1212. ಬಡ್ಡಿ ಬಂಗಾರಮ್ಮ (೧೯೮೪)

ಬಡ್ಡಿ ಬಂಗಾರಮ್ಮ ಚಲನ ಚಿತ್ರದ ಹಾಡುಗಳು 
  1. ನನ್ನ ಶ್ರೀಮತಿ ಆಗೋದು ಯಾವಾಗ 
  2. ಪ್ರತಿ ದಿನವೂ ಇದೇ ಕಥೆ 
  3. ಈ ನನ್ನ ಕಣ್ಣಲ್ಲಿ 
  4. ತಾಳಯ್ಯ ಸ್ವಲ್ಪು ನೀನೂ 
  5. ಇಬ್ಬರೇ ನಾವಿಲ್ಲಿಬ್ಬರೇ 
ಬಡ್ಡಿ ಬಂಗಾರಮ್ಮ (೧೯೮೪) - ನನ್ನ ಶ್ರೀಮತಿ ಆಗೋದು ಯಾವಾಗ
ಸಂಗೀತ : ಚಕ್ರವರ್ತಿ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ, ರಾಜ

ಗಂಡು : ನನ್ನ ಶ್ರೀಮತಿ ಆಗೋದು ಯಾವಾಗ ಮಧುಚಂದ್ರ ಆರಂಭ ಆಗೋದೂ ಯಾವಾಗ
            ನನ್ನ ಶ್ರೀಮತಿ ಆಗೋದು ಯಾವಾಗ ಮಧುಚಂದ್ರ ಆರಂಭ ಆಗೋದೂ ಯಾವಾಗ
            ಹಾಲನು ನೀಡೋದು ಯಾವಾಗ ಹೂಗಳೂ ನಲುಗೋದೂ ಯಾವಾಗ
            ನಿನ್ನಲ್ಲಿ ನಾನಾಗಿ ನನ್ನಲ್ಲಿ ನೀನಾಗೋದ್ಯಾವಾಗಾ..
ಹೆಣ್ಣು : ನಿನ್ನ ಶ್ರೀಮತಿ ನಾನು ಆದಾಗ.. ಮಧುಚಂದ್ರ ಆರಂಭವಾದಾಗ
          ನಿನ್ನ ಶ್ರೀಮತಿ ನಾನು ಆದಾಗ.. ಮಧುಚಂದ್ರ ಆರಂಭವಾದಾಗ
           ಬಳಿಯಲಿ ನೀನೂ ಇದ್ದಾಗ ನನ್ನನ್ನೂ ಅಪ್ಪಿಕೊಂಡಾಗ
           ಆಮೇಲೆ ಮುಂದೇನೂ ಅಮ್ಮಮ್ಮ ನಾ ಹೇಳೇ ಇವಾಗ

ಗಂಡು : ಕೈಗಳೂ ಕೈಯನೂ ಸೋಕಿದ ವೇಳೆ.. ಏನೆನ್ನಿಸಿದೇ
ಹೆಣ್ಣು : ಸುಮಾರಾಗಿದೇ..
ಗಂಡು : ತಣ್ಣನೇ ಸೊಂಟವ ಸವರುವ ವೇಳೆ  .. ಏನೆನ್ನಿಸಿದೇ
ಹೆಣ್ಣು : ತಮಾಷೆಯಾಗಿದೇ ..
ಗಂಡು : ಕಿಚಿ ಕಿಚಿ ಗುಣಿಸಲೂ ಕಿಸಿಕಿಸಿ ನಗುವೇ ಪಿಸುಮಾತಿನಲೀ ಗುಟ್ಟನೂ ನುಡಿವೇ ..
ಹೆಣ್ಣು : ಅಮ್ಮಮ್ಮಾ .. ಆಆಆ.. ನಿನ್ನಾಸೇ ತಿರೋದು ತಾಳಿಯನೇ ಕಟ್ಟಿ ಆದಾಗ.
ಗಂಡು : ನನ್ನ ಶ್ರೀಮತಿ ಆಗೋದು ಯಾವಾಗ (ಲಲಲಾ ಲಲ್ಲಲ್ಲಾ )
            ಮಧುಚಂದ್ರ ಆರಂಭ ಆಗೋದೂ ಯಾವಾಗ  (ಹೂಂಹೂಂಹೂಂ ಹೂಂಹೂಂಹೂಂ)
ಹೆಣ್ಣು : ಬಳಿಯಲಿ ನೀನೂ ಇದ್ದಾಗ ನನ್ನನ್ನೂ ಅಪ್ಪಿಕೊಂಡಾಗ
           ಆಮೇಲೆ ಮುಂದೇನೂ ಅಮ್ಮಮ್ಮ ನಾ ಹೇಳೇ ಇವಾಗ
         
ಹೆಣ್ಣು : ತುಟಿಯಲಿ ತುಟಿಗಳೂ ಕೇವಲ ಮುತ್ತೂ... ರುಚಿಯಾಗುಂಟೇನೋ...
ಗಂಡು :  ಅತಿ ಅತಿಮಧುರ
ಹೆಣ್ಣು : ತೋಳಿನ ಅಪ್ಪಿಗೇ ಸೇರಿದ ಸುಖವೋ ಹಿತವಾಗುಂಟೇನೋ
ಗಂಡು : ಬಲು ಬಲು ಚೆನ್ನ
ಹೆಣ್ಣು : ಕಳ್ಳರ ಕಳ್ಳ ಕೆಟ್ಟಿದೆ ಈಗ ಕೊಟ್ಟವರಾರೋ ಆ ಸುಖಭೋಗ
ಗಂಡು : ನೆರೆಮನೆಯಾ.... ನೆರಮನೆಯಾ ಆ ಜೋಡಿ ರಾತ್ರೀಲಿ ತಂಗಿದ್ದು ಕೇಳದಾಗ ..
            ನನ್ನ ಶ್ರೀಮತಿ ಆಗೋದು ಯಾವಾಗ (ಲಲಲಾ ಲಲ್ಲಲ್ಲಾ )
            ಮಧುಚಂದ್ರ ಆರಂಭ ಆಗೋದೂ ಯಾವಾಗ  (ಹೂಂಹೂಂಹೂಂ ಹೂಂಹೂಂಹೂಂ)
ಹೆಣ್ಣು : ಬಳಿಯಲಿ ನೀನೂ ಇದ್ದಾಗ ನನ್ನನ್ನೂ ಅಪ್ಪಿಕೊಂಡಾಗ
           ಆಮೇಲೆ ಮುಂದೇನೂ ಅಮ್ಮಮ್ಮ ನಾ ಹೇಳೇ ಇವಾಗ
ಗಂಡು : ನನ್ನ ಶ್ರೀಮತಿ ಆಗೋದು ಯಾವಾಗ
ಹೆಣ್ಣು : ನಿನ್ನ ಶ್ರೀಮತಿ ನಾನು ಆದಾಗ.
--------------------------------------------------------------------------------------------------------------------------

ಬಡ್ಡಿ ಬಂಗಾರಮ್ಮ (೧೯೮೪) - ಪ್ರತಿ ದಿನವೂ ಇದೇ ಕಥೆ
ಸಂಗೀತ : ಚಕ್ರವರ್ತಿ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಪಿ.ಸುಶೀಲಾ, ರಮೇಶ

ಹೆಣ್ಣು : ಪ್ರತಿ ದಿನವೂ....  ಇದೇ ಕಥೆ (ಹ್ಹಾ.. ಹ್ಹಹ್ಹಾ.. ಹ್ಹಾ..)
          ಪ್ರತಿ ಕ್ಷಣವೂ... ಅದೇ ವ್ಯಥೇ (ಹ್ಹಾ.. ಹ್ಹಹ್ಹಾ.. ಹ್ಹಾ..)
           ಆಸೆಯೋ ಏನೋ ಕಾಡಿದೆ ನಿನ್ನಯ ಸಂಗ ಬೇಡಿದೆ ಹ್ಹಾ.. ಹ್ಹಹ್ಹಾ..
           ಆಸೆಯೋ ಏನೋ ಕಾಡಿದೆ ನಿನ್ನಯ ಸಂಗ ಬೇಡಿದೆ
           ನೋಟವ ಏಕೆ ಹೃದಯವ ಮೀಟಿ ಸರಸಕೆ ಕಾದಿದೇ ಬಾ.. ಬಾ.. ಬಾ ..
ಗಂಡು : ಅಮ್ಮಾ .. ಬಿಟ್ಟ ಬೀಡೂ ನಂಗೆ ಭಯವಾಗುತ್ತೇ... ಹ್ಹಾ.. ಅಹ್ಹಹ್ಹ..
ಹೆಣ್ಣು : ಪ್ರತಿ ದಿನವೂ....  ಇದೇ ಕಥೆ (ಹ್ಹಾ.. ಹ್ಹಹ್ಹಾ.. ಹ್ಹಾ..)
          ಪ್ರತಿ ಕ್ಷಣವೂ... ಅದೇ ವ್ಯಥೇ (ಹ್ಹಾ.. ಹ್ಹಹ್ಹಾ.. ಹ್ಹಾ..)

ಹೆಣ್ಣು : ಹಾಲು ಹಣ್ಣು ಬೆರೆತಾಗ ಇಂದೇ ಮಾಡದೇ ಸುಮ್ಮನೇ ಇರಲೂ ಮನಸಾಗಿದೆ..
          ಒಂಟಿ ಹೆಣ್ಣು ಸಿಕ್ಕಿರುವಾಗ ಹತ್ರ ಬರದೇ ದೂರ ದೂರ ಇರಲಾಗಿದೇ
          ಎಲ್ಲಾ ಸಲಿಗೆ ಕೊಡುವಾಗ ಅಕ್ಕಾ ಎಂದು ಕರೆದಾಗ ಬರಲಾಂತಿಯಾ
ಗಂಡು : ಅಮ್ಮಂಗೆ ಹೇಳ್ತಿನಿ
ಹೆಣ್ಣು : ಹೌದನ್ನೋ ಬ್ಯಾಡೇನೋ ನಾನಂತೂ ಗೆಲ್ಲಲೇಬೇಕೂ
          ಮೋಹ ದಾಹ ತೀರಿಸಲೆಂದೂ ಬಾರೋ ನನ್ನ ರಾಜ  ಬಾ.. ಬಾ.. ಬಾ ..
ಗಂಡು : ಅಮ್ಮಾ .. ಅಮ್ಮೋ .. ಬೀಡೂ ಬೀಡೂ .ಹ್ಹ ... ಹ್ಹಾ.. ಅಹ್ಹಹ್ಹ..
ಹೆಣ್ಣು : ಪ್ರತಿ ದಿನವೂ....  ಇದೇ ಕಥೆ (ಹ್ಹಾ.. ಹ್ಹಹ್ಹಾ.. ಹ್ಹಾ..)
          ಪ್ರತಿ ಕ್ಷಣವೂ... ಅದೇ ವ್ಯಥೇ (ಹ್ಹಾ.. ಹ್ಹಹ್ಹಾ.. ಹ್ಹಾ..)

ಹೆಣ್ಣು : ಓರೇ ಕಣ್ಣಲ್ಲಿ ನಿನ್ನ ನೋಡಿ ಅಂದದ ಹೆಣ್ಣು ಬಳಿಗೆ ಬರಲೂ ಬೇಡಾಂತೀಯಾ
          ಉಳುಕಿ ಬಳುಕೋ ಬಣ್ಣದ ಬೆಡಗಿ ತಾನೇ ಬಂದು ಮೇಲೆ ಬಿದ್ರೆ ಬೇಡಾಂತೀಯಾ
          ಎಲ್ಲಾ ಬೇಲಿಯ ದಾಟುತಾ ಬಂದೂ ಚಂದಾದಾ ಸೇವೆ ಪಕ್ಕಾ ಎಂದರೇ ಇಲ್ಲಾಂತೀಯಾ
ಗಂಡು : ಥೂ .. ಹೋಗೂ ...
ಹೆಣ್ಣು : ಹೌದನ್ನೋ ಬ್ಯಾಡೇನೋ ನಾನಂತೂ ಗೆಲ್ಲಲೇಬೇಕೂ
          ಮೋಹ ದಾಹ ತೀರಿಸಲೆಂದೂ ಬಾರೋ ನನ್ನ ರಾಜ  ಬಾ.. ಬಾ.. ಬಾ .ಬಾ .
ಗಂಡು : ಅಮ್ಮಾ .. ಅಮ್ಮೋ .. ಬೀಡೂ ಬೀಡೂ .ಹ್ಹ ... ಹ್ಹಾ.. ಅಹ್ಹಹ್ಹ..
ಹೆಣ್ಣು : ಪ್ರತಿ ದಿನವೂ....  ಇದೇ ಕಥೆ (ಹ್ಹಾ.. ಹ್ಹಹ್ಹಾ.. ಹ್ಹಾ..)
          ಪ್ರತಿ ಕ್ಷಣವೂ... ಅದೇ ವ್ಯಥೇ (ಹ್ಹಾ.. ಹ್ಹಹ್ಹಾ.. ಹ್ಹಾ..)
           ಆಸೆಯೋ ಏನೋ ಕಾಡಿದೆ ನಿನ್ನಯ ಸಂಗ ಬೇಡಿದೆ ಹ್ಹಾ.. ಹ್ಹಹ್ಹಾ..
           ಆಸೆಯೋ ಏನೋ ಕಾಡಿದೆ ನಿನ್ನಯ ಸಂಗ ಬೇಡಿದೆ
           ನೋಟವ ಏಕೆ ಹೃದಯವ ಮೀಟಿ ಸರಸಕೆ ಕಾದಿದೇ ಬಾ.. ಬಾ.. ಬಾ ..ಬಾ
ಗಂಡು : ಅಮ್ಮಾ .. ಬಿಟ್ಟ ಬೀಡೂ ಶಿವನೇ ಅಯ್ಯೋ ..
ಹೆಣ್ಣು : ಪ್ರತಿ ದಿನವೂ....  ಇದೇ ಕಥೆ (ಹ್ಹಾ.. ಹ್ಹಹ್ಹಾ.. ಹ್ಹಾ..)
          ಪ್ರತಿ ಕ್ಷಣವೂ... ಅದೇ ವ್ಯಥೇ (ಹ್ಹಾ.. ಹ್ಹಹ್ಹಾ.. ಹ್ಹಾ..)
ಗಂಡು : ಹ್ಹಾ.. ಹ್ಹಹ್ಹಾ.. ಹ್ಹಾ.... ಅಮ್ಮಾ .. ಬೀಡೂ ಬೀಡೂ ಬೀಡೂ..
--------------------------------------------------------------------------------------------------------------------------

ಬಡ್ಡಿ ಬಂಗಾರಮ್ಮ (೧೯೮೪) - ಈ ನನ್ನ ಕಣ್ಣಲ್ಲಿ
ಸಂಗೀತ : ಚಕ್ರವರ್ತಿ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ, ಎಸ್.ಪಿ.ಬಿ

ಗಂಡು : ಈ ನನ್ನ ಕಣ್ಣಲ್ಲಿ ಕಣ್ಣೇ.. ನನ್ನ ಎದೆಯೆಂಬ ಬನದಲ್ಲಿ ಹೂ ನೀ
            ನೀ ನಗೆ ಚೆಲ್ಲೀ ಸುಖದಲಿ ತೇಲಿ ತಂಗಮ್ಮ ನಲಿವಿಂದ ನೂರುಕಾಲ ಬಾಳು ನೀ
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ ನಾ ಕಂಡ ಆ ದೈವ ರೂಪ ನೀ
           ಎಲ್ಲೇ ಇರಲೂ ನೀ ಹರಿಸಿರಲೂ ಅಣ್ಣಯ್ಯ ನಲಿವಿಂದ ನೂರು ಕಾಲ ಬಾಳುವೇ

ಗಂಡು : ಹೂವಂತ ಈ ಕೈಗೇ ಶ್ರಮ ಕೂಡದು ಇನ್ನೊಂದು ನೋವನ್ನೂ ತಾಳದೂ
ಹೆಣ್ಣು : ನೀ ತಂದ ಪ್ರೀತಿಯೂ ಹೊನಲಾಗಿದೇ ಮನತುಂಬಿ ಮಾತಿಂದು ಮೂಕಾಗಿದೆ
ಗಂಡು : ಏಳೇಳು ಜನ್ಮಕ್ಕೂ ಈ ಬಂಧನ ಇರಲೆಂದು ಬೇಡುವೇ ಗುರುರಾಯನ
ಹೆಣ್ಣು : ಯಾವೊಂದು ಪುಣ್ಯವ ಮಾಡಿದೆ            
          ಯಾವೊಂದು ಪುಣ್ಯವ ಮಾಡಿದೆ ನಿನ್ನಂಥ ಅಣ್ಣನ ಅದು ನೀಡಿದೇ             
          ನಿನ್ನಂಥ ಅಣ್ಣನ ಅದು ನೀಡಿದೇ             
ಗಂಡು : ಈ ನನ್ನ ಕಣ್ಣಲ್ಲಿ ಕಣ್ಣೇ..                 ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ

ಹೆಣ್ಣು : ಹೆತ್ತೋರ ವಾತ್ಸಲ್ಯ ನೀ ತೋರಿದೇ ನೀನ್ನೆಲ್ಲಾ ಹಾರೈಕೆ ನೆರೆವೇರಿದೇ
ಗಂಡು : ಆ ತಾಯ್ ನಿನ್ನಲ್ಲಿ ನಾ ನೋಡಿದೇ ಜೀವ ನೀರಿಂದ ದೂರಾದ ಮೀನಂಗಿದೆ
ಹೆಣ್ಣು : ಈ ಜೀವ ನಿನ್ನಿಂದ ದೂರಾಗದು ಈ ಬಂಧ ಎಂದೆಂದೂ ಕೊನೆಯಾಗದು
ಗಂಡು : ಹೊಕ್ಕಂಥ ಮನೆಗೆಂದೂ ಬೆಳಕಾಗಿರೂ...         
            ಹೊಕ್ಕಂಥ ಮನೆಗೆಂದೂ ಬೆಳಕಾಗಿರೂ ಕೈ ಹಿಡಿದೋ ಮನ ತುಂಬಿ ಹಾಯಾಗಿರೂ ..         
            ಕೈ ಹಿಡಿದೋ ಮನ ತುಂಬಿ ಹಾಯಾಗಿರೂ ..            
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ ನಾ ಕಂಡ ಆ ದೈವ ರೂಪ ನೀ
ಗಂಡು : ನೀ ನಗೆ ಚೆಲ್ಲೀ ಸುಖದಲಿ ತೇಲಿ ತಂಗಮ್ಮ ನಲಿವಿಂದ ನೂರುಕಾಲ ಬಾಳು ನೀ
ಹೆಣ್ಣು : ಬಾಳಲ್ಲಿ ಬೆಳಕಾದ ದೀಪ ನೀ           ಗಂಡು : ಈ ನನ್ನ ಕಣ್ಣಲ್ಲಿ ಕಣ್ಣ ನೀ ..               

--------------------------------------------------------------------------------------------------------------------------

ಬಡ್ಡಿ ಬಂಗಾರಮ್ಮ (೧೯೮೪) - ತಾಳಯ್ಯ ಸ್ವಲ್ಪು ನೀನೂ
ಸಂಗೀತ : ಚಕ್ರವರ್ತಿ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ, ರಮೇಶ, ರಾಜ

ಹೆಣ್ಣು : ತಾಳಯ್ಯ ಸ್ವಲ್ಪ ನೀನೂ   .. (ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ )
          ನಾಳೆ ಉಂಟೂ ಬಾಕಿಯಿನ್ನೂ (ಅರೇ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ )
          ತಾಳಯ್ಯ ಸ್ವಲ್ಪ ನೀನೂ ನಾಳೆ ಉಂಟೂ ಬಾಕಿಯಿನ್ನೂ
          ಅತ್ತೆಮ್ಮಾ ಮಲಗಿಕೊಳ್ಳಲೀ ಗೊರ್ರ ಅಂತ ಗೊರಕೆ ಕೇಳಲಿ
          ಆತುರ ಏತಕೆ ತಿರುವೇ ಕೋರಿಕೆ ಈ ಕಾಟ ಈಗೇತಕೆ..
          ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್  ಜಾಮ್
ರಮೇಶ : ತಾಳಲಾರೇ ನಾನು ಇನ್ನೂ (ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ )
              ನಂಬಲಾರೇ ನಾಳೆಯನ್ನೂ (ಹೊಯ್  ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ )       
              ಅರೇ .. ತಾಳಲಾರೇ ನಾನು ಇನ್ನೂ ನಂಬಲಾರೇ ನಾಳೆಯನ್ನೂ
              ನಮ್ಮಮ್ಮ ಮಲಗೋದಿಲ್ಲಾ... ಗೊರಕೆ ಶಬ್ದ ಕೇಳೋದಿಲ್ಲಾ
              ಕೋರಿಕೆ ತೀರದೇ ಬೇಸರ ತುಂಬಿದೆ ನೀ ತೀರು ಈ ಬೇಡಿಕೆ ..
              ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್ ಜಾಮ್  ಜಾಮ್
 
ಗಂಡು : ಓಯ್ ನೂರಾಸೇ ಕಂಡಂತ ವಯಸು ಸುಖ ಏನೇನೋ ಹಾರೈಸಿದೇ
            ಒದ್ದಾಡಿ ಹೋಗ್ತಿದೇ ಮನಸೂ ರಾತ್ರಿ ಕಳೆದಿಲ್ಲಿ ಹೋಗ್ತಾ ಇದೇ ..
            ನೂರಾಸೇ ಕಂಡಂತ ವಯಸು ಸುಖ ಏನೇನೋ ಹಾರೈಸಿದೇ
            ಒದ್ದಾಡಿ ಹೋಗ್ತಿದೇ ಮನಸೂ ರಾತ್ರಿ ಕಳೆದಿಲ್ಲಿ ಹೋಗ್ತಾ ಇದೇ ..
ಹೆಣ್ಣು : ನಿನ್ನಾಸೇ ತೀರೋದೆಯೇ (ಆಹಾ ) ಇನ್ನೂ ಆ ಮೋದ ಸಿಕ್ಕೋದೆಯೇ
ಗಂಡು : ಹೊಯ್ ಕದ್ದು ಮುಚ್ಚಿ ಸೇರಿದಾಗಲೇ.. ,ಮುತ್ತು ಹೆಚ್ಚು ಪ್ರೀತಿಯಲ್ಲಿ..
            ಕಳ್ಳನೋಟ ಬೀರಿದಾಗಲೇ... ಹಾಲು ಜೇನು ಸೇರಿತಿಲ್ಲಿ...
ಹೆಣ್ಣು : ಆ ದಿನ ಮುಂದಿದೆ ಆ ಸುಖ ಕಾದಿದೆ ಹೀಗೇಕೆ ನೀ ಕಾಡುವೇ ..
ಗಂಡು : ತಾಳಲಾರೇ ನಾನು ಇನ್ನೂ ನಂಬಲಾರೇ ನಾಳೆಯನ್ನೂ
ಹೆಣ್ಣು : ಅತ್ತೆಮ್ಮಾ ಮಲಗಿಕೊಳ್ಳಲೀ (ಹ್ಹಾಂ )  ಗೊರ್ರ ಅಂತ ಗೊರಕೆ ಕೇಳಲಿ
ಗಂಡು : ಕೋರಿಕೆ ತೀರದೇ ಬೇಸರ ತುಂಬಿದೆ ನೀ ತೀರು ಈ ಬೇಡಿಕೆ ..

ಗಂಡು : ಮಿಂಚಂತ ಆ ನೋಟಕ್ಕಾಗಿ ಈ ಕಿಟಕಿನೇ ನಾ ಮುಚ್ಚಲೇ                   
            ಹೂವಂತ ಆ ಪ್ರೀತಿಗಾಗಿ ಈ ಪರದೇನ ನಾ ಬಿಚ್ಚಲೇ
            ಮಿಂಚಂತ ಆ ನೋಟಕ್ಕಾಗಿ ಈ ಕಿಟಕಿನೇ ನಾ ಮುಚ್ಚಲೇ                   

            ಹೂವಂತ ಆ ಪ್ರೀತಿಗಾಗಿ ಈ ಪರದೇನ ನಾ ಬಿಚ್ಚಲೇ
ಹೆಣ್ಣು : ಪರದೇನ ಬಿಚ್ಚಬೇಡಾ.. ನನ್ನ ಮಾನಾನ ದೋಚಬೇಡಾ.. ಹ್ಹಾ.. ಹ್ಹಾ..  
ಗಂಡು : ಹಾಯಾದ ಬೆಳದಿಂಗಳಲ್ಲಿ ಕಾಣದಂತ ವಯಸೇತಕೆ           
            ಸಂಗಾತಿ ಎದುರಿದ್ದರೂ ಒಂಟಿ ಬಾಳಲೇಕೆ 
ಹೆಣ್ಣು : ಉತ್ತರ ನೀಡಲೇ ನನ್ನನ್ನೇ ನೀಡಲೇ ಅತ್ತೆಮ್ಮಗೇ ಹೇಳಲೇ 
ಗಂಡು : ಬೇಡ.. ತಾಳಲಾರೇ ನಾನು ಇನ್ನೂ (ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ )
              ನಂಬಲಾರೇ ನಾಳೆಯನ್ನೂ (ಹೊಯ್  ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ )     
              ಅರೇ .. ತಾಳಲಾರೇ ನಾನು ಇನ್ನೂ ನಂಬಲಾರೇ ನಾಳೆಯನ್ನೂ
              ನಮ್ಮಮ್ಮ ಮಲಗೋದಿಲ್ಲಾ... ಗೊರಕೆ ಶಬ್ದ ಕೇಳೋದಿಲ್ಲಾ
              ಕೋರಿಕೆ ತೀರದೇ ಬೇಸರ ತುಂಬಿದೆ ನೀ ತೀರು ಈ ಬೇಡಿಕೆ ..
              ಜಿಂಗ್ ಜಿಂಗ್ ಜಿಂಗ್ ಜಿಂಗ್ ಜಿಂಗ್ (ಜಿಂಗ್ ಜಿಂಗ್ ಜಿಂಗ್ ಜಿಂಗ್ )
              ಜಾಮ್ ಜಾಮ್ ಜಾಮ್ ಜಾಮ್ ಜಾಮ್ (ಜಾಮ್ ಜಾಮ್ ಜಾಮ್ ಜಾಮ್  ಜಾಮ್)
--------------------------------------------------------------------------------------------------------------------------

ಬಡ್ಡಿ ಬಂಗಾರಮ್ಮ (೧೯೮೪) - ಇಬ್ಬರೇ ನಾವಿಲ್ಲಿಬ್ಬರೇ
ಸಂಗೀತ : ಚಕ್ರವರ್ತಿ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಜಯಚಂದ್ರನ, ಪಿ.ಸುಶೀಲಾ

ಗಂಡು : ಹಾ..                      ಹೆಣ್ಣು : ಹಾ
ಗಂಡು : ಓಸ್ ಓಸ್               ಹೆಣ್ಣು : ಹ್ಯಾ..
ಗಂಡು : ಇಬ್ಬರೇ.. ನಾವಿಲ್ಲಿಬ್ಬರೇ..
            ಇಬ್ಬರೇ.. ನಾವಿಲ್ಲಿಬ್ಬರೇ ನೀ ಹೌದನ್ನೂ ಇಲ್ಲನ್ನೂ ಈಗಿಂದಿಗಲೇ ಗಂಡಹೆಂಡಿರೂ...   ಓಓಓಓಓ
            ಓ ಮುದ್ದಿನ ಅರಗಿಣಿಯೇ.. ನನ್ನ ನಲ್ಮೆಯ ಕಣ್ಮಣಿಯೇ ..
            ಓ ಮುದ್ದಿನ ಅರಗಿಣಿಯೇ.. ನನ್ನ ನಲ್ಮೆಯ ಕಣ್ಮಣಿಯೇ ..
ಹೆಣ್ಣು : ಇಬ್ಬರೇ.. ನಾವಿಲ್ಲಿಬ್ಬರೇ..  (ಶಬ್ಬಾಷ್ )
            ಇಬ್ಬರೇ.. ನಾವಿಲ್ಲಿಬ್ಬರೇ (ಹ್ಹಾ .. ಚೆನ್ನಾಗಿದೇ )
            ನೀ ಹೌದನ್ನೂ ಏನೇ ಅನ್ನೂ ಆಟಕೆ ಮಾತ್ರ ಗಂಡಹೆಂಡಿರೂ...   ಓಓಓಓಓ
            ಓ ಮನ್ಮಥ ಮಹರಾಯ ನಿನ್ನ ಜೋರಲು ಸಾಕಯ್ಯಾ
            ಓ ಮನ್ಮಥ ಮಹರಾಯ ನಿನ್ನ ಜೋರಲು ಸಾಕಯ್ಯಾ
ಗಂಡು : ತದ್ಧಿನ ತದ್ಧಿನ ತದ್ಧಿನ ತೊಂ ತರಿಗಿಡತರಿಗಿಡತೋಮ್ ಧೊಮತ್  ದಂತ ದಂತ
         
ಗಂಡು : ಹುಟ್ಟಿದ್ದೂ ಹುಬ್ಬಳಿಲೀ (ಆಹಾ.. ಹ್ಹಾ.. ) ನೀ ಬೆಳೆದದ್ದೂ ಬೆಳಗಾಂವನಲ್ಲಿ.. (ಹೂಂ ಹೂಂ )
ಹೆಣ್ಣು : ಹುಟ್ಟಿದ್ದೂ ಮೈಸೂರನಲ್ಲೀ... (ಏನೇನೋ) ನಾ ಬೆಳೆದದ್ದೂ ಬೆಂಗಳೂರನಲ್ಲಿ ( ಹೇ..  ಸುಳ್ಳೂ)
ಗಂಡು : ಸೆರಗಾ ಬಿದ್ದದ್ದೂ ಸವದತ್ತಿಯಲ್ಲಿ.. ನಿಂಗೇ ರೇಟೇರೀದ್ದೂ ಮಂಗಳೂರನಲ್ಲಿ
ಹೆಣ್ಣು : ನಾಷ್ಟಾನ ಕರೆದಿತ್ತು ವ್ಯಾಪಾನ ಗಿಟ್ಟಿತ್ತೋ ರಟ್ಟುಗಿಟ್ಟು ಮಾಡಬೇಡವೋ ಓ ಬೊಮ್ಮಯ್ಯಾ ..
ಗಂಡು : ಹಾಂಗ್ ಬಾ ದಾರಿಗೇ ..       ಹೆಣ್ಣು : ಸ್ವಾಮಿ ಓ ದಮ್ಮಯ್ಯಾ (ಹೇ..ಹೇ.. ಅಹ್ಹಹ್ಹಹ್ಹ)
ಹೆಣ್ಣು : ಇಬ್ಬರೇ.. ನಾವಿಲ್ಲಿಬ್ಬರೇ (ಹ್ಹಾ .. ಹೌದು )
            ನೀ ಹೌದನ್ನೂ ಏನೇ ಅನ್ನೂ ಆಟಕೆ ಮಾತ್ರ ಗಂಡಹೆಂಡಿರೂ...   ಓಓಓಓಓ
            ಓ ಮನ್ಮಥ ಮಹರಾಯ (ಆಹಾ )ನಿನ್ನ ಜೋರಲು ಸಾಕಯ್ಯಾ (ಹೂಂ.. ಹೂಂ .. )
            ಓ ಮನ್ಮಥ ಮಹರಾಯ ನಿನ್ನ ಜೋರಲು ಸಾಕಯ್ಯಾ

ಗಂಡು : ಮುಷ್ಟಿಲೇ ಸಿಕ್ಕಿ ಹಾಕೊಂಡೇ (ಕರ್ಮಾ ) ನೀ ಇಕ್ಕಟ್ಟನಲ್ಲೇ ಸಿಕ್ಕಿ ಹಾಕೊಂಡೇ (ಹಾಗ್)
ಹೆಣ್ಣು : ನೀನೀಗ ಗುಳ್ಳೇ ನರಿ (ಓಓಓ ) ಕೈ ಬಿಟ್ಟು ದೂರ ಸರಿ (ಹಾಗೇನಾ )
ಗಂಡು : ಇನ್ನೇನ ನೋಡು ನನ್ನಾ ವರಸೇ ಅರೇ .. ತೋರಿಸ್ತೀನಿ ತಮಾಷೇನಾ..
ಹೆಣ್ಣು : ಮಾತುಕತೆ ಹೋಗ್ಬೇಡಾ ನವರಾತ್ರಿ ಕಳಕೋ ಬ್ಯಾಡ ಇರಲಾರೆ ಒಂಟಿಯಾಗಿ ನಿನ್ನ ಬಿಟ್ಟೂ ..
          (ಅಯ್ಯೋ ಪಾಪ)  ಅಬ್ಬಾ ಇರಲಾರೇ .. (ಹೊಯ್ ಹೊಯ್ ಹೋ ಅಹ್ಹಹ್ಹಹ್ಹಹ )
           ಇಬ್ಬರೇ.. ನಾವಿಲ್ಲಿಬ್ಬರೇ (ನಿಜವೇ  )
           ನೀ ರೈಟನ್ನೂ ಬಾ ಅನ್ನೂ ಎಂದೆಂದೂ ನಾವೂ ಗಂಡಹೆಂಡಿರೂ...
ಗಂಡು :  ಓಓಓಓಓ
            ಓ ಮುದ್ದಿನ ಅರಗಿಣಿಯೇ..(ಆಆಆ ) ನನ್ನ ನಲ್ಮೆಯ ಕಣ್ಮಣಿಯೇ ..(ಆಆಆ )
            ಓ ಮುದ್ದಿನ ಅರಗಿಣಿಯೇ..(ಆಆಆ ) ನನ್ನ ನಲ್ಮೆಯ ಕಣ್ಮಣಿಯೇ ..(ಆಆಆ )
--------------------------------------------------------------------------------------------------------------------------

No comments:

Post a Comment