ಹೊಸ ಜೀವನ ಚಿತ್ರದ ಹಾಡುಗಳು
- ಅನಾಥ ಮಗುವಾದೇ ನಾನು ಅಪ್ಪನು ಅಮ್ಮನು ಇಲ್ಲಾ
- ಲಾಲಿ ಲಾಲಿ ಲಾಲಿ ಜೋ ನನ್ನ ತಾಳಿಯ ಬಂಗಾರ ಜೋ
- ಬ್ಯಾಡವೇ ಬ್ಯಾಡವೇ ನನ್ನ ರೇಗಿಸ ಬ್ಯಾಡವೇ
- ಹೇ... ನಿನ್ನಳೇ.. ಹೇಯ್.. ಚಾಕು ಚೈನು ನನ್ನ ಎಡಗೈಲೀ ಬಲಗೈಲೀ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್
ಹೆಣ್ಣು : ಉಳ್. ಳ್ ಳ್ ಳ್... ಆಯಿ ಆಯಿ..ಆಯಿ ...
ಮೇಲೆ ನೋಡೊ ಕಂದ ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ...ಆಯಿ
ಗಂಡು : ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ಅಣ್ಣನು ತಮ್ಮನು ಇಲ್ಲ|
ಭಿಕಾರಿ ದೊರೆಯಾದೆ ನಾನು ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು ಬೈಗಳೇ ಮೈಗೂಡಿ ಹೋಯ್ತು ಈ ಮನಸೇ ಕಲ್ಲಾಗಿ ಹೋಯ್ತು
ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ಅಣ್ಣನು ತಮ್ಮನು ಇಲ್ಲ
ಗಂಡು : ಬೀದಿಗೆ ಒಂದು ನಾಯಿ ಕಾವಲಂತೆ ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ ಕೇಳೋ ದೇವನೇ
ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ಅಣ್ಣನು ತಮ್ಮನು ಇಲ್ಲ|
ಹೆಣ್ಣು : ಉಳ್. ಳ್ ಳ್ ಳ್... ಆಯಿ ಆಯಿ..ಆಯಿ ...
ಗಂಡು : ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?....
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ ಕೋಟ್ಯಾನುಕೋಟಿ ಕೂಗು ಇದೆ
ಗ್ರಹಚಾರ ಬರೆಯೋ ಓ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ ಹೇಳೋ ದೇವನೇ
ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ಅಣ್ಣನು ತಮ್ಮನು ಇಲ್ಲ|
ಭಿಕಾರಿ ದೊರೆಯಾದೆ ನಾನು ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು ಬೈಗಳೇ ಮೈಗೂಡಿ ಹೋಯ್ತು ಈ ಮನಸೇ ಕಲ್ಲಾಗಿ ಹೋಯ್ತು ||
--------------------------------------------------------------------------------------------------------------------------
ಹೊಸಜೀವನ (1990) - ಲಾಲಿ ಲಾಲಿ ಜೋ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ,ಮಂಜುಳ ಗುರುರಾಜ್
ಹೆಣ್ಣು : ಲಾಲಿ ಲಾಲಿ ಲಾಲಿ ಜೋ ನನ್ನ ತಾಳಿಯ ಬಂಗಾರ ಜೋ
ಗಂಡು : ಲಾಲಿ ಲಾಲಿ ಲಾಲಿ ಜೋ ನನ್ನ ಬಾಳಿನ ಬಂಗಾರ ಜೋ|
ಹೆಣ್ಣು : ಈ ಲಾಲಿ ಹಾಡಾಯ್ತು ಹೊಸಜೀವನಕೆ ಜೋ ಜೋ ಜೋ ಜೋ
ಗಂಡು : ಈ ಹಾಡು ಹೂವಾಯ್ತು ಹೊಸಜೀವನಕೆ ಜೋ ಜೋ ಜೋ ಜೋ
ಹೆಣ್ಣು : ಲಾಲಿ ಲಾಲಿ ಲಾಲಿ ಜೋ ನನ್ನ ತಾಳಿಯ ಬಂಗಾರ ಜೋ
ಗಂಡು : ಲಾಲಿ ಲಾಲಿ ಲಾಲಿ ಜೋ ನನ್ನ ಬಾಳಿನ ಬಂಗಾರ ಜೋ|
ಹೆಣ್ಣು : ಚಂದದ ಅರಸೇ ಚಂದ್ರನ ಮನಸೇ ನನಗೆ ನೀನೇ ದೈವರೂಪವು
ಅತ್ತರೆ ಅಳುವೆ ನಕ್ಕರೆ ನಗುವೆ ನನಗೆ ನೀನೆ ಪ್ರೇಮ ದೈವವುಗಂಡು : ಕಲ್ಲೆದೆಯ ಕರಗಿಸಿದೆ ಕಹಿ ದಿನವ ಕಡೆಗೆಸೆದೆ
ದೂರಾದ ವಾತ್ಸಲ್ಯ ನೀ ನೀಡಿದೆ ಧೂಳಾಗೋ ಬಾಳನ್ನು ಕಾಪಾಡಿದೆ
ಹೆಣ್ಣು : ಲಾಲಿ ಲಾಲಿ ಲಾಲಿ ಜೋ ನನ್ನ ತಾಳಿಯ ಬಂಗಾರ ಜೋ
ಗಂಡು : ಲಾಲಿ ಲಾಲಿ ಲಾಲಿ ಜೋ ನನ್ನ ಬಾಳಿನ ಬಂಗಾರ ಜೋ|
ಹುಣ್ಣಿಮೆ ತಿಂಗಳು ತುಂಬುತ ಬಂದಳು ತಾಯಿತನದ ಹಣ್ಣು ಮಾಗಿದೆ
ಹೆಣ್ಣು : ಬದುಕಿನಲಿ ಜೇನಾಗಿ ಮಡಿಲಿನಲಿ ಹೂವಾಗಿ
ತಾಯಾಗೊ ಸೌಭಾಗ್ಯ ನೀ ನೀಡಿದೆ ಆನಂದ ಸಂಸಾರ ನೀ ಮಾಡಿದೆ
ಗಂಡು : ಲಾಲಿ ಲಾಲಿ ಲಾಲಿ ಜೋ ನನ್ನ ಬಾಳಿನ ಬಂಗಾರ ಜೋ|
ಹೆಣ್ಣು : ಲಾಲಿ ಲಾಲಿ ಲಾಲಿ ಜೋ ನನ್ನ ತಾಳಿಯ ಬಂಗಾರ ಜೋ
ಗಂಡು : ಈ ಹಾಡು ಹೂವಾಯ್ತು ಹೊಸಜೀವನಕೆ ಜೋ ಜೋ ಜೋ ಜೋಹೆಣ್ಣು : ಈ ಲಾಲಿ ಹಾಡಾಯ್ತು ಹೊಸಜೀವನಕೆ ಜೋ ಜೋ ಜೋ ಜೋ
ಲಾಲಿ ಲಾಲಿ ಲಾಲಿ ಜೋ ನನ್ನ ತಾಳಿಯ ಬಂಗಾರ ಜೋ
ಗಂಡು : ಲಾಲಿ ಲಾಲಿ ಲಾಲಿ ಜೋ ನನ್ನ ಬಾಳಿನ ಬಂಗಾರ ಜೋ|
ಜೋ ಜೋ ಜೋ (ಜೋ ಜೋ ಜೋ )
--------------------------------------------------------------------------------------------------------------------------ಹೊಸಜೀವನ (1990) - ಬ್ಯಾಡವೇ ಬ್ಯಾಡವೇ ನನ್ನ ರೇಗಿಸ್ ಬೇಡವೇ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ,ಮಂಜುಳ ಗುರುರಾಜ್
ಗಂಡು : ಬ್ಯಾಡವೇ ಬ್ಯಾಡವೇ ನನ್ನ ರೇಗಿಸ ಬ್ಯಾಡವೇ ಕಣ್ಣ ಹೊಡೆದರೇ ಕಲ್ಲ್ ಹೋಡೀತೀನಿ
ಹೆಣ್ಣು : ಬ್ಯಾಡವೋ ಬ್ಯಾಡವೋ ನನ್ನ ರೇಗಿಸ ಬ್ಯಾಡವೋ ಕಲ್ಲ್ ಹೊಡೆದರೇ ಕಣ್ಣ್ ಹೋಡೀತೀನಿ
ಗಂಡು : ಆಕಾರ ಆಡಕಮ್ ಬಡ್ಕ ಹಾಕೆಲೇ ಬಾಯಿಗೇ ಚೀಲಕಾ..
ಹೆಣ್ಣು : ಭಟ್ಟಿ ಸಾರಾಯಿ ಕುಡುಕಾ ಸೊಂಟನಾ ಸ್ವಲ್ಪ ಹಿಡಕಾ
ಗಂಡು : ಯಾವೋಳಪ್ಪಾ ಇವಳ ಯಾವೋಳಪ್ಪಾ ಇವಳು ಇಲ್ಯಾಕೇ ಬಂದಳೊಪ್ಪಾ
ಅಣ್ಣಾ ಹುಡಿಗೀರೋ ಹೆಚ್ಚೋದರೂ ಹೆಚ್ಚಿ ಪೈಲ್ವಾನರೂ ಪಿಚ್ಚಾದರೂ
ಬ್ಯಾಡವೇ ಬ್ಯಾಡವೇ ನನ್ನ ರೇಗಿಸ ಬ್ಯಾಡವೇ ಕಣ್ಣ ಹೊಡೆದರೇ ಕಲ್ಲ್ ಹೋಡೀತೀನಿ
ಹೆಣ್ಣು : ಬ್ಯಾಡವೋ ಬ್ಯಾಡವೋ ನನ್ನ ರೇಗಿಸ ಬ್ಯಾಡವೋ ಕಲ್ಲ್ ಹೊಡೆದರೇ ಕಣ್ಣ್ ಹೋಡೀತೀನಿ
ಹೆಣ್ಣು : ಕರೆದರೇ ಭುಜದ ಮ್ಯಾಲೇ ಜಂಭಾ ಎಳೆದರೇ ಕೈಯ್ಯ್ ಕಬ್ಬಿಣ ಕಂಬ
ಮರೆತರೂ ಬಿಡದು ನಿನ್ನ ಬಿಂಬ ಕೊಡದಿರೂ ಕೈಯ್ಯಿಗೇ ತಾಮ್ರ ಚೊಂಬಾ
ಗಂಡು : ಜನಗಳು ಕುಂತರೂ ಕಣ್ಣು ಬಿಟ್ಟೂ ನೆರೆಗಿಗೆ ಬಿಗಿದು ಗಂಟು ಕಟ್ಟು
ಹಿಡಿದರೇ ನಾನು ಒಂದು ಪಟ್ಟೂ ಹೊರೆದೆಯಾ ಮುಂದೆ ನೀನು ಚಟ್ಟು
ಹೆಣ್ಣು : ಓಬಳ್ಳಾಯ್ಯಾ ಹೋಗಬ್ಯಾಡ ಹೋಗಬ್ಯಾಡ ಕುಂತ್ಕಳಯ್ಯಾ ಚೆಂದ ನೀನು ಇದ್ದರೇ
ಗಂಡು : ಬೀದಿಯಮ್ಮಾ ಬೀಗಬೇಡಾ ಬೀಗಬೇಡಾ ಹೋತದಮ್ಮಾ ಹಲ್ಲು ಮುಂದೆ ಬಿದ್ದರೇ
ಹೆಣ್ಣು : ಭಟ್ಟಿ ಸಾರಾಯಿ ಕುಡುಕಾ (ಕುಡುಕಾ ) ಸೊಂಟನಾ ಸ್ವಲ್ಪ ಹಿಡಕಾ (ಹಿಡಕಾ)
ಗಂಡು : ಆಕಾರ ಆಡಕಮ್ ಬಡ್ಕ (ಬಡ್ಕ) ಹಾಕೆಲೇ ಬಾಯಿಗೇ ಚೀಲಕಾ..(ಚಿಲಕಾ)
ಯಾವೋಳಪ್ಪಾ ಇವಳ ಯಾವೋಳಪ್ಪಾ ಇವಳು ಇಲ್ಯಾಕೇ ಬಂದಳೊಪ್ಪಾ
ಅಣ್ಣಾ ಹುಡಿಗೀರೋ ಹೆಚ್ಚೋದರೂ ಹೆಚ್ಚಿ ಪೈಲ್ವಾನರೂ ಪಿಚ್ಚಾದರೂ
ಬ್ಯಾಡವೇ ಬ್ಯಾಡವೇ ನನ್ನ ರೇಗಿಸ ಬ್ಯಾಡವೇ ಕಣ್ಣ ಹೊಡೆದರೇ ಕಲ್ಲ್ ಹೋಡೀತೀನಿ.. ಹ್ಹಾಂ ...
ಹೆಣ್ಣು : ಬ್ಯಾಡವೋ ಬ್ಯಾಡವೋ ನನ್ನ ರೇಗಿಸ ಬ್ಯಾಡವೋ ಕಲ್ಲ್ ಹೊಡೆದರೇ ಕಣ್ಣ್ ಹೋಡೀತೀನಿ
ಗಂಡು : ಇಳಿದರೇ ಬೀದಿ ಬಸವ ನಾನೂ ತುಳಿದರೇ ಒಂಟಿ ಸಲಗ ನಾನೂ
ಸಿಡಿದರೇ ಸೀಗಿವೆ ಓಡು ಬೇಗ ಒಳಗಡೇ ಆಸೇ ಇಲ್ಲ ಈಗ
ಹೆಣ್ಣು : ಹಲಸಿಗೇ ಮ್ಯಾಲೇ ಚರ್ಮ ಮುಳ್ಳೂ ಗೂಳಿಗೆ ಬ್ರಹ್ಮಚರ್ಯ ಸುಳ್ಳೂ
ಮೀಸೆಗೆ ಹೊರಗೇ ಇಟ್ಟ ಜಾಗ ಆಸೆಗೇ ಒಳಗೇ ಇಟ್ಟ ರಾಗ
ಗಂಡು : ಜಾನಕಮ್ಮಾ ಜಾರಬ್ಯಾಡ ಜಾರಬ್ಯಾಡ ಬೀಳಬ್ಯಾಡ ಊರಿನವರ ಬಾಯಿಗೇ
ಹೆಣ್ಣು : ರಾಮಚಂದ್ರ ರಾಗ ಇಲ್ಲಿ ಭೋಗ ಇಲ್ಲಿ ಓಡಬ್ಯಾಡ ಜಿಂಕೆ ಹಿಂದೇ ಕಾಡಿಗೇ
ಗಂಡು : ಆಕಾರ ಆಡಕಮ್ ಬಡ್ಕ (ಬಡ್ಕ) ಹಾಕೆಲೇ ಬಾಯಿಗೇ ಚೀಲಕಾ..(ಚಿಲಕಾ)
ಹೆಣ್ಣು : ಭಟ್ಟಿ ಸಾರಾಯಿ ಕುಡುಕಾ (ಕುಡುಕಾ ) ಸೊಂಟನಾ ಸ್ವಲ್ಪ ಹಿಡಕಾ (ಹಿಡಕಾ)
ಗಂಡು : ಯಾವೋಳಪ್ಪಾ ಇವಳ ಯಾವೋಳಪ್ಪಾ ಇವಳು ಹಿಂದ್ಯಾಕೇ ಬಂದಳೊಪ್ಪಾ
ಅಣ್ಣಾ ಹುಡಿಗೀರೋ ಹೆಚ್ಚೋದರೂ ಹೆಚ್ಚಿ ಪೈಲ್ವಾನರೂ ಪೆಚ್ಚಾದರೂ
ಬ್ಯಾಡವೇ ಬ್ಯಾಡವೇ ನನ್ನ ರೇಗಿಸ ಬ್ಯಾಡವೇ ಕಣ್ಣ ಹೊಡೆದರೇ ಕಲ್ಲ್ ಹೋಡೀತೀನಿ.. ಹ್ಹಾಂ ...
ಹೆಣ್ಣು : ಬ್ಯಾಡವೋ ಬ್ಯಾಡವೋ ನನ್ನ ರೇಗಿಸ ಬ್ಯಾಡವೋ ಕಲ್ಲ್ ಹೊಡೆದರೇ ಕಣ್ಣ್ ಹೋಡೀತೀನಿ
ಗಂಡು : ಆಕಾರ ಆಡಕಮ್ ಬಡ್ಕ (ಬಡ್ಕ) ಹಾಕೆಲೇ ಬಾಯಿಗೇ ಚೀಲಕಾ..(ಚಿಲಕಾ)
ಹೆಣ್ಣು : ಭಟ್ಟಿ ಸಾರಾಯಿ ಕುಡುಕಾ (ಕುಡುಕಾ ) ಸೊಂಟನಾ ಸ್ವಲ್ಪ ಹಿಡಕಾ (ಹಿಡಕಾ)
ಗಂಡು : ಯಾವೋಳಪ್ಪಾ ಇವಳ ಯಾವೋಳಪ್ಪಾ ಇವಳು ಹಿಂದ್ಯಾಕೇ ಬಿದ್ದೋಳಪ್ಪಾ
ಅಣ್ಣಾ ಹುಡಿಗೀರೋ ಹೆಚ್ಚೋದರೂ ಹೆಚ್ಚಿ ಪೈಲ್ವಾನರೂ ಪೆಚ್ಚಾದರೂ ಅಣ್ಣೋ ...
ಅಣ್ಣಾ ಹುಡಿಗೀರೋ ಹೆಚ್ಚೋದರೂ ಹೆಚ್ಚಿ ಪೈಲ್ವಾನರೂ ಪೆಚ್ಚಾದರೂ
--------------------------------------------------------------------------------------------------------------------------
ಹೊಸಜೀವನ (1990) - ಹೇ... ನಿನ್ನಳೇ ಹೇಯ್ .. ಚಾಕು ಚೈನು ಎಡಗೈಲಿ ಬಲಗೈಲೀ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಏಯ್.. ನಿನ್ನಳೇ.. ಹೇಯ್ ... ಏಯ್.. ನಿನ್ನಳೇ.. ಹೇಯ್ ... ಯಾರತ್ರ ನಿಂದೆಲ್ಲಾ ಹೇಯ್
ಚಾಕು ಚೈನೂ ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟಲು ನನ್ನ ದೊಡ್ಡ ತಮ್ಮ ಚಿಕ್ಕ ತಮ್ಮ ಸಾರಾಯಿ ಹೊಯ್ಯಿ ಇವನ್ನಳೇ .. ಏಯ್
ಸಾಯಕ್ಕೂ ಸಾಯಸಕ್ಕೂ ನಾನು ಸೈಯ್
ಏಯ್.. ನಿನ್ನಳೇ.. ಹೇಯ್ ... ಏಯ್.. ನಿನ್ನಳೇ.. ಹೇಯ್ ...
ಊರಿಗೇ ಬೆಂಕಿ ಬಿದ್ರೆನೂ ನಂಗೇ ಆ ಬೆಂಕಿಲೀ ಬೀಡಿ ಹಚ್ಚತ್ತೀನಿ ಹಿಂಗೇ
ಯಾರಿಗೇ ಹೊಟ್ಟೇ ಉರಿದ್ರೇನು ನಂಗೇ ಇಲ್ಲಿ ನನ್ನ ಹೊಟ್ಟೆ ಹುರಿಯೊಂದೇ ಮುಖ್ಯ ನಂಗೇ
ದೇವರ ಹುಂಡಿ ಹೊಡೆಯೋನು ಕಳಶನೇ ಕದಿಯೋನು ನಾಲ್ಕು ಮಂದಿ ಒಳಗೇ ಜಾಗೀರದಾರ
ದಿನವಿಡೀ ಲಂಚ ನುಂಗೋನಗೇ ಕಳ್ಳ ಭಟ್ಟಿ ಇಳಿಸೋನಗೆ ನಾನೇ ಸುಂಕ ಕೇಳೋ ಪಾಳೇಗಾರ
ಹೇಯ್ ಚಾಕು ಚೈನೂ ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟಲು ನನ್ನ ದೊಡ್ಡ ತಮ್ಮ ಚಿಕ್ಕ ತಮ್ಮ ಸಾರಾಯಿ ಹೊಯ್ಯಿ ಇವನ್ನಳೇ .. ಏಯ್
ಸಾಯಕ್ಕೂ ಸಾಯಸಕ್ಕೂ ನಾನು ಸೈಯ್
ಏಯ್.. ನಿನ್ನಳೇ.. ಹೇಯ್ ... ಹ್ಹಹ್ಹಹಹಹಾ ... ಏಯ್.. ನಿನ್ನಳೇ.. ಹೇಯ್ ...
ಹೆಂಡತಿಗೇ ಮೋಸ ಮಾಡುತ್ತಾನೇ ಒಬ್ಬ ಸಂಬಳ ಕೊಡದೇನೆ ಏರುತ್ತಾನೆ ಹೆಂಡಂದಿಬ್ಬಾ.. ಹೂಂ ...
ಬಡ್ಡಿಗೆ ಬಡವರನ್ನ ಕೀಳ್ತಾನೊಬ್ಬ ಇಂಥ ಕಳ್ಳರನ್ನ ಸುಲಿಯೋದೇ ನನಗೇ ಹಬ್ಬ... ಅಹ್ಹಹ್ಹ..
ಜನಗಳ ತಿದ್ದಕ್ಕಾಗಲ್ಲಾ ಮೇಲೆ ಎತ್ತಕ್ಕಾಗಲ್ಲಾ ಎಲ್ಲಾ ಕಳ್ಳರಸಂತೆ ಆಗೋಯ್ತತಂತೆ
ಉಗದರೇ ಲೋಕ ಬಗ್ಗತೈತೆ ಕೇಳಿದ್ದೂ ಕೊಡುತೈತೆ ತಿಂದು ಸಾಯಿತ್ತೀನಿ ನನಗೆ ಏನು ಚಿಂತೇ
ಹೇಯ್ ಚಾಕು ಚೈನೂ ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟಲು ನನ್ನ ದೊಡ್ಡ ತಮ್ಮ ಚಿಕ್ಕ ತಮ್ಮ ಸಾರಾಯಿ ಹೊಯ್ಯಿ ಇವನ್ನಳೇ .. ಏಯ್
ಸಾಯಕ್ಕೂ ಸಾಯಸಕ್ಕೂ ನಾನು ಸೈಯ್
ಏಯ್..ಹೇಯ್ ನಿನ್ನಳೇ.. ಹೇಯ್ ... ಏಯ್.. ನಿನ್ನಳೇ.. ಹೇಯ್ ...
ಏಯ್.. ನಿನ್ನಳೇ.. ಹೇಯ್ ... ಯಾರತ್ರ ನಿಂದೆಲ್ಲಾ ಹೇಯ್
ಚಾಕು ಚೈನೂ ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟಲು ನನ್ನ ದೊಡ್ಡ ತಮ್ಮ ಚಿಕ್ಕ ತಮ್ಮ ಸಾರಾಯಿ ಹೊಯ್ಯಿ ಇವನ್ನಳೇ .. ಏಯ್
ಸಾಯಕ್ಕೂ ಸಾಯಸಕ್ಕೂ ನಾನು ಸೈಯ್
ಏಯ್.. ಅಹಹಹಹ್ಹ .. ನಿನ್ನಳೇ.. ಹೇಯ್ . ಏಯ್.. ನಿನ್ನಳೇ.. ಹೇಯ್ ...
--------------------------------------------------------------------------------------------------------------------------
No comments:
Post a Comment