1239 - ಭಲೇ ರಾಣಿ (೧೯೭೨)

ಭಲೇ ರಾಣಿ ಚಲನಚಿತ್ರದ ಹಾಡುಗಳು 
  1. ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..
  2. ದೂರವೋ ಈ ಪಯಣ 
  3. ಬಾರಮ್ಮಾ ಕಂದಮ್ಮಾ 
  4. ಓ.. ನಗು ನಾನು ನಗುತಾ 
  5. ಏನೋ ನಿನ್ನಯ ಲೀಲೆ 
  6. ನೀಡಿ ತಾಯೀ .. 
  7. ಕಂದ ಚಿನ್ನ ಮಲಗಮ್ಮ 
ಭಲೇ ರಾಣಿ (೧೯೭೨) - ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ... 
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಲ್.ಆರ್.ಈಶ್ವರಿ

ಹೆಣ್ಣು : ಹ್ಹಹ್ಹಾ... .. ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...
          ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...
          ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...

ಹೆಣ್ಣು : ಮೀರಿದ ಯೌವ್ವನ ಈ ಕಾಲ ಕೂಡಿದ ಕಣ್ಣಿನ ಈ ಜಾಲ
           ಮೀರಿದ ಯೌವ್ವನ ಈ ಕಾಲ ಕೂಡಿದ ಕಣ್ಣಿನ ಈ ಜಾಲ
           ಬಿಂಕ ಬೇಕಿಲ್ಲಾ... ಸುಂಕ ಏನಿಲ್ಲಾ..
           ಬಿಂಕ ಬೇಕಿಲ್ಲಾ... ಸುಂಕ ಏನಿಲ್ಲಾ.. ಜೇಂಟಲ್ ಎಂದ ಎದೆಯನ್ನೇನೋ ಜಾಲಿಯೂ ಮಜಾ
           ಅಹ್ಹಹ್ಹಹ್ಹಹ್ಹಹ್ಹ ... ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೇ ...
           ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...

ಕೋರಸ್ :  ಓ ಚಿರಿಡಿಡಿಡಿಡಿಡಿ ಓಯ್ ಉಡಲೇ....   ಉಡಲೇ  ಉಡಲೇ  ಉಡಲೇ  ಉಡಲೇ
                ಉಡಲೇ  ಉಡಲೇ  ಉಡಲೇ  ಉಡಲೇ  ಉಡಲೇ
ಹೆಣ್ಣು : ಸಂತಸ ತಂದಿದೇ ವೈಭೋಗ ನನ್ನಲೀ ಮೂಡಿದೇ ಅನುರಾಗ
          ಸಂತಸ ತಂದಿದೇ ವೈಭೋಗ ನನ್ನಲೀ ಮೂಡಿದೇ ಅನುರಾಗ
          ನಾ ನಿನ್ನ ವಶ.. ನೀನೇ ಬಾದೂಷಾ..
          ನಾ ನಿನ್ನ ವಶ.. ನೀನೇ ಬಾದೂಷಾ.. ನಾನೂ ನೀನೂ ಒಂದೇ ಇನ್ನೂ ..
          ಈಚ್ ಮೀ ಅಲೋನ್ ಲವ್ ಮೀ ಹೆವನ್ ( ಹಹ್ಹಹ್ಹಹ್ಹ.. )
          ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...
          ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...
          ದೊರೆಯದ ಸಿಹಿ ವೇಳೆ ಹರೆಯದ ಆ ನಲ್ಲೇ ..  ಈ ಮೋಡಿಯ ಆಗಲೀ ...
-------------------------------------------------------------------------------------------------------------------

ಭಲೇ ರಾಣಿ (೧೯೭೨) - ದೂರವೋ ಈ ಪಯಣ
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ.

ಗಂಡು : ದೂರವೋ ಈ ಪಯಣ ದಾರಿ ಗುರಿಯ ಕಾಣೇ ನಾ....
            ದೂರವೋ ಈ ಪಯಣ ದಾರಿ ಗುರಿಯ ಕಾಣೇ ನಾ.... ಈ ಜೂಜು ಸೋಜಿಗ ಜೀವನ..
            ದೂರವೋ ಈ ಪಯಣ ದಾರಿ ಗುರಿಯ ಕಾಣೇ ನಾ.... ಈ ಜೂಜು ಸೋಜಿಗ ಜೀವನ..
            ದೂರವೋ ಈ ಪಯಣ 

ಮಗು : ತಾತ ಭಯವಾಗುತ್ತೇ ..  (ಹೆದರ್ಕೋಬೇಡವ್ವಾ..)
ಗಂಡು : ಕಾಡಿರಲೀ ನಾಡಿರಲೀ ನೀಡುವೇ ನಿನ್ನ ನೇರಳೂ .. 
            ಕಾಡಿರಲೀ ನಾಡಿರಲೀ ನೀಡುವೇ ನಿನ್ನ ನೇರಳೂ .. 
            ಯಾವುದೋ ಮಾಯೆಯ... 
            ಯಾವುದೋ ಮಾಯೆಯ ಬಂಧನವೇನೇ.. ಹಗಲಿರುಳೂ ...  
            ಬಂಧನವೇನೇ.. ಹಗಲಿರುಳೂ ...  
            ದೂರವೋ ಈ ಪಯಣ ದಾರಿ ಗುರಿಯ ಕಾಣೇ ನಾ.... ಈ ಜೂಜು ಸೋಜಿಗ ಜೀವನ..
            ದೂರವೋ ಈ ಪಯಣ 

ಗಂಡು : ನೀ ಬಂದೇ ಹನಿಯೇ ಆಗೀ .. ಹೋಗುವೇ ನೀನೂ ಹೊರ ತಾನಾಗಿ
           ನೀ ಬಂದೇ ಹನಿಯೇ ಆಗೀ .. ಹೋಗುವೇ ನೀನೂ ಹೊರ ತಾನಾಗಿ
           ಉಸಿರಿನ .. ಅಹ್ಹಹ್ಹ.. ಆಟವ ... 
           ಉಸಿರಿನ ಆಟವ ಕರೆಯುವೇ ನೀನೂ ಈ ಜೀವನ...  
           ಕರೆಯುವೇ ನೀನೂ ಈ ಜೀವನ...  
            ದೂರವೋ ಈ ಪಯಣ ದಾರಿ ಗುರಿಯ ಕಾಣೇ ನಾ.... ಈ ಜೂಜು ಸೋಜಿಗ ಜೀವನ..
            ದೂರವೋ ಈ ಪಯಣ..  ದಾರಿ ಗುರಿಯ ಕಾಣೇ ನಾ.
-------------------------------------------------------------------------------------------------------------------

ಭಲೇ ರಾಣಿ (೧೯೭೨) - ಬಾರಮ್ಮಾ ಕಂದಮ್ಮಾ
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. ಎಸ್.ಜಾನಕೀ

ಹೆಣ್ಣು : ಆಆಆ..  ಆಹಾಹಾ .. ಆಆಆ..
         ಬಾರಮ್ಮಾ.. ಕಂದಮ್ಮಾ .. ಕರುಳಾ ಕರೆಯಾ ಕೇಳಮ್ಮಾ..
         ಕನಸೆಲ್ಲಾ ನಿನ್ನಲ್ಲೀ.. ಕಂಡೇ ನಾನೂ .. ತಿಳಿಯಮ್ಮಾ..
         ಬಾರಮ್ಮಾ.. ಕಂದಮ್ಮಾ .. ಕರುಳಾ ಕರೆಯಾ ಕೇಳಮ್ಮಾ..

ಗಂಡು : ಬಂಧನದಲ್ಲಿ ನೊಂದೆನು ನಾನೂ .. 
            ಬಂಧನದಲ್ಲಿ ನೊಂದೆನು ನಾನೂ ತಂದೆಯ ಜನ್ಮ ಏತಕೀ ಇನ್ನೂ..         
            ನೀ ನಗುವಾಗ... ಆಆಆ ...  ನೀ ನಗುವಾಗ ಮರೆವೇ ನೋವಾ ಕಿರುನಗೆ ಬೀರಿ ಬಾರಮ್ಮಾ...
            ಕಿರುನಗೆ ಬೀರಿ ನೀ ಬಾರಮ್ಮಾ...
            ಬಾರಮ್ಮಾ.. ಕಂದಮ್ಮಾ .. ಕರುಳಾ ಕರೆಯಾ ಕೇಳಮ್ಮಾ..

ಹೆಣ್ಣು : ಆಸೆಯ ಬಳ್ಳಿ ಚಿಗುರಿರುವಾಗ ಏನೋ ಬಂತೂ ದೈವದ ಯೋಗ
          ಆಸೆಯ ಬಳ್ಳಿ ಚಿಗುರಿರುವಾಗ ಏನೋ ಬಂತೂ ದೈವದ ಯೋಗ
          ಬೇಡಿಕೆ ಎಲ್ಲಾ....  ಆಆಆ.....     
          ಬೇಡಿಕೆ ಎಲ್ಲಾ ತೀರುವ ಮುನ್ನ ನೀನೂ ನಾನೂ ದೂರವೇ ಚಿನ್ನಾ
          ನೀನೂ ನಾನೂ ದೂರವೇ ಚಿನ್ನಾ
          ಬಾರಮ್ಮಾ.. ಕಂದಮ್ಮಾ .. ಕರುಳಾ ಕರೆಯಾ ಕೇಳಮ್ಮಾ..
         ಕನಸೆಲ್ಲಾ ನಿನ್ನಲ್ಲೇ . ಕಂಡೇ ನಾನೂ .. ತಿಳಿಯಮ್ಮಾ..
         ಕಂಡೇ ನಾನೂ .. ತಿಳಿಯಮ್ಮಾ.. 
-------------------------------------------------------------------------------------------------------------------

ಭಲೇ ರಾಣಿ (೧೯೭೨) - ಓ.. ನಗು ನಾನು ನಗುತಾ
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಲ್.ಆರ್.ಈಶ್ವರಿ

ಹೆಣ್ಣು : ಓ.... ನಗು ನಗು ನಗುತಾ  ಓ... ಕುಣಿ ಕುಣಿ ಕುಣಿತಾ
          ಜಿಕಿಜಿಕಿಜಿಕಿಜಿಕಿಜಿಕಿ  ಜೀಕುತ್ತಾ...   ಸೋಕುಸೋಕುಸೋಕು ಸೋಕುತ  
          ಮಧುಮಯ ಬಸಂತ ಸಂಗೀತ
          ಆ.. ನಗು ನಗು ನಗುತಾ  ಆ.... ಕುಣಿ ಕುಣಿ ಕುಣಿತಾ
          ಜಿಕಿಜಿಕಿಜಿಕಿಜಿಕಿಜಿಕಿ  ಜೀಕುತ್ತಾ...   ಸೋಕುಸೋಕುಸೋಕು ಸೋಕುತ  
          ಮಧುಮಯ ಬಸಂತ ಸಂಗೀತ... ಮಧುಮಯ ಬಸಂತ ಸಂಗೀತ

ಹೆಣ್ಣು : ಅರೇ  ಅರೇ ಬೀರಿದ ಹೂವೀಗ ಕರೆದಿದೇ ಬಳಿಗೆ ಬಾ ಬೇಗ..
ಕೋರಸ್ : ಎಸ್ಕಯುಜ್ ಮೀ .. ನಾ ಬೇಗ ಬರಲಾ..
ಹೆಣ್ಣು : ಆ.. ಅರೇ  ಅರೇ ಬೀರಿದ ಹೂವೀಗ ಕರೆದಿದೇ ಬಳಿಗೆ ಬಾ ಬೇಗ..
          ಎದೆ ಮಧು ಆ ಲವ್ವೋ ... ಇಲ್ಲಾ ಇಲ್ಲಿ ಆ ನೋವೂ ..
          ಎದೆ ಮಧು ಆ ಲವ್ವೋ ... ಇಲ್ಲಾ ಇಲ್ಲಿ ಆ ನೋವೂ ..
          ವೆರಿ ವೆರಿ ಫೈನ್ ಸ್ವೀಟ್ ಸೇವೆಂಟೀನ್...  ಸೆವೆಂಟೀನ್...  ಸೇವೆಂಟೀನ್... ಸೇವೆಂಟೀನ್... 
          ಆಹ್ .. ನಗು ನಗು ನಗುತಾ  ಆಹ್ .... ಕುಣಿ ಕುಣಿ ಕುಣಿತಾ
          ಜಿಕಿಜಿಕಿಜಿಕಿಜಿಕಿಜಿಕಿ  ಜೀಕುತ್ತಾ...   ಸೋಕುಸೋಕುಸೋಕು ಸೋಕುತ  
          ಮಧುಮಯ ಬಸಂತ ಸಂಗೀತ... ಮಧುಮಯ ಬಸಂತ ಸಂಗೀತ

ಹೆಣ್ಣು : ಬಿಸಿ ಬಿಸಿ ಹರೆಯ ಮೈಯ್ಯಲ್ಲಿ.. ಕಸಿವಿಸಿ ತೊರೆ ನೀ ಮನದಲ್ಲಿ..
ಕೋರಸ್ : ಕಮ್ ಆನ್ .. ಎಸ್... ಎಸ್.. ಏಸ್ .. ಟೂರರ್ ...
ಹೆಣ್ಣು : ಹ್ಹಾಂ .... ಬಿಸಿ ಬಿಸಿ ಹರೆಯ ಮೈಯ್ಯಲ್ಲಿ.. ಕಸಿವಿಸಿ ತೊರೆ ನೀ ಮನದಲ್ಲಿ..
          ಹೊಸ ಹೊಸ ಆವೇಗ... ನಿಷಾ ನಿಷಾ ತಂದಾಗ ..
          ಹೊಸ ಹೊಸ ಆವೇಗ... ನಿಷಾ ನಿಷಾ ತಂದಾಗ ..
          ವೆರಿ ವೆರಿ ಫೈನ್ ಸ್ವೀಟ್ ಸೇವೆಂಟೀನ್...  ಹ್ಹಾ..ಹ್ಹಾ..ಹ್ಹಾ..ಹ್ಹಾ..ಹ್ಹಾ..
          ಆಹ್ .. ನಗು ನಗು ನಗುತಾ  ಆಹ್ .... ಕುಣಿ ಕುಣಿ ಕುಣಿತಾ
          ಜಿಕಿಜಿಕಿಜಿಕಿಜಿಕಿಜಿಕಿ  ಜೀಕುತ್ತಾ...   ಸೋಕುಸೋಕುಸೋಕು ಸೋಕುತ  
          ಮಧುಮಯ ಬಸಂತ ಸಂಗೀತ... ಮಧುಮಯ ಬಸಂತ ಸಂಗೀತ
-------------------------------------------------------------------------------------------------------------------

ಭಲೇ ರಾಣಿ (೧೯೭೨) - ಏನೋ ನಿನ್ನಯ ಲೀಲೆ
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ

ಗಂಡು : ಏನೋ ನಿನ್ನಯ ಲೀಲೆ..  ಶೀಲೆ ನೀನೇ ಈ ಗುಡಿಯಲ್ಲೇ
           ಏನೋ ನಿನ್ನಯ ಲೀಲೆ..  ಶೀಲೆ ನೀನೇ ಈ ಗುಡಿಯಲ್ಲೇ
         
ಗಂಡು : ಏಕೋ ಉಸಿರನೂ ತುಂಬಿದೆ ನೀನೂ ..
            ಏಕೋ ಉಸಿರನೂ ತುಂಬಿದೆ ನೀನೂ ಸೆರೆಯಾ ಖೈದಿ ನಾನೂ...ಸೆರೆಯಾ ಖೈದಿ ನಾನೂ.... ..
           ಏನೋ ನಿನ್ನಯ ಲೀಲೆ..  ಶೀಲೆ ನೀನೇ ಈ ಗುಡಿಯಲ್ಲೇ
ಹೆಣ್ಣು : ಅಮ್ಮಾ.... ಅಮ್ಮಾ... ಅಮ್ಮಾ... (ಅಮ್ಮಾ)
         
ಹೆಣ್ಣು : ತಾಯಿ ತಂದೇ .ಎಡೆಯಿನ್ನೆಲ್ಲಿ .. ಅಂತವೂ ಉಳಿದೇನೂ ಈ ಬಯಲಲ್ಲಿ
          ಮುಂದೆ ಬೆಂಬಲ ಎನಗಿನ್ನಾರೂ..
          ಮುಂದೆ ಬೆಂಬಲ ಎನಗಿನ್ನಾರೂ ಬಂದ ಪಾಲೂ ಈ ಕಣ್ಣೀರೂ.. ಬಂದ ಪಾಲೂ ಈ ಕಣ್ಣೀರೂ..
ಗಂಡು : ಏನೋ ನಿನ್ನಯ ಲೀಲೆ..  ಶೀಲೆ ನೀನೇ ಈ ಗುಡಿಯಲ್ಲೇ

ಗಂಡು : ಎಂತೋ ನೋವಾ ತಾಳಿದೆ ನಾನೂ.. ಬರಿಯಾಸೆ ಬಲೇ ಬೀಸಿದೆ ನೀನೂ ..
            ಎಂತೋ ನೋವಾ ತಾಳಿದೆ ನಾನೂ.. ಬರಿಯಾಸೆ ಬಲೇ ಬೀಸಿದೆ ನೀನೂ ..
ಹೆಣ್ಣು : ತಬ್ಬಲಿ ಮೋರೆಯಾ ಕೇಳಯ್ಯ ದೇವಾ..
          ತಬ್ಬಲಿ ಮೋರೆಯಾ ಕೇಳಯ್ಯ ದೇವಾ ನೀಗಿಸು ಬೇಗ ನಮ್ಮಿ ನೋವಾ
ಇಬ್ಬರು  : ಏನೋ ನಿನ್ನಯ ಲೀಲೆ..  ಶೀಲೆ ನೀನೇ ಈ ಗುಡಿಯಲ್ಲೇ
              ಶೀಲೆ ನೀನೇ ಈ ಗುಡಿಯಲ್ಲೇ... ಶೀಲೆ ನೀನೇ ಈ ಗುಡಿಯಲ್ಲೇ...
-------------------------------------------------------------------------------------------------------------------

ಭಲೇ ರಾಣಿ (೧೯೭೨) - ನೀಡಿ ತಾಯೀ ..
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ. ಬಿ,ಕೆ,ಸುಮಿತ್ರಾ

ಗಂಡು : ಓಓಓಓಓ.... ಆಆಆ... ಓಓಓಓಓ
           ನೀಡಿ ತಾಯೀ .. ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ
           ಈ ದಾರಿದೀಪ ನಿಮ್ಮಿಂದಲೇ.. ಓಓಓಓಓಯ್....
ಹೆಣ್ಣು : ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ  ಈ ದಾರಿದೀಪ ನಿಮ್ಮಿಂದಲೇ..
ಗಂಡು : ಓಓಓಓಓ.... ಧರ್ಮಾತ್ಮರೇ ನೋಡಿ ಕೈ ತುಂಬಾ ನೀಡಿ ದಯದಿಂದಲೇ.. ಓಓಓಓ
ಹೆಣ್ಣು : ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ
ಇಬ್ಬರು : ಈ ದಾರಿದೀಪ ನಿಮ್ಮಿಂದಲೇ..

ಗಂಡು : ಆ... ತಾಯಿ ತಂದೇ ಯಾರೋ ಊರೆಲ್ಲೋ ಕಾಣೇ ..
           ಆ... ತಾಯಿ ತಂದೇ ಯಾರೋ ಊರೆಲ್ಲೋ ಕಾಣೇ ..
           ಕಾಪಾಡೋ ದೈವ ಈ ದಾತರೇನೇ...
           ಕಾಪಾಡೋ ದೈವ ಈ ದಾತರೇನೇ ಬೆಳಕಿಲ್ಲದಂತ ಬಾಳೂ ಗತಿ ನೀವೇ ತಾನೇ ...
ಹೆಣ್ಣು : ನೀಡಿ ತಾಯೀ ... ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ
          ಈ ದಾರಿದೀಪ ನಿಮ್ಮಿಂದಲೇ..
ಗಂಡು : ಓಓಓಓಓ.... ಧರ್ಮಾತ್ಮರೇ ನೋಡಿ ಕೈ ತುಂಬಾ ನೀಡಿ ದಯದಿಂದಲೇ.. ಓಓಓಓಯ್

ಹೆಣ್ಣು : ಒಂದು ಕಾಸು ಧರ್ಮ ನೀಡಿ ಹೆಚ್ಚೇನೋ ಅಲ್ಲಾ... ಆಆಆ 
ಗಂಡು : ಒಂದು ಕಾಸು ಧರ್ಮ ನೀಡಿ ಹೆಚ್ಚೇನೋ ಅಲ್ಲಾ... ಆಆಆ 
            ದಾನದಿಂದ ದೀನನಾದ ಧಾರಾಳಿ ಇಲ್ಲಾ .. 
            ದಾನದಿಂದ ದೀನನಾದ ಧಾರಾಳಿ ಇಲ್ಲಾ  ಆ ದೇವ ಇಂದೂ ನಿಮ್ಮ ಕೈ ತುಂಬ ಬಲ್ಲ 
ಹೆಣ್ಣು : ನೀಡಿ ತಾಯೀ ...
ಇಬ್ಬರು : ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ  ಈ ದಾರಿದೀಪ ನಿಮ್ಮಿಂದಲೇ..
ಗಂಡು : ಓಓಓಓಓ.... ಧರ್ಮಾತ್ಮರೇ ನೋಡಿ ಕೈ ತುಂಬಾ ನೀಡಿ ದಯದಿಂದಲೇ.. ಓಓಓಓಯ್
           ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ  ಈ ದಾರಿದೀಪ ನಿಮ್ಮಿಂದಲೇ.. 
           ನೀಡಿ ತಾಯೀ .. ಕರುಣೆಯುಳ್ಳ ತಾಯಿ ತಂದೇ  ಈ ದಾರಿದೀಪ ನಿಮ್ಮಿಂದಲೇ.. 
 -------------------------------------------------------------------------------------------------------------------

ಭಲೇ ರಾಣಿ (೧೯೭೨) - ಕಂದ ಚಿನ್ನ ಮಲಗಮ್ಮ
ಸಂಗೀತ : ವಿ.ಸತ್ಯರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ

ಕಂದ ಚಿನ್ನ ಮಲಗಮ್ಮಾ ಶಾಂತಿ ಹೂವಾ ಮುಡಿಯಮ್ಮಾ ..
ಕಂದ ಚಿನ್ನ ಮಲಗಮ್ಮಾ ಶಾಂತಿ ಹೂವಾ ಮುಡಿಯಮ್ಮಾ ..
ಘರ ನಿದ್ದೇ ಕಂದಾ ಈ ಕಾಲ ನೀ ಕಣ್ಣೂ ತೆರೆಯೇ ಸರಿಯಲ್ಲ...
ಕಂದ ಚಿನ್ನ ಮಲಗಮ್ಮಾ ಶಾಂತಿ ಹೂವಾ ಮುಡಿಯಮ್ಮಾ ..
ಕಂದ ಚಿನ್ನ ಮಲಗಮ್ಮಾ 

ಹೂಂಹೂಂಹೂಂ.. ಆಹಾಹಾಹಾ.. ಆಆಆ.. 
ಎಂದೆಂದೂ ನಿನ್ನ ಹೂ ನಗೆ ಹಾಯಾದ ತಂಪೂ ಮನಸ್ಸಿಗೇ .. 
ಎಂದೆಂದೂ ನಿನ್ನ ಹೂ ನಗೆ ಹಾಯಾದ ತಂಪೂ ಮನಸ್ಸಿಗೇ .. 
ವರವಾಗಿ ಬಂದ ಓ.. ನನ್ನ ಕಂದ .. 
ವರವಾಗಿ ಬಂದ ಓ.. ನನ್ನ ಕಂದ .. ತುಂಟಾಟ ನೀಗೂ ನಗೆ ಮಲ್ಲಿಗೇ .. 
ಕಂದ ಚಿನ್ನ ಮಲಗಮ್ಮಾ ಶಾಂತಿ ಹೂವಾ ಮುಡಿಯಮ್ಮಾ .. 
ಕಂದ ಚಿನ್ನ ಮಲಗಮ್ಮಾ.. ಹೂಂ.. ಹೂಂ  

ದಾರಿ ದೀಪ ದೈವವೇ... ನಿನಗಾಗಿ ಎಂದೇ ಬಾಳುವೇ .. 
ದಾರಿ ದೀಪ ದೈವವೇ... ನಿನಗಾಗಿ ಎಂದೇ ಬಾಳುವೇ .. 
ಈ ನಿನ್ನ ನಿದ್ದೇ .. ನನಗಾಗಿ ಎಂದೇ .. 
ಈ ನಿನ್ನ ನಿದ್ದೇ .. ನನಗಾಗಿ ಎಂದೇ .. ಈ ಹಾದಿ ನೋವ ನಾ ತಾಳುವೇ.. 
ಕಂದ ಚಿನ್ನ ಮಲಗಮ್ಮಾ ಶಾಂತಿ ಹೂವಾ ಮುಡಿಯಮ್ಮಾ .. 
ಘರ ನಿದ್ದೇ ಕಂದಾ ಈ ಕಾಲ ನೀ ಕಣ್ಣೂ ತೆರೆಯೇ ಸರಿಯಲ್ಲ...
ಕಂದ ಚಿನ್ನ ಮಲಗಮ್ಮಾ ಶಾಂತಿ ಹೂವಾ ಮುಡಿಯಮ್ಮಾ .. 
ಕಂದ ಚಿನ್ನ ಮಲಗಮ್ಮಾ.. ಕಂದ ಚಿನ್ನ ಮಲಗಮ್ಮಾ.. ಹೂಂ.. ಹೂಂ  
-------------------------------------------------------------------------------------------------------------------

No comments:

Post a Comment