09. ಹೂವು ಹಣ್ಣು (1993)


ಹೂವು ಹಣ್ಣು ಚಿತ್ರದ ಗೀತೆಗಳು 
  1.      
  2. ಮಂಜು ಮಂಜು 
  3. ನಿಂಗಿ ನಿಂಗಿ 
  4. ತಾಯಿ ತಾಯೀ (ಯುಗಳ)
  5. ರಾಮನ ಪಾದ ಪೂಜೆಯ 
  6. ತಾಯಿ ತಾಯೀ (ಗಂಡು)
 ಹೂವು ಹಣ್ಣು (1993) -
ಸಾಹಿತ್ಯ  ಮತ್ತು  ಸಂಗೀತ : ಹಂಸಲೇಖ             ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ವಿಜಯ ಲಕ್ಷ್ಮಿ

ಕೋರಸ್ : ಅಂ ಅಃ               ಹಾಹ ಒಹೊ ಅಂಬೂಕೆ ಏನುಂಟ್ ಇದರಲ್ ಮಹಾ
ಕೋರಸ್ : ಕಾ ಕಿ ಕೀ ಕೆ ಕೆ ಕೈ ಕೊ ಕೊ ಕಂ ಕಃ                ಕಾಕೊಂಬೂಕು ಅಂಬೂಕೆ ಏನುಂಟ್ ಇದರಲ್ ಮಹಾ
ಹೆಣ್ಣು :ಓಯ್ ಕನ್ನಡ ಪಂಡಿತರೆ                                        ಗಂಡು : ಏನ್ ಕನ್ನಡ ಕೂಸುಗಳೆ
ಹೆಣ್ಣು :ಟ್ರೈನು ಫ್ಲೈನು ಫೊನು ಫ್ಯಾನು ಬೇಕಂತಿರಲ್ಲ ಸ್ವೀಟಿ ಬ್ಯುಟಿ ಇಂಗ್ಲೀಷನ್ನ ಬೇಡಂತಿರಲ್ಲ
ಕೋರಸ್ : ಮಾ ಮಿ ಮೆ ಮೆ ಮೈ ಮೊ ಮೊ ಮೌ ಮಂ ಮಃ 
ಮ್ಯಾನು ಮೂನು ಮುಟ್ಟಿದರು ಹಮ್ ತುಮ್ ದೇಖೊ ಯಹಾಂ
ಗಂಡು : ಓಹ್ ಕನ್ನಡ ಬೊಂಬೆಗಳೆ                                   ಹೆಣ್ಣು :ಏನ್ ಕನ್ನಡ ಶಿಲ್ಪಿಗಳೆ
ಗಂಡು :ತಾಯಿ ಮಣ್ಣು ಗಾಳಿ ನೀರು ಬೇಕಂತಿರಲ್ಲ                ತಾಯಿ ಭಾಷೆ ಮಾತ್ರ ಯಾಕೊ ಬೇಡಂತಿರಲ್ಲ
ಕೋರಸ್ : ಹೈ ಅಂ ಅಃ               ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ

ಹೆಣ್ಣು : Good Morning Sir!                                        ಗಂಡು :ಶುಭೋದಯ ತಾಯಿ
ಹೆಣ್ಣು : I want a clarification Sir!                               ಗಂಡು :ಗೊತ್ತಿದ್ರೆ ಹೇಳ್ತೀನಿ! ಕೇಳಿ
ಹೆಣ್ಣು : ಮಾರ್ಕೆಟ್ ನಿಂದ ಮಾರುಕಟ್ಟೆ ಬಂತ,                      ಮಾರುಕಟ್ಟೆ ಇಂದ ಮಾರ್ಕೆಟ್ ಬಂತ !
ಗಂಡು :ಕಣ್ಣು ಮೂಗು ಹೋಲುವುದು ಅಂತ ಪರನಾರೆ?? ನಮದಾಗುತ್ತ
ಹೆಣ್ಣು :Scienceu Mathsu ಮೊದಲಿಲ್ಲಿತ್ತ ಇಲ್ಲ ಎಲ್ಲಾ ಅಲಿಂದ್ಲೆ ಬಂತ
ಗಂಡು :ಭ್ರಹ್ಮ ಗುಪ್ತನು ಗಣಿತ ಲೋಕಕೆ ಸೊನ್ನೆಯನಿತ್ತ ಎಂಬುದು ಗೊತ್ತಾ
ಹೆಣ್ಣು :ಇಂಡಿಯಾಗ್ ಯಾಕೊ ಇಂಗ್ಲೀಷ್ ಹೆಸರು                    ಗಂಡು :ಗುಲಾಮ ಗಿರಿಯ ಗುರುತಿಗೆ ತಾಯಿ
ಹೆಣ್ಣು :ಭಾರತಕ್ಯಾಕೊ ನೂರೆಂಟು ಭಾಷೆ                              ಗಂಡು :ಸ್ವತಂತ್ರ ಭಾರತದ್ ಸಾಕ್ಷಿಗ್ ತಾಯಿ
ಹೆಣ್ಣು :ಕನ್ನಡದ ಜನರು ಮೇಲೇಳಲಿಲ್ಲ                           ಗಂಡು :ನಿಮ್ಮಂತ ಕಪಿಗಳು ಕಾಲೆಳೆದಿರಲ್ಲ
ಕೋರಸ್ : ಅಂ ಅಃ               ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ

ಹೆಣ್ಣು : ಓಹ್ ಕನ್ನಡ ವಾದಿಗಳೆ                                   ಗಂಡು :ಎನ್ ಕನ್ನಡ ವೈರಿಗಳೆ
ಹೆಣ್ಣು : ಸೂಟು ಬೂಟು ಬ್ಯಾಂಗಲ್ ಗಾಗಲ್ ಹಾಕೊಂತೀರಲ್ಲ,   ನೀಟು ಪ್ಯಾಂಟು ಇಂಗ್ಲೀಷನ್ನ ಬೇಡಂತಿರಲ್ಲ
ಕೋರಸ್ : ಅಂ ಅಃ                ಹಾಹ ಒಹೊ ಅಂಬೂಕಿ ಎನುಂಟ್ ಇದರಲ್ ಮಹಾ
ಹೆಣ್ಣು : ಸಾರ್! ಗಂಡು : ಗುರುಗಳೆ !!                                   ಹೆಣ್ಣು : ಸಾರ್! ಗಂಡು :ಮಾಸ್ಥ್ರೇ !!
ಹೆಣ್ಣು : ಜೀನ್ಸು ಪ್ಯಾಂಟು ಇಷ್ಟ ಬಿಡುವುದಂತು ಕಷ್ಟ,                ಹೇಗೆ ಬಾಳ್ಬೆಕು, ಎನ್ ಮಾಡ್ಬೆಕು.
ಗಂಡು :ವಾರದಲ್ಲಿ ನಾಲ್ಕು ದಿನ ಕೊಡುವೆ ಅಂಗಿ ಹಾಕ್,            ಮೂರು ದಿನ ರೆಷ್ಮೆಯ ಸೀರೆ ಉಡು ಸಾಕು.
ಹೆಣ್ಣು : ಕನ್ನಡವು ಇಷ್ಟ ಕಲಿಯೋದು ಕಷ್ಟ,                             ಇಂಗ್ಲೀಷ್ ಈಸಿ ಎಲ್ಲಾರ್ಗು ಚೂಸಿ.
ಗಂಡು :ಕಷ್ಟವಂತು ಸ್ಪಷ್ಟ ಸುಮ್ಮನಿದ್ರೆ ನಷ್ಟ,                          ಸರಳ ಮಾಡು ಭಾಷೆಯ ಮೆರೆಸು ನಮ್ಮ ಕೀರ್ತಿಯ.
ಹೆಣ್ಣು : ಇಂಗ್ಲೀಷ್ ಭಾಷೆ ದೊಡ್ದಾಯಿತು ಯಾಕೆ             ಗಂಡು :ತಾಯಿ ಭಾಷೆನ ಅವರು ಪ್ರೀತಿ ಮಾಡಿದ್ದಕ್ಕೆ
ಹೆಣ್ಣು : ಕನ್ನಡದ ಭಾಷೆ ಚಿಕ್ಕದಾಯಿತು ಯಾಕೆ              ಗಂಡು : ಕೊಡದೇನೆ ಬರಿ ತೆಗೆದುಕೊಂಡಿದಕ್ಕೆ
ಹೆಣ್ಣು : ಕೊಡೊದಕ್ಕೆ ನಮ್ ಹತ್ರ ಏನ್ ಇದೆ ಇಲ್ಲಿ           ಗಂಡು :ಸ್ವಾಭಿಮಾನ ತುಂಬಿಕೊಡು ನಿನ್ನ ಪ್ರೀತಿಯಲ್ಲಿ
ಕೋರಸ್ : ಅಂ ಅಃ          ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ

ಹೆಣ್ಣು : ಓಹ್ ಕನ್ನಡ ತುತ್ತೂರಿಯೆ                               ಗಂಡು : ಎನ್ ಕನ್ನಡ ಕಸ್ತೂರಿಯೆ
ಹೆಣ್ಣು : ಮಕ್ಕಳ ಕೈಲಿ ಮಮ್ಮಿ ಡ್ಯಾಡಿ ಬರೆಸೊದ್ ಯಾಕಪ್ಪ     ಗಗನ ಮುಟ್ಟೊ ಇಂಗ್ಲೀಷ್ ಗಿರಿಯ ಜರಿಯೊದ್ ಯಾಕಪ್ಪ
ಕೋರಸ್ : ಕಾ ಕಿ ಕೀ ಕೆ ಕೆ ಕೈ ಕೊ ಕೊ ಕ್ಂ ಕ್ಃ             ಕನ್ನಡ ಕಲಿಸಿ ಇಂಗ್ಲೀಷ್ ಕಲಿತರೆ ಅಮ್ಮನ ಹರಕೆಗೆ ಜಯ.
ಗಂಡು :ಓಹ್ ಕನ್ನಡ ಕಸ್ತೂರಿಯೆ                                ಹೆಣ್ಣು : ಎನ್ ಕನ್ನಡ ತುತ್ತೂರಿಯೆ
ಗಂಡು :ಲೋಕ ದೊಡ್ಡದು ಕನ್ನಡ ಚಿಕ್ಕದು ನನಗೆ ಗೊತಮ್ಮ    ಹೆಸರೆಲೊಕೆ ಕೈಹಿಗೆ ಒಂದು ಬಾವುಟ ಬೇಕಮ್ಮ
ಕೋರಸ್ : ಮಾ ಮಿ ಮೆ ಮೆ ಮೈ ಮೊ ಮೊ ಮೌ ಮಂ ಮಃ        ಬಾರಿಸು ಬಾರಿಸು ಹೃದಯ ಶಿವ ಕನ್ನಡ ಡಿಂಡಿಮವ !!!
---------------------------------------------------------------------------------------------------------------------------------------


ಹೂವು ಹಣ್ಣು (1993) - ಮಂಜು ಮಂಜು ಬೆಳ್ಳಿ ಮಂಜು

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ  ಗಾಯನ : ರಾಜೇಶ್ ಕೃಷ್ಣನ್, ಚಿತ್ರ

ಗಂಡು: ಮಂಜು ಮಂಜು ಬೆಳ್ಳಿ ಮಂಜು  ಮಂಜಿನ ರೇಶಿಮೆ ರಾಶಿಯಲ್ಲಿ ಪ್ರೇಮಿಸುವ ಹಿಮಕಾಶಿಯಲ್ಲಿ ಹೋ....
ಹೆಣ್ಣು: ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು....

ಗಂಡು: ಆ ಸಂಪಿಗೆ ಹೂ ಹೋಲುವ ನಾಜುಕಿನ ಈ ಮೂಗಿನ .. ಅಂದದ ಮುತ್ತಿನ ಮೂಗುತಿ ಹಿಮಬಿಂದುವೆ
ಹೆಣ್ಣು: ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಶಿಮೆ ರಾಶಿಯಲ್ಲಿ ಪ್ರೇಮಿಸುವ ಹಿಮಕಾಶಿಯಲ್ಲಿ ಹೋ....
ಗಂಡು: ಮಂಜು ಮಂಜು ಬೆಳ್ಳಿ ಮಂಜು  ಮಂಜು ಮಂಜು....

ಹೆಣ್ಣು: ಈ ಹಸುವಿನ ಈ ವಣ ಜನ ಮುಂಜಾವಿನ ಈ ಜೋಡಿಗೆ.. ಸುರಿದರು ಮಂಜಿನ ರತುವಿನ ಹಿಮ ಮಣಿಗಳ
ಗಂಡು: ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಶಿಮೆ ರಾಶಿಯಲ್ಲಿ ಪ್ರೇಮಿಸುವ ಹಿಮಕಾಶಿಯಲ್ಲಿ ಹೋ....
ಹೆಣ್ಣು: ಮಂಜು ಮಂಜು ಬೆಳ್ಳಿ ಮಂಜು  ಮಂಜು ಮಂಜು..
------------------------------------------------------------------------------------------------------------------------

ಹೂವು ಹಣ್ಣು (1993) - ನಿಂಗಿ ನಿಂಗಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ   ಗಾಯನ: ಸಿ. ಅಶ್ವಥ್ ಮತ್ತು ಸಂಗಡಿಗರು 

ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ  ಹೊಯ್ಯಾರೆ ಹೊಯ್ಯಾರೆ ಹೊಯ್
ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕದ್ದೀಯಲ್ಲೆ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ  ಹಾಸಿ ಎದ್ದೀತಲ್ಲೆ ನಿಂಗಿ
ಚಂದಾನ ಚಂದ್ರ - ಹೊಯ್ಯಾರೆ ಹೊಯ್ಯ
ಭೂಮಿಗ ಲಾಂದ್ರ - ಹೊಯ್ಯಾರೆ ಹೊಯ್ಯ
ಆಗ್ಯಾನ ನೋಡಲ್ಲಿ |

ವಾರಿ ನೋಟ ಬೀರುವಾಕಿ  ನಾಚಿಕೊಂಡು ನಿಂತಿ ಯಾಕ ?
ಬಾಳಿ ದಿಂಡ ಹೋಲುವಾಕಿ ಬಾಗಿಲಾಗ ಇರಬೇಕ ?
ಯಾಕ ಹಿಂಗ ಕಾಡುತಿ? ನೋಯು ಹಂಗ ಮಾಡುತಿ?
ಬಿಲ್ಲಿನಂಗ ತಾಗುತಿ  ಹೆಣ್ಣ ಬಾಣ ಹೂಡುತಿ
ಲಾಲ ಲಾಲ ಲಲ್ಲಲ ಲಲ್ಲಲ ಲಲ್ಲಲ ಲಾಲ ಲಲ್ಲಲ ಲಲ್ಲಲ ಲಲ್ಲಲ ಲಾಲ ಲಾಲಾ ||ನಿಂಗಿ ನಿಂಗಿ||

ನಿದ್ದಿಯೆಂಬುದು ಒಂದು ದೇವತಿ  ಪ್ರೇಮಿಗಳಿಗಾಕಿ ಸವತಿ
ಏನ ಗರತಿ ನಿನ್ನ ಸವತಿ ಬಂದರೀಗ ಏನ ಮಾಡುತಿ?
ಯಾಕ ತಡ ಮಾಡುತಿ? ವ್ಯಾಳಿ ಮುಖ ನೋಡುತಿ
ಚಂದ್ರಮುಖಿ ಹೋಲುತಿ ಯಾವ ಸುಖ ಬೇಡುತಿ
ಲಾಲ ಲಾಲ ಲಲ್ಲಲ ಲಲ್ಲಲ ಲಲ್ಲಲ ಲಾಲ ಲಲ್ಲಲ ಲಲ್ಲಲ ಲಲ್ಲಲ ಲಾಲ ಲಾಲಾ ||ನಿಂಗಿ ನಿಂಗಿ||
-------------------------------------------------------------------------------------------------------------------------

ಹೂವು ಹಣ್ಣು (1993) - ತಾಯಿ ತಾಯಿ 
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ   ಗಾಯನ: ಡಾ||ರಾಜಕುಮಾರ್ 

ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ ।।ತಾಯಿ।।

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು ಅನುಕ್ಷಣಾ ಮಿಡಿವಳು
ಕಾಲಕೂಟವನ್ನು ಸಹಿಸಿ ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ ದುಡಿವಳು
ಮಗುವಿಗೆ ಎಂದೂ ಪ್ರೇಮಮಯಿ ಈ ತಾಯಿ ।।ತಾಯಿ।।

ಗರ್ಭವೇ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ ವಹಿಸಿದಾ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ ಇರುವಳು ದಿನ ಉಪವಾಸ
ವೇದಮಯಿ ಈ ತಾಯಿ ।।ತಾಯಿ।।
---------------------------------------------------------------------------------------------------------------------

ಹೂವು ಹಣ್ಣು (1993) - ರಾಮನ ಪಾದ ಪೂಜೆಯ ಮಾಡೋ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಚಿತ್ರಾ 

ಧೀಮ್ ಧೀಮ್ ಥಕ್ ತೋಮ್ ಧೀಮ್ ಧೀಮ್
ಧೀಮ್ ಧೀಮ್ ಥಕ್ ತೋಮ್ ಧೀಮ್ ಧೀಮ್
ಧೀಮ್ ಧೀಮ್ ಥಕ್ ತೋಮ್ ಧೀಮ್ ಧೀಮ್
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ 
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ರಾಮನ ಪಾದ ಪೂಜೆಯ ಮಾಡೋ
ಪುಣ್ಯದ ಭೂಮಿ ನಾಮಧಾಮ 
ಪುಣ್ಯದ ಭೂಮಿ ನಾಮಧಾಮ 
ಕೃಷ್ಣನ ಲೀಲೆ ಗಾಯನ ಮಾಡೋ
ಭಾರತ ಭೂಮಿ ನಾಮಧಾಮ
ಭಾರತ ಭೂಮಿ ನಾಮಧಾಮ
ಅಯೋಧ್ಯಯಲ್ಲಿ ಜನಿಸಿದ ನಾಮ ದುಷ್ಟನ ಶಿಕ್ಷಕ ಶ್ರೀರಾಮ
ದ್ವಾರಕೆಯಲ್ಲಿ ಬೆಳಗಿದನಾಮ  ಶಿಷ್ಟರ ರಕ್ಷಕ ಘಾನಾ ಶ್ಯಾಮ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ 
ಗುರುವಿನ ಆಜ್ಞೆ ಪಾಲಿಸಬೇಕು ಎಂಬುದ ತೋರಿದ ಶ್ರೀ ರಾಮ 
ಅಸತೋ ಮಾ ಸದ್ಗಮಯ ತಮಸೋಮ್ ಜ್ಯೋತಿರ್ ಗಮಯ 
ಮ್ರಿತ್ಯೋರ್ಮಾ ಅಮ್ರಿತಮ್ ಗಮಯ ಓಂ ಶಾಂತಿ ಶಾಂತಿ ಶಾಂತಿಹಿ 

ತಂದೆಯ ಮಾತು ಪಾಲಿಸಬೇಕು ಎಂಬುದ ತಿಳಿಸಿದ ಶ್ರೀ ರಾಮ
ಸ್ನೇಹಿತರ ಸೇತುವೆಯಲ್ಲಿ ರಕ್ಷಕರ ಎದುರಿಸಿದ
ರಾವಣ ಕಂಟಕ ಹರಿಸಿ ಸೀತೆಯನ್ನು ರಕ್ಷಿಸಿದ
ರಾಮನ ಬಾಣ ಗುರಿಯನು ಬಿಡದು ಎಂಬುದ ತೋರಿದ ಮಹನೀಯ
ರಾಮನ ರಾಜ್ಯ ನ್ಯಾಯವ ಬಿಡದು ಎನ್ನುತ ಆಳಿದ ಮಹಾರಾಯ
ರಾಮನ ಪಾದ ಪೂಜೆಯ ಮಾಡೋ 
ಪುಣ್ಯದ ಭೂಮಿ ನಾಮಧಾಮ 
ಪುಣ್ಯದ ಭೂಮಿ ನಾಮಧಾಮ 
ಕೃಷ್ಣನ ಲೀಲೆ ಗಾಯನ ಮಾಡೋ
ಭಾರತ ಭೂಮಿ ನಾಮಧಾಮ
ಭಾರತ ಭೂಮಿ ನಾಮಧಾಮ

ತುಂಟರ ತುಂಟ ಗೋವಿನ ನೆಂಟ ಬೆಣ್ಣೆಯ ಕದ್ದನು ಶ್ರೀ ಕೃಷ್ಣ
ಮಣ್ಣನು ತಿಂದ ಬಾಯಲಿ ಅಂದು ಜಗವನೇ ತೋರಿದ ಶ್ರೀ ಕೃಷ್ಣ
ಮಾಯದ ಪೂತನಿಯನ್ನು ಆಡುತಾ ಸಾಯಿಸಿದ
ಯಮುನೆಗೆ ವಿಷವನು ಸುರಿದ ಕಾಳಿಂಗನ ಮರ್ಧಿಸಿದ
ಯಾದವ ಕುಲದ ಜನ್ಮದ ವೈರಿ  ಕಂಸನ ರಾಕ್ಷಸ ತಲೆ ಮುರಿದ
ಪಾಂಡವ ಬಲದ ಸಾರಥಿಯಾಗಿ  ಕೌರವ ಕ್ರೌರ್ಯಕೆ ತೆರೆ ಎಳೆದ
ರಾಮನ ಪಾದ ಪೂಜೆಯ ಮಾಡೋ
ಪುಣ್ಯದ ಭೂಮಿ ನಾಮಧಾಮ 
ಪುಣ್ಯದ ಭೂಮಿ ನಾಮಧಾಮ 
ಕೃಷ್ಣನ ಲೀಲೆ ಗಾಯನ ಮಾಡೋ
ಭಾರತ ಭೂಮಿ ನಾಮಧಾಮ
ಭಾರತ ಭೂಮಿ ನಾಮಧಾಮ
ಅಯೋಧ್ಯಯಲ್ಲಿ ಜನಿಸಿದ ನಾಮ ದುಷ್ಟನ ಶಿಕ್ಷಕ ಶ್ರೀರಾಮ
ದ್ವಾರಕೆಯಲ್ಲಿ ಬೆಳಗಿದನಾಮ  ಶಿಷ್ಟರ ರಕ್ಷಕ ಘಾನಾ ಶ್ಯಾಮ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ 
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ 
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ 
-------------------------------------------------------------------------------------------------------------------------

ಹೂವು ಹಣ್ಣು (1993) - ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ 
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಡಾ||ರಾಜ, ಕೋರಸ್  

ಗಂಡು : ಈ ಯುಗಾ ನರಬಲಿ ಯುಗಾ ಸ್ವಾರ್ಥಕ್ಕೆ ಬೆಲೆ ಕೊಡೊ ಯುಗಾ
           ಒಬ್ಬ ತಾಯಿಯೇ ತನ್ನ ತಾಯಿಗೆ ವಿಷವಿಡೋ ಯುಗ
ಕೋರಸ್ : ಆಆಆ.. ಆಆಆ... ಆಆಆ...
ಗಂಡು : ಅನುಮಾನವಿಲ್ಲ ಇದು ಮಾಯದ ಮಹಾ ಕಲಿಯುಗ
ಕೋರಸ್ : ಆಆಆ.. ಆಆಆ... ಆಆಆ...
ಗಂಡು : ಹೊರುವಳು ಭೂಮಿ ಭಾರ ಹೇರುವಳು ತಾಯಿ ನೋವ... ತ್ಯಾಗಮಯಿ ತಾಯಿ... 
            ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ ಲಾಲಿ ಹಾಡೋ ಹೆತ್ತ ತಾಯಿಗೆ
--------------------------------------------------------------------------------------------------------------------------