿಜ ನಿಷ್ಠೆಯತ್ತ ನಡೆದೂ
            ಹಿಡಿ ಸಮಯ ಕಂಡೂ ಸಂಗ ಸವಿಯನ್ನೂ ಉಂಡು ಅನುರಕ್ತವಾಯಿತೂ ಪ್ರೇಮಾ... ಪ್ರೇಮಾ
            ಅನುರಕ್ತವಾಯಿತೂ ಪ್ರೇಮಾ... ಪ್ರೇಮಾ
------------------------------------------------------------------------------------------------------------------------- 

No comments:

Post a Comment