773. ಮಿಡಿದ ಹೃದಯಗಳು (೧೯೯೩)


ಮಿಡಿದ ಹೃದಯಗಳು ಚಿತ್ರದ ಹಾಡುಗಳು 
  1. ತಂದೆ ಕೊಡಿಸೋ ಸೀರೆ 
  2. ಚಂದನ ಚಂದನದಿಂದ 
  3. ಹೊಸ ಸುಗ್ಗಿ ಬಂದಿದೆ 
  4. ದೇವಲೋಕ ಪ್ರೇಮಲೋಕ 
  5. ನಂಜಿ ಓ ನಂಜಿ 
ಮಿಡಿದ ಹೃದಯಗಳು (೧೯೯೩) - ತಂದೆ ಕೊಡಿಸೋ ಸೀರೆ ಮದುವೆ ಆಗೋ ವರೆಗೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಡಾ|| ರಾಜಕುಮಾರ 

ತಂದೆ ಕೊಡಿಸೋ ಸೀರೆ ಮದುವೆ ಆಗೋ ವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋ ವರೆಗೆ
ಬಂಧು ಕೊಡಿಸೋ ಸೀರೆ ಬಣ್ಣ ಹೋಗೋ ವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವ ವರೆಗೆ ಮಣ್ಣಿನ ಮಮತೆ ಮರೆವ ವರೆಗೆ...

ಭೂಮಿ ಎಂದು ಜನ ಭಾರ ಎನುವುದಿಲ್ಲಾ..
ತಾಯಿ ಎಂದು ತನ್ನ ಮಗುವ ಬಿಡುವುದಿಲ್ಲಾ..
ಇದ್ದು ಸತ್ತ ಹಾಗೆ ಮಗುವ ಬಿಟ್ಟ ತಾಯಿ
ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ಸ್ಥಾಯಿ ..
ಸೀತಾ ಮಾತೆ ಸ್ಥಾನ ಗಂಡನ ಅನುಸರಿಸಿದರೇ
ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೇ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿನ ನಂಟು ಹೃದಯ ಮಿಡಿವವರೆಗೆ
ಪ್ರೇಮದ ತುತ್ತ ತುದಿಯವರೆಗೆ ಬಾಳಿನ ಗುಟ್ಟು ತಿಳಿವವರೆಗೇ....
ತಾ ನ ನ ತಾ ನ ತಂದನ್ನನೂ.. ಒಹ್ ಒಹ್ ಒಹ್ ಒಹ್ ಓಓಓಓಓ

ಒಳ್ಳೆ ಮನಸು ಇದ್ದರೇನೇ ಕಷ್ಟವಂತೆ
ಕರಗೋ ಹೃದಯ ಇದ್ದರಂತೂ ಚಿಂತೆಯಂತೆ
ಪ್ರೀತಿ ಹರಿವ ನೀರೂ ಒಡೆದ ಮನಸಿನಲ್ಲಿ
ಬಾಳು ಕಂಡ ನೀರು ಮಿಡಿದ ಹೃದಯದಲ್ಲಿ...
ತಂದೆ ಕೊಡಿಸೋ ಸೀರೆ ಮದುವೆ ಆಗೋ ವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋ ವರೆಗೆ
ಬಂಧು ಕೊಡಿಸೋ ಸೀರೆ ಬಣ್ಣ ಹೋಗೋ ವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವ ವರೆಗೆ ಮಣ್ಣಿನ ಮಮತೆ ಮರೆವ ವರೆಗೆ...
------------------------------------------------------------------------------------------------------------------------

ಮಿಡಿದ ಹೃದಯಗಳು (೧೯೯೩) - ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ. ಚಿತ್ರಾ 

ಕೋರಸ್ :  ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ
ಗಂಡು : ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ
          ಘಮ ಘಮ ಬೊಂಬೆ ಹಿಡಿದರೇ  ಸರಿಗಮ ಬೊಂಬೆ ನುಡಿದರೇ
ಹೆಣ್ಣು : ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ 
           ಘಮ ಘಮ ಬೊಂಬೆ ಹಿಡಿದರೇ  ಸರಿಗಮ ಬೊಂಬೆ ನುಡಿದರೇ

ಕೋರಸ್ :  ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ 
ಗಂಡು : ತುಂಬಿರುವ ತುಂಗೆ ನೀನು ಸೌಂದರ್ಯ ವನದ ಜೇನು ಬಳುಕಿದರೆ ನೀ ಮುಳುಗುವೆನು ನಾ
ಹೆಣ್ಣು : ರಸವಂತ ಚಿತ್ರಕಾರ ನನ್ನ ಪ್ರೇಮ ಸೂತ್ರಧಾರ ತೀಡಿದರೇ ನೀ ಮೂಡುವೆನು ನಾ
ಗಂಡು : ಮಾತಾಡಬಲ್ಲದೀ ಬೇಲೂರ ಬಾಲಿಕೇ
ಹೆಣ್ಣು : ಸಿಹಿಯಾದ ಕಾಣಿಕೆ ಕೊಡಬಲ್ಲ ಮದನಿಕೆ
ಗಂಡು : ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ 
            ಘಮ ಘಮ ಬೊಂಬೆ ಹಿಡಿದರೇ  ಸರಿಗಮ ಬೊಂಬೆ ನುಡಿದರೇ

ಕೋರಸ್ :  ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ 
ಹೆಣ್ಣು : ಕಲ್ಪನೆಯ ಕನ್ಯೆ ನಾನು ಕಂಗೊಳಿಸೋ ಕವಿಯು ನೀನು ಬಯಸಿದರೇ ನೀ ಬಳಸುವೆನು ನಾ
ಗಂಡು : ಕರ್ಪೂರ ಅಲ್ಲ ನೀನು ಕರಗೋಕೆ ಬಲ್ಲೆಯೇನು ಕರಗಿದರೆ ನೀ ಉರಿಸುವೆನು ನಾ
ಹೆಣ್ಣು : ಅಸಾಮಾನ್ಯ ಶೂರನೇ ಸುಕುಮಾರಿ ಚೋರನೆ
ಗಂಡು : ಅಪರೂಪ ಭಂಗಿಯೇ ರತಿ ದೇವಿ ತಂಗಿಯೇ
ಹೆಣ್ಣು : ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ 
          ಘಮ ಘಮ ಬೊಂಬೆ ಹಿಡಿದರೇ  ಸರಿಗಮ ಬೊಂಬೆ ನುಡಿದರೇ
ಗಂಡು : ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ 
            ಘಮ ಘಮ ಬೊಂಬೆ ಹಿಡಿದರೇ  ಸರಿಗಮ ಬೊಂಬೆ ನುಡಿದರೇ
ಕೋರಸ್ : ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ 
--------------------------------------------------------------------------------------------------------------------------

ಮಿಡಿದ ಹೃದಯಗಳು (೧೯೯೩) - ಹೊಸ ಸುಗ್ಗಿ ಬಂದಿದೆ ನವಧಾನ್ಯ ತಂದಿದೇ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮಂಜುಳಾ, ಉಷಾ ಗಣೇಶ  

ಗಂಡು : ಹೊಸ ಸುಗ್ಗಿ ಬಂದಿದೇ ...  ಕೋರಸ್ : ಹೂಂಹೂಂಹೂಂಹೂಂ
ಗಂಡು : ನವ ಧಾನ್ಯ ತಂದಿದೇ ...   ಕೋರಸ್ : ಹೂಂಹೂಂಹೂಂಹೂಂ
ಗಂಡು : ಸುವ್ವಾಲೇ ಹಾಡಿದೇ ...    ಕೋರಸ್ : ಹೂಂಹೂಂಹೂಂಹೂಂ
ಗಂಡು : ಬಾಗೀನ ಕಾದಿದೇ...        ಕೋರಸ್ : ಹೂಂಹೂಂಹೂಂಹೂಂ
ಗಂಡು : ದಯಮಾಡಿ ಕಳಿಸಿ ಕೊಡು ಗಂಗೆಯ ಅವಳೊಮ್ಮೆ ನೋಡಳವಳ ತಂಗಿಯ
           ನಮ್ಮ ಬೆಳೆ ಉಳಿಸುವ ಕಾವೇರೀ .. ನಿನ್ನ ಗಂಗೆಯಂತೇ ಸೋದರೀ
           ಅವಳ ಮಡಿಲ ತುಂಬ ಬೇಕು ಶಂಕರಾ ...
           ದಯಮಾಡಿ ಕಳಿಸಿ ಕೊಡು ಗಂಗೆಯ ಅವಳೊಮ್ಮೆ ನೋಡಳವಳ ತಂಗಿಯ

ಗಂಡು : ದಿನ ತಿರುಗುವ ಲೋಕಕೆ ನೀ ದೊರೆ ನೀನು ಆದಿಶಕ್ತಿಯ ಕೈಸೆರೆ
           ದಿನವಿಡೀ ನೀ ಧ್ಯಾನಕೆ ಕುಳಿತರೇ ತಾಯಿ ಗೌರಿ ತಾನೇ ನಮಗೆ ಆಸರೇ
ಹೆಣ್ಣು : ಕರೆದರೇ ಕರುಣಿಸಿ ಕೋಟಿ ಕಷ್ಟ ಕಳೆವಳು ಊರಿಗೇ ಗಣಪನ ಕಾವಲಿಡುವಳು
ಗಂಡು : ನೀನು ನಗುತ ಇದ್ದರೇ ಲೋಕ ನೆಮ್ಮದಿ ನಿನ್ನ ನಗಿಸೋ ಗೌರಿಯೇ ನಮಗೆ ಶ್ರೀನಿಧಿ
ಹೆಣ್ಣು : ಹೊಸ ಸುಗ್ಗಿ ಬಂದಿದೇ ...  ಕೋರಸ್ : ಹೂಂಹೂಂಹೂಂಹೂಂ
          ನವ ಧಾನ್ಯ ತಂದಿದೇ ...   ಕೋರಸ್ : ಹೂಂಹೂಂಹೂಂಹೂಂ
          ಸುವ್ವಾಲೇ ಹಾಡಿದೇ ...    ಕೋರಸ್ : ಹೂಂಹೂಂಹೂಂಹೂಂ
          ಬಾಗೀನ ಕಾದಿದೇ...        ಕೋರಸ್ : ಹೂಂಹೂಂಹೂಂಹೂಂ
ಗಂಡು :  ದಯಮಾಡಿ ಕಳಿಸಿ ಕೊಡು ಗೌರಿಯ ಅವಳೊಮ್ಮೆ ನೋಡಳವಳ ತಂಗಿಯ

ಕೋರಸ್ : ಓಓಓಓಓ..  ಓಓಓಓಓ..
ಗಂಡು : ಉಸಿರಾಡುವ ಜೀವನ ನಿನ್ನದು ಕೂಡಿ ಬಾಳೋ ಹರುಷವೆಂದೂ ನಮ್ಮದು
            ಜಗ  ಉರಿಸುವ ಸೂರ್ಯನಾ ಮಾಡಿದೇ ನಾವು ಸುಡದ ಹಾಗೇ ದೂರ ಇರಿಸಿದೇ
ಹೆಣ್ಣು : ತಂಪಿಗೆ ಚಂದ್ರನ ತಲೆಯಮೇಲೆ ಧರಿಸಿದೇ ಇಂಪಿಗೇ ಕೋಗಿಲೆ ಗಾನ ನುಡಿಸಿವೆ
ಗಂಡು : ನಾವು ಮಾಡೋ ಪಾಪವ ಮೋಡ ಮಾಡಯ್ಯ ಮೋಡದಿಂದ ಕರುಣೆಯ ಮಳೆಯ ಸುರಿಸಯ್ಯ
            ಈ ಸುಗ್ಗಿ ಮುಗಿದಿದೇ ....  ಕೋರಸ್ : ಹೂಂಹೂಂಹೂಂಹೂಂ
ಗಂಡು : ಬೇಸಾಯು ಕಾದಿದೇ ...  ಕೋರಸ್ : ಹೂಂಹೂಂಹೂಂಹೂಂ
ಗಂಡು : ತೋಳಲ್ಲಿ ಬಲವಿದೆ ...     ಕೋರಸ್ : ಹೂಂಹೂಂಹೂಂಹೂಂ
ಗಂಡು : ಮಳೆರಾಯ ಬೇಕಿದೇ ..   ಕೋರಸ್ : ಹೂಂಹೂಂಹೂಂಹೂಂ
ಇಬ್ಬರು : ದಯಮಾಡಿ ಕಳಿಸಿಕೊಡು ವರುಣನಾ ಭೂ ತಾಯ ಹಸಿರುಮಾಡೋ ಕರುಣನಾ
            ನಮ್ಮ ಬೆಳೆ ಉಳಿಸುವ ಕಾವೇರಿ ಮಳೆರಾಯನ ಪ್ರಿಯ ಸೋದರಿ
            ಅವನ ಪಾದ ತೊಳೆಯಬೇಕು ಶಂಕರಾ...
            ದಯಮಾಡಿ ಕಳಿಸಿಕೊಡು ವರುಣನಾ ಭೂ ತಾಯ ಹಸಿರುಮಾಡೋ ಕರುಣನಾ
--------------------------------------------------------------------------------------------------------------------------

ಮಿಡಿದ ಹೃದಯಗಳು (೧೯೯೩) - ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ. ಚಿತ್ರಾ

ಹೆಣ್ಣು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
          ಇಲ್ಲಿ ನಾನು ನನ್ನ ಗಂಡ ನನ್ನ ಮಗುವೇ...ಏ..ಏ..ಏ..
          ಪ್ರತಿ ರಾತ್ರಿ ಪ್ರತಿ ಹಗಲು ಬರೀ ನಗುವೇ...ಏ...ಏ...ಏ..
ಗಂಡು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
           ಇಲ್ಲಿ ನಾನು ನನ್ನ ಹೆಂಡತಿ ನನ್ನ ಮಗುವೇ...ಏ..ಏ..ಏ..
           ಪ್ರತಿ ರಾತ್ರಿ ಪ್ರತಿ ಹಗಲು ಬರೀ ನಗುವೇ...ಏ...ಏ...ಏ..

ಹೆಣ್ಣು : ಕನಸಿನ ಮಾಲೆ ಕಟ್ಟಿದ ಮೇಲೆ ನನಸು ಮಾಡಿದೆ
          ಮನಸು ನೀಡಿದೆ ಹೃದಯ ಮಿಡಿಸಿದೆ
ಗಂಡು : ಬಡತನ ನಾನು ಹೊಸತನ ನೀನು
            ನನ್ನ ವರಿಸಿದೆ ಜೀವ ಬೆರೆಸಿದೆ ನೋವ ಮರೆಸಿದೆ..
ಹೆಣ್ಣು : ಕಾವೇರಿ ನನಗಕ್ಕ ನಾ ಕಪಿಲಾ... ಆ..ಆ...
ಗಂಡು : ನಿನ್ನಿಂದ ಪಡಕೊಂಡೆ ನಾ ಸಕಲ...ಆ..ಆ..ಆ..
ಹೆಣ್ಣು : ಈ ಜನುಮದಲಿ ಮರುಜನ್ಮದಲಿ ನನ್ನಾಳುವ ಪತಿ ನೀನೇ
ಗಂಡು : ಒಯ್ಯೇ... ಕಾವೇರಮ್ಮಾ... ಯಾವ ಲೋಕದಲ್ಲಿದ್ದೀಯಾ....
ಹೆಣ್ಣು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
          ಇಲ್ಲಿ ನಾನು ನನ್ನ ಗಂಡ ನನ್ನ ಮಗುವೇ...ಏ..ಏ..ಏ..
          ಪ್ರತಿ ರಾತ್ರಿ ಪ್ರತಿ ಹಗಲು ಬರೀ ನಗುವೇ....

ಹೆಣ್ಣು : ವರುಷಗಳೆಲ್ಲಾ ನಿಮಿಷಗಳಂತೆ ಉರಳಿ ಹೋದವು
          ನಿನ್ನ ಜೊತೆಯಲ್ಲಿ ಪ್ರೇಮ ಕಥೆಯಲ್ಲಿ
ಗಂಡು : ಬಯಕೆಗಳೆಲ್ಲಾ ಹೊಸ ಚಿಗುರಂತೆ ಮರಳಿ ಬಂದವು
           ನಿನ್ನ ನಗುವಲಿ ಪ್ರೇಮ ವನದಲಿ
ಹೆಣ್ಣು : ಇಲ್ಲಿ ಕೋಪ ಪರಿತಾಪ ಅಪರೂಪ ಆ..ಆ..ಆ..
ಗಂಡು : ಅತಿ ಸರಳ ಅತಿ ವಿರಳ ನಿನ್ನ ರೂಪಾ..ಆ..ಆ..ಆ..
ಹೆಣ್ಣು : ಈ ಜನುಮದಲಿ ಮರು ಜನಮದಲಿ ನನ್ನಾಳುವ ದೊರೆ ನೀನೇ...
ಮಗು : ಅಮ್ಮಾ ಯಾವ ಲೋಕದಲ್ಲಿದ್ದೀಯಾ....
ಹೆಣ್ಣು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
          ಇಲ್ಲಿ ನಾನು ನನ್ನ ಗಂಡ ನನ್ನ ಮಗುವೇ...ಏ..ಏ..ಏ..
          ಪ್ರತಿ ರಾತ್ರಿ ಪ್ರತಿ ಹಗಲು ಬರೀ ನಗುವೇ...ಏ...ಏ...ಏ..
ಗಂಡು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
            ಇಲ್ಲಿ ನಾನು ನನ್ನ ಹೆಂಡತಿ ನನ್ನ ಮಗುವೇ...ಏ..ಏ..ಏ..
            ಪ್ರತಿ ರಾತ್ರಿ ಪ್ರತಿ ಹಗಲು ಬರೀ ನಗುವೇ...ಏ...ಏ...ಏ..
--------------------------------------------------------------------------------------------------------------------------

ಮಿಡಿದ ಹೃದಯಗಳು (೧೯೯೩) - ನಂಜಿ ಓ ನಂಜಿ ನನ್ನಪರಂಜಿ ಕೋಳಿನಾ ಯಾಕಿಟ್ಟೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ. ಮಂಜುಳಾ ಗುರುರಾಜ 

ಗಂಡು : ಹ್ಹಾ.. ಹೂಂ ... ಕೊಕ್ಕೋ ಕೊ....
ಹೆಣ್ಣು : ಕೂಊಊಊಉ
ಗಂಡು : ನಂಜಿ ಓ ನಂಜಿ ನನ್ನಪರಂಜಿ ಕೋಳಿನಾ ಯಾಕಿಟ್ಟೆ
            ಬೆಳ್ಳೂಳ್ಳಿ ಖಾರ ಈರುಳ್ಳಿ ಸಾರ ತಲೆಗೇರಿ ನಾ ಕೆಟ್ಟೇ.. ಓ..ಓ...ಓ...
ಹೆಣ್ಣು : ನಂಜ ಓ ನಂಜ ನನ್ನಾಳೋ ಹುಂಜ ತುಂಬಿತಾ ನಿನ್ನ ಹೊಟ್ಟೆ
           ಪ್ರಾಯದ ಹಸಿವ ನೀಗಿಲಿ ಏನದು ಮಾಸಲೆ ಮಾಡಿಟ್ಟೆ....
ಗಂಡು : ನಂಜಿ ಓ ನಂಜಿ           ಹೆಣ್ಣು : ನನ್ನಪರಂಜಿ
ಇಬ್ಬರು : ಲಲ್ಲಲ ಲ ಲ ಲಾ

ಗಂಡು : ಹ್ಹಾ.. ಹೂಂ ... ಕೊಕ್ಕೋ ಕೊ....
ಹೆಣ್ಣು : ಕೂಊಊಊಉ
ಗಂಡು : ಹೋಯ್ಯ್ ಬಿಚ್ಚು ಬೆಡಗಿ ಕಣ್ ಚುಚ್ಚೊ ಹುಡುಗಿ
            ಗುರಿ ಇಕ್ಕಬೇಡಾ ಕಣ್ಣು ಕುಕ್ಕಬ್ಯಾಡ ಹಲ್ಲು ಕಚ್ಚಾಬ್ಯಾಡಾ ಆಸೆ ಹಚ್ಚಬ್ಯಾಡ
ಹೆಣ್ಣು : ಹೋಯ್ ಮುದ್ದು ಮಾಮ ಶ್ರೀ ರಂಗಧಾಮ
          ಬಾ ಹುಲ್ಲು ಮೆಧೆಗೆ ದಿಂಬಾಗು ತಲೆಗೆ ದಾಳಿಂಬೆ ಹಣ್ಣಿಗೆ ಬಾ ಇಕ್ಕು ಮೆಲ್ಲಗೆ
ಗಂಡು : ಕಾಮ್ಮೊನ್ನು ಏಡಿಕಾಯಿ ತಿಂದದ್ದೇ ನನ್ನ ಬಾಯಿ ದಾಳಿಂಬೆ ಹಣ್ಣಿಗೆ ಒಗ್ಗದು
ಹೆಣ್ಣು :  ಹಯ್ಯೋ ಮಾಮ ಮುದ್ದು ಮಾಮ ನಿನ್ನ ತಲೇಲಿ ಇಲ್ಲವೇನೋ ಪ್ರೇಮ
           ದಾಳಿಂಬೆ ಹಣ್ಣು ಅಂದ್ರೆ ಮುದ್ದಾಡು ಬಾಯಿ ಮಾಮ
ಗಂಡು : ನಂಜಿ ಓ ನಂಜಿ ನನ್ನಪರಂಜಿ ಖಾರ್ ಮೀನಾ ಯಾಕಿಟ್ಟೆ (ಹ್ಹಾ )
            ಬೆಳ್ಳೂಳ್ಳಿ ಖಾರ ಈರುಳ್ಳಿ ಸಾರ ತಲೆಗೇರಿ ನಾ ಕೆಟ್ಟೇ.. ಓ..ಓ...ಓ...
ಹೆಣ್ಣು : ನಂಜ ಓ ನಂಜ ನನ್ನಾಳೋ ಹುಂಜ ತುಂಬಿತಾ ನಿನ್ನ ಹೊಟ್ಟೆ
          ಪ್ರಾಯದ ಹಸಿವ ನೀಗಿಲಿ ಏನದು ಮಾಸಲೆ ಮಾಡಿಟ್ಟೆ....
ಗಂಡು : ನಂಜಿ ಓ ನಂಜಿ           ಹೆಣ್ಣು : ನನ್ನಪರಂಜಿ
ಇಬ್ಬರು : ಲಲ್ಲಲ ಲ ಲ ಲಾ

ಗಂಡು : ಕೊಕ್ಕೋ ಕೊ....
ಹೆಣ್ಣು : ಕೂಊಊಊಉ
ಹೆಣ್ಣು : ಒಯ್ಯೇ ಜೋಕುಮಾರ ಏನಿಷ್ಟು ಜೋರಾ...
          ತೋಳು ಒಡೆದೀಯಾ ಕೆನ್ನೆ ಕಡಿದೀಯಾ ಸೊಂಟ ಎಳೆದಿಯಾ ಬಿಲ್ಲು ಮುರಿದಿಯಾ
ಗಂಡು : ಊಯ್ಯೇ ರಂಗ ರಾಣಿ ಕೊ ಕಿಲಕಿಲ ವಾಣಿ
            ಕಾಲು ಕೆರೀತಿಯಾ ಮೇಲೆ ಕರೀತಿಯಾ ಮತ್ತೇ ಬಿಗುಮಾನ ಅಡ್ಡ ತರುತಿಯಾ
ಹೆಣ್ಣು : ಮುಚ್ಚಿಟ್ಟ ಮುಷ್ಠಿಲಿ ಬಚ್ಚಿಟ್ಟ ರತುನ ನೋಡೋಕೆ ಆತುರ ತಾನೇ
ಗಂಡು : ಅಯ್ಯೋ ಪೆದ್ದೆ ರಾಗಿ ಮುದ್ದೆ ನಿನ್ನ ಮುಷ್ಟಿಯ ರತುನವು ಸಾಲದು
            ಚಿನ್ನದ ಮನಸು ನನಗೀಗ ಬೇಕು ಚಿನ್ನ
ಹೆಣ್ಣು : ನಂಜ ಓ ನಂಜ ನನ್ನಾಳೋ ಹುಂಜ ತುಂಬಿತಾ ನಿನ್ನ ಹೊಟ್ಟೆ
           ಪ್ರಾಯದ ಹಸಿವ ನೀಗಿಲಿ ಏನದು ಮಾಸಲೆ ಮಾಡಿಟ್ಟೆ....
ಗಂಡು : ನಂಜಿ ಓ ನಂಜಿ ನನ್ನಪರಂಜಿ ಕೋಳಿನ ಯಾಕಿಟ್ಟೆ
            ಬೆಳ್ಳೂಳ್ಳಿ ಖಾರ ಈರುಳ್ಳಿ ಸಾರ ತಲೆಗೇರಿ ನಾ ಕೆಟ್ಟೇ.. ಓ..ಓ...ಓ... 
ಹೆಣ್ಣು : ನಂಜ ಓ ನಂಜ              ಗಂಡು :  ನನ್ನಪರಂಜಿ ....
ಇಬ್ಬರು : ಲಲ್ಲಲ ಲ ಲ ಲಾ
--------------------------------------------------------------------------------------------------------------------------

No comments:

Post a Comment