1032. ತುಳಸಿ (1976)


ತುಳಸಿ ಚಿತ್ರದ ಹಾಡುಗಳು 
  1. ಶ್ರೀ ತುಳಸಿ ದಯೆತೋರಮ್ಮಾ 
  2. ಕಾಮಾಟಗೇರಿ ನೆಂಟ ಶ್ರೀ ರಾಮ ಚಂದ್ರನ 
  3. ಮಾಮರ ಧರಿಸಿದೆ ಹಸಿರಿನ ತಳಿರು 
  4. ದುರುದುರು ದುರುದುರು 
  5. ಪಾಪ ಪಾಪ ನಿದಿರೆ ಬಂತೇ 
  6. ಕವಳ ಕೊಡಿ ತಾಯಿ 
ತುಳಸಿ (೧೯೭೬) - ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ 
ಸಂಗೀತ : ವಿಜಯ ಭಾಸ್ಕರ,  ಸಾಹಿತ್ಯ: ರವಿ (ಕೆ.ಎಸ್.ಎಲ್.ಸ್ವಾಮಿ) ಗಾಯನ : ಕಸ್ತೂರಿ ಶಂಕರ 

ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ 
ಶ್ರೀ ತುಳಸಿ ದಯೆ ತೋರಮ್ಮಾ
ಅರಿಶಿನ ಕುಂಕುಮ ಸೌಭಾಗ್ಯ ನೀಡಿ 
ಅರಿಶಿನ ಕುಂಕುಮ ಸೌಭಾಗ್ಯ ನೀಡಿ
ಚಿರಕಾಲ ಕಾಪಾಡಮ್ಮಾ ಅಮ್ಮಾ 
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ 
ಶ್ರೀ ತುಳಸಿ ದಯೆ ತೋರಮ್ಮಾ

ಜನಿಸಿದ ಮನೆಯ ಶಾಂತಿಯ ಉಳಿಸಿ...ಆಆಆ  
ಜನಿಸಿದ ಮನೆಯ ಶಾಂತಿಯ ಉಳಿಸಿ
ವರಿಸಿದ ಮನೆಯ ಮನೆತನ ಬೆಳೆಸಿ 
ವರಿಸಿದ ಮನೆಯ ಮನೆತನ ಬೆಳೆಸಿ
ತುಂಬಿದ ಸಂಸಾರ ಸಂತಸ ನೆಲಸಿ 
ಎಂದೆಂದೂ ಇರಲು ಹರಸಮ್ಮ ತುಳಸಿ 
ಎಂದೆಂದೂ ಇರಲು ಹರಸಮ್ಮ ತುಳಸಿ
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ 
ಶ್ರೀ ತುಳಸಿ ದಯೆ ತೋರಮ್ಮಾ

ಮುಂದಿನ ಬಾಳಿನ ದಾರಿಯ ತೋರಿಸಿ...ಆಆಆ  
ಮುಂದಿನ ಬಾಳಿನ ದಾರಿಯ ತೋರಿಸಿ
ಮಕ್ಕಳ ಅರಿವಿನಾ ದೀಪವ  ಬೆಳಗಿಸಿ 
ಮಕ್ಕಳ ಅರಿವಿನಾ ದೀಪವ ಬೆಳಗಿಸಿ 
ಒಳ್ಳೆಯ ತಂದೆ ತಾಯಿ ಎನಿಸಿ 
ಎಂದೆಂದೂ ಇರಲು ಹರಸಮ್ಮಾ ತುಳಸಿ 
ಎಂದೆಂದೂ ಇರಲು ಹರಸಮ್ಮಾ ತುಳಸಿ
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ 
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ 
ಶ್ರೀ ತುಳಸಿ ದಯೆ ತೋರಮ್ಮಾ
------------------------------------------------------------------------------------------------------------------------

ತುಳಸಿ (೧೯೭೬) - ಕಾಮಾಟಗೇರಿ ನೆಂಟ ಶ್ರೀರಾಮಚಂದ್ರನ ಭಂಟ ಹೊರಟನು ಎತ್ತಿನ ಗಾಡೀಲಿ  
ಸಂಗೀತ : ವಿಜಯ ಭಾಸ್ಕರ,  ಸಾಹಿತ್ಯ: ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ವಾಣಿಜಯರಾಂ 

ಹೆಣ್ಣು : ಕಾಮಾಟಗೇರಿ ನೆಂಟ ಶ್ರೀರಾಮಚಂದ್ರನ ಭಂಟ ಹೊರಟನು ಎತ್ತಿನ ಗಾಡೀಲಿ  
          ಅವರಜ್ಜನ ಕಾಲದ ಠೀವಿಲಿ... ಅವರಜ್ಜನ ಕಾಲದ ಠೀವಿಲಿ... 
ಹೆಣ್ಣು : ಏ... ಹಾ.. ಇರಲಿ ಇರಲಿ ನೋಡ್ಕೊತಿ ಒಂದು ಕೈ          
ಗಂಡು : ಬೇಲೂರಿನ ಬೋಂಬೆ ಕೋಲಾರದ ರಂಭೆ ಹೊರಟವಳೇ ಮೋಟಾರ ಕಾರಿನಲಿ 
            ಅವಳಜ್ಜನ ಕಾಲದ ಕಾರಲ್ಲಿ ... ಅವಳಜ್ಜನ ಕಾಲದ ಜೋರಲ್ಲಿ             

ಹೆಣ್ಣು : ಚಂದ್ರ ಲೋಕಕೆ ಹಾರೋ ಕಾಲದಿ ಕುಂಟೋ ಗಾಡಿ ಯಾಕಮ್ಮಾ 
          ರಾಕೆಟ್ ಯುಗದ ಜನಗಳ ನಡುವೆ ಓಬೀ ರಾಯನ ನೋಡಮ್ಮ  
          ಓಬೀ ರಾಯನ ನೋಡಮ್ಮ
ಗಂಡು : ಚಂದ್ರಲೋಕಕೆ ಹೋದರೆ ಏನು ಭೂಮಿಗೆ ಬರಲೇ ಬೇಕಮ್ಮ 
           ಹಸಿವ ನೀಗಲು ಚಿನ್ನವ ತಿನ್ನುವ ಕಾಲವು ಬರದು ಕೇಳಮ್ಮಾ 
           ಕಾಲವು ಬರದು ಕೇಳಮ್ಮಾ 

ಗಂಡು : ಹರೆಯದ ಈ ಹುಡುಗಾಟದ ಹುಡುಗಿಗೆ ಅವಸರ ಇನ್ನು ಹೋಗಿಲ್ಲ 
            ಹಳ್ಳಿಯ ಹಾದಿಯ ಪರಿಚಯವಿಲ್ಲ ಜಂಭದ ಕೋಳಿಗೆ ತಲೆಯಿಲ್ಲ 
ಹೆಣ್ಣು : ಹಳ್ಳಿಯ ಕೋಣ ಮಾತಲಿ ಬಾಣ ಅದಕೆ ಯಾರಿಗೂ ಜಗ್ಗಲ್ಲ 
          ಹೆದರಿಸಿ ಇವನ ಆಳುವ ಹೆಣ್ಣೂ ಇನ್ನೂ ಒಲಿದು ಬಂದಿಲ್ಲ...  
          ಇನ್ನೂ ಒಲಿದು ಬಂದಿಲ್ಲ...  
ಗಂಡು : ಬೇಲೂರಿನ ಬೋಂಬೆ ಕೋಲಾರದ ರಂಭೆ ಹೊರಟವಳೇ ಮೋಟಾರ ಕಾರಿನಲಿ 
            ಅವಳಜ್ಜನ ಕಾಲದ ಕಾರಲ್ಲಿ ... ಅವಳಜ್ಜನ ಕಾಲದ ಜೋರಲ್ಲಿ             

ಹೆಣ್ಣು : ಮಹಿಳೆಯು ಮೊದಲು ಎನ್ನುವ ಕಾಲ ಬಂದಿದೆ ಎಂದು ಹೇಳಮ್ಮ 
          ಹಾದಿಯ ಬಿಡದೇ ಈ ಹಠವೇಕೆ ಆ ಸೋಮಾರಿಯ ಕೇಳಮ್ಮಾ 
ಗಂಡು: ಮಹಿಳೆಗೆ ಎಂದೂ ಗೌರವವುಂಟು ಭಾರತ ನಾಡಲಿ ತಿಳಿಯಮ್ಮ
         ತಾಳಿ ಕಟ್ಟುವ ಗಂಡೇ ಎಂದೂ ಹೆಣ್ಣಿಗೆ ಬೇಲಿ ಅರಿಯಮ್ಮ  
         ಹೆಣ್ಣಿಗೆ ಬೇಲಿ ಅರಿಯಮ್ಮ ...
-------------------------------------------------------------------------------------------------------------------------

ತುಳಸಿ (೧೯೭೬) - ಮಾಮರ ಧರಿಸಿದೆ ಹಸಿರಿನ ತಳಿರು ಪ್ರೇಮದ ಕಾಣಿಕೆ ಅನುಸರಿಸಿ
ಸಂಗೀತ : ವಿಜಯ ಭಾಸ್ಕರ,  ಸಾಹಿತ್ಯ: ಆರ್.ಏನ್.ಜಯಗೋಪಾಲ್  ಗಾಯನ : ಎಸ್.ಪಿ.ಬಿ. ವಾಣಿಜಯರಾಂ 

ಹೆಣ್ಣು : ಮಾಮರ ಧರಿಸಿದೆ ಹಸಿರಿನ ತಳಿರು ಪ್ರೇಮದ ಕಾಣಿಕೆ ಅನುಸರಿಸಿ
ಗಂಡು :ಮಾಮರ ಧರಿಸಿದೆ ಹಸಿರಿನ ತಳಿರು ಚೈತ್ರದ ಅಣತಿ ಅನುಸರಿಸಿ

ಹೆಣ್ಣು :ಬಾನದು ಬಾಗಿದೆ ಭೂಮಿಯ ಚುಂಬಿಸಿ ನಾಚಿಕೆ ರಂಗು ಒಡಲಿನಲಿ
ಗಂಡು : ಭೂಮಿಗೂ ಬಾನಿಗೂ ದೂರದ ಮಿಲನ ಸಂಜೆಯು ಹಾಕಿದೆ ರಂಗೋಲಿ
ಹೆಣ್ಣು : ತೇಲಿನೆ ತಾವರೆ ನೀರಿನ ಅಲೆಯಲಿ ಸೂರ್ಯನ ಒಲವನು ಬಯಸುತಲಿ

ಗಂಡು : ಸಂಸಾರ ಸೋಂಕದ ಸನ್ಯಾಸಿ ತಾವರೆ ನಿಂತಿದೆ ದೇವನ ಜಪಿಸುತಲಿ
ಹೆಣ್ಣು : ಮೋಡವು ಸಾಗಿದೆ ಗಿರಿಗಳ ಬಳಿಗೆ ಅಪ್ಪುಗೆ ಸುಖವನು ತಾ ಬಯಸಿ
ಗಂಡು : ಮುಗಿಲಿನ ಸಂತಸ ಬಂದರೆಗಳಿಗೆ ಮರುಗಿದೆ ಕಂಬನಿ ಮಳೆ ಸುರಿಸಿ
-------------------------------------------------------------------------------------------------------------------------

ತುಳಸಿ (೧೯೭೬) - ದುರುದುರು ದುರುದುರು ದುರುದುರು ನೋಡದೇ
ಸಂಗೀತ : ವಿಜಯ ಭಾಸ್ಕರ,  ಸಾಹಿತ್ಯ: ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. ಎಲ್.ಆರ್.ಅಂಜಲಿ 

ಗಂಡು: ದುರುದುರು ದುರುದುರು ದುರುದುರು ನೋಡದೇ
           ಗುರುಗುರು ಗುರುಗುರು ಗುರುಗುರು ಗುಟ್ಟದೆ
           ನಿಲ್ಲೇ... ಕಾವೇರಿ ನಿನ್ನೇ ಹುಡುಕುತ ಓಡುತ ಬಂದೆ
           ಪ್ರೇಮದ ಬಾಯಾರಿ
ಹೆಣ್ಣು : ಅಮ್ಮನ ಕಂಡರೆ ಕೊಡುವೆ ತೊಂದರೆ ಸುಮ್ಮನೆ ನೀ
          ಹೆದರಿ    ಗಂಡನೋ ನೀ ಜಗಮೊಂಡನೋ ಕಾಣೆ ಬೇಗನೇ ದೂರ ಸರಿ

ಗಂಡು : ಅಮ್ಮನೋ ಗುಮ್ಮನೋ ಮಾರಮ್ಮನೋ ಹೆಸರನು ಹೇಳದಿರಲು
           ಘಮ್ಮನೆ ಮಲ್ಲಿಗೆ ಹೂವನು ಮೂಡಿಸುವೆ ನನ್ನವಳಾಗಿರು
ಹೆಣ್ಣು : ಮುಟ್ಟದಿರೆನ್ನ ಕೆಟ್ಟವಳಾಗಿ ಕಿಟ್ಟನೆ ಕಿರುಚುವೆನು
          ಫಟ್ಟನೆ ಕೆನ್ನೆಗೆ ರಾಚುವೆನು
          ಕೋತಿಯ ಮೂತಿಗೆ ಪ್ರೀತಿಯು ಏತಕೆ ಆಸೆಯ ತೋರದಿರು
          ಒಡವೆಯ ತಾರದೆ ಉಡುಗರೆ ನೀಡದೆ ನನ್ನ ಕಾಡದಿರು
ಗಂಡು : ಕತ್ತಲು ನಮ್ಮ ಮುತ್ತುವ ಮುಂಚೆ ಹತ್ತಿರ ಬಾ ನೀನು
            ಮುತ್ತಿನ ಹಾರ ಹಾಕುವೇನು
 ಹೆಣ್ಣು : ಅಮ್ಮನ ಕಂಡರೇ ಕೊಡುವೆ ತೊಂದರೆ
           ಸುಮ್ಮನೆ ನೀ ಹೆದರಿ ಇಲ್ಲೇ ನಿಲ್ಲೆ ಕಾವೇರಿ

ಗಂಡು : ಚಿನ್ನಾ ರನ್ನಾ ಮುತ್ತು ಹವಳ ನೀನೇ ಬಂಗಾರಿ
           ನನ್ನ ಚೆಂದದ ಗಂಧದ ಗೊಂಬೆಗೆ ಒಡವೆ ಏತಕೆ ಸಿಂಗಾರಿ
ಹೆಣ್ಣು : ಮಾತಲಿ ನೀನು ಸಕ್ಕರೆ ಬೆಲ್ಲ ಬಲ್ಲೆ ನಾನೆಲ್ಲ ಗಂಡಿನ ರೋಷ ನಿನಗಿಲ್ಲ
ಗಂಡು: ದುರುದುರು ದುರುದುರು ದುರುದುರು ನೋಡದೇ
           ಗುರುಗುರು ಗುರುಗುರು ಗುರುಗುರು ಗುಟ್ಟದೆ
           ನಿಲ್ಲೇ... ಕಾವೇರಿ ನಿಲ್ಲೇ... ಕಾವೇರಿ ನಿಲ್ಲೇ... ಕಾವೇರಿ
-------------------------------------------------------------------------------------------------------------------------

ತುಳಸಿ (೧೯೭೬) - ಪಾಪ ಪಾಪ ನಿದಿರೆ ಬಂತೆ ನಿನ್ನ ಕಂಗಳಿಗೆ
ಸಂಗೀತ : ವಿಜಯ ಭಾಸ್ಕರ,  ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಕಸ್ತೂರಿ ಶಂಕರ 

ಪಾಪ ಪಾಪ ನಿದಿರೆ ಬಂತೆ ನಿನ್ನ ಕಂಗಳಿಗೆ
ಭೂಮಿಯ ಹಾಸಿಗೆ ಗಗನವೇ ಹೊದಿಕೆ
ತೋಳೇ ತಲೆ ಕೆಳಗೆ.. ತೋಳೇ ತಲೆ ಕೆಳಗೆ

ನೀಗಿದೆ ಹಸಿವು ಕಂಬನಿಯಲ್ಲೇ
ತಾಯಿಯ ಸೆರಗಿದು ನೆನದಿಲ್ಲ
ಜೋಲಿಯ ಒಳಗೆ ಕಂಡೆಯ ಸುಖವ
ಹೂವಿನ ಹಾಸಿಗೆ ಹಾಸಿಲ್ಲ
ಜೋಗುಳ ಹಾಡಿದೆ ತಂಗಾಳಿ
ಕನಸಿದು ಮೂಡಿತೇ ಅದಕೇಳಿ
ನೆನ್ನೆಯ ನಲಿವೋ ನಾಳೆಯ ನೋವೋ
ಏತರ ಕಳವಳ ನಿನಗಿಲ್ಲ

ಸಾವಿರ ಬಯಕೆ ತಾಯಿಯ ಮನಕೆ
ಕಂದನು ಸುಖದಲಿ ಇರಲೆಂದು
ದೈವಕೆ ಹರಕೆ ನೀನಿ ಕುಲಕೆ
ಮೀರಿದ ಸಂತಸ ತರಲೆಂದು
ಎಂದಿಗೆ ಬರುವುದೋ ಆ ಸುದಿನ
ಎಲ್ಲರು ಸೇರುವ ಭಾಗ್ಯ ದಿನ
ಇರುಳಿನ ನಂತರ ಹಗಲದು ಖಂಡಿತ
ನಂಬಿಕೆ ಆಸರೆ ನಮಗೆಲ್ಲ..  ನಂಬಿಕೆ ಆಸರೆ ನಮಗೆಲ್ಲ..
-------------------------------------------------------------------------------------------------------------------------

ತುಳಸಿ (೧೯೭೬) - ಕವಳ ಕೊಡಿ ತಾಯಿ ಕರುಣೆಯ ಅಮ್ಮ ತಾಯೀ
ಸಂಗೀತ : ವಿಜಯ ಭಾಸ್ಕರ,  ಸಾಹಿತ್ಯ: ವಿಜಯಾನರಸಿಂಹ ಗಾಯನ : ಬಿ.ಕೆ.ಸುಮಿತ್ರಾ, ಬೆಂಗಳೂರ ಲತಾ 

ಕವಳ ಕೊಡಿ ತಾಯಿ ಕರುಣೆಯ ಅಮ್ಮ ತಾಯೀ
ಅನ್ನ ಒಂದೇ ತಂದೆ ತಾಯಿ ಆದಕೆ ನಾವು ಮುಗಿದೆವು ಕೈ

ಪೈಸೆ ಗಿಸೆ ಬೇಡ ನಮಗೆ ಆಸೆ ಇಲ್ಲ ಮನದ ಒಳಗೆ
ಭಯವೇ ಇಲ್ಲ ಬಿಸಿಲು ಚಳಿಗೆ ಅನ್ನ ಒಂದೇ ಬೇಕು ಹಸಿವಿಗೇ

ಇಟ್ಟ ತುತ್ತು ಬುಟ್ಟಿಯಂತೆ ಇಟ್ಟ ಕೈ ತಾಯಿಯಂತೆ
ಅವಳ ಮನಸು ಹೂವಿನಂತೆ ಅವಳೇ ನಮಗೆ ದೇವರಂತೇ

ಇಡುವ ಅನ್ನ ಚಿನ್ನ ತರಲಿ ನಿಮಗೆ ನಗುವು ಎಂದೂ ಇರಲಿ
ನಮಗೆ ತುತ್ತು ದಿನವೂ ಸಿಗಲಿ ನಿಮ್ಮ ಹೊಟ್ಟೆ ತಣ್ಣಗಿರಲಿ
--------------------------------------------------------------------------------------------------------------------------

No comments:

Post a Comment