1243. ಆಶಾಕಿರಣ (೧೯೮೪)

ಆಶಾಕಿರಣ ಚಲನ ಚಿತ್ರದ ಹಾಡುಗಳು 
  1. ಹೋಗುವೆನೆಂದರೇ ಹೇಗೆ 
  2. ಆಶಾ ನನ್ನ ಆಶಾ 
  3. ನಯನ ನಯನ ಬೆರೆತಾಗಲೆಲ್ಲಾ 
  4. ಆಶಾ ನನ್ನ ಆಶಾ (ಎಸ್.ಪಿ.ಬಿ)
  5. ಪ್ರೀತಿಯೆಂಬಾ ಮಾತೇ... 
ಆಶಾಕಿರಣ (೧೯೮೪) - ಹೋಗುವೆನೆಂದರೇ ಹೇಗೆ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಮ

ಗಂಡು : ಹೋಗುವೆನೆಂದರೇ ಹೇಗೆ ನನ್ನ ಕೊಲ್ಲುವೇ ಏತಕೆ ಹೀಗೆ
            ನಾ ಒಂಟಿಯಾಗಿ ಏಕಾಂಗಿಯಾಗಿ ಇರಲಾರೇ ಇನ್ನೆಂದಿಗೂ... ಹ್ಹಾಂ .. ಹೇ..
ಹೆಣ್ಣು : ಹೋಗುವೆನೆಂದರೇ ಹೇಗೆ ನನ್ನ ಕೊಲ್ಲುವೇ ಏತಕೆ ಹೀಗೆ
            ನಾ ಒಂಟಿಯಾಗಿ ಏಕಾಂಗಿಯಾಗಿ ಇರಲಾರೇ ಇನ್ನೆಂದಿಗೂ.......
ಗಂಡು : ಹೋಗುವೆನೆಂದರೇ ಹೇಗೆ...

ಗಂಡು : ಕಂಗಳ ತುಂಬಾ ಹ್ಹಾ...  ಬಿಂಬಾ ತುಂಬಲೇ ಇಲ್ಲಾ... ಆಆಆ... ಓ...
ಹೆಣ್ಣು : ಕಿವಿಗಳ ತುಂಬಾ ಸವಿಮಾತಿನ್ನೂ ಕೇಳಲೇ ಇಲ್ಲಾ..
ಗಂಡು : ಚೆಲುವೇ  ನಿನ್ನ ಒಲವೂ.. (ಆ) ಒಲವೂ ತಂದ ಸುಖವೂ (ಓ)
            ಚೆಲುವೇ  ನಿನ್ನ ಒಲವೂ.. ಒಲವೂ ತಂದ ಸುಖವೂ.. ಇನ್ನೂ ಬೇಕಾಗಿದೇ ....
ಹೆಣ್ಣು : ಹೋಗುವೆನೆಂದರೇ ಹೇಗೆ ನನ್ನ ಕೊಲ್ಲುವೇ ಏತಕೆ ಹೀಗೆ
            ನಾ ಒಂಟಿಯಾಗಿ ಏಕಾಂಗಿಯಾಗಿ ಇರಲಾರೇ ಇನ್ನೆಂದಿಗೂ....... ಹಾಂ.. ಹಾಂ..
ಗಂಡು : ಹೋಗುವೆನೆಂದರೇ ಹೇಗೆ...

ಗಂಡು : ಘಲ್ ಘಲ್ ನಾದಕೇ ... ನನ್ನೆದೇ ತಾಳ ಹಾಕಲೇ ಇಲ್ಲಾ.. ಓಓಓ ..
ಹೆಣ್ಣು : ಈ ನಗೇ ಕಂಡೂ ಹೃದಯವೂ ಇನ್ನೂ ಹಾಡಲೇ ಇಲ್ಲಾ..
ಗಂಡು : ತುಟಿಯ ಜೇನ ಸಿಹಿಯಾ... ಸವಿದು ನಲಿವ ಸಮಯಾ
            ತುಟಿಯ ಜೇನ ಸಿಹಿಯಾ... ಸವಿದು ನಲಿವ ಸಮಯಾ ಇನ್ನೂ ದೂರ ಇದೆಯೇ..
ಹೆಣ್ಣು : ಹೋಗುವೆನೆಂದರೇ ಹೇಗೆ ನನ್ನ ಕೊಲ್ಲುವೇ ಏತಕೆ ಹೀಗೆ
            ನಾ ಒಂಟಿಯಾಗಿ ಏಕಾಂಗಿಯಾಗಿ ಇರಲಾರೇ ಇನ್ನೆಂದಿಗೂ....... ಹಾಂ.. ಹಾಂ..
ಗಂಡು : ಹೋಗುವೆನೆಂದರೇ ಹೇಗೆ ನನ್ನ ಕೊಲ್ಲುವೇ ಏತಕೆ ಹೀಗೆ
            ನಾ ಒಂಟಿಯಾಗಿ ಏಕಾಂಗಿಯಾಗಿ ಇರಲಾರೇ ಇನ್ನೆಂದಿಗೂ... ಹ್ಹಾಂ .. ಹೇ..
           ಹೋಗುವೆನೆಂದರೇ ಹೇಗೆ...
------------------------------------------------------------------------------------------------------------

ಆಶಾಕಿರಣ (೧೯೮೪) - ಆಶಾ ನನ್ನ ಆಶಾ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಆಶಾ ನನ್ನ ಆಶಾ... ಆಶಾ ನನ್ನ ಆಶಾ ಬಾನಿಲ್ಲದೇ ತಾರೆಗಳಿಲ್ಲಾ...
ನೀರಿಲ್ಲದೇ ತಾವರೆಯಿಲ್ಲಾ ನೀ ನಿಲ್ಲದೇ ನಾನೇ ಇಲ್ಲಾ
ಆಶಾ ನನ್ನ ಆಶಾ... ಆಶಾ ನನ್ನ ಆಶಾ... ಆಶಾ ನನ್ನ ಆಶಾ... ನನ್ನ ಆಶಾ... ನನ್ನ ಆಶಾ

ಕಡಲಿಲ್ಲದೇ ಮೋಡಗಳಿಲ್ಲಾ .. ಮುಗಿಲಿಲ್ಲದೇ ಮಳೆಯೂ ಇಲ್ಲಾ..
ಮಳೆಯಿಲ್ಲದೇ ಹಸಿರೇ ಇಲ್ಲಾ.. ಆಆಆ...
ಮಳೆಯಿಲ್ಲದೇ ಹಸಿರೇ ಇಲ್ಲಾ ನೀ ಇಲ್ಲದೇ ನಮಗೇ ಉಸಿರೇ ಇಲ್ಲಾ..

ನೆನಪಿಲ್ಲದಾ ಕ್ಷಣವೇ ಇಲ್ಲಾ.. ಕನಸಿಲ್ಲದಾ ಇರುಳೇ ಇಲ್ಲಾ.. ನೀನೊಲ್ಲದ ಸುಖವೇ ಬೇಕಿಲ್ಲಾ...
ನೀನೊಲ್ಲದ ಸುಖವೇ ಬೇಕಿಲ್ಲಾ...  ನೀನಿಲ್ಲದೇ ಬಾಳೂ ಆಸೇ ಇಲ್ಲಾ...
ಆಶಾ ನನ್ನ ಆಶಾ... ಆಶಾ ನನ್ನ ಆಶಾ ಬಾನಿಲ್ಲದೇ ತಾರೆಗಳಿಲ್ಲಾ...
ನೀರಿಲ್ಲದೇ ತಾವರೆಯಿಲ್ಲಾ ನೀ ನಿಲ್ಲದೇ ನಾನೇ ಇಲ್ಲಾ
ಆಶಾ ನನ್ನ ಆಶಾ... ಆಶಾ ನನ್ನ ಆಶಾ... ಆಶಾ ನನ್ನ ಆಶಾ... ನನ್ನ ಆಶಾ... ನನ್ನ ಆಶಾ
------------------------------------------------------------------------------------------------------------

ಆಶಾಕಿರಣ (೧೯೮೪) - ನಯನ ನಯನ ಬೆರೆತಾಗಲೆಲ್ಲಾ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ನಯನ ನಯನ ಬೆರೆತಾಗಲೆಲ್ಲಾ ಸನಿಹ ಸನಿಹ ಬಂದಾಗಲೆಲ್ಲಾ

ಎದೆಯಲ್ಲಿ ಅನುರಾಗದಲೆಯೂ.. ತುಟಿಯಲ್ಲಿ ಹೀತವಾದ ನಗೆಯೂ

ಬಿಸಿಲಲ್ಲಿ ನಡೆವಾಗ ತಂಗಾಳಿ ಬಂದಂತೇ ತುಂಬಿ ಬಾಳಲ್ಲಿ ಉಲ್ಲಾಸ 
ಬಾಯಾರಿ ಬಂದಾಗ ಸುಧೆಯನ್ನೂ ಕುಡಿದಂತೇ ಕಂಡಾ ಮನದಲ್ಲಿ ಸಂತೋಷ 
ಹೊಸ ಮೋಹ ತಂದಾ ಹೊಸ ಆಸೆಯಿಂದ 
ಹೊಸ ಮೋಹ ತಂದಾ ಹೊಸ ಆಸೆಯಿಂದ ನೂರಾರು ಕನಸನ್ನೂ ಕಂಡ .. 
ನಯನ ನಯನ ಬೆರೆತಾಗಲೆಲ್ಲಾ ಸನಿಹ ಸನಿಹ ಬಂದಾಗಲೆಲ್ಲಾ
ಎದೆಯಲ್ಲಿ ಅನುರಾಗದಲೆಯೂ.. ತುಟಿಯಲ್ಲಿ ಹೀತವಾದ ನಗೆಯೂ 
ನಯನ ನಯನ ಬೆರೆತಾಗಲೆಲ್ಲಾ ಸನಿಹ ಸನಿಹ ಬಂದಾಗಲೆಲ್ಲಾ 

ಧ್ವನಿ ಕೇಳಿ ಬಂದಾಗ ಬಳಿ ಬಂದು ನಿಂತಾಗ ವೀಣೆ ಮಿಡಿದಂತೇ ಎದೆಯಲ್ಲಿ.. 
ಜೊತೆಯಲ್ಲಿರುವಾಗ ಸವಿ ಮಾತು ನುಡಿವಾಗ ಒಲವ ಸಂಗೀತ ಮನದಲ್ಲಿ 
ಎಂದೆಂದೂ ನಿನ್ನ ಬಿಡಲಾರೇನೆಂದ..  
ಎಂದೆಂದೂ ನಿನ್ನ ಬಿಡಲಾರೆನೆಂದ ಅವನಾಗ ಕಣ್ಣೋಟದಲ್ಲಿ 
ನಯನ ನಯನ ಬೆರೆತಾಗಲೆಲ್ಲಾ ಸನಿಹ ಸನಿಹ ಬಂದಾಗಲೆಲ್ಲಾ
ಎದೆಯಲ್ಲಿ ಅನುರಾಗದಲೆಯೂ.. ತುಟಿಯಲ್ಲಿ ಹೀತವಾದ ನಗೆಯೂ 
ನಯನ ನಯನ ಬೆರೆತಾಗಲೆಲ್ಲಾ ಸನಿಹ ಸನಿಹ ಬಂದಾಗಲೆಲ್ಲಾ 
------------------------------------------------------------------------------------------------------------

ಆಶಾಕಿರಣ (೧೯೮೪) - ಆಶಾ ನನ್ನ ಆಶಾ (ಎಸ್.ಪಿ.ಬಿ)
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಆಶಾ ನನ್ನ ಆಶಾ... ಆಶಾ ನನ್ನ ಆಶಾ ಬಾನಿಲ್ಲದೇ ತಾರೆಗಳಿಲ್ಲಾ...
ನೀರಿಲ್ಲದೇ ತಾವರೆಯಿಲ್ಲಾ ನೀ ನಿಲ್ಲದೇ ನಾನೇ ಇಲ್ಲಾ
ಆಶಾ ನನ್ನ ಆಶಾ... ಆಶಾ ನನ್ನ ಆಶಾ... ಆಶಾ ನನ್ನ ಆಶಾ... ನನ್ನ ಆಶಾ... ನನ್ನ ಆಶಾ

ಕಡಲಿಲ್ಲದೇ ಮೋಡಗಳಿಲ್ಲಾ .. ಮುಗಿಲಿಲ್ಲದೇ ಮಳೆಯೂ ಇಲ್ಲಾ..
ಮಳೆಯಿಲ್ಲದೇ ಹಸಿರೇ ಇಲ್ಲಾ.. ಆಆಆ...
ಮಳೆಯಿಲ್ಲದೇ ಹಸಿರೇ ಇಲ್ಲಾ ನೀ ಇಲ್ಲದೇ ನಮಗೇ ಉಸಿರೇ ಇಲ್ಲಾ..
ಆಶಾ ನನ್ನ ಆಶಾ... ಆಶಾ ನನ್ನ ಆಶಾ... ಆಶಾ ನನ್ನ ಆಶಾ... ನನ್ನ ಆಶಾ... ನನ್ನ ಆಶಾ

ನೆನಪಿಲ್ಲದಾ ಕ್ಷಣವೇ ಇಲ್ಲಾ.. ಕನಸಿಲ್ಲದಾ ಇರುಳೇ ಇಲ್ಲಾ.. ನೀನೊಲ್ಲದ ಸುಖವೇ ಬೇಕಿಲ್ಲಾ...
ನೀನೊಲ್ಲದ ಸುಖವೇ ಬೇಕಿಲ್ಲಾ...  ನೀನಿಲ್ಲದೇ ಬಾಳೂ ಆಸೇ ಇಲ್ಲಾ...
ಆಶಾ ನನ್ನ ಆಶಾ... ಆಶಾ ನನ್ನ ಆಶಾ ಬಾನಿಲ್ಲದೇ ತಾರೆಗಳಿಲ್ಲಾ...
ನೀರಿಲ್ಲದೇ ತಾವರೆಯಿಲ್ಲಾ ನೀ ನಿಲ್ಲದೇ ನಾನೇ ಇಲ್ಲಾ
ಆಶಾ ನನ್ನ ಆಶಾ... ಆಶಾ ನನ್ನ ಆಶಾ... ಆಶಾ ನನ್ನ ಆಶಾ... ನನ್ನ ಆಶಾ... ನನ್ನ ಆಶಾ
------------------------------------------------------------------------------------------------------------

ಆಶಾಕಿರಣ (೧೯೮೪) - ಪ್ರೀತಿಯೆಂಬ ಮಾತೇ...
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. 

ಪ್ರೀತಿಸುವ ಶಕ್ತಿಯನೂ ಕೊಟ್ಟಿರುವ ಹೇಳುವೇ
ಮರೆವ ಶಕ್ತಿಯ ಕೊಡಲೂ ಮರೆತು ಹೋಗಿರಲೂ
ನೆಮ್ಮದಿಯೂ ಎಲ್ಲೀ .. ಶಾಂತಿಯೂ ಎಲ್ಲೀ .. ಹೆಣ್ಣಾದ ಮಾತಿನಲೀ..

ಪ್ರೀತಿಯೆಂಬ ಮಾತೇ ಭೀತಿ ತರುತಿರೇ ನೊಂದು ನೊಂದು ಜೀವ ಕಣ್ಣೀರೂ ಮಿಡೀತಿದೇ..

ಲತೆಯೂ ಹಬ್ಬಲೊಂದು ಮೊಗವ ಸೇರಿದಾಗ ಬಳಸಿ ನಿಲ್ಲಲೆಂದೂ ಬಳಿಗೆ ಹೋದಾಗ

ಮರವೂ ದೂರವಾಗಿ.. ನೆರಳೂ ಕಾಣದಾಗಿ... ಕಂಬನಿಯೊಂದೇ ಗತಿಯಾಗಿ..
ಪ್ರೀತಿಯೆಂಬ ಮಾತೇ ಭೀತಿ ತರುತಿರೇ ನೊಂದು ನೊಂದು ಜೀವ ಕಣ್ಣೀರೂ ಮಿಡೀತಿದೇ..

ಅವನ ನೆನಪಿನಲ್ಲೇ ದಿನವೂ ಇರುವಾಗ ಮನದ ಮರೆಯಲಾರೇ ಎನ್ನುತಲಿರುವಾಗ...

ಒಲವೂ ಎಂಬುದೆಲ್ಲೀ... ಮದುವೇ ಎನುವುದೇಲ್ಲೀ... ನೆಮ್ಮದಿ ಇನ್ನೂ ನನಗೆಲ್ಲಿ
ಪ್ರೀತಿಯೆಂಬ ಮಾತೇ ಭೀತಿ ತರುತಿರೇ ನೊಂದು ನೊಂದು ಜೀವ ಕಣ್ಣೀರೂ ಮಿಡೀತಿದೇ..
ಪ್ರೀತಿಯೆಂಬ ಮಾತೇ ಭೀತಿ ತರುತಿರೇ ನೊಂದು ನೊಂದು ಜೀವ ಕಣ್ಣೀರೂ ಮಿಡೀತಿದೇ..
-----------------------------------------------------------------------------------------------------------

No comments:

Post a Comment