1127. ಅರ್ಜುನ (೧೯೮೮)


ಅರ್ಜುನ ಚಿತ್ರದ ಹಾಡುಗಳು 
  1. ಕಾರವಾರದ ಹೆಣ್ಣೇ ಮುದ್ದು ಸೋನಿಯಾ 
  2. ಬಾ ರಾಜ ಬಾ ಯೋಗ ಬಂತು ಬಾ 
  3. ಕ್ಕೊಕ್ಕೊ ಕ್ಕೊಕ್ಕೊ ಕೋಳಿ ಕರೆದಾಗ ನೀ ಕೂಡಿಕೋ 
  4. ನಾ ಜಾದೂಗಾರ ಮೋಜಿನ ಆಟಗಾರ 
ಅರ್ಜುನ (೧೯೮೮) - ಕಾರವಾರದ ಹೆಣ್ಣೇ ಮುದ್ದು ಸೋನಿಯಾ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ. ವಾಣಿಜಯರಾಂ

ಗಂಡು : ಸೋನಿಯಾ...  ಗೆಗೆಗೆರೆಸಾಯಬಾ
ಹೆಣ್ಣು : ಸೀನಾ ನಾಕಾ ಮಾಕಾ ನಕಾ ಹೋಯರೇ
ಗಂಡು : ಕಾರವಾರದ ಹೆಣ್ಣೇ ಮುದ್ದು ಸೋನಿಯಾ ಧಾರವಾಡದ ಗಂಡು ಬೇಕೇ ಸೋನಿಯಾ ಏನ್ ಚೆನ್ನ ಕಾಣಿಸ್ತಾನೇ
ಹೆಣ್ಣು :  ಹ್ಯಾಟು ಬೂಟು ಶೋಕಿ ಏಕೆ ಹೇ ಹೇಹೇ ಹೇಹೇ ಆಹಾಹಾ..ಲಲಲಲಲ
          ಬೆಂಗಳೂರ ಗಂಡೇ ನನ್ನ ಸೋನಾ ಮಂಗಳೂರು ಬ್ಯೂಟಿ ಬೇಕೇ ಸೋನಾ ಏನ್ ಚೆನ್ನ ಕಾಣಿಸ್ತಾಳೆ
ಗಂಡು : ಮಿನಿ ಫ್ರಾಕು ಏಕೇ ಬೇಕೂ  ಏಕೆ ಹೇ ಹೇಹೇ ಹೇಹೇ ಆಹಾಹಾ..ಅರೆರೆರೆರೇ
            ಕಾರವಾರದ ಹೆಣ್ಣೇ ಮುದ್ದು ಸೋನಿಯಾ ಧಾರವಾಡದ ಗಂಡು ಬೇಕೇ ಸೋನಿಯಾ ಏನ್ ಚೆನ್ನ ಕಾಣಿಸ್ತಾನೇ

ಗಂಡು : ಕೆಂಪು ಕಿತ್ತಳೆ ಒಳಗಿನಿಂದ ಬಂದಳೇ ಮಡಕೇರಿ ಮೀನಾಕ್ಷಿಯೋ 
            ದುಂಡು ಮಲ್ಲಿಗೇ ಈ ಕೆಂಡ ಸಂಪಿಗೇ ಮೈಸೂರ ಚಾಮುಂಡಿಯೋ 
ಹೆಣ್ಣು : ಮೀಸೆ ಭರ್ಜರಿ ಆ ಚಿತ್ರದುರ್ಗದ ಮದಕರಿನಾಯಕನೋ 
          ರಾಜಠೀವಿಯ ಈ ಸ್ಟೈಲು ನೋಡಲು ರಾಯಚೂರ ಸರದಾರನು 
ಗಂಡು : ಬೇಲೂರಿನ ಶಿಲಾಬಾಲಿಕೆ ಇದೇ ನಡು ಇದೇ ಮುಖ 
ಹೆಣ್ಣು : ದಾವಣಗೇರೆ ಹೆಣ್ಣು ನೋಡು ಸೋನ
ಗಂಡು : ಅರಿಸೀಕೆರೆ ಗಂಡು ನೋಡು ಸೋನಿಯಾ ಏನ್ ಚೆನ್ನ ಕಾಣಿಸ್ತಾನೇ
ಹೆಣ್ಣು : ಬಳ್ಳಾರಿ ಜೈಲು ಕಂಬಿ ಕಂಡೋನು ಅಯ್ಯಯ್ಯೋ ಬೇಡಪ್ಪ ದಮ್ಮಯ್ಯ
ಗಂಡು : ಅರೆರೆರೆರೇ .. ತುಮಕೂರ ಗಂಡು ಬೇಕೇ ಸೋನಿಯಾ
ಹೆಣ್ಣು : ತಿಪಟೂರ ಹೆಣ್ಣೇ ಬೇಕೇ ಸೋನಾ ಏನ್ ಚೆನ್ನ ಕಾಣಿಸ್ತಾಳೇ......

ಇಬ್ಬರು : ಲಾಲಾಲಾ ಲಲ್ಲಲಾ ಲಾಲಾಲಾ ಲಲ್ಲಲಾ ಲಾಲಾಲಾ ಲಲ್ಲಲಾ ಲಲ್ಲಲಾ ರರರಾರ
ಹೆಣ್ಣು : ಇವಳು ನಕ್ಕರೇ ಆ ಮಂಡ್ಯ ಸಕ್ಕರೆ ಹುಬ್ಬಳ್ಳಿ ಸೀರೆ ಚೆಲುವೆ
         ಎದ್ದು ನಿಲ್ಲುವ ಈ ಪೋಜು ನೋಡಲು  ಕಿತ್ತೂರ ಚೆನ್ನಮ್ಮನೇ ಆಹ್ಹಹಾ..
ಗಂಡು : ದೇಹ ನೋಡಲು ಉಕ್ಕು ಕಬ್ಬಿಣ ನಡೆದಾಡೋ ಭದ್ರಾವತಿ
            ಶಿವಮೊಗ್ಗಕೆ ಗಂಡುರಾಮನು ಬೆಳಗಾವಿಗೆ ಅಂದಗಾರನು
ಹೆಣ್ಣು : ಕೋಲಾರದ ಹೊಸ ಚಿನ್ನ ಅದೇ ಮನ ಅದೇ ಗುಣ 
ಗಂಡು : ಹಾಸನ ಗೂಳಿ ಇವ ಬೇಕೇ ಸೋನಿಯಾ
ಹೆಣ್ಣು : ಚಿಕ್ಕಮಗಳೂರ ಹೆಣ್ಣು ಬೇಕೇ ಸೋನಾ ಏನ್ ಚೆನ್ನ ಕಾಣಿಸ್ತಾನೇ  
ಇಬ್ಬರು : ಎಲ್ಲೇ ಇರು ಹೇಗೆ ಇರು ತಾನು ಕನ್ನಡ ಮನ ಕನ್ನಡ ನೀನಾಗಿರು  
            ಲಾಲಾಲಾ ಲಲ್ಲಲಾ ಲಾಲಾಲಾ ಲಲ್ಲಲಾ ರಾರಾರಾ  ಲಾಲಾಲಾ ಲಲ್ಲಲಾ ಲಾಲಾಲಾ ಲಲ್ಲಲಾ ರರರಾರ
--------------------------------------------------------------------------------------------------------------------------

ಅರ್ಜುನ (೧೯೮೮) - ಬಾ ರಾಜ ಬಾ ಯೋಗ ಬಂತು ಬಾ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ.ಚಿತ್ರಾ

ಹೆಣ್ಣು : ಲಾಲಲಲ ... ಲಲಲಾಲಾ ...  ಬಾ ರಾಜ ಬಾ ... ಯೋಗ ಬಂತು ಬಾ
          ಬಾ ರಾಜ ಬಾ ಯೋಗ ಬಂತು ಬಾ ನನ್ನಲ್ಲಿ ನೂರಾಸೆ ಈಗ
          ಯಾಕೋ ಇಲ್ಲಿ ಏನೋ ವೇಗ ಅಪ್ಪು ನನ್ನ ಬಂದು ಬೇಗ
ಗಂಡು : ಬಾ ರಾಣಿ ಬಾ ... ಯೋಗ ಬಂತು ಬಾ ನನ್ನಲ್ಲಿ ನೂರಾಸೆ ಈಗ
           ಯಾಕೋ ಇಲ್ಲಿ ಏನೋ ವೇಗ ಅಪ್ಪು ನನ್ನ ಬಂದು ಬೇಗ
ಹೆಣ್ಣು : ಬಾ ರಾಜ ಬಾ ಯೋಗ ಬಂತು ಬಾ

ಗಂಡು : ಈ ನಿನ್ನ ಕೆಂಪು ತುಟಿಯಲಿ ಜೇನಹೊಳೆಯಲಿ ಈಜಿ ನಲಿಯುವೇ ಈ ದಿನ
           ಮೀನಿನಂತೇ ಜಾರಿ ಜಾರಿ ಹೋದಾಗ ನಾ ಬಂದೇ ಹಿಂದೇನೇ ......
ಹೆಣ್ಣು : ಈ ನಿನ್ನ ತೋಳ ಸೆರೆಯಲಿ ಮುತ್ತು ಮಳೆಯಲಿ ಪ್ರೀತಿ ಅಲೇಯಲಿ ತೇಲಿದೆ
         ಜಿಂಕೆಯಂತೇ ಹಾರಿ ಹಾರಿ ಬಂದಂಥ ಯುವರಾಣಿ ನಾನೇನೇ
ಗಂಡು : ನನ್ನ ಮಹಾರಾಣಿ ನೀನೇ
ಹೆಣ್ಣು : ಬಾ ರಾಜ ಬಾ ... ಯೋಗ ಬಂತು ಬಾ ನನ್ನಲ್ಲಿ ನೂರಾಸೆ ಈಗ
ಗಂಡು : ಯಾಕೋ ಇಲ್ಲಿ ಏನೋ ವೇಗ ಅಪ್ಪು ನನ್ನ ಬಂದು ಬೇಗ 
            ಬಾ ರಾಣಿ ಬಾ ... ಯೋಗ ಬಂತು ಬಾ

ಹೆಣ್ಣು : ಈ ರಾತ್ರಿ ತಾರೆ ಮಿನುಗಿದೇ ಚಂದ್ರ ನಗುತಿರೇ ಬಯಕೆ ತರುತಿರೇ ಮೈಯಲ್ಲಿ..ಒಹೋ.. 
          ಕಗ್ಗತ್ತಲಿ ಕೈಯ್  ಮುಟ್ಟಲು ಮತ್ತೇರಿ ತುಂಟಾಟ ಗೊತ್ತಾಯ್ತು 
ಗಂಡು : ನೀ ತಂದ ಹೂವು ಘಮ ಘಮ ಮಾತು ಸರಿಗಮ ತನು ಸಂಭ್ರಮ ನನ್ನಲ್ಲಿ.. ಓಓಓ 
           ಚೆಲುವಿನ ಅರಗಿಣಿ ನೀನಿಂದು ಕಣಿ ಹೇಳು ಕಣ್ಣಲೀ 
ಹೆಣ್ಣು : ನನ್ನ ಮಹಾರಾಜ ನೀನೇ ... 
ಗಂಡು : ಬಾ ರಾಣಿ ಬಾ ... ಯೋಗ ಬಂತು ಬಾ ನನ್ನಲ್ಲಿ ನೂರಾಸೆ ಈಗ
ಹೆಣ್ಣು :  ಯಾಕೋ ಇಲ್ಲಿ ಏನೋ ವೇಗ ಅಪ್ಪು ನನ್ನ ಬಂದು ಬೇಗ
ಇಬ್ಬರು : ಲಾಲಲ್ಲಲ್ಲಲಾ (ಲಾಲಲ್ಲಲ್ಲಲಾ ) ಲಾಲಲ್ಲಲ್ಲಲಾ ಲಾಲಲ್ಲಲ್ಲಲಾ 
--------------------------------------------------------------------------------------------------------------------------

ಅರ್ಜುನ (೧೯೮೮) - ಕ್ಕೊಕ್ಕೊ ಕ್ಕೊಕ್ಕೊ ಕೋಳಿ ಕರೆದಾಗ ನೀ ಕೂಡಿಕೋ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ನಾಗೇಂದ್ರ. ವಾಣಿಜಯರಾಂ

ಹೆಣ್ಣು : ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
        ಕೋಳಿ ಕರೆದಾಗ ನೀ ಕೂಡಿಕೋ ಗಾಳಿ ಬಂದಾಗ ತೂರಿಕೋ
        ನೀ ಸ್ವಂತ ಮಾಡಿಕೋ ಮನಸಾರ ಆಡಿಕೋ
        ಇದೇತಕೋ  ಇನ್ನೇತಕೋ ಸಂದೇಹವು ಕೊಕ್ಕೊಕ್ಕೋ ಕೇಳಿಕೇ... ರಂಗಾ
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
        ಕೋಳಿ ಕರೆದಾಗ ನೀ ಕೂಡಿಕೋ ಗಾಳಿ ಬಂದಾಗ ತೂರಿಕೋ

ಹೆಣ್ಣು : ನಾ ಸೀಮೆ ಕೋಳಿಯೋ ನೀ ಕಾಡು ಕೋಳಿಯೋ
          ನಾ ಸೀಮೆ ಕೋಳಿಯೋ ನೀ ಕಾಡು ಕೋಳಿಯೋ ಹೊಸ ಜೋಡಿ ನಾನಿಂದು ತಿಳಿದುಕೋ
         ನಾಡ ಕೋಳಿ ನಿಂಗೇಕೋ ಬೆಂಕಿ ಕೋಳಿ ಭಯವೇಕೋ ಕೆಂಪು ಬಲು ಅಂದ ರುಚಿ ಚೆಂದ ಕ್ಕೊಕ್ಕೋರೇಕೋ ..
         ಮೈಮಾಟ ಮೆಚ್ಚಿಕೋ ಕೈ ತುಂಬಾ ಹಮ್ಮಿಕೋ ಗೂಡಲ್ಲಿ ನೀ ಬಂದು ಸೇರಿಕೋ (ಅಹ್ಹಹ್ಹಾ)
         ಗರಿಯನ್ನು ಮುಚ್ಚಿಕೋ ಬೆಚ್ಚಗೆ ಮಾಡಿಕೋ ನನ್ನ ಜೊತೆಯಲ್ಲಿ ಹಿಡಿ ರಾತ್ರಿ ಕ್ಕೊಕ್ಕೋರೆಕೊ ... 
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
         ಕೋಳಿ ಕರೆದಾಗ ನೀ ಕೂಡಿಕೋ ಗಾಳಿ ಬಂದಾಗ ತೂರಿಕೋ
         ನೀ ಸ್ವಂತ ಮಾಡಿಕೋ ಮನಸಾರ ಆಡಿಕೋ
        ಇದೇತಕೋ  ಇನ್ನೇತಕೋ ಸಂದೇಹವು ಕೊಕ್ಕೊಕ್ಕೋ ಕೇಳಿಕೇ... ರಂಗಾ
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
        ಕೋಳಿ ಕರೆದಾಗ ನೀ ಕೂಡಿಕೋ ಗಾಳಿ ಬಂದಾಗ ತೂರಿಕೋ

ಹೆಣ್ಣು : ನನ್ನಲ್ಲಿ ಮೊಟ್ಟೆಯೋ ಮೊಟ್ಟೆಲಿ ನಾನೇಯೋ... 
          ನನ್ನಲ್ಲಿ ಮೊಟ್ಟೆಯೋ ಮೊಟ್ಟೆಲಿ ನಾನೇಯೋ ಆ ಗುಟ್ಟು ತಿಳಿದೋರ ಕೇಳಿಕೋ (ಓಹೋಹೋ)
          ಕೊಕ್ಕಲ್ಲಿ ಕುಕ್ಕಿಕೋ ಸಿಕ್ಕಿದ್ದ ಮುಕ್ಕಿಕ್ಕೋ ಹೆಣ್ಣು ಇರುವಾಗ ಕರೆವಾಗ ತಡವೇಕೋ...  
          ಮುಂಜಾನೆ ಡ್ಯೂಟಿಯ ಮಾಡೋ ಈ ಬ್ಯೂಟಿಯ ಈ ಹೊತ್ತು ಹಗುರಾಗಿ ಎತ್ತಿಕೋ (ಅಹ್ಹಹ್ಹಾ) 
          ಇರುವಾಗ ಕಟ್ಟಿಕೋ ಕಣ್ಣಾಗಿ ಇಟ್ಟುಕೋ ಕೂಗು ಹಿತವಾಗಿ ಸುಖವಾಗಿ ಕೊಕ್ಕೋರೇಕೋ 
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ (ಹ್ಹಹ್ಹೋ)
         ಕೋಳಿ ಕರೆದಾಗ ನೀ ಕೂಡಿಕೋ ಗಾಳಿ ಬಂದಾಗ ತೂರಿಕೋ  (ಹ್ಹಹ್ಹೋ)
         ನೀ ಸ್ವಂತ ಮಾಡಿಕೋ  (ಹ್ಹಹ್ಹ)ಮನಸಾರ ಆಡಿಕೋ  (ಹ್ಹಹ್ಹ)
        ಇದೇತಕೋ ಇನ್ನೇತಕೋ ಸಂದೇಹವು ಕೊಕ್ಕೊಕ್ಕೋ ಕೇಳಿಕೇ... ರಂಗಾ
         ಕೊಕ್ಕೊಕ್ಕೋ ಕೊಕ್ಕೊಕ್ಕೋ ಕೊಕ್ಕೊಕ್ಕೋ
        ಕೋಳಿ ಕರೆದಾಗ ನೀ ಕೂಡಿಕೋ ಗಾಳಿ ಬಂದಾಗ ತೂರಿಕೋ ಆಹ್ಹಹಹಹ ...
--------------------------------------------------------------------------------------------------------------------------

ಅರ್ಜುನ (೧೯೮೮) - ನಾ ಜಾದೂಗಾರ ಮೋಜಿನ ಆಟಗಾರ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ. ಚಿತ್ರಾ

ಗಂಡು : ನಾ ಜಾದೂಗಾರ ಮೋಜಿನಾ ಆಟಗಾರ ಸಾವಿರ ವೇಷಗಾರ
            ನನ್ನನ್ನೂ ಬಲ್ಲೋರಿಲ್ಲಾ ಸವಾಲು ಗೆಲ್ಲೋರಿಲ್ಲಾ
            ನನ್ನ ಕಣ್ಣು ಬಿದ್ದ ವೇಳೆ ಎಲ್ಲ ಗುಟ್ಟು ಆಗ ರಟ್ಟು
ಹೆಣ್ಣು : ಈ ಜಾದೂಗಾರ ಮೋಜಿನ ಆಟಗಾರ ಸಾವಿರ ವೇಷಗಾರ
          ಇವನ ಬಲ್ಲೋರಿಲ್ಲಾ ಸವಾಲು ಗೆಲ್ಲೋರಿಲ್ಲಾ

ಗಂಡು : ಬುಸುಗುಟ್ಟೋ ನಾಗ ಹೆಡೆ ಎತ್ತುವಾಗ ಗರುಡ ಮಚ್ಚೆ ತೋರುವೇ
           ತೋಳ ನರಿ ಕೂಟ ಸಂಚು ಮಾಡೋವಾಗ ಬೇಟೆಗಾರ ಆಗುವೇ
ಹೆಣ್ಣು : ಗಾಳಿ ತೂರದಂಥ ಉಕ್ಕು ಕೋಟೆಯಲ್ಲಿ ಮೋಡಿ ಮಾಡಿ ತೂರುವಾ
          ಕಣ್ಣು ಮುಚ್ಚೋದ್ರಲ್ಲಿ ಎಲ್ಲಾ ಚೆಲ್ಲಾಪಿಲ್ಲಿ ಮಂಗಮಾಯ ಆಗುವಾ
ಗಂಡು : ಈ ಜಾದೂಗಾರ ಬಿಲ್ಲುಗಾರ ಯಾರು ಗೊತ್ತೇ ...
ಕೋರಸ್ : ಯಾರೂ (ಯಾರೂ) ಯಾರೂ (ಯಾರೂ)
ಗಂಡು : ನಾ ಜಾದೂಗಾರ ಮೋಜಿನಾ ಆಟಗಾರ ಸಾವಿರ ವೇಷಗಾರ
            ನನ್ನನ್ನೂ ಬಲ್ಲೋರಿಲ್ಲಾ .. ಅಹ್ಹಹ್ಹಹ  ಸವಾಲು ಗೆಲ್ಲೋರಿಲ್ಲಾ ... ರರರ...

ಹೆಣ್ಣು : ರಾಮ ಹುಟ್ಟಿ ಬಂದ ರಾವಣನ ಕೊಂದ ತ್ರೇತಾಯುಗದಲ್ಲಿ...  ಅರ್ಜುನನು ಬಂದ
ಕೋರಸ್ :  ಅರ್ಜುನ...  ಅರ್ಜುನ ... ಅರ್ಜುನ...ಅರ್ಜುನ...
               ಅರ್ಜುನನು ಬಂದ ಕೌರವರ ಕೊಂದ ದ್ವಾಪರ ಯುಗದಲ್ಲಿ
ಗಂಡು : ಕಲಿಯುಗದಲ್ಲಿ ಚಕ್ರವ್ಯೂಹ ಗೆಲ್ಲೋ ಅರ್ಜುನನು ಆಗಬಲ್ಲೇ ...ಹ್ಹಾ ..
           ದ್ರೋಹ ಮೋಸ ಅಳಿಸಿ ನ್ಯಾಯ ನೀತಿ ಉಳಿಸೋ ಕೃಷ್ಣನು ಆಗಬಲ್ಲೇ ..
ಹೆಣ್ಣು : ಇಂಥ ವೀರ ಇಂಥಾ ಶೂರ ಯಾರು ಗೊತ್ತೇ ..  
ಕೋರಸ್ : ಯಾರೂ (ಯಾರೂ) ಯಾರೂ (ಯಾರೂ)
ಹೆಣ್ಣು : ಈ ಜಾದೂಗಾರ ಮೋಜಿನ ಆಟಗಾರ ಸಾವಿರ ವೇಷಗಾರ
          ಇವನ ಬಲ್ಲೋರಿಲ್ಲಾ ಸವಾಲು ಗೆಲ್ಲೋರಿಲ್ಲಾ
ಗಂಡು : ನಾ ಜಾದೂಗಾರ ಮೋಜಿನಾ ಆಟಗಾರ ಸಾವಿರ ವೇಷಗಾರ
            ನನ್ನನ್ನೂ ಬಲ್ಲೋರಿಲ್ಲಾ ಸವಾಲು ಗೆಲ್ಲೋರಿಲ್ಲಾ
ಗಂಡು :  ನನ್ನ ಕಣ್ಣು ಬಿದ್ದ ವೇಳೆ ಎಲ್ಲ ಗುಟ್ಟು ಆಗ ರಟ್ಟು
            ನಾ ಜಾದೂಗಾರ ಮೋಜಿನಾ ಆಟಗಾರ ಸಾವಿರ ವೇಷಗಾರ
            ನನ್ನನ್ನೂ ಬಲ್ಲೋರಿಲ್ಲಾ ಸವಾಲು ಗೆಲ್ಲೋರಿಲ್ಲಾ... ಹೂಂ ...
--------------------------------------------------------------------------------------------------------------------------


No comments:

Post a Comment