141. ನಾ ಮೆಚ್ಚಿದ ಹುಡುಗ (1972)


ನಾ ಮೆಚ್ಚಿದ ಹುಡುಗ ಚಿತ್ರದ ಹಾಡುಗಳು 
  1. ಬೆಳದಿಂಗಳಿನ ನೊರೆಹಾಲು ಕೊಡದಲಿ 
  2. ಮಂಗಳದಾ ಈ ಸುದಿನ ಮಧುರವಾಗಲಿ
  3. ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
  4. ಅಪ್ಪ ಅಮ್ಮ ಜಗಳದಲಿ 
  5. ಚೆಲುವೇ ಓ ಚೆಲುವೇ 
ನಾ ಮೆಚ್ಚಿದ ಹುಡುಗ (1972) - ಬೆಳದಿಂಗಳಿನ ನೊರೆಹಾಲು
ಸಾಹಿತ್ಯ: ಆರ್.ಎನ್. ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿಎಸ್, ಎಸ್. ಜಾನಕಿ

ಗಂಡು : ಬೆಳದಿಂಗಳಿನ ನೊರೆಹಾಲು ಕೊಡದಲಿ ತುಂಬಿ ತಂದವಳೆ
            ಹೊಳೆಯುವ ತಾರೆಯ ಹೊಂಬೆಳಕು ಕಣ್ಣಲಿ ಸೂಸಿ ನಿಂದವಳೆ
            ಬಾ ಬಾರೆ.......  ಬಾ ಬಾರೇ ಓ ಗೆಳತಿ ಜೀವನ ಸಂಗಾತಿ
ಹೆಣ್ಣು : ಮಲ್ಲಿಗೆ ಹಂಬಿನ ತೋಟದಲಿ ತಂಬೆರಲಂತೆ ಬಂದವನೆ
          ಅರಿಯದ ಹೆಣ್ಣಿನ ಹೃದಯದಲಿ ಸುಮಧುರ ನೋವನು ತಂದವನೆ
          ಬಾ ಬಾರಾ ..........ಬಾ ಬಾರಾ ಓ ಗೆಳೆಯ ಜೀವನ ಸಂಗಾತಿ......

ಗಂಡು : ವಸಂತ ಕಾಲದ ಪ್ರಥಮ ಕುಸುಮವೋ ಪ್ರೇಮ ಪಲ್ಲವಿಯೋ......
           ವಸಂತ ಕಾಲದ ಪ್ರಥಮ ಕುಸುಮವೋ ಪ್ರೇಮ ಪಲ್ಲವಿಯೋ......
ಹೆಣ್ಣು :  ಅನುರಾಗಾಮೃತ ಝರಿಯಲಿ ಮಿಂದ ಚೆಲುವ ಚೆನ್ನಿಗನೋ
ಗಂಡು : ಹೂವಿನ ತೇರಲಿ ಮೆರೆಯುತ ಬಂದ ದೇವ ಕನ್ನಿಕೆಯೋ..........
ಹೆಣ್ಣು : ಮಲ್ಲಿಗೆ ಹಂಬಿನ ತೋಟದಲಿ ತಂಬೆರಲಂತೆ ಬಂದವನೇ

ಹೆಣ್ಣು : ಆಸೆಗಳೆಂಬ ಕಾರಂಜಿಗಳು ಹೊಮ್ಮುವ ನಂದನವೋ......
           ಆಸೆಗಳೆಂಬ ಕಾರಂಜಿಗಳು ಹೊಮ್ಮುವ ನಂದನವೋ......
ಗಂಡು : ನಿನ್ನ ಕಿರುನಗೆ ಎಂಬ ಹೂವುಗಳಿಂದ ಮೆರೆಯುವ ಹೂಬನವೋ
ಹೆಣ್ಣು : ಪ್ರಣಯಿಗಳ ಮಧುರವಿಹಾರದ ಪ್ರೇಮ ಕಾಶ್ಮೀರವೋ..........
ಗಂಡು : ಬೆಳದಿಂಗಳಿನ ನೊರೆಹಾಲು ಕೊಡದಲಿ ತುಂಬಿ ತಂದವಳೆ
ಹೆಣ್ಣು : ಅರಿಯದ ಹೆಣ್ಣಿನ ಹೃದಯದಲಿ ಸುಮಧುರ ನೋವನು ತಂದವನೆ
ಗಂಡು :   ಬಾ ಬಾರೆ....
ಹೆಣ್ಣು :  ಬಾ ಬಾರಾ ..........ಬಾ ಬಾರಾ ಓ ಗೆಳೆಯ
ಗಂಡು : ಜೀವನ ಸಂಗಾತಿ......
ಇಬ್ಬರು: ಲಾಲಲಾ ಲಲಲ್ಲಲಲ್ಲ ಲಾಲಲಾ
---------------------------------------------------------------------------------------------------------------------

ನಾ ಮೆಚ್ಚಿದ ಹುಡುಗ (1972) - ಮಂಗಳದಾ ಈ ಸುದಿನ ಮಧುರವಾಗಲಿ
ಸಾಹಿತ್ಯ : ಆರ್.ಎನ್. ಜಯಗೋಪಾಲ್ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್. ಜಾನಕಿ


ಆಆಆ... ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲವೇ ಈ ಮನೆಯಾ ನಂದಾ ದೀಪವಾಗಲಿ
ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲವೇ ಈ ಮನೆಯಾ ನಂದಾ ದೀಪವಾಗಲಿ

ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ........
ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ........
ಶ್ರುತಿಯೊಡನೆ ಸ್ವರತಾನ ಲೀನವಾಗಲಿ ಶುಭಗೀತೆ ಮಿಡಿಯಲಿ.........
ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲವೇ ಈ ಮನೆಯಾ ನಂದಾ ದೀಪವಾಗಲಿ

ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು....
ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು....
ಮಮತೆ ಇರುವ ಮನೆಯೆ ಸದಾ ಜೇನಿನ ಗೂಡು
ಅದೇ ಶಾಂತಿಯ ಬೀಡು...............................
ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲವೇ ಈ ಮನೆಯಾ ನಂದಾ ದೀಪವಾಗಲಿ
ಮಂಗಳದಾ ಈ ಸುದಿನ ಮಧುರವಾಗಲಿ
--------------------------------------------------------------------------------------------------------------------------

ನಾ ಮೆಚ್ಚಿದ ಹುಡುಗ (1972) - ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ
ಸಾಹಿತ್ಯ : ಆರ್.ಎನ್. ಜಯಗೋಪಾಲ್ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್. ಜಾನಕಿ


ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ.....
ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ .
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ.....
ನಾ ಚುಂಬಿಸಿ ಕಳಿಸಿರುವೆ.....

ಪದಗಳು ತುಂಬಿದ ಕವನವಿದಲ್ಲ ಹೃದಯವೆ ಅಡಗಿದೆ ಇದಲಿ
ಪದಗಳು ತುಂಬಿದ ಕವನವಿದಲ್ಲ ಹೃದಯವೆ ಅಡಗಿದೆ ಇದಲಿ
ಅದರ ಒಡೆತನ ನಿನಗೇ ಅಲ್ಲ ಕೋಮಲ ಎಚ್ಚರವಿರಲಿ
ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ

ತಗಲದೆ ನಿನ್ನಾ ಕೈಗಳಿಗೀಗ ವಿರಹದ ಈ ಬಿಸಿಯುಸಿರು
ತಗಲದೆ ನಿನ್ನಾ ಕೈಗಳಿಗೀಗ ವಿರಹದ ಈ ಬಿಸಿಯುಸಿರು
ನನ್ನಯ ದೇಹದ ನರನಾಡಿಗಳು ಮಿಡಿದಿದೆ ನಿನ್ನಯ ಹೆಸರು
ಗೋಪೀ.. ಗೋಪೀ.. ಗೋಪೀ ...
ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ

ಕಡಲಿನ ನೀರು ಬಿಂದಿಗೆಯಿಂದ ಬರಿದು ಮಾಡಲು ಆಗುವುದೇ
ಕಡಲಿನ ನೀರು ಬಿಂದಿಗೆಯಿಂದ ಬರಿದು ಮಾಡಲು ಆಗುವುದೇ 
ನನ್ನ ಪ್ರೇಮದ ಆಳವ ನಿನಗೆ ಪತ್ರದೆ ತಿಳಿಸಲು ಆಗುವುದೇ 
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ.....
ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ
ಈ ಪತ್ರದೆ ಬರೆದ ಪದಗಳನು ಚುಂಬಿಸಿ ಕಳಿಸಿರುವೆ.....
ನಾ ಚುಂಬಿಸಿ ಕಳಿಸಿರುವೆ.....
ಓ..ಲಾಲ ಲಾಲ ಲಾಲ ಲಾಲ ಲಾಲ ಲಾಲ 
--------------------------------------------------------------------------------------------------------------------------

ನಾ ಮೆಚ್ಚಿದ ಹುಡುಗ (1972) - ಅಪ್ಪ ಅಮ್ಮ ಜಗಳದಲಿ  
ಸಂಗೀತ:ವಿಜಯಭಾಸ್ಕರ, ಸಾಹಿತ್ಯ:ಆರ್.ಎನ್. ಜಯಗೋಪಾಲ, ಗಾಯನ: ವಾದಿರಾಜ, ಎಲ್. ಆರ್.ಅಂಜಲಿ, ಬಿ.ಕೆ.ಸುಮಿತ್ರಾ 

ಗಂಡು : ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು 
            ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು 
ಹೆಣ್ಣು : ಮೂಗಿನ ತುದಿಯ ಕೋಪದಲಿ ಮೂಗೇ ಬಲಿಯಾಯಿತು 
ಎಲ್ಲರು : ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು 
           ಮೂಗಿನ ತುದಿಯ ಕೋಪದಲಿ ಮೂಗೇ ಬಲಿಯಾಯಿತು 
           
ಹೆಣ್ಣು : ಕೋಣೆಯ ನಡುವೇ ಬಂದಿಹ ಗೋಡೆ ಅಣುಕಿಸಿ ನಗುತಿಹುದೂ  
          ಮನಗಳ ನಡುವೇ ನಿಂತಿಹ ಗೋಡೇ ಮೌನದಿ ಅಳುತಿಹುದು 
          ಲೇಖನಿ ಹಿಡಿವ ಕೈಗಳು ಇಂದು ಸೌಟನು ಹಿಡಿದಿಹುದು 
          ಹೊಟ್ಟೆಯು ತಾಳ ಹಾಕುತ ಭರತನಾಟ್ಯವ ಮಾಡಿಹುದು 
ಗಂಡು : ಪ್ರೊಗ್ರಾಸ್ ಕಾರ್ಡಿಗೇ ಅಪ್ಪನೇ ಬೇಕೂ 
ಹೆಣ್ಣು : ಜಡೆಯನು ಹೆಣೆಯಲೂ ಅಮ್ಮನೇ ಬೇಕೂ 
ಗಂಡು : ಪಾಕೆಟ್ ಮನೀಗೆ ಅಪ್ಪನೇ ಬೇಕೂ 
ಹೆಣ್ಣು : ನಮಗೇ ಎಂದೂ ಇಬ್ಬರೂ ಬೇಕೂ 
ಗಂಡು : ಹಸಿವೂ  ಹಸಿವೂ ಹಸಿವೂ ಹಸಿವೂ... ಹಸಿವೂ ಹಸಿವೂ 
ಎಲ್ಲರು : ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು 
           ಮೂಗಿನ ತುದಿಯ ಕೋಪದಲಿ ಮೂಗೇ ಬಲಿಯಾಯಿತು 

ಹೆಣ್ಣು : ಗಂಡ ಹೆಂಡಿರ ಮುನಿಸೂ ಉಂಡು ಮಲಗುವ ವರೆಗೆಯಂತೇ 
          ಚಂಡಿಯ ಹಿಡಿದು ಕಾಡುವದೆಂದೂ ಮೂರ್ಖರ ತರವಂತೇ 
          ಎತ್ತು ಏರಿಗೆ ಕೋಣ ನೀರಿಗೇ ಎಳೆಯಲು ಗತಿಯೇನೂ 
          ಗಾಡಿಯ ಗತಿಯೇನೂ 
          ಬೇಲಿಯೇ ಹೊಲವ ಮೇಯ್ದರೇ ಬೆಳೆಯುವ ಪೈರಿನ ಪಾಡೇನು 
ಗಂಡು : ಪಾಠವ ಕಲಿಸೇ ಅಪ್ಪನೇ ಬೇಕೂ 
           ಊಟವ ಮಾಡಿಸೇ ಅಮ್ಮನೇ ಬೇಕೂ 
ಹೆಣ್ಣು : ಎಲ್ಲರ ಮನದೇ ನೆಮ್ಮದಿ ಬೇಕೂ ಮನೆಯು ಎಂದಿಗೂ ನಗುತಿರಬೇಕು 
ಗಂಡು : ಶಾಂತಿ ಶಾಂತಿ ಶಾಂತಿ ಶಾಂತಿ ಶಾಂತಿ 
ಎಲ್ಲರು : ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು 
           ಮೂಗಿನ ತುದಿಯ ಕೋಪದಲಿ ಮೂಗೇ ಬಲಿಯಾಯಿತು 
           ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು 
           ಮೂಗಿನ ತುದಿಯ ಕೋಪದಲಿ ಮೂಗೇ ಬಲಿಯಾಯಿತು 
            ಹಸಿವೂ  ಹಸಿವೂ ಹಸಿವೂ ಹಸಿವೂ... ಹಸಿವೂ ಹಸಿವೂ 
-------------------------------------------------------------------------------------------------------------------------

ನಾ ಮೆಚ್ಚಿದ ಹುಡುಗ (1972) - ಚೆಲುವೇ ಓ ಚೆಲುವೇ
ಸಂಗೀತ:ವಿಜಯಭಾಸ್ಕರ, ಸಾಹಿತ್ಯ:ಆರ್.ಎನ್. ಜಯಗೋಪಾಲ, ಗಾಯನ: ಪಿ.ಬಿ.ಶ್ರೀನಿವಾಸ್, ಏ.ಎಲ್.ರಾಘವನ್  


ರಾಘ: ಚೆಲುವೇ ಓ ಚೆಲುವೇ ಚೆಲುವೇ ಓ ಚೆಲುವೇ
        ನಿನಗಾಗೇ ಬಂದಿರುವೇ ನಿನ್ನದೆರುಗೇ ನಿಂತಿರುವೇ 
        ನಿನ್ನಲ್ಲಿ ಬೆರೆತು ನನ್ನನ್ನೇ ಮರೆತು ಮನಸನು ತಂದಿರುವೇ 
        ಚೆಲುವೇ ಓ ಚೆಲುವೇ 
ಪಿಬಿ: ಹೂಂ ಹೂಂ ಹ್ಹಹ್ಹಾ ...ಆಆಆ... (ಆಆಆ... ಊ ) 
        ನಿನಗಾಗೇ ಬಂದಿರುವೇ ಚೆಲುವೇ ನಿನಗಾಗೇ ಬಂದಿರುವೇ 
        ನಿನ್ನೆದುರೇ ನಿಂತಿರುವೇ... ನಿನಗಾಗೇ ಬಂದಿರುವೇ
        ನಿನ್ನಲ್ಲಿ ಬೆರೆತು ನನ್ನನ್ನೇ ಮರೆತು ಮನಸನು ತಂದಿರುವೇ ಚೆಲುವೇ      
        ನಿನಗಾಗೇ ಬಂದಿರುವೇ ಚೆಲುವೇ ನಿನಗಾಗೇ ಬಂದಿರುವೇ.. ಬಂದಿರುವೇ 

ರಾಘ: ಹೇಹೆಹೆ.. (ಹ್ಹುಂಹ್ಹುಂ ಹ್ಹೂಂ )  ಹಸುರಿನ ಪೈರಿನ ಸೀರೆಯನ್ನುಟ್ಟು 
         ಮಂಜಿನ ಮಣಿಗಳ ಮಾಲೆಯ ತೊಟ್ಟು 
         ಹಸುರಿನ ಪೈರಿನ ಸೀರೆಯನ್ನುಟ್ಟು ಮಂಜಿನ ಮಣಿಗಳ ಮಾಲೆಯ ತೊಟ್ಟು 
         ಕೆಂಪಿನ ಹೂವಗಳ ತಿಲಕವನಿಟ್ಟು 
         ಕೆಂಪಿನ ಹೂವಗಳ ತಿಲಕವನಿಟ್ಟು ನಡೆಯುವ ಮೆಲ್ಲನೇ ಅಡಿಗಳ ನಿಟ್ಟೂ 
         ಚೆಲುವೇ......  ಓ...  ಚೆಲುವೇ.... 
ಪಿಬಿ : ಹಸುರಿನ ಪೈರಿನ ಸೀರೆಯನ್ನುಟ್ಟು ಸೀರೇ..ಸೀರೇ... ಸೀರೇ 
         ಹಸುರಿನ ಪೈರಿನ ಸೀರೆಯನ್ನುಟ್ಟು ಮಂಜಿನ ಮಣಿಗಳ ಮಾಲೆಯ ತೊಟ್ಟು 
         ಕೆಂಪಿನ ... ಭೇಷ್ ಭೇಷ್ ಅಯ್ಯೋ 
         ಕೆಂಪಿನ ಹೂವಗಳ ತಿಲಕವನಿಟ್ಟು ನಡೆಯುವೇ ಮೆಲ್ಲನೇ ಅಡಿಗಳ ನಿಟ್ಟೂ 
         ಚೆಲುವೇ......  ಓ...  ಚೆಲುವೇ..
        ನಿನಗಾಗೇ ಬಂದಿರುವೇ.. ಬಂದಿರುವೇ  ಬಂದಿರುವೇ ಬಂದಿರುವೇ
ಇಬ್ಬರು : ಚೆಲುವೇ.... ಚೆ...ಲು...ವೇ... ಆಆಆ.. ಚೆಲ್ಲುವೇ     
--------------------------------------------------------------------------------------------------------------------------

No comments:

Post a Comment