1135. ಅಪರಾಜಿತೆ (೧೯೭೦)




ಅಪರಾಜಿತೆ ಚಲನಚಿತ್ರದ ಹಾಡುಗಳು 
  1. ಅರಳು ಮಲ್ಲಿಗೆ ಅರಳು 
  2. ಕೆಂದೆತ್ತು ಕೈಯಾಗೇ ಕೆಂಪಗೀ ಮೈಯಾಗೇ 
  3. ಬಾರಣ್ಣ ಕುಣಿಯುವ ಹಿಗ್ಗಿ.. 
  4. ಬಯಲಿಗೇ ಬಯಲಾಯ್ತು 
  5. ಏಕೇ ಏಕೇ ಏಕೇ ಏಕೇ 
ಅಪರಾಜಿತೆ (೧೯೭೦) - ಅರಳು ಮಲ್ಲಿಗೆ ಅರಳು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ತರಾಸು ಗಾಯನ : ಎಸ್.ಜಾನಕೀ, ಬಿ.ಕೆ.ಸುಮಿತ್ರಾ

ಸುಮಿತ್ರಾ : ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರೂ
          ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರೂ ಹರಿಪಾದ ಸೇರಲೂ ಅರಳು ಅರಳು
         ಅರಳು ಸಂಪಿಗೇ ತರೆಯೇ ಸೌರಭದ ಸುಮಕಿರಿಯೇ
         ಅರಳು ಸಂಪಿಗೇ ತರೆಯೇ ಸೌರಭದ ಸುಮಕಿರಿಯೇ ಸಿರಿ ಮಾಲೆನೇಳೂ ಅರಳು ಅರಳು
ಇಬ್ಬರು : ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರೂ

ಜಾನಕೀ : ವನದ ದೇವತೇ ತಾನೂ ಒಲಿದಿಕ್ಕ ಸುಮಗಳನೂ
          ಒಲವಿನಿಂದಲೀ ತಂದೂ ಚೆಲುವ ಬೀರುತಲಿಂದೂ
          ವನದ ದೇವತೇ ತಾನೂ ಒಲಿದಿಕ್ಕ ಸುಮಗಳನೂ
          ಒಲವಿನಿಂದಲೀ ತಂದೂ ಚೆಲುವ ಬೀರುತಲಿಂದೂ
ಇಬ್ಬರು : ನೇಯ್ದು ಈ ಮಾಲೆಯನೂ ಹರಿಯಾರ್ಪಿತೇನು
            ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರೂ

ಜಾನಕೀ : ಮನದ ಮನಹರ ಮಾಲೆ ತುಲಕಿ ಪಾವನ ಮಾಲೆ
          ಚರಣ ಕಾರ್ತಿಕವೆಂದೂ ಸ್ಮರಣೆಯಿಂದಲೇ ನೇಯ್ದೂ
          ಮನದ ಮನಹರ ಮಾಲೆ ತುಲಕಿ ಪಾವನ ಮಾಲೆ
          ಚರಣ ಕಾರ್ತಿಕವೆಂದೂ ಸ್ಮರಣೆಯಿಂದಲೇ ನೇಯ್ದೂ
ಇಬ್ಬರು : ಮುಕುತಿ ಮನದಲಿ ನೆನೆದು ಭವದೇ ಭಕುತಿಯ ತಳೆದು 
            ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರೂ ಹರಿಪಾದ ಸೇರಲೂ ಅರಳು ಅರಳು
            ಅರಳು ಮಲ್ಲಿಗೆ ಅರಳು ಬಿರಿದು ಪರಿಮಳ ಬೀರೂ
--------------------------------------------------------------------------------------------------------------------------

ಅಪರಾಜಿತೆ (೧೯೭೦) - ಕೆಂದೆತ್ತು ಕೈಯಾಗೇ ಕೆಂಪಗೀ ಮೈಯಾಗೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ನರೇಂದ್ರಬಾಬು ಗಾಯನ : ನಾಗೇಂದ್ರ, ಎಸ್.ಜಾನಕೀ, ಬಿ.ಕೆ.ಸುಮಿತ್ರಾ

ಗಂಡು : ತದರಿನನೋ.. ಓಓಓಓಓ ಟೂರರ್ ರಹಾ ...
           ಕೆಂದೆತ್ತು ಕೈಯಾಗೇ ಕೆಂಪಗೀ ಮೈಯಾಗೇ
           ಕೆಂದೆತ್ತು ಕೈಯಾಗೇ ಕೆಂಪಗೀ ಮೈಯಾಗೇ ಹೂಡೋದು ಹೊಸ ಬಂಡೀ
           ಹೊಡೆಯೋನು ಹಸುಮಗ ಲಾಲೀಸೇ ಕೇಳು ಬಸವಣ್ಣ ನಿನ್ನ ಬಂಡೆತ್ತಲನೇಸಿ ಹರಿದಾವೂ

ಹೆಣ್ಣು : ಹಟ್ಟಿಯ ಒಳಗೇ ಮುತ್ತು ಸಾಲು ಇಡುವುವಳೇ ಮುತೈದೆ ಕೇಳೇ... 
          ಮುತೈದೆ ಕೇಳೇ ರತಿದೇವಿ ನಮ್ಮವ ಜೊತೆಯಲ್ಲಿ ಬಂದವನೇ ಹೆಸರೇ ಹೇಳೇ.. ಅಹ್ಹಹ್ಹ.. 
          ಆಹಾ.. ಅಕ್ಕಾ ಗಂಡನ ಹೆಸರ ಹೇಳದೇ ಒಳಗ ಹೋಗಕೂಡದು .. ಅಹ್ಹಹ್ಹಹ್ಹ .. ಹೇಳಕ್ಕ... ಹೇಳಕ್ಕ 
          ಶ್ರೀರಾಮಚಂದ್ರ.. ಆಹಾ.. ಅಹ್ಹಹ್ಹಹ್ಹ 
             
ಹೆಣ್ಣು :ಅಕ್ಕಾ ಸರಸ್ವತಿಯೇ ಬಾಕಲಲ್ಲಿ ಯಾಕ್ ನಿಂತೇ..  
         ಅಕ್ಕಾ ಸರಸ್ವತಿಯೇ ಬಾಕಲಲ್ಲಿ ಯಾಕ್ ನಿಂತೇ..  ತಾರೇನೂ ಬಾರೇ ನಿನಗಿಂಬೂ  
         ನಿನಗಿಂಬು ನಮ್ಮನೇ ಸಾಲೂ ಮಂಚವಾ ಹೊರಗಮ್ಮಾ...  ಸಾಲೂ ಮಂಚವಾ ಹೊರಗಮ್ಮ...  
-------------------------------------------------------------------------------------------------------------------------

ಅಪರಾಜಿತೆ (೧೯೭೦) - ಬಾರಣ್ಣ ಕುಣಿಯುವ ಹಿಗ್ಗಿ.. 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಬಿ.ಎಸ್.ಸ್ವಾಮಿ ಗಾಯನ : ಪಿ.ಬಿ.ಎಸ್,  ಸರೋಜಾ ಎಸ್.ಜಾನಕೀ, 

ಕೋರಸ್ : ಓಓ .. ಓಓಓಓಓಓಓ ಓಯ್ 
ಗಂಡು : ಬಾರಣ್ಣ ಕುಣಿಯುವ ಹಿಗ್ಗಿ ಬಂದಿದೇ ಬಡವರ ಸುಗ್ಗಿ 
            ಬಾರಣ್ಣ ಕುಣಿಯುವ ಹಿಗ್ಗಿ (ಆಹಾ) ಬಂದಿದೇ ಬಡವರ ಸುಗ್ಗಿ (ಒಹೋ)
            ಬೆಳೆದು ಬಂದ ಭಾಗ್ಯಕ್ಕಾಗೀ .. ಹಾಡಯ್ಯ ನೇಗಿಲ ಯೋಗೀ .. ಭೋಗಕ್ಕಾಗಿ 
ಹೆಣ್ಣು : ಬಾರಣ್ಣ ಕುಣಿಯುವ ಹಿಗ್ಗಿ (ಆಹಾ) ಬಂದಿದೇ ಬಡವರ ಸುಗ್ಗಿ (ಆಹಾ)
          ಬೆಳೆದು ಬಂದ ಭಾಗ್ಯಕ್ಕಾಗೀ .. ಹಾಡಯ್ಯ ನೇಗಿಲ ಯೋಗೀ .. ಭೋಗಕ್ಕಾಗಿ 
ಕೋರಸ್ : ಹೈಯಸ್ಸಾ .. (ಆಹಾ ಹಾ ಹಾ ಹಾ)  ಓ ಯಸ್ಸಾ (ಓ ಓ ಓ ಓ ಓ ಓ ಓ)
                ಹೂ ಯಸ್ಸಾ .. (ಆಹಾ ಹಾ ಹಾ ಹಾ)  ಹೂಯ್ಯೀ ಹೂಯ್ಯೀ ಹೂಯ್ಯೀ ಹೂಯ್ಯೀ 

ಗಂಡು : ಕೈಮುಗಿದೂ ಭಕುತಿಯ ತಂದೂ (ಓ ಹೋ ಓ ಹೋಓ ಹೋಓ ಹೋ)
ಹೆಣ್ಣು : ಹೊನ್ನನೆಲವ ಪೂಜಿಸೂ ಬಂದೂ (ಆಹಾ ಆಹಾ  ಆಹಾ  ಆಹಾ  ಆಹಾ )
ಗಂಡು : ಕೈಮುಗಿದೂ ಭಕುತಿಯ ತಂದೂ   ಹೆಣ್ಣು : ಹೊನ್ನನೆಲವ ಪೂಜಿಸೂ ಬಂದೂ 
ಇಬ್ಬರು: ಜಗಕೆಲ್ಲ ಜೀವಾಧಾರ ರೈತನೇ ಇಂದೂ 
ಕೋರಸ್ : ಆಆ ... ಜಗಕೆಲ್ಲ ಜೀವಾಧಾರ ರೈತನೇ ಇಂದೂ 
ಇಬ್ಬರು : ಓಓಓಓಓ ... ಮಣ್ಣಿಂದ ನನ್ನ ನಿನ್ನ ಅನ್ನ ಚಿನ್ನ ಎಲ್ಲಾ ಎಂದೂ 
ಕೋರಸ್ : ಬಾರಣ್ಣ ಕುಣಿಯುವ ಹಿಗ್ಗಿ (ಬಂದಿದೇ ಬಡವರ ಸುಗ್ಗಿ)
               ಬಾರಣ್ಣ ಕುಣಿಯುವ ಹಿಗ್ಗಿ (ಓ.. ಬಂದಿದೇ ಬಡವರ ಸುಗ್ಗಿ)
ಎಲ್ಲರು : ಬೆಳೆದು ಬಂದ ಭಾಗ್ಯಕ್ಕಾಗೀ .. ಹಾಡಯ್ಯ ನೇಗಿಲ ಯೋಗೀ .. ಭೋಗಕ್ಕಾಗಿ 

ಹೆಣ್ಣು : ಸುಗ್ಗಿಯ ಸಂತೇಲಿ ಸೀರೆಯ ತರತೀನಿ ಸಂತೇಲಿ ಒಪ್ಪಬಿಟ್ಟೆ ಯಜಮಾನ 
ಕೋರಸ್ : ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ.. ಆಹಾ.. 
ಗಂಡು : ಕಣಜವ ತುಂಬಿಸೀ ಕಂದಾಯ ತೀರಿಸಿ ಕುಳಿತಿದ್ದೇ ನಾನಿಂದೇ ಯಜಮಾನೀ .. 
ಕೋರಸ್ : ಕುಳಿತಿದ್ದೇ ನಾನಿಂದೇ ಯಜಮಾನೀ ..ಯಾ ಆಹಾ..   
               (ಬಾಳೆಲ್ಲ ಬಾಳಿನಲ್ಲಿ ಹೆಂಗಳೆಲ್ಲ ಮೈಲಿಕೂಟ) ಆಆಆಅ... 
               ನೋವೆಲ್ಲಾ ತಂದ ಮೇಲೆ ಬಂದಿತಯ್ಯ ಹಬ್ಬದೂಟ 
ಎಲ್ಲರು : ಇನ್ನಾಟ ಚೆಲ್ಲಾಟ ಇನ್ನೆಲ್ಲಾ ಆಟ ಪಾಠ 
            ಬಾರಣ್ಣ ಕುಣಿಯುವ ಹಿಗ್ಗಿ ಬಂದಿದೇ ಬಡವರ ಸುಗ್ಗಿ
            ಬೆಳೆದು ಬಂದ ಭಾಗ್ಯಕ್ಕಾಗೀ .. ಬಾರಯ್ಯ ನೇಗಿಲ ಯೋಗೀ .. ಭೋಗಕ್ಕಾಗಿ 
            ಅಲೆಲೆಲೆಲೇ.. ಲಲಲ ಲಲ್ಲಲ್ಲಲ್ಲಲ್ಲಾ  ಲಲಲ ಲಲ್ಲಲ್ಲಲ್ಲಲ್ಲಾ  ಓಯ್ ಓಯ್ ಓಯ್   
            ಲಲಲ ಲಲ್ಲಲ್ಲಲ್ಲಲ್ಲಾ  ಓಯ್ ಓಯ್ ಓಯ್      
-------------------------------------------------------------------------------------------------------------------------

ಅಪರಾಜಿತೆ (೧೯೭೦) - ಬಯಲಿಗೇ ಬಯಲಾಯ್ತು 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ತರಾಸು ಗಾಯನ : ನಾಗೇಂದ್ರ, ಸರೋಜಾ 

ಗಂಡು : ಬಯಲಿಗೇ ಬಯಲಾಯಿತು (ಓಓಓಓಓಓಓ )
            ಬಯಲೋಳಗೇ.. ಹೊಡೆದಾಯಿತು             
            ಬಯಲಿಗೇ ಬಯಲಾಯಿತು  
            ಸಾಯೋದೂ ಹುಟ್ಟೋದೂ ಸಕಲರಿಗೆಲ್ಲಾ 
ಇಬ್ಬರು : ಸಾಯೋದೂ ಹುಟ್ಟೋದೂ ಸಕಲರಿಗೆಲ್ಲಾ 
ಗಂಡು : ತನ್ನ ಹಣವೂ ತನಗೇನೂ ಇಲ್ಲಾ... 
            ಬಯಲಿಗೇ ಬಯಲಾಯಿತು (ಓಓಓಓಓಓಓ ) ಬಯಲಿಗೇ ಬಯಲಾಯಿತು 

ಗಂಡು : ಸೂತ್ರದ ಗೊಂಬೆ ಮಾಡೀ ಸೂತ್ರದೀ ಕುಣಿಸಾಡಿ 
            ಸೂತ್ರ ಹರಿಯಿತೂ...  ಗೊಂಬೇ .. ಮುರಿಯಿತೂ             
            ಪಾತ್ರ ತೀರೀತೂ.. ಜಾತ್ರೇ .. ಮುಗಿಯಿತೂ 
            ಬಯಲಿಗೇ ಬಯಲಾಯಿತು (ಓಓಓಓಓಓಓ ) ಬಯಲಿಗೇ ಬಯಲಾಯಿತು 

ಹೆಣ್ಣು : ಬಾಲೇ ಬಾವಿಗೇ ಹೋಗಿ ಬೆಲೆ ಕೊಂಡು ಬರಲಾಗಿ 
          ಬಾಲೇ ಬಾವಿಗೇ ಹೋಗಿ ಬೆಲೆ ಕೊಂಡು ಬರಲಾಗಿ 
          ಕಾಲೂ ಜಾರಿತೂ ... ಕೊಡವೂ ಒಡೇಯಿತೂ .. 
          ಕುಲದ ಮಣ್ಣಲ್ಲಿ...  ಮಣ್ಣಾಗಿ ಹೋಯಿತು  
ಗಂಡು : ಬಯಲಿಗೇ ಬಯಲಾಯಿತು (ಓಓಓಓಓಓಓ )
            ಬಯಲೋಳಗೇ.. ಹೊಡೆದಾಯಿತು             
ಇಬ್ಬರು : ಬಯಲಿಗೇ ಬಯಲಾಯಿತು  

ಗಂಡು : ಎಣ್ಣೆ ಬತ್ತಿಯ ಹಚ್ಚಿ ತನ್ನೊಳ ಜ್ಯೋತಿದೇತ್ತೀ   
            ಎಣ್ಣೇ ಮುಗಿಯಿತೂ... ಜ್ಯೋತಿ ನಂದಿತೂ.. 
            ಬತ್ತಿ ಆರಿತೂ... ಕತ್ತಲೇ ಆಗೀ ಹೋಯಿತೂ      
ಗಂಡು : ಬಯಲಿಗೇ ಬಯಲಾಯಿತು (ಓಓಓಓಓಓಓ )
           ಬಯಲಿಗೇ ಬಯಲಾಯಿತು (ಓಓಓಓಓಓಓ ) 
           ಬಯಲಿಗೇ ಬಯಲಾಯಿತು (ಓಓಓಓಓಓಓ )

ಗಂಡು : ಎಲ್ಲಾ ರೂಪವೂ ತಾನಂತೇ ಎಲ್ಲೆಲ್ಲಿಹುತಾ ನಿಹನಂತೇ 
            ಅಲ್ಲಲ್ಲೇರಸುತ್ತ ಗುಡಿಗಳ ತಿರುಗುವ 
            ಕಳ್ಳೇ ಬೆಕ್ಕಣ್ಣಿಗೇ ಕಲ್ಲಂತೇ ಶಿವ ಮಣ್ಣಂತೇ ಶಿವ ಮರವಂತೇ    
            ಕಲ್ಲಂತೇ ಶಿವ ಮಣ್ಣಂತೇ ಮಣ್ಣಂತೇ ಶಿವ ಮರವಂತೇ ಕಲ್ಲಂತೇ ಶಿವ ಮಣ್ಣಂತೇ    
-------------------------------------------------------------------------------------------------------------------------

ಅಪರಾಜಿತೆ (೧೯೭೦) - ಏಕೇ ಏಕೇ ಏಕೇ ಏಕೇ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ತರಾಸು ಗಾಯನ : ಎಲ್.ಆರ್.ಈಶ್ವರಿ 

ಏಕೇ ಏಕೇ ಏಕೇ .. 
ಏಕೇ ಏಕೇ ಏಕೇ .. ಈ ಕೊಕ್ಕಾಕೋಲಾ ಬೇಕೇ... 
ನಾ ಜೋಕೆ ನಾ ಮುಖ ಮೋಜಿನಾ ಸುಖ ಸಂದೇಹ ಇನ್ನೇಕೇ ... 
ನಾ ಜೋಕೆ ನಾ ಮುಖ ಮೋಜಿನಾ ಸುಖ ಸಂದೇಹ ಇನ್ನೇಕೇ ... 
ಏಕೇ ಏಕೇ ಏಕೇ .. ಈ ಕೊಕ್ಕಾಕೋಲಾ ಬೇಕೇ... 
 
ಹೆಣ್ಣಿನ ಆದರ ಚೆಲುವ ಸಾಗರ ಬಣ್ಣ ನೋಡು ಕಣ್ಣಾ...ರ... 
ಕಾಲ ಮೀರಿದರೇ .. ಕಾವು ಆರಿದರೇ ಹೆಣ್ಣು ನೋಡು ವಿಸ್ತಾ..ರ... 
ಹಸಿವು ತೀರುವೆ ಹರೆಯ ತಂದಿರೆ ಅಂದ ಚೆಂದ ಆಕಾ..ರ 
ಅರಿಸಿ ನಿಂದಿರೇ .. ಮರುಷದಿದ್ದರೇ ಗಂಡು ಬಾಳು ನಿಸ್ಸಾ..ರ.. 
ಬಲವೈತಿ ಬಳಿಸಾರೇ ಜೋಕೇ ... 
ಏಕೇ ಏಕೇ ಏಕೇ .. ಈ ಕೊಕ್ಕಾಕೋಲಾ ಬೇಕೇ... 

ಹೂವೂ ಅರಳಿರೇ, ಗಂಧ ಬೀರೀರೇ,  ರಾಗ ರಸ ಉತ್ಸಾ..ರ... 
ಜೇನು ಉರಿಳಿರೇ, ದುಂಬಿ ಬರದಿರೇ, ಕಾಮ ಜೀವ ನಿಸ್ಸಾ..ರ.. 
ಸುಖದ ಅಮಲಿನ ಒಲವ ಬೀರುವ ಕೋಕ್ಕೋ..ಕೋಲಾ... 
ಒಲವ ನೀಡಿದ ಮನವ ನಂಬದ ಕೋಕ್ಕೋ..ಕೋಲಾ... 
ಎಲ್ಲಾರ ನಾ ಕುಡಿಸಬೇಕೇ .... 
ಏಕೇ ಏಕೇ ಏಕೇ .. ಈ ಕೊಕ್ಕಾಕೋಲಾ ಬೇಕೇ... 
ನಾ ಜೋಕೆ ನಾ ಮುಖ ಮೋಜಿನಾ ಸುಖ ಸಂದೇಹ ಇನ್ನೇಕೇ ... 
ಲಾಲ್ಲಲಾಲ್ಲ...... ಲಾ... ಲಾ... 
------------------------------------------------------------------------------------------------------------------------

No comments:

Post a Comment