150. ಹುಡುಗಾಟದ ಹುಡುಗಿ (1976)

ಹುಡುಗಾಟದ ಹುಡುಗಿ ಚಿತ್ರದ ಹಾಡುಗಳು 
  1. ಬೆಳ್ಳಿಯ ತೆರೆಯ ಮೋಡದ ಮರೆಯ 
  2. ಇಸವಿಯೂ ಏನೋ ಎಪ್ಪತ್ತಾರೂ ವೇಷವ ನೋಡೇ (ಹೆಣ್ಣು)
  3. ಹೋಗೋ ಎನ್ನಲೂ ನೀನಾರೋ 
  4. ಇಸವಿಯೂ ಏನೋ ಎಪ್ಪತ್ತಾರೂ ವೇಷವ ನೋಡೇ
  5. ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ 
  6. ಯಾರೂ ಆಟಕ್ಕಿಳಿದವರಾರೂ 

ಹುಡುಗಾಟದ ಹುಡುಗಿ (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ
            ನಲ್ಲೆ ನಿನ್ನೀ ತನುವ ಕಾಂತಿಯ ಕಂಡು ಆಸೆಯು ಬಂತಲ್ಲೇ
ಹೆಣ್ಣು : ಆಹಾಹಾ...  ಮೇಘದ ಕರೆಯ ಸಿಡಿಲಿನ ಧ್ವನಿಯ ಕೇಳಿದ ನವಿಲಂತೆ
          ನಲ್ಲ ನಿನ್ನೀ ನುಡಿಯ ಕೇಳಲು ಕುಣಿವ ಆಸೆಯು ಬಂತಲ್ಲ

ಗಂಡು : ನಡೆದರು ಚೆನ್ನ ನುಡಿದರು ಚೆನ್ನ ಈ ಹೂ ನಗೆಯು ಬಲು ಚೆನ್ನ
            ಬಳುಕುವ ಹೆಣ್ಣಾ ಹೊನ್ನಿನ ಬಣ್ಣ ಕಾಡಿದೆ ನನ್ನೀ ಮನಸನ್ನ
ಹೆಣ್ಣು : ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
          ನೀನ್ನೆ ನನ್ನ ಕನಸಲ್ಲು ನಾನಂದು ಕಂಡೆ
          ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
          ನೀನ್ನೆ ನನ್ನ ಕನಸಲ್ಲು ನಾನಂದು ಕಂಡೆ
         ಮೋಹಿಸಿ ಆಶಿಸಿ ಬಯಸಿ ನಾ ಬಂದೆನು
         ಮೇಘದ ಕರೆಯ (ಲಾಲಾ)ಸಿಡಿಲಿನ ಧ್ವನಿಯ (ಲಾಲಾ) ಕೇಳಿದ ನವಿಲಂತೆ
         ನಲ್ಲ ನಿನ್ನೀ ನುಡಿಯ (ಲಾಲಾ) ಕೇಳಲು ಕುಣಿವ(ಲಾಲಾ) ಆಸೆಯು ಬಂತಲ್ಲ

ಹೆಣ್ಣು: ಸರಸವು ಚೆನ್ನ ವಿರಸವು ಚೆನ್ನ ನೀ ಬಳಿ ಇರಲು ಬಲು ಚೆನ್ನ (ಆಆಆ... )
         ಒಲಿಯುತ ಬಂದು ಗೆಲುವನು ತಂದು ಹೂವಾಗಿಸಿದೆ ತನುವನ್ನ
ಹೆಣ್ಣು : ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
          ಇಂದೆ ಎಂದು ನಾಕಾಣದಾನಂದ ತಂದೆ
          ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
          ಇಂದೆ ಎಂದು ನಾಕಾಣದಾನಂದ ತಂದೆ
         ಪ್ರೇಯಸಿ ರೂಪಸಿ ಒಲವಿನ ಊರ್ವಶಿ
        ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ
ಹೆಣ್ಣು : ನಲ್ಲ ನಿನ್ನೀ ನುಡಿಯ ಕೇಳಲು ಕುಣಿವ ಆಸೆಯು ಬಂತಲ್ಲ
ಗಂಡು : ಆಹಾ ಆಆಆ.. ಹೆಣ್ಣು : ಲಾಲಾ ಲಾ......
ಇಬ್ಬರು :ಆಹಾ ಆಆಆ.. ಹೆಣ್ಣು : ಲಾಲಾ ಲಾ......
--------------------------------------------------------------------------------------------------------------------------

ಹುಡುಗಾಟದ ಹುಡುಗಿ (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು:ಎಲ್.ಆರ್.ಈಶ್ವರಿ

ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾ ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾ
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
(ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು)
ಮಂಗನ ಮೊಗದಲಿ ಎನೀ ಜೋರು ಈ ಹುಲಿವೇಶಕೆ ನಗದವರ್ಯಾರು
(ಮಂಗನ ಮೊಗದಲಿ ಎನೀ ಜೋರು ಈ ಹುಲಿವೇಶಕೆ ನಗದವರ್ಯಾರು
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)

ಕಿವಿಯಲಿ ಕಡಕು ಕಣ್ಣಲ್ಲಿ ಸಿಡುಕು ಹಣೆಯಲಿ ಬೇರೆ ಬೊಟ್ಟಿನ ಥಳಕು
ಜುಟ್ಟೇದ್ದು ಆಡಿದೆ ಎಡಕೂ ಬಲಕೂ..
ಜುಟ್ಟೇದ್ದು ಆಡಿದೆ ಎಡಕೂ ಬಲಕೂ  ಎಲ್ಲಿದೆ ಬಾಲ ಬೇಗನೆ ಹುಡುಕೋ
(ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
(ಆ.. ಆ..  ಮಂಗನ ಮೊಗದಲಿ ಎನೀ ಜೋರು ಈ ಹುಲಿವೇಶಕೆ ನಗದವರ್ಯಾರು)

ತಿಳಿಯದೆ ಇಲ್ಲಿ ಬಂದರು ಪಾಪ ಹೆದರಿದೆ ನಾನು ಹಾಕಿದೆ ದೀಪ 
ಕಂಡೆನು ನಾನೀ ಮನ್ಮಥ ರೂಪ
ಕಂಡೆನು ನಾನೀ ಮನ್ಮಥ ರೂಪ  ಬಲು ಅಪರೂಪ ಇಂಥ ಭೂಪ 
(ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ.. ಅಹ್ಹಹ್ಹಹ್ಹ )
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
(ಆ.. ಆ..  ಮಂಗನ ಮೊಗದಲಿ ಎನೀ ಜೋರು ಈ ಹುಲಿವೇಶಕೆ ನಗದವರ್ಯಾರು)

ಇವರನು ನಾನು ಬಿಡುವುದೇ ಇಲ್ಲ ಬಿಟ್ಟರೆ ಮರವ ಹತ್ತುವರಲ್ಲ 
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ ನಾಚುವೆ ಏಕೆ ಬಾರೋ ನಲ್ಲ 
(ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಎನೀ ಜೋರು ಈ ಹುಲಿವೇಶಕೆ ನಗದವರ್ಯಾರು
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)
------------------------------------------------------------------------------------------------------------------------

ಹುಡುಗಾಟದ ಹುಡುಗಿ (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್ಪಿ.ಬಿ. 

ಹೋಗೋ..  ಹೋಗೋ
ಹೋಗೋ ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು ಹೇಳುವ ದಾತ ಮೇಲಿರುವ
ಅವ್ ನಿನ್ನ ಕಂಡು ನಗುತಿರುವಾ..ಅಹ್ಹಹ್ಹಹ್ಹಾ ಆಹ್ಹಾ ಹೇಹೇಹೇ
ಹೋಗೋ ಎನ್ನಲು ನೀನಾರು ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ ಅವ್ ನಿನ್ನ ಕಂಡು ನಗುತಿರುವಾ..

ಲಾಲಾಲಲ ಲಲಲಲ್ಲಲಲಾಲೇಲೇ  ಹಹ್ಹ ಹೇಹ್ಹೇ ಹೂ ಹೂ ಹ್ಹಹ್ಹ
ಮೀನಿಗೆ ಸೋಂಕದ ನೀರಿಲ್ಲಾ ಹಕ್ಕಿಗೆ ಸೋಂಕದ ಬಾನೆಲ್ಲಾ
ಮೀನಿಗೆ ಸೋಂಕದ ನೀರಿಲ್ಲಾ ಹಕ್ಕಿಗೆ ಸೋಂಕದ ಬಾನೆಲ್ಲಾ
ಅಲ್ಲಿರುವಾತನು ಕರೆದಾಗ ನಿನ್ನೀ ಉಸಿರೇ ನಿನ್ನದಲ್ಲ...ಅಹ್ಹಹ್ಹ...
ಹೋಗೋ ಎನ್ನಲು ನೀನಾರು ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ ಅವ್ ನಿನ್ನ ಕಂಡು ನಗುತಿರುವಾ..

ಯಾರಿಗೆ ಯಾರು ಇಲ್ಲಿಲ್ಲ ನಡೆವುದ ಅರಿತವರಾರಿಲ್ಲ 
ಯಾರಿಗೆ ಯಾರು ಇಲ್ಲಿಲ್ಲ ನಡೆವುದ ಅರಿತವರಾರಿಲ್ಲ 
ಮಿತಿಯೇ ಇಲ್ಲದ ನಿನ್ನಾಸೆ ನೀರಿನ ಗುಳ್ಳೇ ಸುಳ್ಳಲ್ಲಾ 
ಹೋಗೋ ಎನ್ನಲು ನೀನಾರು  ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ ಅವ್ ನಿನ್ನ ಕಂಡು ನಗುತಿರುವಾ.. 

ಪಪ್ಪಪ್ಪಪಪ್ಪಾ ಜುಜುಜುಜುಜುಜು ಅಹ್ಹಹ್ಹಾ ಅಹ್ಹಹ್ಹಾ ಹೇಹ್ಹೇ ಹೇ ಹೇ ಹೇಹ್ಹೇ
ಕಾಗೆಯು ಹಂಸ ಆಗುವುದೇ ಅರಗಿಳಿ ಗೂಬೆಯ ಕೂಡುವುದೇ 
ಕಾಗೆಯು ಹಂಸ ಆಗುವುದೇ ಅರಗಿಳಿ ಗೂಬೆಯ ಕೂಡುವುದೇ 
ಅವನಾ ಲೆಕ್ಕವು ಬೇರೊಂದು ಮೂಢರಿಗೆ ಅದು ತಿಳಿಯುವುದೇ .. 
ಹೋಗೋ ಎನ್ನಲು ನೀನಾರು  ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ ಅವ್ ನಿನ್ನ ಕಂಡು ನಗುತಿರುವಾ..
ಪಪ್ಪಪ್ಪಪಪ್ಪಾ ಜುಜುಜುಜುಜುಜು
-------------------------------------------------------------------------------------------------------------------------

ಹುಡುಗಾಟದ ಹುಡುಗಿ (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು:ಎಸ್ಪಿ.ಬಿ. 

ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾ ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾಯಾ
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
ಗೇಲಿಯಾ ಮಾಡಿ ಕುಣಿವುದೇಕೆ ಮಂಗನ ಬಾಲ ಹಿಡಿಯುವುದೇಕೆ 
ಗೇಲಿಯಾ ಮಾಡಿ ಕುಣಿವುದೇಕೆ ಮಂಗನ ಬಾಲ ಹಿಡಿಯುವುದೇಕೆ 

ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ

ಬಿ.ಎ,  ಎಂ.ಎ  ಓದಿದರೇನು ಸಂಬಳ ಸಾವಿರ ಎಣಿಸಿದರೇನು
ಮೀಸೆಯ ತಿರುವಿ ನಿಲ್ಲುವರೇನು ಅಹ್ಹಹ್ಹಾ
ಮೀಸೆಯ ತಿರುವಿ ನಿಲ್ಲುವರೇನು ಮಕ್ಕಳ ಹೇರುವುದು ತಪ್ಪುವುದೇನು
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
ಕಾರಲಿ ಊರನು ಸುತ್ತಿದರೇನು ಪ್ಲೇನಲಿ ಕೂತು ಹಾರಿದರೇನು
ಮನೆಯನೇ ದರ್ಪದೇ ಆಳಿದರೇನು
ಮನೆಯನೇ ದರ್ಪದೇ ಆಳಿದರೇನು ಗಂಡಸು ಎಂದು ಕರೆಯುವರೇನು
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ 
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ ಅಹ್ಹಹ್ಹ 

ಬಳ್ಳಿಯು ತಾನೇ ನಿಲ್ಲುವುದೇನು ಆಸರೆ ಇರದೇ ಬಾಳುವುದೇನು 
ಗಂಡೇ ಇರದೇ ಹೋದರೆ ಹೆಣ್ಣು 
ಹ್ಹಾಂ..  ಗಂಡೇ ಇರದೇ ಹೋದರೆ ಹೆಣ್ಣು ತಾಯ್ತನವನ್ನು ಕಾಣುವಳೇನು 
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ 
ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
ಇಸವಿಯು ಏನೋ ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು
ಹೇ..ಹೇ ಗೇಲಿಯಾ ಮಾಡಿ ಕುಣಿವುದೇಕೆ ಮಂಗನ ಬಾಲ ಹಿಡಿಯುವುದೇಕೆ
ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾ ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾಯಾ 
ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾ ಅಯ್ಯಯ್ಯ ಯ್ಯಯ್ಯಯ್ಯಯ್ಯ ಯಾಯಾ 
--------------------------------------------------------------------------------------------------------------------------

ಹುಡುಗಾಟದ ಹುಡುಗಿ (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಬಿ.ಎಸ್.

ಒಂದು ಎರಡು ಮೂರೂ ನಾಲ್ಕೂ ನಾಲ್ಕೂ ಮೂರೂ ಎರಡೂ ಒಂದೂ 
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ ಎಂದೆಂದೂ ಕಂಡಿಲ್ಲ ನಾನೀ ಸಂತೋಷ 
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ ಎಂದೆಂದೂ ಕಂಡಿಲ್ಲ ನಾನೀ ಸಂತೋಷ 
ಏನೆಂದೂ ನಾ ಹೇಳಲೀ ಆಹ್ಹಾ...  ಎಲ್ಲಿಗೇ ನಾ ಹೋಗಲೀ .  
ಏನೆಂದೂ ನಾ ಹೇಳಲೀ ಆಹ್ಹಾ...  ಎಲ್ಲಿಗೇ ನಾ ಹೋಗಲೀ .  

ಹದ್ದಿನಂತೆಕೇ ನೀ ಕಣ್ಣು ಬಿಡುವೇ ಕಪ್ಪೆಯಂತೇಕೇ  ನೀ ಬಾಯಿ ಬಿಡುವೇ 
ಹದ್ದಿನಂತೆಕೇ ನೀ ಕಣ್ಣು ಬಿಡುವೇ ಕಪ್ಪೆಯಂತೇಕೇ  ನೀ ಬಾಯಿ ಬಿಡುವೇ 
ನೀ.. ಕಂಡ ಕನಸು ಆಗದು ನನಸೂ ಬಲ್ಲೆನು ನಾ ನಿನ್ನ ಮನಸು 
ಕೆಟ್ಟ ಆಸೆಯೂ ತುಂಬಾ ಹೊಲಸೂ... ಕೆಟ್ಟ ಆಸೆಯೂ ತುಂಬಾ ಹೊಲಸೂ 
ಇವನ್ ಮುಠ್ಠಾಳ ಅಂತಾ ತಿಳಿದುಕೊಂಡಿದ್ದೀಯೇನೋ ಅಲ್ಲಾ ನೋ..  
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ ಎಂದೆಂದೂ ಕಂಡಿಲ್ಲ ನಾನೀ ಸಂತೋಷ 
ಏನೆಂದೂ ನಾ ಹೇಳಲೀ ಆಹ್ಹಾ...  ಎಲ್ಲಿಗೇ ನಾ ಹೋಗಲೀ .  

ಚಿನ್ನದಂತ ಹೆಣ್ಣು ಈ ಪುಟ್ಟ ಹುಡುಗಿ ಮುತ್ತಿನಂಥ ಗಂಡು ಈ ನಮ್ಮ ಹುಡುಗ 
ಚಿನ್ನದಂತ ಹೆಣ್ಣು ಈ ಪುಟ್ಟ ಹುಡುಗಿ ಮುತ್ತಿನಂಥ ಗಂಡು ಈ ನಮ್ಮ ಹುಡುಗ 
ಈ ಪುಟ್ಟ ಜೋಡಿ ಕಣ್ಣ ತುಂಬಾ ನೋಡಿ ನಾ ಮರೆತೇ ಎಲ್ಲಾ ಚಿಂತೇ 
ಅದೇ ಹರೆಯದ ಹುಡುಗನಂತೇ...   
ಅದೇ ಹರೆಯದ ಹುಡುಗನಂತೇ... ಯುವಕ ನವ ಯುವಕ 
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ ಎಂದೆಂದೂ ಕಂಡಿಲ್ಲ ನಾನೀ ಸಂತೋಷ 
ಏನೆಂದೂ ನಾ ಹೇಳಲೀ ಆಹ್ಹಾ...  ಎಲ್ಲಿಗೇ ನಾ ಹೋಗಲೀ .  
ಏನೆಂದೂ ನಾ ಹೇಳಲೀ ಆಹ್ಹಾ...  ಎಲ್ಲಿಗೇ ನಾ ಹೋಗಲೀ .  
--------------------------------------------------------------------------------------------------------------------------

ಹುಡುಗಾಟದ ಹುಡುಗಿ (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕೀ . 

ಆ... ಯಾರೂ ಯಾರೂ
ಯಾರೂ ಆಟಕ್ಕಿಳಿದವರಾರೂ ನೋಟ ಅರಿತವರಾರೋ
ಬೇಟೆ ಬಯಸುವರಾರೋ ಬನ್ನೀರಿ ಮೆಲ್ಲಗೇ ಇಲ್ಲಿಗೇ...
ಯಾರೂ ಆಟಕ್ಕಿಳಿದವರಾರೂ ನೋಟ ಅರಿತವರಾರೋ
ಬೇಟೆ ಬಯಸುವರಾರೋ

ಕಣ್ಣಲ್ಲಿ ಹೂಬಾಣ ಚೆಲ್ಲುವೇನೋ ನಗುವಲ್ಲೇ ಮನಸನ್ನ ಗೆಲ್ಲುವೇನೋ
ಕಣ್ಣಲ್ಲಿ ಹೂಬಾಣ ಚೆಲ್ಲುವೇನೋ ನಗುವಲ್ಲೇ ಮನಸನ್ನ ಗೆಲ್ಲುವೇನೋ
ಹೊನ್ನಂತೇ ಮೈ ಬಣ್ಣ ಲತೆಯಂತೇ ನಡು ಸಣ್ಣ ಬೇಕಾದರೇ ಜಾಣ ಬಾರೋ ನೀ ನಿಲ್ಲೀ 
ಯಾರೂ ಆಟಕ್ಕಿಳಿದವರಾರೂ ನೋಟ ಅರಿತವರಾರೋ
ಬೇಟೆ ಬಯಸುವರಾರೋ

ಹೆಣ್ಣಾಸೇ ಹೊನ್ನಾಸೆ ಎಂತೇನೋ ಎಲ್ಲೆಲ್ಲೋ ಇರುಳಿಹುದೂ ಭಯವೇನೋ 
ಹೆಣ್ಣಾಸೇ ಹೊನ್ನಾಸೆ ಎಂತೇನೋ ಎಲ್ಲೆಲ್ಲೋ ಇರುಳಿಹುದೂ ಭಯವೇನೋ 
ಹಸುವಂತೇ ಈ ವೇಷ ಹುಲಿಗೇನೋ ಸಂತೋಷ ಈ ಮೋಸ ನಾಳೇ ಹೊರಗೇ ಬರದೇನೋ 
ಯಾರೂ ಆಟಕ್ಕಿಳಿದವರಾರೂ ನೋಟ ಅರಿತವರಾರೋ
ಬೇಟೆ ಬಯಸುವರಾರೋ ಬನ್ನೀರಿ ಮೆಲ್ಲಗೇ ಇಲ್ಲಿಗೇ...
--------------------------------------------------------------------------------------------------------------------------

No comments:

Post a Comment