106. ಮತ್ತೆ ಹಾಡಿತು ಕೋಗಿಲೆ (1990)

ಮತ್ತೇ ಹಾಡಿತು ಕೋಗಿಲೇ ಚಿತ್ರದ ಹಾಡುಗಳು 
  1. ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
  2. ಹಾಡುವ ಆಸೆ ಹಾಡದು ಏಕೊ ಹಾರುವ ಆಸೆ ಹಾರದು ಏಕೊ
  3. ನಾನಿಂದು ನಿನ್ನಿಂದ ಆನಂದ ನೋಡಿದೆ
  4. ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೆ
  5. ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ ಕೈ ತಟ್ಟಿ ಕುಣಿದಾಗಲೇ...
  6. ತನನ ನಾ ಹಾಡುವೆ ಥೈಥಕಾ ಕುಣಿಯುವೇ ನಿನ್ನಂತೆ ನಾನೀಗ ಹಾಡುವೇ
ಮತ್ತೆ ಹಾಡಿತು ಕೋಗಿಲೆ (1990) ...ಬಾ ನನ್ನ ಸಂಗೀತ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಬಾ ನನ್ನ ಸಂಗೀತಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿoದು ಶುಭಾಶಯ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ

ಎಂದೆಂದೂ ಬದುಕಲ್ಲಿ ಸಂತೋಷವೇ ತುoಬಲಿ
ಒಲವೂ ಹೂವಾಗಿ ಗೆಲುವು ತಂಪಾಗಿ ಹಿತವೇ ತುoಬಲಿ
ಆ...ಆ....ಆ...ಆ....
ಮಾತಾಡೋ ಮಾತೆಲ್ಲ ಒಂದೊಂದು ಮುತ್ತಾಗಲಿ
ಚೆಲುವೆ ನೀ ನನ್ನ ಸನಿಹ ಬಂದಾಗ ಹಿತವೇ ತುoಬಲಿ
ನಗುನಗುತಾ ನಾವು ದಿನವೂ ಸೇರಿ ನಲ್ಲೇ ಹೀಗೆ ನಲಿಯುವ
ಕನಸಲ್ಲಿ ತೇಲಾಡುವ ಸವಿ ಕನಸಲ್ಲಿ ತೇಲಾಡುವ
ಬಾ ನನ್ನ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿoದು ಶುಭಾಶಯ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ

ಸಿಂಗಾರಿ ಬದುಕಲ್ಲಿ ಶೃoಗಾರವೆ ತುoಬಲಿ
ನನ್ನ ಬಂಗಾರಿ ನನ್ನ ವೈಯಾರಿ ದಿನವೂ ನಲಿಯಲಿ
ಆ...ಆ....ಆ...ಆ....
ನಿನ್ನoಥ ಹೆಣ್ಣನ್ನು ಇನ್ನೆಲ್ಲಿ ನಾ ಕಾಣಲಿ
ನಿನ್ನ ಸೌಂದರ್ಯ ಎಂದೂ ಹೀಗೇನೇ ನಯನ ಸೆಳೆಯಲಿ
ನಿನ್ನ ಕಂಡ ಮೇಲೇ ನನ್ನ ನಲ್ಲೇ ನೂರು ವರುಷ ಬದುಕುವ
ಹೊಸ ಆಸೆ ನನಗಾಗಿದೆ ಈಗ ಹೊಸ ಆಸೆ ನನಗಾಗಿದೆ
ಬಾ ನನ್ನ ಸಂಗೀತ
ಬಾ ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿoದು ಶುಭಾಶಯ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
--------------------------------------------------------------------------------------------------------------------------

ಮತ್ತೆ ಹಾಡಿತು ಕೋಗಿಲೆ (೧೯೯೦) - ಹಾಡುವ ಆಸೆ ಹಾಡದು ಏಕೊ ಹಾರುವ ಆಸೆ ಹಾರದು ಏಕೊ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಹಾಡುವ ಆಸೆ ಹಾಡದು ಏಕೊ ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡದು ಏಕೊ  ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡದು ಏಕೊ   ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ

ಚಳಿಯನು ತಾಳದೆ, ನೆಮ್ಮದಿ ಇಲ್ಲದೆ ಬಾಳುವ ದಾರಿಯು, ಕಣ್ಣಿಗೆ ಕಾಣದೆ
ಹಾಡಲು ತೋರದೆ ಸೊರಗಿದೆ ಇರುಳು ಜಾರದೆ, ಹಗಲು ಮೂಡದೆ
ಬಯಸಿದ ಶಾಂತಿಯು, ಬದುಕಲಿ ಬಾರದೆ ಮತ್ತೆ ವಸಂತವು ಕುಣಿಸದೆ
ಚೆಲುವೆ ನೀ ಏಕೆ ಬರಿ ಕನಸು ಕಾಣುತಲಿರುವೆ
ಹಾಡುವ ಆಸೆ ಹಾಡದು ಏಕೊ  ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡದು ಏಕೊ  ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ

ಬಯಕೆಯ ಹೂಗಳು, ಬಾಡುತ ಹೋದರೂ ವರವನು ದೇವರು, ನೀಡದೆ ಹೋದರೂ
ನಗುತ ಬದುಕುವ ಜಾಣನು ಬಾನಲಿ ಹಾರುತ, ಕನಸನು ಕಾಣುತ ಹೂವಿನ ಹಾಸಿಗೆ,
ಬಾಳಿದು ಎನ್ನುತ ನಲಿದು ಕೋಗಿಲೆ ಹಾಡಿತೆ
ಕೊರಗಿ ದಿನ ಕೊರಗಿ ಉರಿ ಬಿಸಿಲಲಿ ಬೇಯಲೆ ಬೇಕೆ
ಹಾಡುವ ಆಸೆ ಹಾಡದು ಏಕೊ  ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ ಕೋಗಿಲೆ ಮೂಕಾಗಿದೆ
--------------------------------------------------------------------------------------------------------------------------

ಮತ್ತೆ ಹಾಡಿತು ಕೋಗಿಲೆ (1990) - ನಾನಿಂದು ನಿನ್ನಿಂದ ಆನಂದ ನೋಡಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ  ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ಹೂವಂತ ಮೈಯನು, ಕೈಸೋಕಿದಾಗಲೆ ತನುವಲ್ಲಿ ನಲ್ಲೆ, ಮಿಂಚೇತಕೆ
ಹೂವಂತ ಮೈಯನು, ಕೈಸೋಕಿದಾಗಲೆ ತನುವಲ್ಲಿ ನಲ್ಲೆ, ಮಿಂಚೇತಕೆ
ನೂರಾಸೆ ಹೀಗೇತಕೆ ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದೂ, ಸುಖ ತುಂಬುವೆ ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದೂ, ಸುಖ ತುಂಬುವೆ ನಿನಗಾಗಿ ನಾ ಬಾಳುವೆ
ನಾನಿಂದು ನಿನ್ನಿಂದ ಆನಂದ ನೋಡಿದೆ ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು  ಜೊತೆಯಲ್ಲಿ ನೀನು, ಬಂದಾಗಲೆ
ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು  ಜೊತೆಯಲ್ಲಿ ನೀನು, ಬಂದಾಗಲೆ
ಬದುಕೆಲ್ಲವೂ ಪ್ರೇಮವೇ ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ ಕೊಡಲೇನೆ ಸಿಹಿ ಕಾಣಿಕೆ
ನಾನಿಂದು ನಿನ್ನಿಂದ ಆನಂದ ನೋಡಿದೆ ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
----------------------------------------------------------------------------------------------------------------------

ಮತ್ತೆ ಹಾಡಿತು ಕೋಗಿಲೆ (1990) - ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.

ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೆ
ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು  ಮಾವು ಚಿಗುರಿತು ಆಗಲೆ

ರವಿಯು ಬಾನಲಿ ಮೂಡಿ ಬರಲು ಉಷೆಯು ಆರತಿ ತಂದಳು
ಏಳು ಕಂದನೆ ಏಳು ಎನುತ  ನಿನ್ನ ಬಳಿಗೆ ಬಂದಳು
ಕಣ್ಣ ತುಂಬುವ ಅಂದ ಎಲ್ಲೆಡೆ ನಿನ್ನ ಕೂಗಿದೆ ಕೇಳದೆ
ನವ ವಸಂತದ ಗಾಳಿ ಬೀಸಲು  ಮಾವು ಚಿಗುರಿತು ಆಗಲೆ
ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು  ಮಾವು ಚಿಗುರಿತು ಆಗಲೆ

ನನ್ನ ಹಾಡಿಗೆ ದನಿಯ ಕೊಡದೆ ಏಕೆ ಮಲಗಿದೆ ಸುಮ್ಮನೆ
ಮಾತನಾಡದೆ ಏಕೆ ಹೀಗೆ  ಮೂಕನಾದೆ ಕಂದನೆ
ಪ್ರೇಮ ತುಂಬಿದ ಉದಯ ರಾಗಕೆ ನಿನ್ನ ಶೃತಿಯ ಬೆರೆಸದೆ
ಎದೆಗೆ ಸಂತಸ ತಾರದೆ ನಿನ್ನ ಮನವು ಎಲ್ಲಿದೆ
ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೆ
ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು  ಮತ್ತೆ ಹಾಡಿತು ಕೋಗಿಲೆ
---------------------------------------------------------------------------------------------------------------------

ಮತ್ತೆ ಹಾಡಿತು ಕೋಗಿಲೆ (1990) - ನಿಮ್ಮನ್ನು ಕಂಡಾಗಲೇ 
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಎಸ್.ಪಿ.ಬಿ. ಮತ್ತು ಚಿತ್ರಾ 

ಆಯಿ ಆಯಿ ಯೋ ಲಲ್ಲಲ್ಲಲ ಲಲ್ಲಲ್ಲಲ 
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ  ಕೈ ತಟ್ಟಿ ಕುಣಿದಾಗಲೇ... ಕಮಾನ್ 
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ  ಕೈ ತಟ್ಟಿ ಕುಣಿದಾಗಲೇ... 
ಹೊಸ ಹಾಡಿಗೆ  ಹೊಸ ಪಲ್ಲವಿ ಬಂತು ನನ್ನಲ್ಲಿ ... ।। ಪ ।।

ಲಾಲಾಲ್ ಲಲ್ಲಲಾ ತಗತತಗಟತಾ
ನಮ್ಮ ನಿಮ್ಮ ಪ್ರೇಮ ಈ ನಿಮ್ಮ ನನ್ನ ಸ್ನೇಹ  ನೂರು ಜನ್ಮ ತಂದ  ಸಂಬಂಧ ... 
ನಮ್ಮ ನಿಮ್ಮ ಪ್ರೇಮ ಈ ನಿಮ್ಮ ನನ್ನ ಸ್ನೇಹ  ನೂರು ಜನ್ಮ ತಂದ  ಸಂಬಂಧ ... 
ನಿಮ್ಮೆದುರು ನಿಂತಾಗಲೇ ಸವಿಯಾದ ನೆನಪು ನನ್ನಲೀ ... 
ನೀವು ನಕ್ಕರೇನೇ ಈ ನನ್ನ ಬದುಕು ಚಂದ ನಿಮ್ಮ ಹರುಷ ನನ್ನ ಸಂತೋಷ 
ನಿಮಗಾಗಿ ಎಂದಿದಿಗೂ ನೂರಾರು ಹಾಡ ಹಾಡುವೇ... 
ನನ್ನ ಮಾತು ಸರಿ ತಾನೇ ...  ನನ್ನ ಮಾತು ಸರಿ ತಾನೇ  ಬಂದೋರೆ ಹೇಳಿ ಹೇಳಿ 
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ ಹೇ..   ಕೈ ತಟ್ಟಿ ಕುಣಿದಾಗಲೇ... 
ಹೊಸ ಹಾಡಿಗೆ  ಹೊಸ ಪಲ್ಲವಿ ಬಂತು ನನ್ನಲ್ಲಿ ... ।। ೧ ।।

ಏನೇ ಚಿಂತೆ ಇರಲಿ ಓ ಏನೇ ನೋವೇ ಬರಲಿ ಇಲ್ಲಿ ಎಲ್ಲ ಮರೆವ ಒಂದಾಗಿ ... 
ಏನೇ ಚಿಂತೆ ಇರಲಿ ಓ ಏನೇ ನೋವೇ ಬರಲಿ ಇಲ್ಲಿ ಎಲ್ಲ ಮರೆವ ಒಂದಾಗಿ ... 
ನನ್ನಂತೆ ನೀವಾಗಿರಿ ಜೊತೆಯಾಗಿ ನೀವೂ ಹಾಡಿರಿ...  ಹ್ಹಾಂ 
ಯಾವ ರಾಗವೇನು ಅದು ಯಾವ ತಾಳವೇನೂ ನೀವು ನನ್ನ ಮೆಚ್ಚಿಕೊಂಡಾಗ 
ಮಾತೆಲ್ಲಾ ಹಾಡಂತೆ ಇಂಪಾದ ಗಾನದಂತೆಯೇ 
ನನಗೆಂದು ಜಯವೆಂದು...  ನನಗೆಂದು ಜಯವೆಂದು ಹರಸಿ ನನ್ನ ಹಾಡಿ ಹಾಡಿ...
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ ಹೇ..   ಅರೇ..  ಕೈ ತಟ್ಟಿ ಕುಣಿದಾಗಲೇ... 
ಹೊಸ ಹಾಡಿಗೆ  ಹೊಸ ಪಲ್ಲವಿ ಬಂತು ನನ್ನಲ್ಲಿ ... ।। ೧ ।।
--------------------------------------------------------------------------------------------------------------------------

ಮತ್ತೆ ಹಾಡಿತು ಕೋಗಿಲೆ (1990) - ನಿಮ್ಮನ್ನು ಕಂಡಾಗಲೇ 
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಎಸ್.ಪಿ.ಬಿ. ಮತ್ತು ಎಸ್.ಜಾನಕೀ

ಕ್ಕುಕ್ಕೂಕುಕುಕು  ಕ್ಕುಕ್ಕೂಕುಕುಕು ತಾರತತ ತಾರತತ 
ಜೂಜುಜೂಜು   ಜೂಜುಜೂಜು   ಜೂಜುಜೂಜು   
ಪಸನಿ ಪಗ ಪಸನಿ ಪಗ    ಪನಿದ ಪಗ ಪನಿದ ಪಗ
ಡಡಲಲ ಡಡಲಲ ಡಡಲಲ ಡಡಲಲ ಡಡಲಲ 
ಜುಮ್ ಚಕ ಜುಮ್ ಚಕ ಜುಮ್ ಚಕಜುಮ್ ಚಕ 
ತನನ ನಾ ಹಾಡುವೆ ಥೈಥಕಾ ಕುಣಿಯುವೇ 
ನಿನ್ನಂತೆ ನಾನೀಗ ಹಾಡುವೇ 
ನಾವೂ ಜೊತೆಯಾಗಿ ಈಗ ಹೀತವಾಗಿ 
ಕಣ್ಣಿಗಾನಂದ ತುಂಬುವಾ 
ತನನ ನಾ ಹಾಡುವೆ               ಥೈಥಕಾ ಕುಣಿಯುವೇ 
ತನನ ನಾ ಹಾಡುವೆ              ನಿನ್ನಂತೆ ನಾನೀಗ ಹಾಡುವೇ 
ಜೂಜುಜೂಜು ಜೂಜು ಜೂಜು ಜೂಜುಜೂಜು ಜೂಜು 

ಚಿಕ್ಕೋರು ಆದರೇನು ದೊಡ್ಡೋರು ಆದರೇನು ಸಂತೋಷ ಬಯಸೋರೆ ಎಲ್ಲಾ..  
ಚಿಕ್ಕೋರು ಆದರೇನು ದೊಡ್ಡೋರು ಆದರೇನು ಸಂತೋಷ ಬಯಸೋರೆ ಎಲ್ಲಾ.. 
ಸರಸದಿ ಬೆರೆಯುತಾ  ನಕ್ಕು ನಲಿಯೋರೆ ಎಲ್ಲಾ 
ಆ.. ಡಿಸ್ಕೊ ಡ್ಯಾನ್ಸ್ ಮಾಡಲೇನು ಟ್ವಿಸ್ಟ್ ಬ್ರೇಕ್ ಮಾಡಲೇನು 
ಏನೇನೂ ಬೇಕೆಂದು ಹೇಳಿ 
ಕುಣಿಸುವೆ ನಿಮ್ಮನ್ನು ನನ್ನ ಜೊತೆಯಲ್ಲಿ ನೋಡಿ 
ನನ್ನ ಜೊತೆಯಲ್ಲಿ ನೋಡಿ.. ಕೊಕ್ಕೂ...
ತನನ ನಾ ಹಾಡುವೆ  ಥೈಥಕಾ ಕುಣಿಯುವೇ  
ನಿನ್ನಂತೆ ನಾನೀಗ ಹಾಡುವೇ 
ನಾವೂ ಜೊತೆಯಾಗಿ ಈಗ ಹೀತವಾಗಿ  ಕಣ್ಣಿಗಾನಂದ ತುಂಬುವಾ 
ತನನ ನಾ ಹಾಡುವೆ               ಥೈಥಕಾ ಕುಣಿಯುವೇ 
ತನನ ನಾ ಹಾಡುವೆ              ನಿನ್ನಂತೆ ನಾನೀಗ ಹಾಡುವೇ 

ಮನಸಲ್ಲಿ ಇರುವ ಚಿಂತೆ ಮರೆಯೋಣ ಎನ್ನುವಂತೆ ಒಂದಾಗಿ ಕೈತಟ್ಟಬೇಕು 
ಮನಸಲ್ಲಿ ಇರುವ ಚಿಂತೆ ಮರೆಯೋಣ ಎನ್ನುವಂತೆ ಒಂದಾಗಿ ಕೈತಟ್ಟಬೇಕು 
ಪ್ರೀತಿಯೇ ದೇವರು ಎಂದು ಕುಣಿದಾಡಬೇಕು
ಕಲ್ಲು ನೀರಾಗೋ ಹಾಗೇ ಮೊಗ್ಗು ಹೂವಾಗೋ ಹಾಗೇ ಸಂಗೀತವ ಹಾಡಬೇಕು
ಕನಸಿನ ಲೋಕದಿ ಎಲ್ಲ ತೇಲಾಡಬೇಕು... ಎಲ್ಲ ತೇಲಾಡಬೇಕು 
ತನನ ನಾ ಹಾಡುವೆ  ಥೈಥಕಾ ಕುಣಿಯುವೇ  
ನಿನ್ನಂತೆ ನಾನೀಗ ಹಾಡುವೇ 
ನಾವೂ ಜೊತೆಯಾಗಿ ಈಗ ಹೀತವಾಗಿ  ಕಣ್ಣಿಗಾನಂದ ತುಂಬುವಾ 
ತನನ ನಾ ಹಾಡುವೆ               ಥೈಥಕಾ ಕುಣಿಯುವೇ 
ತನನ ನಾ ಹಾಡುವೆ              ನಿನ್ನಂತೆ ನಾನೀಗ ಹಾಡುವೇ
---------------------------------------------------------------------------------------------------------------------

No comments:

Post a Comment