ಬೆಳದಿಂಗಳ ಬಾಲೆ ಚಲನಚಿತ್ರದ ಹಾಡುಗಳು
- ನೆನಪುಗಳ ಅಂಗಳದಿ ನಿನ್ನ ನಗೆಯ
- ನೀ ಯಾರೋ ನಾ ಅರಿಯೆನು ಎಂದೆಂದೂ ನಾ ತುಡಿವೆನು
- ಬರಸೆಳೆದಾ ಒಲವೇ ಎಲ್ಲಿರುವೇ
- ಥೈಯ್ಯಾರೆ ಥೈಯ್ಯ ಗೋಪಾಲ ಕೇಳು ನಾನ್ಯಾರು ಹೇಳು
ಸಂಗೀತ : ಗುಣಸಿಂಗ್, ಸಾಹಿತ್ಯ : ಶ್ಯಾಂಸುಂದರ ಕುಲಕರ್ಣಿ ಗಾಯನ : ಚಂದ್ರಿಕಾ ಗುರುರಾಜ
ನೆನಪುಗಳ ಅಂಗಳದಿ ನಿನ್ನಾ ನಗೆಯ ತುಂಬುಕೋ ಬೆಳದಿಂಗಳು
ಸ್ಪಂದಿಸಿದೇ ಓ.. ಗೆಳೆಯಾ ನಿನ್ನಾ ಮನದ ಮಿಡಿತಕೆ ಎಂದೋ ನಿನಗರಿಯದೇ
ಈ ಬಾಳ ಹಾದಿಯಲ್ಲಿ ನನ್ನ ಗುರಿಯಾದೆ ನೀನು ನೀನಿರುವ ತಾಣದಲ್ಲಿ ಬರುವಾಸೆಯೋ
ದೂರದೊಂದು ಲೋಕದಿಂದ ನನಗಾಗಿ ಇಳಿದು ಬಂದು ನನ್ನೆದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ ಮನದಾಳದ ವೇದನೆಯ ಈ ಜೀವ ಭಾವವೆಲ್ಲ ನೀನಾದೆಯೋ

ಹೇಗೋ ಏನೋ ನೀನು ಕಂಡೆ ಕನಸುಗಳ ಕಣ್ಣಲಿ ತಂದೆ ಆಸೆಗಳು ಮನದಲ್ಲಿ ಎನ್ನಾ ಕಾಡಿವೆ
ಬಾಹುಗಳ ಬಂಧನದಲ್ಲಿ ಮುತ್ತುಗಳ ಸುರಿಮಳೆಯಲ್ಲಿ ನನ್ನನ್ನೆ ಮರೆಯುವ ಆಸೆ ನೀ ತೀರಿಸೋ
ಅಧರ ಅಧರ ತಾ ಬೆರೆತು ಹೋಗಲಿ ತನುವು ಮನವು ಸಮ್ಮಿಲನವಾಗಲಿ
ನೆನಪುಗಳ ಅಂಗಳದಿ ನಿನ್ನಾ ನಗೆಯ ತುಂಬುಕೋ ಬೆಳದಿಂಗಳು
ಸ್ಪಂದಿಸಿದೇ ಓ.. ಗೆಳೆಯಾ ನಿನ್ನಾ ಮನದ ಮಿಡಿತಕೆ ಎಂದೋ ನಿನಗರಿಯದೇ
ಸ್ಪಂದಿಸಿದೇ ಓ.. ಗೆಳೆಯಾ ನಿನ್ನಾ ಮನದ ಮಿಡಿತಕೆ ಎಂದೋ ನಿನಗರಿಯದೇ
ನಾಳೆ ಹೇಗೋ ನಾನು ಅರಿಯೆ ಯಾವ ಕ್ಷಣವೂ ಹೇಗೋ ಕಾಣೆ
ಹೀಗೇಕೆ ನಾನಾದೆ ಒಂದೂ ಅರಿಯೆನು
ಯಾವ ಜನ್ಮ ಬಂಧವಿದೋ ಯಾರ ಪುಣ್ಯ ಏನೋ ಕಾಣೆ ನೀ ಬಂದೆ ಬಾಳಿನಲ್ಲಿ
ನಿನ್ನಾ ನಾನು ಸೇರುವೆ ಸರಿದಾ ಸಮಯ ತಾ ಬಾರದೆಂದಿಗೂ
ಮಧುರ ಕ್ಷಣವಾ ನಾ ಮರೆಯನೆಂದಿಗೂ
ನೆನಪುಗಳ ಅಂಗಳದಿ ನಿನ್ನಾ ನಗೆಯ ತುಂಬುಕೋ ಬೆಳದಿಂಗಳು
ಸ್ಪಂದಿಸಿದೇ ಓ.. ಗೆಳೆಯಾ ನಿನ್ನಾ ಮನದ ಮಿಡಿತಕೆ ಎಂದೋ ನಿನಗರಿಯದೇ
ಈ ಬಾಳ ಹಾದಿಯಲ್ಲಿ ನನ್ನ ಗುರಿಯಾದೆ ನೀನು ನೀನಿರುವ ತಾಣದಲ್ಲಿ ಬರುವಾಸೆಯೋ
ದೂರದೊಂದು ಲೋಕದಿಂದ ನನಗಾಗಿ ಇಳಿದು ಬಂದು ನನ್ನೆದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ ಮನದಾಳದ ವೇದನೆಯ ಈ ಜೀವ ಭಾವವೆಲ್ಲ ನೀನಾದೆಯೋ
ಸ್ಪಂದಿಸಿದೇ ಓ.. ಗೆಳೆಯಾ ನಿನ್ನಾ ಮನದ ಮಿಡಿತಕೆ ಎಂದೋ ನಿನಗರಿಯದೇ
ಈ ಬಾಳ ಹಾದಿಯಲ್ಲಿ ನನ್ನ ಗುರಿಯಾದೆ ನೀನು ನೀನಿರುವ ತಾಣದಲ್ಲಿ ಬರುವಾಸೆಯೋ
ದೂರದೊಂದು ಲೋಕದಿಂದ ನನಗಾಗಿ ಇಳಿದು ಬಂದು ನನ್ನೆದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ ಮನದಾಳದ ವೇದನೆಯ ಈ ಜೀವ ಭಾವವೆಲ್ಲ ನೀನಾದೆಯೋ
--------------------------------------------------------------------------------------------------------------------------
ಬೆಳದಿಂಗಳ ಬಾಲೆ (೧೯೯೫) - ನೀ ಯಾರೋ ನಾ ಅರಿಯೆನು ಎಂದೆಂದೂ ನಾ ತುಡಿವೆನು
ಸಂಗೀತ : ಗುಣಸಿಂಗ್, ಸಾಹಿತ್ಯ : ಶ್ಯಾಂಸುಂದರ ಕುಲಕರ್ಣಿ ಗಾಯನ : ಚಂದ್ರಿಕಾ ಗುರುರಾಜ, ಎಸ್.ಪಿ.ಬಿ.
ಗಂಡು: ಓಹೋಹೊಹೋ... ಓಹೋಹೊಹೋ... ಹೇಹೇ .. ಹಾಹಾಹಾಹಾಹಾ ಓಹೋಹೊಹೋ ಓಹೋಹೋ
ಹೆಣ್ಣು : ಆಆಆ .. ಆಆಆ .. ಆಆಆ .. ಆಆಆ ..
ಗಂಡು : ನೀ ಯಾರೋ ನಾ ಅರಿಯೇನು ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೇನು
ಹೆಣ್ಣು : ಲಲಲಲಲಾ... ಲಲಲಲಾ... ಲಲಲ .. ಲಲಲಲಾ

ಗಂಡು : ಮುಂಜಾನೆ ಮಂಜೇನು ನೀನು ತೇಲಾಡೋ ಸಿರಿ ಹಂಸವೇನು
ಇಂಪಾದ ರಾಗ ತಂಪಾದ ಗಾಳಿ ನೀನಾಗೇ ನಾ ಬಂದೆನು ನೀನಾಗೇ ನಾ ಬಂದೆನು
ನೀ ಯಾರೋ ನಾ ಅರಿಯೇನು
ಹೆಣ್ಣು : ಲಾಲಾ.. ಲಾಲಾ..
ಗಂಡು : ಈ ಸುಮಗಳಲಿ ನೀನಿಹೆ ಏನು ಆ ಮುಗಿಲಿನಲಿ ನೀ ಅಡಗಿಹೆ ಏನು
ಮುತ್ತು ಹವಳ ನೀನೇ ಏನು ಭೂವಿಯೇ ಬಾನೋ ಕಾಡೋ ಕಡಲೋ ಸೊಬಗಿ ಎಲ್ಲಿರುವೇ ..
ನೀ ಯಾರೋ ನಾ ಅರಿಯೇನು
ಹೆಣ್ಣು : ಲಾಲಾ.. ಲಾಲಾ..
ಗಂಡು : ಹೊಂಬಿಸಿಲಿನಲಿ ನೀ ನಗುತಿರಲು ಇಂಚರಗಳಿ ನೀ ನುಡಿದಿರಲೂ
ಮಿನುಗೋ ಕಣ್ಣು ತಾರೆ ಏನು ಹೊಳೆಯೋ ಕೆನ್ನೆ ಚಂದ್ರ ಏನು
ಹರಿವಾ ನದಿಯೋ ಮಳೆಯಾ ತಿಳಿಯೋ ಗೆಳತೀ ಎಲ್ಲಿರುವೇ
ನೀ ಯಾರೋ ನಾ ಅರಿಯೇನು ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೇನು
ಹೆಣ್ಣು : ಲಲಲಲಲಾ... ಲಲಲಲಾ... ಲಲಲ .. ಲಲಲಲಾ
ಗಂಡು : ನೀ ಯಾರೋ ನಾ ಅರಿಯೇನು ಎಂದೆಂದೂ ನಾ ತುಡಿವೆನು
--------------------------------------------------------------------------------------------------------------------------
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೇನು
ಹೆಣ್ಣು : ಲಲಲಲಲಾ... ಲಲಲಲಾ... ಲಲಲ .. ಲಲಲಲಾ
ಗಂಡು : ನೀ ಯಾರೋ ನಾ ಅರಿಯೇನು ಎಂದೆಂದೂ ನಾ ತುಡಿವೆನು
--------------------------------------------------------------------------------------------------------------------------
ಬೆಳದಿಂಗಳ ಬಾಲೆ (೧೯೯೫) - ಬರಸೆಳೆದಾ ಒಲವೇ ಎಲ್ಲಿರುವೇ
ಸಂಗೀತ : ಗುಣಸಿಂಗ್, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ವಾಣಿಜಯರಾಂ,
ಗಂಡು : ಆಆಆ.. ಬರಸೆಳೆದಾ ಒಲವೇ ಎಲ್ಲಿರುವೇ ಬೆಳದಿಂಗಳ ಬಾಲೇ ಎಲ್ಲಿರುವೇ
ಮುಂಗಾರಲಿ ಬೆರೆತೆಯಾ ನೀನು ಕಡಲಾಳದಿ ಕುಳಿತೆಯಾ ನೀನು
ಗ್ರಹ ತಾರೆಯಾ ಉದರದಿ ಅಡಗಿಕೊಂಡು
ರವಿಚಂದ್ರರಾ ಕಾಂತಿಯಾ ಸೇರಿಕೊಂಡು
ಬರಸೆಳೆದಾ ಒಲವೇ ಎಲ್ಲಿರುವೇ ಬೆಳದಿಂಗಳ ಬಾಲೇ ಎಲ್ಲಿರುವೇ
ಗಂಡು : ಬಾನಂಚು ತಲುಪಿ ಮಿನುಗಾದೆ ಏನೂ ಕೋಲ್ಮಿಂಚು ಸೆಳೆದು ಲತೆಯಾದೆ ಏನು
ಸ್ವಾತಿಯ ಮುತ್ತಾಗಿ ನೀ ಹೊಳೆದೇ ಏನು ಸಂಗೀತ ಸ್ವರದಿ ನೀ ಉಲಿದೆ ಏನು
ಎಲ್ಲಿರುವೇ ಹೇಗಿರುವೇ ಕೇಳಿಸದೇ ಕಾಣಿಸದೇ
ಗ್ರಹ ತಾರೆಯಾ ಉದರದಿ ಅಡಗಿಕೊಂಡು
ರವಿಚಂದ್ರರಾ ಕಾಂತಿಯಾ ಸೇರಿಕೊಂಡು
ಬರಸೆಳೆದಾ ಒಲವೇ ಎಲ್ಲಿರುವೇ ಬೆಳದಿಂಗಳ ಬಾಲೇ ಎಲ್ಲಿರುವೇ
ಹೆಣ್ಣು : ಇರುವೆನು ನಾನು ಎಂದು ನಿನ್ನ ಮನದಲಿ ಬರುವೆ ನಾನು ನಿತ್ಯ ನಿನ್ನ ಕನಸಲಿ
ನಡುವೆ ನಾನು ನಿನ್ನ ಬೆನ್ನ ನೆರಳಿನಲಿ ಸಿಗುವೆ ನಾನು ನಿನ್ನ ನೋಟ ಸೆಳೆವಲಿ
ಓ.. ಗೆಳೆಯಾ ರಾಗ ತಾನದಲಿ ಆಸೆ ಭಾಷೆಯಲಿ ಜೀವ ಭಾವದಲಿ ರೂಪ ರಂಗಿನಲಿ
ನಿನ್ನೆ ನಾಳೆಯಲಿ ಕಾಲ ಗರ್ಭದಲಿ ನಾನೇ ತುಂಬಿರುವೆ ಒಲುಮೆ ಕಡಲಿನಲಿ
ದಿನ ದಿನ ಕ್ಷಣ ಕ್ಷಣ ಹೃದಯದ ಬಡಿತದ ತಂಪಿನ ನೆನಪಲಿ ಇರುವೆನು ಗೆಳೆಯನೇ .. ಆಆಆ
ಬರಸೆಳೆದಾ ಒಲವು ನಾನಿರುವೇ ಬೆಳದಿಂಗಳ ಬಾಲೇ ನಾನಿರುವೇ
ಗಂಡು : ನನ್ನೊಲವೇ ಎಲ್ಲಿರುವೇ ಆಆಆ... ಓ ಚೆಲುವೇ .. ಎಲ್ಲಿರುವೇ ..ಬೆಳದಿಂಗಳ ಬಾಲೇ ಎಲ್ಲಿರುವೇ
ಆಆಆ... ಆಆಆ ... ಆಆಆಆ
--------------------------------------------------------------------------------------------------------------------------
ಬೆಳದಿಂಗಳ ಬಾಲೆ (೧೯೯೫) - ಥೈಯ್ಯಾರೆ ಥೈಯ್ಯ ಗೋಪಾಲ ಕೇಳು ನಾನ್ಯಾರು ಹೇಳು
ಸಂಗೀತ : ಗುಣಸಿಂಗ್, ಸಾಹಿತ್ಯ : ಎಸ್.ಎಂ.ಪಾಟೀಲ ಗಾಯನ : ವಾಣಿಜಯರಾಂ, ಎಸ್. ಪಿ.ಬಿ.
ಕೋರಸ್ : ಧೈಯ್ಯಾರೇ ಧೈಯ್ಯಾ ಧೈಯ್ಯಾರೇ ಧೈಯ್ಯಾ ಧೈಯ್ಯಾರೇ ಧೈಯ್ಯಾ ಧೈಯ್ಯಾರೇ ಧೈಯ್ಯಾ
ಹೆಣ್ಣು : ಗೋಪಾಲ ಕೇಳು ನಾನ್ಯಾರು ಹೇಳು ಎದುರಲ್ಲಿ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನೂ ನೀಡೋ ಮನಸಾಗಿದೇ ..
ಗೋಪಾಲ ಕೇಳು ನಾನ್ಯಾರು ಹೇಳು ಎದುರಲ್ಲಿ ನಾನು ನಿಂತಾಗಿದೆ

ಗಂಡು : ಮಳೆ ಬಿಲ್ಲಿನಂಥ ಸೌಂದರ್ಯವೇ ಬೆಳದಿಂಗಳಂಥ ಲಾವಣ್ಯವೇ
ಓ.. ಬಾಲೇ ನಾನು ಮೆಚ್ಚೋ ಬೆಡಗು ನಿನಗುಂಟೆ ನಿನ್ನಲ್ಲೂ ನನ್ನಾ ಕೆನ್ನೆ ಬಯಸೋ ಮತ್ತುಂಟೆ
ಓ.. ಬಾಲೇ ನೀನು ಯಾರಾದರೇನೂ ಎದುರಲ್ಲಿ ಇಂದು ನಿಂತಾಗಿದೆ
ಮೆಲ್ಲಾಗೆ ಬಂದು ಗಲ್ಲಾಕೆ ಒಂದು ಮುತ್ತಾನು ನೀಡೋ ಮನಸಾಗಿದೆ

ಹೆಣ್ಣು : ಮುತ್ತಾ ಮಾಧುರ್ಯ ಗೊತ್ತು ಆಗೋದು ಕೆನ್ನೆ ಸವಿದಾಗಲೇ
ಗಂಡು : ನಿನ್ನಾ ಮುತ್ತಲ್ಲಿ ಮತ್ತು ಎಷ್ಟೊಂದು ತೋರು ಈಗ
ಹೆಣ್ಣು : ತಗಿನ ತಗಿನ ತಗಿನ ತಗಿನ.. ನಿನ್ನಾ ಜೊತೆಯಲ್ಲಿ ಆಡೋ ಮನಸಿಗ ಕಣ್ಣು ಮುಚ್ಚಾಲೆಯಾ
ಗಂಡು : ಬಾಲೆ ನಿನಗಿನ್ನೂ ಬಾಧೆ ಕೊಡದೇನೆ ಮೊಗವ ನೀ ತೋರೆಯಾ
ಹೇಹೇಹೇಹೇ .. ರಾಸಲೀಲೆ ಆಡೋ ವೇಳೆ ಕಾದು ಕಾದು ಸೋತು ಹೋದೆ
ಅಡಗಿ ಕುಳಿತ ಬೆಡಗಿ ಬೇಗ ಬಾ..
ಹೆಣ್ಣು : ಗೋಪಾಲ ಕೇಳು ನಾನ್ಯಾರು ಹೇಳು ಎದುರಲ್ಲಿ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನೂ ನೀಡೋ ಮನಸಾಗಿದೇ ..
ಗೋಪಾಲ ಕೇಳು ನಾನ್ಯಾರು ಹೇಳು ಎದುರಲ್ಲಿ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನೂ ನೀಡೋ ಮನಸಾಗಿದೇ ..
--------------------------------------------------------------------------------------------------------------------------
No comments:
Post a Comment