ಬೆಕ್ಕಿನ ಕಣ್ಣು ಚಲನಚಿತ್ರದ ಹಾಡುಗಳು
- ಹಗಲೆಲ್ಲ ನನ್ನ
- ಅಯ್ಯೋ ಅಪ್ಪಾ ನಾನಾ ಬೆಪ್ಪಾ
- ಶರಣಾಗಿ ಬಂದಿರುವೇ ಶಿವಶಂಕರಾ.
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಆದಿನಾರಾಯಣ
ಗಂಡು : ಹಗಲೆಲ್ಲಾ ನನ್ನ ನೆನಪಾಗಿ ಕೊಲ್ಲುವೇ .. ಇರುಳೆಲ್ಲಾ ನನ್ನ ಕನಸಾಗಿ ಕಾಡುವೇ ..
ಓ.. ಹೆಣ್ಣೇ ಇನ್ನೇಕೇ ಹೀಗಾಡುವೇ.. ಹ್ಹಾ.. ಇಂದೂ ನೀ ನನ್ನ ಜೊತೆಯಾಗುವೇ ..
ಹೆಣ್ಣು : ಹಗಲೆಲ್ಲಾ ನನ್ನ ನೆನಪಾಗಿ ಕೊಲ್ಲುವೇ .. ಇರುಳೆಲ್ಲಾ ನನ್ನ ಕನಸಾಗಿ ಕಾಡುವೇ ..
ಓ.. ಗಂಡೇ ಹೀಗೇಕೆ ನೀ ನೋಡುವೇ.. ಬಾ ಇಂದೇ ನಾ ನಿನ್ನ ಜೋಡಿಯಾಗುವೇ..
ಆಆಆ... ಆಆಆ... ಆಆಆ... (ಆಆಆ... )
ಗಂಡು : ಮನಸಲಿ ಆಸೆಯ ತುಂಬುವೇ ಏಕೆ ಕೆಣಕುತ ಮೌನದಿ ನೋಡುವೇ ಏಕೇ ..
ಹೆಣ್ಣು : ಬಿಡು ಬಿಡು ಈ ಮಾತು ಗೆಳೆಯಾ ಇನ್ನೂ .. ಸರಿಗೆಲ್ಲಾ ತಪ್ಪಾಗಿ ತಿಳಿದೇ ನೀನೂ
ಚಪಲವ ನನಗಾಗಿ ಬಿಡಲಾರೇ ಏನೋ
ಗಂಡು : ಹಗಲೆಲ್ಲಾ ನನ್ನ ನೆನಪಾಗಿ ಕೊಲ್ಲುವೇ .. ಇರುಳೆಲ್ಲಾ ನನ್ನ ಕನಸಾಗಿ ಕಾಡುವೇ .. (ಹ್ಹಾ)
ದೂರ ನನ್ನೇಕೇ ನೀ ತಳ್ಳುವೇ .. ಹೇಗೆ.. ನೋವನ್ನೂ ನಾ ತಾಳುವೇ ..
ಹೆಣ್ಣು : ತರುಣಿಯೂ ಆಸೆಯ ಹೇಳುವಳೇನೋ ತಿಳಿದಿಕೋ ಕಣ್ಣಿನ ಬಾಷೆಯ ನೀನೂ ..
ಗಂಡು : ಸುಲಭದೀ ಹೊಸದಾದ ಕವಿತೆ ಈಗ ಅರಿತೆಯೂ ನಾ ನಿನ್ನ ಮನದಾ ರಾಗ
ಕೊಡುವೇನೂ ನನ್ನನ್ನೇ ಬಳಿ ಬಾರೇ ಬೇಗ
ಹೆಣ್ಣು : ಹಗಲೆಲ್ಲಾ ನನ್ನ ನೆನಪಾಗಿ ಕೊಲ್ಲುವೇ .. ಇರುಳೆಲ್ಲಾ ನನ್ನ ಕನಸಾಗಿ ಕಾಡುವೇ ..
ಓ.. ಗಂಡೇ ಹೀಗೇಕೆ ನೀ ನೋಡುವೇ.. ಬಾ ಇಂದೇ ನಾ ನಿನ್ನ ಜೋಡಿಯಾಗುವೇ..
ಆಆಆ... ಆಆಆ... ಆಆಆ... (ಲಲಲ್ಲಲ ಲಲಲ ಲಲಲ್ಲಲ ಆಆಹಾ ಆ..) ಆಹಾ ... (ಆಹಾ )
--------------------------------------------------------------------------------------------------------------------------
ಬೆಕ್ಕಿನ ಕಣ್ಣು (೧೯೮೪) - ಅಯ್ಯೋ ಅಪ್ಪಾ ನಾನಾ ಬೆಪ್ಪಾ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಅಯ್ಯೋ ಅಪ್ಪಾ ನಾನಾ ಬೆಪ್ಪಾ.. ಹ್ಹಾ..
ಅಯ್ಯೋ ಅಪ್ಪಾ ನಾನಾ ಬೆಪ್ಪಾ ಸುಮ್ಮಸುಮ್ಮನೇ ಬೆಪ್ಪತಕ್ಕಡಿ ಎನ್ನವೇ ಏಕಪ್ಪಾ ..
ಎಂಥ ಹೆಣ್ಣಿನ ಕೈಹಿಡಿದಿರುವೇ ನೀನೇ ನೋಡಪ್ಪಾ..
ಅಯ್ಯೋ ಅಪ್ಪಾ ನಾನಾ ಬೆಪ್ಪಾ.. ಅಪ್ಪಾ..
ತುಪ್ಪದ ದೋಸೆ ಚಪ್ಪರಿಸಿದ ಈ ನಾಲಿಗೇ ಏಕಪ್ಪಾ
ಹಪ್ಪಳ ಸಂಡಿಗೆ ತಿನ್ನದ ಬಾಯಿಗೇ ಬೆಂಕಿ ಹಾಕಪ್ಪಾ.. ಆಆಆ..
ತುಪ್ಪದ ದೋಸೆ ಚಪ್ಪರಿಸಿದ ಈ ನಾಲಿಗೇ ಏಕಪ್ಪಾ.. ಏಕಪ್ಪಾ..
ಹಪ್ಪಳ ಸಂಡಿಗೆ ತಿನ್ನದ ಬಾಯಿಗೇ ಬೆಂಕಿ ಹಾಕಪ್ಪಾ
ಕಾಸಿಗೆ ಕಾಸು ಸೇರಿಸಿ ಗಂಟೂ ಮಾಡುವೇ ಜುಗ್ಗಾಪ್ಪಾ .. ಹ್ಹಾ..
ಕಾಸಿಗೆ ಕಾಸು ಸೇರಿಸಿ ಗಂಟೂ ಮಾಡುವೇ ಜುಗ್ಗಾಪ್ಪಾ ..
ಸತ್ತರೇ ನಾಳೇ ನಿನ್ನ ಹಿಂದೇ ಏನೂ ಬರದಪ್ಪಾ.. ಅರೇ ..
ಅಯ್ಯೋ ಅಪ್ಪಾ ನಾನಾ ಬೆಪ್ಪಾ ಸುಮ್ಮಸುಮ್ಮನೇ ಬೆಪ್ಪತಕ್ಕಡಿ ಎನ್ನವೇ ಏಕಪ್ಪಾ ..
ಎಂಥ ಹೆಣ್ಣಿನ ಕೈಹಿಡಿದಿರುವೇ ನೀನೇ ನೋಡಪ್ಪಾ.. ಪ್ಪಾ.. ಹ್ಹಾ.. ಹ್ಹಾ..
ಅಯ್ಯೋ ಅಪ್ಪಾ ನಾನಾ ಬೆಪ್ಪಾ.. ಅಪ್ಪಾ..
ಜಾಣರೂ ಯಾರೋ ದಡ್ಡರೂ ಯಾರೋ ಹೇಳುವರಾರಪ್ಪಾ..
ದಡ್ಡನ ಹಾಗೇ ಜಾಣನು ಕೂಡಾ ಸತ್ತರೇ ಮಣ್ಣಪ್ಪಾ... ಹ್ಹಾ.. ಹ್ಹಾ
ಜಾಣರೂ ಯಾರೋ ದಡ್ಡರೂ ಯಾರೋ ಹೇಳುವರಾರಪ್ಪಾ..
ದಡ್ಡನ ಹಾಗೇ ಜಾಣನು ಕೂಡಾ ಸತ್ತರೇ ಮಣ್ಣಪ್ಪಾ...
ಇಂಥಾ ಮಗನೂ ಯಾರಿಗೇ ಉಂಟೂ ನೀನೇ ಹೇಳಪ್ಪಾ.. ಹ್ಹಾ..
ಇಂಥಾ ಮಗನೂ ಯಾರಿಗೇ ಉಂಟೂ ನೀನೇ ಹೇಳಪ್ಪಾ..
ಬದುಕಿರುವಾಗ ಸುಖವನು ಪಡೆವಾ ದಾರಿ ನೋಡಪ್ಪಾ.. ನೋಡಪ್ಪಾ
ಅಯ್ಯೋ ಅಪ್ಪಾ ನಾನಾ ಬೆಪ್ಪಾ
ಅಲೆಲೇ ಅಯ್ಯೋ ಅಪ್ಪಾ ನಾನಾ ಬೆಪ್ಪಾ ಸುಮ್ಮಸುಮ್ಮನೇ ಬೆಪ್ಪತಕ್ಕಡಿ ಎನ್ನವೇ ಏಕಪ್ಪಾ .. ಅಪ್ಪಾ..
ಎಂಥ ಹೆಣ್ಣಿನ ಕೈಹಿಡಿದಿರುವೇ ನೀನೇ ನೋಡಪ್ಪಾ.. ಆ..
ಅಯ್ಯೋ ಅಪ್ಪಾ ನಾನಾ ಬೆಪ್ಪಾ.. ಆಹಾ... ಆಹಾ
--------------------------------------------------------------------------------------------------------------------------
ಬೆಕ್ಕಿನ ಕಣ್ಣು (೧೯೮೪) - ಶರಣಾಗಿ ಬಂದಿರುವೇ ಶಿವಶಂಕರಾ.
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಸುಲೋಚನಾ
ಶರಣಾಗಿ ಬಂದಿರುವೇ ಶಿವಶಂಕರಾ.. ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ.. ನೀನಲ್ಲದೇ ಇನ್ಯಾರೂ ಗತಿ ಎನಗೇ ಈಶ್ವರ
ಪೊರೆ ಎನ್ನ ಕೃಪೆ ಮಾಡಿ ಪರಮೇಶ್ವರಾ..
ಶರಣಾಗಿ ಬಂದಿರುವೇ ಶಿವಶಂಕರಾ.. ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ
ಕಡಲಾಗು ನಿಧಿಯಾಗಿ ನದಿಯಾಗಿ ಹರಿದಾಡಿ ಹಸಿರಾಗಿ ಹೂವಾಗಿ ಹಣ್ಣಾಗುವೇ ..
ರವಿಯಾಗಿ ಶಶಿಯಾಗಿ ತಂಗಾಳಿ ನೀನಾಗಿ ಉಸಿರಾಗಿ ಎಲ್ಲರನೂ ಕಾಪಾಡುವೇ ..
ನೀನಿಲ್ಲಾ ಬೆಳೆಯಿಲ್ಲಾ ನಿನ್ನಲ್ಲಿ ಜಗವೆಲ್ಲಾ..
ನೀನಿಲ್ಲಾ ಬೆಳೆಯಿಲ್ಲಾ ನಿನ್ನಲ್ಲಿ ಜಗವೆಲ್ಲಾ ಗತಿಯಿಲ್ಲಾ ನನಗಾರೂ ಗಂಗಾಧರಾ..
ಪೊರೇ ಎನ್ನ ಪ್ರಭುವೇ ವಿಶ್ವೇಶ್ವರಾ ..
ಶರಣಾಗಿ ಬಂದಿರುವೇ ಶಿವಶಂಕರಾ.. ಕೈಹಿಡಿದು ರಕ್ಷಿಸು ಕರುಣಾಕರ
ಕೈಹಿಡಿದು ರಕ್ಷಿಸು ಕರುಣಾಕರ
ಕಣ್ಣಪ್ಪ ಕರೆದಾಗ ಕಣ್ಣ ತೆರೆದು ಕೈಲಾಸ ಬಿಟ್ಟ ಓಡಿ ಬಂದವನ ನೀನಲ್ಲವೇ
ಕೊಡಗೂಸು ಕೂಗಿರಲೂ ಓ ಕಂದ ಬಾ ಎಂದೂ ಕೈ ನೀಡಿ ಕರೆದದ್ದೂ ನೆನಪಿಲ್ಲವೇ..
ಯಮ ಕಂಡು ಕೊಲೆವಾಗ ಮುಡಿ ಪುಟ್ಟ ಅಳುವಾಗ ಸಾವಿಂದ ಉಳಿಸಿದ್ದೂ ನೀನಲ್ಲವೇ..
ನಿನಗಿಂದೂ ಏನಾಯ್ತು.. ಮನಸೇಕೆ ಕಲ್ಲಾಯ್ತು... ನೀ ಬರದೇ ನಮಗಿನ್ನೂ ಉಳಿ ಇಲ್ಲವೇ.. ಉಳಿ ಇಲ್ಲವೇ..
ಶರಣಾಗಿ ಬಂದಿರುವೇ ಶಿವಶಂಕರಾ.. ಕೈಹಿಡಿದು ರಕ್ಷಿಸು ಕರುಣಾಕರ
-------------------------------------------------------------------------------------------------------------------------
No comments:
Post a Comment