639. ಸ್ಪಂದನ (೧೯೭೮)


ಸ್ಪಂದನ ಚಿತ್ರದ ಹಾಡುಗಳು 
  1. ಎಂಥಾ ಮರುಳಯ್ಯಾ ಇದು ಎಂಥಾ ಮರಳೂ 
  2. ಬಂದೇ ಬರುತಾವ ಕಾಲ 

ಸ್ಪಂದನ (೧೯೭೮) - ಎಂಥಾ ಮರುಳಯ್ಯಾ 
ಸಂಗೀತ : ಸಿ.ಅಶ್ವಥ, ಸಾಹಿತ್ಯ : ಲಕ್ಷ್ಮೀನಾರಾಯಣಭಟ್ಟ ಗಾಯನ : ಎಸ್.ಪಿ.ಬಾಲು

ಎಂಥಾ ಮರುಳಯ್ಯಾ ಇದು ಎಂಥ ಮರುಳು..
ಬೆಳಗಿನ ಹಿಮದಂತೆ ಹರಿವ ನೆರಳು....
ಥಳ ಥಳ ಮಿನುಗಿ ಸೋಕಲು ಕರಗಿ...
ಥಳ ಥಳ ಮಿನುಗಿ ಸೋಕಲು ಕರಗಿ...
ಹರಿವುದು ಈ ಬಾಳಿನೆಲ್ಲಾ ತಿರುಳು...
ಹರಿವುದು ಈ ಬಾಳಿನೆಲ್ಲಾ ತಿರುಳು...
ಎಂಥಾ ಮರುಳಯ್ಯಾ  ಇದು ಎಂಥ  ಮರುಳು..

ಹರಿಯುವ ನೀರಿಗೆ ಯಾವ ಹೊಣೆ  ಹಾರುವ ಹಕ್ಕಿಗೆ ಎಲ್ಲಿ ಮನೆ ...  
ಹರಿಯುವ ನೀರಿಗೆ ಯಾವ ಹೊಣೆ  ಹಾರುವ ಹಕ್ಕಿಗೆ ಎಲ್ಲಿ ಮನೆ ...  
ಬಾಳಿನ ಕಡಲಿನ....
ಬಾಳಿನ ಕಡಲಿನ....   ತೆರೆಗಳ ಸೀಳಿ ತಲಪುವುದಾಚೆಯ ದಡದಾ ಕೊನೆ...
ತಲಪುವುದಾಚೆಯ ದಡದಾ ಕೊನೆ...
ಎಂಥಾ ಮರುಳಯ್ಯಾ  ಇದು ಎಂಥ  ಮರುಳು..

ಸಂಜೆಯ ನೇಸರ ಬಣ್ಣದ ನೀಲಿ  ನೀರಲಿ ಹಾರುತ ಬೆಳ್ಳಕ್ಕಿ ತೇಲೆ..
ಸಂಜೆಯ ನೇಸರ ಬಣ್ಣದ ನೀಲಿ  ನೀರಲಿ ಹಾರುತ ಬೆಳ್ಳಕ್ಕಿ ತೇಲೆ..
ಕಡಲಿಗೆ ಸಾಲಾಗೀ ...
ಕಡಲಿಗೆ ಸಾಲಾಗಿ... ಮೂಡುತ ಮುಳುಗುತ ಬೆನ್ನಟ್ಟಿ ಸಾಗುವ ತೆರೆಗಳ ಹಾಡೇ  
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ... 
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ...
ಎಂಥಾ ಮರುಳಯ್ಯಾ  ಇದು ಎಂಥ  ಮರುಳು..
ಬೆಳಗಿನ ಹಿಮದಂತೆ ಹರಿವ ನೆರಳು....
ಥಳ ಥಳ ಮಿನುಗಿ ಸೋಕಲು ಕರಗಿ...
ಥಳ ಥಳ ಮಿನುಗಿ ಸೋಕಲು ಕರಗಿ...
ಹರಿವುದು ಈ ಬಾಳಿನೆಲ್ಲಾ ತಿರುಳು...
ಹರಿವುದು ಈ ಬಾಳಿನೆಲ್ಲಾ ತಿರುಳು...
ಎಂಥಾ ಮರುಳಯ್ಯಾ  ಇದು ಎಂಥ  ಮರುಳು..
ಆಆಆಆ..  ಆಆಆ ಏಏಏಏಏ .... 
----------------------------------------------------------------------------------------------------------------------

ಸ್ಪಂದನ (೧೯೭೮) - ಎಂಥಾ ಮರುಳಯ್ಯಾ
ಸಂಗೀತ : ಸಿ.ಅಶ್ವಥ, ಸಾಹಿತ್ಯ : ಲಕ್ಷ್ಮೀನಾರಾಯಣಭಟ್ಟ ಗಾಯನ : ಪಿ.ಸುಶೀಲಾ


ಬಂದೆ ಬರುತವ ಕಾಲ...
ಬಂದೆ ಬರುತವ ಕಾಲ ಮಂದಾರ ಕನಸನು
ಕಂಡಂತ ಮನಸನು ಒಂದು ಮಾಡುವ ಸ್ನೇಹ ಜಾಲ‌
ಆ..ಆ ಬಂದೆ ಬರುತವ ಕಾಲ...

ಮಾಗಿಯ ಎದೆ ತೂರಿ ಕೂಗಿತೋ ಕೋಗಿಲ‌
ರಾಗದ ಚಂದಕೆ ಬಾಗಿತೋ ಬನವೆಲ್ಲ‌
ತೂಗುತ ಬಳ್ಳಿ ಮೈಯನ್ನ ಸಾಗದು ಬಾಳು
ಏಕಾಂಗಿ ಎನುತಾವ‌  ಬಂದೆ ಬರುತವ ಕಾಲ...
ಕಂಡಂತ ಮನಸನು ಒಂದು ಮಾಡುವ ಸ್ನೇಹ ಜಾಲ‌
ಆ..ಆ ಬಂದೆ ಬರುತವ ಕಾಲ...  

ಹುಣ್ಣಿಮೆ ಬಾನಿಂದ ತಣ್ಣನೆ ಸವಿ ಹಾಲು
ಚೆಲ್ಲುತ್ತ ಮೆಲ್ಲನೆ ನಲಿಸಿದೆ ಭುವಿಯನು
ಮುಸುಕಿದೆ ಮಾಯೆ ಜಗವನು ಭುವಿ ಬಾನು ಸೇರಿ
ಹರಸ್ಯಾವ ಬಾಳನು ಬಂದೆ ಬರುತವ ಕಾಲ...
ಕಂಡಂತ ಮನಸನು ಒಂದು ಮಾಡುವ ಸ್ನೇಹ ಜಾಲ‌
ಆ..ಆ ಬಂದೆ ಬರುತವ ಕಾಲ...  ಆ..ಆ ಬಂದೆ ಬರುತವ ಕಾಲ...
ಆ..ಆ ಬಂದೆ ಬರುತವ ಕಾಲ...  ಆ..ಆ ಬಂದೆ ಬರುತವ ಕಾಲ...  
--------------------------------------------------------------------------------------------------------------------------

No comments:

Post a Comment