ಅನುಕೂಲಕ್ಕೋಬ್ಬ ಗಂಡ ಚಿತ್ರದ ಹಾಡುಗಳು
- ಓ.. ಕಂಡೇ ಸುರಿವ ಮಳೆಯ ಕೊರೆವ ಚಳಿಯ ರಾತ್ರಿಲೀ
- ಅಯ್ಯೋ ಊರೆಲ್ಲ ನಿನ್ನ ಹುಡುಕಿ ಬಂದೇನೂ
- ಹಿಗ್ಗಿನ ಸುದ್ದಿಯೂ ಬಂತು ಈ ದಿನ
- ಮಳೆಯಿಂದ ಬಾನು ಭೂಮಿ ಒಂದಾದ ಹಾಗೇ
- ಕೆಂಪು ದೀಪ ಕಣ್ಣಿಲ್ಲದೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ರಾಘವೇಂದ್ರ ರಾಜಕುಮಾರ, ಕೋರಸ್
ಗಂಡು : ಓ.. ಕಂಡೇ ಸುರಿವ ಮಳೆಯ ಕೊರೆವ ಛಳಿಯ ರಾತ್ರೀಲಿ ಹೆಣ್ಣೊಂದನೂ
ಈ ಎದೆಗೆ ಬಯಕೆ ತುಂಬಿ ಮೈಯಗೇ ಬಿಸಿಯ ತಂದಾಗ ನಾ ನೊಂದೆನೂ
ಅವಳ ಮೈ ಅಂದ ಇಣುಕಿ ಉಡುಪಿಂದ ಅಯ್ಯೋ ಕೆಣಕಿ ಕೆಣಕಿ ನಾನು ಸೋತೇನು
ಕೋರಸ್ : ಅಯ್ಯೋ..
ಗಂಡು : ಓ.. ಕಂಡೇ ಸುರಿವ ಮಳೆಯ ಕೊರೆವ ಛಳಿಯ ರಾತ್ರೀಲಿ ಹೆಣ್ಣೊಂದನೂ
ಈ ಎದೆಗೆ ಬಯಕೆ ತುಂಬಿ ಮೈಯಗೇ ಬಿಸಿಯ ತಂದಾಗ ನಾ ನೊಂದೆನೂ
ಗಂಡು : ಮಣಿ ಮಣಿಯೋ ಆ ಮಳೆ ಹನಿಯೋ ಕೆನ್ನೇ ಮೇಲಿನಿಂದ ಮುತ್ತಿನಂತೇ ಜಾರಿದೇ
ಮಣಿ ಮಣಿಯೋ ಆ ಮಳೆ ಹನಿಯೋ ಕೆನ್ನೇ ಮೇಲಿನಿಂದ ಮುತ್ತಿನಂತೇ ಜಾರಿದೇಸುಳಿ ಮಿಂಚೋ ಆ ಕಣ್ಣಬೆಳಕೋ ನನ್ನ ಮೇಲೆಲ್ಲಾ ಕಾಂತಿಯನ್ನೂ ಚೆಲ್ಲಿದೇ
ನೆನೆದಿರುವಾ ಆ ಹುಡುಗಿಯನೂ ಕಂಡು ಏನೇನೋ ಆಸೆಯೂ ಬಂದಿದೇ
ಕೋರಸ್ : ಆಮೇಲೆ ಏನಾಯ್ತೋ..
ಗಂಡು : ಹ್ಹಾ... ಕಂಡೇ ಸುರಿವ ಮಳೆಯ ಕೊರೆವ ಛಳಿಯ ರಾತ್ರೀಲಿ ಹೆಣ್ಣೊಂದನೂ
ಈ ಎದೆಗೆ ಬಯಕೆ ತುಂಬಿ ಮೈಯಗೇ ಬಿಸಿಯ ತಂದಾಗ ನಾ ನೊಂದೆನೂ
ಕೋರಸ್ : ಹ್ಹಾ
ಗಂಡು : ಕನಸಲ್ಲಾ ಇದು ಕಥೆಯಲ್ಲಾ ನಿಜ ಬಾನಿಂದ ತಾರೆಯೊಂದೂ ಜಾರಿದೇ
ಕೋರಸ್ : ಹ್ಹಾ....
ಗಂಡು : ಕನಸಲ್ಲಾ ಇದು ಕಥೆಯಲ್ಲಾ ನಿಜ ಬಾನಿಂದ ತಾರೆಯೊಂದೂ ಜಾರಿದೇ
ಹದಿನೇಳೋ ಇಲ್ಲಾ ಹದಿನೆಂಟೋ ಅಹ್ಹಹ್ಹಾ.. ಪ್ರಾಯಕ್ಕೆ ಬಂದ ಹೆಣ್ಣೂ ಕೂಗಿದೇ
ಕೋರಸ್ : ಅಯ್ಯೋ...
ಗಂಡು : ಢವಢವನೇ ಈ ಎದೆಯೊಳಗೇ ಅಯ್ಯೋ ಅವಳನ್ನೂ ಎತ್ತಿಕೊಂಡೂ ಓಡಿದೇ..
ಕೋರಸ್ : ಎಲ್ಲಿಗೋ...
ಗಂಡು : ಹ್ಹಾ... ಕಂಡೇ ಸುರಿವ ಮಳೆಯ ಕೊರೆವ ಛಳಿಯ ರಾತ್ರೀಲಿ ಹೆಣ್ಣೊಂದನೂಈ ಎದೆಗೆ ಬಯಕೆ ತುಂಬಿ ಮೈಯಗೇ ಬಿಸಿಯ ತಂದಾಗ ನಾ ನೊಂದೆನೂ
ಅವಳ ಮೈ ಅಂದ ಇಣುಕಿ ಉಡುಪಿಂದ ಅಯ್ಯೋ ಕೆಣಕಿ ಕೆಣಕಿ ನಾನು ಸೋತೇನು
--------------------------------------------------------------------------------------------------------------------------
ಅನುಕೂಲಕ್ಕೋಬ್ಬ ಗಂಡ (೧೯೯೦) - ಅಯ್ಯೋ ಊರೆಲ್ಲ ನಿನ್ನ ಹುಡುಕಿ ಬಂದೇನೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ರಾಘವೇಂದ್ರ ರಾಜಕುಮಾರ, ಕೋರಸ್
ಗಂಡು : ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ ಇಂಥ ಸಂತೇಲಿ ಚಿನ್ನ ನಿನ್ನ ಕಂಡೇನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ ಇಂಥ ಸಂತೇಲಿ ಚಿನ್ನ ನಿನ್ನ ಕಂಡೇನೇ
ಇಲ್ಲಿ ನಮಗೇನಿದೇ ನಡೇ ಹೋಗೋಣ.. ಇಲ್ಲಿ ನಮಗೇನಿದೇ ನಡೇ ಹೋಗೋಣ..
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ ಇಂಥ ಸಂತೇಲಿ ಚಿನ್ನ ನಿನ್ನ ಕಂಡೇನೇ
ಹೆಣ್ಣು : ಲಾಲಾಲಾಲ.... ಲಾಲಾಲಾಲಾ .... ಲಾಲಾಲಾಲಾ ....
ಗಂಡು : ಮರದಲೀ (ಆಆಆಆಆ) ಗಿಳಿಗಳೂ (ಆಆಆಆಆ) ಪ್ರಣಯದಿ ನಲಿವುದ ನಾ ಕಂಡೇ
ಮರದಲೀ (ಆಆಆಆಆ) ಗಿಳಿಗಳೂ (ಆಆಆಆಆ) ಪ್ರಣಯದಿ ನಲಿವುದ ನಾ ಕಂಡೇ
ಗೆಳತಿಯ (ಆಆಆಆಆ) ನೆನಪಲಿ (ಆಆಆಆಆ) ದಿನವೂ ಅಲೆಯುತ ನಾ ನೊಂದೇ
ಬಾ ಬಾರೇ ಮುದ್ದು ನಲ್ಲೇ ಆಡೋಣ ಕೃಷ್ಣ ಲೀಲೆ
ಬಾ ಬಾರೇ ಮುದ್ದು ನಲ್ಲೇ ಆಡೋಣ ಕೃಷ್ಣ ಲೀಲೆ ಇನ್ನೂ ಹಾಡೋಣ ಬಂಗಾರಿ ಕೋಲನ್ನ ಕೋಲೇ
ನಿನ್ನ ಈ ಕೆನ್ನೆಯನ್ನೂ ಒಮ್ಮೆ ಮುಟ್ಟಲೇ
ನಿನ್ನ ಈ ಕೆನ್ನೆಯನ್ನೂ ಒಮ್ಮೆ ಮುಟ್ಟಲೇ ಚಿನ್ನ ಈ ಗಲ್ಲವನ್ನೂ ಸ್ವಲ್ಪ ತಟ್ಟಲೇ
ನಿನ್ನ ರಂಗೇರಿದ ಮುಖ ನೋಡೋಕೇ ...
ನಿನ್ನ ರಂಗೇರಿದ ಮುಖ ನೋಡೋಕೇ ...
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ ಇಂಥ ಸಂತೇಲಿ ಚಿನ್ನ ನಿನ್ನ ಕಂಡೇನೇ
ಹೆಣ್ಣು : ಆಆಆಅ... ಆಆಆಅ...ಆಆಆಅ...ಆಆಆಅ...
ಗಂಡು : ಬಳುಕುತ (ಆಆಆಆಆ) ನಡೆಯಲೂ (ಆಆಆಆಆ) ನಡುವೂ ಉಳುಕಿತೇ ವಯ್ಯಾರೀ
ಬಳುಕುತ (ಆಆಆಆಆ) ನಡೆಯಲೂ (ಆಆಆಆಆ) ನಡುವೂ ಉಳುಕಿತೇ ವಯ್ಯಾರೀ
ಸಿಡುಕುತಾ (ಆಆಆಆಆ) ಸಿಡುಕುತಾ (ಆಆಆಆಆ) ಉಸಿರೂ ಕುಗ್ಗಿತೇ ಸಿಂಗಾರೀ
ನನ್ನಂಥ ಗಂಡು ಇಲ್ಲ ನಿನ್ನಂಥ ಹೆಣ್ಣು ಇಲ್ಲ...
ನನ್ನಂಥ ಗಂಡು ಇಲ್ಲ ನಿನ್ನಂಥ ಹೆಣ್ಣು ಇಲ್ಲ ಚೆಲುವೇ ನೀ ಹೇಳೋ ನಮಗೇಕೇ ಮಗುವೊಂದು ಇಲ್ಲಾ
ನಲ್ಲೆ ನನ್ನ ಶಾಪ ದೀಪ ಬೇಗ ಆರಲಿ
ನಲ್ಲೆ ನನ್ನ ಶಾಪ ದೀಪ ಬೇಗ ಆರಲಿ ಭೂತ ಜನರೆಲ್ಲಾ ಆಚೇ ಓಡಿ ಹೋಗಲೀ
ಸುಖ ನಮದಾಗಲೀ ಬಳಿ ಬಾ ಬೇಗಾ..
ಸುಖ ನಮದಾಗಲೀ ಬಳಿ ಬಾ ಬೇಗಾ..
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ (ಹೂಂ ಹೂಂ)
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ (ಹೂಂ ಹೂಂ)
ಇಂಥ ಸಂತೇಲಿ ಚಿನ್ನ ನಿನ್ನ ಕಂಡೇನೇ (ಹೂಂ ಹೂಂ)
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ (ಹೂಂ ಹೂಂ)
ಇಂಥ ಸಂತೇಲಿ ಚಿನ್ನ ನಿನ್ನ ಕಂಡೇನೇ (ಹೂಂ ಹೂಂ)
ಇಲ್ಲಿ ನಮಗೇನಿದೇ ನಡೇ ಹೋಗೋಣ.. ಇಲ್ಲಿ ನಮಗೇನಿದೇ ನಡೇ ಹೋಗೋಣ..
ಲಲ್ಲ ಲಾಲಾಲಲಲ ಲಲ್ಲ ಲಾಲಾಲಲಲ ಲಲ್ಲ ಲಾಲಾಲಲಲ
--------------------------------------------------------------------------------------------------------------------------
ಅನುಕೂಲಕ್ಕೋಬ್ಬ ಗಂಡ (೧೯೯೦) - ಹಿಗ್ಗಿನ ಸುದ್ದಿಯೂ ಬಂತು ಈ ದಿನ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಶ್ರೀರಂಗ, ಗಾಯನ : ರಾಘವೇಂದ್ರ, ಕೋರಸ್, ಮಂಜುಳಾ ಗುರುರಾಜ
ಕೋರಸ್ : ಹೇ ಹೇ ಹೇ ಹೇ... ಹೇ ಹೇ ಹೇ ಹೇ... ಹೇ ಹೇ ಹೇ ಹೇ...
ಗಂಡು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹಾಡುವಾ ಆಡುವಾ ಮೋಜಿನಾ ದಿನ
ಹೆಣ್ಣು : ಹ್ಹಾಂ ... ಹಿಗ್ಗಿನಾ ಸುದ್ದಿಯೂ ಬಂತು ಈ ದಿನ (ಹೋಯ್ ಹೊಯ್ ) ಹಾಡುವಾ ಆಡುವಾ ಮೋಜಿನಾ ದಿನ
ಗಂಡು : ಅರೇ ಹೈನಾತೀ ಪ್ಲಾನೂ ಜೊತೆಯಲ್ಲಿ ನೀನೂ
ಹೆಣ್ಣು : ಜೊತೆಯಲ್ಲಿ ನೀನೂ ಹೈನಾತೀ ಪ್ಲಾನೂ
ಇಬ್ಬರು : ಡ್ಯೂಯೆಟ್ ಹಾಡಿದರೇ ಲವ್ವು ಸೀನು
ಗಂಡು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ.. ಹೇ.. ಹೇ
ಹೆಣ್ಣು : ಹಾಡುವಾ ಆಡುವಾ ಮೋಜಿನ ದಿನಾ
ಇಬ್ಬರು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹೆಣ್ಣು : ಹಾಡುವಾ ಆಡುವಾ ಮೋಜಿನ ದಿನಾ
ಕೋರಸ್ : ಹೇ ಹೇ ಹೇ ಹೇ... ಹೇ ಹೇ
ಗಂಡು : ಲೈಫೆಂಬ ರೋಡಲ್ಲಿ ಟೀನೇಜು ಪ್ರಾಯ ಪ್ರೇಮಕ್ಕೇ ಟೋಲುಗೇಟು
ಹೆಣ್ಣು : ಹೊಸ ಜೋಡಿಗಳು ಒಂದಾಗಿ ಪ್ರೀತಿಸಿರುವಾಗ ಮ್ಯಾರೇಜು ಹೈಲೇಟು .. ಹ್ಹ...
ಗಂಡು : ಲೈಫೆಂಬ ರೋಡಲ್ಲಿ ಟೀನೇಜು ಪ್ರಾಯ ಪ್ರೇಮಕ್ಕೇ ಟೋಲುಗೇಟು
ಹೆಣ್ಣು : ಹೊಸ ಜೋಡಿಗಳು ಒಂದಾಗಿ ಪ್ರೀತಿಸಿರುವಾಗ ಮ್ಯಾರೇಜು ಹೈಲೇಟು
ಗಂಡು : ಅರೇ ಜಾನಾನ ಜಾನನನ ಮೇರಾ ದಿಲ್ ತೇರಾ ದಿವಾನ್
ಅರೇ ಜಾನಾನ ಜಾನನನ ಮೇರಾ ದಿಲ್ ತೇರಾ ದಿವಾನ್
ಹಿಗ್ಗಿನಾ ಸುದ್ದಿಯೂ ಬಂತು ಈ ದಿನ.. ಹ್ಹಾ ಹ್ಹಾ ಹಾಡುವಾ ಆಡುವಾ ಮೋಜಿನ ದಿನಾ
ಹೆಣ್ಣು : ಹಾಲು ಜೇನಂತೇ ನಾವಿಂದು ಒಂದಾದ ಮೇಲೆ ಲೈಫೆಲ್ಲಾ ಒನ್ ಬೈ ಟೂ
ಗಂಡು : ಅರೆರೆರೇ... ನನ್ನಾಣೆ ಎಂದೆಂದೂ ನಾ ನಿನ್ನ ರೋಮಿಯೋ ನೀ ನನ್ನ ಜ್ಯೂಲಿಯೆಟ್ಟು
ಹೆಣ್ಣು : ಹಾಲು ಜೇನಂತೇ ನಾವಿಂದು ಒಂದಾದ ಮೇಲೆ ಲೈಫೆಲ್ಲಾ ಒನ್ ಬೈ ಟೂ
ಗಂಡು : ತಾನಿ ತಂದಾನ ತಾನಾನನ ಇದೇ ನಂಜುಂಡಿ ಕಲ್ಯಾಣ
ತಾನಿ ತಂದಾನ ತಾನಾನನ ಇದೇ ನಂಜುಂಡಿ ಕಲ್ಯಾಣ
ಗಂಡು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹೇ..ಹೇ.. ಹಾಡುವಾ ಆಡುವಾ ಮೋಜಿನಾ ದಿನ
ಹೆಣ್ಣು :ಹೇಯ್ ... ಹಿಗ್ಗಿನಾ ಸುದ್ದಿಯೂ ಬಂತು ಈ ದಿನ (ಹ್ಹಾ ) ಹಾಡುವಾ ಆಡುವಾ ಮೋಜಿನಾ ದಿನ
ಗಂಡು : ಅರೇ ಹೈನಾತೀ ಪ್ಲಾನೂ ಜೊತೆಯಲ್ಲಿ ನೀನೂ
ಹೆಣ್ಣು : ಜೊತೆಯಲ್ಲಿ ನೀನೂ ಹೈನಾತೀ ಪ್ಲಾನೂ
ಇಬ್ಬರು : ಡ್ಯೂಯೆಟ್ ಹಾಡಿದರೇ ಲವ್ವು ಸೀನು
ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹಾಡುವಾ ಆಡುವಾ ಮೋಜಿನ ದಿನಾ
ಎಲ್ಲರು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹಾಡುವಾ ಆಡುವಾ ಮೋಜಿನ ದಿನಾ

ಹೆಣ್ಣು : ಹಯ್ಯ್.. ಹಿಗ್ಗಿನಾ ಸುದ್ದಿಯೂ ಬಂತು ಈ ದಿನ.. (ಯ್ಯಾ) ಹಾಡುವಾ ಆಡುವಾ ಮೋಜಿನ ದಿನಾ
ಗಂಡು : ನನ್ನಾಣೆ ಎಂದೆಂದೂ ನಾ ನಿನ್ನ ರೋಮಿಯೋ ನೀ ನನ್ನ ಜ್ಯೂಲಿಯೆಟ್ಟುಹೆಣ್ಣು : ಹಾಲು ಜೇನಂತೇ ನಾವಿಂದು ಒಂದಾದ ಮೇಲೆ ಲೈಫೆಲ್ಲಾ ಒನ್ ಬೈ ಟೂ
ಗಂಡು : ಅರೆರೆರೇ... ನನ್ನಾಣೆ ಎಂದೆಂದೂ ನಾ ನಿನ್ನ ರೋಮಿಯೋ ನೀ ನನ್ನ ಜ್ಯೂಲಿಯೆಟ್ಟು
ಹೆಣ್ಣು : ಹಾಲು ಜೇನಂತೇ ನಾವಿಂದು ಒಂದಾದ ಮೇಲೆ ಲೈಫೆಲ್ಲಾ ಒನ್ ಬೈ ಟೂ
ಗಂಡು : ತಾನಿ ತಂದಾನ ತಾನಾನನ ಇದೇ ನಂಜುಂಡಿ ಕಲ್ಯಾಣ
ತಾನಿ ತಂದಾನ ತಾನಾನನ ಇದೇ ನಂಜುಂಡಿ ಕಲ್ಯಾಣ
ಗಂಡು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹೇ..ಹೇ.. ಹಾಡುವಾ ಆಡುವಾ ಮೋಜಿನಾ ದಿನ
ಹೆಣ್ಣು :ಹೇಯ್ ... ಹಿಗ್ಗಿನಾ ಸುದ್ದಿಯೂ ಬಂತು ಈ ದಿನ (ಹ್ಹಾ ) ಹಾಡುವಾ ಆಡುವಾ ಮೋಜಿನಾ ದಿನ
ಗಂಡು : ಅರೇ ಹೈನಾತೀ ಪ್ಲಾನೂ ಜೊತೆಯಲ್ಲಿ ನೀನೂ
ಹೆಣ್ಣು : ಜೊತೆಯಲ್ಲಿ ನೀನೂ ಹೈನಾತೀ ಪ್ಲಾನೂ
ಇಬ್ಬರು : ಡ್ಯೂಯೆಟ್ ಹಾಡಿದರೇ ಲವ್ವು ಸೀನು
ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹಾಡುವಾ ಆಡುವಾ ಮೋಜಿನ ದಿನಾ
ಎಲ್ಲರು : ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹಾಡುವಾ ಆಡುವಾ ಮೋಜಿನ ದಿನಾ
ಹಿಗ್ಗಿನಾ ಸುದ್ದಿಯೂ ಬಂತು ಈ ದಿನ ಹಾಡುವಾ ಆಡುವಾ ಮೋಜಿನ ದಿನಾ
--------------------------------------------------------------------------------------------------------------------------
ಅನುಕೂಲಕ್ಕೋಬ್ಬ ಗಂಡ (೧೯೯೦) - ಮಳೆಯಿಂದ ಬಾನು ಭೂಮಿ ಒಂದಾದ ಹಾಗೇ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ರಾಘವೇಂದ್ರ, ಮಂಜುಳಾ ಗುರುರಾಜ
ಗಂಡು : ಮಳೆಯಿಂದ ಬಾನು ಭೂಮಿ ಒಂದಾದ ಹಾಗೇ ಒಲವಿಂದ ನಾನು ನೀನು ಜೊತೆಯಾಗಿ ಹೀಗೇ
ಆನಂದ ಏನೋ ಎಂದೂ ಇಂದೂ ನಾವೂ ನೋಡೋಣ...
ಹೆಣ್ಣು : ಮಳೆಯಿಂದ ಬಾನು ಭೂಮಿ ಒಂದಾದ ಹಾಗೇ ಒಲವಿಂದ ನಾನು ನೀನು ಜೊತೆಯಾಗಿ ಹೀಗೇ
ಆನಂದ ಏನೋ ಎಂದೂ ಇಂದೂ ನಾವೂ ನೋಡೋಣ...
ಇಬ್ಬರು : ಮಳೆಯಿಂದ ಬಾನು ಭೂಮಿ ಒಂದಾದ ಹಾಗೇ
ಹೆಣ್ಣು : ಸುಗ್ಗಿ ಸುಗ್ಗಿ ಹಬ್ಬ ಬಂತು ನಿನ್ನಂದ ಹಿಗ್ಗಿ ಹಿಗ್ಗಿ ನಾ ಹೂವೂ ಆದೇ ನಿನ್ನಿಂದ
ಗಂಡು : ಓ ಓ .. ನಿನ್ನನ್ನೂ ನೋಡಿ ನೋಡಿ ಜೊತೆಯಾಗಿ ಆಡಿ ಹಾಡಿ ಕವಿಯಾಗಿ ಹೋದೆ ನಾನು ಬಾ ಚಿನ್ನ....
ಹೆಣ್ಣು : ಮರವನ್ನು ಸುತ್ತಿ ಬಳ್ಳಿ ಒಂದಾದ ಹಾಗೇ
ಗಂಡು : ಒಲವಿಂದ ನಾನು ನೀನು ಜೊತೆಯಾಗಿ ಹೀಗೇ ಆನಂದ ಏನೋ ಎಂದೂ ಇಂದೂ ನಾವೂ ನೋಡೋಣ...
ಇಬ್ಬರು : ಮರವನ್ನು ಸುತ್ತಿ ಬಳ್ಳಿ ಒಂದಾದ ಹಾಗೇ
ಹೆಣ್ಣು : ಹೊನ್ನಿನಲ್ಲಿ ಕಡೆದ ಪ್ರೇಮ ಮೂರ್ತಿಯೋ ಕಣ್ಣಿನಲ್ಲಿ ಹೆಣ್ಣ ಕೆಣಕೋ ಆಸೆಯೋ
ಗಂಡು : ಯಾವ ಶಿಲ್ಪಿ ಮಾಡಿ ಹೋದ ಬೊಂಬೆಯೋ ಮೇಲಿನಿಂದ ಜಾರಿ ಬಂದ ರಂಭೆಯೋ
ಹೆಣ್ಣು : ಓಓಓ .. ಸಿಹಿಯಾದ ಮಾತಿನಿಂದ ಮರುಳಾಗಿ ಹೋದೆ ನಲ್ಲಾ ಒಂದೊಂದು ನುಡಿಯೂ ನಲ್ಲ ಬೆಲ್ಲಾ..
ಗಂಡು : ಮಳೆಯಿಂದ ಹೆಣ್ಣು : ಬಾನು ಭೂಮಿ
ಗಂಡು : ಒಂದಾದ ಹಾಗೇ ಹೆಣ್ಣು : ಒಲವಿಂದ
ಗಂಡು : ನಾನು ನೀನು ಹೆಣ್ಣು : ಜೊತೆಯಾಗಿ ಹೀಗೇ
ಇಬ್ಬರು : ಆನಂದ ಏನೋ ಎಂದೂ ಇಂದೂ ನಾವೂ ನೋಡೋಣ...
ಮರವನ್ನು ಸುತ್ತಿ ಬಳ್ಳಿ ಒಂದಾದ ಹಾಗೇ ಆನಂದ ಏನೋ ಎಂದೂ ಇಂದೂ ನಾವೂ ನೋಡೋಣ...
--------------------------------------------------------------------------------------------------------------------------
ಅನುಕೂಲಕ್ಕೋಬ್ಬ ಗಂಡ (೧೯೯೦) - ಕೆಂಪು ದೀಪ ಕಣ್ಣಿಲ್ಲದೇ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ:ರಾಘವೇಂದ್ರ, ಶ್ರೀನಾಥ,ಮಂಜುಳಾ,ಕುಸುಮಾ,
ಗಂಡು : ಓಓಓಓಓಓಓ ... ಓಹೋಹೊಹೋ .....ಓಹೋಹೊಹೋ .....
ಕೆಂಪು ದೀಪ ಕೆಂಪು ದೀಪ ಕಣ್ಣಿಲ್ಲದೇ ಹಗಲು ಬಯಲು ಹೆದರದೇ ಹೀಗೇ ಪ್ರಣಯಕೇ ಏಕೇ ಆತುರಾ
ಹೆಣ್ಣು : ಅಯ್ಯೋ ಪಾಪ ಅಯ್ಯೋ ಪಾಪ ಹೆಣ್ಣಲ್ಲವೇ ಹಗಲು ಬಯಲು ತಿಳಿಯುವುದೇನೂ ಕಾಡಲೂ ಮನವ ಕಾತರ
ಶ್ರೀನಾಥ : ಓಓಓಓ.. ಜೋಡಿ ಬರುವ ತಾಣ ಇಲ್ಲೇನೂ ಕೆಲಸ
ಬೆಳ್ಳಿಯ ಕೂದಲು ಬಂತು ಇನ್ನೇಕೇ ಸರಸ
ಕುಸುಮಾ : ಓಓಓಓ ಪಾಪವೋ ಶಾಪವೋ ಕಾಣೇ ನಮಗೆಂಥ ಬೇಗೆ
ಪ್ರೀತಿಯ ಪಾಯಸದಲ್ಲಿ ಹುಳು ಬಿತ್ತೇ ಹೀಗೇ
ಗಂಡು : ಓಓಓಓಓ ಬಿಡು ಚಿಂತೇ ನನ್ನಾ ಗೆಳತೀ ಹೀಗೇ ಜೀವನ
ಕೆಂಪು ದೀಪ ಕೆಂಪು ದೀಪ ಕಣ್ಣಿಲ್ಲದೇ ಹಗಲು ಬಯಲು ಹೆದರದೇ ಹೀಗೇ ಪ್ರಣಯಕೇ ಏಕೇ ಆತುರಾ
ಗಂಡು : ಓಓಓಓಓ... ಯೌವ್ವನ ತಂದ ಮಿಂಚೂ ನನ್ನ ಮೈಯಲ್ಲೆಲ್ಲಾ
ಕಾಮನ ಕುಣಿತ ಇಂದೂ ನನ್ನ ಮನಸೆಲೆಲ್ಲಾ
ಹೆಣ್ಣು : ಓಓಓಓಓಓಓ... ಸುಮ್ಮನೇ ಇರಯ್ಯಾ ಈಗ ನನ್ನ ಮಾತಿನ ಮಲ್ಲ
ಲಾಗವ ಹಾಕಿದರೇನೂ ಇಲ್ಲಿ ಲಾಭ ಇಲ್ಲಾ
ಶ್ರೀನಾಥ : ಓಓಓಓಓ .. ಇಂಥ ಮಾತು ಆಡಬೇಡ ತುಂಬಾ ಕೇವಲ
ಗಂಡು : ಕೆಂಪು ದೀಪ ಕೆಂಪು ದೀಪ ಕಣ್ಣಿಲ್ಲದೇ ಹಗಲು ಬಯಲು ಹೆದರದೇ ಹೀಗೇ ಪ್ರಣಯಕೇ ಏಕೇ ಆತುರಾ
ಹೆಣ್ಣು : ಅಯ್ಯೋ ಪಾಪ ಅಯ್ಯೋ ಪಾಪ ಹೆಣ್ಣಲ್ಲವೇ ಹಗಲು ಬಯಲು ತಿಳಿಯುವುದೇನೂ ಕಾಡಲೂ ಮನವ ಕಾತರ
--------------------------------------------------------------------------------------------------------------------------
No comments:
Post a Comment