05. ದೂರದ ಬೆಟ್ಟ (1973)


ದೂರದ ಬೆಟ್ಟ ಚಿತ್ರದ ಹಾಡುಗಳು 
  1. ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ 
  2. ಕಾಮಣ್ಣ ಕಟ್ಟಿಗೆ 
  3. ಸವಾಲು ಹಾಕಿ ಸೋಲಿಸಿಯೆಲ್ಲರ 
ದೂರದ ಬೆಟ್ಟ (1973)  - ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಸಂಗೀತ: ಜಿ.ಕೆ.ವೆಂಕಟೇಶ,  ಸಾಹಿತ್ಯ: ಚಿ.ಉದಯಶಂಕರ,  ಗಾಯನ : ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಗಂಡು : ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
            ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
            ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ
ಹೆಣ್ಣು : ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
          ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ.. ನನ್ನ ನಿಮ್ಮ ಪಾಲಿಗೆ
          ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಗಂಡು : ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ
           ನೀ ಪಕ್ಕ ಇದ್ರೇ ಹಿಂಗೆ, ಬೆಟ್ಟಾನ್ ಎತ್ತಿ ಬೆಳ್ನಾಗೆ
           ಏಸೇ ಕಷ್ಟ ಬಂದ್ರು ನಮ್ಗೆ...  ಗೌರ
           ಏಸೇ ಕಷ್ಟ ಬಂದ್ರು ನಮ್ಗೆ, ಮೀಸೆ ಬುಡ್ತೀನ್ ಸುಮ್ಗೆ
           ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಹೆಣ್ಣು : ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ
          ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೆ
          ಈ ನಿಮ್ಮ ಪಾದದಾಣೆ...
          ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೆ
         ಪ್ರೀತಿನೇ ಆ ದ್ಯಾವ್ರು ತಂದ,
ಗಂಡು : ಆಸ್ತಿ ನಮ್ಮ ಬಾಳ್ವೆಗೆ
ಹೆಣ್ಣು :  ಹಸಿವಿನಲ್ಲೂ ಹಬ್ಬಾನೇ,
ಗಂಡು : ದಿನವು ನಿತ್ಯ ಉಗಾದಿನೇ..
ಹೆಣ್ಣು :  ನನ್ನ ನಿಮ್ಮ ಪಾಲಿಗೆ,
ಗಂಡು : ನನ್ನ ನಿನ್ನ ಪಾಲಿಗೆ
ಇಬ್ಬರು :  ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
-------------------------------------------------------------------------------------------------------------------------

ದೂರದ ಬೆಟ್ಟ (1973)  - ಕಾಮಣ್ಣ ಕಟ್ಟಿಗೆ  ಭೀಮಣ್ಣ ಬರಲೀ 
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಚಿ.ಉದಯಶಂಕರ್, ಗಾಯನ: ಪಿ.ಬಿ.ಶ್ರೀನಿವಾಸ್, ಟಿ.ಎ.ಮೋತಿ 

ಗಂಡು : ಕಾಮಣ್ಣ ಕಟ್ಟಿಗೆ  .... ........   ಕೋರಸ್ : ಭೀಮಣ್ಣ ಬರಲೀ 
ಗಂಡು : ಕಾಮಣ್ಣ ಕಟ್ಟಿಗೆ ..... .........  ಕೋರಸ್ :  ಭೀಮಣ್ಣ ಬರಲೀ 
ಗಂಡು : ಅಡಿಕೆ ಗೋಟು  ...... ..... .. ಕೋರಸ್ :  ಪರಕೆ ಏಟು 
ಗಂಡು : ಕಾಮಣ್ಣ ಮಕ್ಕಳು........ ....  ಕೋರಸ್ :  ಕಳ್ಳ ನನ್ನ ಮಕ್ಕಳು 
ಗಂಡು : ಏನೇನೋ ಕದ್ದರು....... ....  ಕೋರಸ್ :  ಸೌದೆ ಭರಣಿ ಕದ್ದರು 
ಗಂಡು : ಯಾತಕ್ಕೆ ಕದ್ದರು ....... ...... ಕೋರಸ್ : ..ಕಾಮಣ್ಣ ಸುಡೋಕೇ 
ಕೋರಸ್ :   ಲಬ್   ಲಬ್   ಲಬ್   ಲಬ್   ಲಬ್   ಲಬ್   ಲಬ್   ಲಬ್

ಕೋರಸ್ :  ಹೊಯ್..ಹೇ...ಹೊಯ್..ಹೇ... ಹೊಯ್..ಹೇ... ಹೊಯ್..ಹೇ...  
ಗಂಡು : ಹರನ್ ಮಹಾಪಾರ್ವತಿಪತಿಯೇ          ಕೋರಸ್ :  ಹರ ಹರ ಮಹಾದೇವಾ 
ಗಂಡು : ವರುಷಕೊಮ್ಮೆ... ವರುಷಕೊಮ್ಮೆ... ಬರುವುರು ನಾವು ಸದಾ ಬರುವವರಲ್ಲಾ
ಕೋರಸ್ :  ನಾವು ಸದಾ ಬರುವವರಲ್ಲಾ..
ಗಂಡು : ಕೇಳಿದ್ದು ತಂದು ಕೊಡದೇ  ಹೋದರೇ ನಾವು ಬಿಡುವವರಲ್ಲಾ..
ಕೋರಸ್ :  ಹೌದು ..   ನಾವು ಬಿಡುವವರಲ್ಲಾ.. 

ಗಂಡು : ಸೌದೇ... ಭರಣಿ  ಸೌದೇಭರಣಿ ಕಾಣಿಕೆ ಸಾಕು ಬೇರೆ ಬೇಡೋಲ್ಲಾ....
ಕೋರಸ್ :  ಬೇರೆ ಬೇಡೋಲ್ಲಾ
ಗಂಡು : ಕೊಡೋ ಮಾಮೂಲು ಮಡಿಗಿಬಿಟ್ಟರೇ .
ಕೋರಸ್ :  ಕೊಡೋ ಮಾಮೂಲು ಮಡಿಗಿಬಿಟ್ಟರೇ .ತಿರುಗಿ ಬರುವುದಿಲ್ಲಾ... 
                 ತಿರುಗಿ ಬರುವುದಿಲ್ಲಾ... ನಾವು ತಿರುಗಿ ಬರುವುದಿಲ್ಲಾ...

ಗಂಡು : ಹುಟ್ಟೋವಾಗ...
           ಹುಟ್ಟೋವಾಗ ಇಲ್ಲಿಗೆ ಏನೂ ಹೊತ್ತು ಬರಲಿಲ್ಲಾ
           ಆಹ್ ಸತ್ತ್ ಮೇಲೇ ಅಲ್ಲಿಗೇ ಏನು ಕೊಂಡು ಹೋಗಲ್ಲಾ
           ಅಹ್ ಹುಟ್ಟೋವಾಗ...
           ಹುಟ್ಟೋವಾಗ ಇಲ್ಲಿಗೆ ಏನೂ ಹೊತ್ತು ಬರಲಿಲ್ಲಾ
          ಆಹ್ ಸತ್ತ್ ಮೇಲೇ ಅಲ್ಲಿಗೇ ಏನು ಕೊಂಡು ಹೋಗಲ್ಲಾ 
          ಕಾಮನ ಸುಟ್ಟರೆ ಶಿವ ಮೆಚ್ಚುವುನು ಎಂಬುದು ಸುಳ್ಳಲ್ಲಾ 
ಕೋರಸ್ :  ಎಂಬುದು ಸುಳ್ಳಲ್ಲಾ 
ಗಂಡು : ಕಾಮನ ಹಬ್ಬ ಆಗದೇ ಹೋದರೇ ಹಳ್ಳಿಯು ಉಳಿಯೋಲ್ಲಾ.... 
ಕೋರಸ್ :  ಆ... ಹಳ್ಳಿಯು ಉಳಿಯೋಲ್ಲಾ.... 
               ಕಾಮನ ಹಬ್ಬ ಆಗದೇ ಹೋದರೇ ಹಳ್ಳಿಯು ಉಳಿಯೋಲ್ಲಾ.... 
               ನಮ್ಮ ಹಳ್ಳಿ ಉಳಿಯೋಲ್ಲಾ... ಆ... ಹಳ್ಳಿಯು ಉಳಿಯೋಲ್ಲಾ.... 
ಗಂಡು : ಕಾಮಣ್ಣ ಕಟ್ಟಿಗೆ  .... ........   ಕೋರಸ್ : ಭೀಮಣ್ಣ ಬರಲೀ 
ಗಂಡು : ಕಾಮಣ್ಣ ಕಟ್ಟಿಗೆ ..... .........  ಕೋರಸ್ :  ಭೀಮಣ್ಣ ಬರಲೀ 
ಗಂಡು : ಅಡಿಕೆ ಗೋಟು  ...... ..... .. ಕೋರಸ್ :  ಪರಕೆ ಏಟು 
ಗಂಡು : ಕಾಮಣ್ಣ ಮಕ್ಕಳು........ ....  ಕೋರಸ್ :  ಕಳ್ಳ ನನ್ನ ಮಕ್ಕಳು 
ಗಂಡು : ಏನೇನೋ ಕದ್ದರು....... ....  ಕೋರಸ್ :  ಸೌದೆ ಭರಣಿ ಕದ್ದರು 
ಗಂಡು : ಯಾತಕ್ಕೆ ಕದ್ದರು ....... ...... ಕೋರಸ್ : ..ಕಾಮಣ್ಣ ಸುಡೋಕೇ 
ಕೋರಸ್ :   ಲಬ್   ಲಬ್   ಲಬ್   ಲಬ್   ಲಬ್   ಲಬ್   ಲಬ್   ಲಬ್ ಹೊಯ್..ಹೇ... 

ಮೋತಿ : ಲೋ.. ಕಾಮಣ್ಣ ಮಗನೇ...     ಗಂಡು : ಓಓ 
ಮೋತಿ : ಬಾಯಿಲ್ಲಿ...                          ಗಂಡು :  ಬಂದೇ 
ಮೋತಿ : ಈ ಮಾತಾಯಿ ಕಥೆ ಒಸೀ ಹೇಳ್ತೀಯಾ... 
ಗಂಡು : ಹೇಳ್ತೀನಿ... ಹೇಳ್ತೀನಿ 
           ಪುಣ್ಯವತೀ ಈ ಮಹಾತಾಯಿಯು ..     ಮೋತಿ : ಆ..ಹ್ಹಾಹ.. 
ಗಂಡು : ಕಾಳಮ್ಮಾ... ಭದ್ರ ಕಾಳಮ್ಮಾ .          ಮೋತಿ :   ಓ..ಓಹೋಹೊಹೋ... 
ಗಂಡು : ಕಾಳಮ್ಮಾ... ಭದ್ರ ಕಾಳಮ್ಮಾ 
            ಪುಣ್ಯವತೀ ಈ ಮಹಾತಾಯಿಯು  ಕಾಳಮ್ಮಾ... ಭದ್ರ ಕಾಳಮ್ಮಾ 
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ 
ಗಂಡು : ಒಂದೊಂದ ಹಳ್ಳಿಗೆ ಒಬ್ಬಳೇ ಸಾಕು  ಕಾಳಮ್ಮಾ... ಭದ್ರ ಕಾಳಮ್ಮಾ
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ
ಮೋತಿ : ಈಕೆ ಧಾರಾಳ ಎಂಥದ್ದು...
ಗಂಡು : ಎಂಜಲ ಕೈಯಲ್ಲೀ... ಕಾ... ಕಾ.... ಕಾ...  
ಗಂಡು : ಎಂಜಲ ಕೈಯಲ್ಲೀ.ಕಾಗೆ ಹೊಡೆಯೋಳು  ಕಾಳಮ್ಮಾ... ಭದ್ರ ಕಾಳಮ್ಮಾ
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ 
ಮೋತಿ : ಈ ತಾಯಿ ಗುಣ ಹೆಂಗೇ 
ಗಂಡು : ನಂಜು ನಾಲಿಗೆ ಕಿಡಿಕಿಡಿ ಮಾತಿನ ಕಾಳಮ್ಮಾ... ಭದ್ರ ಕಾಳಮ್ಮಾ
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ
ಮೋತಿ : ಈಕೆ ಎಂಥಾ ಪ್ರತಿವೃತೇ... 
ಗಂಡು : ಅಂಜಿಸಿ ಗಂಡನ ಊರಿದು ಮುಕ್ಕುವ ಈ ಕಾಳಮ್ಮಾ... ಭದ್ರ ಕಾಳಮ್ಮಾ
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ
ಮೋತಿ :  ಹೀಹ್ಹೀ.. ಈ ಅಮ್ಮನ ಮುಖ ನೋಡಿದರೇ 
ಗಂಡು : ಗಂಜಿ ದೊರಕದೂ ಹೊತ್ತಾರೆ ಕಂಡರೇ ಕಾಳಮ್ಮಾ... ಭದ್ರ ಕಾಳಮ್ಮಾ 
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ  ಓ... ಕಾಳಮ್ಮಾ... ಭದ್ರ ಕಾಳಮ್ಮಾ 
                ಓ.. ಕಾಳಮ್ಮಾ... ಭದ್ರ ಕಾಳಮ್ಮಾ ಕಾಳಮ್ಮಾ... ಭದ್ರ ಕಾಳಮ್ಮಾ 
ಹೆಣ್ಣು : ಮಾನಗೆಟ್ಟಾರ.. ನಿಮ್ಮಗ್ ದೊಡ್ಡ್ ರೋಗ ಬರ್ 
          ನಿಮಗ್ ಆಪತ್ ಬಂದ್ ಚಾಪೆಗೆ ಸುತ್ತ ಕೊಂಡ ಹೋಗ ನಿಮ್ ಬಾಷಣಕ್ಕ್ ಬರ್ 
ಗಂಡು : ನಿನ್ ಹಲ್ ಕಟ್ ನಿನ್ ಗುಂಡಾಟ್   ನಿನಗ್ ಆಪತ್ ಬಂದ್ ಚಾಪೆಗೆ ಸುತ್ತ ಕೊಂಡ ಹೋಗ 
             ಅಯ್ಯಯ್ಯೋ ಅಪ್ಪ್ 
             ಲೇ..  ಲೇ.. ಬಸರೀ ಕಾಮನ ಹಬ್ಬಕ್ ಹುಡುಗೂರು ಆಡಕೊಳ್ಳಲಿ ಬಿಡೇ...
ಹೆಣ್ಣು : ನೀನಾರ್ ಬಂದ್ ಬಿಟ್ಯಾ.. ಹೋಗೋ.. 

ಗಂಡು : ಕಾಮನ ಮಕ್ಕಳ ಬೈಯ್ಯುವೇ ಏನೇ  ಕಾಳಮ್ಮಾ... ಭದ್ರ ಕಾಳಮ್ಮಾ 
ಕೋರಸ್ :  ಕಾಳಮ್ಮಾ... ಭದ್ರ ಕಾಳಮ್ಮಾ
ಗಂಡು : ಕಾಮಣ್ಣನ ಆಡುವ ಆಟವ ಮುಂದೆ ನೋಡಮ್ಮ ನೀನು ನೋಡಮ್ಮಾ
ಕೋರಸ್ :  ನೋಡಮ್ಮ ನೀನು ನೋಡಮ್ಮಾ
-------------------------------------------------------------------------------------------------------------------------

ದೂರದ ಬೆಟ್ಟ (1973) - ಗೆಜ್ಜೆಯ ಕಾಲಿನ ಹೆಜ್ಜೆಯ ಹಾಕಿ ಗಲಗಲ ಗಲಗಲ ಕುಳುಕಿ ಬಳುಕಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀ, ಟಿ.ಎ.ಮೋತಿ, ಆಶಾಬೋಸ್ಲೆ

ಮೋತಿ: ಗೆಜ್ಜೆಯ ಕಾಲಿನ ಹೆಜ್ಜೆಯ ಹಾಕಿ ಗಲಗಲ ಗಲಗಲ ಕುಳುಕಿ ಬಳುಕಿ
            ಎಲ್ಲಿಂದ ಬಂದೇ ಯಾತಕೆ ಬಂದೇ ಹೇಳೇ ಸಭಿಕರ ಮುಂದೇ
            ನೀ ಹೇಳೇ ಸಭಿಕರ ಮುಂದೇ
ಆಶಾ : ಸವಾಲು ಹಾಕಿ ಸೋಲಿಸಿ ಎಲ್ಲರ..ಆಆಆ.. ಕಲೆಗಳ ಮೆಟ್ಟಲು ಬಂದಿರುವೇ ...
           ಹೇ.. ಸವಾಲು ಹಾಕಿ ಸೋಲಿಸಿ ಎಲ್ಲರ..ಆಆಆ.. ಕಲೆಗಳ ಮೆಟ್ಟಲು ಬಂದಿರುವೇ ...
           ಗೆಲ್ಲುವುದಿದ್ದರೇ ಮುಂದಕೆ ಬನ್ನೀ ಇಲ್ಲದೇ ಹೋದರೇ ಶರಣು ಅನ್ನೀ... ಜೀ..ಜೀ..ಜೀ
           ಶರಣು ಅನ್ನೀ..ಶರಣು ಅನ್ನೀ.. ಜೀ..ಜೀ..ಜೀ ಹೇ..ಹೇ..ಹೇ..
ಮೋತಿ : ಏನ್ ನಿನ್ ಸವಾಲು
ಆಶಾ : ಹೇಳ್ತಿನೀ ಕೇಳು.... ಹೇ....ಹೆಹೆಹೆ...ಆಆಆ...
           ಹರಕು ಬಿಳಿಯ ಟೋಪಿ ತುಂಡು ತೊಟ್ಟು ತಲೆಯಲಿ
           ತಿರುಗೋನೊಬ್ಬ ಇದ್ದಾನಯ್ಯ ತಂಪಿನೂರಲಿ
           ಹರಕು ಬಿಳಿಯ ಟೋಪಿ ತುಂಡು ತೊಟ್ಟು ತಲೆಯಲಿ
           ತಿರುಗೋನೊಬ್ಬ ಇದ್ದಾನಯ್ಯ ತಂಪಿನೂರಲಿ
           ಮೆಚ್ಚಿ ಅವನ ಮದುವೆ ಆದಳು ಸತ್ತು ಹುಟ್ಟೋಳು
           ಮೆಚ್ಚಿ ಅವನ ಮದುವೆ ಆದಳು ಸತ್ತು ಹುಟ್ಟೋಳು
          ಹೆಚ್ಚಿತಯ್ಯಾ ಅವನ ಬಳಗ ಮೂರೂ ಮಚ್ಚೆವೂ
          ಹೆಚ್ಚಿತಯ್ಯಾ ಅವನ ಬಳಗ ಮೂರೂ ಮಚ್ಚೆವೂ
          ಜಿ..ಜಿ..ಜಿ.. ರಮ್ಮ ಜಿ..ಜಿ..ಜಿ..
          ಜಿ..ಜಿ..ಜಿ.. ರಮ್ಮ ಜಿ..ಜಿ..ಜಿ.. ಜಿ..ಜಿ..ಜಿ.. ರಮ್ಮ ಜಿ..ಜಿ..ಜಿ..
ಮೋತಿ : ಆಹ್... ಮುಂದೇ ಹೇಳೂ...
ಆಶಾ : ಮತ್ಸರ ತುಂಬಿದ ಬಳಗ ಅನ್ನೋ ಭಾವನೆ ಉಂಟು ಜನರಲ್ಲಿ
           ಭಾವನೆ ಉಂಟು ಜನರಲ್ಲಿ
           ಅಚ್ಚರಿಯಂದರೆ ಶಾಂತಿ ಸುಖದ ನೆಮ್ಮದಿ ಇತ್ತು ಗುಂಪಲ್ಲಿ
           ನೆಮ್ಮದಿ ಇತ್ತು ಗುಂಪಲ್ಲಿ
           ಮುಚ್ಚಿದ ಬದುಕಿನ ಮರ್ಮವ ಬಿಚ್ಚಿ ಉತ್ತರ ಹೇಳಿ ಓರೇ ಹಚ್ಚಿ..
           ಉತ್ತರ ಹೇಳಿ ಓರೇ ಹಚ್ಚಿ..
           ತೋಚದೆ ಹೋದರೇ...
           ತೋಚದೆ ಹೋದರೇ ಗುಲಾಮರಾಗಿ ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
           ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ ಆಹ್ಹಾ.. ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
           ಆಹ್ಹಾ.. ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ

ರಾಜ : ನೀವುಗಳೆಲ್ಲಾ ಒಪ್ಪಿಗೆ ಕೋಡಂಗ್ ಇದ್ರೇ
           ಅಹಹಹ್ ನಾನು ಒಂದ್ ಕೈ ವಿಚಾರಿಸಿ ಕೊಳ್ಳುವ ಅಂತವಾ
ಮಂದಿ : ಎಲಾ... ಇವನಾ... ಹೋಗು ಹೋಗು...ಚಲೋ ಗುರೂ 
ಪಿ.ಬಿ.ಶ್ರೀ : ಸವಾಲು ಹಾಕಿ ಸೊಕ್ಕಿನಿಂದ ಮೆರೆಯೋದ್ಯಾಕೆ ಓ..ಹೆಣ್ಣೇ
            ಜವಾಬು ಕೊಟ್ಟು ಜೂರತ್ತಡಗಿಸ ಜಟ್ಟಿ ಇಲ್ಲೇ ಇದ್ದಾನೇ
            ಸವಾಲು ಹಾಕಿ... ಸವಾಲು ಹಾಕಿ ಸೊಕ್ಕಿನಿಂದ ಮೆರೆಯೋದ್ಯಾಕೆ ಓ..ಹೆಣ್ಣೇ
            ಜವಾಬು ಕೊಟ್ಟು ಜೂರತ್ತಡಗಿಸ ಜಟ್ಟಿ ಇಲ್ಲೇ ಇದ್ದಾನೇ
            ಅಹ್.. ಜಟ್ಟಿ ಇಲ್ಲೇ ಇದ್ದಾನೇ ತಿಳಿಯದೇ ಇದ್ದವರ್ಯಾರು ಇಲ್ಲ
            ಹೇಳ್ತಿನಿ ಕೇಳೇ ಕಿವಿಗೊಟ್ಟು ಹಳ್ಳಿಯ ಹುಡುಗೂರು ಕೇಳಿ ಹೇಳಿದ
            ತಂಗಳ ಸರಕು ನಿನ್ ಒಗಟೂ.. ಆಹ್ಹಾ.. ತಂಗಳ ಸರಕು ನಿನ್ ಒಗಟೂ.
           ಜಿಂಗನಕ್ ಜಿಂಗನಕ್ ಜಿಂಗನಕ್ ಆಹಾ.. ಜಿಂಗನಕ್ ಜಿಂಗನಕ್ ಜಿಂಗನಕ್
           ಒಹೋ.. ಜಿಂಗನಕ್ ಜಿಂಗನಕ್ ಜಿಂಗನಕ್ ..ಹ್ಹಾ,,,
         
ಗಂಡು : ಹರಕು ಬಿಳಿಯ ಟೋಪಿ ಅಂದರೇ ಅರ್ಥ.. ಚಂದಿರ
           ತಲೆಯಲ್ಲಿಟ್ಟು ತಿರುಗೋಣ ಅಂದ್ರೇ ಚಂದ್ರಶೇಖರ
           ನಮ್ಮ ಪರಮೇಶ್ವರಾ...
           ಹರಕು ಬಿಳಿಯ ಟೋಪಿ ಅಂದರೇ ಅರ್ಥ.. ಚಂದಿರ
           ತಲೆಯಲ್ಲಿಟ್ಟು ತಿರುಗೋಣ ಅಂದ್ರೇ ಚಂದ್ರಶೇಖರ
           ನಮ್ಮ ಪರಮೇಶ್ವರಾ...
           ದಕ್ಷ ಯಜ್ಞ ಕುಂಡದಲ್ಲಿ ಹಾರಿ ಸತ್ತೋಳು
           ದಕ್ಷ ಯಜ್ಞ ಕುಂಡದಲ್ಲಿ ಹಾರಿ ಸತ್ತೋಳು
           ಗಿರಿಜೆಯಾಗಿ ಹುಟ್ಟಿ ಬಂದು ಕೈಯ್ ಹಿಡಿದಳು
           ಗಿರಿಜೆಯಾಗಿ ಹುಟ್ಟಿ ಬಂದು ಕೈಯ್ ಹಿಡಿದಳು.. ಶಿವನ ಕೈಯ್ ಹಿಡಿದಳು

ಗಂಡು : ಓಓಓಓಓ...ಹೂಂ ..  ಗಣಪತಿ... ಷಣ್ಮುಖ..
           ಗಣಪತಿ ಷಣ್ಮುಖ ಗಂಗೆ ಚಂದಿರ ಕೊರಳಿನ ಹಾವು ಮತ್ತೇ
           ಗಣಪತಿ ಷಣ್ಮುಖ ಗಂಗೆ ಚಂದಿರ ಕೊರಳಿನ ಹಾವು ಮತ್ತೇ
           ಹಣೆಯಲಿ ಬೆಂಕಿ ವಾಹನ ನಂದಿ ಸೇರಿದರೆಲ್ಲಾ ಹತ್ತಾಯಿತೇ
           ಆಹ್ಹಾ.. ಸೇರಿದರೆಲ್ಲಾ ಹತ್ತಾಯಿತೇ
           ನಂದಿಗೆ ಸಿಂಹ ಇಲಿಗೆ ಹಾವೂ..
           ನಂದಿಗೆ ಸಿಂಹ ಇಲಿಗೆ ಹಾವೂ ಹಾವಿಗೆ ನವಿಲು ವೈರಿಯೂ
          ಒಂದಕೆ ಒಂದು ಹೊಂದದೇ ಇದ್ದರೂ ತುಂಬಿದೆ ಅಲ್ಲಿ ಶಾಂತಿಯು
          ಒಟ್ಟಿಗೆ ಹೀಗೇ ಬಾಳಿ ಅಂತಾ ದೇವರ ಸಾರು ನೀತಿಯೂ
          ಒಟ್ಟಿಗೆ ಹೀಗೇ ಬಾಳಿ ಅಂತಾ ದೇವರ ಸಾರು ನೀತಿಯೂ
--------------------------------------------------------------------------------------------------------------------------

No comments:

Post a Comment