1341. ಬಚ್ಚನ (೨೦೧೩)

ಬಚ್ಚನ ಚಲನಚಿತ್ರದ ಹಾಡುಗಳು 
  1. ಸದಾ ನಿನ್ನ ಕಣ್ಣಲ್ಲಿ 
  2. ಹಲೋ ಹಲೋ 
  3. ಒಂಚೂರು ಬಗ್ಗಿ ಮಾತಾಡು 
  4. ಮೈಸೂರು ಪಕ್ಕಲ್ಲಿ 

ಬಚ್ಚನ (೨೦೧೩) - ಸದಾ ನಿನ್ನ ಕಣ್ಣಲ್ಲಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

ಸದಾ ನಿನ್ನ ಕಣ್ಣಲೀ.., ನನ್ನ ಬಿಂಬ ಕಾಣಲು...
ತುದೀಗಾಲಿನಲ್ಲಿ ತಯಾರಾದೆ ನಾನು...

ನಿನ್ನದೇ ಗುರುತು ಕಣ್ಣಲ್ಲೇ ಕುಳಿತು...
ನನ್ನೆದೆಯ ಸ್ಥಿತಿಯೇ ನಾಜೂಕು...
ನಿನಗೆಂದೇ ಬಾಳುವೆ... ಹಠ ಮಾಡಿ ನಾನು...

ಸದಾ ನಿನ್ನ ಕಣ್ಣಲೀ.., ನನ್ನ ಬಿಂಬ ಕಾಣಲು...
ತುದೀಗಾಲಿನಲ್ಲಿ ತಯಾರಾದೆ ನಾನು...

ಬಲು ಭಾವುಕ ಬದಲಾವಣೆ, ನನ್ನಲ್ಲಿ ನೀ ತಂದೆ... ಈಗ...
ಅಲೆದಾಡುವ ಅಪರೂಪವ, ನಿನ್ನಲ್ಲಿ ನಾ ಕಂಡೆ.. ಓಓ...
ನೀನೆ ಬಣ್ಣ, ನೀನೆ ನಕಾಶೆ.. ನೀನೆ ನನ್ನ ದಿವ್ಯ ದುರಾಸೆ...
ನೀನೆ ವಾರ್ತೆ, ನೀನೆ ವಿಹಾರ.. ನೀನೆ ದಾರಿ, ನನ್ನ ಬಿಡಾರ...
ನೆನಪಾದರೆ ಸಾಕು... ಎದುರು ನೀನೆ ಬೇಕು...
ಬಿಡಲಾರೆ ನಿನ್ನನು... ಸಲೀಸಾಗಿ ನಾನು...

ಸದಾ ನಿನ್ನ ಕಣ್ಣಲೀ.., ನನ್ನ ಬಿಂಬ ಕಾಣಲು...
ಮರುಳಾಗಿ ಹೋದೆನು... ಸುಮಾರಾಗಿ ನಾನು...

ಕನಸನು ಗುಣಿಸುವಂತ, ನೆನಪನು ಎಣಿಸುವಂತಾ..
ಹೃದಯದ ಗಣಿತ ನೀನು...
ನನ್ನ ಜೀವ, ನಿನ್ನ ಸಮೀಪ... ಬೇರೆ ಏನು ಇಲ್ಲ ಕಲಾಪ....
ನೀನೆ ಮೌನ, ನೀನೆ ವಿಳಾಸ... ನೀನೆ ನನ್ನ ಖಾಯಂ ವಿಳಾಸ...
ಬಳಿ ಇದ್ದಾರೆ ನೀನು, ಮರಳಬಾರದಿನ್ನೂ....
ನಿನ್ನನ್ನೇ ನಂಬುತಾ ಬಚಾವಾದೆ ನಾನು...

ಸದಾ ನಿನ್ನ ಕಣ್ಣಲೀ.., ನನ್ನ ಬಿಂಬ ಕಾಣಲು...
ತುದೀಗಾಲಿನಲ್ಲಿ ತಯಾರಾದೆ ನಾನು...
----------------------------------------------------------------------------------------------------------------

ಬಚ್ಚನ (೨೦೧೩) - ಹಲೋ ಹಲೋ ಹಲೋ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

ಹಲೋ ಹಲೋ ಹಲೋ ನನ್ ಮನಸ್ಸು ಎಲ್ಲೇ ಎಲ್ಲೋ ಕಳೆದೋಯತೇ
ಚಮಕ್ ಚಲ್ಲೋ ಕೇಳೂ ಚೆಲ್ಲೂ ಚೆಲ್ಲೂ ಚೆಲ್ಲೂ ಆ ನಗುವಾ
ಒಮ್ಮೆ ಚೆಲ್ಲೂ ನನಗ ಐಲೂ ಪೈಲೂ
ಕೇಳು ಅಂಜಲಿ ಅಂಜಲಿ ನೀ ಹೇಳು ಕವಿತೆ ಅಲ್ಲಿ
ನನ್ನನ್ನೇ ಕೊಲ್ಲುವಾ ಚಳಿ ಅಂಜಲಿ ಅಂಜಲಿ
ಎಲ್ಲಿ ನಾ ಹೋದರಲ್ಲಿ ನಿನ್ನದೇ ನೆನಪಿನ ದಾಳಿ
ಯು ವಾನ್ನ ವಾನ್ನ ಬಿ ಮೈ ಹಾರ್ಟ್ ಬೀಟ್ ನೆವರ್ ನೆವರ್
ಆಯ್ ಆಮ್ ಫಾರ್ ಯು ಲವ್ ಮೀ ಬೇಬಿ ನೆವರ್ ನೆವರ್
ಹಲೋ ಹಲೋ ಹಲೋ ನನ್ ಮನಸ್ಸು ಎಲ್ಲೇ ಎಲ್ಲೋ ಕಳೆದೋಯತೇ
ಚಮಕ್ ಚಲ್ಲೋ ಕೇಳೂ ಚೆಲ್ಲೂ ಚೆಲ್ಲೂ ಚೆಲ್ಲೂ ಆ ನಗುವಾ
ಒಮ್ಮೆ ಚೆಲ್ಲೂ ನನಗ ಐಲೂ ಪೈಲೂ

ಎವ್ರಿ ಟೈಮ್ ಆಯ್ ನೀಡ್ ಯುವರ್ ಲವ್ ಬೇಬಿ ಶೋ ಸಮ್ ಮರ್ಸಿ ನೌ
ವುಡ್ ಯು ನೌ ರಿಯಲಿ ನೌ ಬೇಬಿ ಬೇಬಿ ಬೇಬಿ ಇಂಟೆಝರ್ ನಿನ್ನದೇ
ಬಂದು ಹಾಕು ಹಾಜರಿ ನಿನ್ನಯ ನೋಟವೇ ಎಂತಾನೆ ಅಚ್ಚರಿ
ಬಂದು ಹಾಕು ಹಾಜರಿ ನಿನ್ನಯ ನೋಟವೇ ಎಂತಾನೆ ಅಚ್ಚರಿ
ಎ ಫಾರ್ ಆಪಲ್ ಅನ್ನೋ ಪಾತನೇ ಮರೆತು ಹೋಯಿತು
ಎ ಫಾರ್ ಆಂಗಲ್ ಅಂತ ಹೇಳೋದೇ ರೂಢಿಯಾಯಿತು
ಅಂಜಲಿ ಅಂಜಲಿ ಅಂಜಲಿ ಅಂಜಲಿ ಯು ವಾನ್ನ ವಾನ್ನ ಬಿ ಮೈ ಹಾರ್ಟ್ ಬೀಟ್ ನೆವರ್ ನೆವರ್
ಆಯ್ ಆಮ್ ಫಾರ್ ಯು ಲವ್ ಮೀ ಬೇಬಿ ನೆವರ್ ನೆವರ್
ಹಲೋ ಹಲೋ ಹಲೋ ನನ್ ಮನಸ್ಸು ಎಲ್ಲೇ ಎಲ್ಲೋ ಕಳೆದೋಯತೇ
ಚಮಕ್ ಚಲ್ಲೋ ಕೇಳೂ ಚೆಲ್ಲೂ ಚೆಲ್ಲೂ ಚೆಲ್ಲೂ ಆ ನಗುವಾ
ಒಮ್ಮೆ ಚೆಲ್ಲೂ ನನಗ ಐಲೂ ಪೈಲೂ

ನಿನ್ನ ಹಿಂದೆ ಸುತ್ತುವ ನೌಕರಿ ನನಗೀಗ ಆಗಿದೆ ಖಾತರೀ ಬೇರೆಲ್ಲಾ ಕೆಲಸಕೂ ಕತ್ತರಿ ಅಂಜಲಿ
ನಿನ್ನ ಹಿಂದೆ ಸುತ್ತುವ ನೌಕರಿ ನನಗೀಗ ಆಗಿದೆ ಖಾತರೀ ಬೇರೆಲ್ಲಾ ಕೆಲಸಕೂ ಕತ್ತರಿ ಅಂಜಲಿ

ಒಂದೂ ಎರಡೂ ಮೂರು ಎನಿಸಿತ್ತಿದೇ ಉಸಿರೂ ಬಂದು ಕೇಳೇ ಚೂರು ಅದರಲ್ಲೂ ನಿನ್ನದೇ ಹೆಸರು
ಅಂಜಲಿ ಅಂಜಲಿ ಅಂಜಲಿ ಅಂಜಲಿ ಯು ವಾನ್ನ ವಾನ್ನ ಬಿ ಮೈ ಹಾರ್ಟ್ ಬೀಟ್ ನೆವರ್ ನೆವರ್
ಆಯ್ ಆಮ್ ಫಾರ್ ಯು ಲವ್ ಮೀ ಬೇಬಿ ನೆವರ್ ನೆವರ್
ಹಲೋ ಹಲೋ ಹಲೋ ನನ್ ಮನಸ್ಸು ಎಲ್ಲೇ ಎಲ್ಲೋ ಕಳೆದೋಯತೇ
ಚಮಕ್ ಚಲ್ಲೋ ಕೇಳೂ ಚೆಲ್ಲೂ ಚೆಲ್ಲೂ ಚೆಲ್ಲೂ ಆ ನಗುವಾ
ಒಮ್ಮೆ ಚೆಲ್ಲೂ ನನಗ ಐಲೂ ಪೈಲೂ
---------------------------------------------------------------------------------------------------------------

ಬಚ್ಚನ (೨೦೧೩) - ಒಂಚೂರು ಬಗ್ಗಿ ಮಾತಾಡು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

ಮೈ ಹೂನ್ ಡಾನ್ ಒಂಚೂರು ಬಗ್ಗಿ ಮಾತಾಡು ಬಚ್ಚನ್ ಬಚ್ಚನ್
ಹೇಯ್ ಜಂಪ್ ಮಾಡಿ ನೀ ಕೇಳು ಕ್ವೆಶ್ಚನ್ ಕ್ವೆಶ್ಚನ್
ನೀನಂತೂ ಅಷ್ಟುದ್ದಾ ಲಂಬೂಜಿ ಚುಮ್ಮಾನಾ ಹೆಂಗೆ ಕೊಡಲಿ ನಾ
ಪ್ಯಾರಾಚೂಟು ಬಾಡಿಗೆ ತರಲಾ ಇಲ್ಲಾ ಸಿಂಪಲ್ ಆಗಿ ಕುಂಪೆ ಬಿಡ್ಲಾ 
ಒಂಚೂರು ಬಗ್ಗಿ ಮಾತಾಡು ಬಚ್ಚನ್ ಬಚ್ಚನ್
ಹೇಯ್ ಜಂಪ್ ಮಾಡಿ ನೀ ಕೇಳು ಕ್ವೆಶ್ಚನ್ ಕ್ವೆಶ್ಚನ್
               
ಹೇಯ್ ದೇ ದೇ ಪ್ಯಾರ್ ದೇ ಅಂತಾ ನಾ ನಿನ್ನ ಕೂಗಲಾ
ಕೂಲಿತರಾ ನಾ ಹೊತ್ತಕೊಂಡು ಹೋಗಲಾ ಹೆರಾಫೇರಿ ನಾ ಮಾಡೋದು
ಹೇಳಿಕೊಟ್ಟೆಯಾ ನಿನ್ನ ಪ್ರೀತಿಯ ಜಂಜಿರೂ ನಂಗೇ ಹಾಕ್ತಿಯಾ
ಹೇಯ್ ಜಿಂಕೆಗೇ ಜಿರಾಫೆಗೇ ಆಯ್ ಲವ್ ಯು ಅಂದಂಗೇ
ನಮ್ಮಿಬ್ಬರ ಲವ್ ಸ್ಟೋರಿ ಅಂದಿದ್ರೂ ಜಂಪಿಂಗೇ
ಲಂಬೂಜಿ ಲಂಬೂಜಿ ಲಂಬೂಜಿ ಕೈ ಚಾಚು ನಾ ಸ್ವಲ್ಪ್ ಕುಳ್ಳಿಜೀ
ಅರೇ ಹೆಲಿಕ್ಯಾಪ್ಟರು ತಂದು ಕೊಡಲಾ ಇಲ್ಲಾ ಸಿಂಪಲ್ ಆಗಿ ಕುಂಪೆ ಬಿಡ್ಲಾ 
ಒಂಚೂರು ಬಗ್ಗಿ ಮಾತಾಡು ಬಚ್ಚನ್ ಬಚ್ಚನ್
ಹೇಯ್ ಜಂಪ್ ಮಾಡಿ ನೀ ಕೇಳು ಕ್ವೆಶ್ಚನ್ ಕ್ವೆಶ್ಚನ್

ನಮ್ಮ ಪ್ರೀತಿನ ಗಬ್ಬರಗೇ ಹೇಳಿ ಬಿಡೋಣ
ಹೇಯ್ ಕೇಕು ಮಾಡಿ ಬಬಲ್ ಗಮ್ ತಿನಿಸಿಬಿಡೋಣ
ಬಾಂಬೆ ಟು ಗೋವಾ ಸೈಕಲ್ ಮೇಲೆ ಹೋಗುವಾ
ಮಧ್ಯ ಟೇಬಲಲ್ಲಿ ಸುಹಾಗ್ ರಾತ್ ಮಾಡುವಾ
ಹೇಯ್ ಮೈ ತೇರಾ ಬಚ್ಚನ್ ತು ಮೇರಿ ಗುಲ್ಕನ್ನೂ
ಇಬ್ಬರನೂ ಸೇರ್ಕೊಂಡು ತಿನ್ನೋಣ ಜಾಮನೂ
ಲಂಬೂಜಿ ಲಂಬೂಜಿ ಲಂಬೂಜಿ ಮುಂದೇನೂ ಮಾಡೋಣ ಹೇಳು ಜೀ
ನಾ ಶೋಲೆ ಪಿಚ್ಚರ್ ಸ್ಕೂಟರ್ ತರಲಾ ಇಲ್ಲಾ ಸಿಂಪಲ್ ಆಗಿ ಎಂತಕೊಂಡು ಬಿಡಲಾ
ಬಚ್ಚನ್ ಬಚ್ಚನ್ ಹೇಯ್ ಜಂಪ್ ಮಾಡಿ ನೀ ಕೇಳು ಕ್ವೆಶ್ಚನ್ ಕ್ವೆಶ್ಚನ್
----------------------------------------------------------------------------------------------------------------

ಬಚ್ಚನ (೨೦೧೩) - ಖುಷಿಯಾಗಿದ್ದಾಗ ದೇವರು ಮೈಮರೆತು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

ಖುಷಿಯಾಗಿದ್ದಾಗ ದೇವರು ಮೈಮರೆತು ಎಂಥಾವರನ್ನೋ ಸೃಷ್ಟಿ ಮಾಡಿಬಿಡ್ತಾನೇ
ಕೋಪ ಬಂದಾಗ ಮಾತ್ರ ನನ್ನಂಥವರನ್ನ ಸೃಷ್ಟಿ ಮಾಡ್ತಾನೇ
ಈ ಜಗತ್ತಿನಲ್ಲಿ ಗಂಟೆಗೇ ಒಂದು ಸಾವಿರ ಜನ ಹುಟ್ಟುತ್ತಾರೆ
ಗಂಟೆಗೇ ಸಾವಿರ ಜನ ಸಾಯುತ್ತಾರೆ
ಆದರೆ ಒಳ್ಳೆ ಕೆಲಸ ಮಾಡೋವರೂ ಸದಾ ಜೀವಂತರಾಗಿ ಇರ್ತಾರೆ
ಗುಂಡಾಗಿರಿ ಮಾಡೋರ ಮುಂದೆ ಗಾಂಧಿಗಿರಿ ಕೆಲ್ಸಕ್ಕ್ ಬರೋಲ್ಲ
ಬಚ್ಚನಗಿರೀನೇ ತೋರಿಸ್ಬೇಕೂ ಕೂಲ್ ಆಗಿದಾಗ ಮಾತ್ರ ನಾನು ಜಂಟಲಮ್ಯಾನ್
ಕೋಪ ಬಂತು ಬಾಗುಸ್ಕೊಂಡು ಬಾಗುಸ್ಕೊಂಡು ಬಾರಿಸೋ ಬಚ್ಚನ್
ಒಳ್ಳೆತನ ವಿಕನೆಸ್ ಅಂತಕೊಳ್ಳೋದು ಮುಠ್ಠಳಾತನ
ಒಳ್ಳೆಯವನಗೇ ಕೋಪ ಬರೆಸೋದು ಅದಕ್ಕಿಂತ ದೊಡ್ಡ ಮುಠ್ಠಳಾತನ 
------------------------------------------------------------------------------------------------------------

ಬಚ್ಚನ (೨೦೧೩) - ಮೈಸೂರುಪಾಕಲ್ಲಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಂ, ಶ್ರೇಯಾ ಘೋಷಾಲ್

ಮೈಸೂರುಪಾಕಲ್ಲಿ ಟೋಟಲ್ಲಾಗಿ ಎಷ್ಟೂ ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು ಚೂಡಿದಾರು ರೇಟು ಏರಿದೆ
ಟುಂಗ್ ಟುಂಗ್ ಟುಂಗ್ ಟುಂಗ್ ಟುಂಗ್
ಕೇಳೊಮ್ಮೆ ಕೆಲವೊಂದು ತಿಳ್ಕೋಬೇಕಾಯ್ತದೇ 
ಇಲ್ಲಂದರೇ ಮರ್ಯಾದೇ ಕಳ್ಕೋ ಬೇಕಾಯ್ತದೇ 
ಜನರಲ್ ನಾಲೇಜೂ ಇಲ್ದೇ ಹೋದರೇ ರಾಂಗ್ ಆಯ್ತದೇ 
ಟುಂಗ್ ಟುಂಗ್ ಟುಂಗ್ ಟುಂಗ್ ಟುಂಗ್
------------------------------------------------------------------------------------------------------------

No comments:

Post a Comment