1293. ಬೇಟೆಗಾರ (೧೯೯೫)

ಬೇಟೆಗಾರ ಚಲನ ಚಿತ್ರದ ಹಾಡುಗಳು 
  1. ರಂಭಾ ಅತಿಲೋಕದ ಸ್ವರ್ಗ ಸುಂದರಿ ನಾ 
  2. ಕೊಂಡ ಮಾಮಡು ಗುರ್ರ್ ಮಾಮೂಡು 
  3. ಮಿಡಿದಿರಲು ಸವಿಗನಸುಗಳು ಇದು ಆನಂದ 
  4. ನೀಲಿ ಕೊಡೆಯ ಕೆಳಗೆ ನೋಡು 
  5. ಇದು ಸರ್ಪಯಾಗ ನಿಜ ಧರ್ಮ ಯುದ್ಧ 
ಬೇಟೆಗಾರ (೧೯೯೫) - ರಂಭಾ ಅತಿಲೋಕದ ಸ್ವರ್ಗ ಸುಂದರಿ ನಾ
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ಮಂಜುಳಾ

ಹೆಣ್ಣು : ರಂಭಾ.. ಅತಿಲೋಕ ಸ್ವರ್ಗ ಸುಂದರಿ ನಾ ಹೇ.. ಸಾಂಬಾ .. ಇಂದ್ರನ ಗೆದ್ದು ಬಂದೆನು
          ಪ್ರಾರಂಭ ಕಿಸ್ಮತ ಕಾ ಖೇಲ್ ಆರಂಭ ದೋ ದಿನ್ ಕಾ ಮೇಲ್
          ನಾ ನಿನ್ನ ಕರೆದೆನು ಬಾರೋ ಅಲಬೇಲ
ಗಂಡು : ಜಾಣ ಜಗದೇಕವೀರನು ನಾ ಜಾಣ ಏ .. ಲೈಲಾ ಮಜುನುನಾ ಗೆದ್ದ ದೀವಾನಾ

ಗಂಡು : ಝಗ ಝಗಿಸುವ ಕಾಂತಿಯ ಹರೆಯದ ಒಡಲಿನ ಹವಳದ ತುಟಿಯಲಿ
            ಈ ಹೊತ್ತು ನೀನಿತ್ತ ಈ ಮುತ್ತು ಇನ್ನು ಬೇಕೆಂದಿದೆ
ಹೆಣ್ಣು : ಹಾ... ಹಾ... ಹಾ...
ಗಂಡು : ಚೆಲುವೆ ಘಮ ಘಮ ಘಮಿಸುವ ನಿನ್ನಯ ಕೋಮಲ ಒಡಲಿನ ಮೋಹಕ
            ಸುಖದಲಿ ಈ ಹೊತ್ತು ಇದ್ದ ಕಣ್ಣೆಲ್ಲ ನಿನ್ನ ಬೇಟೆನೇ
ಹೆಣ್ಣು : ಹಾ... ಹಾ... ಹಾ... ಆ ಆಸೆ ಹೂವಾಗಿದೇ ಈ ವೇಳೆ ಜಾರಿದೇ
ಗಂಡು : ರಂಭೇ ನೀ ಚಿನ್ನದ ಬೋಂಬೆ ಬಾ
            ಜಾಣ ಜಗದೇಕವೀರನು ನಾ ಜಾಣ ಏ .. ಲೈಲಾ ಮಜುನುನಾ ಗೆದ್ದ ದೀವಾನಾ

ಗಂಡು : ಹ್ಹಾ... ಗುಡುಗು ಗುಡು ಗುಡು ಶಬ್ದವ ಮಾಡಿದೆ ಸಿಡಿಲು ಧಡ ಧಡ ಬಡಿಯುವ
            ತೆರದಲಿ ವೇಗದೇ ನಾ ಬಂದು ಜಾಲದ ಇಂದು ಬಿಸುವೆನು
ಹೆಣ್ಣು : ಹೇ ಹೇ ಹೇ ಹೇ ಹೇ..
ಗಂಡು : ಎದೆಯು ಧಗ ಧಗ ಧಗಿಸುವ ಜ್ವಾಲೆಯ ಆಗ್ನಿಯ ಪರ್ವತ ಆಗಿದೆ ಈ ದಿನ
            ನನ್ನಿಂದ ನೀ ತಪ್ಪಿ ಓಡಲು ಆಗದು ಎಂದೆಂದೂ
ಹೆಣ್ಣು : ಹಾ... ಹಾ... ಹಾ... ಮಳೆಯಾಗಿ ಆರಿಸುವೇ ಹೊಸಲೋಕ ತೋರಿಸುವೆ
ಗಂಡು : ರಂಭೇ ನೀ ಚಿನ್ನದ ಬೋಂಬೆ ಬಾ
ಹೆಣ್ಣು : ರಂಭಾ.. ಅತಿಲೋಕ ಸ್ವರ್ಗ ಸುಂದರಿ ನಾ ಹೇ.. ಸಾಂಬಾ .. ಇಂದ್ರನ ಗೆದ್ದು ಬಂದೆನು ನಾ
ಗಂಡು : ಓ  .. ಲೈಲಾ ಆಗೋಣ ಜೋಡಿ ಚಮೇಲ ಮಾಡೋಣ ಮೋಡಿ
            ನಾ ನಿನ್ನ ಬೇಟೆಗೆ ಬಂದ ಮಸ್ತಾನ
            ಜಾಣ ಜಗದೇಕವೀರನು ನಾ ಜಾಣ ಏ .. ಲೈಲಾ ಮಜುನುನಾ ಗೆದ್ದ ದೀವಾನಾ
--------------------------------------------------------------------------------------------

ಬೇಟೆಗಾರ (೧೯೯೫) - ಕೊಂಡ ಮಾಮಡು ಗುರ್ರ್ ಮಾಮೂಡು
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ಮಂಜುಳಾ

ಗಂಡು : ಕೊಂಡ ಮಾಮೂಡು ಗುರ್ರ್ ಮಾಮೂಡು ಕಾಶೀಪುರದ ವಿಶ್ವನಾಥನು
            ಧರ್ಮಸ್ಥಳದ ಮಂಜುನಾಥಡು ಬಿಳಿಗಿರಿ ಬನದ ರಂಗನಾಥಡೂ
            ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ .. ಮಗುವಾಗ ಬೇಕಂತೇ ಹೇಗಂತ ಹೇಳವ್ವಾ
            ಬಾ ಬಾರೇ .. ಓ ನನ್ನ ಪ್ಯಾರಿ ಮಾಡೋಣ ಲವ್ ಈಗ ಸೇರಿ
            ತಾಯಾಗಬೇಕೇನೇ ನಾರಿ ಈ ಗಂಡನ್ ಪ್ರೀತಿನೇ ದಾರಿ
ಹೆಣ್ಣು : ನಿಲ್ಲು ದೂರ ಮಡಿ ಉಟ್ಟು ಬಾರಾ ಮೊದಲಿಗ ಪೂಜೆ ಆಮೇಲೆ ಸೇರಾ
ಗಂಡು : ಅಷ್ಟು ಪೂಜೆಯ ನಿಂಗೆ ಮಾಡುವೆ ಇಷ್ಟ ಪಟ್ಟು ನೀ ಮತ್ತೆ ಕೇಳುವೆ
            ಸ್ವೀಟು ಮುತ್ತನು ನಾನು ನೀಡುವೆ ಇನ್ನು ಏಕೆ ನೀ ದೂರ ನಿಲ್ಲುವೆ
ಹೆಣ್ಣು : ಸವದತ್ತಿ ಎಲ್ಲವ್ವ ಈ ಮೊರೆಯ ಕೇಳವ್ವ .. ಮಗುವಾಗ ಬೇಕವ್ವ ನೀ ದಾರಿ ಹೇಳವ್ವಾ
           ಕಾಪಾಡು ನೀ ಪ್ರೀತಿ ತೋರಿ ನನ್ನಲ್ಲಿ ಕರುಣೆಯ ಬೀರಿ

ಗಂಡು : ಬಾನು ಬಾಗಿದೆ ಭುವಿಗೆ ತಾನೆಂದು ತಾನು ನೀಡಲು
ಹೆಣ್ಣು : ಭೂಮಿ ನಾಚಿ ಕೆಂಪಾಗಿ ರಂಗು ಚೆಲ್ಲಿದೆ ಇಲ್ಲಿ
ಗಂಡು : ಹೋ .. ತುಂಬಿ ಸೊಕ್ಕಿದೆ ಹೂವಿಂದ ಜೇನನ್ನೂ ಹೀರುತ್ತ ಮತ್ತಲ್ಲಿ
ಹೆಣ್ಣು : ಬಳ್ಳಿ ಮರದ ಅಪ್ಪಿ ಬಳಸಿ ಪ್ರೀತಿ ತೋರಿದೆ ಅಲ್ಲಿ
ಗಂಡು : ಬಾರೇ ಪ್ರೀತಿ ಮೈ ಬಳಸು ಹೀಗೆ ನೀಗು ನನ್ನ ಬೇಗೆ ಇಂದು
            ಕೊಂಡ ಮಾಮೂಡು ಗುರ್ರ್ ಮಾಮೂಡು ಕಾಶೀಪುರದ ವಿಶ್ವನಾಥನು
            ಧರ್ಮಸ್ಥಳದ ಮಂಜುನಾಥಡು ಬಿಳಿಗಿರಿ ಬನದ ರಂಗನಾಥಡೂ
            ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ .. ಮಗುವಾಗ ಬೇಕಂತೇ ಹೇಗಂತ ಹೇಳವ್ವಾ
            ಬಾ ಬಾರೇ .. ಓ ನನ್ನ ಪ್ಯಾರಿ ಮಾಡೋಣ ಲವ್ ಈಗ ಸೇರಿ
            ತಾಯಾಗಬೇಕೇನೇ ನಾರಿ ಈ ಗಂಡನ್ ಪ್ರೀತಿನೇ ದಾರಿ
ಹೆಣ್ಣು : ನಿಲ್ಲು ದೂರ ಮಡಿ ಉಟ್ಟು ಬಾರಾ ಮೊದಲಿಗ ಪೂಜೆ ಆಮೇಲೆ ಸೇರಾ

ಹೆಣ್ಣು : ನವಿಲು ಕುಣಿದಿದೆ ಗರಿಯ ಕೆದರುತ ಪ್ರೇಯಸಿ ಪ್ರೇಮಕೇ 
ಗಂಡು : ಮಾಮರದಲಿ ಕೋಗಿಲೆ ಹಾಡು ವಸಂತ ಬಂದ ವೇಳೆ 
ಹೆಣ್ಣು : ಜಿಂಕೆ ಓಡಿದೆ ಮಿಂಚಂತೇ ಇನಿಯನ ಸಂಗವ ಸೇರಲು 
ಗಂಡು : ಕಡಲ ಸೇರೆ ಓಡಲು ನದಿಯು ಒಲವು ಅಲೆ ಅಲೆಯಲ್ಲಿ 
ಹೆಣ್ಣು : ಈ ತೋಳಲ್ಲಿ ಸ್ವರ್ಗ ನಾ ಕಂಡೇನು ಒಂದಾಗಿ ಸೇರಿಹೋದೆ ನಾನು 
ಗಂಡು : ಕೊಂಡ ಮಾಮೂಡು ಗುರ್ರ್ ಮಾಮೂಡು ಕಾಶೀಪುರದ ವಿಶ್ವನಾಥನು
            ಧರ್ಮಸ್ಥಳದ ಮಂಜುನಾಥಡು ಬಿಳಿಗಿರಿ ಬನದ ರಂಗನಾಥಡೂ
            ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ .. ಮಗುವಾಗ ಬೇಕಂತೇ ಹೇಗಂತ ಹೇಳವ್ವಾ
            ಬಾ ಬಾರೇ .. ಓ ನನ್ನ ಪ್ಯಾರಿ ಮಾಡೋಣ ಲವ್ ಈಗ ಸೇರಿ
            ತಾಯಾಗಬೇಕೇನೇ ನಾರಿ ಈ ಗಂಡನ್ ಪ್ರೀತಿನೇ ದಾರಿ
ಹೆಣ್ಣು : ನಿಲ್ಲು ದೂರ ಮಡಿ ಉಟ್ಟು ಬಾರಾ ಮೊದಲಿಗ ಪೂಜೆ ಆಮೇಲೆ ಸೇರಾ
ಗಂಡು : ಅಷ್ಟು ಪೂಜೆಯ ನಿಂಗೆ ಮಾಡುವೆ ಇಷ್ಟ ಪಟ್ಟು ನೀ ಮತ್ತೆ ಕೇಳುವೆ
            ಸ್ವೀಟು ಮುತ್ತನು ನಾನು ನೀಡುವೆ ಇನ್ನು ಏಕೆ ನೀ ದೂರ ನಿಲ್ಲುವೆ
ಹೆಣ್ಣು : ಸವದತ್ತಿ ಎಲ್ಲವ್ವ ಈ ಮೊರೆಯ ಕೇಳವ್ವ .. ಮಗುವಾಗ ಬೇಕವ್ವ ನೀ ದಾರಿ ಹೇಳವ್ವಾ
           ಕಾಪಾಡು ನೀ ಪ್ರೀತಿ ತೋರಿ ನನ್ನಲ್ಲಿ ಕರುಣೆಯ ಬೀರಿ
---------------------------------------------------------------------------------------------

ಬೇಟೆಗಾರ (೧೯೯೫) - ಮಿಡಿದಿರಲು ಸವಿಗನಸುಗಳು ಇದು ಆನಂದ
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ಮಿಣಮಿನಿ

ಹೆಣ್ಣು : ಮಿಡಿದಿರಲೂ ಸವಿಗನಸುಗಳು ಇದು ಆನಂದ ಸುಮಧುರ ಗಾನ ಅಮೃತಪಾನ
           ಮಿಡಿದಿರಲೂ ಸವಿಗನಸುಗಳು ಇದು ಆನಂದ ಸುಮಧುರ ಗಾನ ಅಮೃತಪಾನ

ಗಂಡು : ಈ ಪ್ರೇಮ .. ಪ್ರೇಮ.. ಓ.. ಪ್ರೇಮ .. ಪ್ರೇಮ ಪ್ರೇಮ.. ಓ.. ಪ್ರೇಮ .. ಪ್ರೇಮ
ಹೆಣ್ಣು : ಒಲವಿನಾ ಕವಿತೆಯಾ ಬರೆದೆ ಹೃದಯದೇ ನೀನೇ ಮರೆಯದ ಅನುಭವ
          ಸುಖದ ಸುಂದರ ನೆನಪುಗಳು
ಗಂಡು : ಚೆಲುವಿನಾ ಪ್ರತಿಮೆಯು ಜೀವ ಪಡೆದಿದೆ ಇಂದು
            ಪ್ರತಿಕ್ಷಣ ನಯನದೆ ಹರೆಯ ತುಂಬಿದ ಬಯಕೆಗಳು
ಹೆಣ್ಣು : ಪ್ರೇಮ ಪ್ರೇಮ ಆಮರ ಗಂಗೆಯ ಸ್ನಾನ
           ಮಿಡಿದಿರಲೂ ಸವಿಗನಸುಗಳು ಇದು ಆನಂದ ಸುಮಧುರ ಗಾನ ಅಮೃತಪಾನ

ಹೆಣ್ಣು : ಹೂವಿನಾ ರಥದಲಿ ಪಯಣ ಹೊರಟಿಹ ವೇಳೆ
          ಇನಿಯನಾ ಸನಿಹದೆ ಒಡಲು ಆಸೆಯ ಚಿಲುಮೆಗಳು
          ಗಗನ ಹರಸಿದೆ ಹೂವ ಮಳೆಯನು ಚೆಲ್ಲಿ ಪ್ರಣಯದ ಹಾಡಿಗೆ ನಗೆಯ ಸೌರಭ ತುಂಬಿರಲಿ
ಗಂಡು : ಪ್ರೇಮ...  ಪ್ರೇಮ..  ಮಧುರ ವೀಣೆಯ ತಾನ
ಹೆಣ್ಣು : ಮಿಡಿದಿರಲೂ ಸವಿಗನಸುಗಳು ಇದು ಆನಂದ ಸುಮಧುರ ಗಾನ ಅಮೃತಪಾನ
---------------------------------------------------------------------------------------------

ಬೇಟೆಗಾರ (೧೯೯೫) - ನೀಲಿ ಕೊಡೆಯ ಕೆಳಗೆ ನೋಡು
ಸಂಗೀತ : ಸಾಧುಕೋಕಿಲ, ಸಾಹಿತ್ಯ : ರಮೇಶರಾವ, ಗಾಯನ : ರಾಜೇಶ, ಉಷಾಗಣೇಶ

ಗಂಡು : ನೀಲಿ ಕೊಡೆಯ ಕೆಳಗೆ ನೋಡು ಕಾಡು ಮೇಡು ಈ ನಾಡು ಸೃಷ್ಟಿ ಬೀಡು
            ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೇ ನೀ ನೋಡು ಬ್ಯುಟಿ ನೋಡು
            ನೇಚರ್ಸ್ ಗಾರ್ಡನ್ ಸುತ್ತಲು ಮೌಂಟನ್ ಗ್ರೀನಿಷ್ ಫೌಂಟೇನ್ ಕಣ್ಣಿಗೆ ಶಾಂಪೇನ್
ಕೋರಸ್ : ಸವಿ ಸವಿ ಮೇಲೋಡಿ  ಕಿಲ ಕಿಲ ಕಾಮೆಡಿ ಭೂಮಿ ಒಡಲಲಿ
                ಪೃಥ್ವಿಯ ಮ್ಯೂಜಿಕ್  ಸೃಷ್ಟಿಯ ಮ್ಯಾಜಿಕ್ ವನಸಿರಿ ಮಡಿಲಲಿ
ಗಂಡು : ನೀಲಿ ಕೊಡೆಯ ಕೆಳಗೆ ನೋಡು ಕಾಡು ಮೇಡು ಈ ನಾಡು ಸೃಷ್ಟಿ ಬೀಡು
            ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೇ ನೀ ನೋಡು ಬ್ಯುಟಿ ನೋಡು
            ನೇಚರ್ಸ್ ಗಾರ್ಡನ್ ಸುತ್ತಲು ಮೌಂಟನ್ ಗ್ರೀನಿಷ್ ಫೌಂಟೇನ್ ಕಣ್ಣಿಗೆ ಶಾಂಪೇನ್

ಗಂಡು: ಗಗನ ಮುಟ್ಟೋ ಮಲ್ಟಿ ಸ್ಟಾರ್ ಕಟ್ಟಡಗಳ ಕಟ್ಟಿ ಮೆರೆಯೋ ಜನಗಳು 
           ನಲ್ಲಿ ನೀರು ಗಲ್ಲಿ ಧೂಳು ತಿಂದು ತೇಗೋ ಬೀಗೋ ಪೇಟೆ ಪ್ರಜೆಗಳು 
ಕೋರಸ್ : ಚುಂಬ ಚುಂಬಲ್ಲೇ ಚುಂಬಂತವಳೇ ನೋಡು ರಂಭಾಲೇ ರಂ .. 
ಗಂಡು : ಹರಿಯೋ ಝರಿಯ ತೊರೆಯ ಹಸಿಯ ಸ್ವರಗಳಲಿ ಸ್ನೇಹ ಪ್ರೀತಿ ನುಡಿಗಳು 
            ಮಾತು ಬರದ ಮೋಸ ಇರದ ಪಕ್ಷಿ ಪ್ರಾಣಿಗಂಟು ಒಳ್ಳೆ ಗುಣಗಳು 
ಹೆಣ್ಣು : ಶಾಂತಿ ವನ ಇದು ಬೃಂದಾವನ ಈ ಬಂಧನ ಎಂದೆಂದೂ ನೂತನ 
ಗಂಡು : ಹ್ಹಾ... ಸ್ವಚ್ಛ ಗಾಳಿ ಅಚ್ಚ ಪ್ರೇಮ ಹಚ್ಚ ಹಸಿರ ರಾಶಿಯಲ್ಲಿ 
            ನೀಲಿ ಕೊಡೆಯ ಕೆಳಗೆ ನೋಡು ಕಾಡು ಮೇಡು ಈ ನಾಡು ಸೃಷ್ಟಿ ಬೀಡು
            ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೇ ನೀ ನೋಡು ಬ್ಯುಟಿ ನೋಡು
            ನೇಚರ್ಸ್ ಗಾರ್ಡನ್ ಸುತ್ತಲು ಮೌಂಟನ್ ಗ್ರೀನಿಷ್ ಫೌಂಟೇನ್ ಕಣ್ಣಿಗೆ ಶಾಂಪೇನ್
    
ಗಂಡು : ನನ್ನ ತಾಯಿ ಮಡಿಲ ನೋಡು ಚೈತ್ರ ಗಾನ ನಿತ್ಯ ಹಾಡು ಕೋಗಿಲೇ ..
            ಮೇಲು ಕೀಳು ಬೇಧ ಮರೆತು ಬೆಳಕು ಚೆಲ್ಲಿ ಸೂರ್ಯ ನಿಂತ ಬಾನಲಿ
ಕೋರಸ್ : ಅಮ್ಮಾ... ಅಮ್ಮಾಲೆ..  ಹಮ್ಮಾ.. ಗುಮ್ಮಾ .. ಗುಮ್ಮಾಲೇ .. ಗುಂ ..
ಗಂಡು : ಶಾಂತಿ ಬಯಸೋ ವನ್ಯ ಜೀವಿ ಮುಗ್ಧ ಮನದ ಮಗುವು ನಾನೇ ರಕ್ಷಿಸಿ
            ನೆರಳು ನೀಡೋ ಮರವ ಕಡಿಯೇ ತಾಯ ಕೊಂದ ಪಾಪ ತಾನೇ ಪೋಷಿಸಿ
ಹೆಣ್ಣು : ಈ ಕಾನನ ಕರುನಾಡ ಭೂಷಣ ಶ್ರೀಗಂಧದ ಸುಮಧುರ ಲೇಪನ
ಗಂಡು : ಈ ಇಳೆಯ ಕಳೆಯ ಮಳೆಯ ಬೆಳೆಯ ಉಳಿಸಿ ಬೆಳೆಸಿ ಗೆಳೆಯರೇ
            ನೀಲಿ ಕೊಡೆಯ ಕೆಳಗೆ ನೋಡು ಕಾಡು ಮೇಡು ಈ ನಾಡು ಸೃಷ್ಟಿ ಬೀಡು
            ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೇ ನೀ ನೋಡು ಬ್ಯುಟಿ ನೋಡು
            ನೇಚರ್ಸ್ ಗಾರ್ಡನ್ ಸುತ್ತಲು ಮೌಂಟನ್ ಗ್ರೀನಿಷ್ ಫೌಂಟೇನ್ ಕಣ್ಣಿಗೆ ಶಾಂಪೇನ್
--------------------------------------------------------------------------------------------

ಬೇಟೆಗಾರ (೧೯೯೫) - ಇದು ಸರ್ಪಯಾಗ ನಿಜ ಧರ್ಮ ಯುದ್ಧ
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು,

ಹೇ ಹೇ ಹೇ ಹೇ ಹೇ ಹೇ ಹೇ
ಇದು ಸರ್ಪಯಾಗ ನಿಜ ಧರ್ಮ ಯುದ್ಧ ಇದು ದುಷ್ಟ ಶಕ್ತಿ ಮೇಧ ಒಹೋ ಫಟ್
ಈ ಬೇಟೆಗಾರ ನ್ಯಾಯ ತೀರ್ಪುಗಾರ ನಿಮ್ಮ ಕೊಲ್ಲ ಬಂದ ಯೋಧ ಒಹೋ.. ಫಟ್ ಹೇ ಹೇ ಹೇ

ನೀ ನ್ಯಾಯವನ್ನು ಸ್ವಾರ್ಥಕ್ಕಾಗಿ ಮಾರಿದೇ ನೀನೇ ಕೊಲೆಗೈದು ಕ್ರೋಧಾಗ್ನಿ ಉರಿಸಿದೆ
ಆ ನೇಣು ಕುಣಿಗೆ ನಿಮ್ಮ ಕೊರಳಾ ಬಯಸಿದೆ ದ್ರೋಹಕ್ಕೆ ಮೋಸಕ್ಕೆ ಕೊನೆಗಾಲ ಬಂದಿದೆ
ನರಿಗಳನು ಕೊಲ್ಲುವೆನು ತೋಳಗಳ ಸೀಳುವೆನು
ನರಸಿಂಹನಾಗುವೆನು ಕರುಳುಗಳ ಬಗೆಯುವೆನು ಇದುವೇ ನಿರ್ಧಾರ..  ಹೇ ಹೇ ಹೇ ಹೇ ಫಟ್
ಇದು ಸರ್ಪಯಾಗ ನಿಜ ಧರ್ಮ ಯುದ್ಧ ಇದು ದುಷ್ಟ ಶಕ್ತಿ ಮೇಧ ಒಹೋ ಫಟ್

ಈ ರಕ್ತದಿಂದ ನನ್ನೆದೆ ಬೆಂಕಿ ಆರಿಸುವೆ ನನ್ನೊಳ ಆತ್ಮಕ್ಕೆ ನಾ ಶಾಂತಿ ಕೊಡಿಸುವೆ
ಆ ದೇವ ಬಂದು ತಡೆದರು ನಾ ನಿಲ್ಲಿಸದೇ ಸಂಗಾತಿ ಸಾವಿಗೆ ಸೇಡನ್ನು ತೀರಿಸುವೆ
ನರಬೇಟೆ ಆಡುವೆನು ರಣಕಹಳೆ ಉದುವೆನು ಕುರುಡಾದ ಕಾನೂನ ಕಣ್ಣನ್ನು ತೇರೆಸುವೆನು..
ಹೇ ಹೇ ಹೇ ಫಟ್.... ಹೇ ಹೇ ಹೇ ಫಟ್   
ಹೇ ಹೇ ಹೇ ಫಟ್.... ಹೇ ಹೇ ಹೇ ಫಟ್   
---------------------------------------------------------------------------------------------

No comments:

Post a Comment