ಹೃದಯವಂತ ಚಲನ ಚಿತ್ರದ ಹಾಡುಗಳು
- ಅನ್ನ ನೀಡೋರೇ ನನ್ನೂರು
- ಮಧುಮಗಳಾಗಿ
- ಅಣ್ಣಯ್ಯ ಹೃದಯವಂತ
- ತಂಗಿಯೇ ತಂಗಿಯೇ
- ಜೂಮು ಜೂಮು ಜೂಮುತಾ
- ಘಮ ಘಮ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
ಈ ದೈವಕ್ಕಾಗಿ ಜೀವ ನೀಡುವ ಭಾಗ್ಯವೇ ನನ್ನದೂ .. ಪುಣ್ಯವೇ ನನ್ನದೂ ..
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
ಆಳೂ ಎಂದೂ ಆಳೇ ಅಲ್ಲ ಆಳೋ ಹಾಗೇ ಅವನಾಗಬೇಕಿದೇ
ಧಣಿಯೂ ಎಂದೂ ದಣಿವೇ ಇಲ್ಲಾ ಧಣಿಯೂ ದುಡಿಯೋ ಆಳಾಗಬೇಕಿದೇ
ಉಳ್ಳೋರು ಉಳುವವರನ್ನೂ ಉಳಿಸಿ ಕೊಳ್ಳೊದೇ ಬಡವರಿಗೇ ನಾವೂ ಮಾಡುವ ಸನ್ಮಾನ
ಒಂದೇ ತೆನೆಯಲ್ಲಿ ಒಗ್ಗಟ್ಟಿನ ಕಾಳಂತೇ ಸಮರಸವ ಪಾಲಿಸೋದೇ ದೇವರ ಗುಣಗಾನ
ಜನವೇ ಜರ್ನಾಧನ ನೀ ಕೇಳೂ ಅಣ್ಣಯ್ಯಾ .. ಕಾಯಕವೇ ಕೈಲಾಸ ನೀ ತಿಳಿಯೋ ತಮ್ಮಯ್ಯಾ .. ಅಹ್ಹಹ್ಹಹ್ಹ..
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
(ಹ್ಹೋ ಓಓಓಓ ಹ್ಹೋ ಓಓಓಓ ಓಓಓಓ ಓಓಓಓ ಓಓಓಓ ಓಓಓಓ )
ರೈತ ಇರದಾ ನಾಡೇ ಇಲ್ಲ ರೈತ ಬೆಳೆದ ಬೆಳೆ ತಿನ್ನದವರೇ ಇಲ್ಲಾ..
ರೈತ ಇರದಾ ನಾಡೇ ಇಲ್ಲ ರೈತ ಬೆಳೆದ ಬೆಳೆ ತಿನ್ನದವರೇ ಇಲ್ಲಾ..
ರೈತ ಎಂದೂ ಸ್ವಾರ್ಥಿ ಅಲ್ಲಾ ತನಗೇ ಮಾತ್ರ ಎಂದವನೂ ಬೆಳೆವುದಿಲ್ಲಾ
ಮುಕ್ಕೋಟಿ ದೇವತೆಗಳೂ ಇದ್ದರೇ ಏನಂತೇ .. ಗಣಪತಿಯೇ ಮೊದಲು ನಮಗೇ ಎಲ್ಲಾ ಪೂಜೆಗೇ
ದುಡಿಯೋ ಕೋಟಿ ಯಂತ್ರಗಳೂ ಇದ್ದರೂ ಏನಂತೇ ರೈತಾನೇ ಮೊದಲ ಮಾನವ ಯಂತ್ರ ಭೂಮಿಗೇ
ಈ ರೈತ ನಕ್ಕರೇ ನಗುವುದೂ ಭಾರತ ಈ ಭಾರತ ಆ ದಿವಸ ಲೋಕದ ಸ್ನೇಹಿತ ... ಅಹ್ಹಹ್ಹಹ್ಹ
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
ಈ ದೈವಕ್ಕಾಗಿ ಜೀವ ನೀಡುವ ಭಾಗ್ಯವೇ ನನ್ನದೂ .. ಪುಣ್ಯವೇ ನನ್ನದೂ ..
ಅನ್ನ ನೀಡೋರೇ ನನ್ನೋರು (ಓಓಓಓ ಓಓಓ) ನೆರಳೂ ನೀಡೋರೇ ನನ್ನೋರು (ಓಓಓಓ ಓಓಓ)
ಹೃದಯವಂತ (೨೦೦೩) - ಮಧುಮಗಳಾಗಿ ಮಧುಮಗಳಾಗಿ ನಡೆಯಿರಿ ಇನ್ನೂ ..
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಹ್ಹಾಂ ... ಹ್ಹಾಂ .. ಓಹೋ ಓಹೋ
ಮಧುಮಗಳಾಗಿ.. ಮಧುಮಗಳಾಗಿ.. ಮಧುಮಗಳಾಗಿ.. ನಡೆಯಿರಿ ಇನ್ನೂ .. ಮಧುಮಗಳಾಗಿ..
(ತುಂತುರೂ ತುಂತುರೂ ತುಂತುರೂ ತುಂತುರೂ ರುರುರೂರು ತುಂತುರೂ ತುಂತುರೂ ತುಂತುರೂ)
ಮಧುಮಗಳಾಗಿ.. ಮಧುಮಗಳಾಗಿ.. ಮಧುಮಗಳಾಗಿ.. ನಡೆಯಿರಿ ಇನ್ನೂ .. ಮಧುಮಗಳಾಗಿ..
(ತುಂತುರೂ ತುಂತುರೂ ತುಂತುರೂ ತುಂತುರೂ ರುರುರೂರು ತುಂತುರೂ ತುಂತುರೂ ತುಂತುರೂ)
ಏಳೂರಿನಲ್ಲಿ ಯಾರೂ ನಿಮ್ಮಂತಿಲ್ಲಾ ನಿಮ್ಮ ಕೈ ಹಿಡಿಯೋ ದೊರೆಗೇ ಶುಭವೇ ಎಲ್ಲಾ...
ಮಹಾರಾಣಿ ತಮ್ಮ ಮದುವೇ ಗೊತ್ತಾಯ್ತಲ್ಲಾ...
ಮಧುಮಗಳಾಗಿ.. ಮಧುಮಗಳಾಗಿ..(ಹೂಂಹೂಂ) ಮಧುಮಗಳಾಗಿ.. ನಡೆಯಿರಿ ಇನ್ನೂ .. ಮಧುಮಗಳಾಗಿ..
(ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ)
ನಿಮ್ಮ ಮದುವೇ ಮಂಟಪ ಮಾಡೀ ಅಲ್ಲಿ ಅಕ್ಷತೆಯ ಮಳೆಯ ನೋಡಿ
ನಿಮ್ಮ ಮದುವೇ ಮಂಟಪ ಮಾಡೀ ಅಲ್ಲಿ ಅಕ್ಷತೆಯ ಮಳೆಯ ನೋಡಿ
ಬನ್ನೀ ಹರಸು ಎನ್ನುವಾ ಭಾಗ್ಯ ನನ್ನದೂ .. ಆತ್ಮಬಂಧು ಆಗುವ ಪುಣ್ಯ ನನ್ನದೂ
ಯಾವ ಜನ್ಮದಲ್ಲಿ ಏನೋ ಋಣವ ಉಳಿಸಿಕೊಂಡೆನು ನಾನೂ ಇಂದೂ ನಿಮ್ಮ ಸೇವೆಗೇ ನಾನೂ ಮೀಸಲೂ
ನಿಮ್ಮ ಮನೆಯ ನೆರಳಿಗೂ ನಾನೇ ಕಾವಲೂ ಬಾಳು ಕೊಟ್ಟದಾದರೆ ಕೋಟಿ ಸೌಖ್ಯ ಇಲ್ಲಿದೇ
ಸುಖವ ಸೂರೆ ಮಾಡಲೂ ಮದುವೇ ಹಬ್ಬ ಬಂದಿದೇ
ಮಹಾರಾಣಿ ತಮ್ಮ ಮದುವೇ ಗೊತ್ತಾಯ್ತಲ್ಲಾ...
ಮಧುಮಗಳಾಗಿ.. ಮಧುಮಗಳಾಗಿ..(ಹೂಂಹೂಂ) ಮಧುಮಗಳಾಗಿ.. ನಡೆಯಿರಿ ಇನ್ನೂ .. ಮಧುಮಗಳಾಗಿ..
(ಆಆಆ.. ಆಆಆ ಆಆಆ.. ಆಆಆ ಆಆಆ.. ಆಆಆ ಆಆಆ.. ಆಆಆ )
ಇನ್ನೂ ನಿಮಗೇ ಒಲವೇ ಊಟ ನಿಮಗೇ ನಿಮ್ಮ ಚೆಲುವೇ ತೋಟ
ಇನ್ನೂ ನಿಮಗೇ ಒಲವೇ ಊಟ ನಿಮಗೇ ನಿಮ್ಮ ಚೆಲುವೇ ತೋಟ
ಮನವ ಹೂವ ಮಾಡಿರೀ ಕನಸು ಕಾಣೀರಿ ಹೃದಯದಲ್ಲಿ ಪ್ರೀತಿಯ ಜೇನ ತುಂಬಿರೀ
ಕೊರಳಿಗೊಂದು ಚಿನ್ನದ ಪದಕ ತಾಳಿಯಾಗಿ ತೂಗೋ ತನಕ ನೀವೂ ತವರಿನ ಸಿರಿ ಮರೆಯಬೇಡಿರಿ
ನಾಳೇ ಗಂಡನಾ ಸಿರಿ ಬೆರೆತು ಬಾಳಿರಿ
ಮನಸೂ ಮೂಕವಾದರೂ ಬಾಷೇ ಒಂದೂ ಅಲ್ಲಿದೇ ಮಾತಿಗೇ ಇಟುಕಲಾಗದ ಭಾವ ಅಲ್ಲಿ ಕೂಗಿದೇ
ಮಹಾರಾಣಿ ತಮ್ಮ ಮದುವೇ ಗೊತ್ತಾಯ್ತಲ್ಲಾ...
ಮಧುಮಗಳಾಗಿ.. ಮಧುಮಗಳಾಗಿ..(ಹೂಂಹೂಂ) ಮಧುಮಗಳಾಗಿ.. ನಡೆಯಿರಿ ಇನ್ನೂ .. ಮಧುಮಗಳಾಗಿ..
ಏಳೂರಿನಲ್ಲಿ ಯಾರೂ ನಿಮ್ಮಂತಿಲ್ಲಾ ನಿಮ್ಮ ಕೈ ಹಿಡಿಯೋ ದೊರೆಗೇ ಶುಭವೇ ಎಲ್ಲಾ...
ಮಹಾರಾಣಿ ತಮ್ಮ ಮದುವೇ ಗೊತ್ತಾಯ್ತಲ್ಲಾ...
(ಮಧುಮಗಳಾಗಿ.. ಮಧುಮಗಳಾಗಿ..(ಹೂಂಹೂಂ) ಮಧುಮಗಳಾಗಿ.. ನಡೆಯಿರಿ ಇನ್ನೂ .. ಮಧುಮಗಳಾಗಿ.. )
ಹೃದಯವಂತ (೨೦೦೩) - ಅಣ್ಣಯ್ಯ ಆ ಹೃದಯವಂತ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ, ರಾಜೇಶ
ಹೆಣ್ಣು : ಓಹೋಹೋಹೊಹೋ.. ಓಓಓಓಓ ಓಹೋಹೊಹೋ ಓಓಓಓಓ
ಅಣ್ಣಯ್ಯ... .. ಹೃದಯವಂತ ನೀನೂ ಹೃದಯವಂತ
ಅಣ್ಣಯ್ಯ... .. ಹೃದಯವಂತ ನೀನೂ ಹೃದಯವಂತ
ಅಣ್ಣ ಇದ್ದರೇ ಇದ್ದರೇ ಇದ್ದರೇ . ಆನೇ ಬಲವಂತೇ ತಂಗಿಗೇ
ತಾಯಿಯಾದೇ ನೀನೂ ನನಗೇ ತಂದೆಯಾದೇ ನೀನೂ ನನಗೇ
ಅಣ್ಣಯ್ಯ.... ಹೃದಯವಂತ ನೀನೂ ಹೃದಯವಂತ
ಗಂಡು : ದಿನವೇ ಸಾಕಾಗದು ತಂಗೀ ನಿನ್ನ ನಗಿಸಿ ಲಾಲಿಸಲೂ
ಬದುಕೇ ಸಾಕಾಗದು ತಂಗೀ ನಿನ್ನ ಬಾಳೂ ಬೆಳಗಿಸಲೂ
ಈ ಜಗದ ಎಲ್ಲಾ ಸುಖ ನನಗೇ ತೃಣವಾಗಿದೇ
ಈ ಬೆಳೆದು ನಿಂತ ಮಗು ನನಗೇ ಜಗವಾಗಿದೇ..
ತಂಗೀ ಇದ್ದರೇ ಇದ್ದರೇ ಇದ್ದರೇ ದೇವರೇನೇ ಬೇಡ ಎನ್ನುವೇ ..
ಪ್ರಾಣವನ್ನೇ ಪೂಜೆಗಿಡುವೇ ತಂಗಿಯನ್ನೇ ದೇವರೇನ್ನುವೇ
ಹೆಣ್ಣು : ಅಣ್ಣಯ್ಯ..... ಹೃದಯವಂತ ನೀನೂ ಹೃದಯವಂತ
ಕೋರಸ್ : ಹೂಆ ಹೂಆ ಹೂಆ ಹೂಆ ಲಲಲಲಲಾ ಆಆಆಅ ಓಓಓಓಓ
ಹೆಣ್ಣು : ಅಣ್ಣನ ಕೈ ತುತ್ತಲ್ಲಿ ನನ್ನ ಹೆತ್ತ ತಾಯ ಲಾಲಿ ಇದೇ
ಅವನ ಕಿರು ನಗುವಲೀ ಆಹಾ ನೂರು ಚೈತ್ರ ಮಾಸ ಇದೇ
ಈ ಬಾಳ ಬೇಸಿಗಿಗೇ ಅಣ್ಣ ತಂಗಾಳಿಯೂ
ಈ ಉಸಿರ ಉಲ್ಲಾಸಕೇ ಅಣ್ಣ ಸಂಕ್ರಾತಿಯೂ
ಅಣ್ಣ ಇದ್ದರೇ .ಇದ್ದರೇ ಇದ್ದರೇ ಇದ್ದರೇ.. ದೇವರನ್ನೇ ಬೇಡ ಎನ್ನುವೇ
ಪ್ರಾಣವನ್ನೇ ಪೂಜೆಗಿಡುವೇ ಅಣ್ಣನ್ನನ್ನೇ ದೇವರೆನ್ನುವೇ
ಅಣ್ಣಯ್ಯ... . ಹೃದಯವಂತ ನೀನೂ ಹೃದಯವಂತ
ಅಣ್ಣಯ್ಯ... .. ಹೃದಯವಂತ ನೀನೂ ಹೃದಯವಂತ
--------------------------------------------------------------------------------------------------------------------------
ಹೃದಯವಂತ (೨೦೦೩) - ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ...
ಅಣ್ಣನಾ ಬೆನ್ನಿನಾ ಕೂಸೂ ಮರಿ ಬೊಂಬೆಯೇ....
ಮನ್ನಿಸು ಇಲ್ಲವೇ ದಂಡಿಸು ... ದಂಡಿಸು ಇಲ್ಲವೇ ಮನ್ನಿಸು ...
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ...
ಅಣ್ಣನಾ ಬೆನ್ನಿನಾ ಕೂಸೂ ಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು ... ದಂಡಿಸು ಇಲ್ಲವೇ ಮನ್ನಿಸು ...
ಕೋಪಾ ಬಿಡು ನಗುವ ವರ ಕೊಡು ಮಾತಾಡೂ ಮಂದಾರವೇ
ನೀ ಮನ್ನಿಸಲೂ ಒಂದು ಅಂದ ಇದೆ ಮೌನಾನೂ ಬಂಗಾರವೇ
ಬೆನ್ನನೇರಿಕೋ ನನ್ನ ಕುದುರೇ ಮಾಡಿಕೋ ಚಾಟಿ ತೆಗೆದುಕೋ ನಾಕೂ ಕೊಟ್ಟು ಹಿಡಿದುಕೋ
ನಿನ್ನ ಮಾತೂ ಕೇಳಿ ಓಡಿ ನೆಗೆಯುವಾ ..ಅಣ್ಣನಾ ಮನ್ನಿಸು .. ಇಲ್ಲವೇ ದಂಡಿಸು.. ದಂಡಿಸು ಇಲ್ಲವೇ ಮನ್ನಿಸು
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ
ಆಆಆ... ಆಆಆ... ಆಆಆ... ಆಆಆ...
ಆ ಬಡತನ ನಮ್ಮಿ ಸಿರಿತನ ನಾನೆಲ್ಲವ ಕಂಡೇನು
ಸಂತೋಷವ ನಿನಗೇ ತಿನ್ನೀಸೀ ನೋವೆಲ್ಲಾ ನಾನುಂಡೆನೂ
ಹಸಿವೇ ಎಂಬುದೇ ನೀನಗೇ ತಿಳಿಯಬಾರದೂ ಅಮ್ಮನಿಲ್ಲದಾ ಕೊರತೇ ಕಾಡಬಾರದೂ
ಎಂದೂ ಹಗಲೂ ರಾತ್ರೀ ಹೆಗಲೂ ಕೊಟ್ಟ ಈ ಅಣ್ಣನಾ ಮನ್ನಿಸು .. ಇಲ್ಲವೇ ದಂಡಿಸು.. ದಂಡಿಸು ಇಲ್ಲವೇ ಮನ್ನಿಸು
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ
ಅಣ್ಣನಾ ಬೆನ್ನಿನಾ ಕೂಸೂ ಮರಿ ಬೊಂಬೆಯೇ
ಮನ್ನಿಸು .. ಇಲ್ಲವೇ ದಂಡಿಸು.. ದಂಡಿಸು ಇಲ್ಲವೇ ಮನ್ನಿಸು
--------------------------------------------------------------------------------------------------------------------------
ಹೃದಯವಂತ (೨೦೦೩) - ಜೂಮು ಜೂಮು ಜೂಮುತಾ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಹೆಣ್ಣು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಗಂಡು : ಪ್ರೀತಿ ಬಂದಿತು ಕುಣಿದಾಡುತಾ ಹೆಣ್ಣು : ಆಸೇ ಹಾಡಿತು ಜಿಗಿದಾಡುತಾ
ಇಬ್ಬರು : ನವಲೆ ನವಲೆ ನವ್ವಾಲೇ .. (ಹೇಹೇಹೇ ) ... ಜಾಣೆ ಜಾಣ ಜೋಕಾಲೇ (ಹೇಹೇಹೇ )
ನವಲೆ ನವಲೆ ನವ್ವಾಲೇ ..
ಹೆಣ್ಣು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಇಬ್ಬರು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಹೆಣ್ಣು : ನೀನಿದ್ದ ನೆಲದಲ್ಲಿ ಜಯವಂತೇ ಸುಖವಂತೇ ನನ್ನಾ ದೊರೆ
ನಿಮ್ಮ ಮನಸೂ ಬಂಗಾರ ಅಪರಂಜಿ ನವ್ವಾಲೆಯೇ
ನೀನಿತ್ತ ಮುತ್ತುಗಳ ಜೋಪಾನ ಮಾಡಿರುವೇ ನನ್ನಾ ದೊರೇ ..
ಮುತ್ತಿನ ಹಾರ ನೀವೆನಗೇ ಕೊನೆವರೆಗೆ ನವ್ವಾಲೆಯೇ
ಗಂಡು : ಕತ್ತಲೇ ಬೆಳಗೋ ಮಣಿ ದೀಪ ಬೆಳಕಿನ ಬಲುಕು ನಿನ್ನ ರೂಪ
ನಿನ್ನ ಮುದ್ದಾಡುತ ಪ್ರೀತಿಯ ಹಾಡುತಾ ಜುಮುಜುಮುತಾ ಹೊಯ್
ಗಂಡು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಇಬ್ಬರು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಇಬ್ಬರು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಗಂಡು : ಮನ ಅರಿಯೋ ಮುದ್ದು ಮಡದಿ ನಡೆದಾಡೋ ಮನೆಯೊಂದು ಸ್ವರ್ಗಾನಂತೇ
ಹಸಿದರೇ ಪ್ರೀತಿ ಪರಮಾನ್ನ ನೀಡುತ್ತಾಳೆ ನವ್ವಾಲೆಯೇ
ಜಗವಾಳೋ ಗಂಡನಿಗೇ ಮನದರಸಿ ಮನದನ್ನೇ ಮಂತ್ರಿನಂತೇ
ಎಡಬಲ ಕೇಳಿ ಕಾಯ್ತಾಳೇ ಬೀಗುತ್ತಾಳೆ ನವ್ವಾಲೆಯೇ
ಹೆಣ್ಣು : ತುಂಗೆಯ ಹಾಗೇ ನಿಮ್ಮ ನೆರಳೂ ನೆರಳಿಗೇ ಕೊಡುವೇ ನಾ ಕೊರಳು
ಜೋತೆ ಜೋತೆ ಬಾಳುತ ಜನುಮಗಳ ಆಳುತಾ ಜುಮುಜುಮುತಾ ಹೊಯ್
ಗಂಡು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಹೆಣ್ಣು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಹೆಣ್ಣು : ಜೂಮು ಜೂಮು ಜುಮುತಾ ಜೂಮು ಜೂಮು ಜುಮುತಾ ಜಿಗಿತಾ ಜಿಗಿತಾ ಕುಣಿ ಕುಣಿತಾ
ಗಂಡು : ಪ್ರೀತಿ ಬಂದಿತು ಕುಣಿದಾಡುತಾ ಹೆಣ್ಣು : ಆಸೇ ಹಾಡಿತು ಜಿಗಿದಾಡುತಾ
ಇಬ್ಬರು : ನವಲೆ ನವಲೆ ನವ್ವಾಲೇ .. (ಹೇಹೇಹೇ ) ... ಜಾಣೆ ಜಾಣ ಜೋಕಾಲೇ (ಹೇಹೇಹೇ )
ನವಲೆ ನವಲೆ ನವ್ವಾಲೇ ..
--------------------------------------------------------------------------------------------------------------------------
ಇಬ್ಬರು : ನವಲೆ ನವಲೆ ನವ್ವಾಲೇ .. (ಹೇಹೇಹೇ ) ... ಜಾಣೆ ಜಾಣ ಜೋಕಾಲೇ (ಹೇಹೇಹೇ )
ನವಲೆ ನವಲೆ ನವ್ವಾಲೇ ..
--------------------------------------------------------------------------------------------------------------------------
ಹೃದಯವಂತ (೨೦೦೩) - ಘಮ ಘಮ ಘಮಿಸೋ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮನು, ಚಿತ್ರಾ, ಅನುರಾಧ ಶ್ರೀರಾಮ್
ಕೋರಸ್ : ನನನನನನ .... ನನನನನನ .... ನನನನನನ .... ನನನನನನ ....
ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಓಓಓಓಓಓಓ ... ಓಓಓಓಓಓಓ ... ಓಓಓಓಓಓಓ ... ಓಓಓಓಓಓಓ ...
ಹೆಣ್ಣು : ಘಲಘಲಘಲಘಲಘಲ ಅಂತಾ ಗಂಡು : ಫಳಫಳಫಳಫಳಫಳಫಳ ಅಂತಾ
ಹೆಣ್ಣು : ಘಲಘಲಘಲಘಲಘಲ ಅಂತಾ ಗಂಡು : ಘಲಘಲಘಲಘಲಘಲ ಅಂತಾ
ಹೆಣ್ಣು : ಇನ್ನೂ ಯಾಕ ಬರಲ್ಲಿಲ್ಲವ್ವಾ.. ಮಾತಾಡೂ ಮಾವ್
ಘಮಘಮಾ ಅಂತ ಘಮಘಮಿಸೋ ಪುಷ್ಪ ಕಾಣದೇ ಆಸೇ ಬಾರದೇ ..
ಗಂಡು : ಘಮಘಮಘಮಘಮ ಅಂತಾ ಹೆಣ್ಣು : ಫಳಫಳಫಳಫಳಫಳಫಳ ಅಂತಾ
ಗಂಡು : ಘಲಘಲಘಲಘಲಘಲ ಅಂತಾ ಹೆಣ್ಣು : ಘಲಘಲಘಲಘಲಘಲ ಅಂತಾ
ಹೆಣ್ಣು : ಇನ್ನೂ ಯಾಕ ಬರಲ್ಲಿಲ್ಲವ್ವಾ.. ಮಾತಾಡೂ ಮಾವ್
ಫಲಾಫಲ ರಸ ದಾಳಿಂಬೆ ಫಲವೂ ಕಾಣದೇ ವಯಸ್ಸು ಕೇರಳದೇ ..
ಕೋರಸ್ : ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಗಂಡು : ಮಲ್ಲೇ ಜಾಜೀ ಸಂಪಿಗೇ ಸೇರಿ ಆದ ಹೆಣ್ಣಿದು ಎಂದೂ ಬಾಡದಂತ ಹೂವೂ ನಿನ್ನ ಚೆಲುವಿದೂ
ಕೋರಸ್ : ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಹೆಣ್ಣು : ಆಸೇ ದೀಪ ಹಚ್ಚಿದ ಮೇಲೇ ಆರಬಾರದೂ ಬೆಂಕಿಯಂತಾ ಗಂಡಾಗೋನು ಆಗಬಾರದೂ
ಗಂಡು : ಒಂದು ಬಂತು ಆಸೆಯಿಂದ ಹೃದಯ ಸದ್ಯ ಸರಸಕಿಲ್ಲ ಈಗ ಸಮಯ
ಹೆಣ್ಣು : ಬಿಸಿ ಬಿಸಿ ಭೋಜನ ಸಮಯಾ.. ಯಾಕೇ ಬಂತೂ ಸಮಯದ ವಿಷಯಾ..
ಗಂಡು : ಘಮಘಮಘಮಘಮ ಅಂತಾ ಹೆಣ್ಣು : ಘಲಘಲಘಲಘಲಘಲ ಅಂತಾ
ಕೋರಸ್ : ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ..
ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ.. ಕೂಕ್ಕೂ..
ಹೆಣ್ಣು : ಕರ್ಕನಾರೀಶ್ವರನಾಗಿ ಒಲಿದ ನಂತರ ಸತಿಪತಿಯಲಿ ನಡುವೇ ಏಕೆ ಅದರ ನಂತರ
ಕೋರಸ್ : ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಗಂಡು : ಚಿನ್ನ ನನ್ನ ಕಣ್ಣಲಿ ನಿನ್ನಾ ಕನಸು ತುಂಬಿದೇ ಕನಸೂ ನನಸೋ ಆಗೋ ಸೊಗಸೂ ನಿನಗೇ ಇಲ್ಲಿದೇ
ಹೆಣ್ಣು : ಆ ಪ್ರೀತಿ ಮಳೆ ತೆನೆಯನ್ನೂ ಬರುವಾಗ ಅದೇನೂ ಹೆಣ್ಣು ಗಂಡೂ
ಗಂಡು : ಬೆಳದಿಂಗಳಿಗೊಂದು ಬಿಸಿ ಬಂದೂ ಬಾಳೂ ಬೆಂದಾಗ ನಾನೂ ನೀನೂ ಒಂದೂ
ಗಂಡು : ಘಮಘಮಘಮಘಮ ಅಂತಾ ಘಲಘಲಘಲಘಲಘಲ ಅಂತಾ
ಘಲಘಲಘಲಘಲಘಲ ಅಂತಾ ಘಮಘಮಘಮಘಮ ಅಂತಾ
ಹೆಣ್ಣು : ಆಆಆ.. ಇನ್ನೂ ಯಾಕ ಬರಲ್ಲಿಲ್ಲವ್ವಾ.. ಮಾತಾಡೂ ಮಾವ್
ಘಮಘಮಾ ಅಂತ ಘಮಘಮಿಸೋ ಪುಷ್ಪ ಕಾಣದೇ ಆಸೇ ಬಾರದೇ ..
ಗಂಡು : ಘಮಘಮಘಮಘಮ ಅಂತಾ ಹೆಣ್ಣು : ಫಳಫಳಫಳಫಳಫಳಫಳ ಅಂತಾ
ಗಂಡು : ಘಲಘಲಘಲಘಲಘಲ ಅಂತಾ ಹೆಣ್ಣು : ಘಲಘಲಘಲಘಲಘಲ ಅಂತಾ
--------------------------------------------------------------------------------------------------------------------------
No comments:
Post a Comment