111. ಮೈಸೂರು ಮಲ್ಲಿಗೆ (1992)


ಮೈಸೂರ ಮಲ್ಲಿಗೆ ಚಲನ ಚಿತ್ರದ ಹಾಡುಗಳು 
  1. ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
  2. ದೀಪವು ನಿನ್ನದೆ ಗಾಳಿಯು ನಿನ್ನದೆ  ಆರದಿರಲಿ ಬೆಳಕು
  3. ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ
  4. ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು  ಚಂದ ನಿನಗಾವುದೆಂದು
  5. ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
  6. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
  7. ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು 
  8. ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ 
ಮೈಸೂರು ಮಲ್ಲಿಗೆ (1992) ಬಳೆಗಾರ ಚೆನ್ನಯ್ಯ ಬಾಗಿಲಿಗೆ
ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ   ಸಂಗೀತ: ಸಿ.ಎಸ್. ಅಶ್ವಥ್   ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ

ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೆ
ತವರಿನಲಿ ತಾಯಿ ನಗುತಿಹಳು
ಕುಡಿದ ನೀರು ಅನುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯಾ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತವರಿನಲಿ
ಅಂಗಳದ ತುಂಬ ಜನರಿತ್ತು
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ
ಸುಖದಲ್ಲಿ ನಿಮ್ಮ ನೆನೆದರು ತಾಯಿ ಕುಲವಂತೆ
ದೀಪದಲಿ ಬಿರುಗಣ್ಣನಿರಿಸಿ
ಬೇಕಾದ ಹಣ್ನಿಹುದು, ಹೂವಿಹುದು ತವರಿನಲಿ
ಹೊಸ ಸೀರೆ ರತ್ನದಾಭಾರಣ
ತಾಯಿ ಕೊರಗುವರಲ್ಲಿ ನೀವಿಲ್ಲ ಊರಿನಲಿ
ನಿಮಗಿಲ್ಲ ಒಂದು ಹನಿ ಕರುಣ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ದಿನವಾದ ಬಸುರಿ ಹುಸ್ಸೆಂದು ಹಿಗ್ಗುಸಿರೆಳೆದು
ಹುದಿಯ ಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಳ ಚಿಲುಮೆ
ಉಳಿಸು ಮಾವನ ಮೇಲೆ ಮಗಳೇನ ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಅಮ್ಮನಿಗೆ ನಿಮ್ಮದೇ ಕನಸು...
ಅಮ್ಮನಿಗೆ ನಿಮ್ಮದೇ ಕನಸು....
-------------------------------------------------------------------------------------------------------------------------

ಮೈಸೂರು ಮಲ್ಲಿಗೆ (1992) ದೀಪವು ನಿನ್ನದೆ ಗಾಳಿಯು ನಿನ್ನದೆ

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ   ಸಂಗೀತ: ಸಿ. ಎಸ್. ಅಶ್ವಥ್  ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ


ದೀಪವು ನಿನ್ನದೆ ಗಾಳಿಯು ನಿನ್ನದೆ  ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ   ಮುಳುಗದಿರಲಿ ಬದುಕು
ದೀಪವು ನಿನ್ನದೆ ಗಾಳಿಯು ನಿನ್ನದೆ  ಆರದಿರಲಿ ಬೆಳಕು
ಬೆಟ್ಟವು ನಿನ್ನದೆ, ಬಯಲೂ ನಿನ್ನದೆ  ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ ಎಲ್ಲವೂ ನಿನ್ನವೆ
ಇರಲಿ ಏಕ ರೀತಿ
ದೀಪವು ನಿನ್ನದೆ ಗಾಳಿಯು ನಿನ್ನದೆ  ಆರದಿರಲಿ ಬೆಳಕು

ಆಗೊಂದು ಸಿಡಿಲು ಈಗೊಂದು ಮುಗಿಲು  ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ಕಡಲೂ ನಿನ್ನದೆ, ಹಡಗೂ ನಿನ್ನದೆ  ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ  ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...
ದೀಪವು ನಿನ್ನದೆ ಗಾಳಿಯು ನಿನ್ನದೆ  ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು
-------------------------------------------------------------------------------------------------------------------------

ಮೈಸೂರ ಮಲ್ಲಿಗೆ(1992) - ಹಕ್ಕಿಯ ಹಾಡಿಗೆ ತಲೆದೂಗುವ ಹೂವು

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ   ಸಂಗೀತ: ಸಿ. ಎಸ್. ಅಶ್ವಥ್  ಗಾಯನ: ಎಸ್. ಜಾನಕಿ 

ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ
ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನೆಡೆಯುವ ಆಸೆ
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ
---------------------------------------------------------------------------------------------------------------------

ಮೈಸೂರು ಮಲ್ಲಿಗೆ (1992) - ಒಂದಿರುಳು ಕನಸಿನಲಿ ನನ್ನವಳ ಕೇಳಿ

ರಚನೆ: ಕೆ. ಎಸ್. ನರಸಿಂಹಸ್ವಾಮಿ  ಸಂಗೀತ: ಸಿ. ಅಶ್ವಥ್  ಗಾಯನ: ಎಸ್. ಜಾನಕಿ ಎಸ್. ಪಿ. ಬಾಲಸುಬ್ರಮಣ್ಯಂ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು  ಚಂದ ನಿನಗಾವುದೆಂದು
ನಮ್ಮುರು ಹೊನ್ನೂರು ನಿಮ್ಮೂರು ನವಿಲೂರು  ಚಂದ ನಿನಗಾವುದೆಂದು
ನಮ್ಮೂರು ಚಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ನಮ್ಮೂರ ಮಂಚದಲಿ  ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ
ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ  ಎಂದಳಾಕೆ |ಪಲ್ಲವಿ|

ತವರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ
ಮಲ್ಲಿಗೆಯ ಮೊಗ್ಗುಗಳು ಮುಳ್ಳ ಬೇಲಿಯ ಬರಿಸಿ
ಬಳಕುತಿವೆ ಕಂಪ ಸೂಸಿ
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನುರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ
ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ  
ಎನ್ನರಸ ಸುಮ್ಮನಿರಿ ಎಂದಳಾಕೆ

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ ಊರ ಬೇಲಿಗೆ ಬಂದು
ನೀವು ನಮ್ಮನು ಕಂಡು ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ
ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ ಎಂದಳಾಕೆ
-------------------------------------------------------------------------------------------------------------------------

ಮೈಸೂರು ಮಲ್ಲಿಗೆ(1992) ನಿನ್ನ ಪ್ರೇಮದ ಪರಿಯ ನಾನರಿಯೆ

ಸಾಹಿತ್ಯ : ಕೆ.ಎಸ್. ನರಸಿಂಹಸ್ವಾಮಿ   ಸಂಗೀತ : ಸಿ.ಅಶ್ವಥ್   ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ


ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು  ನಿನ್ನೊಳಿದೆ ನನ್ನ ಮನಸು

ಸಾಗರನ ಹೃದಯದಲಿ ರಕ್ತಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ

ಅಲೆಬಂದು ಕರೆವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೊರ್ತಿಮಹಿಮೆ
-------------------------------------------------------------------------------------------------------------------------

ಮೈಸೂರು ಮಲ್ಲಿಗೆ (1992)....ರಾಯರು ಬಂದರು ಮಾವನ ಮನೆಗೆ

ಸಾಹಿತ್ಯ : ಕೆ.ಎಸ್. ನರಸಿಂಹಸ್ವಾಮಿ  ಸಂಗೀತ : ಸಿ. ಅಶ್ವಥ್  ಗಾಯನ : ರತ್ನಮಾಲಾ ಪ್ರಕಾಶ್


ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿದ್ರ ಬಂದಿತ್ತು   ತುಂಬಿದ ಚಂದಿರ ಬಂದಿತ್ತು

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು
ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು
ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ
ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
ಮೆಲುದನಿಯಲಿ ನಾದಿನ ಇಂತೆಂದಳು ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ
ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗಲಿ ಯಾರಿಗೆ ಎನ್ನಲು ಹರುಷದಲಿ
ಪದುಮಳು ಬಂದಳು..ಪದುಮಳು ಬಂದಳು..
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ.....
ರಾಯರ ಕೋಣೆಯಲಿ......ರಾಯರ ಕೋಣೆಯಲಿ......
-----------------------------------------------------------------------------------------------------------------------

ಮೈಸೂರ ಮಲ್ಲಿಗೆ(1992) - ಸಿರಿಗೆರೆಯ ನೀರಲ್ಲಿ

ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ  ಸಂಗೀತ: ಸಿ. ಅಶ್ವಥ್  ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ


ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ನೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು ನಿನ್ನ ಹೆಸರು…

ಜೋಯಿಸರಾ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು
ನಿನ್ನ ಹೆಸರು…

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು
ಒಂದಾಳೆ ಹೂವಲ್ಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು
ಉಯ್ಯಾಲೆ ನಿನ್ನಾ ಹೆಸರು…

ಮರೆತ ತುಟಿಗೆ ಬಾರದೆ ಮೋಡಮರೆಯೊಳಗೆ ಬೆಳದಿಂಗಳೊ ನಿನ್ನ ಹೆಸರು
ನೆನೆದಾಗ ಕಣ್ಣ ಮುಂದೆಲ್ಲಾ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು
ನಿನ್ನ ಹೆಸರು… ನಿನ್ನ ಹೆಸರು ನಿನ್ನ ಹೆಸರು… ನಿನ್ನ ಹೆಸರು
--------------------------------------------------------------------------------------------------------------------------

ಮೈಸೂರ ಮಲ್ಲಿಗೆ(1992) - ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ ಸಂಗೀತ: ಸಿ. ಅಶ್ವಥ್ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ


ಗಂಡು : ಆಆಆ (ಆಆಆ) ಆಆಆ (ಆಆಆ) ಆಆಆ (ಆಆಆ) ಆಆಆ (ಆಆಆ) ಆಆಆಆಅ
            ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
           ಕರಾವಳಿಗೆ ಮುತ್ತ ನೀಡುವ ಪೆರ್ದೆರೆಗಳ ಗಾನದಲ್ಲಿ
           ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
           ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷವೇಳುವಲ್ಲಿ
          ಕಣ್ಣು ಬೇರೇ ನೋಟವೊಂದು ನಾವೂ ಭಾರತೀಯರೂ
ಕೋರಸ್ :   ಕಣ್ಣು ಬೇರೇ ನೋಟವೊಂದು ನಾವೂ ಭಾರತೀಯರೂ

ಕೋರಸ್ : ಆಆಆಆ ಆಆಆಅ ಆಆಆಅ
ಗಂಡು :  ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
             ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
             ಒಂದೇ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ
             ನಮ್ಮ ಯುಗದ ಧನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
            ಬಾಷೆ  ಬೇರೇ ಭಾವವೊಂದು ನಾವೂ ಭಾರತೀಯರೂ
ಕೋರಸ್ : ಬಾಷೆ  ಬೇರೇ ಭಾವವೊಂದು ನಾವೂ ಭಾರತೀಯರೂ

ಕೋರಸ್ : ಆಆಆಆ ಆಆಆಅ ಆಆಆಅ
ಗಂಡು : ನಾಡಿಗಾಗಿ ತನುವು ತೆತ್ತ ಹುತಾತ್ಮರ ಸ್ಮರಣೆಯಲ್ಲಿ  (ಆಆಆಆಅ )
           ನಮ್ಮ ಕಷ್ಟದಲ್ಲೂ ನೆರೆಗೆ ನೆರಳ ನೀವ ಕರುಣೆಯಲ್ಲಿ (ಆಆಆಆಅ )
           ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೇ ಮೊಳಗುವಲ್ಲಿ
           ನಮ್ಮ ಗುರಿಯ ಬೆಳಕಿನಡೆಗೇ ನಡೆವ ಧೀರ ಪಯಣದಲಿ
          ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ
ಕೋರಸ್ : ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ
                ಎಲ್ಲೇ ಇರಲೀ ನಾವೂ ಒಂದೂ ನಾವೂ ಭಾರತೀಯರೂ
ಗಂಡು : ನಾವೂ ಭಾರತೀಯರೂ              ಎಲ್ಲರು : ನಾವೂ ಭಾರತೀಯರೂ
ಗಂಡು : ನಾವೂ ಭಾರತೀಯರೂ              ಎಲ್ಲರು : ನಾವೂ ಭಾರತೀಯರೂ
ಗಂಡು : ನಾವೂ ಭಾರತೀಯರೂ              ಎಲ್ಲರು : ನಾವೂ ಭಾರತೀಯರೂ 
--------------------------------------------------------------------------------------------------------------------------

No comments:

Post a Comment