145. ಎಮ್ಮೆ ತಮ್ಮಣ್ಣ (1966)




ಎಮ್ಮೆ ತಮ್ಮಣ್ಣ ಚಿತ್ರದ ಹಾಡುಗಳು 
  1. ಬೆಳ್ಳಿ ಹಕ್ಕಿ ಆಗುವ 
  2. ಕೊಳಲನೂದಿ ಕುಣಿವ 
  3. ನೀನಾರಿಗಾದೆಯೋ ಎಲೆ ಮಾನವ (ಪಿ.ಬಿ.ಎಸ್) 
  4. ನೀನಾರಿಗಾದೆಯೋ ಎಲೆ ಮಾನವ (ಯುಗಳ) 
  5. ಎಮ್ಮೆ ಎಲ್ಲ ಎಲ್ಲಣ್ಣ 
  6. ಕಣ್ಣೆರಡು ಕರೆಯುತಿದೆ 
  7. ಕತ್ತರಿಸು ಕತ್ತರಿಸು 

ಎಮ್ಮೆ ತಮ್ಮಣ್ಣ (1966) - ಬೆಳ್ಳೀ ಹಕ್ಕಿ ಆಗುವ ಬೆಳ್ಳೀ ಮೋಡಕೆ ಏರುವ
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ


ಹೆಣ್ಣು : ಲಲಲಲಲ್ಲಲಲಾ (ಲಲಲಲಲ್ಲಲಲಲಲಲಲಾ) ಲಲಲಲ್ಲಲಾ (ಲಲಲಲ್ಲಲಾ ) ಆಆಆ 
          ಬೆಳ್ಳೀ ಹಕ್ಕಿ ಆಗುವ ಬೆಳ್ಳೀ ಮೋಡಕೆ ಏರುವ
          ಬೆಳ್ಳೀ ಹಕ್ಕಿ ಆಗುವ ಬೆಳ್ಳೀ ಮೋಡಕೆ ಏರುವ
ಗಂಡು : ದೂರ ದೂರ ಸಾಗುವ ನಾವೇ ನಾವೇ ಆಗುವ
           ದೂರ ದೂರ ಸಾಗುವ ನಾವೇ ನಾವೇ ಆಗುವ
ಹೆಣ್ಣು : ಹಾರುವ                   ಗಂಡು : ತೇಲುವ
ಇಬ್ಬರು :  ಆನಂದದೇ
ಗಂಡು : ಬೆಳ್ಳೀ ಹಕ್ಕಿ ಆಗುವ   ಹೆಣ್ಣು : ಬೆಳ್ಳೀ ಮೋಡಕೆ ಏರುವ

ಗಂಡು : ನೂರೊಂದು ದಾರಿ ನಮಗಾಗಿದೆ ಬಾನಾಚೆ ಊರೆ ಬಳಿ ಬಂದಿದೆ
            ನೂರೊಂದು ದಾರಿ ನಮಗಾಗಿದೆ ಬಾನಾಚೆ ಊರೆ ಬಳಿ ಬಂದಿದೆ
ಹೆಣ್ಣು : ಏನೇ ಆದರೂ, ಎಲ್ಲೇ ಹೋದರೂ
          ಏನೇ ಆದರೂ, ಎಲ್ಲೇ ಹೋದರೂ ನಾನೇ ನೀನು ಎಂದಾಗಿದೆ
ಗಂಡು : ಆಹಾ.. (ಓಹೋ ) ಹೂಂಹೂಂಹೂಂಹೂಂಹೂಂಹೂಂ 
ಹೆಣ್ಣು : ಬೆಳ್ಳೀ ಹಕ್ಕಿ ಆಗುವ    ಗಂಡು : ಬೆಳ್ಳೀ ಮೋಡಕೆ ಏರುವ

ಗಂಡು : ಹೂ ಮೇಲೆ ದುಂಬಿ ಸುಖವಾಗಿದೆ
ಹೆಣ್ಣು : ಸಂತೋಷ ಗೀತೆ ಮೊದಲಾಗಿದೆ
ಗಂಡು : ಓಓಓಓಓಓಓ     ಹೆಣ್ಣು :  ಆಆಆಆಅ ಆಆಆ 
ಗಂಡು : ಹೂ ಮೇಲೆ ದುಂಬಿ ಸುಖವಾಗಿದೆ
ಹೆಣ್ಣು : ಸಂತೋಷ ಗೀತೆ ಮೊದಲಾಗಿದೆ
ಗಂಡು : ಕಣ್ಣು ತುಂಬಿದೆ,          ಹೆಣ್ಣು : ಮಾತು ಸೋತಿದೆ
ಗಂಡು : ಇನ್ನೂ ಏಕೋ ನೀ ದೂರದೆ
ಹೆಣ್ಣು : ಆಹಾ.. (ಓಹೋ ) ಆಆಆಅ ಆಆಆ 
ಇಬ್ಬರು : ಬೆಳ್ಳೀ ಹಕ್ಕಿ ಆಗುವ ಬೆಳ್ಳೀ ಮೋಡಕೆ ಏರುವ
            ಲಾಲಾಲ ಲಲಲಲ ಲಾಲಾಲ ಲಲಲಲ ಲಾಲಾಲ ಲಲಲಲ 
-------------------------------------------------------------------------------------------------------------------------

ಎಮ್ಮೆ ತಮ್ಮಣ್ಣ (1966) - ಕೊಳಲನೂದಿ ಕುಣಿವ ಪ್ರಿಯನೇ ಬಾರೋ
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಆರ್.ಏನ್.ಜಯಗೋಪಾಲ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಹೆಣ್ಣು: ಆಆಆ... ಆಆಆ.. ಆಆಅ.. ಅಅಅಅಅಅ ..   
         ಕೊಳಲನೂದಿ ಕುಣಿವ ಪ್ರಿಯನೇ ಬಾರೋ
         ಕೊಳಲನೂದಿ ಕುಣಿವ ಪ್ರಿಯನೇ ಬಾರೋ
         ಕೊಳಲನೂದಿ ಕುಣಿವ ಪ್ರಿಯನೇ ಕುಣಿಯುತ ಬಾ ನಲಿಯುತ ಬಾ ಈ... 
         ಕೊಳಲನೂದಿ ಕುಣಿವ ಪ್ರಿಯನೇ ಬಾರೋ

ಹೆಣ್ಣು : ಲಲಿತ ಲೀಲೆಗಳನು ನೆನೆದು... ಆಆಆ.. ಓಓಓಓಓ 
          ಲಲಿತ ಲೀಲೆಗಳನು ನೆನೆದು ಬಳಲಿ ನಿಂದೇನು ಬಾರೋ ಕೃಷ್ಣ
          ಚೆಲುವ ನೊಲಿದು ಬಿಗಿದು ಎನ್ನ 
          ಚೆಲುವ ನೊಲಿದು ಬಿಗಿದು ಎನ್ನ ಒಲಿದು ಸೇರೋ ನೀ ಪ್ರಿಯ ಒಲಿದು ಸೇರೋ ನೀ .. ಕೃಷ್ಣ 
          ಒಲಿದು ಸೇರೋ ಕುಣಿಯುತ ಬಾ ನಲಿಯುತಾ ಬಾ ನೀ...
          ಕೊಳಲನೂದಿ ಕುಣಿವ ಪ್ರಿಯನೇ ಬಾರೋ

ಗಂಡು : ಇನಿಯದೊಂದು ಮಾತನಾಡೇ.. ಆಆಆ ಆಆಆ  
            ಇನಿಯದೊಂದು ಮಾತನಾಡೆ ಯಮುನೆ ಬಳಿಗೆ ಬಾರೆಯೇನೇ 
            ಕೊಳಲ ನುಡಿಸಿ ಒಲಿಸಿ ನಿನ್ನ 
            ಕೊಳಲ ನುಡಿಸಿ ಒಲಿಸಿ ನಿನ್ನ ರಮಿಸೆ ಬಂದೇನೇ ಪ್ರಿಯೇ
            ರಮಿಸೆ ಬಂದೇನೇ ಪ್ರಿಯೇ  ರಮಿಸಿ ಬಂದೇ ಕರಪಿಡಿವೆ ಕನಿಕರಿಸೆ ನೀ 
            ಮುನಿದು ನಿಂದೆಯೇಕೆ ಪ್ರಿಯೇಳೆ ರಾಧೇ 
            ಮುನಿದು ನಿಂದೆಯೇಕೆ ಪ್ರಿಯೇಳೆ ರಾಧೇ 
ಹೆಣ್ಣು: ಕೊಳಲನೂದಿ ಕುಣಿವ ಪ್ರಿಯನೇ ಬಾರೋ
--------------------------------------------------------------------------------------------------------------------------

ಎಮ್ಮೆ ತಮ್ಮಣ್ಣ (1966) - ನೀನಾರಿಗಾದೆಯೋ ಎಲೇ  ಮಾನವಾ
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, 


ನೀನಾರಿಗಾದೆಯೋ.... ಎಲೇ  ಮಾನವಾ ಹರಿ ಹರಿ ಗೋವು ನಾನು ನೀನಾರಿಗಾದೆಯೋ.... 
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೇರಿ ವಿಭೂತಿಯಾದೆ
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೇರಿ ವಿಭೂತಿಯಾದೆ
ತಟ್ಟದೇ ಹಾಕಿದರೇ.... ಹೋಯ್ 
ತಟ್ಟದೇ ಹಾಕಿದರೇ ಮೇಲೂ ಗೊಬ್ಬರವಾದೇ ... ಮೇಲೂ ಗೊಬ್ಬರವಾದೆ ... 
ನೀನಾರಿಗಾದೆಯೋ .... 

ಹಾಗೇ ಹರಿಗೋಲಾದೇ ..  ಗಾಯ ಬೇಧಿಗೇಯಾದೇ.... ಹೋಯ್   
ಹಾಗೇ ಹರಿಗೋಲಾದೇ ..  ಗಾಯ ಬೇಧಿಗೇಯಾದೇ.... 
ರಾಯರ ಕಾಲಿಗೆ ಮುಳ್ಳುತ್ತುವಾದೇ  
ರಾಯರ ಕಾಲಿಗೆ ಮುಳ್ಳುತ್ತುವಾದೇ 
ಆಯವರಿಸು ಹೊಡೆಯೇ ಮಧುರ ಗಾನಕ್ಕಾದೇ  ಮಧುರ ಗಾನಕ್ಕಾದೇ  
ನೀನಾರಿಗಾದೆಯೋ ಎಲೇ  ಮಾನವಾ... ಹರಿ ಹರಿ ಗೋವು ನಾನು 
ಹೂಂ .. ಹರಿ ಹರಿ ಗೋವು ನಾನು ನೀನಾರಿಗಾದೆಯೋ 
--------------------------------------------------------------------------------------------------------------------------

ಎಮ್ಮೆ ತಮ್ಮಣ್ಣ (1966) - ನೀನಾರಿಗಾದೆಯೋ ಎಲೇ  ಮಾನವಾ
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ


ಗಂಡು : ನೀನಾರಿಗಾದೆಯೋ.... ಎಲೇ  ಮಾನವಾ ಹರಿ ಹರಿ ಗೋವು ನಾನು 
            ಹರಿ ಹರಿ ಗೋವು ನಾನು ನೀನಾರಿಗಾದೆಯೋ.... 

ಗಂಡು : ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೇ ವಿಭೂತಿಯಾದೆ
            ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೇ ವಿಭೂತಿಯಾದೆ
            ತಟ್ಟದೇ ಹಾಕಿದರೇ.... ಹೋಯ್ 
            ತಟ್ಟದೇ ಹಾಕಿದರೇ ಮೇಲೂ ಗೊಬ್ಬರವಾದೇ ... ಮೇಲೂ ಗೊಬ್ಬರವಾದೆ ... 
            ನೀನಾರಿಗಾದೆಯೋ.... ಎಲೇ  ಮಾನವಾ 
ಹೆಣ್ಣು : ಹೂಂ ಹೂಂ ಹರಿ ಹರಿ ಗೋವು ನಾನು 
ಗಂಡು : ಹೂಂ ಹೂಂ ಹರಿ ಹರಿ ಗೋವು ನಾನು 
ಇಬ್ಬರು : ನೀನಾರಿಗಾದೆಯೋ.... 

ಹೆಣ್ಣು : ಹಾಯೇ  ಹರಿಗೋಲಾದೇ ..  ರಾಯ ಧಿರಿಗೇಯಾದೇ....
          ಹಾಯೇ  ಹರಿಗೋಲಾದೇ ..  ರಾಯ ಧಿರಿಗೇಯಾದೇ... 
          ರಾಯರ ಕಾಲಿಗೆ ಮುಳ್ಳೋತ್ತುವಾದೇ  
          ರಾಯರ ಕಾಲಿಗೆ ಮುಳ್ಳೋತ್ತುವಾದೇ  
         ಆಯ ಅರಿತು ಹೊಡೆಯೇ ಮಧುರ ಗಾನಕ್ಕಾದೇ  
ಗಂಡು : ಮಧುರ ಗಾನಕ್ಕಾದೇ  
ಇಬ್ಬರು : ನೀನಾರಿಗಾದೆಯೋ ಎಲೇ  ಮಾನವಾ... ಹರಿ ಹರಿ ಗೋವು ನಾನು 
              ಹರಿ ಹರಿ ಗೋವು ನಾನು ನೀನಾರಿಗಾದೆಯೋ 
--------------------------------------------------------------------------------------------------------------------------

No comments:

Post a Comment