- ಬರದೇ ನೀನೂ ನನ್ನ ಹೆಸರ ನನ್ನ (ಪಿ.ಬಿ.ಎಸ್.)
- ಬರದೆ ನೀನೂ ನಿನ್ನ ಹೆಸರ ನನ್ನ
- ಮದುವೆಯ ಈ ಬಂಧ ಅನುರಾಗದ
- ಈ ಚೆಲುವನು ಕಡೆದ
ಸೀತಾ (1970) - ಬರೆದೆ ನೀನು ನಿನ್ನ ಹೆಸರ
(ಆಆಆ ಆಆಆಅ ಆಆಆ ಆಆಆಅ )
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
(ಆಆಆ ಆಆಆಅ ಆಆಆ ಆಆಆಅ )
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
(ಆಆಆ ಆಆಆಅ ಆಆಆ ಆಆಆಅ )
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
--------------------------------------------------------------------------------------------------------------------------
ಸೀತಾ (1970) - ಬರೆದೆ ನೀನು ನಿನ್ನ ಹೆಸರ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಜಾನಕಿ.
ಬಂದು ನಿಂತೆ ಹೇಗೊ ಎನೋ ನನ್ನ ಮನದ ಗುಡಿಯಲೀ.....
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲೀ
ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆಯ ಅದರಲೀ
ಬೆರೆತು ಹೋದೆ ಮರೆತು ನಿಂದೆ ಅದರ ಮಧುರ ಸ್ವರದಲೀ.....
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲೀ
ಕಂಗಳಲ್ಲೇ ಕವನ ಬರೆದು ಕಳುಸಿದೆ ನೀ ನಿಲ್ಲಿಗೇ
ಅಂಗಳದೇ ಅರಳಿದಾಗ ನನ್ನ ಒಲವ ಮಲ್ಲಿಗೇ.....
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲೀ
ನಿನ್ನ ನಗೆಯ ಬಲೆಯ ಬೀಸಿ ಹಿಡಿವೇ ನನ್ನ ಜಾಲದೇ
ಬಂಧಿಸಿದೇ ನನ್ನ ನಿಂದು ನಿನ್ನ ಪ್ರೇಮಪಾಶದೇ.....
ಕಂಗಳಲ್ಲೇ ಕವನ ಬರೆದು ಕಳುಸಿದೆ ನೀ ನಿಲ್ಲಿಗೇ
ಬಂದು ನಿಂತೆ ಹೇಗೊ ಎನೋ ನನ್ನ ಮನದ ಗುಡಿಯಲೀ.....
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲೀ
-------------------------------------------------------------------------------------------------------------------------
ಸೀತಾ (1970) - ಮದುವೆಯ ಈ ಬಂಧ
ಸಾಹಿತ್ಯ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಮದುಮಗನಿಗೂ ಮದುಮಗಳಿಗೂ ಶುಭಾಶಯ
ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಸವಿಯಾದ ಮಾತು, ಸಿಹಿಯಾದ ಊಟ, ಸೊಗಸಾದ ನೋಟವಿರಲಿ
ಮನೆ ತುಂಬುವಂತ, ನಗೆ ಚೆಲ್ಲುವಂತ, ಮುದ್ದಾದ ಮಗುವು ಬರಲಿ...
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಮನಸ್ಸನ್ನು ಅರಿತು ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ಮನಸ್ಸನ್ನು ಅರಿತು ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು ವರುಷ, ಚೆಲ್ಲಿರಲಿ ಹರುಷ, ಬೆಳಗಿರಲಿ ಒಲವ ಹಣತೆ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಸಿರಿತನದ ಸಿಹಿಯು, ಬಡತನದ ಕಹಿಯು, ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು, ಬಡತನದ ಕಹಿಯು, ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ ತೋರುವುದೆ ರೀತಿ ಬಿರುಗಾಳಿ ಏನೆ ಬರಲಿ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ..
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
--------------------------------------------------------------------------------------------------------------------------
ಸೀತಾ (1970) - ಈ ಚೆಲುವನು ಕಡೆದ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ಆರ್. ಎನ್. ಜಯಗೋಪಾಲ್ ಗಾಯನ :ಪಿ.ಬಿ.ಎಸ್. ಎಲ್.ಆರ್.ಅಂಜಲಿ
ಹೆಣ್ಣು : ಅಹ್ಹಹ್ಹಹಾ.. ಅಹ್ಹಹ್ಹಹ್ಹಾ
ಗಂಡು : ಈ ಚೆಲುವನು ಕಡೆದಾ ದೇವನಿಗೇ ವಂದೆನೆ ಅಭಿನಂದನೇ
ಈ ಸೊಬಗನು ಕಂಡ ಕಣ್ಣುಗಳಿಗೇ ವಂದೆನೆ ಅಭಿನಂದನೇ
ಈ ಚೆಲುವನು ಕಡೆದಾ ದೇವನಿಗೇ ವಂದೆನೆ ಅಭಿನಂದನೇ
ಹೆಣ್ಣು : ಅಹ್ಹಹ್ಹಹಾ.. ಅಹ್ಹಹ್ಹಹ್ಹಾ
ಗಂಡು : ಮುತ್ತಿನ ಮಳೆಯೂ ಕರೆದಾಗ ಆರಿಸಿ ಕೊಳ್ಳಲೂ ನಾ ಬಂದೇ (ಹೂಂ )
ಗಂಡು : ಮುತ್ತಿನ ಮಳೆಯೂ ಕರೆದಾಗ ಆರಿಸಿ ಕೊಳ್ಳಲೂ ನಾ ಬಂದೇ (ಹೂಂ )
ಮುತ್ತಿನ ಮಳೆಯೂ ಕರೆದಾಗ ಆರಿಸಿ ಕೊಳ್ಳಲೂ ನಾ ಬಂದೇ
ಆಗ ಅರಿವಾಯಿತು ನನಗೇ...
ಆಗ ಅರಿವಾಯಿತು ಆ ಮುತ್ತು ನಿನ್ನ ಜಟಿಲ ಕಿಲ ನಗೆಯಂದೇ
ಈ ಚೆಲುವನು ಕಡೆದಾ ದೇವನಿಗೇ ವಂದೆನೆ ಅಭಿನಂದನೇಗಂಡು : ಹುಣ್ಣಿಮೆ ಅಂದವೇ ಹೆಣ್ಣಾಯಿತೋ ತಾವರೇ ಅವಳ ಕಣ್ಣಾಯಿತೋ
ಹುಣ್ಣಿಮೆ ಅಂದವೇ ಹೆಣ್ಣಾಯಿತೋ ತಾವರೇ ಅವಳ ಕಣ್ಣಾಯಿತೋ
ಸುಂದರೀ ನೀ ಬಹದಾರೀ...
ಸುಂದರೀ ನೀ ಬಹದಾರಿಯಿದು ಹೂಗಳ ನಗುವ ವನವಾಯಿತೋ
ಈ ಚೆಲುವನು ಕಡೆದಾ ದೇವನಿಗೇ ವಂದೆನೆ ಅಭಿನಂದನೇ
..
ಗಂಡು: ನಿನಗಿಂತ ನಿನ್ನ ನೆನಪೇ ಚೆಂದ ನಿನ್ನಂತೇ ಅದು ನಾಚದೂ.. ಓಓ ..
ನಿನಗಿಂತ ನಿನ್ನ ನೆನಪೇ ಚೆಂದ ನಿನ್ನಂತೇ ಅದು ನಾಚದೂ
ಮಿಂಚಲೋ ಬರುವೇ ನೀನೂ...
ಮಿಂಚಲೋ ಬರುವೇ ಮಿಂಚಲೂ ಹೋಗುವೇ ಅದು ನನ್ನನ್ನೂ ತೊರೆಯದು
ಈ ಚೆಲುವನು ಕಡೆದಾ ದೇವನಿಗೇ ವಂದೆನೆ ಅಭಿನಂದನೇ.. ಹಾಯ್
ಈ ಸೊಬಗನು ಕಂಡ ಕಣ್ಣುಗಳಿಗೇ ವಂದೆನೆ ಅಭಿನಂದನೇ
ವಂದೆನೆ ಅಭಿನಂದನೇ ವಂದೆನೆ ಅಭಿನಂದನೇ
ಹೆಣ್ಣು : ಅಹ್ಹಹ್ಹಹಾ.. ಅಹ್ಹಹ್ಹಹ್ಹಾ ಗಂಡು : ಅಹ್ಹಹ್ಹಹಾ.. ಅಹ್ಹಹ್ಹಹ್ಹಾ
--------------------------------------------------------------------------------------------------------------------------
No comments:
Post a Comment