ಸ್ಪರ್ಶ ಚಲನಚಿತ್ರದ ಹಾಡುಗಳು
- ಚಂದಕಿಂತ ಚಂದ ನೀನೆ ಸುಂದರ
- ಇವಳೇ ಅವಳು ಕನಸಲಿ ಬಂದವಳು
- ಬರೆಯದ ಮೌನದ ಕವಿತೆ ಹಾಡಾಯಿತು
- ಮನಗಳ ಸರಿಗಮ ಪ್ರೇಮ
- ಓಹೋ ಚೆನ್ನೇ ಚೆನ್ನೇ
- ಸಂಗಾತಿ ಹೀಗೇಕೆ ನೀ ದೂರ ಓಡುವೇ
- ಕನಸಲಿ ಕಾಡುವ ಹುಡುಗಿ
- ಪಡುವಣ ದಿಕ್ಕಿನಾಗೇ
ಸ್ಪರ್ಶ (೨೦೦೦) - ಚಂದಕಿಂತ ಚಂದ
ಸಂಗೀತ: ಹಂಸಲೇಖ ಸಾಹಿತ್ಯ: ಇಟಗಿ ಈರಣ್ಣ ಗಾಯನ್: ಪಂಕಜ್ ಉಧಾಸ್
ಚಂದಕಿಂತ ಚಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೆ ಎಂದೆನು ಚೆಂದ ಅಂದ ಅಂದ ಚೆಂದ ಚಂದುಳ್ಳಿ ಚೆಲುವೆ ಓ ನನ್ನ ಒಲವೆ

ನಗುವ ಹೂ ನಗೆ ನಗುವಾ ಆ ಬಗೆ ನಗುವೇ ನಾಚಿತು ನಾಚಿ ನಕ್ಕಿತು
ನಗುವಾ ಈ ಬಗೆ ಬೇಕು ಹೂವಿಗೆ ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚಂದ ನೀ ನಗುವೆ ಚಂದ ನಿನ್ನ ನಗುವೆ ಅಂದ
ಚಂದಕಿಂತ ಚಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ
ಪ್ರೇಮದ ಅರ್ಥವ ಹುಡುಕುತ ನಿಂತೆನು ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೆ ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ
ಚಂದಕಿಂತ ಚಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ
ನನ್ನ ಉಸಿರಲಿ ನಿನ್ನ ಹೆಸರಿದೆ ನಿನ್ನ ಹೆಸರಲೆ ನನ್ನ ಉಸಿರಿದೆ
ನಿನ್ನ ಹೆಸರಲೆ ಉಸಿರು ಹೋಗಲಿ ಉಸಿರು ಉಸಿರಲಿ ಹೆಸರ ನಿಲ್ಲಲಿ
ನೀನೆ ಉಸಿರು ನೀನೆ ಹೆಸರು

-------------------------------------------------------------------------------------------------------------------------
ಸ್ಪರ್ಶ (೨೦೦೦) - ಇವಳೇ ಅವಳು ಕನಸಲಿ ಬಂದವಳು
ಸಂಗೀತ: ಹಂಸಲೇಖ ಸಾಹಿತ್ಯ: ಕೆ.ಕಲ್ಯಾಣ ಗಾಯನ್: ಹರಿಹರನ್
ಇವಳೇ ಅವಳು ಕನಸಲಿ ಬಂದವಳು ಅವಳೇ ಇವಳು ಮನದಲಿ ನಿಂದವಳು

ಚೆಲುವೇ ಅಂದ ಸೆಳೆದ ವೇಳೆ ನನ್ನ ಹೃದಯ ಪುಟದ ಮೇಲೆ ಕವಿತೆ ಬರೆದವಳು
ಮೆಲ್ಲ ಮೆಲ್ಲ ನಡೆಯಲು ನೀ ನವಿಲು ನಾಚಿ ನೋಡುತಿದೆ
ಚೆಲ್ಲಿದಂತೆ ಚೆಲುವನು ನೀ ಸುಮವು ಸೆಳೆದು ಸವಿಯುತಿದೆ
ಇವಳೇ ಅವಳು ಕನಸಲಿ ಬಂದವಳು ಅವಳೇ ಇವಳು ಮನದಲಿ ನಿಂದವಳು
ಚೆಲ್ಲಿದಂತೆ ಚೆಲುವನು ನೀ ಸುಮವು ಸೆಳೆದು ಸವಿಯುತಿದೆ
ನಿನ್ನಾ ನೋಡಿ ಕಲಿಯಲಿ ಲತೆ ಬಿಂಕ ನಾಚಿ ನಗಲು ಅಲೆ ಅಲೆ ಸಂಗೀತಾ
ನಿನ್ನ ಅಂದ ಗಂಧದಿಂದ ಭ್ರಮಿಸಿ ಬಂದ ಭ್ರಮರವೊಂದು ಮಧುವ ಅರಸುತಿದೆ
ಸುತ್ತ ಮುತ್ತ ಮುತ್ತಲು ನೀ ನಿನ್ನ ಸುತ್ತ ನಾನಿರುವೆ
ನನ್ನ ಪುಟ್ಟ ಆಸೆಗೆ ನೀ ಉಸಿರು ತುಂಬಿ ಬೆಳೆಸಿರುವೆ
ನೀನೇ ನನ್ನ ತನುಮನ ಮಿಡಿದವಳು ನೀನೇ ನನ್ನ ಅನುದಿನ ಸೆಳೆದವಳು
ಇಂದು ಮುಂದು ಎಂದು ಬಂದು ಹೃದಯ ತಂದವಳು
ನಿನ್ನ ಅಂದ ಗಂಧದಿಂದ ಭ್ರಮಿಸಿ ಬಂದ ಭ್ರಮರವೊಂದು ಮಧುವ ಅರಸುತಿದೆ
ಇವಳೇ ಅವಳು ಕನಸಲಿ ಬಂದವಳು ಅವಳೇ ಇವಳು ಮನದಲಿ ನಿಂದವಳು
ನನ್ನ ಪುಟ್ಟ ಆಸೆಗೆ ನೀ ಉಸಿರು ತುಂಬಿ ಬೆಳೆಸಿರುವೆ
ನೀನೇ ನನ್ನ ತನುಮನ ಮಿಡಿದವಳು ನೀನೇ ನನ್ನ ಅನುದಿನ ಸೆಳೆದವಳು
ಇಂದು ಮುಂದು ಎಂದು ಬಂದು ಹೃದಯ ತಂದವಳು
ಇವಳೇ ಅವಳು ಕನಸಲಿ ಬಂದವಳು ಅವಳೇ ಇವಳು ಮನದಲಿ ನಿಂದವಳು
ಚೆಲುವೇ ಅಂದ ಸೆಳೆದ ವೇಳೆ ನನ್ನ ಹೃದಯ ಪುಟದ ಮೇಲೆ ಕವಿತೆ ಬರೆದವಳು
ಇವಳೇ ಅವಳು ಕನಸಲಿ ಬಂದವಳು ಅವಳೇ ಇವಳು ಮನದಲಿ ನಿಂದವಳು
----------------------------------------------------------------------------------------------------------------------
ಸ್ಪರ್ಶ (೨೦೦೦) - ಬರೆಯದ ಮೌನದ ಕವಿತೆ ಹಾಡಾಯಿತು
ಸಂಗೀತ: ಹಂಸಲೇಖ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ್: ಪಂಕಜ ಉದಾಸ್, ಅರ್ಚನ, ಕವಿತಾ ಕೃಷ್ಣಮೂರ್ತಿ
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ
ಹೂವ ಕಂಪು ಪರರಿಗಾಗಿ ಸಫಲ ಜನ್ಮವು ಪರರ ಬಾಳು ಬೆಳಗಿದಾಗ
ಬಾಳು ಪೂರ್ಣವೂ ಕಾಲ ಬರೆದ ಹೊಸದ ಹಾಡು ಹಾಡಲಾರೆನು
ಮನದಿ ಪುಟದಿ ಬರೆದ ಗೀತೆ ಮರೆಯಲಾರೆನು
ಎಲ್ಲಿಯ ಬಂಧವೋ ಕಾಣೆ ಬೆಸೆಯಿತು ಜೀವಕೆ
ಜೀವ ಅರ್ಪಣೆ ಮಾಡುವೆ ನಿನಗೆ ನನ್ನೀ ಹೃದಯದ ಭಾವ
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಸುಮಧುರ ಅನುಭವ ನೂರು ನಾ ನೋಡಿದೆ ನಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ
ಯಾವ ಹೂವು ಯಾರ ಮುಡಿಗೋ ಅವನ ಆಟದಿ
ಚೈತ್ರ ಬಂದು ಹೋಯಿತನ್ನು ನನ್ನ ತೋಟದಿ
ತಂತಿ ಹರಿದ ವೀಣೆಯಲ್ಲಿ ಶ್ರುತಿಯ ಕಂಡೆನು
ನುಡಿಸುವವನು ಸ್ವರವ ಬೆರೆಸೆ ಸಾಟಿ ಕಾಣೆನು
ಬಾಳಲಿ ಪಡೆದುದು ಏನೋ ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ
ಹೃದಯದಿ ಪ್ರೇಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ

-------------------------------------------------------------------------------------------------
ಸಂಗೀತ: ಹಂಸಲೇಖ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಗಾಯನ್: ರಾಜೇಶ, ಅರ್ಚನಾ ಉಡುಪ
ಗಂಡು : ಪ್ರೇಮ... ಪ್ರೇಮ...
(ಮಾತು) ಪ್ರೇಮವೆಂದರೆ ಹೇಳಲು ಬಯಸಿ ಹೇಳಲು ಆಗದ ಮಧುರ ಭಾವನೆ
ಮಧುರ ಕಾಮನೆ ಮಧುರ ಯೋಚನೆ ಮಧುರ ಯಾತನೆ ಅರ್ಪಣೆ ಸಮರ್ಪಣೆ ಸೂಚನೆ.....
ಮನಗಳ ಸರಿಗಮ ಪ್ರೇಮ ಸುಮಗಳ ಘಮಘಮ ಪ್ರೇಮ
ಮಂಜಿನ ಚುಮು ಚುಮು ಪ್ರೇಮ ಶ್ರಾವಣ ರೀಮಝೀಮ ಪ್ರೇಮ
ಗಂಡು : (ಮಾತು)ಯುಗಯುಗಗಳು ಕಳೆದರು ಹಲವು ಜನುಮ ತಳೆದರು
ಓದಿ ಮುಗಿಸದ ಗ್ರಂಥ ಪ್ರೇಮ ಹಾಡಿ ಮುಗಿಸದ ಗೀತ ಪ್ರೇಮ
ಎಂದೂ ಮುಗಿಯದ ಪಯಣ ಒಂದುಗೂಡುವ ತಾಣ
ಪ್ರೇಮ ಪ್ರೇಮ ಪ್ರೇಮ....
ಮನಗಳ ಸರಿಗಮ ಪ್ರೇಮ ಸುಮಗಳ ಘಮಘಮ ಪ್ರೇಮ
ಮಂಜಿನ ಚುಮು ಚುಮು ಪ್ರೇಮ ಶ್ರಾವಣ ರೀಮಝೀಮ ಪ್ರೇಮ
ಗಂಡು : ಎಂಥಾ ಹಿತಕರ ಮಿಡಿತ ಯಾರು ತಡೆಯದ ತುಡಿತ
ಏನೋ ಹುಡುಕುವ ತವಕ ಏಕೋ ಮೈಮನ ಪುಳಕ
ಮಾತು : ಪ್ರೇಮವೂ ಅನುಭವಕ್ಕೆ ಮಾತ್ರ ನಿಲುಕುವ ಕೋಮಲ ಕಲ್ಪನೆ
ಸ್ಪರ್ಶಿಸಲಾಗುವುದಿಲ್ಲ ಆದರೆ ಮನಸು ಹೇಳುತಿದೆ
ಅದು ಇಲ್ಲೂ ಇದೆ ಅಲ್ಲೂ ಇದೆ ಎಲ್ಲೆಲ್ಲೂ ಇದೆ
ಹಾಡು : ಮನಗಳ ಮಂಥನ ಪ್ರೇಮ ಬಿಡಿಸದ ಬಂಧನ ಪ್ರೇಮ
ಹೆಣ್ಣು : ಓ... ಗೆಳೆಯ ಓಓಓ.... ಓಓಓಓ... ನಾನೇ ಪ್ರೇಮದ ರೂಪ ನಾನೇ
ಪ್ರೇಮದ ದೀಪ ಒಲಿದ ಜೋಡಿಯ ಜೊತೆಗೆ ಉಸಿರಲಿ ಉಸಿರಾಗಿರುವೆ
ಗಂಡು : (ಮಾತು) ಆಕಾಶ ಗಂಗೆಯಲ್ಲಿ ನಿಂತು ನಕ್ಷತ್ರ ಒಂದು
ನನಗಾಗಿ ಇಂದು ಇಳೆಗೆ ಬಂದು ಕಾಯುತಿಹುದೆ ಸೆಳೆಯುತಿದೆ
ಎಳೆಯುತಿಹುದೆ ತನ್ನ ಬಳಿ
ಹಾಡು : ಮನಗಳ ಸರಿಗಮ ಪ್ರೇಮ ಸುಮಗಳ ಘಮಘಮ ಪ್ರೇಮ
ಮಂಜಿನ ಚುಮು ಚುಮು ಪ್ರೇಮ ಶ್ರಾವಣ ರೀಮಝೀಮ ಪ್ರೇಮ
------------------------------------------------------------------------------------------------
ಸ್ಪರ್ಶ (೨೦೦೦) - ಓಹೋ ಚೆನ್ನೇ ಚೆನ್ನೇ
ಸಂಗೀತ: ಹಂಸಲೇಖ ಸಾಹಿತ್ಯ: ಹಂಸಲೇಖ ಗಾಯನ್: ಹರಿಹರಣ, ಚಿತ್ರಾ
ಗಂಡು : ಓಹೋಹೋ... ಚೆನ್ನೆ ಚೆನ್ನೆ ಓಹೋಹೋ ಚೆಲುವೆ ಚೆಲುವೆ
ನೀನು ಬಂದು ನಿಂತಾಗ ಚಿಮ್ಮಿ ಬಂತು ಸಂಗೀತ
ನಿಂತು ನೀನು ನಕ್ಕಾಗ ನಿಂತಲ್ಲೆಲ್ಲ ತಕಧಿಮಿತಾತೋ ಓಹೋಹೋ..
ಹೆಣ್ಣು : ನಿನ್ನ ಹಾಡಿಗಾಗಿ ಓಡಿ ಬಂದು ನಿಂತೇ ನಾ
ಓಹೋಹೋ... ಚೆನ್ನಾ ಚೆನ್ನಾ ಓಹೋಹೋ ಚೆಲುವಾ ಚೆಲುವಾ
ಅಂದು ನಿನ್ನ ಕಂಡಾಗ ಬಂತು ಒಂದು ಅನುರಾಗ
ಇಂದು ಎದುರು ಬಂದಾಗ ತಂತು ರಾಗ ಅನುರಾಗ... ಓಓಓ... ಓಓಓಓ
ಗಂಡು : ಇನ್ನು ತಾರೆ ಬಾರೆ ತಾರೆ ತಾರೆ ಪ್ರೇಮಧಾರೆಯಾ ಓಹೋಹೋ
ಓಹೋಹೋ... ಚೆನ್ನೆ ಚೆನ್ನೆ ಓಹೋಹೋ ಚೆಲುವೆ ಚೆಲುವೆ
ಗಂಡು : ಬಾನಿನ ಆಚೆ ಇರುವುದು ಒಂದು ಲೋಕ ಪ್ರೀತಿ ಒಂದೇ ಅಲ್ಲಿ ನಮಗಲ್ಲಿ
ಯುಗಯುಗಗಳ ತನಕ
ಹೆಣ್ಣು : ಪ್ರೇಮಕೆ ಪ್ರೇಮ ಅರಳುವ ತಾಣದಲ್ಲಿ ಮಳೆಯ ಬಿಲ್ಲ ಮನೆಯ ಮಾಡಿರಲು ಹಾರೋಣ ಅಲ್ಲಿ
ಗಂಡು : ಓಓಓ... ಓಓಓಓ ಹೆಣ್ಣು : ಓಓಓ... ಓಓಓಓ
ಗಂಡು : ಬಾರೆ ಬಾರೆ ತೇರನೇರಿ ಲೋಕದಾಚೆ ಸಾಗೋಣ
ಓಹೋಹೋ... ಚೆನ್ನೆ ಚೆನ್ನೆ ಓಹೋಹೋ ಚೆಲುವೆ ಚೆಲುವೆ
ಹೆಣ್ಣು : ಕನಸಲು ಕೂಡ ಕಾಯುವೆ ಇನ್ನೂ
ಪ್ರೀತಿ ಕನಸಿನಲ್ಲೂ ಕೂಡ ನಿನ್ನ ಪ್ರೀತಿ ಕನಸಾಗದೆ ಇರಲಿ
ಗಂಡು : ನೀನಿರದೇನೆ ನಾನಿರಲಾರೆ ಎಂದೆ ಜನುಮ ಜನುಮದಲ್ಲೂ
ಜೊತೆಗಿರಲು ಈ ಜನುಮವ ಪಡೆದೆ
ಹೆಣ್ಣು : ಓಓಓ... ಓಓಓಓ ಗಂಡು : ಓಓಓ... ಓಓಓಓ
ಹೆಣ್ಣು : ನಮ್ಮ ಜೀವ ಜೀವ ಒಂದೇ ಜೀವ ನೂರು ಜನ್ಮಕೂ
ಗಂಡು : ಓಹೋಹೋ... ಚೆನ್ನೆ ಚೆನ್ನೆ
ಹೆಣ್ಣು : ಓಹೋಹೋ ಚೆಲುವಾ ಚೆಲುವಾ
ನೀನು ಬಂದು ನಿಂತಾಗ ಚಿಮ್ಮಿ ಬಂತು ಸಂಗೀತ
ನಿಂತು ನೀನು ನಕ್ಕಾಗ ನಿಂತಲ್ಲೆಲ್ಲ ತಕಧಿಮಿತಾತೋ ಓಹೋಹೋ..
------------------------------------------------------------------------------------------------
ಸ್ಪರ್ಶ (೨೦೦೦) - ಸಂಗಾತಿ ಹೀಗೇಕೆ ನೀ ದೂರ ಓಡುವೇ
ಸಂಗೀತ: ಹಂಸಲೇಖ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ್: ರಾಜೇಶ, ಚಿತ್ರಾ
ಗಂಡು : ಸಂಗಾತಿ... ಹೀಗೇಕೆ ನೀ ದೂರ ಹೋಗುವೇ
ಸಂಗಾತಿ ನೀ ದೇಹ ನಾ ಛಾಯೇ ಅಲ್ಲವೇ
ಸಂಗಾತಿಯೇ ಸಹಚಾರಿಯೇ ಸಂಗೀತದ ಸ್ವರಮಾಲೆಯೇ
ಹೀಗೇಕೆ ನೀ ಹೋಗುವೆ ಸಂಗಾತಿ ನೀ ದೇಹ ನಾ ಛಾಯೆ ಅಲ್ಲವೇ
ಓಓಓಓ... ಬಾನಿಂದ ದೂರಾಯ್ತೆ ಚಂದ್ರಮ ಹುಸಿಯಾಯ್ತೆ ಈ ಪ್ರೇಮ ಸಂಗಮ
ಸಂಗಾತಿ... ಹೀಗೇಕೆ ನೀ ದೂರ ಹೋಗುವೇ
ಗಂಡು : (ಮಾತು) ಹೇಗೆ ಹೇಳಲಿ ಗಲಾಟಿ ನನ್ನ ಮನಸಿನ ಕದನ
ನಾ ಹೇಳಿದರು ನೀ ಕೇಳಿದರು ಇದೊಂದು ಪೂರ್ಣವಾಗದ ಕವನ
ಹೆಣ್ಣು : (ಹಾಡು) ಕಂಗಳು ನಾ ನೋಟವು ನೀ ನೀನಿರದೇ ಗೆಳೆಯ ಅಂಧಳು ನಾನು
ನೀರಿರದೆ ಮೀನಿರದು ನೇಸರನು ಇರದೇ ಹಸಿರುಂಟೆ ಇಳೆಗೆ ಹೇಳು...
ಓಹೋಹೋ...ಏನೊಂದು ಬಿರುಗಾಳಿ ಬೀಸಲಿ ಈ ಜೋಡಿ ಎಂದೆಂದೂ ಸೇರಲಿ
ಸಂಗಾತಿ ಈ ನಮ್ಮ ಒಲವೆಂದು ಬಾಳಲಿ
ಸಂಗಾತಿಯೇ ಸಹಚಾರಿಯೇ ಸಂಗೀತ ಸ್ವರಮಾಲೆಯೇ ಹೀಗೇಕೇ ನೀ ದೂರ ಹೋಗುವೇ
ಗಂಡು : (ಮಾತು) ರೈಲಿನ ಹಳಿಗಳಂತೆ ನಾವು ಜೊತೆಯಾಗಿ ಸಾಗಬಹುದು
ಆದರೆ ಅವುಗಳಂತೆ ಕೊನೆಯವರೆಗೂ ಸೇರಲಾರೆವು
ಹೆಣ್ಣು : (ಹಾಡು) ಜೀವನದ ಸಾಗರದೆ ಪ್ರೇಮದ ದೋಣಿಗಳು ಸೇರಲಾರವೇಕೆ
ನೋವುಗಳ ಹಂಚಿಕೋ ಬಾ ಜೊತೆಯಾಗಿ ಕಹಿಯಾ ಸವಿಯುವ ಬಾರಾ
ಓಹೋಹೋ ಈ ಮನದ ಕರೆ ಇಂದು ಕೇಳದೆ ಈ ತೋಳ ವರಮಾಲೆ ನಿನಗೆ
ಸಂಗಾತಿ ನೀನಾಗು ಮಣಿದೀಪ ಬಾಳಿಗೆ
ಸಂಗಾತಿಯೇ ಸಹಚಾರಿಯೇ ಸಂಗೀತ ಸ್ವರಮಾಲೆಯೇ ಹೀಗೇಕೇ ನೀ ದೂರ ಹೋಗುವೇ
------------------------------------------------------------------------------------------------
ಸ್ಪರ್ಶ (೨೦೦೦) - ಕನಸಲಿ ಕಾಡುವ ಹುಡುಗಿ
ಸಂಗೀತ: ಹಂಸಲೇಖ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ್: ಸೋನು ನಿಗಮ್, ಕವಿತಾಕೃಷ್ಣಮೂರ್ತಿ
ಗಂಡು : ಹೇ... ಕನಸಲಿ ಕಾಡುವ ಹುಡುಗಿ ಬಾರೇ ..
ಹೆಣ್ಣು : ಹೇ... ಹೃದಯವ ಕದಿಯುವ ಹುಡುಗ ಬಾರೋ
ಗಂಡು : ನಾನು ನೀನು ನೀನು ನಾನು ಮೋಡಿ ಮಾಡಿದವರ್ಯಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ ಮೊದಲು ಮಾಡಿದವರ್ಯಾರೋ
ಹೆಣ್ಣು : ಕಾಡಿ ಬೇಡಿ ನೋಡಿ ಮಾಡಿ ಬೆನ್ನ ಬಿದ್ದೋರು ಯಾರೋ
ಎದ್ದು ಬಿದ್ದು ಬಿದ್ದು ಎದ್ದು ಪ್ರೀತಿ ತಂದೋರು ಯಾರೋ
ಗಂಡು : ಹೇ... ಕನಸಲಿ ಕಾಡುವ ಹುಡುಗಿ ಬಾರೇ ..
ಹೆಣ್ಣು : ಹೇ... ಹೃದಯವ ಕದಿಯುವ ಹುಡುಗ ಬಾರೋ
ಹೆಣ್ಣು : ಕಂಡ ಕಂಡ ಹೆಣ್ಣ ನೋಡಿ ಅಂದ ಚೆಂದ ಹೋಗಳಿ ಹಾಡಿ
ಅಲ್ಲಿ ಇಲ್ಲಿ ಅಲೆಯೋ ತುಡುಗ ಹುಡುಗ ನನ್ನ ಗೆಲ್ಲಲಾರೆ
ಗಂಡು : ನಿನ್ನ ಕಂಡ ನನ್ನ ಕಣ್ಣು ನೋಡದೆಂದು ಬೇರೆ ಹೆಣ್ಣು
ನನ್ನ ಎದೆಯ ತುಡಿತ ಮಿಡಿತ ಅಂದು ಇಂದು ಎಂದೂ ನೀನೇ
ಹೆಣ್ಣು : ನೀನು ಬಹಳ ಮೋಸಗಾರ ನಂಬಲಾರೆ ನಾನು ಪೂರಾ
ಗಂಡು : ಎದೆಯ ಬಗಿದು ತೋರಲೇನು ಅಲ್ಲಿ ನಿನ್ನೇ ನೋಡು ನೀನು
ಹೆಣ್ಣು : ನಂಗೆಲ್ಲ ಗೊತ್ತೇಳೋ ನಿಜವಾದ ಪ್ರೀತಿ ತೋರೋ
ಗಂಡು : ಹೇ... ಕನಸಲಿ ಕಾಡುವ ಹುಡುಗಿ ಬಾರೇ ..
ಹೆಣ್ಣು : ಹೇ... ಹೃದಯವ ಕದಿಯುವ ಹುಡುಗ ಬಾರೋ
ಗಂಡು : ಬಾನ ಚುಕ್ಕಿ ತಂದು ಕೊಡಲೇ ಮಳೆಯಬಿಲ್ಲ ಹಿಡಿದು ತರಲೆ
ನಿನ್ನ ಪ್ರೀತಿ ಇರದ ಬಾಳೆ ಎಂದೂ ನನಗೆ ಬೇಡ ಕೇಳೇ
ಹೆಣ್ಣು : ಬರಿಯ ಬುರುಡೆ ಹೊಡೆಯಬೇಡ ಪ್ರೀತಿ ಹಗುರ ಮಾಡಬೇಡ
ನೂರು ಸುಳ್ಳು ಹೇಳಿ ನನ್ನ ನೀನು ಮರಳು ಮಾಡಬೇಡ
ಗಂಡು : ಒಂದು ಕೈಯ್ಯ ನೋಡಿಬಿಡುವೇ ನನ್ನ ಬಿಟ್ಟು ಯಾರಿಗೋಲಿವೆ
ಹೆಣ್ಣು : ನಿನ್ನ ಪ್ರೀತಿ ಯಾರಿಗೆಂದು ನೀನು ಕಾದು ನೋಡು ಮುಂದೆ
ಗಂಡು : ನಾ ನಿನ್ನ ಹಾರಿಸುವೆ ಹೂವ ಮೂಡಿಸಿ ಕೈಯ್ಯ ಹಿಡಿವೆ
ಹೆಣ್ಣು : ಹೇಹೇಹೇ ... ಹೃದಯವ ಕದಿಯುವ ಹುಡುಗ ಹೋಗೋ
ಕಾಡಿ ಬೇಡಿ ನೋಡಿ ಮಾಡಿ ಬೆನ್ನ ಬಿದ್ದೋರು ಯಾರೋ
ಎದ್ದು ಬಿದ್ದು ಬಿದ್ದು ಎದ್ದು ಪ್ರೀತಿ ತಂದೋರು ಯಾರೋ
ಗಂಡು : ಹೇ... ಕನಸಲಿ ಕಾಡುವ ಹುಡುಗಿ ಬಾರೇ ..
ಹೆಣ್ಣು : ಹೇ... ಹೃದಯವ ಕದಿಯುವ ಹುಡುಗ ಬಾರೋ
-----------------------------------------------------------------------------------------------
ಸ್ಪರ್ಶ (೨೦೦೦) - ಪಡುವಣ ದಿಕ್ಕಿನಾಗೇ
ಸಂಗೀತ: ಹಂಸಲೇಖ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ್: ಸಿ.ಅಶ್ವಥ, ಬಿ.ಜಯಶ್ರೀ
ಹೆಣ್ಣು : ಓ... ಲೇಲೆಲೆಲೆಲೆಲೆಲೆಸೋ ಗಂಡು : ಲೇಲೆಲೆಲೆಲೆಲೆಲೆಸೋ
ಹೆಣ್ಣು : ಪಡುವಣ ದಿಕ್ಕಿನಾಗೆ ರಂಗೇರಿದಾಗ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ತಾರೆಂಬ ಕತ್ತಲಾಗೆ ಝೀಲ್ ಝೀಂಬೆ ಹಾರ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ಕಾಯದ ಬಲ್ಲೆ ಬಲ್ಲೆ ಅಪ್ಪುಕೊಂಡು ಕೂಡಿ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ಮನಸು ಮನಸು ಲೇಲೇಸೋ ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಎದೆಗೆ ಎದೆಯು ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಹೊತ್ತು ಗೊತ್ತು ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಜೀವ ಜೀವ ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಮೆರೆಯೋ ಒಲಿಯೋ ಲೇಲೇಸೋ ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಪಡುವಣ ದಿಕ್ಕಿನಾಗೆ ರಂಗೇರಿದಾಗ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಗಂಡು : ತಾರೆಂಬ ಕತ್ತಲಾಗಿ ಝೀಲ್ ಝೀಂಬೆ ಹಾರಿ ಮನಸು ಮನಸು...
ತಾರೆಂಬ ಕತ್ತಲಾಗಿ ಝೀಲ್ ಝೀಂಬೆ ಹಾರಿ ಮನಸು ಮನಸು...
ಹೆಣ್ಣು : ಗಲ್ಲ ಬೆಲ್ಲ ರುಚಿಯಾದೋ ಮುತ್ತೇ ಸಿಹಿಯಾ ತುತ್ತಾದೋ
ಗಂಡು : ನೀತಿ ನೇಮ ಎತ್ತಹೋದವೋ ಪ್ರೀತಿ ಪ್ರೇಮ ಮುತ್ತಾದೋ
ಹೆಣ್ಣು : ಗೋಳಾಡೈತೋ ಪ್ರಾಯ ಗೋಳಾಡೈತೋ ಕುಣಿದಾಡೈತೋ ಪ್ರೇಮ ಕುಣಿದಾಡೈತೋ
ಗಂಡು : ಕದ್ದು ಮುಚ್ಚಿ ಖುಷಿಯಾದೋ ಮತ್ತೆ ಮತ್ತೆ ಬೇರೆತೋದೋ
ಮೋಹ ದಾಹ ಅತಿಯಾರೋ ಅಂಗಸಂಗ ಸವಿಯಾದೋ
ಹರೆಯ ಸುರೆಯ ಊಣಿಸ್ಯಾರೋ
ಹೆಣ್ಣು : ಪಡುವಣ ದಿಕ್ಕಿನಾಗೆ ರಂಗೇರಿದಾಗ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ಜೋಡಿಹಕ್ಕಿ ಕೂಡಿಕೊಂಡು ಮತ್ತೆ ಮತ್ತೆ ಹಾಡಿಕೊಂಡು ಉಬ್ಬಿ ತಬ್ಬಿ ತಬ್ಬಿ ಉಬ್ಬಿ ಇಳದ್ಯಾವೋ
ಓ... ಮುತ್ತು ಹೀರಿಕೊಂಡು ಹೊತ್ತು ಮಿರಿಕೊಂಡು ಕಾಲ ಕಳೆದು ಹಿಗ್ಗಾ ಮುಗ್ಗ ಹಿಗ್ಗಿ ಹಿಗ್ಗಿ ಪ್ರೀತಿ ಚೆಂದವೋ
ನೂರು ಕನಸು ಚಿಗುರಿಕೊಂಡು ಸಾವಿರಾಸೆ ಅಮರಿಕೊಂಡು ಕೋಟಿ ಭಾವ ತುಂಬಿ ತೊನೆದಾವೋ
ನೂರು ಕನಸು ಚಿಗುರಿಕೊಂಡು ಸಾವಿರಾಸೆ ಅಮರಿಕೊಂಡು ಕೋಟಿ ಭಾವ ತುಂಬಿ ತೊನೆದಾವೋ
ಗಂಡು : ತುಟಿಗೆ ತುಟಿಯ ಬೆರೆತೋದೋ ಕೋರಸ್: ಹಾಯ್ ... ಹಾಯ್ ... ಹಾಯ್ ... ಹಾಯ್ ...
ಹೆಣ್ಣು : ತೊಳು ತೆಕ್ಕೆ ಬಿಗಿಯಾದೋ ಕೋರಸ್: ಹಾಯ್ ... ಹಾಯ್ ... ಹಾಯ್ ... ಹಾಯ್ ...
ಗಂಡು : ತೇಲಾಡೈತೋ ಲೋಕ ತೇಲಾಡೈತೋ ಸಿಹಿಯಾಗೈತೋ ಸಂಗ ಸಿಹಿಯಾಗೈತೋ
ಹೆಣ್ಣು : ಅಚ್ಚು ಮೆಚ್ಚು ಹೆಚ್ಚಾದೋ ಪ್ರೀತಿ ಪ್ರೇಮ ಹುಚ್ಚಾದೋ
ಗಂಡು ಹೆಣ್ಣು ರಂಗಾದೋ ರಾಗರತಿಯ ಗುಂಗಾರೋ ಹರೆಯ ಸುರೆಯ ಉಣಿಸ್ಯಾದೋ
ಹೆಣ್ಣು : ಪಡುವಣ ದಿಕ್ಕಿನಾಗೆ ರಂಗೇರಿದಾಗ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ತಾರೆಂಬ ಕತ್ತಲಾಗೆ ಝೀಲ್ ಝೀಂಬೆ ಹಾರ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ಕಾಯದ ಬಲ್ಲೆ ಬಲ್ಲೆ ಅಪ್ಪುಕೊಂಡು ಕೂಡಿ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
ಹೆಣ್ಣು : ಮನಸು ಮನಸು ಲೇಲೇಸೋ ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಎದೆಗೆ ಎದೆಯು ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಹೊತ್ತು ಗೊತ್ತು ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಜೀವ ಜೀವ ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಮೆರೆಯೋ ಒಲಿಯೋ ಲೇಲೇಸೋ ಕೋರಸ್ : ಲೇಲೇಸೋ ಲೇಲೇಸೋ
ಹೆಣ್ಣು : ಪಡುವಣ ದಿಕ್ಕಿನಾಗೆ ರಂಗೇರಿದಾಗ ಕೋರಸ್ : ಲೆಲೆಲೆ ಐಸೋ ಲೆಲೆಲೆ ಐಸೋ
-----------------------------------------------------------------------------------------------
No comments:
Post a Comment