1363. ಬನಶಂಕರಿ (೧೯೭೭)

ಬನಶಂಕರಿ ಚಲನಚಿತ್ರದ ಹಾಡುಗಳು 
  1. ಬಳ್ಳಿ ಬಳ್ಳಿಯಲೂ ಹೂವೇ ತುಂಬಿರಲೂ 
  2. ನಾ ಸೋತೆ ನಿನ್ನನ್ನ ನೋಡಿ 
  3. ಜಯ ಬನಶಂಕರೀ ಜಯ ಸರ್ವೇಶ್ವರೀ 
  4. ಅಮ್ಮಾ ಎಂದರೇ ಓಡುತ ಬಂದು 
ಬನಶಂಕರಿ (೧೯೭೭) - ಬಳ್ಳಿ ಬಳ್ಳಿಯಲೂ ಹೂವೇ ತುಂಬಿರಲೂ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಸದಾಶಿವಯ್ಯ ಗಾಯನ : ಪಿ.ಸುಶೀಲ 

ಆಆಆ... ಆಆಆ.. ಆಆಆ... 
ಬಳ್ಳಿ ಬಳ್ಳಿಯಲೂ ಹೂವೇ ತುಂಬಿರಲೂ ಸಾಲದೇ ... ಪೂಜೆಗೇ 
ನನ್ನ ಸೋದರಿಯಾ.. ಪ್ರಾಣಕುಸುಮವನೇ  ಕೇಳಿದೇ ಏತಕೆ.. 

ತಾಯಿಯಂತೆ ಮಮತೆಯಿಂದ ತನ್ನ ಬೆಳೆಸುತ ಬಂದಳೂ .. 
ತಾಯಿಯಂತೆ ಮಮತೆಯಿಂದ ತನ್ನ ಬೆಳೆಸುತ ಬಂದಳೂ .. 
ತಾನೂ ಸೇರುವ ಮನೆಗೇ ಕಳಿಸಲೂ ಬಯಸಿದಾಗವ ತೊರೆದಳೂ... 
ಬಳ್ಳಿ ಬಳ್ಳಿಯಲೂ ಹೂವೇ ತುಂಬಿರಲೂ ಸಾಲದೇ ... ಪೂಜೆಗೇ 
 
ನನ್ನ ಎಂದೂ ನಗಿಸಿ ನಲಿವ ಬಾಳಿನ ಬೆಳದಿಂಗಳೂ 
ನನ್ನ ಎಂದೂ ನಗಿಸಿ ನಲಿವ ಬಾಳಿನ ಬೆಳದಿಂಗಳೂ 
ನಲುಗಿ ಹೋಗಲೂ ವಿಧಿಯ ಸೇರಲೂ ಮನವ ತುಂಬಿತು ಹರಸಲು 
ಬಳ್ಳಿ ಬಳ್ಳಿಯಲೂ ಹೂವೇ ತುಂಬಿರಲೂ ಸಾಲದೇ ... ಪೂಜೆಗೇ 

ತುಂಬಿ ಹರಿಯುವ ಗಂಗೆ ಸಾಲದೇ ತಾಯೇ ನಿನ್ನದೀ ಕ್ಷೇತ್ರಕೇ...    
ತುಂಬಿ ಹರಿಯುವ ಗಂಗೆ ಸಾಲದೇ ತಾಯೇ ನಿನ್ನದೀ ಕ್ಷೇತ್ರಕೇ... 
ತನ್ನ ಕಂಗಳ ಬಿಸಿಯ ಕಂಬನಿ ಹನಿಗಳಾಸೆಯೂ ಏತಕೇ ... 
ಬಳ್ಳಿ ಬಳ್ಳಿಯಲೂ ಹೂವೇ ತುಂಬಿರಲೂ ಸಾಲದೇ ... ಪೂಜೆಗೇ 
ನನ್ನ ಸೋದರಿಯಾ.. ಪ್ರಾಣಕುಸುಮವನೇ  ಕೇಳಿದೇ ಏತಕೇ.. ಏತಕೇ.. ಏತಕೇ.. 
-------------------------------------------------------------------------------------------------------------

ಬನಶಂಕರಿ (೧೯೭೭) - ನಾ ಸೋತೆ ನಿನ್ನನ್ನ ನೋಡಿ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಬೆಟ್ಟನಹಳ್ಳ್ಳಿ ಶ್ರೀಕಂಠಯ್ಯ ಗಾಯನ : ವಾಣಿಜಯರಾಮ 

ನಾ ಸೋತೆ ನಿನ್ನಂದ ನೋಡಿ...  ನಾ ಸೋತೆ ನಿನ್ನಂದ ನೋಡಿ... ಸ್ವಾಮೀ .. 
ನಾ ಸೋತೆ ನಿನ್ನಂದ ನೋಡಿ... ನಿನಗಿಂತ ಯಾರಿಲ್ಲ ಜೋಡಿ .. 
ನಾ ಸೋತೆ ನಿನ್ನಂದ ನೋಡಿ... 

ಏಕಾಂಗಿಯಾಗಿರುವೇ ನಲ್ಲಾ.. 
ಏಕಾಂಗಿಯಾಗಿರುವೇ ನಲ್ಲಾ.. ಒಲವಿಂದ ನೀ ಸೇರೋ 
ಉದ್ದೇಶ ಸಂತೋಷ ಉಲ್ಲಾಸ ಕೊಡುವೇ .. 
ನಾ ಸೋತೆ ನಿನ್ನಂದ ನೋಡಿ... 

ಕಣ್ಣಲ್ಲಿ ನಿನ್ನಾಸೇ ಎದೆಯಲ್ಲಿ ಹೊನ್ನಾಸೆ ತುಟಿಯಲ್ಲಿ ಹೊಸ ಆಸೇ ನೀ ಕಾಣೆಯಾ 
ಕಣ್ಣಲ್ಲಿ ನಿನ್ನಾಸೇ ಎದೆಯಲ್ಲಿ ಹೊನ್ನಾಸೆ ತುಟಿಯಲ್ಲಿ ಹೊಸ ಆಸೇ ನೀ ಕಾಣೆಯಾ 
ನಾ ದೂರ ಇರಲಾರೇ ಚಿನುಕುಲ್ಲೇ ನಿಲ್ಲಲ್ಲಾರೇ .. 
ನಾ ದೂರ ಇರಲಾರೇ ನಿನ್ನ ಮನಸಲ್ಲೇ ನಿಲ್ಲಲ್ಲಾರೇ .. 
ತನ್ನಾಸೇ ಎಂದೂ ಪೂರೈಸೆಯಾ.. 
ನಾ ಸೋತೆ ನಿನ್ನಂದ ನೋಡಿ... 

ತಂಗಾಳಿಯ ಅಲೆಯೂ.. ಬೆಳದಿಂಗಳ ಮಳೆಯೂ 
ಹಿತವಾದ ಚಳಿಯೆಂಬಾ ಚೆಲ್ಲಾಡಿದೇ .. 
ತನು ಅರಳಿ ಹೂವಾಗಿ ಮನಕೆರಳಿ ನೋವಾಗೀ... 
ತನು ಅರಳಿ ಹೂವಾಗಿ ಮನಕೆರಳಿ ನೋವಾಗೀ... 
ಸುಖಕ್ಕಾಗೀ ನೀ ಬೇಕೂ ಬಾ ಎಂದಿದೇ .. 
ನಾ ಸೋತೆ ನಿನ್ನಂದ ನೋಡಿ...  ನಾ ಸೋತೆ ನಿನ್ನಂದ ನೋಡಿ... ಸ್ವಾಮೀ .. 
ನಾ ಸೋತೆ ನಿನ್ನಂದ ನೋಡಿ... ನಿನಗಿಂತ ಯಾರಿಲ್ಲ ಜೋಡಿ .. 
ನಾ ಸೋತೆ ನಿನ್ನಂದ ಸ್ವಾಮೀ... 
--------------------------------------------------------------------------------------------------------------

ಬನಶಂಕರಿ (೧೯೭೭) - ಜಯ ಬನಶಂಕರೀ ಜಯ ಸರ್ವೇಶ್ವರೀ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿಬಿಎಸ್. ಎಲ್.ಆರ್.ಅಂಜಲಿ  

ಗಂಡು : ಜಗವೆಲ್ಲಾ ಒಂದಾದ ಆದಿ ಶಕ್ತಿಯೂ ನೀನೇಲ್ಲಿ 
            ಹಗಲು ಇರುಳು ಎಂಬ ಎರಡೂ ಕಣ್ಣುಗಳು ನೀನೇ .. 
            ಸೃಷ್ಟಿ ಸ್ಥಿತಿ ಲಯವೆಂಬ ಮೂರೂ ಶಾಖೆಗಳೂ ನೀನೇ .. 
            ಋಧೈಕೂ ಸಾಮ ಆಧ್ರೈವೆಳೆಂಬ ನಾಲ್ಕು ವೇದಗಳೂ ನೀನೇ .. 
           ಭೂಮಿ ಜಲ ಆಗ್ನಿ ವಾಯು ಆಕಾಶಗಳೆಂಬ ಪಂಚಭೂತಗಳೂ ನೀನೇ .. 
           ಪ್ರಾಣಾಪಾನ ವ್ಯಾನೋದಾನ ಸಮಾನ ಸಫಾಠಣಗಳೆಂಬ ಆರು ಪ್ರಾಣಗಳೂ ನೀನೇ .. 
           ಗಂಗೀ ಮಾದೇಶ್ವರೀ ಕೌ ಮಾತೇ ವೈಷ್ಣವಿ ವರಾಹಿ ಇಂದ್ರಾಣಿ 
           ಚಾಮುಂಡಿ ಎಂಬ ಸಪ್ತ ಮಾತೃಗಳು ನೀನೇ ... 
           ಅಣಿಮಾ ಮಹಿಮಾ ಗಡಿಮಾ ನದಿಮಾ ಪ್ರಾತಿ ಪ್ರಾಧ್ಯಮ್ನ 
           ಈಶತ್ವ ವಶಿ ಪದಗಳೆಂಬ ಅಷ್ಟಸಿದ್ಧಿಗಳೂ ನೀನೇ .. 
           ಶೃಂಗಾರ ವೀರ ಕರುಣಾ ಅದ್ಭುತ ಹಾಸ್ಯ ಭಯಾನಕ ಭೀಬತ್ಸ ರೌಧ್ರಾ 
           ಶಾಂತವೆಂಬ ನವರಸ ಹಾಡಿದೆನು ಇನ್ನೊಮ್ಮೇ .. 
           ಬಾನಾಗೀ ... ಭೂಮಿಯಾಗೀ.. ಸೂರ್ಯಚಂದಿರರಾಗೀ .. 
           ಮುಗಿಲಾಗಿ ಮಿಂಚಾಗಿ ಸಿಡಿಲೂ  ಮಳೆಹನಿಯಾಗಿ 
           ಹೂವಾಗೀ.. ಹಣ್ಣಾಗಿ.. ಜಗದ ಕಣ್ಣಾಗಿ.. ಜೀವರಾಶಿಯ ಪೊರೆವ ತಾಯಾಗೀ.. 
           ಮೆರೆಯುವ ಕರುಣಾಕರೀ..  ಜಗದೀಶ್ವರೀ .. ಬನಶಂಕರೀ ... ಹ್ಹೀಹ್ಹೀ .. ಹ್ಹೀ .. ಹ್ಹೀ ..  .. 
           ಜಯ ಬನಶಂಕರೀ ..  ಜಯ ಸರ್ವೇಶ್ವರೀ ಜಯ ಲೋಕೇಶ್ವರೀ .. ಓಂಕಾರೀ .. 
           ಜಯ ಕಾಮೇಶ್ವರೀ .. ಜಯ ರಾಜೇಶ್ವರೀ.. ಜಯ ಭುವನೇಶ್ವರೀ .. ಜಯ ಗೌರೀ .. 
ಕೋರಸ್ : ಐಗಿರಿ ನಂದಿನಿ ನಂದಿತ ಮೋಹಿನಿ ವಿಶ್ವ ವಿನೋದಿನಿ ನಂದನುತೇ.. 
                ಗಿರಿವರ ವಿಂಧ್ಯಸಿರೋಧಿ ನಿವಾಸಿನೀ .. ವಿಷ್ಣು ವಿಲಾಸಿನಿ ಜಿಷ್ಣುನುತೇ 

ಗಂಡು : ನೀಲಾಕಾಶದಿ ನಗೆಮೊಗವಾಗಿದೇ ಚಂದಿರ ಸೂರ್ಯರೇ ಕಣ್ಣುಗಳೂ 
            ಕಪ್ಪನೇ ಮೋಡದೇ ಮುಂಗುರುಳಾಗಿದೆ ಕೊರಳಿನ ಮಾಲೆಯೇ ತಾರೆಗಳೂ .. 
            ಹಸುವಿನ ಬನಸಿರಿ ಉಡುಗೆಯಾಗಿದೇ .. ಹೂಗಳೇ ನೀನಗೂ ಒಲವಿಗೇ ಹೂವೂ 
            ಕರುಣಾ ಬೆಳಗಿರೇ ಅರಿಷಿಣ ಕುಂಕುಮ ನೆಲೆಸಿದೆ ಮಡಿಲಲಿ ಜೀವಿಗಳೂ .. 
ಹೆಣ್ಣು : ಬ್ರಹ್ಮನಾಗುವೇ.. ಸೃಷ್ಠಿ ಮಾಡುವೇ .. ವಿಷ್ಣು ಆಗುವೇ ..ಮೂಕ ತೊರೆಯುವೇ .. 
           ಪ್ರಳಯ ಕಾಲದೀ ಶಿವನಾಕೃತಿ ಎಲ್ಲಾ ಅಳಿಸುವ ಶಕ್ತಿಯಾಗುವೇ .. 
ಕೋರಸ್ : ಓಂ ಶಕ್ತಿ...  ಓಂ ಶಕ್ತಿ... ಓಂ ಶಕ್ತಿ... ಓಂ ಶಕ್ತಿ...  ಓಓಓಓಓ     
                ಓಂ ಶಕ್ತಿ...  ಓಂ ಶಕ್ತಿ... ಓಂ ಶಕ್ತಿ... ಓಂ ಶಕ್ತಿ...  ಓಓಓಓಓ     
ಗಂಡು : ಜಯ ಬನಶಂಕರೀ ..  ಜಯ ಸರ್ವೇಶ್ವರೀ ಜಯ ಲೋಕೇಶ್ವರೀ .. ಓಂಕಾರೀ .. 

ಗಂಡು : ಸರ್ವ ಶುಭಂಕರೀ ಲೋಕ ಹಿಂತಕರೀ ಶತ್ರು ಭಯಂಕರೀ ಸೌ ಮಾರೀ .. 
            ಲೋಕಾನಂದಕರಿ ಶಿವಶಂಕರೀ ಭಕ್ತವ ಶಂಕರೀ ಹ್ರಿಮಾಂಕಾರೀ .. 
            ಶುಂಭ ನಿಶಂಭರ ಜಂಭವ ಅಳಿಸಿದ ಶಾಂಭವೀ ಅಮೃತಕೆ ದುರ್ಗಾಣಿ 
             ನಂಬಿದ ಮನುಜರ ಸಂತಸ ಸಲಹುವ ಶ್ರೀ ಮೂಕಾಂಬಿಕೆ ಶರ್ವಾಣೀ .. 
ಹೆಣ್ಣು : ಲಕ್ಷ್ಮಿಯಾಗುವೇ .. ಸಿರಿಯ ನೀಡುವೇ .. ವಾಣಿಯಾಗುವೇ ಜ್ಞಾನ ನೀಡುವೇ .. 
           ಸರ್ವ ಲೋಕಕೇ ಸರ್ವ ಕಾಲದೀ ಜೀವ ನೀಡುವ ತಾಯಿಯಾಗುವೇ .. 
ಕೋರಸ್ : ಬನಶಂಕರೀ ..  ಬನಶಂಕರೀ .. ಬನಶಂಕರೀ .. ಬನಶಂಕರೀ .. 
ಗಂಡು : ಜಯ ಬನಶಂಕರೀ ..  ಜಯ ಸರ್ವೇಶ್ವರೀ ಜಯ ಲೋಕೇಶ್ವರೀ .. ಓಂಕಾರೀ .. 
ಕೋರಸ್ : ಐಗಿರಿ ನಂದಿನಿ ನಂದಿತ ಮೋಹಿನಿ ವಿಶ್ವ ವಿನೋದಿನಿ ನಂದನುತೇ.. 
                ಗಿರಿವರ ವಿಂಧ್ಯಸಿರೋಧಿ ನಿವಾಸಿನೀ .. ವಿಷ್ಣು ವಿಲಾಸಿನಿ ಜಿಷ್ಣುನುತೇ 
                ಭಗವತೀ ಹೇ ಸ್ಥಿತಿ ಕಂದ ಕುದುಂಬಿನಿ ಭೂರಿ ಕುದುಂಬಿನಿ ಭೂರಿ ಕೃತೇ .. 
                ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯಕ ಪರ್ದಿನಿ ಶೈಲಸುತೇ  
                ಐಗಿರಿ ನಂದಿನಿ ನಂದಿತ ಮೋಹಿನಿ ವಿಶ್ವ ವಿನೋದಿನಿ ನಂದನುತೇ.. 
                ಗಿರಿವರ ವಿಂಧ್ಯಸಿರೋಧಿ ನಿವಾಸಿನೀ .. ವಿಷ್ಣು ವಿಲಾಸಿನಿ ಜಿಷ್ಣುನುತೇ 
                ಐಗಿರಿ ನಂದಿನಿ ನಂದಿತ ಮೋಹಿನಿ ವಿಶ್ವ ವಿನೋದಿನಿ ನಂದನುತೇ.. 
                ಗಿರಿವರ ವಿಂಧ್ಯಸಿರೋಧಿ ನಿವಾಸಿನೀ .. ವಿಷ್ಣು ವಿಲಾಸಿನಿ ಜಿಷ್ಣುನುತೇ 
--------------------------------------------------------------------------------------------------------------

ಬನಶಂಕರಿ (೧೯೭೭) - ಅಮ್ಮಾ ಎಂದರೇ ಓಡುತ ಬಂದು 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಪಿ.ಬಿ.ಎಸ್  

ಎಸ್ಪಿಬಿ : ಅಮ್ಮಾ ಎಂದರೇ ಓಡುತ ಬಂದು ಪ್ರೇಮದಿ ಸಲಹುವಳೂ (ಆಆಆ) 
            ತಾಯೇ ಎಂದರೇ ಕನಿಕರ ತೋರಿ ವರವನ ನೀಡುವಳು (ಆಆಆ) 
            ದುರ್ಗಾ ಎಂದರೇ .. ದುಷ್ಟರ ಅಳಿಸಿ ಶಿಷ್ಟರ ಉಳಿಸುವಳು 
            ಅಂಬಾ ಎಂದರೇ .. ನಂಬಿದ ಜನರಲೀ ಸಂತಸ ತುಂಬುವುಳು 
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )

ಎಸ್ಪಿಬಿ:  ನೀಚರ ಕಾಮನೆ ನಿವಾರಿಸಿ ಧರೆಗೇ ದೇವಿಯೂ ಧುಮುಕಿದಳೂ     
ಕೋರಸ್ : ದೇವಿಯೂ ಧುಮುಕಿದಳೂ     
ಗಂಡು : ತ್ರಿಷಾ ತಾಳದ ಗಂಗೆಯ ಭೂಮಿಗೇ ಆ ಕ್ಷಣ ಕರೆಸಿದಳು 
ಕೋರಸ್ : ಆ ಕ್ಷಣ ಕರೆಸಿದಳು 
ಗಂಡು : ಒಣಗದ ನೆಲದಲಿ ಹಸಿರನು ಹಾಸೀ ತಂಪನು ತುಂಬಿದಳು 
            ಬನದೇವತೆಯ ಭೂಪತಿ ನೆಲೆಸಿ ಲೋಕವ ಹರಿಸಿದಳು .. 
            ಅಮ್ಮಾ ಎಂದರೇ ಓಡುತ ಬಂದು ಪ್ರೇಮದಿ ಸಲಹುವಳೂ (ಆಆಆ) 
            ತಾಯೇ ಎಂದರೇ ಕನಿಕರ ತೋರಿ ವರವನ ನೀಡುವಳು (ಆಆಆ) 
            ದುರ್ಗಾ ಎಂದರೇ .. ದುಷ್ಟರ ಅಳಿಸಿ ಶಿಷ್ಟರ ಉಳಿಸುವಳು 
            ಅಂಬಾ ಎಂದರೇ .. ನಂಬಿದ ಜನರಲೀ ಸಂತಸ ತುಂಬುವುಳು 
ಇಬ್ಬರು : ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )

ಎಸ್ಪಿಬಿ : ಎಲ್ಲಾ ದೂರುಗಳೂ ಎಲ್ಲಾ ನಾಮಗಳೂ ನಿನ್ನ ಸ್ಮರಣೆಗಾಗಿ 
ಕೋರಸ್ : ನಿನ್ನ ಸ್ಮರಣೆಗಾಗಿ 
ಪಿಬಿಎಸ್ : ಎಲ್ಲ ಪೂಜೆಗಳೂ .. ಎಲ್ಲ ಸ್ತೋತ್ರಗಳೂ ನಿನ್ನ ಕರುಣೆಗಾಗಿ 
ಕೋರಸ್ : ನಿನ್ನ ಕರುಣೆಗಾಗಿ 
ಎಸ್ಪಿಬಿ : ಎಲ್ಲ ಜೀವಿಗಳೂ .. ಎಲ್ಲ ಲೋಕಗಳೂ .. ನಿನ್ನ ಮಡಿಲಿನಲ್ಲಿ 
ಪಿಬಿಎಸ್ : ಎಲ್ಲ ಮಂತ್ರಗಳೂ .. ಎಲ್ಲ ತಂತ್ರಗಳೂ ಶರಣು ಕಾಲದಲ್ಲಿ.. 
ಇಬ್ಬರು : ಅಮ್ಮಾ ಎಂದರೇ ಓಡುತ ಬಂದು ಪ್ರೇಮದಿ ಸಲಹುವಳೂ (ಆಆಆ) 
            ತಾಯೇ ಎಂದರೇ ಕನಿಕರ ತೋರಿ ವರವನ ನೀಡುವಳು (ಆಆಆ) 
            ದುರ್ಗಾ ಎಂದರೇ .. ದುಷ್ಟರ ಅಳಿಸಿ ಶಿಷ್ಟರ ಉಳಿಸುವಳು 
            ಅಂಬಾ ಎಂದರೇ .. ನಂಬಿದ ಜನರಲೀ ಸಂತಸ ತುಂಬುವುಳು 
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )
            ಅಂಬಾ.. ಜಗದಂಬಾ.. (ಆಹ್ಹಾ ) ಅಂಬಾ... ಭ್ರಮರಾಂಬಾ.. (ಆಹ್ಹಾ )
-------------------------------------------------------------------------------------------------------------- 

No comments:

Post a Comment