- ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ
- ಕಬ್ಬನಪೇಟೆ ಕಾಮ
- ಕುಹೂ ಕೂಹೂ ಕೋಗಿಲೇ
- ತನಂ ತನಂ
ಬೆಂಗಳೂರು ರಾತ್ರಿಯಲ್ಲಿ ( ೧೯೮೫) - ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ
ಸಂಗೀತ : ಪ್ರಭಾಕರ ಬದ್ರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ
ಹೇಹೇ .. ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ
ಭಾರತ ಗಗನವ ಬೆಳಗುವ ಚಂದಿರ ಸುಂದರ ಸಿಂಗಾರ ...
ಆನಂದವೇ ತುಂಬಿರುವಾ.. ಜನಗಣಮನ ರಂಜಿಸುವ
ಬೆಂಗಳೂರು.. ಮಹಾನಗರ... ಆ.. ಬೆಂಗಳೂರು.. ಮಹಾನಗರ... ಆಆಆ
ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ
ಭಾರತ ಗಗನವ ಬೆಳಗುವ ಚಂದಿರ ಸುಂದರ ಸಿಂಗಾರ ...
ಜಾತಿ ಮತ ಬೇಧವಿಲ್ಲ ಜಗಳ ಹೊಡೆದಾಟವಿಲ್ಲಾ
ಆ... ಅಣ್ಣತಮ್ಮಂದಿರಂತೇ ಕೂಡಿ ಬಾಳುವೆರೇಲ್ಲಾ ..
ನ್ಯಾಯ ಒಂದೇ.. ನೀತಿ ಒಂದೇ.. ಲೋಕ ಕೊಂಡಾಡಿತೆಲ್ಲಾ
ಮಾಗಡಿ ಕೆಂಪೇಗೌಡರ ಕಟ್ಟಿದ ವಿಜಯನಗರ ಅರಸರು ಮೆಚ್ಚಿದ
ಮಾಗಡಿ ಕೆಂಪೇಗೌಡರ ಕಟ್ಟಿದ ವಿಜಯನಗರ ಅರಸರು ಮೆಚ್ಚಿದ
ಗೋಪುರಗಳ ನಗರ... ಇದು ಗೋಪುರಗಳ ನಗರ.. ಹ್ಹಾಂ..
ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ
ಭಾರತ ಗಗನವ ಬೆಳಗುವ ಚಂದಿರ ಸುಂದರ ಸಿಂಗಾರ ...
ವಿದ್ಯೇ ವಿಜ್ಞಾನ ಶಾಲಾ ಜ್ಞಾನ ಭಂಡಾರ ಕೇಳೂ
ಭವ್ಯ ಸೌಧಗಳಿಂದ ದಿವ್ಯ ಕಳೆ ಏರಿತಲ್ಲ
ಶ್ರಮಿಕ ಜನರ ಶ್ರಮದ ಫಲವೂ ನಗರ ಸಿರಿ ತುಂಬಿತಲ್ಲ
ದುಡಿಮೆಯೇ ದೇವರೂ ಎಂದೂ ನಂಬಿದ ಕುಶಲ ಕಲಾವಿದ ಕಾರ್ಮಿಕ ಜನರ
ದುಡಿಮೆಯೇ ದೇವರೂ ಎಂದೂ ನಂಬಿದ ಕುಶಲ ಕಲಾವಿದ ಕಾರ್ಮಿಕ ಜನರ
ಕೈಗಾರಿಕಾ ನಗರ .. ಇದೂ ಉದ್ಯಾನ ವನ ನಗರ.. ಆಹ್ಹಾ..
ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ
ಭಾರತ ಗಗನವ ಬೆಳಗುವ ಚಂದಿರ ಸುಂದರ ಸಿಂಗಾರ ...
ಆನಂದವೇ ತುಂಬಿರುವಾ.. ಜನಗಣಮನ ರಂಜಿಸುವ
ಬೆಂಗಳೂರು.. ಮಹಾನಗರ... ಆ ... ಬೆಂಗಳೂರು.. ಮಹಾನಗರ... ಹ್ಹಾ..
--------------------------------------------------------------------------------------------------------------
ಬೆಂಗಳೂರು ರಾತ್ರಿಯಲ್ಲಿ ( ೧೯೮೫) - ಕಬ್ಬನ ಪೇಟೆ ಕಾಮ
ಸಂಗೀತ : ಪ್ರಭಾಕರ ಬದ್ರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ
ಕಬ್ಬಿನಪೇಟೇ ಕಾಮ ಬಿಂಕದಪೇಟೆ ಭೀಮ ಕಾಟನ್ ಪೇಟೆ ಜೊಲ್ಲೇ ದಡ್ಡರ ರಾಮಾ
ಕಬ್ಬಿನಪೇಟೇ ಕಾಮ ಬಿಂಕದಪೇಟೆ ಭೀಮ ಕಾಟನ್ ಪೇಟೆ ಜೊಲ್ಲೇ ದಡ್ಡರಾಮಾ
ನೋಡಲಾರೇ ನಿನ್ನ ಸೈಕಲ್ ಮುಟ್ಟದೇ ಚಿನ್ನ ಪಡ್ಡೇ ಮೀಸೆ ಕಂಡೂ ಹೆದರುವೇನೂ ಕಣ್ಣ
ಇದ್ದಾಗೂ ಹಿಂದ ಹೋಗು ಹಾಡಿ ಕುಣಿ ಇವಳಾ
ಸಿಟ್ಟೇದ್ದೂ ನನ್ನ ಚಡ್ಡಿ ರಂಗಾ ಸಾಕಾಯ್ತು ನಿನ್ನ ಹಲಕಟ್ ಸಂಗ
ಬಿದ್ದೇದ್ದೂ ನನ್ನ ಚಡ್ಡಿ ರಂಗಾ ಸಾಕಾಯ್ತು ನಿನ್ನ ಹಲಕಟ್ ಸಂಗ
ಕಬ್ಬಿನಪೇಟೇ ಕಾಮ ಬಿಂಕದಪೇಟೆ ಭೀಮ ಕಾಟನ್ ಪೇಟೆ ಜೊಲ್ಲೇ ದಡ್ಡರ ರಾಮಾ
ತಾಮ್ರದ ಚಂಬೂ ತಲೆ ಬೋಳೂ ಏನಿದೂ ಎತಕೊಂಡ್ರೇ ನಿಮ್ಮ ಗೋಳೂ
ಅಹ್ಹಹ್.. ತಾಮ್ರದ ಚಂಬೂ ತಲೆ ಬೋಳೂ ಏನಿದೂ ಎತಕೊಂಡ್ರೇ ನಿಮ್ಮ ಗೋಳೂ
ಪರಮುಪ್ಪು ಆದರೂ ಹುಳಿ ಮುಪ್ಪೇ ಗುಂಡ್ ಹಾಕ್ಕೊಂಡೂ ಅಂತ ಅಂದ್ರೇ ನಿನ್ನ ತಪ್ಪೇ
ಚಿಕ್ಕಣ್ಣ ಚೊಕ್ಕಣ್ಣ ಚಕ್ಕಣ್ಣ ಮುಕ್ಕಣ್ಣ ಹೇಳಿಕೊಂಡೇ ನನ್ನ ಬೀಡಿರಣ್ಣಾ..
ಕಬ್ಬಿನಪೇಟೇ ಕಾಮ ಬಿಂಕದಪೇಟೆ ಭೀಮ ಕಾಟನ್ ಪೇಟೆ ಜೊಲ್ಲೇ ದಡ್ಡರ ರಾಮಾ .... ಆಆಆ..
ಆ.. ಆ.. ಆ.. ಆ.. ಆ.. ಆ.. ಆ..
ಹೊತ್ತಕೊಂಡೂ ಬನ್ನರಲೇ ಡೊಳ್ಳ ಹೊಟ್ಟೇ .. ತಲೆಗೇನೇ ಕೂತೈತೇ ಕರಿ ಮೂಟೆ
ಆಹಾ.. ಹೊತ್ತಕೊಂಡೂ ಬನ್ನರಲೇ ಡೊಳ್ಳ ಹೊಟ್ಟೇ .. ತಲೆಗೇನೇ ಕೂತೈತೇ ಕರಿ ಮೂಟೆ
ಏನಾಯ್ತು ನಿಂದೆಲ್ಲಾ ಎಲ್ಲಿಟ್ಟರೀ ದೊಡ್ಡ ಬಾಯೀ ಬಿಟ್ಟುಕೊಂಡೂ ಬಂದಬಿಟ್ಟವೀ
ತಿಮ್ಮಣ್ಣ ಗುಮ್ಮಣ್ಣ ಅಮ್ಮಣ್ಣ ಇಮ್ಮಣ್ಣ ಕಾಲಿಗೇ ಬಿದ್ದೇ ನನ್ನ ಬಿಡಿರಣ್ಣ
ಕಬ್ಬಿನಪೇಟೇ ಕಾಮ ಬಿಂಕದಪೇಟೆ ಭೀಮ ಕಾಟನ್ ಪೇಟೆ ಜೊಲ್ಲೇ ದಡ್ಡರ ರಾಮಾ ....
ನೋಡಲಾರೇ ನಿನ್ನ ಸೈಕಲ್ ಮುಟ್ಟದೇ ಚಿನ್ನ ಪಡ್ಡೇ ಮೀಸೆ ಕಂಡೂ ಹೆದರುವೇನೂ ಕಣ್ಣ
ಇದ್ದಾಗೂ ಹಿಂದ ಹೋಗು ಹಾಡಿ ಕುಣಿ ಇವನಾ
ಸಿಟ್ಟೇದ್ದೂ ನನ್ನ ಚಡ್ಡಿ ರಂಗಾ ಸಾಕಾಯ್ತು ನಿನ್ನ ಹಲಕಟ್ ಸಂಗ
ಬಿದ್ದೇದ್ದೂ ನನ್ನ ಚಡ್ಡಿ ರಂಗಾ ಸಾಕಾಯ್ತು ನಿನ್ನ ಹಲಕಟ್ ಸಂಗ
--------------------------------------------------------------------------------------------------------------
ಬೆಂಗಳೂರು ರಾತ್ರಿಯಲ್ಲಿ ( ೧೯೮೫) - ಕುಹೂ ಕೂಹೂ ಕೋಗಿಲೇ
ಸಂಗೀತ : ಪ್ರಭಾಕರ ಬದ್ರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ
ಓ.. ಓಯ್.. ಓ.. ಓಯ್
ಕೂಹೂ ಕೂಹೂ ಕೂಹೂ ಎನ್ನೂ ಕೋಗಿಲೇ ಚಣ್ಣ ಚಣ್ಣ ಚಣ್ಣ ಎನ್ನೂ ನವಿಲೇ
ಕೂಹೂ ಕೂಹೂ ಕೂಹೂ ಎನ್ನೂ ಕೋಗಿಲೇ ಚಣ್ಣ ಚಣ್ಣ ಚಣ್ಣ ಎನ್ನೂ ನವಿಲೇ
ಈ ವನವೂ ಮೋಹಮಯ
ಈ ವನವೂ ಮೋಹಮಯ ಬಾ ಮದನ ಹಾಡು ಪಾಡಿ ಕುಣಿಯುವಾ..
ಕೂಹೂ ಕೂಹೂ ಕೂಹೂ ಎನ್ನೂ ಕೋಗಿಲೇ ಚಣ್ಣ ಚಣ್ಣ ಚಣ್ಣ ಎನ್ನೂ ನವಿಲೇ
ಸುಂದರವೀ ಕುಸುಮವನ ಕರೆಯುತಿದೇ ಸುಮನಾ..
ವಿರಹಿ ಮನ ಬಯಸುತಿದೇ ಪ್ರಿಯತಮನ ವದನ
ಚಿಲಿಪಿಲಿ ಹಕ್ಕಿಯೋಳೀ.. ಥಳ ಥಳ ಕಿರಣದಲೀ..
ಝಣ ಝಣ ತಾಳಕೆ ಸೇರಿದೇ ಮನವೂ
ಕೂಹೂ ಕೂಹೂ ಕೂಹೂ ಎನ್ನೂ ಕೋಗಿಲೇ ಚಣ್ಣ ಚಣ್ಣ ಚಣ್ಣ ಎನ್ನೂ ನವಿಲೇ
ಹೂವರಳೀ.. ಕೋರುತಿದೆ ಪ್ರಿಯಕರನ ಗಮನ..
ಪ್ರೀಯ ದುಂಬಿ ಹೀರುತಿದೇ ಮದಕರ ರಸಪಾನ...
ಮನಸೂ ಮಾರಲುತಿದೇ .. ಇನಿಯನ ನೆನೆಯುತಿದೇ ...
ಬಂದರೇ ಮೋಹನ ನೀಡಿವೇ ತಾನ
ಕೂಹೂ ಕೂಹೂ ಕೂಹೂ ಎನ್ನೂ ಕೋಗಿಲೇ ಚಮ್ ಚಮ್ ಚಮ್ ಎನ್ನೂ ನವಿಲೇ
--------------------------------------------------------------------------------------------------------------
ಬೆಂಗಳೂರು ರಾತ್ರಿಯಲ್ಲಿ ( ೧೯೮೫) - ತಾನಂ ತನನಂ ರಾಗಂ ಮಿಲನಂ ಎಲ್ಲೆಲ್ಲೋ ತಮ್ಮ ಧ್ಯಾನಂ
ಸಂಗೀತ : ಪ್ರಭಾಕರ ಬದ್ರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ, ಎಸ್.ಪಿ.ಬಿ
ಹೆಣ್ಣು : ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಾಲಾ ಪಪರಿರಿ ಸಸರಿರಿ ನಿಸ ಹ್ಹಾ... ಲಲಲಲಲಲಾ ಲಲಲಾ
ತಾನಂ ತನನಂ ರಾಗಂ ಮಿಲನಂ ಎಲ್ಲೆಲ್ಲೋ ತಮ್ಮ ಧ್ಯಾನಂ
ನುಡಿಸುವೇಯಾ ಗೆಳೆಯಾ ಹೃದಯದ ಭಾವನೆಯಾ..
ನಾದಪ್ರಿಯ ಗಾನಮಯ ಮೌನ ಏಕಯ್ಯಾ..
ತಾನಂ ತನನಂ ರಾಗಂ ಮಿಲನಂ ಎಲ್ಲೆಲ್ಲೋ ತಮ್ಮ ಧ್ಯಾನಂ
ಗಂಡು : ನಿನ್ನ ಮನದಲ್ಲಿ ಎಂದೂ ಒಪ್ಪದ ಧ್ಯಾನ.. ನಿನ್ನ ಭಾವದಲೆಂದೂ ಅವನೇ ಪ್ರಾಣ
ಹೆಣ್ಣು : ಕಣ್ಣು ಕಣ್ಣಿನಲೀ ಮೋಡಿ... ಜೀವಜೀವದಲೀ ಕೂಡಿ
ನಲಿಯುವ ಸಮಯಕೆ ನೀನೋಂದು ಮಾತೊಂದು ಏನೂ ಹೇಳುವೇ
ಹೇಳಯ್ಯಾ ಕೃಷ್ಣಯ್ಯಾ ನುಡಿಸುವೇಯಾ.. ಹೇಳಯ್ಯಾ ಕೃಷ್ಣಯ್ಯಾ ನುಡಿಸುವೇಯಾ
ಗಂಡು : ತಾನಂ ತನನಂ ರಾಗಂ ಮಿಲನಂ ನಿನ್ನಲ್ಲೇ ನನ್ನ ಧ್ಯಾನಂ
ನುಡಿಸುವೇನೂ ನಲ್ಲೇ ನಿನ್ನಯ ಭಾವನೆಯಾ..
ನೀನೇ ಪ್ರಿಯೇ ಮೋಹಮಯೇ ನನ್ನ ತೇರಿಗೆ
ಹೆಣ್ಣು : ನಮ್ಮ ಪ್ರೇಮವೂ ನಿತ್ಯ ಸತ್ಯವೇ ಹೇಳೂ ... ನೊಂದ ಜೀವದ ನೋವನೂ ಅರಿತು ಕೇಳೂ
ಗಂಡು : ಕಾಮ ಪ್ರೇಮದಿ ಮೂಡಿ ಸ್ವಾರ್ಥ ತ್ಯಾಗದಿ ಕೂಡಿ ಒಲಿಯುವ .. ಸಮಯಕೇ..
ನೀನೊಂದು ಮಾತೊಂದೂ ಏನೂ ಕೇಳುವೇ
ಬಾರಮ್ಮಾ ರಾಧಮ್ಮಾ ಇಲ್ಲೇ ಕೇಳಮ್ಮಾ.. ಕೇಳಮ್ಮ ರಾಧಮ್ಮಾ ನನ್ನ ಬೀಡಮ್ಮಾ
ಇಬ್ಬರು : ತಾನಂ ತನನಂ ರಾಗಂ ಮಿಲನಂ ನಿನ್ನಲ್ಲೇ ನನ್ನ ಧ್ಯಾನಂ
--------------------------------------------------------------------------------------------------------------
No comments:
Post a Comment