ಭಾವ ತರಂಗ ಚಲನಚಿತ್ರದ ಹಾಡುಗಳು
- ಒಡಲಿಗೆ ಒಡಲು ತಾಕಿದ ವೇಳೆ
- ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಆರ್.ಎನ್. ಜಯಗೋಪಾಲ್, ಗಾಯನ: ಎಸ್. ಪಿ. ಬಿ, ಕಸ್ತೂರಿ ಶಂಕರ್
ಹೆಣ್ಣು: ಒಡಲಿಗೆ ಒಡಲೂ ತಾಕಿದ ವೇಳೆ ಮೂಡಿತು ಭಾವತರಂಗ
ಅರಿಯದ ಯಾವುದೋ ಅನುಭವ ಪಡೆಯಿತು
ನಮ್ಮಯ ಅಂತರಂಗ
ಗಂಡು:ಒಡಲಿಗೆ ಒಡಲೂ ತಾಕಿದ ವೇಳೆ ಮೂಡಿತು ಭಾವತರಂಗ
ಅರಿಯದ ಯಾವುದೋ ಅನುಭವ ಪಡೆಯಿತು
ನಮ್ಮಯ ಅಂತರಂಗ
ಗಂಡು: ಆಸೆಗೆ ಲಜ್ಜೆಯಾ ಮೌನದ ಗೆರೆಯಾ
ಹಾಕಿರೇ ಕಣ್ಣೇ ನಾಲಿಗೆ
ಹೆಣ್ಣು: ತರ್ಕ ದೋಷ ಬೇಕೇ ಇಲ್ಲಾ ಹೃದಯದಾಳದ ಮಾತಿಗೇ
ಗಂಡು: ಅಗಲಿಕೆ ಇಂದುವೇ ನವಿರೂ (ಊಂಊಂ)
ಮಿಲನದೇ ತುಂಬಿದೆ ಸಿಹಿಯಾ
ಅಗಲಿಕೆ ಇಂದುವೇ ನವಿರೂ (ಹೇಹೇ)
ಮಿಲನದೇ ತುಂಬಿದೆ ಸಿಹಿಯಾ
ಹೆಣ್ಣು: ರಂಗು ರಂಗಿನ ಮಳೆ ಬಿಲ್ಲಂತೆ ಪ್ರೇಮದ ವರ್ಣತರಂಗ...
ಗಂಡು:ಒಡಲಿಗೆ ಒಡಲೂ ತಾಕಿದ ವೇಳೆ ಮೂಡಿತು ಭಾವತರಂಗ
ಹೆಣ್ಣು: ಅರಿಯದ ಯಾವುದೋ ಅನುಭವ ಪಡೆಯಿತು
ನಮ್ಮಯ ಅಂತರಂಗ
ಹೆಣ್ಣು: ಏಳು ಸ್ವರಗಳ ಸಂಯೋಗದಲೀ
ಆಯಿತು ರಾಗದ ಉದಯ
ಗಂಡು: ಏಳು ಹೆಜ್ಜೆಯ ತುಳಿದ ಕ್ಷಣದಲೀ
ಜೀವನರಾಗದ ಉದಯ
ಹೆಣ್ಣು: ಶೃತಿಯಲಿ ಬರೆಯಿತು ಸ್ವರವೂ (ಲಲಲಾ)
ಉಸಿರಿನ ಬೆಸುಗೆಯೋ ಒಲವೂ..
ಶೃತಿಯಲಿ ಬರೆಯಿತು ಸ್ವರವೂ (ಹೂಹೂಹೂ)
ಉಸಿರಿನ ಬೆಸುಗೆಯೋ ಒಲವೂ..
ಗಂಡು: ಜೀವ ಜೀವದ ಸಂಗಮದಲ್ಲಿ ಪ್ರೀತಿಯ ರಾಗದರಾಗ
ಹೆಣ್ಣು: ಒಡಲಿಗೆ ಒಡಲೂ (ಹೂಂಹೂಂ)
ತಾಕಿದ ವೇಳೆ (ಅಹಾ) ಮೂಡಿತು ಭಾವತರಂಗ
ಗಂಡು: ಅರಿಯದ ಯಾವುದೋ ಅನುಭವ ಪಡೆಯಿತು
ನಮ್ಮಯ ಅಂತರಂಗ
ಇಬ್ಬರು: ಆಹಾಹಾ..ಆಆಆ...ಹೂಂಹೂಂಹೂಂ...ಆಆಆಆಆಆ
---------------------------------------------------------------------
ಭಾವ ತರಂಗ (೧೯೭೭) - ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಆರ್.ಎನ್. ಜಯಗೋಪಾಲ್, ಗಾಯನ: ವಾಣಿಜಯರಾಮ
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ ಈ ಬೆಗೆ ಬೇಸರ
ಹಿಡಿವಾಗ ಈ ಥರ ಈ ನೋಟ ಹೀತವಂತೆ ವಿರಹ ಇನಿಯಾ
ಒಲವೆಂದೂ ತಂದಂತ ವಿರಹ
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ ಈ ಬೆಗೆ ಬೇಸರ
ಹಿಡಿವಾಗ ಈ ಥರ ಈ ನೋಟ ಹೀತವಂತೆ ವಿರಹ ಇನಿಯಾ
ಒಲವೆಂದೂ ತಂದಂತ ವಿರಹ
ದಾಡಿ ಮೀಸೆ ಧರಿಸುವುದೇಕೇ ಸನ್ಯಾಸಿ ತರಹ
ಹುಚ್ಚನಂತೆ ಅಲೆಯುವುದೇಕೆ ಮಜ್ನೂ ತರಹ
ದಾಡಿ ಮೀಸೆ ಧರಿಸುವುದೇಕೇ ಸನ್ಯಾಸಿ ತರಹ
ಹುಚ್ಚನಂತೆ ಅಲೆಯುವುದೇಕೆ ಮಜ್ನೂ ತರಹ
ವಿರಹದಲೀ ಬೇಯಲೇಕೇ ಇಂಥ ವೇಷ ತಾಳಲೇಕೇ
ವಿರಹದಲೀ ಬೇಯಲೇಕೇ ಇಂಥ ವೇಷ ತಾಳಲೇಕೇ
ತಾಳ್ಮೆಯಿಂದ ತಿಂಗಳಂದ ಕಳೆಯಲಾರೆಯಾ
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ ಈ ಬೆಗೆ ಬೇಸರ
ಹಿಡಿವಾಗ ಈ ಥರ ಈ ನೋಟ ಹೀತವಂತೆ ವಿರಹ ಇನಿಯಾ
ಒಲವೆಂದೂ ತಂದಂತ ವಿರಹ
ಚೈತ್ರಕ್ಕಾಗಿ ಕಾಯಬೇಕು ಹಾಡಲು ಕೋಗಿಲೇ
ರಾತ್ರಿಗೇ ಕಾಯಬೇಕು ಅರಳಲು ನೈದಿಲೇ
ಚೈತ್ರಕ್ಕಾಗಿ ಕಾಯಬೇಕು ಹಾಡಲು ಕೋಗಿಲೇ
ರಾತ್ರಿಗೇ ಕಾಯಬೇಕು ಅರಳಲು ನೈದಿಲೇ
ಆಷಾಢ ಬೇಕು ಮಳೆಗೇ.. ಮಾಘ ಮಾಸ ಬೇಕು ಹಿಮಕೇ..
ಆಷಾಢ ಬೇಕು ಮಳೆಗೇ.. ಮಾಘ ಮಾಸ ಬೇಕು ಹಿಮಕೇ..
ಶ್ರಾವಣದ ಪರಿ ಬರ ಬೀಡು ನನ್ನ ಮಿಲನರಲಿ..ಆಹಾ..ಆಆಆ..
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ ಈ ಬೆಗೆ ಬೇಸರ
ಹಿಡಿವಾಗ ಈ ಥರ ಈ ನೋಟ ಹೀತವಂತೆ ವಿರಹ ಇನಿಯಾ
ಒಲವೆಂದೂ ತಂದಂತ ವಿರಹ
ಆಅಅ.. ಆಹಾ..ಆಹಾ.. ಓಹೋ..ಓಹೋ..ಲಲಲಲ್ಲಲಾ..
---------------------------------------------------------------------
No comments:
Post a Comment