198. ನನ್ನ ದೇವರು (1982)


ನನ್ನ ದೇವರು ಚಿತ್ರದ ಹಾಡುಗಳು 
  1. ದುಂಡು ಮಲ್ಲಿಗೆ ಮಾತಡೆಯಾ..
  2. ಮನಸು ಒಂದಾದ ಮೇಲೆ
  3. ಬಾರೋ ಬಾರೋ ಮುದ್ದಿನ ನಲ್ಲ
  4. ಅಂಧಕಾರದಲ್ಲಿ ನೂಕಿ ಕಂದಾ ಆಗಲಿ ಹೋದೆಯಾ
ನನ್ನ ದೇವರು (1982) - ದುಂಡು ಮಲ್ಲಿಗೆ ಮಾತಾಡೆಯ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ :ಚಿ .ಉದಯಶಂಕರ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ

ದುಂಡು ಮಲ್ಲಿಗೆ ಮಾತಾಡೆಯ  ಕೆಂಡ ಸಂಪಿಗೆ ನೀನಾದೆಯ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ....ನಾಚಿ ನೀನು ಮೊಗ್ಗಾದೆಯಾ....
ದುಂಡು ಮಲ್ಲಿಗೆ ಮಾತಾಡೆಯ  ಕೆಂಡ ಸಂಪಿಗೆ ನೀನಾದೆಯ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ....ನಾಚಿ ನೀನು ಮೊಗ್ಗಾದೆಯಾ....
ದುಂಡು ಮಲ್ಲಿಗೆ ಮಾತಾಡೆಯ

ನೀನಾಡೊ ಮಾತೆಲ್ಲ ಜೇನಂತೆ ನೀ ಹಾಡೊ ಸಂಗೀತ ಇಂಪಂತೆ
ನೀನಾಡೊ ಮಾತೆಲ್ಲ ಜೇನಂತೆ ನೀ ಹಾಡೊ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ... ಓ ಹೆಣ್ಣೆ ಬಲ್ಲೆಯಾ..
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೊ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೊ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ ನಿನ್ನನ್ನು ಬಯಸಿದೆ, ಬಂದೀಗ ಸೇರಿದೆ
ದುಂಡು ಮಲ್ಲಿಗೆ ಮಾತಾಡೆಯ  ಕೆಂಡ ಸಂಪಿಗೆ ನೀನಾದೆಯ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ....ನಾಚಿ ನೀನು ಮೊಗ್ಗಾದೆಯಾ....
ದುಂಡು ಮಲ್ಲಿಗೆ ಮಾತಾಡೆಯ

ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲು ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲು ನಾ ಹೀಗೆ ಸೇರಿಲ್ಲ
ಏಕೊ ನಾ ಕಾಣೆ ನಂಬು ನನ್ನಾಣೆ... ಒಲವಿಂದ ಸೇರೆಯಾ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನು ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನು ಸರಿಯಲ್ಲ
ನೋಡು ನೀನಿಲ್ಲೀ ಬೇರೆ ಯಾರಿಲ್ಲ....ಕಣ್ಣಲ್ಲೇ ಕೊಲುವೆಯಾ?
ಇಲ್ಲಾ ಮುತ್ತೊಂದಾ ಕೊಡುವೆಯಾ?
ದುಂಡು ಮಲ್ಲೆಗೆ ಮಾತಾಡೆಯ  ಕೆಂಡ ಸಂಪಿಗೆ ನೀನಾದೆಯ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ....ನಾಚಿ ನೀನು ಮೊಗ್ಗಾದೆಯಾ....
ದುಂಡು ಮಲ್ಲೆಗೆ ಮಾತಾಡೆಯ
----------------------------------------------------------------------------------------------------------------

ನನ್ನ ದೇವರು (1982)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಗಂಡು : ಮನಸೂ ಒಂದಾದ ಮೇಲೆ ಕನಸೂ ನನಸಾದ ಮೇಲೆ
           ಹಗಲೇನು ಇರುಳೇನು ಬದುಕೆಲ್ಲ ಸವಿಜೇನು
ಹೆಣ್ಣು : ದಿನವೂ ಸಂತೋಷವೇನೆ ಬಾಳೇ ಸಂಗೀತ ತಾನೆ
          ಮನಸೂ ಒಂದಾದ ಮೇಲೆ ಕನಸೂ ನನಸಾದ ಮೇಲೆ
         ಹಗಲೇನು ಇರುಳೇನು ಬದುಕೆಲ್ಲ ಸವಿಜೇನು

ಗಂಡು : ಎಂಥಾ ಮುದ್ದಾದ ಮೊಗವು ಎಂಥಾ ಸವಿಯಾದ ನಗುವು
           ತುಂಬಿದ ಕೆನ್ನೆಯು ಹೊನ್ನ ಗುಲಾಬಿ ಹೂವು
ಹೆಣ್ಣು : ಇಂತ ಮುದ್ದಾದ ನುಡಿಗೆ  ಸೋತೆ ನಾ ಬಂದೆ ಬಳಿಗೆ
          ಪ್ರೀತಿಯ ಕಡಲಲಿ ನಲಿವ ಮೀನಾಗಿ ಹೋದೆ
          ನಲಿವ ಮೀನಾಗಿ ಹೋದೆ
ಗಂಡು : ಎಲ್ಲ ಸೊಗಸು ಸೊಗಸು
           ಮನಸೂ ಒಂದಾದ ಮೇಲೆ  ಕನಸೂ ನನಸಾದ ಮೇಲೆ
          ಹಗಲೇನು ಇರುಳೇನು ಬದುಕೆಲ್ಲ ಸವಿಜೇನು

ಹೆಣ್ಣು : ಆಆಆ...ಆಆಆ... (ಆಆಆ...ಆಆಆ... ) ಲಾಲಲಾಲಲಲ  (ಹೂಂಹೂಂಹೂಂಹೂಂ)
          ನಿನ್ನ ನೆರಳಲ್ಲೆ ಎಂದು  ಇರುವೆ ಹಾಯಾಗಿ ನಾನು
           ಮರವನು ಬಳಸಿದ ಎಳೆಯ ಲತೆಯಂತೆ ಇನ್ನು
ಗಂಡು : ನಿನ್ನ ಕಣ್ಣಲ್ಲೆ ಅಂದು  ಕವಿತೆ ನೀ ಹಾಡಿದಾಗ
           ಹೃದಯವು ಕುಣಿಯಿತು ಕೇಳಿ ಹೊಸದೊಂದು ರಾಗ
           ಕೇಳಿ ಹೊಸದೊಂದು ರಾಗ
ಹೆಣ್ಣು : ಎಲ್ಲ ಸೊಗಸು ಸೊಗಸು
          ಮನಸೂ ಒಂದಾದ ಮೇಲೆ  ಕನಸೂ ನನಸಾದ ಮೇಲೆ
         ಹಗಲೇನು ಇರುಳೇನು  ಬದುಕೆಲ್ಲ ಸವಿಜೇನು
ಗಂಡು : ದಿನವೂ ಸಂತೋಷವೇನೆ ಬಾಳೇ ಸಂಗೀತ ತಾನೆ
           ಮನಸೂ ಒಂದಾದ ಮೇಲೆ  ಕನಸೂ ನನಸಾದ ಮೇಲೆ
           ಹಗಲೇನು ಇರುಳೇನು
ಇಬ್ಬರು : ಬದುಕೆಲ್ಲ ಸವಿಜೇನು
----------------------------------------------------------------------------------------------------------------------

ನನ್ನ ದೇವರು (1982) - ಬಾರೋ ಬಾರೋ ಮುದ್ದಿನ ನಲ್ಲ 
ಸಂಗೀತ: ರಾಜನ್-ನಾಗೇಂದ್ರ  ಸಾಹಿತ್ಯ :ಚಿ .ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ.ಜಾನಕಿ 

ಹೆಣ್ಣು : ಲಾಲಲಾ... ಹೇ...ಹೇ..ಹೇ..         ಗಂಡು : ಲಾಲಲಾ... ಹ್ಹಾ..ಹ್ಹಾ..ಹ್ಹಾ
ಹೆಣ್ಣು : ಲಾ.. ಲಾ ಲಲ್ಲಲ್ಲಲಾ ...(ಹ್ಹಾ ) ಲಾ (ಹ್ಹಾ )
ಹೆಣ್ಣು : ಬಾರೋ ಬಾರೋ ಮುದ್ದಿನ ನಲ್ಲ , ನನ್ನ ಸ್ನೇಹ ಸಕ್ಕರೆ ಬೆಲ್ಲಾ 
          ನಿನ್ನಂಥ ಗಂಡನು ನಾ ಕಾಣೇ, ಬಿಡನೆಂದು ನಿನ್ನನು ನನ್ನಾಣೆ 
          ಸಂಕೋಚ ನಿನಗೇಕೆ ಅಯ್ಯಯ್ಯೋ ನೀ ದೂರ ಓಡದಿರು 
ಗಂಡು : ತಾಳು ತಾಳು ಮುತ್ತಿನ ರಾಣಿ, ನಿಲ್ಲು ಅಲ್ಲೇ ಬಣ್ಣದ ವೇಣಿ 
           ಬಾ ಎಂದು ಕೂಗುವೆ ಇಂದೇಕೆ  ಮೈಯನು ಸೋಕುವೇ ಹೀಗೇಕೆ 
           ಚೆಲ್ಲಾಟ ಸರಿಯೇನು ಅಯ್ಯಯ್ಯೋ ನನ್ನನು ಕಾಡದಿರೂ ..  
ಹೆಣ್ಣು : ಬಾರೋ ಬಾರೋ ಮುದ್ದಿನ ನಲ್ಲ , ನಿನ್ನಂಥ ಗಂಡನು ನಾ ಕಾಣೇ, 

ಹೆಣ್ಣು : ಮನಸೆಲ್ಲವೂ ನಿನ್ನ ಮೇಲಿದೆ, ನನ ಅಂದವು ನಿಂದಾಗಿದೆ
          ಸಂತೋಷ ಹೊಂದೋಣ ಬಾರೋ ಇಂಥ ಹೆಣ್ಣನು ಬೇಡ ಅನ್ನೋದುಂಟೇನು 
          ನಾನಾಗಿ ಕೂಗಿದರೂ ಭಯವು ಇನ್ನೇನೂ
ಗಂಡು : ನನ ಆಸೆಯೂ ನಿನ್ನ ಮೇಲಿದೆ, ನಿನ ಅಂದವು ನನದಾಗಿದೆ 
           ಅನುರಾಗ ಏನೆಂದು ಬಲ್ಲೆ, ನಾವು ಒಂದಾಗಿ ಆನಂದ ಹೊಂದೊಕೆ 
           ಈ ಜಾಗ ಸರಿಯಲ್ಲ ಕೇಳೇ ನಾನ್ನಾಕೆ  
ಹೆಣ್ಣು : ನಿನ್ನ ಮಾತು ಕೇಳೋದಿಲ್ಲ ಇನ್ನು ನಿನ್ನ ಬಿಡೋದಿಲ್ಲ  ಬಾ ಬೇಗ ಬಳಿ ಈಗ ನಲ್ಲಾ
ಗಂಡು : ಹ್ಹಾ...ಹ್ಹಾ ತಾಳು ತಾಳು ಮುತ್ತಿನ ರಾಣಿ, ನಿಲ್ಲು ಅಲ್ಲೇ ಬಣ್ಣದ ವೇಣಿ 

ಗಂಡು : ಕಣ್ಣಲ್ಲಿಯೇ ಕೋಲಬೇಡವೇ, ಬಳಿಯಲ್ಲಿ ನೀ ನಿಲ್ಲಬೇಡವೇ 
            ಮೈ ಮೇಲೆ ಬೀಳದಿರು ಹೀಗೆ, ಜನರು ಕಂಡಾರೂ ನಮ್ಮ ನೋಡಿ ನಕ್ಕರು   
            ದಮ್ಮಯ್ಯ ಕೈಮುಗಿವೆ ಸುಮ್ಮನೆ ಹೋಗು..... ಹಾಂ 
ಹೆಣ್ಣು : ಈ ಕೆನ್ನೆಯ ನೀ ತಾಕದೇ, ಮುದ್ದಾಡಲು ಬಳಿ ಬಾರದೇ ಮಂಕಾಗಿ ನೋಡದಿರು ಹಾಗೆ 
          ಪ್ರೀತಿ ಬಂದಾಗ ಇಂಥ ಸಮಯ ಬಂದಾಗ ಸನ್ಯಾಸಿ ಆಗದೇ ರಸಿಕ ನೀನಾಗು 
ಗಂಡು : ಬೇಡ ಅನ್ನೋ ಮನಸು ಇಲ್ಲಾ, ಬೇಕು ಅನ್ನೋ ಧೈರ್ಯ ಇಲ್ಲಾ ಈಗೇನೋ ಮಾಡದೋ ಕಾಣೇ 
            ಹ್ಹೋ .. ತಾಳು ತಾಳು ಮುತ್ತಿನ ರಾಣಿ, ನಿಲ್ಲು ಅಲ್ಲೇ ಬಣ್ಣದ ವೇಣಿ 
ಹೆಣ್ಣು : ನಿನ್ನಂಥ ಗಂಡನು ನಾ ಕಾಣೇ, ಬಿಡನೆಂದು ನಿನ್ನನು ನನ್ನಾಣೆ 
ಗಂಡು : ಚೆಲ್ಲಾಟ ಸರಿಯೇನು ಅಯ್ಯಯ್ಯೋ ನನ್ನನು ಕಾಡದಿರೂ ..  
ಹೆಣ್ಣು : ಏ.. ಬಾರೋ ಬಾರೋ ಮುದ್ದಿನ ನಲ್ಲ ,
ಗಂಡು : ಅಹ ಅಹ..ಅಹ್ಹ.. .
--------------------------------------------------------------------------------------------------------------------------

ನನ್ನ ದೇವರು (1982) - ಅಂಧಕಾರದಲ್ಲಿ ನೂಕಿ ಕಂದಾ ಆಗಲಿ ಹೋದೆಯಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು:  ಎಸ್.ಜಾನಕಿ


ಹೆಣ್ಣು : ಅಂಧಕಾರದಲ್ಲಿ ನೂಕಿ ಕಂದಾ ಆಗಲಿ ಹೋದೆಯಾ
          ಚಂದದ ಹೂವೂ ತರಲೂ ಹೋಗಿ ಹಾವಿಗೇ ಬಲಿಯಾದೆಯಾ
         ಹೆತ್ತ ತಾಯಿ ಕರುಳಿಗೇ ನೀ ಕಿಚ್ಚನಿಟ್ಟೂ ನಡೆದೆಯಾ
         ಹೊತ್ತೂ ಸಾಕಿದೆನ್ನ ನೀ ಅನಾಥೆಯೇನಿಸಿ ಮಡಿದೆಯಾ
        ಧರಣಿಯನೇ ಅಳ್ವೆನೆಂಬ ತಾಯ ಆಸೇ ಕುಸಿಯಿತೇ
       ತರಣಿವಂಶ ತಿಲಕನಾದಿ ಮೆರೆವುದೂ ಹುಸಿಯಾಯಿತೇ
       ನಾಳೆ ನಿನ್ನ ತಂದೆ ಬಂದೂ ಕಂದನೆಲ್ಲಿ ಎಂದರೇ ಹೇಳಲೇನೂ ಮಗುವೇ
      ನನಗೇ ಬಾಯಿ ಇಲ್ಲವಾಯಿತೇ
ಗಂಡು : ಯಾರು ಹೇಳು ನೀ ಪಡೆಯದೇ ಅನುಮತಿ ಹೇಗೆ ಒಳಗೆ ಬಂದೇ
           ಯಾವುದೀ ಶವವೂ ಈ ಕಾರಿರುಳಲಿ ಯಾರ ಹೇಳಿ ತಂದೇ ...
          ಜಲವನು ಕೊಡದಿರೇ ಶವ ಸಂಸ್ಕಾರಕೇ ಧಣಿ ಅಪ್ಪಣೇ ಇಲ್ಲಾ
         ಯಾರೇ ಆದರೂ ಸರಿ ಈ ನಿಯಮಕೇ ಹೊರತೆಂಬುದೇ ಇಲ್ಲಾ
         ವೀರಭಾಹುಕನ ಆಜ್ಞೆಯ ಮೀರಲೂ ಯಾರಿಗೂ ಬಿಡೇ ನಾನೂ
         ಆರಿಸಿ ಬೆಂಕಿಯ ಶವವನು ಸೆಳೆದು ದೂರಕೆ ಎಸೆಯುವೇನು

ಹೆಣ್ಣು : ಸತಿಯ ಮಾರಿರಲೀ ಸುತನನೂ ತೊರೆದಿರಲೀ
          ಮತಿಹೀನನೆಂದು ಜಗ ನಗುತಿರಲೀ
         ಚ್ಯುತಿ ಬಾರಲೆಂದು ತನ್ನ ಸತ್ಯ ವೃತಕ್ಕೇ ಧೃತಿಯಿಂದ ಎಲ್ಲವನೂ ಬೀಸುಟು ನಡೆದಾ
         ಪತಿರಾಯ ನನ್ನ ಭಾಗ್ಯ ಸರ್ವಸ್ವ ಜೊತೆಯಾಗಲವನೇ ಜನ್ಮ ಜನ್ಮದಲಿ

ಗಂಡು : ಯಾವುದೋ ನನ್ನದೇ ಪಾಪಂ ಹಾವಿನ ರೂಪದಿ ಕಡಂಗಿ ಹಿಡಿಯಿತು ನಿನ್ನಂ
            ಜೀವವೂ ಹೋಗುವ ಸಮಯದೀ ನೋವಿನಲಲ ಎಷ್ಟೋ ನೊಂದೆಯೋ ಕಂದಾ
            ಕನಸಿನೊಳು ನನಸಿನೊಳು ಮಾತು ಮತಿ ಮನಸಿನೊಳು ಇನಿತಾದೋಡುಂ ಹುಸಿಯೂ ಇರದಿರ್ದದೊಡೇ
            ಸತಿ ಶಿರೋಮಣಿ ಇವಳೂ ಶವವಾದ ಸುತನವನೂ ಪ್ರಿತಿಯೊಳು ಸತ್ಯವನು ನಡೆಸಿದ್ರೀದೊಡೆ
           ದೈವಕ್ಕೆ ಧರ್ಮಕ್ಕೇ ನ್ಯಾಯಕ್ಕೇ ತಲೆಬಾಗಿ ಪ್ರಜೆಗಳನೂ ಸುತರಂತೇ ಸಲಹಿದ್ರೋಡೇ....
           ಸತ್ಯವೇ ಶಿವನೆಂದೂ ಶಿವನೇ ಸತ್ಯವೂ ಎಂದೂ ಮನಸಾರೇ ನಂಬಿ ನಾ ನಡೆದ್ರಿದೊಡೇ
           ಈ ವಧೆಯೂ ಶಿವನಿಗೇ ಪ್ರಿಯವಾಗಲೀ ಸತ್ಯವೇ ಲೋಕದಲಿ ಸ್ಥಿರವಾಗಲೀ
-------------------------------------------------------------------------------------------------------------------------  

No comments:

Post a Comment