1025. ಸಿಂಹದ ಮರಿ ಸೈನ್ಯ (೧೯೮೧)

ಸಿಂಹದ ಮರಿ ಸೈನ್ಯ ಚಿತ್ರದ ಹಾಡುಗಳು 
  1. ಇಡ್ಲಿ ವಡಾ ಸಾಂಬಾರ ರುಚಿಯಾಗೋ 
  2. ಸಿಂಹದ ಮರಿ ಸೈನ್ಯ ನಮದು 
  3. ನಾನೇ ರಾಮ ನೀನೇ ಲಕ್ಷ್ಮಣ ಅವನೇ ಹನಮಂತ 
  4. ದೂರ ಏಕೆ ನಿಂತಿಹೆ 
ಸಿಂಹದ ಮರಿ ಸೈನ್ಯ (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯ ಶಂಕರ ಗಾಯಾನ: ಎಸ್.ಪಿ.ಬಿ. 

(ಲಲಲಲ್ಲಲಲಲ್ಲಾ )ಹಹ್ಹಾ ( ಲಲಲಲ್ಲಲಲಲ್ಲಾ ) ಹಹ್ಹಾ 
(ಲಲಲಲ್ಲಲಲಲ್ಲಾ ) ಹೋಹೋ ( ಲಲಲಲ್ಲಲಲಲ್ಲಾ )
ಗಂಡು : ಅಹ್ಹಹಹ್ಹಹ್ಹಹಾ ... ಒಹೋ ಹೋ ಹೋ  
           ಇಡ್ಲಿ ವಡೆ  ಸಾಂಬಾರ ರುಚಿಯಾಗಿ ಮಾಡೋ ಬಟ್ಲರ್ 
           ನಾನೇ ಟೈಟಲ್ ಹೋಲ್ಡರ್ ನಮ್ಮ ನಾಡಿಗೆ ನಾನೇ ಸೂಪರ್ 
           ಇಡ್ಲಿ ವಡೆ ಸಾಂಬಾರ ರುಚಿಯಾಗಿ ಮಾಡೋ ಬಟ್ಲರ್ 
           ನಾನೇ ಸೈಕಲ್ ಹೋಲ್ಡರ್ ನಮ್ಮ ನಾಡಿಗೆ ನಾನೇ ಸೂಪರ್ 
ಕೋರಸ್ : ಎಲ್ಲಾ ಡೋಂಗಿ ನಿನ್ನ ಮಾತುಗಳು (ಹೋಯ್ )
                ಜಂಭದ ಕೋಳಿ ಬೊಗಳೆಗಳು 
               ಆಹ್ ಎಲ್ಲಾ ಡೋಂಗಿ ನಿನ್ನ ಮಾತುಗಳು (ಹೋಯ್ )
               ಜಂಭದ ಕೋಳಿ ಬೊಗಳೆಗಳು 
ಗಂಡು : ಅಹ್ಹಹಾ ಇಡ್ಲಿ ವಡೆ  ಸಾಂಬಾರ ರುಚಿಯಾಗಿ ಮಾಡೋ ಬಟ್ಲರ್ 
           ನಾನೇ ಸೈಕಲ್ ಹೋಲ್ಡರ್ ನಮ್ಮ ನಾಡಿಗೆ ನಾನೇ ಸೂಪರ್ 
         
ಕೋರಸ್ : ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ 
ಗಂಡು : ಲಂಡನ್ ಬೆರ್ಲಿನ್ ಮಾಸ್ಕೊಗೆಲ್ಲಾ  ನಾನೇ ಎಕ್ಸಪೋರ್ಟರ್ 
            ಜಪಾನ ಚೈನಾಕೆ ಬೇಕಂತ ಬಂದೈತೆ ಆರ್ಡರ್  
            ಲಂಡನ್ ಬೆರ್ಲಿನ್ ಮಾಸ್ಕೊಗೆಲ್ಲಾ ನಾನೇ ಎಕ್ಸಪೋರ್ಟರ್ 
            ಜಪಾನ ಚೈನಾಕೆ ಬೇಕಂತ ಬಂದೈತೆ ಆರ್ಡರ್     
            ಸಂಬಳ ಜಾಸ್ತಿ ಮಾಡೋಕ ಹೋಗಿ ಫ್ಯಾಕ್ಟರಿ ಆಯ್ತು ಪಾಪರ್ 
            ಸಂಬಳ ಜಾಸ್ತಿ ಮಾಡೋಕ ಹೋಗಿ ಫ್ಯಾಕ್ಟರಿ ಆಯ್ತು ಪಾಪರ್ 
            ತಿನ್ನಕಿಲ್ಲದೇ ನಾನಾದೇ ನಿಮ್ಮತ್ರ ಬಟ್ಲರ್ 
 ಕೋರಸ್ : ಹೇ ಸಾಕು ನಿನ್ನ ಕಂತೆ ಪುರಾಣಗಳು (ವ್ವಾವ್ವವಾ )
                 ಸುಳ್ಳು  ಕಂತೆ ಬುರುಡೆಗಳು  (ಎಹೇ.. ಎಹೇ )     
                 ಹೇ ಸಾಕು ನಿನ್ನ ಕಂತೆ ಪುರಾಣಗಳು (ಓ..ಓ  )
                 ಸುಳ್ಳು  ಕಂತೆ ಬುರುಡೆಗಳು  
ಗಂಡು : ಅಹ್ಹಹಾ ಇಡ್ಲಿ ವಡೆ  ಸಾಂಬಾರ ರುಚಿಯಾಗಿ ಮಾಡೋ ಬಟ್ಲರ್ 
           ನಾನೇ ಸೈಕಲ್ ಹೋಲ್ಡರ್ ನಮ್ಮ ನಾಡಿಗೆ ನಾನೇ ಸೂಪರ್ 

ಕೋರಸ್: ಅಆ..  ಅಆ..  ಅಆ..  ಅಆ..  ಲಲ್ಲ ಲಲ್ಲ ಲಲ್ಲ 
ಗಂಡು : ಕ್ರಾಂತಿ ಶಾಂತಿ ಹೂಡೋರಗೆ ನನ್ನ ಇಡ್ಲಿ ಇನಸ್ಪೈರರ 
           ತಿನ್ನದೇ ಇದ್ದೋರ್ ಗುಂಪೆಲ್ಲಾ ಭ್ರಾಂತಿ ಇನ್ ದ್ ಫೇಲ್ಯೂರ್ 
           ಕ್ರಾಂತಿ ಶಾಂತಿ ಹೂಡೋರಗೆ ನನ್ನ ಇಡ್ಲಿ ಇನಸ್ಪೈರರ 
           ತಿನ್ನದೇ ಇದ್ದೋರ್ ಗುಂಪೆಲ್ಲಾ ಭ್ರಾಂತಿ ಇನ್ ದ್ ಫೇಲ್ಯೂರ್ 
           ಜಡ್ಜ್ ಮಂತ್ರಿ ಕೂಲಿ ಅನ್ನೋ ಬೇಧ ಇಲ್ಲದೇನೆ 
           ಜಡ್ಜ್ ಮಂತ್ರಿ ಕೂಲಿ ಅನ್ನೋ ಬೇಧ ಇಲ್ಲದೇನೆ 
            ಎಲ್ಲಾರ ಹೊಟ್ಟೆಗೆ ನುಗ್ಗುತೇ ರೋಗ ತರದೇನೇ 
            ಅಹ್ಹಹಾ ಇಡ್ಲಿ ವಡೆ  ಸಾಂಬಾರ ರುಚಿಯಾಗಿ ಮಾಡೋ ಬಟ್ಲರ್ 
           ನಾನೇ ಸೈಕಲ್ ಹೋಲ್ಡರ್ ನಮ್ಮ ನಾಡಿಗೆ ನಾನೇ ಸೂಪರ್ 
ಕೋರಸ್: ಲಲ್ಲ ಲಲ್ಲ ಲಲ್ಲ  (ಹೇ ಹೇ ) ಲಲ್ಲ ಲಲ್ಲ ಲಲ್ಲ (ಹೋ ಹೋ )
              ಲಲ್ಲ ಲಲ್ಲ ಲಲ್ಲ (ಹೋ..ಹೋ.. ) ಲಲ್ಲ ಲಲ್ಲ ಲಲ್ಲ (ಹೋ ಹೋ ಹೋ ಹೋ )
--------------------------------------------------------------------------------------------------------------------------

ಸಿಂಹದ ಮರಿ ಸೈನ್ಯ (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯ ಶಂಕರ ಗಾಯಾನ: ಎಸ್.ಪಿ.ಬಿ. ಎಸ್.ಜಾನಕೀ

ಗಂಡು : ಹೇ... (ಹೇ....ಹೇ... ಹೇ ) ಹೇ.. (ಹೇ....ಹೇ... ಹೇ... ಹೇ... ಹೇ... )
           ಸಿಂಹದ ಮರಿ ಸೈನ್ಯ ನಮದು ಸಿಂಹದ ಮರಿ ಸೈನ್ಯ .. ಹ್ಹಾಂ
ಕೋರಸ್ : ಸಿಂಹದ ಮರಿ ಸೈನ್ಯ ನಮದು ಸಿಂಹದ ಮರಿ ಸೈನ್ಯ
ಹೆಣ್ಣು : ವೈರಿಗಳ ದ್ರೋಹಿಗಳ ಎದುರಿಸಿ ಹೊರಟಿದೆ ಇಂದು
            ಸಿಂಹದ ಮರಿ ಸೈನ್ಯ
ಕೋರಸ್ : ನಮದು ಸಿಂಹದ ಮರಿ ಸೈನ್ಯ

ಗಂಡು : ಮುಳ್ಳಿನ ಹಾದಿಯೇ ಆಗಿರಲೀ ಕಲ್ಲಿನ ದಾರಿಯೇ ಆಗಿರಲೀ
ಹೆಣ್ಣು : ಮುಗಿಲಲಿ ಮಿಂಚೇ ಮೂಡಿರಲೀ ಸಿಡಿಲಿನ ಆರ್ಭಟ ತುಂಬಿರಲೀ
ಗಂಡು : ಮುಳ್ಳಿನ ಹಾದಿಯೇ ಆಗಿರಲೀ ಕಲ್ಲಿನ ದಾರಿಯೇ ಆಗಿರಲೀ
ಹೆಣ್ಣು : ಮುಗಿಲಲಿ ಮಿಂಚೇ ಮೂಡಿರಲೀ ಸಿಡಿಲಿನ ಆರ್ಭಟ ತುಂಬಿರಲೀ
ಗಂಡು : ಬೆಚ್ಚದೇ ನಾವೂ ಬೆದರದೇ ಮುಂದೇ
ಕೋರಸ್ : ಬೆಚ್ಚದೇ ನಾವೂ ಬೆದರದೇ ಮುಂದೇ ನಡೆವೆವು ಎಲ್ಲರೂ ಒಂದಾಗಿ
               ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
ಗಂಡು : ಸಿಂಹದ ಮರಿ ಸೈನ್ಯ
ಕೋರಸ್ : ನಮದು ಸಿಂಹದ ಮರಿ ಸೈನ್ಯ

ಹೆಣ್ಣು : ಧೈರ್ಯವೇ ದೇವರು ನಮಗೆಲ್ಲಾ ಸಾಹಸ ಜೀವವು ಸುಳ್ಳಲ್ಲಾ
ಗಂಡು : ನ್ಯಾಯಕೆ ಎಂದಿಂಗೂ ಸೋಲಿಲ್ಲಾ ಧರ್ಮಕೆ ಎಂದಿಗೂ ಸಾವಿಲ್ಲಾ
ಹೆಣ್ಣು : ಆ... ಧೈರ್ಯವೇ ದೇವರು ನಮಗೆಲ್ಲಾ ಸಾಹಸ ಜೀವವು ಸುಳ್ಳಲ್ಲಾ
ಗಂಡು : ನ್ಯಾಯಕೆ ಎಂದಿಂಗೂ ಸೋಲಿಲ್ಲಾ ಧರ್ಮಕೆ ಎಂದಿಗೂ ಸಾವಿಲ್ಲಾ
ಹೆಣ್ಣು : ಸಿಡಿಯಲಿ ಗುಂಡು ನಡುಗಲಿ ಭೂಮಿ
ಕೋರಸ್ : ಸಿಡಿಯಲಿ ಗುಂಡು ನಡುಗಲಿ ಭೂಮಿ ಎಂದಿಗೂ ನಾವು ಹೆದರೋಲ್ಲಾ
               ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
              ಸಿಂಹದ ಮರಿ ಸೈನ್ಯ ನಮದು ಸಿಂಹದ ಮರಿ ಸೈನ್ಯ
               ವೈರಿಗಳ (ಹ್ಹಆ )ದ್ರೋಹಿಗಳ (ಹ್ಹಆ ) ಎದುರಿಸಿ ಹೊರಟಿದೆ ಇಂದು
              ಸಿಂಹದ ಮರಿ ಸೈನ್ಯ ನಮದು ಸಿಂಹದ ಮರಿ ಸೈನ್ಯ
              ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
             ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
             ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
--------------------------------------------------------------------------------------------------------------------------

ಸಿಂಹದ ಮರಿ ಸೈನ್ಯ (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯ ಶಂಕರ ಗಾಯಾನ: ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ 
            ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ 
            ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ 
ಹೆಣ್ಣು : ಆ ರಾವಣನು ಸೋತ ಆ ರಾಕ್ಷಸನು ಗೋತಾ  
         ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ 
         ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ 
         ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ 
ಗಂಡು : ಆ ರಾವಣನು ಸೋತ ಆ ರಾಕ್ಷಸನು ಗೋತಾ  

ಕೋರಸ್ : ಲಲಲ ಲ್ಲಲಾ..  ಲಲ್ಲಲಲಾ ಲಲ್ಲಲಲಾ ಲಾಲಲ್ಲಲ್ಲಲಾ 
ಗಂಡು : ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡುವ ಶಕ್ತಿಯು ನಮಗುಂಟೂ 
ಹೆಣ್ಣು : ಒಳ್ಳೆಯದೇನೂ ಕೆಟ್ಟದು ಏನೋ ಕಾಣೋ ಕಣ್ಣಂತೂ 
ಗಂಡು : ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡುವ ಶಕ್ತಿಯು ನಮಗುಂಟೂ 
ಹೆಣ್ಣು : ಒಳ್ಳೆಯದೇನೂ ಕೆಟ್ಟದು ಏನೋ ಕಾಣೋ ಕಣ್ಣಂತೂ 
ಗಂಡು : ಸಿಂಹದ ಮರಿಗಳು ನಾವೂ ಸಿಡಿಲಿನ ಕಿಡಿಗಳು ನಾವೂ 
ಕೋರಸ್ : ಸಿಂಹದ ಮರಿಗಳು ನಾವೂ ಸಿಡಿಲಿನ ಕಿಡಿಗಳು ನಾವೂ 
ಎಲ್ಲರು : ಏನೇ ಬರಲಿ ಹೆದರದೇ ಕೆಲಸ ಸಾಗಿಸೋ ಛಲವುಂಟು 
ಗಂಡು : ಹೇ... ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ 
ಹೆಣ್ಣು : ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ  
          ಆ ರಾವಣನು ಸೋತ ಆ ರಾಕ್ಷಸನು ಗೋತಾ  

ಹೆಣ್ಣು : ಲಂಕೆಯ ಸುಟ್ಟ ಆ ಹನುಮಂತ ನಮ್ಮವನೇ ತಾನೇ 
ಗಂಡು : ಹರಿಯನು ಧರೆಗೆ ಕರೆದಾ ಧೃವನು ಬಾಲಕನು ತಾನೇ 
ಹೆಣ್ಣು : ಲಂಕೆಯ ಸುಟ್ಟ ಆ ಹನುಮಂತ ನಮ್ಮವನೇ ತಾನೇ 
ಗಂಡು : ಹರಿಯನು ಧರೆಗೆ ಕರೆದಾ ಧೃವನು ಬಾಲಕನು ತಾನೇ ಹೇ.... 
ಹೆಣ್ಣು : ಮನಸೊಂದ್ದಿದ್ದರೆ ಸಾಕು ಬೇರೆ ಏನಿರಬೇಕು  
ಎಲ್ಲರು : ಮನಸೊಂದ್ದಿದ್ದರೆ ಸಾಕು ಬೇರೆ ಏನಿರಬೇಕು  
           ಏನೇ ಬರಲಿ ಒಗ್ಗಟಿರಲಿ ಗಲ್ಲುವುದು ನಾವೇ 
ಗಂಡು : ಹೇ... ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ 
ಹೆಣ್ಣು : ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ  
ಎಲ್ಲರು :  ಆ ರಾವಣನು ಸೋತ ಆ ರಾಕ್ಷಸನು ಗೋತಾ  
             ಆ ರಾವಣನು ಸೋತ ಆ ರಾಕ್ಷಸನು ಗೋತಾ  
             ಆ ರಾವಣನು ಸೋತ ಆ ರಾಕ್ಷಸನು ಗೋತಾ  
--------------------------------------------------------------------------------------------------------------------------

ಸಿಂಹದ ಮರಿ ಸೈನ್ಯ (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯ ಶಂಕರ ಗಾಯಾನ: ಎಸ್.ಜಾನಕೀ 

ದೂರ ಯಾಕೆ ನಿಂತಿಹೇ ಜೀವ ಕಾದಿದೇ
ಮೋಹದಿಂದ ಸೋತಿದೆ ಮನಸು ಮಾಗಿದೇ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ...   ಬಾರೋ ಬಾ...

ಆಆ... ಆಆಆ... ಆ..ಆ....
ಹಸನಾದ ಲಾವಣ್ಯ ಹೊಸದಾದ ಯೌವ್ವನ
ತನು ತುಂಬಿ ಏನೇನೋ ಹೊಸ ಆಸೆ ತಾಳಿದೇ
ಆಆಆ... ಹಸನಾದ ಲಾವಣ್ಯ ಹೊಸದಾದ ಯೌವ್ವನ
ತನು ತುಂಬಿ ಏನೇನೋ ಹೊಸ ಆಸೆ ತಾಳಿದೇ
ಈ ತಂಪಿನ್ನ ಶೃಂಗಾರ ಸವಿದಾಡೋ ಚೆನ್ನ... 
ಸವಿದಾಡೋ ಚೆನ್ನ... ಸವಿದಾಡೋ ಚೆನ್ನ...
ದೂರ ಯಾಕೆ ನಿಂತಿಹೇ ಜೀವ ಕಾದಿದೇ
ಮೋಹದಿಂದ ಸೋತಿದೆ ಮನಸು ಮಾಗಿದೇ
ಸಂತಸದಿಂದ ಕೂಡಿ ಸುಖ ನೀ ಬಾಳುವಾ...
ಬಾರೋ ಬಾ...   ಬಾರೋ ಬಾ...

ಇಂದುಂಟು ಈ ರಾಗ ಅನುರಾಗ ಭೋಗ
ಸೌಜನ್ಯ ಸೌಂದರ್ಯ ಸವಿದಾಡೋ ಯೋಗ
ಆಆಆ... ಇಂದುಂಟು ಈ ರಾಗ ಅನುರಾಗ ಭೋಗ
ಸೌಜನ್ಯ ಸೌಂದರ್ಯ ಸವಿದಾಡೋ ಯೋಗ
ಮುಂದೆಂದು ಈ ಯೋಗ ಸಂಯೋಗವಾಗದು 
ಸಂಯೋಗವಾಗದು ಸಂಯೋಗವಾಗದು 
ದೂರ ಯಾಕೆ ನಿಂತಿಹೇ ಜೀವ ಕಾದಿದೇ
ಮೋಹದಿಂದ ಸೋತಿದೆ ಮನಸು ಮಾಗಿದೇ
ಸಂತಸದಿಂದ ಕೂಡಿ ಸುಖ ನೀ ಬಾಳುವಾ...
ಬಾರೋ ಬಾ...   ಬಾರೋ ಬಾ...
ಆಆಆಆಆಆ.... 
--------------------------------------------------------------------------------------------------------------------------

No comments:

Post a Comment